|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

” ಮನದ ಪ್ರಾರ್ಥನೆಯ ಮೂಲಕವೇ ಸಂಕಲ್ಪಸಿದ್ಧಿ ” ಪ್ರಗತಿ ಲಕ್ಷ್ಮೀನಾರಾಯಣ, ಸಾಗರ

  ” ಶ್ರದ್ಧಾಭಕ್ತಿಯಿಂದ ಶ್ರೀಗುರು ಸೇವೆ ಮಾಡುತ್ತಾ ಇದ್ದರೆ ನಮ್ಮ ಮ‌ನಃಸಂಕಲ್ಪ ಮಾತ್ರದಿಂದಲೇ ಉದ್ದೇಶಿತ ಕಾರ್ಯ ಕೈಗೂಡಲು ಶ್ರೀಗುರು ಕಾರುಣ್ಯ ದೊರಕುತ್ತದೆ. ಗುರುಸೇವೆಗೆ ನಮ್ಮನ್ನು ನಾವು ಪೂರ್ತಿಯಾಗಿ ಸಮರ್ಪಿಸಿದಾಗ ದೊರಕುವ ಅನುಭೂತಿಯೇ ಆನಂದದಾಯಕ.‌ ಇದನ್ನು ವಿವರಿಸಲು ಅಸಾಧ್ಯ, ಅನುಭವಿಸಿಯೇ ತಿಳಿಯಬೇಕಷ್ಟೆ ” ಎಂದು ಶ್ರೀಗುರುಗಳ ಮಹತ್ವದ ಬಗ್ಗೆ ಶ್ರದ್ಧಾಭಕ್ತಿಗಳಿಂದ ನುಡಿದವರು ಸಾಗರ ಮಂಡಲ, ಪೂರ್ವ ವಲಯದ ವಿಜಯನಗರ ‘ ಸೌರಭ ‘ ಮನೆ ನಿವಾಸಿಗಳಾಗಿರುವ ಲಕ್ಷ್ಮೀನಾರಾಯಣ ಅವರ ಪತ್ನಿ ಪ್ರಗತಿ. ಸಾಗರದ ಹುಲೀಮನೆ ವೆಂಕಟಗಿರಿ ರಾವ್ ಎಚ್.ಕೆ,

Read More

” ಬದುಕಿನ ಪೂರ್ಣತೆ ಗುರುಸೇವೆಯಲ್ಲಿ ” : ಅಕ್ಷತಾ ನಿತೇಶ್ ಮೋಂತಿಮಾರು

  ” ಶ್ರೀಗುರುಗಳ ಕೃಪಾದೃಷ್ಟಿ ಎಂಬ ದಿವ್ಯಾನುಗ್ರಹ ದೊರೆತವರ ಬದುಕು ಪಾವನವಾಗುತ್ತದೆ. ಗುರುಸೇವೆಯಂಬ ಪುಣ್ಯ ದೊರಕಲು ಪೂರ್ವ ಜನ್ಮದ ಸುಕೃತ ಬೇಕು. ಬದುಕಿನಲ್ಲಿ ಪರಿಪೂರ್ಣತೆ ಎಂಬುದು ದೊರಕುವುದು ಶ್ರೀಗುರುಸೇವೆಯಿಂದ ಮಾತ್ರ, ಗೋಮಾತೆಯ ಸೇವೆ, ಶ್ರೀಗುರುಗಳ ಸೇವೆಯಲ್ಲಿ ನಿರತರಾದವರಿಗೆ ಬದುಕಿನಲ್ಲಿ ಉನ್ನತಿ, ಯಶಸ್ಸು ಪೂರ್ಣರೂಪದಲ್ಲಿ ಸಿಗುತ್ತದೆ ” ಎಂದವರು ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯದ ನಿತೇಶ್ ಮೋಂತಿಮಾರು ಅವರ ಪತ್ನಿ ಅಕ್ಷತಾ ಪಿ   ಪೆರ್ವೊಡಿ ನಾರಾಯಣ ಭಟ್ ಸುಮಾ ಎನ್ ಭಟ್ ದಂಪತಿಗಳ ಪುತ್ರಿಯಾದ ಇವರು

Read More

” ದೇವನೇ ಗುರುವಾಗಿ ಬಂದಂತೆ ನಮ್ಮ ಗುರುದೇವರು ” : ಶಶಿಕಲಾ ಹೆಗಡೆ ಬೆಂಗಳೂರು

    ” ಬದುಕಿನಲ್ಲಿ ಎದುರಾಗುವ ಯಾವುದೇ ಸಮಸ್ಯೆ ಇರಲಿ, ಸಂಕಷ್ಟಗಳಿರಲಿ , ಶ್ರೀಗುರುಗಳನ್ನು ಮನಸಾರೆ ಪ್ರಾರ್ಥಿಸಿದರೆ ಆ ಕಷ್ಟದ ಬೆಟ್ಟಗಳು ಮಂಜಿನಂತೆ ಕರಗಿ ಹೋಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸುತ್ತದೆ. ಇದು ನಮ್ಮ ಜೀವನದ ಅನುಭವ. ನಮ್ಮ ಗುರುಗಳೆಂದರೆ ಆ ಭಗವಂತನೇ ಗುರು ಸ್ವರೂಪಿಯಾಗಿ ಧರೆಗಿಳಿದು ಬಂದಂತೆ ಎಂಬುದು ನಮ್ಮ ಅಚಲ ನಂಬಿಕೆ ” ಈ ಶ್ರದ್ಧಾಭಕ್ತಿಯ ನುಡಿಗಳು ಹೊನ್ನಾವರ ಮಂಡಲ ಬಾಳ್ಕೋಡು ಇಡಗುಂಜಿಯ ಹೊಸಮನೆಯ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಕೃಷ್ಣ ಮಂಜುನಾಥ ಹೆಗಡೆಯವರ ಪತ್ನಿ

Read More
” ಸಾಟಿಯಿಲ್ಲದ ಸಂತಸ ದೊರಕುವುದು ಶ್ರೀಮಠದ ಸೇವೆಯಿಂದ ” : ಚಂದ್ರಕಲಾ ವಡ್ವ

” ನನ್ನ ಬಾಲ್ಯದಲ್ಲಿ ತವರುಮನೆಗೆ ಹಿರಿಯ ಗುರುಗಳ ಆಗಮನವಾಗಿತ್ತು. ಮದುವೆಯಾಗಿ ಸೇರಿದ್ದು ಗುರಿಕ್ಕಾರರ ಮನೆತನಕ್ಕೆ. ಹಾಗಾಗಿ ಶ್ರೀಮಠದ ಸಂಪರ್ಕ ಸಹಜವಾಗಿಯೇ ನನಗೆ ಲಭಿಸಿತು. ನಮ್ಮ ಯಜಮಾನರಿಗೂ ಹಿರಿಯ ಗುರುಗಳಿಗೂ ಬಹಳ ಆತ್ಮೀಯತೆ ಇತ್ತು. ಹಿರಿಯ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ನಾವು ತೀರ್ಥಹಳ್ಳಿಗೂ ಹೋಗಿದ್ದೇವೆ.೩೬ ನೇ ಪೀಠಾಧಿಪತಿಗಳಾದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನಿಜಕ್ಕೂ ಶ್ರೀಶಂಕರರ ಅವತಾರವೆಂದೇ ನನ್ನ ನಂಬಿಕೆ. ಹಾಗಾಗಿಯೇ ಈ ಇಳಿ ವಯಸ್ಸಿನಲ್ಲೂ ಶ್ರೀಮಠದ ಸೇವೆಗೆ ನನ್ನ ಮೊದಲ ಆದ್ಯತೆ ” ಎಂದವರು ಮಂಗಳೂರು ಮಂಡಲ, ಕೇಪು

Read More
” ಆತ್ಮಹರ್ಷಕ್ಕೆ ರಹದಾರಿ ಗೋಮಾತೆಯ ಸೇವೆ ” : ಯಶೋದಾ ಜಿ. ಭಟ್ ಎಕ್ಕಡ್ಕ

  ” ಅನೇಕ ವರ್ಷಗಳಿಂದ ನಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೇವೆ. ಈಗಲೂ ಹತ್ತು ಹನ್ನೆರಡು ಹಸುಗಳಿವೆ. ಹಸು ಸಾಕಣೆ ಹೊರೆ ಎಂದು ತೋರಿದರೂ ಗೋಮಾತೆಯನ್ನು ಪ್ರೀತಿಸುವವರಿಗೆ ಅದು ಹೊರೆಯಲ್ಲ. ಆತ್ಮ ಸಂತೋಷದ ಹಾದಿ ಇದು ” ಎಂದವರು ಉಪ್ಪಿನಂಗಡಿ ಮಂಡಲ ಬೆಳ್ಳಾರೆ ವಲಯದ ಎಕ್ಕಡ್ಕ ಗಣಪತಿ ಭಟ್ ಅವರ ಪತ್ನಿ ಯಶೋದಾ ಭಟ್.   ಪುರುಷಬೆಟ್ಟು ಗೋವಿಂದ ಭಟ್ ,ಕಮಲಾವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.  

Read More
” ನಮ್ಮ ಸಂಸ್ಕೃತಿಯ ಮೂಲಾಧಾರ ಗೋಮಾತೆ ” : ಪಾರ್ವತಿ ಎಸ್.ಭಟ್ ದರ್ಭೆ

  ” ನಮ್ಮ ಪುರಾಣಗ್ರಂಥಗಳಲ್ಲಿ ಗೋಮಾತೆಯ ಮಹಿಮೆಯನ್ನು ಸಾರಲಾಗಿದೆ. ಮಾನವನ ಜೀವನದುದ್ದಕ್ಕೂ ಗೋವಿನ ಸ್ಥಾನ ಹಿರಿದು. ನಮ್ಮ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೋವಿನ ಅಗತ್ಯತೆ ಇದೆ. ಸನಾತನ ಸಂಸ್ಕೃತಿಯಲ್ಲಿ ಗೋಗ್ರಾಸ ನೀಡುವ ವಿಚಾರ ಹಾಗೂ ಅದರ ಮಹತ್ವದ ಬಗ್ಗೆ ಬಣ್ಣಿಸಲಾಗಿದೆ. ಗೋವಿನ ಉತ್ಪನ್ನಗಳನ್ನು ಔಷಧಿಯಾಗಿಯೂ ಬಳಸಲಾಗುತ್ತಿದೆ. ಇತರ ಸಾಕುಪ್ರಾಣಿಗಳಿಗಿಂತ ಅದೆಷ್ಟೋ ಪಾಲು ಗೌರವಾನ್ವಿತ ಸ್ಥಾನ ಹೊಂದಿರುವ ಪೂಜನೀಯಳಾದ ಗೋಮಾತೆಯ ಸೇವೆ ಮಾಡುವುದು ಸಹಾ ಪುಣ್ಯಪ್ರದ ಎಂಬ ನಂಬಿಕೆ ನನ್ನದು ” ಎಂದವರು ಉಪ್ಪಿನಂಗಡಿ ಮಂಡಲ ಬೆಟ್ಟಂಪಾಡಿ ವಲಯದ

Read More