ಪ್ರಕಟಣೆ
ಈಗ ಪುತ್ತೂರಿನಲ್ಲೂ ಲಭ್ಯ ಗ್ರಾಮರಾಜ್ಯ ಉತ್ಪನ್ನಗಳು : ಅಧಿಕೃತ ಮಾರಾಟಗಾರರು – ವೈಷ್ಣವಿ ಆರ್ಗ್ಯಾನಿಕ್ಸ್ , ಬೊಳುವಾರು
ಬೆಂಗಳೂರು: ಪ್ರತಿ ಮನೆಗೆ ಆರೋಗ್ಯಪೂರ್ಣ ಮತ್ತು ನೈಸರ್ಗಿಕ ಆಹಾರ ಪದಾರ್ಥಗಳನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಆರಂಭವಾದ ಶ್ರೀಮಠದ ಮಹತ್ವಾಕಾಂಕ್ಷಿ ಯೋಜನೆ ‘ಗ್ರಾಮರಾಜ್ಯ’ದ ಉತ್ಪನ್ನಗಳು ಈಗ ಪುತ್ತೂರಿನಲ್ಲಿಯೂ ಸಿಗಲಿವೆ. ಶ್ರೀಸಂಸ್ಥಾನದವರ ಸಂಕಲ್ಪದಂತೆ ಆರಂಭವಾಗಿ, ತನ್ನ ಉತ್ಪನ್ನಗಳಿಂದಾಗಿ ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಮನೆ ಮಾತಾಗಿರುವ ಗ್ರಾಮರಾಜ್ಯವು ಇದೀಗ ದಕ್ಷಿಣಕನ್ನಡದ ಪುತ್ತೂರಿಗೆ ತನ್ನ ಮಾರುಕಟ್ಟೆ ಜಾಲವನ್ನು ವಿಸ್ತರಿಸಿದ್ದು, ಈ ಭಾಗದ ಜನರ ಪ್ರತಿ ಮನೆಯ ಆಹಾರ ವಿಷಮುಕ್ತವಾಗಲಿದೆ ಎಂಬ ಸಂತೋಷ ಹೊಂದಿದೆ. ಉತ್ಪನ್ನಗಳು ಎಲ್ಲಿ ಸಿಗುತ್ತದೆ? ಗ್ರಾಮರಾಜ್ಯ ಬ್ರಾಂಡ್
Read Moreಶ್ರೀಗಳ ವಿಚಾರಣಾ ಪ್ರಕ್ರಿಯೆಗೆ ತಡೆ – ಆರೋಪಗಳಲ್ಲಿ ಹುರುಳಿಲ್ಲ ಎಂಬ ವಾದಕ್ಕೆ ಪುಷ್ಟಿ
ಪುತ್ತೂರಿನ ಶ್ರೀ ಶ್ಯಾಮಶಾಸ್ತ್ರಿ ಅವರ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲಿನ ಆರೋಪಗಳ ವಿಚಾರಣೆಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶ ನೀಡಿದೆ. ಪುತ್ತೂರಿನ ಶ್ರೀ ಶ್ಯಾಮಶಾಸ್ತ್ರಿ ಅವರ ಅಸಹಜ ಸಾವು/ಆತ್ಮಹತ್ಯೆ ಪ್ರಕರಣದಲ್ಲಿ ವಿನಾಕಾರಣವಾಗಿ ಜಗದ್ಗುರು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದು, ಯಾವುದೇ ದಾಖಲೆಗಳು ಇಲ್ಲದಿದ್ದರೂ, ಹುರುಳಿಲ್ಲದ ಆರೋಪಗಳನ್ನು ಆಧರಿಸಿ ಆರೋಪಿಯನ್ನಗಿಸಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ದಾಖಲಿಸಲಾಗಿದ್ದು, ವಿಚಾರಣೆ
Read Moreಚಂದಳಿಕೆ ಸರಕಾರಿ ಶಾಲೆಯಲ್ಲಿ, ನಂತೂರು ಭಾರತೀ ಕಾಲೇಜಿನ ಏಳು ದಿನಗಳ ಎನ್ನೆಸ್ಸೆಸ್ ಶಿಬಿರ
ವಿಟ್ಲ : ಶ್ರೀಭಾರತೀ ಸಮೂಹ ಸಂಸ್ಥೆಗಳ ಶ್ರೀಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಟ್ಲ ಸಮೀಪದ ಚಂದಳಿಕೆ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಡಿಸೆಂಬರ್ 8ರಿಂದ 14ರ ತನಕ ನಡೆಯಲಿದೆ. ಡಿಸೆಂಬರ್ 8ರಂದು ಸಂಜೆ 4.30ಕ್ಕೆ ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಶ್ರೀಭಾರತೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾರಕರೆ ಶ್ರೀ ನಾರಾಯಣ ಭಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಚಂದಳಿಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ನಾರಾಯಣ
Read Moreಡಿಸೆಂಬರ್ 1ರಂದು ಮಂಗಲಗೋಯಾತ್ರೆ ಸ್ಮರಣಸಂಚಿಕೆ ಲೋಕಾರ್ಪಣೆ
ಬೆಂಗಳೂರು ಗಿರಿನಗರ ಶ್ರೀರಾಮಚಂದ್ರಾಪುರಮಠ ಶ್ರೀರಾಮಾಶ್ರಮದಲ್ಲಿ ಡಿಸೆಂಬರ್ 1ರಂದು ಮಧ್ಯಾಹ್ನ ಗಂಟೆ 12ಕ್ಕೆ ಶ್ರೀಸಂಸ್ಥಾನದವರ ಅಮೃತಹಸ್ತದಿಂದ ಶ್ರೀಭಾರತೀಪ್ರಕಾಶನ ಹೊರತಂದ ಮಂಗಲಗೋಯಾತ್ರೆ ಸ್ಮರಣಸಂಚಿಕೆ ಲೋಕಾರ್ಪಣೆಗೊಳ್ಳಲಿದೆ.
Read Moreಶ್ರೀರಾಮಾಶ್ರಮದಲ್ಲಿ ಸಹಸ್ರ ದೀಪೋತ್ಸವ
ಸಪರಿವಾರ ಶ್ರೀರಾಮದೇವರ, ಶ್ರೀಗುರುದೇವರ ಹಾಗೂ ಕಾಮಧೇನುವಿನ ದಿವ್ಯಸನ್ನಿದಿಯಲ್ಲಿ, ಚಂಪಾಷಷ್ಠಿಯ ಪರ್ವದಿನದಲ್ಲಿ, ಸಹಸ್ರದೀಪೋತ್ಸವ ಸೇವೆ ನಡೆಯಲಿದೆ. ಕಾಲ: 13.12.2018, ಗುರುವಾರ ಸಂಜೆ 7 ರಿಂದ ಸರ್ವರಿಗೂ ಆದರದ ಸ್ವಾಗತ.
Read Moreಡಿಸೆಂಬರ್ 15ರಂದು ರಾಮಾಶ್ರಮದಲ್ಲಿ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನೆ
ಬೆಂಗಳೂರು: ಶ್ರೀರಾಮಚಂದ್ರಾಪುರಮಠದ 35ನೆಯ ಯತಿವರ್ಯರಾದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಮಾರ್ಗಶೀರ್ಷ ಶುದ್ಧ ಅಷ್ಟಮೀ ಡಿಸೆಂಬರ್ 15ರಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಸಂಪನ್ನಗೊಳ್ಳಲಿದೆ. ಆರಾಧನಾ ಮಹೋತ್ಸವ ಬಳಿಕ ಧರ್ಮಸಭೆ, ನಡೆಯಲಿದ್ದು, ಪಾಂಡಿತ್ಯಪುರಸ್ಕಾರ, ಪ್ರವಚನ, ಮಂತ್ರಾಕ್ಷತೆ ವಿತರಣೆಗಳು ನಡೆಯಲಿವೆ. ಶಿಷ್ಯಭಕ್ತರು ಭಾಗವಹಿಸಿ ಕೃಪೆಗೆ ಪಾತ್ರರಾಗಬೇಕೆಂದು ಉತ್ಸವ ಕಾರ್ಯದರ್ಶಿಗಳಾದ ಶ್ರೀ ಶಾಂತಾರಾಮ ಹಿರೇಮನೆ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Read Moreಗೋಮಹತಿ ಕಾರ್ಯಾಗಾರ
ನೀವು ೧೮-೨೫ ವರ್ಷದೊಳಗಿನವರಾಗಿದ್ದು, ಗೋವನ್ನು ಪ್ರೀತಿಸುವವರಾಗಿದ್ದು, ಗೋವಿನ ಕುರಿತು ಜಾಗೃತಿ ಮೂಡಿಸಲು ಆಸಕ್ತರಿದ್ದೀರೇ? ಉತ್ತಮ ಭಾಷಣಕಾರರಾಗುವ ಗುರಿ ನಿಮಗಿದೆಯೇ? ಹಾಗಿದ್ದರೇ ಈ ಕಾರ್ಯಾಗಾರ ನಿಮಗಾಗಿಯೇ.. ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ಗೋಮಹತಿ ವಿಭಾಗ ದಿಂದ ಇದೇ ಡಿಸೆಂಬರ್ 2, ಭಾನುವಾರದಂದು 18 ರಿಂದ 25 ವಯಸ್ಸಿನವರಿಗೆ ಕೋಲಾರ ಜಿಲ್ಲೆಯ ಮಾಲೂರಿನ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಮಹತಿ ಕಾರ್ಯಾಗಾರ ಎಂಬ ಒಂದು ದಿನದ ಉಚಿತ ಭಾಷಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಗೋವಿಚಾರ ಜಾಗೃತಿ, ಭಾಷಣ
Read Moreಅಮೃತ ಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ 28,29,30 Dec 2018 ಅರಮನೆ ಮೈದಾನ, ಬೆಂಗಳೂರು ಹವ್ಯಕ ಪ್ರಶಸ್ತಿ/ಸಮ್ಮಾನ ನಾಮನಿರ್ದೇಶನ
ಆತ್ಮೀಯರೇ, ಈ ಕೆಳಗಿನ ಲಿಂಕ್ಗಳನ್ನು (5 ಬಗೆಯ ಪ್ರಶಸ್ತಿ ತಲಾ 75 ಸಾಧಕರಿಗೆ) ಬಳಸಿ ನಿಮಗೆ ತಿಳಿದಿರುವ ಹವ್ಯಕ ಸಾಧಕರನ್ನು ಅವರ ಕ್ಷೇತ್ರದ ಅನುಸಾರ ನಾಮ ನಿರ್ದೇಶನ ಮಾಡಬೇಕಾಗಿ ವಿನಂತಿ. ಕಡೆಯ ದಿನಾಂಕ: 30-11-2018 http://havyakamahasabha.com/nomination-form ಅಮೃತಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಮಾಹಿತಿಗಾಗಿ ನಮ್ಮ ವೆಬ್ಸೈಟ್ ನೋಡಿ. http://havyakamahasabha.com
Read Moreಮಠದ ಮೇಲಿನ ದುರಾಕ್ರಮಣಗಳ ಕುರಿತು ಶ್ರೀಸಂಸ್ಥಾನದವರ ಸ್ಪಷ್ಟೋಕ್ತಿ: ಪ್ರಜಾ ಟಿವಿ ಸಂದರ್ಶನದಲ್ಲಿ
* ಗೋಕರ್ಣ ಮಹಾಬಲೇಶ್ವರ ದೇವಾಲಯದ ಹಸ್ತಾಂತರ ವಿವಾದಗಳಿಗೆ ಕಾರಣವೇನು? * ರಾಮಚಂದ್ರಾಪುರಮಠವನ್ನು ಟಾರ್ಗೆಟ್ ಮಾಡಲು ಕಾರಣವೇನು? * ಮಠದ ಮೇಲಾಗುತ್ತಿರುವ ಆಕ್ರಮಣಗಳ ಹಿಂದಿರುವ ಶಕ್ತಿಗಳು ಯಾವವು?? * ಸಾಲು ಸಾಲು ಆರೋಪಗಳನ್ನು ಮಾಡಿ, ನಿಮ್ಮ ಇಮೇಜನ್ನು ಡ್ಯಾಮೇಜ್ ಮಾಡಲಾಯಿತೇ? * ಕೊಡಚಾದ್ರಿ ಸಂರಕ್ಷಣೆಗೆ ಹೊರಟಾಗ, ನಿಮಗೆ ಜೀವಬೆದರಿಕೆ ಹಾಕಲಾಯಿತು ; ಆಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು? * ನಿರಂತರ ಅಪಪ್ರಚಾರದಿಂದಾಗಿ ಮಠದ ಭಕ್ತರ ಮೇಲೆ ಆದ ಪರಿಣಾಮವೇನು?…… ಮುಂತಾದ ಖಡಕ್
Read Moreದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ : ಡಿಸೆಂಬರ್ 28, 29 ಮತ್ತು 30ರಂದು ಹವ್ಯಕರ ಹಬ್ಬ
ಶ್ರೀ ಅಖಿಲ ಹವ್ಯಕ ಮಹಾಸಭೆಯು ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತವಾಗಿ, ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿದೆ. ಗುರುಪೀಠಗಳ ದಿವ್ಯ ಮಾರ್ಗದರ್ಶನದೊಂದಿಗೆ 1943ರಿಂದ ಸಮಾಜದ ಸಂಘಟನೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದಿಶೆಯಲ್ಲಿ ತೊಡಗಿಸಿಕೊಂಡಿದೆ. ಅಮೃತಮಹೋತ್ಸವ ವರ್ಷದ ಹರ್ಷದಲ್ಲಿರುವ ಹವ್ಯಕ ಮಹಾಸಭೆಯು ಡಿ. 28, 29 ಹಾಗೂ 30ರಂದು ಐತಿಹಾಸಿಕ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ
Read Moreರಾಮಮಂದಿರ ನಿರ್ಮಾಣದ ಕುರಿತು ಶ್ರೀಸಂಸ್ಥಾನದ ನಿಲುವೇನು?- ವೀಕ್ಷಿಸಿ ನಾಳೆ ರಾತ್ರಿ ದಿಗ್ವಿಜಯ ಸುದ್ದಿವಾಹಿನಿಯಲ್ಲಿ
ಬೆಂಗಳೂರು: ನಾಳೆ ಅಂದ್ರೆ ನವೆಂಬರ್ ದಿಗ್ವಿಜಯ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ವಿಶೇಷ ಧಾರ್ಮಿಕ ಸಂದರ್ಶನ ಪ್ರಸಾರವಾಗಲಿದೆ. ರಾತ್ರಿ 9.27 ಕ್ಕೆ ಸರಿಯಾಗಿ ದಿಗ್ವಿಜಯ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ಇಂಟರವ್ಯೂಪ್ರಸಾರವಾಗಲಿದ್ದು ಹಲವು ವಿಚಾರಗಳ ಕುರಿತು ಶ್ರೀಸಂಸ್ಥಾನದವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರಾಮಮಂದಿರನಿರ್ಮಾಣ, ಹಾಗೂ ದೇಗುಲಗಳ ಸರ್ಕಾರಿ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಶ್ರೀಸಂಸ್ಥಾನದವರು ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು ದಿಗ್ವಿಜಯ ವಾಹಿನಿಯಲ್ಲಿ ಸಂದರ್ಶನದ ಜೊತೆಗೆ ನಾಡಿನ ಜನಪ್ರಿಯ ದಿನಪತ್ರಿಕೆ ವಿಜಯವಾಣಿ ಯಲ್ಲಿ ಇದೇ ಸಂದರ್ಶನದ ವರದಿ
Read More