|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀಕ್ಷೇತ್ರ ಗೋಕರ್ಣಕ್ಕೆ ಅನಿಲ್ ಕುಂಬ್ಳೆ ಭೇಟಿ

ಏ. 28 : ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಖ್ಯಾತ ಕ್ರಿಕೆಟ್ಪಪಟು ಅನಿಲ್ ಕುಂಬ್ಳೆ ಪತ್ನಿ ಸಮೇತ ಶ್ರೀ ದೇವರ ದರ್ಶನ ಪಡೆದರು. ಆತ್ಮಲಿಂಗಕ್ಕೆ ಪಂಚಾಮೃತ ಅಭಿಷೇಕ, ನವಧಾನ್ಯ, ಗಂಗಾಭಿಷೇಕ ಪೂಜೆ ಮತ್ತು ಸುವರ್ಣ ನಾಗಾಭರಣ ವಿಶೇಷ ಪೂಜೆಯನ್ನು ಮಡಿಬಟ್ಟೆ ಧರಿಸಿ ಶ್ರದ್ಧಾ ಭಕ್ತಿ ಯಿಂದ ನೆರವೇರಿಸಿದರು. ಈ ವೇಳೆ ಜಿ. ಪಂ. ಸದಸ್ಯ ಶ್ರೀ ಪ್ರದೀಪ ನಾಯಕ ಜೊತೆಗಿದ್ದರು. ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ. ಕೆ. ಹೆಗಡೆ ಅನಿಲ್ ಕುಂಬ್ಳೆಯವರಿಗೆ ಆತ್ಮಲಿಂಗ ಸ್ಮರಣಿಕೆ ನೀಡಿಗೌರವಿಸಿದರು . ​ವೇ|| ಮೂ|| ವಿಶ್ವನಾಥ ಭಟ್ಟ ಪೂಜಾ ಕೈಂಕರ್ಯ ನೆರವೇರಿಸಿದರು. ಉಪಾಧಿವಂತ ಮಂಡಳದ ಸದಸ್ಯರು ಉಪಸ್ಥಿತರಿದ್ದರು.