|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

07.02.2019

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಶಿಶಿರ ಋತು / ಮಾಘ ಮಾಸ /
ಶುಕ್ಲ ಪಕ್ಷ / ತೃತೀಯ ತಿಥಿ/

ಗುರುವಾರ/ ಶತಭಿಷ ನಕ್ಷತ್ರ /

ದಿನಾಂಕ: 07.02.2019

 °~•~°~•~°~•~°~•~°~•~°

ಮೇಷ

        ತೊಡಗಿಸಿಕೊಂಡ ಕೆಲಸಕಾರ್ಯಗಳು ಉತ್ತಮ ಏಳಿಗೆ ಪಡೆಯುತ್ತವೆ. ಆರ್ಥಿಕವಾಗಿ ಅಧಿಕ ಲಾಭ ಗಳಿಸುತ್ತೀರಿ. ಕುಟುಂಬದಲ್ಲಿ ಸುಖ, ಶಾಂತಿ ನೆಲೆಗೊಳ್ಳುತ್ತದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ರಕ್ತ ಸಂಬಂಧಿ ಮತ್ತು ಚರ್ಮಕ್ಕೆ ಸಂಬಂಧಪಟ್ಟ ತೊಂದರೆ, ಅಲರ್ಜಿ ಮುಂತಾದವು ಬರುವ ಲಕ್ಷಣಗಳಿದ್ದು ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಏಳಿಗೆ  ದೊರೆಯುತ್ತದೆ. ಗುರುಹಿರಿಯರನ್ನು ಗೌರವಿಸಿ.



ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು:
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯ-ಪಾದಾರವಿನ್ದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

    

ವೃಷಭ

         ಮಾಡುವ ಕೆಲಸ ಕಾರ್ಯದಲ್ಲಿ ಉತ್ತಮ ಏಳಿಗೆ ಕಂಡುಬರಲಿದೆ. ಹಣಕಾಸಿನ ವಿಚಾರದಲ್ಲಿಯೂ  ಅಭಿವೃದ್ಧಿ ಕಂಡುಬರಲಿದೆ. ಮೈ, ಕೈ ಗಂಟುನೋವು, ಮೂತ್ರ ಸಂಬಂಧಿ ತೊಂದರೆ ಮುಂತಾದವು ಬರುವುದರಿಂದ ನೀರನ್ನು ಚೆನ್ನಾಗಿ ಕುಡಿಯಿರಿ. ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಸುವುದು. ವಿದ್ಯಾರ್ಥಿಗಳು ಪರಿಶ್ರಮದಿಂದ ತೊಡಗಿಸಿಕೊಂಡಲ್ಲಿ ಉತ್ತಮ ಏಳಿಗೆ ಲಭ್ಯ.




ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ.

ಜಪಿಸಲು:
ಸರ್ವದೇವಮಯೇ ದೇವಿ

ಸರ್ವದೇವೈ-ರಲಂಕೃತೇ |
ಮಾತರ್ಮಮಾ-ಭಿಲಷಿತಂ

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ


   ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಅಡೆತಡೆ ಕಂಡುಬರುವುದು. ಹಿರಿಯ ಅಧಿಕಾರಿಗಳ ಕೋಪಕ್ಕೆ ಗುರಿಯಾಗುವಿರಿ. ಹಣಕಾಸಿನ ವಿಚಾರದಲ್ಲಿ ಹಿರಿಯರಿಂದ ಸಹಾಯ ಒದಗಿಬರುವುದು. ಕುಟುಂಬದಲ್ಲಿ ಶಾಂತಿ ನೆಲೆಸುವುದು. ಮೈ, ಕೈ, ಗಂಟು ನೋವುಗಳು, ಮಲಬದ್ಧತೆ, ಉದರ ಸಂಬಂಧಿ ತೊಂದರೆಗಳು ಕಂಡುಬರುವ ಲಕ್ಷಣಗಳಿವೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು. ಗುರುಹಿರಿಯರನ್ನು ಗೌರವಿಸಬೇಕು.



ಪರಿಹಾರ  
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು:
ದೇವತಾಕಾರ್ಯ-ಸಿದ್ಧ್ಯರ್ಥಂ

ಸಭಾಸ್ತಂಭ-ಸಮುದ್ಭವಮ್ |
ಶ್ರೀನೃಸಿಂಹ ಮಹಾವೀರಂ

ನಮಾಮಿ ಋಣಮುಕ್ತಯೇ ||

  °~•~°~•~°~•~°~•~°~•~°



ಕರ್ಕಾಟಕ

   ತೊಡಗಿಸಿಕೊಂಡ ಕೆಲಸಕಾರ್ಯವು ಮುನ್ನಡೆ ಕಾಣುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ಕಂಡುಬರುತ್ತದೆ. ಮೈ, ಕೈ, ಗಂಟುನೋವು ಮುಂತಾದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಕಲಹ. ವಿದ್ಯಾರ್ಥಿಗಳು  ಆಲಸಿತನ ಬಿಟ್ಟು ಮುಂದುವರಿಯಬೇಕು. ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಉತ್ತಮ ಅವಕಾಶ.



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು:
ಶ್ರೀದುರ್ಗಾಯೈ ನಮ: / ಶ್ರೀಶಾಂತ್ಯೈ ನಮ: / ಶ್ರೀಶಾಂಭವ್ಯೈ ನಮ: / ಶ್ರೀಭೂತಿದಾಯಿನ್ಯೈ ನಮ: / ಶ್ರೀಶಂಕರಪ್ರಿಯಾಯೈ ನಮ: / ಶ್ರೀನಾರಾಯಣ್ಯೈ ನಮ: / ಶ್ರೀಭದ್ರಕಾಲ್ಯೈ ನಮ: / ಶ್ರೀಶಿವದೂತ್ಯೈ ನಮ: / ಶ್ರೀಮಹಾಲಕ್ಷ್ಮ್ಯೈ ನಮ: / ಶ್ರೀಮಹಾಮಾಯಾಯೈ ನಮ: / ಶ್ರೀಯೋಗನಿದ್ರಾಯೈ ನಮ: / ಶ್ರೀಚಂಡಿಕಾಯೈ ನಮ:

 °~•~°~•~°~•~°~•~°~•~°



ಸಿಂಹ

     ವ್ಯಾವಹಾರಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಆರ್ಥಿಕ ತೊಂದರೆ ಎದುರಿಸಬೇಕಾಗುತ್ತದೆ ಹಾಗೂ ಸಾಲ ಮಾಡಬೇಕಾದ ಪರಿಸ್ಥಿತಿ ಒದಗಿ ಬರುವ ಸಾಧ್ಯತೆಗಳಿರುವುದರಿಂದ ದುಂದುವೆಚ್ಚ ಮಾಡಬೇಡಿ. ಉದರ ಸಂಬಂಧಿ ತೊಂದರೆಗಳು ಬರುವಂತಹ ಲಕ್ಷಣಗಳಿವೆ ಆದುದರಿಂದ ಆಹಾರದ ಬಗ್ಗೆ ನಿಗಾ ಇರಲಿ. ದಾಂಪತ್ಯ ಜೀವನದಲ್ಲಿ ಸುಖ. ವಿದ್ಯಾರ್ಥಿಗಳು ಕಷ್ಟಪಟ್ಟು ಮುಂದುವರಿದಲ್ಲಿ ಮಾತ್ರ ಉತ್ತಮ ಏಳಿಗೆ ಲಭ್ಯ.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು:
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°      


ಕನ್ಯಾ


    ಇನ್ನೊಬ್ಬರ ಆದೇಶದಂತೆ ಕೆಲಸ ಮಾಡಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ. ಹಣಕಾಸಿನ ವಿಚಾರದಲ್ಲಿ  ನಿಧಾನಗತಿಯ ಏಳಿಗೆ ಕಂಡುಬರುತ್ತದೆ. ಬಂಧುಗಳಿಗೋಸ್ಕರವಾಗಿ ಹಣ ವಿನಿಯೋಗಿಸಬೇಕಾಗುತ್ತದೆ. ಶೀತ, ಜ್ವರ, ತಲೆನೋವು ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಕಲಹಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಆಲಸಿತನವನ್ನು ಬಿಟ್ಟು ಮುಂದುವರಿದಲ್ಲಿ ಮಾತ್ರ ಸುಖ. ಮೊಬೈಲ್, ಟಿವಿ ಮುಂತಾದ ವಸ್ತುಗಳಿಂದ ದೂರವಿರಿ.



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು:
ವಸುದೇವಸುತಂ  ದೇವಂ

ಕಂಸಚಾಣೂರ-ಮರ್ದನಮ್  |
ದೇವಕೀ-ಪರಮಾನಂದಂ  

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°       


ತುಲಾ


       ಕಾರ್ಯಕ್ಷೇತ್ರದಲ್ಲಿ ನಿಧಾನಗತಿಯ ಏಳಿಗೆ ಸಂಭವಿಸಲಿದೆ. ಹಣಕಾಸಿನ ವಿಚಾರದಲ್ಲಿ ಉತ್ತಮ  ಸಂಪಾದನೆ ಆದರೂ ಕೂಡ ವೃಥಾ ಖರ್ಚುವೆಚ್ಚ ಒದಗಿಬರುವುದು. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಕೋಪವನ್ನು ನಿಯಂತ್ರಿಸಿ. ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಸುವುದು. ವಿದ್ಯಾರ್ಥಿಗಳು ಮುನ್ನಡೆ ಸಾಧಿಸುತ್ತೀರಿ.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು:
ಸರ್ವರೂಪಮಯೀ ದೇವೀ

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಂ

ನಮಾಮಿ ಪರಮೇಶ್ವರೀಮ್ ||


 °~•~°~•~°~•~°~•~°~•~°


ವೃಶ್ಚಿಕ


  
ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ನಿಧಾನಗತಿಯ ಹಿನ್ನಡೆ. ಉತ್ತಮ ಸಂಪಾದನೆ ಇದ್ದರೂ  ಖರ್ಚುವೆಚ್ಚ ಜಾಸ್ತಿಯಾಗುವುದು. ದಾಂಪತ್ಯ ಜೀವನದಲ್ಲಿ ಸುಖ. ಪಿತ್ತ ಸಂಬಂಧಿ ಹಾಗೂ ನರ ಸಂಬಂಧಿ ತೊಂದರೆಗಳು ಬರುವಂತಹ ಸಾಧ್ಯತೆಗಳಿರುವುದರಿಂದ ಜಾಗರೂಕರಾಗಿರಬೇಕು. ಕೋಪ ನಿಯಂತ್ರಣದಲ್ಲಿರಲಿ. ವಿದ್ಯಾರ್ಥಿಗಳು ಉದಾಸೀನತೆಯನ್ನು ಬಿಟ್ಟು  ಏಕಾಗ್ರಚಿತ್ತದಿಂದ ಅಭ್ಯಸಿಸಬೇಕು.

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾ:

ಸುಬ್ರಮಣ್ಯ-ಮುಪಾಸ್ಮಹೇ ||

°~•~°~•~°~•~°~•~°~•~°


ಧನು


    ಮಾಡುತ್ತಿರುವಂತಹ ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವುದು. ಸಂಪಾದಿಸಿದ ಹಣವನ್ನು ಕುಟುಂಬಕ್ಕೋಸ್ಕರ  ವಿನಿಯೋಗ ಮಾಡಬೇಕಾಗುತ್ತದೆ. ಮಾತಿನ ಮೂಲಕ ಕುಟುಂಬದಲ್ಲಿ ಜಗಳ ಆಗುವ ಸಾಧ್ಯತೆಗಳಿದ್ದು ಮಾತಿನ ಬಗ್ಗೆ ಗಮನ ಇರಲಿ. ಮನಶ್ಶಾಂತಿಯನ್ನು ಕಳೆದುಕೊಳ್ಳುತ್ತೀರಿ. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಕಲಹಗಳು ಏರ್ಪಡುವ ಸಾಧ್ಯತೆಗಳಿವೆ. ಅನುಮಾನಗಳಿಗೆ ಆಸ್ಪದ ಮಾಡಿಕೊಡಬೇಡಿ. ವಿದ್ಯಾರ್ಥಿಗಳು ಉದಾಸೀನತೆಯನ್ನು ಬಿಟ್ಟು ಮುಂದುವರಿಯಬೇಕು.  ಮೊಬೈಲ್, ಟಿವಿ ಮುಂತಾದವುಗಳಿಂದ ದೂರ ಇರಬೇಕು.


ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದವನ್ನು  ಪಡೆಯಿರಿ.

ಜಪಿಸಲು:
ಅಖಂಡಮಂಡಲಾಕಾರಂ

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ

ತಸ್ಮೈ ಶ್ರೀಗುರವೇ ನಮಃ ||

     °~•~°~•~°~•~°~•~°~•~°


ಮಕರ


    ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡುಬರುತ್ತದೆ.  ದಾಂಪತ್ಯಜೀವನದಲ್ಲಿ ಸುಖ. ಅಲರ್ಜಿ, ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು, ಕಫ, ತಲೆನೋವು, ಮುಂತಾದವು ಕಂಡುಬರುತ್ತವೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು.



ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.  

ಜಪಿಸಲು:
ಶುದ್ಧಸ್ಫಟಿಕ-ಸಂಕಾಶಂ
ಶುದ್ಧವಿದ್ಯಾ-ಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಂ
ಸದಾಶಿವಮಹಂ ಭಜೇ ||

   °~•~°~•~°~•~°~•~°~•~°          


ಕುಂಭ  


      ವ್ಯವಹಾರಿಕ ಕ್ಷೇತ್ರದಲ್ಲಿ ಉತ್ತಮ ಮುನ್ನಡೆ ಕಂಡುಬರುತ್ತದೆ. ಹಣಕಾಸಿನ ವ್ಯವಸ್ಥೆಯಲ್ಲಿ ನಿಧಾನಗತಿಯ ಏಳಿಗೆ. ಶೀತ, ಜ್ವರ, ಕಫ, ತಲೆನೋವು ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.  ದಾಂಪತ್ಯಜೀವನದಲ್ಲಿ ಕಲಹ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆಯಬೇಕು.



ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು:
ಅಂಜನಾಗರ್ಭ-ಸಂಭೂತ
ಕಪೀಂದ್ರ-ಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಂ
ಹನುಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


  ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಮುನ್ನಡೆ ಕಂಡುಬರುತ್ತದೆ. ಆದರೆ ನಿಮ್ಮ ಆಲಸಿತನದಿಂದ ಕೆಲವೊಂದು ಉತ್ತಮ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ. ದಾಂಪತ್ಯಜೀವನದಲ್ಲಿ ಸುಖ ನೆಲೆಸುವುದು. ಉದರ ಸಂಬಂಧಿ ತೊಂದರೆ ಹಾಗೂ ಮೈ, ಕೈ, ಗಂಟು ನೋವು ಬರುವ ಸಾಧ್ಯತೆಗಳಿದ್ದು ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು  ಪರಿಶ್ರಮದಿಂದ ಉತ್ತಮ ಅಭಿವೃದ್ಧಿ ಹೊಂದುತ್ತಾರೆ.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥ ಮರ ಪ್ರದಕ್ಷಿಣೆ ಬರುವುದರಿಂದ ಶುಭ ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು:    
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}