|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

18.03.2019

         

ವಿಲಂಬನಾಮ ಸಂವತ್ಸರ / ಉತ್ತರಾಯಣ /
ಶಿಶಿರ ಋತು / ಪಾಲ್ಗುನ ಮಾಸ /
ಶುಕ್ಲ ಪಕ್ಷ /ದ್ವಾದಶಿ ತಿಥಿ /

ಸೋಮವಾರ/ಆಶ್ಲೇಷಾ ನಕ್ಷತ್ರ/

ದಿನಾಂಕ: 18.03.2019

 °~•~°~•~°~•~°~•~°~•~°

ಮೇಷ

        ಕೃಷಿಕರಿಗೆ ಉತ್ತಮ ಅಭಿವೃದ್ಧಿ ಕಂಡು ಬರುವುದು.  ನೂತನ ವಾಹನ ಭಾಗ್ಯ ಒದಗಿ ಬರುತ್ತದೆ. ಆರ್ಥಿಕವಾದ ಮುನ್ನಡೆ ಕಂಡುಬರುವುದು. ಸಂಸಾರದಲ್ಲಿ ಸುಖ-ಶಾಂತಿ ನೆಲೆಗೊಳ್ಳುತ್ತದೆ. ದೂರದ ಬಂಧುಗಳ ಆಗಮನ ಸಂತಸ ತರುತ್ತದೆ. ಚರ್ಮ ಸಂಬಂಧಿ ತೊಂದರೆ, ಶ್ವಾಸಕ್ಕೆ ಸಂಬಂಧಪಟ್ಟ ತೊಂದರೆ ಅವುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಕಂಡು ಬರುವುದು.



ಪರಿಹಾರ:
ಶ್ರೀದುರ್ಗಾಪರಮೇಶ್ವರೀ ಅಮ್ಮನವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಜಪಿಸಲು :
ನಮಸ್ತೇ ಶರಣ್ಯೇ ಶಿವೇ ಸಾನುಕಮ್ಪೇ

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ ।
ನಮಸ್ತೇ ಜಗದ್ವನ್ದ್ಯಪಾದಾರವಿನ್ದೇ

ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ॥

°~•~°~•~°~•~°~•~°~•~°

    

ವೃಷಭ

         ನೂತನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಒದಗಿ ಬರುತ್ತದೆ, ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಇತರರಿಂದ ವಿನಾಕಾರಣ ಆಪಾದನೆಯ ಮಾತುಗಳು ಕೇಳಿ ಬರುವುದು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುವುದು. ಮೂತ್ರ ಸಂಬಂಧಿ ತೊಂದರೆ ಬರುವ ಲಕ್ಷಣಗಳು ಇರುವುದರಿಂದ ಉತ್ತಮವಾಗಿ ನೀರು ಕುಡಿಯಿರಿ. ಉತ್ತಮವಾಗಿ  ಅಭ್ಯಾಸ ಮಾಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಕಂಡು ಬರುತ್ತದೆ.




ಪರಿಹಾರ
ಗೋಮಾತೆಯ ದರ್ಶನ ಹಾಗೂ ಸೇವೆಯನ್ನು ಮಾಡಿ.

ಜಪಿಸಲು :
ಸರ್ವದೇವಮಯೇ ದೇವಿ

ಸರ್ವದೇವೈರಲಂಕೃತೇ |
ಮಾತರ್ಮಮಾಭಿಲಷಿತಮ್

ಸಫಲಂ ಕುರು ನಂದಿನಿ ||

°~•~°~•~°~•~°~•~°~•~°



ಮಿಥುನ


   ನಿಮ್ಮ ಆಲಸ್ಯತನ ಬಿಟ್ಟು ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಬೇಕು. ಸಂಪಾದಿಸಿದ ಹಣವನ್ನು ಉತ್ತಮ ಕಾರ್ಯಗಳಿಗೆ ಓಸ್ಕರ ವಿನಿಯೋಗಿಸಿ. ದಾಂಪತ್ಯ ಜೀವನದಲ್ಲಿ ಕಲಹ ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಹೊಟ್ಟೆಗೆ ಸಂಬಂಧಿಸಿದ ತೊಂದರೆ ಬರುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರುವುದು



ಪರಿಹಾರ  
ನರಸಿಂಹನ ಆರಾಧನೆಯನ್ನು ಮಾಡಿ.

ಜಪಿಸಲು :
ದೇವತಾಕಾರ್ಯಸಿದ್ಧ್ಯರ್ಥಮ್

ಸಭಾಸ್ತಂಭಸಮುದ್ಭವಮ್ |
ಶ್ರೀನೃಸಿಂಹಮಹಾವೀರಮ್

ನಮಾಮಿ ಋಣಮುಕ್ತಯೇ ||

  °~•~°~•~°~•~°~•~°~•~°



ಕರ್ಕಾಟಕ

   ನೂತನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಒದಗಿ ಬರುತ್ತದೆ ಉತ್ತಮ ಗೌರವ ಸ್ಥಾನಮಾನಗಳು ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಅವಕಾಶ ಒದಗಿ ಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಯುವಕ-ಯುವತಿಯರಿಗೆ ವಿವಾಹ ಯೋಗ ಭಾಗ್ಯ ಒದಗಿ ಬರುತ್ತದೆ. ಮೈ ಕೈ ಗಂಟು ನೋವು, ಬೆನ್ನು ನೋವು, ಜ್ವರ ಮೊದಲಾದವುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ.



ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವಿಯ ಆರಾಧನೆಯಿಂದ ಶುಭ.

ಜಪಿಸಲು :
ಶ್ರೀದುರ್ಗಾಯೈ ನಮಃ / ಶ್ರೀಶಾಂತ್ಯೈ ನಮಃ / ಶ್ರೀಶಾಂಭವ್ಯೈ ನಮಃ / ಶ್ರೀಭೂತಿದಾಯಿನ್ಯೈ ನಮಃ / ಶ್ರೀಶಂಕರಪ್ರಿಯಾಯೈ ನಮಃ / ಶ್ರೀನಾರಾಯಣ್ಯೈ ನಮಃ / ಶ್ರೀಭದ್ರಕಾಲ್ಯೈ ನಮಃ / ಶ್ರೀಶಿವದೂತ್ಯೈ ನಮಃ / ಶ್ರೀಮಹಾಲಕ್ಷ್ಮ್ಯೈ ನಮಃ / ಶ್ರೀಮಹಾಮಾಯಾಯೈ ನಮಃ / ಶ್ರೀಯೋಗನಿದ್ರಾಯೈ ನಮಃ / ಶ್ರೀಚಂಡಿಕಾಯೈ ನಮಃ ||

 °~•~°~•~°~•~°~•~°~•~°



ಸಿಂಹ

     ಉತ್ತಮ ಶ್ರದ್ಧೆಯಿಂದ ಕೆಲಸದಲ್ಲಿ ತೊಡಗಿಸಿಕೊಂಡರೆ ಮಾತ್ರ ಅಭಿವೃದ್ಧಿ ಕಂಡು ಬರುವುದು. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.  ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಆರೋಗ್ಯ ಸಂಬಂಧವಾದ ತೊಂದರೆ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮದಿಂದ ಮುಂದುವರಿದರೆ ಮಾತ್ರ ಅಭಿವೃದ್ಧಿ ಕಂಡು ಬರುವುದು.


ಪರಿಹಾರ
ಶಿವನ ಆರಾಧನೆ ಅಗತ್ಯ.

ಜಪಿಸಲು :
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀಮಹಾದೇವ ಶಂಭೋ||

    °~•~°~•~°~•~°~•~°~•~°      


ಕನ್ಯಾ


     ಸರಕಾರಿ ಕೆಲಸದಲ್ಲಿರುವವರು, ವೈದ್ಯರು ಹಾಗೂ ರಾಜಕಾರಣಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಏಳಿಗೆ ಕಂಡು ಬರುವುದು. ದಾಂಪತ್ಯ ಜೀವನದಲ್ಲಿ ಕಲಹ ಸಂಭವಿಸುವಲಕ್ಷಣಗಳಿರುವುದರಿಂದ ಜಾಗರೂಕತೆಯಿಂದಿರಬೇಕು. ಆರೋಗ್ಯ ಸಂಬಂಧವಾದ ತೊಂದರೆ ಎದುರಿಸಬೇಕಾಗುತ್ತದೆ. ತಾಯಿಯ ಆರೋಗ್ಯ ಹದಗೆಡುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಕಂಡುಬರುತ್ತದೆ.



ಪರಿಹಾರ
ಶ್ರೀಕೃಷ್ಣ ದೇವರ ಆರಾಧನೆಯಿಂದ ಶುಭ

ಜಪಿಸಲು :
ವಸುದೇವಸುತಂ  ದೇವಮ್

ಕಂಸಚಾಣೂರಮರ್ದನಮ್  |
ದೇವಕೀಪರಮಾನಂದಮ್

ಕೃಷ್ಣಂ ವಂದೇ  ಜಗದ್ಗುರುಮ್ ||

  °~•~°~•~°~•~°~•~°~•~°       


ತುಲಾ


       ಕೃಷಿಕರಿಗೆ ಉತ್ತಮ ಬೆಳೆ ದೊರೆಯುತ್ತದೆ, ಭೂ ಸಂಬಂಧಿ ವ್ಯವಹಾರ ಮಾಡುವವರಿಗೆ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಂಡು ಬರುವುದು. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ. ಆರೋಗ್ಯ ಸಂಬಂಧವಾದ ತೊಂದರೆ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರುವುದು.


ಪರಿಹಾರ  
ದುರ್ಗಾದೇವಿಯ ಆರಾಧನೆಯಂದ ಶುಭ.

ಜಪಿಸಲು :
ಸರ್ವರೂಪಮಯೀ ದೇವೀ

ಸರ್ವಂ ದೇವೀಮಯಂ ಜಗತ್ ।
ಅತೋಽಹಂ ವಿಶ್ವರೂಪಾಂ ತ್ವಾಮ್

ನಮಾಮಿ ಪರಮೇಶ್ವರೀಮ್ ||


 °~•~°~•~°~•~°~•~°~•~°


ವೃಶ್ಚಿಕ


  
ಉತ್ತಮ ಪರಿಶ್ರಮದಿಂದ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡರೆ ಮಾತ್ರ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಬೇಕಾಗುತ್ತದೆ. ಕುಟುಂಬದಲ್ಲಿ ಕಲಹ ಸಂಭವಿಸುವ ಲಕ್ಷಣಗಳು ಇರುವುದರಿಂದ ಜಾಗರೂಕತೆಯಿಂದ ಇರಬೇಕು. ಆರೋಗ್ಯ ಸಂಬಂಧವಾದ ತೊಂದರೆ ಎದುರಿಸಬೇಕಾಗುತ್ತದೆ . ವಿದ್ಯಾರ್ಥಿಗಳು ಆಲಸ್ಯತನ ವನ್ನು ಬಿಟ್ಟು ಮುಂದುವರಿಯಬೇಕು.

ಪರಿಹಾರ
ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.


ಜಪಿಸಲು:
ಶರಣ್ಯಂ ಸರ್ವಲೋಕಾನಾಮ್

ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾಃ

ಸುಬ್ರಮಣ್ಯಮುಪಾಸ್ಮಹೇ ||

°~•~°~•~°~•~°~•~°~•~°


ಧನು


    ಆಲಸ್ಯತನ,ಅಶ್ರದ್ಧೆಯಿಂದ ಕೆಲಸ ಕಾರ್ಯದಲ್ಲಿ ಹಿನ್ನಡೆಯನ್ನು ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ದಾಂಪತ್ಯ ಜೀವನದಲ್ಲಿ ಕಲಹ ಸಂಭವಿಸುವ ಲಕ್ಷಣ ಗಳಿರುವುದರಿಂದ ಜಾಗರೂಕತೆಯಿಂದ ಇರಬೇಕು. ಶ್ವಾಸ ಸಂಬಂಧಿ ತೊಂದರೆ, ಅಲರ್ಜಿ ಮೊದಲಾದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ.


ಪರಿಹಾರ
ತಂದೆ ತಾಯಿಯರ ಹಾಗೂ ಗುರುವಿನ ಆಶೀರ್ವಾದವನ್ನು  ಪಡೆಯಿರಿ.

ಜಪಿಸಲು :
ಅಖಂಡಮಂಡಲಾಕಾರಮ್

ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ

ತಸ್ಮೈ ಶ್ರೀಗುರವೇ ನಮಃ ||

     °~•~°~•~°~•~°~•~°~•~°


ಮಕರ


    ನೂತನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಒದಗಿ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಯುವಕ-ಯುವತಿಯರಿಗೆ ವಿವಾಹ ಯೋಗ ಭಾಗ್ಯ ಒದಗಿ ಬರುತ್ತದೆ. ಆಹಾರದ ಮೂಲಕವಾಗಿ ಆರೋಗ್ಯ ಹದಗೆಡುವ ಲಕ್ಷಣಗಳಿದ್ದು ಜಾಗರೂಕತೆಯಿಂದ ಇರಬೇಕು.   ವಿದ್ಯಾರ್ಥಿಗಳುಉತ್ತಮ ಪರಿಶ್ರಮದಿಂದ ಮುಂದುವರಿಯಬೇಕು.



ಪರಿಹಾರ
ಶಿವಾಲಯ ದರ್ಶನ, ರುದ್ರಾಭಿಷೇಕ ಸೇವೆ ಮಾಡುವುದರಿಂದ ಶುಭ ಆಗಲಿದೆ.  

ಜಪಿಸಲು :
ಶುದ್ಧಸ್ಫಟಿಕಸಂಕಾಶಮ್
ಶುದ್ಧವಿದ್ಯಾಪ್ರದಾಯಕಮ್ |
ಶುದ್ಧಂ ಪೂರ್ಣಂ ಚಿದಾನಂದಮ್
ಸದಾಶಿವಮಹಂ ಭಜೇ ||

   °~•~°~•~°~•~°~•~°~•~°          


ಕುಂಭ  


      ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ  ಉತ್ತಮ ಅಭಿವೃದ್ಧಿ ಕಂಡು ಬರುವುದು. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಅಭಿವೃದ್ಧಿ ಕಂಡು ಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ.ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಕಂಡುಬರುತ್ತದೆ.



ಪರಿಹಾರ  
ಶಿವದೇವಸ್ಥಾನ ದರ್ಶನ, ಆಂಜನೇಯ ಸ್ವಾಮಿಯ ಆರಾಧನೆಯಿಂದ ಶುಭವಾಗಲಿದೆ.

ಜಪಿಸಲು :
ಅಂಜನಾಗರ್ಭಸಂಭೂತ
ಕಪೀಂದ್ರಸಚಿವೋತ್ತಮ |
ರಾಮಪ್ರಿಯ ನಮಸ್ತುಭ್ಯಮ್
ಹನೂಮಾನ್ ರಕ್ಷ ಮಾಂ ಸದಾ ||

°~•~°~•~°~•~°~•~°~•~°


ಮೀನ   


  ಉದಾಸೀನತೆ ಯಿಂದಾಗಿ ವ್ಯವಹಾರ ಕ್ಷೇತ್ರದಲ್ಲಿ ಹಿನ್ನಡೆ ಕಂಡುಬರುತ್ತದೆ.   ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಹಿನ್ನಡೆ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ಸುಖಶಾಂತಿ ನೆಲೆಗೊಳ್ಳುತ್ತದೆ.ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು.ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಕಂಡುಬರುತ್ತದೆ.


ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ. ಅಶ್ವತ್ಥಮರ ಪ್ರದಕ್ಷಿಣೆ ಬರುವುದರಿಂದ ಶುಭ ಕುಲದೇವತಾ ಆರಾಧನೆಯು ಅತ್ಯಗತ್ಯವಾಗಿದೆ.


ಜಪಿಸಲು :    
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ /  ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ ||

°~•~°~•~°~•~°~•~°~•~°



{ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕ ಮತ್ತು ನಾಮಗಳನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ 48 ಸಲ ಪಠಿಸಬೇಕು.}