|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ವಿವಾಹದಲ್ಲಿ ಮಂಗಲ ವಿದ್ಯಾನಿಧಿ ಸಮರ್ಪಣೆ : ಅನುಕರಣಾರ್ಹ ಹೆಜ್ಜೆ ಇಟ್ಟ ಕುಕ್ಕಿಲ ದಂಪತಿ

 

ಮಾಣಿ: ಬಾಲ್ಯ ಶಂಕರ ಭಟ್ ಮತ್ತು ಪರಮೇಶ್ವರಿ ದಂಪತಿಯ ಪುತ್ರಿ ಅರ್ಚನಾಳೊಂದಿಗೆ ತಮ್ಮ ಪುತ್ರ ಶ್ರೀನಿಧಿಯ ವಿವಾಹ ಮಹೋತ್ಸವವು ನಡೆದ ಸಂದರ್ಭದಲ್ಲಿ, ಭಾರತೀಯ ಸೈನ್ಯದ ನಿವೃತ್ತ ಸೈನಿಕರಾದ ಶ್ರೀ ಶ್ರೀಪ್ರಕಾಶ ಕುಕ್ಕಿಲ ಮತ್ತು ಶ್ರೀಮತಿ ಜಯಲಕ್ಷ್ಮಿ ಕುಕ್ಕಿಲ ದಂಪತಿಯು ಮಂಗಲ ವಿದ್ಯಾನಿಧಿಯನ್ನು ಶ್ರೀಭಾರತೀ ಗುರುಕುಲಂ ಹೊಸನಗರ, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ, ವಿಠಲ ವಿದ್ಯಾಸಂಘ ವಿಟ್ಲ, ಶ್ರೀ ಭಾರತೀ ಸಮೂಹ ಸಂಸ್ಥೆ ನಂತೂರು, ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿ ಮತ್ತು ಮಿತ್ತೂರು ಪುರೋಹಿತ ತಿಮ್ಮಯ್ಯ ಪ್ರತಿಷ್ಠಾನ ಈ ಆರು ಸಂಘ ಸಂಸ್ಥೆಗಳಿಗೆ ಸಮರ್ಪಿಸಿದರು. ತಮ್ಮ ಈ ಹೊಸ ನಡೆಯಿಂದ ಸಮಾಜಕ್ಕೊಂದು ಮಾದರಿಯಾದರು‌.