|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

05.02.2019

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಶಿಶಿರ ಋತು / ಮಾಘ ಮಾಸ /
ಶುಕ್ಲ ಪಕ್ಷ / ಪ್ರತಿಪತ್ ತಿಥಿ/

ಮಂಗಳವಾರ/ ಧನಿಷ್ಠ ನಕ್ಷತ್ರ /

ದಿನಾಂಕ: 05.02.2019

 °~•~°~•~°~•~°~•~°~•~°

ಮೇಷ

        ಯಾವುದೇ ಕೆಲಸವನ್ನು ತೆಗೆದುಕೊಂಡರೂ ಅಡೆತಡೆ ಕಂಡುಬರಲಿದ್ದು ಅಶಾಂತಿ ತಲೆದೋರುವುದು.  ವಿನಾಕಾರಣ ಖರ್ಚುವೆಚ್ಚ ಕಂಡುಬರಲಿದೆ. ಹಿರಿಯರ ಅಸಮಾಧಾನತೆಗೆ ತುತ್ತಾಗುವಿರಿ. ಪ್ರಯಾಣದಲ್ಲಿ ಅಡೆತಡೆ ಕಂಡುಬರುವುದು. ವಾಹನ ಪ್ರಯಾಣದಲ್ಲಿ ಜಾಗರೂಕರಾಗಿರಿ. ದಂಪತಿಗಳ ಮಧ್ಯೆ ಕಲಹಗಳು ಏರ್ಪಡುವುದು. ಮೈ ಕೈ ಗಂಟು ನೋವುಗಳು, ರಕ್ತಸಂಬಂಧಿ ತೊಂದರೆ ಮುಂತಾದವು ಬರುವ ಲಕ್ಷಣಗಳಿವೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಉತ್ತಮ ಫಲ ದೊರೆಯುವುದು.



ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು:
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯ-ಪಾದಾರವಿನ್ದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

    

ವೃಷಭ

         ಉತ್ತಮ ಶ್ರಮದಿಂದ ಕಾರ್ಯ ಮಾಡಿದರೂ ಏಳಿಗೆ ದೊರೆಯದಿರುವುದು ಅಸಮಾಧಾನಕ್ಕೆ ಕಾರಣವಾಗುತ್ತದೆ. ಹೂಡಿದ ಹಣ ಅಧಿಕ ಲಾಭ ಗಳಿಸದೇ  ಇರುವುದರಿಂದ ಮಾನಸಿಕ ಅಶಾಂತಿ. ವಿನಾಕಾರಣ ಖರ್ಚುವೆಚ್ಚ ಒದಗಿಬರುವುದು. ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಸುವುದು. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಂಡುಬರುವುದು. ವಿದ್ಯಾರ್ಥಿಗಳು ಪರಿಶ್ರಮದಿಂದ, ಶ್ರದ್ಧೆಯಿಂದ ಮುಂದುವರಿದಲ್ಲಿ ಮಾತ್ರ ಶುಭವಾಗುವುದು. ಮಕ್ಕಳು ಓಡಾಟದ ಸಂದರ್ಭದಲ್ಲಿ ಜಾಗರೂಕರಾಗಿರಬೇಕು.




ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ.

ಜಪಿಸಲು:
ಸರ್ವದೇವಮಯೇ ದೇವಿ

ಸರ್ವದೇವೈ-ರಲಂಕೃತೇ |
ಮಾತರ್ಮಮಾ-ಭಿಲಷಿತಂ

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ


   ನೂತನವಾಗಿ ಒದಗಿ ಬರುವ ಕಾರ್ಯಗಳನ್ನು  ಉದಾಸೀನತೆಯಿಂದಾಗಿ ಕಳೆದುಕೊಳ್ಳಬೇಕಾಗುತ್ತದೆ. ಮಾತಿನ ಮೂಲಕ ಜಗಳವಾಗುವ ಸಾಧ್ಯತೆಗಳಿದ್ದು ಮಾತಿನ ಬಗ್ಗೆ ಗಮನ ಇರಲಿ. ವಿನಾಕಾರ ಖರ್ಚು ತಲೆದೋರಲಿದ್ದು, ಕುಟುಂಬದಲ್ಲಿ ಅಸಮಾಧಾನತೆ ಕಂಡುಬರುವುದು. ಜಾಗರೂಕತೆಯಿಂದ ಖರ್ಚನ್ನು ನಿಭಾಯಿಸಿ. ದಾಂಪತ್ಯ ಜೀವನದಲ್ಲಿ ಕಲಹ, ಅಶಾಂತಿ ತೋರಿಬರುವುದು.  ಅನುಮಾನಗಳಿಗೆ ಎಡೆ ಮಾಡಿಕೊಡಬೇಡಿ. ವಿದ್ಯಾರ್ಥಿಗಳಿಗೆ ಚಾಂಚಲ್ಯದಿಂದ ಹಿನ್ನಡೆ ಕಂಡುಬರುವ ಲಕ್ಷಣಗಳಿದ್ದು ಏಕಾಗ್ರತೆಯಿಂದ ಮುನ್ನಡೆಯಬೇಕು.



ಪರಿಹಾರ  
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು:
ದೇವತಾಕಾರ್ಯ-ಸಿದ್ಧ್ಯರ್ಥಂ

ಸಭಾಸ್ತಂಭ-ಸಮುದ್ಭವಮ್ |
ಶ್ರೀನೃಸಿಂಹ ಮಹಾವೀರಂ

ನಮಾಮಿ ಋಣಮುಕ್ತಯೇ ||

  °~•~°~•~°~•~°~•~°~•~°



ಕರ್ಕಾಟಕ

   ಉತ್ತಮ ಕಾರ್ಯಕ್ಷಮತೆ, ಕೆಲಸದಲ್ಲಿನ ಶ್ರದ್ಧೆ ಇವೆಲ್ಲವೂ ನೀವು ಮುನ್ನಡೆಯಲು ಸಹಕಾರ ಮಾಡುತ್ತವೆ. ಅಧಿಕಾರಿಗಳಿಂದ ಪ್ರಶಂಸನಾ ಮಾತುಗಳು ಕೇಳಿ ಬರುವುದು. ನೀವು ಗಳಿಸಿದ ಹಣವನ್ನು ದುರ್ವಿನಿಯೋಗ ಮಾಡದಿರಿ. ಮೈ ಕೈ ಗಂಟು ನೋವುಗಳು, ಎಲುಬು ಸಂಬಂಧಿ, ಉದರ ಸಂಬಂಧಿ ತೊಂದರೆಗಳು ಮುಂತಾದವು ಬರುವ ಲಕ್ಷಣಗಳಿವೆ.  ದಾಂಪತ್ಯದಲ್ಲಿ ಶಾಂತಿ ದೊರೆಯಲಿದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:

 °~•~°~•~°~•~°~•~°~•~°



ಸಿಂಹ

     ಕೈಗೊಳ್ಳುವಂತಹ ಕೆಲಸ ಕಾರ್ಯಗಳು ನಿಧಾನಗತಿಯ ಮುನ್ನಡೆ ಸಾಧಿಸುತ್ತದೆ. ಅಶಾಂತಿ ಹಾಗೂ ಅಸಂತೃಪ್ತಿ ತಲೆದೋರುವುದು. ಮಾಡಿದ ಕೆಲಸಕ್ಕೆ ಅನುಗುಣವಾಗಿ ಉತ್ತಮ ಫಲ ದೊರೆಯದೇ ಇರಬಹುದು. ಕಷ್ಟದಿಂದ ಅರ್ಜಿಸಿದ ಹಣವನ್ನು  ವಿನಾಕಾರಣ ವೆಚ್ಚ ಮಾಡದಿರಿ. ವಾಹನ ಪ್ರಯಾಣದಲ್ಲಿ ಜಾಗರೂಕರಾಗಿರಿ. ದಾಂಪತ್ಯ ಜೀವನದಲ್ಲಿ ಸುಖ. ವಿದ್ಯಾರ್ಥಿಗಳು ಕಷ್ಟಪಟ್ಟು ಶ್ರದ್ಧೆಯಿಂದ ಮುಂದುವರಿದಲ್ಲಿ ಮಾತ್ರ ಶುಭ. ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ಮಕ್ಕಳು  ಓಡಾಡುವಾಗ ಜಾಗರೂಕರಾಗಿರಬೇಕು.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು:
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°      


ಕನ್ಯಾ


    ತೊಡಗಿಸಿಕೊಳ್ಳುವ ಕೆಲಸದಲ್ಲಿ ಶ್ರದ್ಧೆಯಿಟ್ಟು ಮುಂದುವರೆದರೆ ಮಾತ್ರ ಏಳಿಗೆ. ಉದಾಸೀನತೆಯಿಂದ ಕೆಲವೊಂದು ಅವಕಾಶಗಳನ್ನು  ಕಳೆದುಕೊಳ್ಳಬೇಕಾಗುತ್ತದೆ. ನಿಮ್ಮ ಸಂಪಾದನೆಯನ್ನು ಅನ್ಯಥಾ ಖರ್ಚು ಮಾಡಬೇಡಿ. ವಾಹನ ಪ್ರಯಾಣದಲ್ಲಿ ಜಾಗರೂಕರಾಗಿರಬೇಕು. ಆರೋಗ್ಯದಲ್ಲಿ ಸುಧಾರಣೆ. ದಾಂಪತ್ಯ ಜೀವನದಲ್ಲಿ ಕಲಹಗಳು ಏರ್ಪಡುವ ಸಂಭವವಿದ್ದು ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಆಲಸಿತನ ಬಿಟ್ಟು, ಗುರುಹಿರಿಯರ ಮಾರ್ಗದರ್ಶನದಂತೆ ಮುಂದುವರಿಯಬೇಕು. ಮೊಬೈಲ್, ಟಿವಿ ಮುಂತಾದ  ಉಪಕರಣಗಳಿಂದ ದೂರವಿದ್ದಷ್ಟು ಉತ್ತಮ.



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು:
ವಸುದೇವಸುತಂ  ದೇವಂ

ಕಂಸಚಾಣೂರ-ಮರ್ದನಮ್  |
ದೇವಕೀ-ಪರಮಾನಂದಂ  

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°       


ತುಲಾ


       ಕೆಲಸ ಕಾರ್ಯಗಳು ಉತ್ತಮವಾಗಿ ನಡೆದರೂ  ಮನಸ್ಸಿನ ಸಮಾಧಾನಕ್ಕೆ ಅಡೆತಡೆ ತೋರಿಬರುವುದು. ಉತ್ತಮ ಸಂಪಾದನೆ ಆದರೂ, ಕಾರಣವಿಲ್ಲದೇ ಖರ್ಚುವೆಚ್ಚಗಳನ್ನು ಭರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ  ಮಾತಿನಿಂದಾಗಿ ಜಗಳಗಳು ಬರುವ ಸಾಧ್ಯತೆಗಳಿದ್ದು ಮಾತಿನ ಬಗ್ಗೆ ಗಮನ ಇರಲಿ. ನರಸಂಬಂಧಿ ಮತ್ತು ರಕ್ತಸಂಬಂಧಿ ತೊಂದರೆಗಳು, ತಲೆನೋವು, ಅತಿಯಾದ ಸಿಟ್ಟು, ಮುಂತಾದವು ಬರುವ ಲಕ್ಷಣಗಳಿದ್ದು ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಏಳಿಗೆ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು:
ಸರ್ವರೂಪಮಯೀ ದೇವೀ

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಂ

ನಮಾಮಿ ಪರಮೇಶ್ವರೀಮ್ ||


 °~•~°~•~°~•~°~•~°~•~°


ವೃಶ್ಚಿಕ


  
ತೊಡಗಿಸಿಕೊಂಡ ಕೆಲಸ ಕಾರ್ಯಗಳು ಅರ್ಧದಲ್ಲಿ ನಿಲ್ಲುವ ಸಾಧ್ಯತೆಗಳಿದ್ದು ಚಾಕಚಕ್ಯತೆಯಿಂದ ವ್ಯವಹರಿಸಿ.  ಸಂಪಾದನೆಯ ಹಣವು ವಿನಾಕಾರಣ ಖರ್ಚಾಗುತ್ತಿದ್ದು ಜೀವನೋಪಾಯಕ್ಕೆ ಬಳಸಿ. ಸೇವಿಸುತ್ತಿರುವ ಆಹಾರದಿಂದಾಗಿ ಆರೋಗ್ಯ ಸಮಸ್ಯೆ ಬರುವ ಲಕ್ಷಣಗಳಿದ್ದು ಪರಿಶುದ್ಧ ಆಹಾರವನ್ನೇ ಸೇವಿಸಿ.  ಹೊರಗಿನ ಆಹಾರವನ್ನು ಸೇವಿಸದಿರಿ. ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಗೊಳ್ಳುವುದು. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಏಳಿಗೆ ಲಭ್ಯವಾಗಲಿದ್ದು, ಉದಾಸೀನತೆಯನ್ನು ಬದಿಗೊತ್ತಿ ಮುಂದುವರಿಯಿರಿ

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾ:

ಸುಬ್ರಮಣ್ಯ-ಮುಪಾಸ್ಮಹೇ ||

°~•~°~•~°~•~°~•~°~•~°


ಧನು


   ಕೈಗೆತ್ತಿಕೊಂಡ ಎಲ್ಲ ಕೆಲಸದಲ್ಲಿಯೂ ಸಣ್ಣಮಟ್ಟಿನ ಏಳಿಗೆ ಕಂಡುಬಂದರೂ ಮಾನಸಿಕ ಕಿರಿಕಿರಿಯನ್ನು ಎದುರಿಸಬೇಕಾಗುತ್ತದೆ. ಹಣ ಸಂಪಾದನೆಯ ವಿಚಾರದಲ್ಲಿ ಉತ್ತಮ ಲಾಭವನ್ನು ಗಳಿಸುತ್ತೀರಿ. ಗುರುಹಿರಿಯರ ಮಾರ್ಗದರ್ಶನದಂತೆ ಹಣವನ್ನು ವಿನಿಯೋಗಿಸಿ. ಮೈ ಕೈ ಗಂಟು ನೋವು, ಮಲಬದ್ಧತೆ ಮುಂತಾದ ತೊಂದರೆಗಳನ್ನು ಬರುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನದ ಅಗತ್ಯವಿದೆ.


ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದ ಪಡೆಯಿರಿ.

ಜಪಿಸಲು:
ಅಖಂಡಮಂಡಲಾಕಾರಂ

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ

ತಸ್ಮೈ ಶ್ರೀಗುರವೇ ನಮಃ ||

     °~•~°~•~°~•~°~•~°~•~°


ಮಕರ


    ತೊಡಗಿಸಿಕೊಳ್ಳುವ ಕೆಲಸ ಕಾರ್ಯದಲ್ಲಿ ಸಣ್ಣಪುಟ್ಟ ಅಡೆತಡೆಗಳು ಕಂಡುಬಂದರೂ ಮನಶ್ಶಾಂತಿ ಲಭಿಸುವುದು. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.  ಅಲರ್ಜಿ, ಶ್ವಾಸ ಸಂಬಂಧಿ ತೊಂದರೆಗಳು ಮುಂತಾದವನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಗೊಳ್ಳುವುದು. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಏಳಿಗೆ ಲಭ್ಯ.



ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.  

ಜಪಿಸಲು:
ಶುದ್ಧಸ್ಫಟಿಕ-ಸಂಕಾಶಂ
ಶುದ್ಧವಿದ್ಯಾ-ಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಂ
ಸದಾಶಿವಮಹಂ ಭಜೇ ||

   °~•~°~•~°~•~°~•~°~•~°          


ಕುಂಭ  


      ಕೈಗೊಂಡ ಕೆಲಸ ಕಾರ್ಯಗಳು ಉತ್ತಮ ಗತಿಯಲ್ಲಿ ಮುಂದುವರಿಯಲಿದ್ದು ಉದ್ಯೋಗದಲ್ಲಿ ಮುನ್ನಡೆ ಸಾಧಿಸುವಿರಿ. ಖರ್ಚುವೆಚ್ಚಗಳು ಜಾಸ್ತಿಯಾಗುವುದು. ಜಾಗರೂಕತೆಯಿಂದ ವಿನಿಯೋಗಿಸಿ. ಜಾಸ್ತಿ ಕೋಪ ಮಾಡಿಕೊಳ್ಳಬಾರದು. ದಾಂಪತ್ಯ ಜೀವನದಲ್ಲಿ ಅಶಾಂತಿ  ತಲೆದೋರುವುದು. ಶೀತ ಜ್ವರ ಕೆಮ್ಮು ತಲೆನೋವು ಮುಂತಾದ ತೊಂದರೆಗಳು ಕಂಡುಬರಲಿದ್ದು ಜಾಗರೂಕತೆಯಿಂದಿರಬೇಕು. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಉತ್ತಮ ಫಲ ಲಭ್ಯ.



ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು:
ಅಂಜನಾಗರ್ಭ-ಸಂಭೂತ
ಕಪೀಂದ್ರ-ಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಂ
ಹನುಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


  ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಏಳಿಗೆ ಕಂಡುಬಂದರೂ ಉದಾಸೀನತೆಯು ನಿಮ್ಮನ್ನು  ಹಿನ್ನಡೆಸುತ್ತದೆ. ಕೆಲಸದಲ್ಲಿ ಶ್ರದ್ಧೆ ಇರಲಿ. ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ತಲೆದೋರುವುದು.  ಆರೋಗ್ಯದಲ್ಲಿ ಮುನ್ನಡೆ. ಆಹಾರದ ಬಗ್ಗೆ ಗಮನವಿರಲಿ. ಪರಿಶುದ್ಧವಾದ ಆಹಾರವನ್ನು ಸೇವಿಸಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಉತ್ತಮ ಏಳಿಗೆ ಲಭ್ಯ. ವಾಹನ ಪ್ರಯಾಣಗಳಲ್ಲಿ ಜಾಗರೂಕರಾಗಿರಬೇಕು. ಮಕ್ಕಳು   ಓಡಾಡುವ ಸಂದರ್ಭದಲ್ಲಿ ಜಾಗರೂಕರಾಗಿರಬೇಕು.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಬರುವುದರಿಂದ ಶುಭ. ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು:    
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}