|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀಭಾರತೀವಿದ್ಯಾಲಯಕ್ಕೆ ಪುಸ್ತಕ ಕೊಡುಗೆ: ಸಾವಿರಾರು ರೂಪಾಯಿ‌‌ ಮೌಲ್ಯದ ಪುಸ್ತಕ ಕೊಡುಗೆ ನೀಡಿದ ಶ್ರೀಮತಿ ಡಾ.ಶಾರದಾ ಜಯಗೋವಿಂದ

ಬೆಂಗಳೂರು: ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು‌ ಬೆಳೆಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ಗೋಸ್ವರ್ಗ ಚಾತುರ್ಮಾಸ್ಯ ಪ್ರಶಸ್ತಿ ಪುರಸ್ಕೃತರೂ, ಶಿಕ್ಷಣ ತಜ್ಞರೂ ಆದ ಶ್ರೀಮತಿ ಡಾ. ಶಾರದಾ ಜಯಗೋವಿಂದ ಇಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ 163 ಪುಸ್ತಕವನ್ನು ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯಕ್ಕೆ‌ ಕೊಡುಗೆಯಾಗಿ ನೀಡಿದ್ದಾರೆ.

 

ಉತ್ತಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಶ್ರೀಮತಿ ಡಾ. ಶಾರದಾ ಜಯಗೋವಿಂದ್ ಅವರು ವಿದ್ಯಾರ್ಥಿಗಳಿಗೆ‌ ಈ ಪುಸ್ತಕಗಳನ್ನು‌ ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವಂತೆ‌ ಕರೆ‌ ನೀಡಿದ್ದಾರೆ.

 

ಶಾಲಾ ವತಿಯಿಂದ ಉಪಪ್ರಾಂಶುಪಾಲದ ಶ್ರೀ ಹರೀಶ್ ಕುಮಾರ್ ಇವರು ಕೃತಜ್ಞತಾ ಸಮರ್ಪಣಾ ಪತ್ರವನ್ನು ಡಾ. ಶಾರದಾ ಜಯಗೋವಿಂದ ಅವರಿಗೆ ನೀಡಿ ಗೌರವಿಸಿದರು.

 

ಇದೇ ಸಂದರ್ಭದಲ್ಲಿ ಶ್ರೀಮತಿ ಡಾ.ಶಾರದಾ ಜಯಗೋವಿಂದ ಅವರು ಶ್ರೀಭಾರತೀ ವಿದ್ಯಾಲಯದ ಶಿಕ್ಷಕ ವೃಂದಕ್ಕೆ Quality Management ಎಂಬ ವಿಷಯದ ಕುರಿತು ಮಾಹಿತಿ‌ ನೀಡಿದರು. ಅಲ್ಲದೇ ವಿವಿಧ ಚಟುವಟಿಕೆಗಳ ಮೂಲಕ ಬಹಳ ಪರಿಣಾಮಕಾರಿಯಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಹೇಗೆ ಕೊಡಬಹುದೆಂದು ಅರ್ಥಪೂರ್ಣವಾಗಿ, ಆಸಕ್ತಿಯುತವಾಗಿ ತಿಳಿಸಿಕೊಟ್ಟರು. ಕಾರ್ಯಾಗಾರದಲ್ಲಿ ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಕಿ ಭಾಗವಹಿಸಿದ್ದರು.