ಲೇಖನ
” ಬದುಕಿನ ಪೂರ್ಣತೆ ಗುರುಸೇವೆಯಲ್ಲಿ ” : ಅಕ್ಷತಾ ನಿತೇಶ್ ಮೋಂತಿಮಾರು
” ಶ್ರೀಗುರುಗಳ ಕೃಪಾದೃಷ್ಟಿ ಎಂಬ ದಿವ್ಯಾನುಗ್ರಹ ದೊರೆತವರ ಬದುಕು ಪಾವನವಾಗುತ್ತದೆ. ಗುರುಸೇವೆಯಂಬ ಪುಣ್ಯ ದೊರಕಲು ಪೂರ್ವ ಜನ್ಮದ ಸುಕೃತ ಬೇಕು. ಬದುಕಿನಲ್ಲಿ ಪರಿಪೂರ್ಣತೆ ಎಂಬುದು ದೊರಕುವುದು ಶ್ರೀಗುರುಸೇವೆಯಿಂದ ಮಾತ್ರ, ಗೋಮಾತೆಯ ಸೇವೆ, ಶ್ರೀಗುರುಗಳ ಸೇವೆಯಲ್ಲಿ ನಿರತರಾದವರಿಗೆ ಬದುಕಿನಲ್ಲಿ ಉನ್ನತಿ, ಯಶಸ್ಸು ಪೂರ್ಣರೂಪದಲ್ಲಿ ಸಿಗುತ್ತದೆ ” ಎಂದವರು ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯದ ನಿತೇಶ್ ಮೋಂತಿಮಾರು ಅವರ ಪತ್ನಿ ಅಕ್ಷತಾ ಪಿ ಪೆರ್ವೊಡಿ ನಾರಾಯಣ ಭಟ್ ಸುಮಾ ಎನ್ ಭಟ್ ದಂಪತಿಗಳ ಪುತ್ರಿಯಾದ ಇವರು
Read More” ದೇವನೇ ಗುರುವಾಗಿ ಬಂದಂತೆ ನಮ್ಮ ಗುರುದೇವರು ” : ಶಶಿಕಲಾ ಹೆಗಡೆ ಬೆಂಗಳೂರು
” ಬದುಕಿನಲ್ಲಿ ಎದುರಾಗುವ ಯಾವುದೇ ಸಮಸ್ಯೆ ಇರಲಿ, ಸಂಕಷ್ಟಗಳಿರಲಿ , ಶ್ರೀಗುರುಗಳನ್ನು ಮನಸಾರೆ ಪ್ರಾರ್ಥಿಸಿದರೆ ಆ ಕಷ್ಟದ ಬೆಟ್ಟಗಳು ಮಂಜಿನಂತೆ ಕರಗಿ ಹೋಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸುತ್ತದೆ. ಇದು ನಮ್ಮ ಜೀವನದ ಅನುಭವ. ನಮ್ಮ ಗುರುಗಳೆಂದರೆ ಆ ಭಗವಂತನೇ ಗುರು ಸ್ವರೂಪಿಯಾಗಿ ಧರೆಗಿಳಿದು ಬಂದಂತೆ ಎಂಬುದು ನಮ್ಮ ಅಚಲ ನಂಬಿಕೆ ” ಈ ಶ್ರದ್ಧಾಭಕ್ತಿಯ ನುಡಿಗಳು ಹೊನ್ನಾವರ ಮಂಡಲ ಬಾಳ್ಕೋಡು ಇಡಗುಂಜಿಯ ಹೊಸಮನೆಯ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಕೃಷ್ಣ ಮಂಜುನಾಥ ಹೆಗಡೆಯವರ ಪತ್ನಿ
Read More” ಸಾಟಿಯಿಲ್ಲದ ಸಂತಸ ದೊರಕುವುದು ಶ್ರೀಮಠದ ಸೇವೆಯಿಂದ ” : ಚಂದ್ರಕಲಾ ವಡ್ವ
” ನನ್ನ ಬಾಲ್ಯದಲ್ಲಿ ತವರುಮನೆಗೆ ಹಿರಿಯ ಗುರುಗಳ ಆಗಮನವಾಗಿತ್ತು. ಮದುವೆಯಾಗಿ ಸೇರಿದ್ದು ಗುರಿಕ್ಕಾರರ ಮನೆತನಕ್ಕೆ. ಹಾಗಾಗಿ ಶ್ರೀಮಠದ ಸಂಪರ್ಕ ಸಹಜವಾಗಿಯೇ ನನಗೆ ಲಭಿಸಿತು. ನಮ್ಮ ಯಜಮಾನರಿಗೂ ಹಿರಿಯ ಗುರುಗಳಿಗೂ ಬಹಳ ಆತ್ಮೀಯತೆ ಇತ್ತು. ಹಿರಿಯ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ನಾವು ತೀರ್ಥಹಳ್ಳಿಗೂ ಹೋಗಿದ್ದೇವೆ.೩೬ ನೇ ಪೀಠಾಧಿಪತಿಗಳಾದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನಿಜಕ್ಕೂ ಶ್ರೀಶಂಕರರ ಅವತಾರವೆಂದೇ ನನ್ನ ನಂಬಿಕೆ. ಹಾಗಾಗಿಯೇ ಈ ಇಳಿ ವಯಸ್ಸಿನಲ್ಲೂ ಶ್ರೀಮಠದ ಸೇವೆಗೆ ನನ್ನ ಮೊದಲ ಆದ್ಯತೆ ” ಎಂದವರು ಮಂಗಳೂರು ಮಂಡಲ, ಕೇಪು
Read More” ಆತ್ಮಹರ್ಷಕ್ಕೆ ರಹದಾರಿ ಗೋಮಾತೆಯ ಸೇವೆ ” : ಯಶೋದಾ ಜಿ. ಭಟ್ ಎಕ್ಕಡ್ಕ
” ಅನೇಕ ವರ್ಷಗಳಿಂದ ನಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೇವೆ. ಈಗಲೂ ಹತ್ತು ಹನ್ನೆರಡು ಹಸುಗಳಿವೆ. ಹಸು ಸಾಕಣೆ ಹೊರೆ ಎಂದು ತೋರಿದರೂ ಗೋಮಾತೆಯನ್ನು ಪ್ರೀತಿಸುವವರಿಗೆ ಅದು ಹೊರೆಯಲ್ಲ. ಆತ್ಮ ಸಂತೋಷದ ಹಾದಿ ಇದು ” ಎಂದವರು ಉಪ್ಪಿನಂಗಡಿ ಮಂಡಲ ಬೆಳ್ಳಾರೆ ವಲಯದ ಎಕ್ಕಡ್ಕ ಗಣಪತಿ ಭಟ್ ಅವರ ಪತ್ನಿ ಯಶೋದಾ ಭಟ್. ಪುರುಷಬೆಟ್ಟು ಗೋವಿಂದ ಭಟ್ ,ಕಮಲಾವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.
Read More” ನಮ್ಮ ಸಂಸ್ಕೃತಿಯ ಮೂಲಾಧಾರ ಗೋಮಾತೆ ” : ಪಾರ್ವತಿ ಎಸ್.ಭಟ್ ದರ್ಭೆ
” ನಮ್ಮ ಪುರಾಣಗ್ರಂಥಗಳಲ್ಲಿ ಗೋಮಾತೆಯ ಮಹಿಮೆಯನ್ನು ಸಾರಲಾಗಿದೆ. ಮಾನವನ ಜೀವನದುದ್ದಕ್ಕೂ ಗೋವಿನ ಸ್ಥಾನ ಹಿರಿದು. ನಮ್ಮ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೋವಿನ ಅಗತ್ಯತೆ ಇದೆ. ಸನಾತನ ಸಂಸ್ಕೃತಿಯಲ್ಲಿ ಗೋಗ್ರಾಸ ನೀಡುವ ವಿಚಾರ ಹಾಗೂ ಅದರ ಮಹತ್ವದ ಬಗ್ಗೆ ಬಣ್ಣಿಸಲಾಗಿದೆ. ಗೋವಿನ ಉತ್ಪನ್ನಗಳನ್ನು ಔಷಧಿಯಾಗಿಯೂ ಬಳಸಲಾಗುತ್ತಿದೆ. ಇತರ ಸಾಕುಪ್ರಾಣಿಗಳಿಗಿಂತ ಅದೆಷ್ಟೋ ಪಾಲು ಗೌರವಾನ್ವಿತ ಸ್ಥಾನ ಹೊಂದಿರುವ ಪೂಜನೀಯಳಾದ ಗೋಮಾತೆಯ ಸೇವೆ ಮಾಡುವುದು ಸಹಾ ಪುಣ್ಯಪ್ರದ ಎಂಬ ನಂಬಿಕೆ ನನ್ನದು ” ಎಂದವರು ಉಪ್ಪಿನಂಗಡಿ ಮಂಡಲ ಬೆಟ್ಟಂಪಾಡಿ ವಲಯದ
Read More” ಮಾತೃತ್ವದ ಸವಿ ಉಣಿಸುವ ಗೋಮಾತೆಯ ಸೇವೆಯಲ್ಲಿ ಸಂತೃಪ್ತಿಯಿದೆ ” : ಸೌಮ್ಯ ಹೆಬ್ಬಾರ್ ಕುಮಟಾ”
ಆರ್ಥಿಕ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ನಮ್ಮ ಸಮಾಜವು ವಿದೇಶೀ ತಳಿಯ ಗೋವುಗಳನ್ನು ಸಾಕುವ ಸಂದರ್ಭದಲ್ಲಿ ದೇಶೀಯ ಹಸುಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಿ ಅನೇಕ ಗೋಯಾತ್ರೆಗಳ ಮೂಲಕ ಜನಜಾಗೃತಿ ಮೂಡಿಸಿದ ಹಿರಿಮೆ ನಮ್ಮ ಗುರುಗಳದ್ದು. ಅಮೃತದಂತಹ ಹಾಲು ನೀಡಿ ನಮ್ಮನ್ನು ಪೊರೆಯುವ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಶ್ರೀಸಂಸ್ಥಾನದವರ ಮಹತ್ವಾಕಾಂಕ್ಷೆಯ ಯೋಜನೆ ಮಾತೃತ್ವಮ್ ಮೂಲಕ ಗೋಸೇವೆ ಮಾಡುವ ವಿಶಿಷ್ಟ ಅವಕಾಶ ಮಾತೆಯರಿಗೆ ಒದಗಿಬಂದಿದೆ. ಮನೆಯಲ್ಲಿ ಹಸುಗಳನ್ನು ಸಾಕಲು ಅವಕಾಶವಿಲ್ಲದವರಿಗೂ ಈ ಯೋಜನೆಯ ಮೂಲಕ ಗೋಮಾತೆಯ ಸೇವೆ ಮಾಡುವ ಅವಕಾಶ ದೊರಕಿದೆ. ಮಾತೆಯಂತೆ
Read More” ಶ್ರೀಗುರುಕೃಪಾ ದೃಷ್ಟಿಯಿಂದ ಪುನೀತರಾದವರು ನಾವು ” : ಪೂರ್ಣಿಮಾ ಉಂಡಿಲ”
ಈ ಜಗತ್ತಿನ ಒಳಿತಿಗಾಗಿ ಗೋಮಾತೆಯ ಸಂರಕ್ಷಣೆಯ ಹಾದಿಯನ್ನು ತೋರಿದ ಶ್ರೀಗುರುಗಳ ಕೃಪಾದೃಷ್ಟಿಯಿಂದಲೇ ನಮ್ಮ ಬದುಕು ಪಾವನವಾಗಿದೆ . ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿಯೇ ಶ್ರೀಸಂಸ್ಥಾನದವರು ಅನೇಕ ಅನುಷ್ಠಾನಗಳ, ಯೋಜನೆಗಳ ಅವಕಾಶಗಳನ್ನು ನಮಗೆ ಒದಗಿಸಿದ್ದಾರೆ . ಎಲ್ಲರಿಗೂ ಸುಲಭವಾಗಿ ಸರಳವಾಗಿ ಶ್ರೀಮಠದ ಸೇವೆ ಮಾಡುವ ಭಾಗ್ಯವನ್ನೂ ಕರುಣಿಸಿರುವ ಶ್ರೀಗುರುಗಳ ಕೃಪೆ ಎಂದರೆ ಅದು ಸಾಗರದಂತೆ ಅನಂತ. ಬದುಕಿನ ದುರಿತ ಪರ್ವತಗಳನ್ನು ದೂರ ಮಾಡಲು ಗುರುಕೃಪೆಗೆ ಮಾತ್ರ ಸಾಧ್ಯ ” ಎಂದವರು ಉಪ್ಪಿನಂಗಡಿ ಮಂಡಲ ಪಂಜ ವಲಯದ ಗೋಪಾಲಕೃಷ್ಣ ಭಟ್ ಉಂಡಿಲ
Read More” ಬದುಕಿನ ಶ್ರೇಷ್ಠತೆ ಗೋಸೇವೆಯಲ್ಲಿದೆ ಎಂದು ತಿಳಿದಿದ್ದು ಶ್ರೀಗುರುಗಳ ಮೂಲಕ ” : ಸುಮನಾ ಗಣೇಶ ಹೆಗಡೆ ಕೆಕ್ಕಾರು
” ಶ್ರೀಮಠದ ಸಂಪರ್ಕಕ್ಕೆ ಬಂದ ಆರಂಭದಲ್ಲಿ ಮಠಕ್ಕೆ ಹೋದಾಗಲೆಲ್ಲ ತುಳಸೀಹಾರ ಕಟ್ಟುತ್ತಿದ್ದೆ. ನಂತರ ಇತರ ಕಾರ್ಯಗಳಲ್ಲಿ ಕೈಜೋಡಿಸತೊಡಗಿದೆ. ಶ್ರೀಗುರು ಸೇವೆಯಲ್ಲಿ ನಿರತವಾದಾಗ ದೊರಕುವ ಆತ್ಮತೃಪ್ತಿಯ ಆನಂದವನ್ನು ಅರಿತ ಮೇಲೆ ಮನಸ್ಸು ಸದಾ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹಾತೊರೆಯತೊಡಗಿತು. ಶ್ರೀಗುರುಗಳ ಪ್ರವಚನಗಳನ್ನು ಸದಾ ಕೇಳುವುದರಿಂದ ಗೋಮಾತೆಯ ಶ್ರೇಷ್ಠತೆ ಅರ್ಥವಾಗಿದೆ. ಮನೆಯಲ್ಲಿಯೂ ಭಾರತೀಯ ಗೋತಳಿಗಳನ್ನೇ ಸಾಕುತ್ತಿದ್ದೇವೆ ” ಎಂದವರು ಕುಮಟಾ ಮಂಡಲ ಕೆಕ್ಕಾರು ವಲಯದ ಗಣೇಶ ಹೆಗಡೆಯವರ ಪತ್ನಿ ಸುಮನಾ ಹೆಗಡೆ. ಮುಗುವ ಚೀನ್ ಕೋಡು ಪರಮೇಶ್ವರ
Read More” ಶ್ರೀಗುರುಗಳು ತೋರಿದ ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆದೆ ” : ಸವಿತಾ ಎಸ್. ಭಟ್ ಅಡ್ವಾಯಿ
” ಮಾತೆಯರ ಸ್ವಾವಲಂಬಿ ಬದುಕಿಗಾಗಿ ಶ್ರೀಗುರುಗಳು ತೋರಿದ ಹಾದಿಯಲ್ಲಿ ಮುನ್ನಡೆದವಳು ನಾನು. ಮುಳ್ಳೇರಿಯ ಮಂಡಲದ ಬದಿಯಡ್ಕದಲ್ಲಿರುವ ‘ ಮಹಿಳೋದಯ ‘ ಸಂಸ್ಥೆಯಂತೆ ನಮ್ಮ ಮಂಗಳೂರು ಮಂಡಲದಲ್ಲೂ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಅಭಿಲಾಷೆಯಿದ್ದರೂ ಅನೇಕ ಕಾರಣಗಳಿಂದಾಗಿ ಆ ಯೋಜನೆ ಫಲಿಸಲಿಲ್ಲ. ಆದರೆ ನಾನು ಮಾತ್ರ ಉಪ್ಪಿನಕಾಯಿ, ಸೆಂಡಿಗೆ, ಹಪ್ಪಳಗಳನ್ನು ತಯಾರಿಸಿ ಮಾರಾಟ ಮಾಡಿ ಶ್ರೀಗಳು ತೋರಿದ ಆದರ್ಶದ ಪಥದಲ್ಲಿ ಮುನ್ನಡೆಯುತ್ತಿದ್ದೇನೆ. ಇದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ” ಎಂದವರು ಮಂಗಳೂರು ಮಂಡಲ ಕನ್ಯಾನ ವಲಯದ ಅಡ್ವಾಯಿ ಸುಬ್ಬಣ್ಣ
Read Moreಪ್ರತಿಯೊಂದು ಗೋವಿನಲ್ಲೂ ಪುಣ್ಯಕೋಟಿಯ ಸಾನ್ನಿಧ್ಯವಿದೆ : ಸುಭದ್ರಾ ವೆಂಕಟಸುಬ್ಬ ಹೆಗಡೆ, ಬಿಜ್ಜಾಳ
” ತನ್ನ ಜೀವನದುದ್ದಕ್ಕೂ ಪರೋಪಕಾರಿಯಾಗಿ ನಮ್ಮ ಬದುಕಿಗೆ ಆಧಾರವಾಗಿರುವ ಪ್ರತಿಯೊಂದು ಗೋವೂ ಪುಣ್ಯಕೋಟಿಯ ಪ್ರತಿನಿಧಿ ಎಂದೇ ನನ್ನ ಭಾವನೆ. ಅಳಿವಿನಂಚಿನಲ್ಲಿರುವ ದೇಶೀಯ ತಳಿಯ ಹಸುಗಳ ಉಳಿವಿನ ಅವಶ್ಯಕತೆಯನ್ನು ಸಮಾಜಕ್ಕೆ ಮನದಟ್ಟು ಮಾಡಿಸಲು ನಮ್ಮ ಗುರುಗಳು ಕೈಗೊಂಡ ಯೋಜನೆಗಳಲ್ಲಿ ಭಾಗಿಯಾಗುವ ಅವಕಾಶ ದೊರಕಿದ್ದು ನನ್ನ ಸುಕೃತ . ಗೋಮಾತೆಯ ಒಡನಾಟದಲ್ಲಿರುವವರಿಗೆ ಮಾತ್ರ ಗೋಸೇವೆಯಿಂದ ದೊರಕುವ ನೆಮ್ಮದಿಯನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯ” ಎಂದವರು ಸಿದ್ಧಾಪುರ ಮಂಡಲ ಇಟಗಿ ವಲಯದ ಬಿಜ್ಜಾಳ ವೆಂಕಟಸುಬ್ಬ ಹೆಗಡೆಯವರ ಪತ್ನಿ ಸುಭದ್ರಾ. ಶಿರಸಿ
Read More” ಗೋಮಾತೆ ನಮ್ಮ ಬದುಕಿಗೆ ಹತ್ತಿರವಾಗಬೇಕು ” : ವೀಣಾ ನಾರಾಯಣ ಭಟ್ ಹೊಸಮನೆ
” ನಮ್ಮ ದೇಶದ ಸಂಸ್ಕೃತಿಯ ಭಾಗ ಗೋಮಾತೆ. ಗೋ ಉತ್ಪನ್ನಗಳ ನಿತ್ಯ ಬಳಕೆಯಿಂದ ಮೈ ಮನಸ್ಸು ಉಲ್ಲಸಿತವಾಗುತ್ತದೆ. ಆಧುನಿಕ ಜೀವನದ ಜಂಜಾಟದ ನಡುವೆ ಗೋಸಾಕಣಿಗೆ ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಅಮೃತ ನೀಡುವ ಗೋಮಾತೆಯನ್ನು ಸಂರಕ್ಷಿಸುವ ಯೋಜನೆಯಾದ ಮಾತೃತ್ವಮ್ ನಿಂದಾಗಿ ಅನೇಕ ಮಂದಿಗೆ ಗೋಸೇವೆಯ ಸೌಭಾಗ್ಯ ಒದಗಿಬಂದಿದೆ. ಗೋಮಾತೆ ಮತ್ತೆ ನಮ್ಮೆಲ್ಲರ ಬದುಕಿಗೆ ಹತ್ತಿರವಾಗಿದ್ದಾಳೆ. ಶ್ರೀಗುರುಗಳ ಈ ಒಂದು ಯೋಜನೆ ಗೋಜಾಗೃತಿಯಲ್ಲಿ ಹೊಸಪಥವನ್ನು ಸೃಷ್ಟಿಸುತ್ತಿದೆ ” ಎಂದವರು ಮಂಗಳೂರು ಮಂಡಲ ಬಾಯಾರು ವಲಯದ ಮೂಲತಃ ಪೈವಳಿಕೆ
Read More” ಗೋ ಸಂರಕ್ಷಣೆ ಮನುಕುಲದ ಅಸ್ತಿತ್ವಕ್ಕೆ ಅನಿವಾರ್ಯ ” : ಡಾ. ಚಿತ್ರಾ ಎ ಉಡುಪಿ
” ಗೋವು ನಮ್ಮ ಬದುಕಿಗೆ ಅನಿವಾರ್ಯ. ಗೋ ಉತ್ಪನ್ನಗಳ ನಿತ್ಯ ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ. ಗೋ ಶಕ್ತಿಗೆ ಅವಲಂಬಿತರಾಗಿ ಗೋ ಆಧಾರಿತ ಆರ್ಥಿಕತೆಯು ನವೀಕರಣದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯವಿದೆ ” ಎಂಬ ಮಾತುಗಳು ಮಂಗಳೂರು ಮಂಡಲ ಉಡುಪಿ ವಲಯದ ಹಿಳ್ಳೆಮನೆ ಮೂಲದ ಬೊಟ್ರಂಪಾಡಿ ನಿವಾಸಿಗಳಾಗಿರುವ ಡಾ. ವೆಂಕಟಾಚಲಂ ಅವರ ಪತ್ನಿ ಡಾ. ಚಿತ್ರಾ ಅರಮನಡ್ಕ ಅವರದ್ದು. ಮಣಿಪಾಲ ಡೆಂಟಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಚಿತ್ರಾ ಅರಮನಡ್ಕದ ಮಹಾಲಿಂಗ ಭಟ್, ಚಂದ್ರಕಲಾ ದಂಪತಿಗಳ ಪುತ್ರಿ.
Read More” ಅಲ್ಪದಿಂದ ಅನಂತವಾದುದನ್ನು ಪಡೆದಿದ್ದು ಶ್ರೀಗುರು ಸೇವೆಯಿಂದ ” : ಮಹಾಲಕ್ಷ್ಮಿ ಎಂ. ಭಟ್ ಮಿತ್ತೂರು
” ಶ್ರೀಗುರುಗಳಿಗೆ, ದೇವರಿಗೆ ನಾವು ಏನು ನೀಡುತ್ತೇವೆಯೋ ಅದರ ಜೊತೆ ಭಕ್ತಿಭಾವವನ್ನು ಸೇರಿಸಿ ಸಮರ್ಪಿಸಿದರೆ ಅಲ್ಪವೂ ಮಹತ್ತಾಗುತ್ತದೆ. ಅಲ್ಪದಿಂದ ಅನಂತವಾದುದನ್ನು ಪಡೆಯಲು ಅಂತರಂಗದಲ್ಲಿ ಭಕ್ತಿ ಭಾವ ತುಂಬಿರಬೇಕು ‘ ಎಂಬುದು ಶ್ರೀಗುರುಗಳ ವಚನ. ಇದೇ ಮಾತುಗಳು ನನ್ನ ಗೋಸೇವೆಗೆ, ಶ್ರೀಮಠದ ಸೇವೆಗೆ ಪ್ರೇರಣೆ, ಶ್ರೀಗುರುಗಳ ಆಶೀರ್ವಚನದ ನುಡಿಗಳನ್ನು ಸಾಧ್ಯವಿದ್ದಷ್ಟು ಚೆನ್ನಾಗಿ ಪರಿಪಾಲಿಸುವುದರಿಂದಲೇ ನಮ್ಮ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಬದುಕಿನ ಯಾವುದೇ ಕಷ್ಟಸುಖಗಳಲ್ಲೂ ನಾವು ಆಶ್ರಯಿಸುವುದು ಶ್ರೀಗುರು ಚರಣಗಳನ್ನು. ಇದರಿಂದ ನಮ್ಮ ಜೀವನದಲ್ಲಿ ಒಳಿತಾಗಿದೆ ”
Read More” ಶ್ರೀಮಠದ ಸೇವೆ ಉಸಿರಿನಷ್ಟೇ ಸಹಜವಾಗಿದೆ ” : ಸುನಂದಾ ಉದಯಶಂಕರ ಹೆಗಡೆ
” ನಮ್ಮ ಸಮಾಜದ ಒಳಿತಿಗಾಗಿ, ಸಂಸ್ಕೃತಿಯ ಏಳಿಗೆಗಾಗಿ ಶ್ರೀಗುರುಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿ ಮುಂದಿನ ಪೀಳಿಗೆಯ ಮೂಲಕ ಮತ್ತಷ್ಟು ಬೆಳಗುವಂತಾಗಲು ವಿ ವಿ ವಿ ಯಂತಹ ವಿದ್ಯಾಪೀಠದ ಪರಿಕಲ್ಪನೆ ನಮಗೆ ಅಭಿಮಾನವೆನಿಸುತ್ತಿದೆ. ಶ್ರೀಗುರುಗಳು ಯಾವೆಲ್ಲ ಯೋಜನೆಗಳನ್ನು ಎಲ್ಲೆಲ್ಲಿ ಹಮ್ಮಿಕೊಳ್ಳುತ್ತಾರೋ ಆ ಎಲ್ಲಾ ಕಡೆಗಳಿಗೂ ಯಥಾನುಶಕ್ತಿಯಾಗಿ ಸಹಕಾರ ನೀಡುತ್ತಿರುವ ನನಗೆ ಶ್ರೀಮಠದ ಸೇವೆ ಉಸಿರಿನಷ್ಟೇ ಸಹಜವಾಗಿದೆ ” ಎಂದವರು ಕುಮಟಾ ಮಂಡಲ ಹೆಗಡೆ ವಲಯದ ಸುನಂದಾ ಉದಯಶಂಕರ. ಕುಮಟಾದ ಮೂರೂರಿನ ವೆಂಕಟರಮಣ
Read More” ಶ್ರೀಗುರು ಸ್ಮರಣೆಯಿಂದ ಇಷ್ಟಾರ್ಥ ಸಿದ್ಧಿ ” : ಶಶಿಪ್ರಭಾ ಮುರುಗಜೆ
” ವಿಧಿ ವೈಪರೀತ್ಯಗಳು ನಮ್ಮ ಜೀವನದಲ್ಲಿ ಏರಿಳಿತಗಳನ್ನು ಸೃಷ್ಟಿಸುವಾಗಲೂ ಶ್ರೀಗುರುಗಳ ಮೇಲಿನ ಅಚಲ ಶ್ರದ್ಧಾಭಕ್ತಿಗಳು ನಮ್ಮನ್ನು ಬೆಂಬಿಡದೆ ಕಾಪಾಡುತ್ತವೆ. ಕಷ್ಟ ಪರಂಪರೆಗಳು ಮಂಜಿನಂತೆ ಕರಗಿಹೋಗಿ ಮನದ ಇಷ್ಟಾರ್ಥಗಳು ಈಡೇರುತ್ತವೆ ” ಶ್ರೀಗುರುಪೀಠದ ಮೇಲಿನ ಅಚಲ ನಂಬಿಕೆಯ ಈ ನುಡಿಗಳು ಉಪ್ಪಿನಂಗಡಿ ಮಂಡಲ ವೇಣೂರು ವಲಯದ ಅರ್ಕಳದ ಚಂದ್ರಶೇಖರ ಮುರುಗಜೆಯವರ ಪತ್ನಿ ಶಶಿಪ್ರಭಾ ಅವರದ್ದು. ಪಾಲಾರು ರಾಮ ಭಟ್, ಸವಿತಾ ದಂಪತಿಗಳ ಪುತ್ರಿಯಾದ ಇವರು ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ. ” ಗುರುಸೇವೆಯಲ್ಲಿ ,ಗೋಸೇವೆಯಲ್ಲಿ ತೊಡಗಿಸಿಕೊಂಡಾಗ ಮನಸ್ಸು
Read More” ಈ ಪ್ರಾಣ ಗೋಸೇವೆಗೆ ಶ್ರೀಮಠದ ಸೇವೆಗೆ ಮುಡಿಪು ” : ಲಲಿತಾ ಗಜಾನನ ಹೆಗಡೆ , ಕರ್ಕಿಮನೆ
” ಗೋವಿನ ಹಾಲನ್ನು ಜಾತಿಮತ ಭೇದವಿಲ್ಲದೆ ಎಲ್ಲರೂ ಉಪಯೋಗಿಸುತ್ತಾರೆ. ಅದೇ ರೀತಿಯಲ್ಲಿ ದೇಶೀಯ ಗೋತಳಿಗಳ ಸಂರಕ್ಷಣೆಗೂ ಎಲ್ಲರೂ ಕಟಿಬದ್ಧರಾಗಬೇಕು. ಮುಕ್ಕೋಟಿ ದೇವರುಗಳ ಆವಾಸಸ್ಥಾನವಾದ ಗೋಮಾತೆಯ ಸೇವೆಗೆ ಕೋಟಿ ಕೋಟಿ ಸಂಖ್ಯೆಯಲ್ಲಿ ಜನರು ಕೈಜೋಡಿಸುವಂತಾಗಬೇಕು ಎಂಬುದೇ ನನ್ನ ಅಭಿಲಾಷೆ. ಇದಕ್ಕಾಗಿ ಸಮಾಜದ ಪ್ರತಿಯೊಂದು ವಿಭಾಗದ ಜನರನ್ನೂ ಸಂಪರ್ಕಿಸಿ ಗೋಮಾತೆಯ ಮಹತ್ವದ ಅರಿವು ಮೂಡಿಸುತ್ತಿದ್ದೇನೆ. ಶ್ರೀಮಠದ ಸೇವೆ, ಗೋಮಾತೆಯ ಸೇವೆಗೆ ಈ ಪ್ರಾಣವೇ ಮುಡಿಪು ” ಎಂದವರು ಹೊನ್ನಾವರ ಮಂಡಲ ಕರ್ಕಿ ವಲಯದ ಜಿ.ಎಂ.ಹೆಗಡೆಯವರ ಪತ್ನಿ ಲಲಿತಾ ಜಿ.
Read More” ಶ್ರೀಗುರು ಸಾನ್ನಿಧ್ಯದಲ್ಲಿ ಬದುಕಿನ ಸಂಕಷ್ಟಗಳು ನಿವೃತ್ತಿ ” : ಸರಸ್ವತಿ ಎನ್. ಹೆಗಡೆ ಅಂಬಾಗಿರಿ
” ಮಾನವ ಜೀವನದಲ್ಲಿ ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಪ್ರತಿಯೊಬ್ಬರೂ ಜೀವನ ಪಥದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಯಾರು ಸಮರ್ಪಣಾ ಭಾವದಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅಂತಹ ಮಂದಿಗೆ ಶ್ರೀ ಗುರುಕಾರುಣ್ಯದಿಂದ ಪಾಪರಾಶಿಯೆಲ್ಲ ಕಳೆದುಹೋಗಿ ಬದುಕಿನ ಹಾದಿ ಸುಗಮವಾಗುತ್ತದೆ ” ಇದು ಸಿದ್ದಾಪುರ ಮಂಡಲ ,ಅಂಬಾಗಿರಿ ವಲಯದ ಪ್ರಸ್ತುತ ಬಾಗಲಕೋಟೆ ನಿವಾಸಿಗಳಾಗಿರುವ ನಾರಾಯಣ ಕಾಶಿ ಹೆಗಡೆಯವರ ಪತ್ನಿ ಸರಸ್ವತಿ ಎನ್. ಹೆಗಡೆ ಅವರ ಮಾತುಗಳು. ಚಂದಾವರ ಸೀಮೆಯ ಕುಮಟಾದ ನವಿಲುಗೋಣದ ಚನ್ನಯ್ಯ
Read More” ಗವ್ಯ ವಸ್ತುಗಳ ಬಳಕೆಯಿಂದ ಗೋ ವಂಶ ಸಮೃದ್ಧಿ ” : ಕಮಲಾಕ್ಷಿ ಚಂದ್ರಶೇಖರ್ , ಮಕ್ಕಿಮನೆ
” ಭಾರತೀಯ ಗೋತಳಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ತಾಯಿಯಂತೆ ಹಾಲಿತ್ತು ಸಲಹುವ ಗೋವಿನ ಉತ್ಪನ್ನಗಳನ್ನು ನಿತ್ಯ ಜೀವನದಲ್ಲಿ ಬಳಸಿದರೆ ನಮ್ಮ ಬದುಕು ಹಸನಾಗುವ ಜೊತೆಗೆ ಗೋವಂಶದ ಅಭಿವೃದ್ಧಿಯೂ ಆಗಬಹುದು ” ಎಂದವರು ಮೂಲತಃ ಕೊಡಗು ಚೈಯಂಡಾಣೆಯ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ ಭುವನಗಿರಿ ವಲಯ ನಿವಾಸಿಗಳಾಗಿರುವ ಚಂದ್ರಶೇಖರ ಮಕ್ಕಿಮನೆ ಅವರ ಪತ್ನಿ ಕಮಲಾಕ್ಷಿ. ಕೊಡಗಿನ ಮಂಜಯ್ಯ ,ಜಾನಕಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ” ಪ್ರಾಚೀನ ಕಾಲದಿಂದಲೂ
Read More” ಆತ್ಮಸಂತೋಷಕ್ಕೆ ಸರಳ ಹಾದಿ ಗೋಸೇವೆ ” : ಲತಾ ಗಣಪತಿ ಹೆಗಡೆ
” ಅಮೃತದಂತಹ ಹಾಲನ್ನು ನೀಡುವ ಗೋಮಾತೆಯನ್ನು ಮಾತೃ ಸ್ಥಾನದಲ್ಲಿ ಪೂಜಿಸುವ ಸಂಸ್ಕೃತಿ ನಮ್ಮದು. ಪ್ರತಿದಿನವೂ ಗೋಸೇವೆ ಮಾಡಿದರೆ ನಮ್ಮ ನಿತ್ಯ ಸಂಕಷ್ಟಗಳು ಪರಿಹಾರವಾಗಿ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಆತ್ಮಸಂತೋಷ ಅರಳುತ್ತದೆ ” ಎಂದವರು ಕುಮಟಾ ಮಂಡಲ ಮೂರೂರು – ಕಲ್ಲಬ್ಬೆ ವಲಯದ ಮಕ್ಕಿಮನೆ ಗಣಪತಿ ಹೆಗಡೆಯವರ ಪತ್ನಿ ಲತಾ ಜಿ. ಹೆಗಡೆ. ವಾಲ್ಗಳ್ಳಿಯ ಗಜಾನನ ಶ್ಯಾನುಬಾಗ್ , ಗಿರಿಜಾ ಶ್ಯಾನುಬಾಗ್ ದಂಪತಿಗಳ ಪುತ್ರಿಯಾದ ಲತಾ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ
Read More” ಗೋಮಾತೆ ಮಾತೃಶಕ್ತಿಯ ಸ್ವರೂಪ ” : ವಿನಯಾ ಶ್ರೀಧರ ಹೆಗಡೆ , ಗುಡೇ ಅಂಗಡಿ
” ಹಸುವನ್ನು ತಾಯಿಯಂತೆ ಕಾಣುವ ಸಂಸ್ಕೃತಿ ನಮ್ಮದು. ನಾವು ಸಾಕುವ ಹಸುಗಳಿಗೂ ತಾಯಿಯದೇ ಅಂತಃಕರಣವಿದೆ. ಮನೆಯ ಸದಸ್ಯರ ಬಗ್ಗೆ ಗೋಮಾತೆಗೂ ತುಂಬಾ ಕಾಳಜಿಯಿದೆ. ಮನೆಯವರ ಅನಾರೋಗ್ಯದ ಸಂದರ್ಭದಲ್ಲಿ ಹಟ್ಟಿಯಲ್ಲಿರುವ ಹಸುಗಳೂ ಮನದಲ್ಲೇ ರೋಧಿಸುವುದು ಅವುಗಳ ಒಡನಾಟದಲ್ಲಿರುವವರಿಗೆ ಬೇಗನೆ ತಿಳಿಯಬಹುದು. ದೇಶೀಯ ತಳಿಯ ಹಸುಗಳು ಇದಕ್ಕೆ ನಿದರ್ಶನಗಳು. ಅದಕ್ಕಾಗಿಯೇ ಗೋಮಾತೆ ಎಂದರೆ ಮಾತೃಶಕ್ತಿಯ ಸ್ವರೂಪ ಎಂಬ ಭಾವನೆ ನನ್ನದು ” ಎಂದವರು ಕುಮಟಾ ಮಂಡಲ ಗುಡೇಅಂಗಡಿ ವಲಯದ ವಿನಯಾ ಶ್ರೀಧರ ಹೆಗಡೆ. ಶಿರಸಿ ಕಾನಮಕ್ಕಿಯ ಅನಂತ ಹೆಗಡೆ
Read More