|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಬಜಕೂಡ್ಲು ಗೋಶಾಲೆಯಲ್ಲಿ ದೇಶೀ ಗೋಮಯದ ಹಣತೆ ತಯಾರಿ

ಬಜಕೂಡ್ಲು: ಕಾಮದುಘಾ ಯೋಜನೆಯಡಿ ಕಾರ್ಯಾಚರಿಸುತ್ತಿರುವ ಅಮೃತಧಾರಾ ಗೋಶಾಲೆ, ಗೋಲೋಕ ಬಜಕೂಡ್ಲು ಇಲ್ಲಿ ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ದೇಶೀ ಗೋವಿನ ಗೋಮಯದಿಂದ ಪ್ರಾಯೋಗಿಕವಾಗಿ ಹಣತೆಗಳನ್ನು ಯಶಸ್ವಿಯಾಗಿ ತಯಾರಿಸಲಾಯಿತು.

ಮುಂದಿನ ಹಂತದಲ್ಲಿ ಬೃಹತ್ ಮಟ್ಟದಲ್ಲಿ ಗೋಮಯದ ಹಣತೆಗಳನ್ನು ತಯಾರಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಗೋಶಾಲೆಯ ಪದಾಧಿಕಾರಿಗಳಾಗಿರುವ ಜಗದೀಶ್ ಗೋಳಿತ್ತಡ್ಕ, ಗಣರಾಜ ಕಡಪ್ಪು ಇವರು ಯೋಜನೆಯ ರೂವಾರಿಗಳಾಗಿ ಕಾರ್ಯನಿರತರಾಗಿದ್ದಾರೆ.