|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಎಸ್. ಎ‌ಸ್. ಎಲ್ .ಸಿ. ; ಶ್ರೀಭಾರತೀ ವಿದ್ಯಾಪೀಠಕ್ಕೆ 100% ಫಲಿತಾಂಶ

ಕೇರಳ ರಾಜ್ಯದ SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶ್ರೀಮಠದ ಡಿಸಿಎಸ್ ಶಾಲಾ ಮಾಲೆಯ, ಕಾಸರಗೋಡಿನ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದ ಮಕ್ಕಳು ಶೇಕಡಾ 100 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿರುತ್ತಾರೆ. ಒಟ್ಟು 19 ವಿದ್ಯಾರ್ಥಿಗಳ ಪೈಕಿ 13 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿರುತ್ತಾರೆ. ಇವರಲ್ಲಿ ಅಭಿರಾಮ್ ಕಶ್ಯಪ್ ಕೆ. ವಿ., ಗಾಮಿನಿ, ಶಮಾತ್ಮಿಕಾ ಎ, ಶ್ರೀರತ್ನಮಾಲಾ ಎಸ್.ವಿ , ಸ್ನೇಹಶ್ರೀ ಪಿ, ಇವರುಗಳು ಎಲ್ಲಾ ವಿಷಯಗಳಲ್ಲೂ A+ ಗ್ರೇಡ್ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಇವರಿಗೆ ಶಾಲಾಡಳಿತ ಮಂಡಳಿ, ಅಧ್ಯಾಪಕ ವೃಂದ ಮತ್ತು ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.