|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಅಭಿರಾಮ ಹೆಗಡೆ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ

ಮಾನಹಾನಿಕರ ಹೇಳಿಕೆ ನೀಡದಂತೆ ಪ್ರತಿಬಂಧಕಾಜ್ಞೆ

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ – ಶ್ರೀಸಂಸ್ಥಾನ ಗೋಕರ್ಣ – ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಘನತೆಗೆ ಧಕ್ಕೆ ಉಂಟುಮಾಡುವ ಹಾಗೂ ಮಾನಹಾನಿಕರವಾದ ಯಾವುದೇ ರೀತಿಯ ಹೇಳಿಕೆಯನ್ನು ಮಾಧ್ಯಮ – ಸಮಾಜಮಾಧ್ಯಮ ಹಾಗೂ ಇನ್ನಿತರ ಯಾವುದೇ ರೀತಿಯಲ್ಲಿ ನೀಡದಂತೆ ಅಭಿರಾಮ್ ಹೆಗಡೆ ವಿರುದ್ಧ ಪ್ರತಿಬಂಧಕಾಜ್ಞೆಯನ್ನು ನ್ಯಾಯಾಲಯ ನೀಡಿದೆ.

 

ಸದರಿ ವ್ಯಕ್ತಿಯು ಮಾಧ್ಯಮ – ಸಮಾಜಮಾಧ್ಯಮ ಮುಂತಾದವುಗಳನ್ನು ಬಳಸಿಕೊಂಡು ಶ್ರೀಮಠ ಹಾಗೂ ಶ್ರೀಗಳ ಗೌರವಕ್ಕೆ ಚ್ಯುತಿತರುವ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಿದ್ದು, ಈ ಕುರಿತಾಗಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಸಂವಿಧಾನ ಪ್ರದತ್ತವಾದ ಪ್ರತಿಬಂಧಕಾಜ್ಞೆಯನ್ನು ನೀಡಿ, ಸಂವಿಧಾನ ಬದ್ಧವಾದ ರಕ್ಷಣೆಯನ್ನು ನೀಡಿದೆ.