|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ

ಮಹಾನಂದಿ ಗೋಲೋಕದಲ್ಲಿ ವಿರಾಜಮಾನಸ್ಥನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಪ್ರತೀ ಹುಣ್ಣಿಮೆಯಂದು ಸಂಪನ್ನಗೊಳ್ಳುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ನಡೆದಿರುತ್ತದೆ.

ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಸತೀಶ್ ಭಟ್ ನೇತೃತ್ವದಲ್ಲಿ ಶ್ರೀಯುತ ಮಂಜುನಾಥ ಭಟ್ ದಂಪತಿಗಳು ಮಳಲಿ ಇವರ ಯಾಜಮಾನತ್ವದಲ್ಲಿ ಈ ಕಾರ್ಯಕ್ರಮ ಸಾಂಗವಾಗಿ ನೆರವೇರಿದೆ. ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭವಾಗಿ ೫ ಹುಣ್ಣಿಮೆ ಕಳೆಯಿತು. ಈ ಬಾರಿ ನೂರಹದಿನೈದು ಪೂಜೆಗಳು ನೆರವೇರಿವೆ.

ಈ ಸಂದರ್ಭದಲ್ಲಿ ಅಧ್ಯಕ್ಷರು ಡಾ.ಸೀತಾರಾಮ್ ಪ್ರಸಾದ್, ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ದಿವಾಕರ್ ಭಟ್, ಶಿವರಾಮ್ ಭಟ್ ಇವರುಗಳೊಂದಿಗೆ ಗೋಲೋಕ ಸಮಿತಿಯ ಸದಸ್ಯರುಗಳು ಮತ್ತು ಗೋಲೋಕ ಸಿಬ್ಬಂಧಿಗಳು, ಗೋಪಾಲಕರು ಸಾಕಷ್ಟು ಭಕ್ತರು ಭಾಗವಹಿಸಿದರು.