|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

*ಶ್ರೀ ಗುರು ಪೀಠದ ಮೇಲಿನ‌ ಅಚಲ ನಂಬಿಕೆಯು ಭವ್ಯ ಬದುಕಿನ ಸೋಪಾನ* ” : ಅಮ್ಮಂಕಲ್ಲು ರಾಮ ಭಟ್

  ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಸಭೆಯು ದಿನಾಂಕ ೩೦ – ೦೭ – ೨೦೨೧ ,ಶುಕ್ರವಾರ ಎಡಕ್ಕಾನ ಘಟಕದ ಅಧ್ಯಕ್ಷರಾದ ಸುಬ್ಬಾ ಭಟ್ಟರ ‘ ಸುಖನಿಧಿ ‘ ನಿವಾಸದಲ್ಲಿ ಜರಗಿತು. ಧ್ವಜಾರೋಹಣ , ಶಂಖನಾದ, ಗುರುವಂದನೆಗಳೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಮಾತನಾಡಿ ಪ್ರಸ್ತುತ ಬೆಂಗಳೂರಿನ

Read More

ಧನ-ಜನಕ್ಕಿಂತ ಜ್ಞಾನಶಕ್ತಿ ಶ್ರೇಷ್ಠ: ರಾಘವೇಶ್ವರ ಶ್ರೀ

ಬೆಂಗಳೂರು: ಜನ ಅಥವಾ ಧನ ಶಕ್ತಿಯಿಂದ ದೇಶ ಬದಲಿಸಲಾಗದು; ಸೈನ್ಯ, ಕೋಶ ಅಥವಾ ಜನಸ್ತೋಮ ಇಲ್ಲದೇ ಶಂಕರಾಚಾರ್ಯರು ತಮ್ಮ ಜ್ಞಾನಪ್ರಭೆಯಿಂದ ಅಖಂಡ ಭಾರತದ ಪುನರುತ್ಥಾನ ಮಾಡಿದಂತೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠಪ್ರಾಚೀನ ಜ್ಞಾನಪರಂಪರೆಯ ತಳಹದಿಯಲ್ಲಿ ದೇಶದ ಪುನರ್ ನಿರ್ಮಾಣಕ್ಕೆ ಹೊರಟಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ 28ನೇ ಚಾತುರ್ಮಾಸ್ಯ ವ್ರತಾರಂಭದಲ್ಲಿ ಧರ್ಮಸಂದೇಶ ನೀಡಿದ ಅವರು, “ಇಡೀ ವಿಶ್ವಕ್ಕೆ ಕೋವಿಡ್-19 ಎಂಬ ಗಾಡಾಂಧಕಾರ ಕವಿದ ಸಂಕಷ್ಟದ ಸನ್ನಿವೇಶದಲ್ಲಿ ಈ ಅದ್ಭುತ ಸಂಸ್ಥೆ ಅನಾವರಣಗೊಳ್ಳುತ್ತಿದೆ. ಇದು ದೈವಪ್ರೇರಣೆ.

Read More

ಒಳ್ಳೆಯ ಸಮಾಜ ಸೇವಕನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ – ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ

ದೇವರ ಮೇಲೆ ನಂಬಿಕೆ, ಗುರು ಭಕ್ತಿ, ಸಂಘಟನೆ ಮೇಲೆ ನಿಷ್ಠೆಯಿದ್ದಾಗ ಯಶಸ್ಸು ಜೊತೆಗಿರುತ್ತದೆ. ಒಳ್ಳೆಯ ಸಮಾಜ ಸೇವಕನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಅವರು ಭಾನುವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ ಮಂಗಳೂರು ಮಂಡಲ ಮಾರ್ಗದರ್ಶನ ಸಭೆಯಲ್ಲಿ ಆಶೀರ್ವಚನ ನೀಡಿದರು. ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಮಾತನಾಡಿ ಮನುಷ್ಯನ ಭಾವನೆಗಳಷ್ಟು ದೊಡ್ಡ ವಿಷಯ ಬೇರೊಂದು ಇಲ್ಲ. ಸಂಘಟನೆ

Read More
ರಜತ ಮಂಟಪ ಸಮರ್ಪಣೆ

ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀಕರಾರ್ಚಿತ ದೇವರಿಗೆ ರಜತ ಮಂಟಪ ಸಮರ್ಪಣೆ ನಡೆದು ಗೋಧೂಳಿ ಮುಹೂರ್ತದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯರಿಂದ ನೂತನ ರಜತ ಮಂಟಪದಲ್ಲಿ ಪೂಜೆ ನಡೆಯಿತು.

Read More
ಮಾಣಿಮಠದಲ್ಲಿ ವಿಷ್ಣುಗುಪ್ತ ವಿವಿ ಶಾಖೆ: ರಾಘವೇಶ್ವರಶ್ರೀ

ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶಾಖೆಯಾಗಿ ಮಾಣಿಮಠದ ಶ್ರೀರಾಮ ವೇದಪಾಠಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಘೋಷಿಸಿದರು. ಮಾಣಿ ಮಠ ಸ್ಥಾಪನೆಯ ಮಂಡಲೋತ್ಸವ ಹಾಗೂ 48ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಕೃಷ್ಣ ಯಜುರ್ವೇದದ ಪರಿಪೂರ್ಣ ಬೋಧನೆಯ ಜತೆಗೆ ಆಧುನಿಕ ಶಿಕ್ಷಣ, ಭಾರತೀಯ ವಿದ್ಯೆ, ಕಲೆಗಳು ಮತ್ತು ವೇದಾಭ್ಯಾಸವನ್ನು ಇಲ್ಲಿ ಕಲಿಸಿ ಸಮಗ್ರ ಜೀವನ ಶಿಕ್ಷಣ ನೀಡುವ ಕೇಂದ್ರವಾಗಿ ಬೆಳೆಸಲಾಗುವುದು. ಮಠದ ಈ ಪ್ರಯತ್ನಕ್ಕೆ ಸಮಾಜದ ಸ್ಪಂದನೆ ವಿಶೇಷವಾಗಿ ಅಗತ್ಯ ಎಂದು ಹೇಳಿದರು. ಹವ್ಯಕ, ಹಾಲಕ್ಕಿ, ಮುಕ್ರಿ

Read More
ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ಪ್ರತಿಭಾಪುರಸ್ಕಾರ

ಅಂಬಾಗಿರಿಯ  ಶ್ರೀ  ರಾಮಕೃಷ್ಣ  ಕಾಳಿಕಾ  ಭವಾನಿ  ಮಠದಲ್ಲಿ  ಪ್ರತಿವರ್ಷ  ಶರನ್ನವರಾತ್ರಿ  ಪ್ರಯುಕ್ತ  ನಡೆಸುವ  ನವ ಚಂಡಿಕಾ  ಹವನ ವೇದಮೂರ್ತಿ  ಕಟ್ಟೆ  ಶಂಕರಭಟ್ಟರ  ಆಚಾರತ್ವ ದಲ್ಲಿ  ಧರ್ಮಕರ್ಮ  ವಿಭಾಗದ  ಪ್ರಧಾನರಾದ ವೇ. ಮೂ. ಜನಾರ್ಧನ  ಭಟ್ಟರ  ನೇತೃತ್ವ  ಹಾಗೂ  ವಲಯದ  ಅಧ್ಯಕ್ಷರಾದ  ವಿ. ಎಂ. ಹೆಗಡೆ  ದಂಪತಿಗಳ  ಯಜಮಾನತ್ವದಲ್ಲಿ  ಸಂಪನ್ನಗೊಂಡಿತು. ಮಾತೆಯರಿಂದ  ಕುಂಕುಮಾರ್ಚನೆ  ಹಾಗೂ  ಕನಕಧಾರಾ  ಸ್ತೋತ್ರ  ಪಠಣ  ನಡೆಯಿತು. ವಲಯದ ವಿದ್ಯಾ  ವಿಭಾಗದಿಂದ ಪ್ರತಿಭಾನ್ವಿತ  ವಿದ್ಯಾರ್ಥಿಗಳಿಗೆ  ಶ್ರೀ ಸಂಸ್ಥಾನದವರ  ಆಶೀರ್ವಾದ  ಪೂರ್ವಕ  ಪ್ರಶಂಸನಾ  ಪತ್ರ ವಿತರಣಾ  ಕಾರ್ಯಕ್ರಮವು 

Read More
ಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಪುರಸ್ಕಾರ

ಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಮಾಡಿದ ಮಂಗಳೂರು ಮಧ್ಯ ವಲಯದ ವಿದ್ಯಾರ್ಥಿಗಳನ್ನು ಗುರುತಿಸಿ, ಅ.25ರಂದು ನಂತೂರಿನ ಶ್ರೀ ಭಾರತೀ ಕಾಲೇಜಿನ ಸಭಾಂಗಣ ಶಂಕರಶ್ರೀಯಲ್ಲಿ ಪುರಸ್ಕರಿಸಲಾಯಿತು. ಶಮಂತ ಕೃಷ್ಣ, ಸಿಂಧೂರ ಬಿ ಭಟ್, ಶ್ರೀದೀಪ್, ಸೀತಾ ಖಂಡಿಗೆ, ನಚಿಕೇತ ಶರ್ಮ ಇವರಿಗೆ ಮಹಾಮಂಡಲದಿಂದ ಕೊಡಮಾಡಿದ ಅಭಿನಂದನಾ ಪತ್ರ ಪ್ರದಾನ ಮಾಡಲಾಯಿತು. ಮಂಗಳೂರು ಮಂಡಲದ ಅದ್ಯಕ್ಷ ಗಣೇಶ್ ಮೋಹನ್ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಹಳೆಮನೆ, ಮಂಗಳೂರು ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಭಾಸ್ಕರ ಹೊಸಮನೆ, ವಲಯ ಅಧ್ಯಕ್ಷ ಬಾಲ ಸುಬ್ರಹ್ಮಣ್ಯ ಭಟ್

Read More
ಪ್ರಕೃತಿಯಿಂದ ಸಂಸ್ಕೃತಿಗೆ ಏರೋಣ, ವಿಕೃತಿಗೆ ಇಳಿಯದಿರೋಣ – ಶ್ರೀಸಂಸ್ಥಾನ

ಪ್ರಕೃತಿ ಸಂಸ್ಕೃತಿ ವಿಕೃತಿ ಮೂರು ಅರ್ಥ ಮಾಡಿಕೊಂಡಾಗ ಬದುಕು ಯಶಸ್ವಿಯಾಗುತ್ತದೆ. ಪ್ರಕೃತಿಯಿಂದ ಸಂಸ್ಕೃತಿಗೆ ಏರೋಣ, ವಿಕೃತಿಗೆ ಇಳಿಯದಿರೋಣ ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಸೇವಾ ಖಂಡದ ಕಾರ್ಯವೇಕ್ಷಣೆ ಮತ್ತು ತರಬೇತಿ ಉಪಖಂಡದ ವತಿಯಿಂದ ವೆಬಿನಾರ್ ಮೂಲಕ ನಡೆಯುವ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ಪರಿಷ್ಕಾರಗಳಿಗೆ ಅಂತ್ಯ ಎಂಬುದಿಲ್ಲ. ಪ್ರತಿಯೊಬ್ಬರು ಪರಿಷ್ಕಾರಕ್ಕೆ ಒಳಗಾಗುವುದರಿಂದ ತರಬೇತಿಯ ಉದ್ದೇಶ ಪರಿಪೂರ್ಣವಾಗುತ್ತದೆ. ತರಬೇತಿಯಲ್ಲಿ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

Read More
ವಿದ್ಯಾರ್ಥಿಗಳಿಗೆ ಪುರಸ್ಕಾರ

  ಮಂಗಳೂರು ಉತ್ತರ ವಲಯದಟಟi ಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು. ನೇತ್ರಾ ಕೆ, ಸೌರಭ ಪಿ., ದಿಶಾ ಆರ್ ಹೆಗಡೆ ಅವರನ್ನು ಪುರಸ್ಕರಿಸಲಾಯಿತು. ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿಯವ ಶ್ರೀಕೃಷ್ಣ ಶರ್ಮ ಹಳೆಮನೆ, ವಲಯದ ಅಧ್ಯಕ್ಷ ಡಾ ಶಿವಶಂಕರ ಭಟ್, ಕಾರ್ಯದರ್ಶಿ ನಂದ ಕಿಶೋರ್ ಬೀರಂತಡ್ಕ, ಕೋಶಾಧಿಕಾರಿಯವ ಮುರಳೀಧರ ಅಡ್ಕೋಳಿ ಉಪಸ್ಥಿತರಿದ್ದರು. ವಲಯದ ವಿದ್ಯಾರ್ಥಿ ಪ್ರಧಾನರಾದ ದಿವಸ್ಪತಿ ಭಟ್ಟ ಕಾರ್ಯಕ್ರಮ ನಿರೂಪಿಸಿದರು.

Read More
ನಂದಿನಿ ವಲಯದ ಪ್ರತಿಭಾ ಪುರಸ್ಕಾರ

ನಂದಿನಿ ವಲಯದ ಪ್ರತಿಭಾ ಪುರಸ್ಕಾರ ಸಮಾರಂಭ ವಲಯದ ಉಪಾಧ್ಯಕ್ಷರಾದ ಶ್ರೀ ಜಿ . ಎಮ್. ಭಟ್ಟರ ಮನೆಯಲ್ಲಿ ,ಅವರದೇ ಸ್ವಾಗತದೊಂದಿಗೆ  ನಡೆಯಿತು. ಎಸ್.ಎಸ್ .ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ   9 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ಅಭಿನಂದನೆ ಸಲ್ಲಿಸಲು ಸೇರಿದ್ದ ಸಭೆಯಲ್ಲಿ ಮಹಾಮಂಡಳದ ವಿದ್ಯಾರ್ಥಿವಾಹಿನೀ ಪ್ರಧಾನರಾದ ಸಂಧ್ಯಾ ಕಾನತ್ತೂರು, ಮಹಾಮಂಡಲದ ಕೋಶಾಧ್ಯಕ್ಷರಾದ ಜಿ.ಜಿ ಹೆಗಡೆಯವರು, ಬೆಂಗಳೂರು ಉತ್ತರ ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನರಾದ ಕೇಶವ  ಮುರಳಿಯವರು ,ವಲಯದ ಅಧ್ಯಕ್ಷರಾದ  ಸತೀಶ ಹೆಗಡೆಯವರು,ವಲಯ ಉಪಾಧ್ಯಕ್ಷರಾದ ಜಿ.ಎಮ್ ಭಟ್ಟರು, ವಲಯ ಕಾರ್ಯದರ್ಶಿ  ಸುರೇಶ

Read More
ಪ್ರಧಾನಮಠದಲ್ಲಿ ನವರಾತ್ರಿ ಆಚರಣೆ

  ನವರಾತ್ರಿಯ ಅಂಗವಾಗಿ ಹೊಸನಗರದ ಶ್ರೀರಾಮಚಂದ್ರಾಪುರಮಠದ ಪ್ರಧಾನಮಠದಲ್ಲಿ ವಿಶೇಷ ಪೂಜೆ ನಡೆಯಿತು. ಆಶ್ವೀಜ ಶುಕ್ಲ ಪ್ರತಿಪದಿಯಿಂದ ಪ್ರಾರಂಭವಾಗಿ ಬೆಳಿಗ್ಗೆ ಕಲಶ ಸ್ಥಾಪನೆ ಸಪ್ತಸಿತಿ ಪರಾಯಣ, ಸಾಯಂಕಾಲ ನವರಾತ್ರಿ ಪೂಜೆ ನೆರವೇರಿತು. ಅರ್ಚಕರಾಗಿ ಸತ್ಯನಾರಾಣ ಭಟ್ಟ, ವೈದಿಕರಾಗಿ ರಾಘವೇಂದ್ರ ಪ್ರಸಾದ ಅವರು ಪೂಜಾ ಕಾರ್ಯ ನೆರವೇರಿಸಿದರು.

Read More
ಗುರಿಕ್ಕಾರ ಸಮಾವೇಶ

ರಾಮಚಂದ್ರಾಪುರ ಮಂಡಲ ವ್ಯಾಪ್ತಿಯ ಗುರಿಕ್ಕಾರ ಸಮಾವೇಶ ಹೊಸನಗರ ಪ್ರಧಾನಮಠದಲ್ಲಿ ನಡೆಯಿತು. ಧರ್ಮ ಕರ್ಮ ಖಂಡದ ರಾಮಕೃಷ್ಣ ಭಟ್ಟ ಕೂಟೇಲು, ಮುಳ್ಳೇರಿಯಾ ಮಂಡಲ ಗುರಿಕ್ಕಾರ ರಾದ ಸತ್ಯನಾರಾಯಣ ಮೋಗ್ರ, ಹವ್ಯಕ ಮಹಾಮಂಡಳದ ಸೇವಾ ಪ್ರಧಾನರಾದ ಎಂ. ಜಿ. ರಾಮಚಂದ್ರ ಹಾಗೂ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More
ಸಾಗರ ಮಂಡಲ ಸಮನ್ವಯ ಸಭಾ ಸರಣಿಯ ಮೂರನೇ ಸಭೆ

ಶ್ರೀರಾಮಚಂದ್ರಾಪುರಮಠದ ಹವ್ಯಕ ಮಹಾಮಂಡಲ ಹಾಗೂ ಮಂಡಲ, ವಲಯಗಳ ಸಮನ್ವಯ ಸಭಾ ಸರಣಿಯ ಮೂರನೇ ಸಭೆ ಇಂದು ಸಾಗರ ಮಂಡಲದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಗುರುವಂದನೆಯ ನಂತರ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್ ಅವರ ಸಭಾಪೂಜೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಮಹಾಮಂಡಲ ಅಧ್ಯಕ್ಷ ಆರ್ ಎಸ್ ಹೆಗಡೆ ಹರಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕನಸಿನ ಕೂಸಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಂಡಲ ಪದಾಧಿಕಾರಿಗಳಿಗೆ ಮಾಹಿತಿ‌ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ವರಿಷ್ಠಾಚಾರ್ಯ ವಿದ್ವಾನ್

Read More
ಸಿದ್ಧಾಪುರ ಮಂಡಲದ ಸಮನ್ವಯ ಸಭಾ ಸರಣಿಯ ಎರಡನೇ ಸಭೆ

ಶ್ರೀರಾಮಚಂದ್ರಾಪುರಮಠದ ಹವ್ಯಕ ಮಹಾಮಂಡಲ ಹಾಗೂ ಮಂಡಲ, ವಲಯಗಳ ಸಮನ್ವಯ ಸಭಾ ಸರಣಿಯ ಎರಡನೇ ಸಭೆ ಇಂದು ಸಿದ್ಧಾಪುರ ಮಂಡಲದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಗುರುವಂದನೆಯ ನಂತರ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್ ಸಭಾಪೂಜೆ ನಡೆಸಿದರು. ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕನಸಿನ ಕೂಸಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಂಡಲ ಪದಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಗೋಕರ್ಣ ಇವರು ಪಾರಂಪರಿಕ ಶಿಕ್ಷಣದ ಮಹತ್ವ ಹಾಗೂ ವಿಶ್ವವಿದ್ಯಾಪೀಠದಲ್ಲಿ ಆರಂಭಗೊಳ್ಳಲಿರುವ

Read More
ಅಶೋಕಾವನದಲ್ಲಿ ಮಹಾಮಂಡಲ ಸಮನ್ವಯ ಸಭಾ ಸರಣಿಯ ಮೊದಲ ಸಭೆ

  ಶ್ರೀರಾಮಚಂದ್ರಾಪುರಮಠದ ಹವ್ಯಕ ಮಹಾಮಂಡಲ ಹಾಗೂ ಮಂಡಲ, ವಲಯಗಳ ಸಮನ್ವಯ ಸಭಾ ಸರಣಿಯ ಮೊದಲ ಸಭೆ ರಾಮಚಂದ್ರಾಪುರ ಮಂಡಲದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕನಸಿನ ಕೂಸಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಗೋಕರ್ಣ ಇವರು ಪಾರಂಪರಿಕ ಶಿಕ್ಷಣದ ಮಹತ್ವ ಹಾಗೂ ವಿಶ್ವವಿದ್ಯಾಪೀಠದಲ್ಲಿ ಆರಂಭಗೊಳ್ಳಲಿರುವ ಪಾರಂಪರಿಕ ಶಿಕ್ಷಣದ ಬಗ್ಗೆ ಮಾತನಾಡಿದರು. ವಿಶ್ವವಿದ್ಯಾಪೀಠದ ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ವಿಶ್ವವಿದ್ಯಾಪೀಠದಲ್ಲಿರುವ ವಿವಿಧ ವ್ಯವಸ್ಥೆಗಳನ್ನು ಪರಿಚಯಿಸಿದರು.

Read More
ಮಂಡಲ ವೈದಿಕ ಸಂಗಮ ಕಾರ್ಯಕ್ರಮ

ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ರಾಮಚಂದ್ರಾಪುರ ಮಂಡಲ ವೈದಿಕ ವಿಭಾಗವತಿಯಿಂದ ಮಂಡಲ ವೈದಿಕ ಸಂಗಮ ಕಾರ್ಯಕ್ರಮ ಅ.೧ರಂದು ನಡೆಯಿತು. ಧರ್ಮಕರ್ಮ ಖಂಡದ ರಾಮಕೃಷ್ಣ ಭಟ್ಟ ಕೂಟೇಲು, ಹವ್ಯಕ ಮಹಾಮಂಡಳ ಅಧ್ಯಕ್ಷ ಆರ್ ಎಸ್ ಹೆಗಡೆ ಹರಗಿ, ರಾಮಚಂದ್ರಾಪುರ ಮಂಡಲ ಅಧ್ಯಕ್ಷ ಸತ್ಯನಾರಾಯಣ ಭಾಗಿ, ಪ್ರಧಾನಮಠದ ನಿರ್ವಹಣಾ ಸಮಿತಿಯ ಅಧ್ಯಕ್ಷ ಗಣಪತಿ ಭಟ್ಟ ಜಟ್ಟಿಮನೆ, ಮಹಾಮಂಡಳ ಸೇವಾಪ್ರಧಾನರು ಮತ್ತು ರಾಮಚಂದ್ರಾಪುರ ಮಂಡಲ ಉಸ್ತುವಾರಿ ಎಂ ಜಿ ರಾಮಚಂದ್ರ, ರಾಮಚಂದ್ರಾಪುರ ಮಂಡಲ ಪ್ರಧಾನ ಗುರಿಕ್ಕಾರ ಕೌಲಕೈ ಕುಮಾರ, ರಾಮಚಂದ್ರಾಪುರ ಮಂಡಳ ವೈದಿಕ

Read More
ಗೋವಧೆ ನಿಷೇಧ, ತಳಿ ಸಂವರ್ಧನೆಗೆ ಕಾಯ್ದೆ: ರಾಘವೇಶ್ವರ ಶ್ರೀ ಒತ್ತಾಯ

ಗೋಕರ್ಣ: ರಾಜ್ಯದಲ್ಲಿ ಸಂಪೂರ್ಣ ಗೋವಧೆ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ & ಸಂವರ್ಧನೆಗೆ ಅನುವು ಮಾಡಿಕೊಡುವ ಮಸೂದೆಯನ್ನು ನಾಳೆ (ಸೆ. 21)ಯಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಆಂಗೀಕರಿಸಬೇಕು ಎಂದು ರಾಮಚಂದ್ರಾಪುರಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶ್ರೀರಾಮಚಂದ್ರಾಪುರ ಮಠದಿಂದ ಚಾಲಿತವಾದ ಭಾರತೀಯ ಗೋಪರಿವಾರ ವತಿಯಿಂದ ಈಗಾಗಲೇ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಮಂದಿಯ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ದೇಶದ ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗಿದೆ. ಬಹುಜನರ ಅಭಿಪ್ರಾಯಕ್ಕೆ

Read More
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಭವ್ಯ ಭವಿಷ್ಯದ ಸೂಚಕ: ರಾಘವೇಶ್ವರ ಶ್ರೀ

ಗೋಕರ್ಣ: ಭವ್ಯ ಭವಿಷ್ಯದ ಸೂಚಕ, ದೇಶದ ದಿಶೆಯನ್ನೇ ಬದಲಾಯಿಸಬಲ್ಲ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯ ಸಂಕಲ್ಪ ವಿದ್ಯಾ ಚಾತುರ್ಮಾಸ್ಯ ಸಂದರ್ಭದಲ್ಲಿ ಸಾಕಾರಗೊಂಡಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕವನದ ಆವರಣದಲ್ಲಿ ನಡೆದ 27ನೇ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ತಕ್ಷಶಿಲೆಯ ಪುನಃಸೃಷ್ಟಿ ಇದಾಗಲಿದೆ. ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲ ವ್ಯಕ್ತಿತ್ವಗಳು ಇಲ್ಲಿ ನಿರ್ಮಾಣವಾಗಲಿವೆ ಎಂದರು. ಶಿವನ ಆತ್ಮಲಿಂಗ ಕ್ಷೇತ್ರ, ಆಂಜನೇಯನ ಜನ್ಮಭೂಮಿ, ಶ್ರೀಶಂಕರರು ಮೂರು ಬಾರಿ ಪಾದಸ್ಪರ್ಶ ಮಾಡಿದ ಪುಣ್ಯಭೂಮಿ, ದೈವರಾತರ ಕರ್ಮಭೂಮಿಯಾದ ಗೋಕರ್ಣದ

Read More
ರಾಘವೇಶ್ವರ ಶ್ರೀ ಸೀಮೋಲ್ಲಂಘನೆ, ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ

ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ 26ನೇ ಚಾತುರ್ಮಾಸ್ಯ ಸೀಮೋಲ್ಲಂಘನ ಹಾಗೂ ಶ್ರೀಮಠದ ವತಿಯಿಂದ ನೀಡಲಾಗುವ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ (ಸೆ. 2) ಗೋಕರ್ಣ ಬಳಿಯ ಅಶೋಕವನದಲ್ಲಿ ನಡೆಯಲಿದೆ. ಸೀಮೋಲ್ಲಂಘನೆ ಅಂಗವಾಗಿ ಗಂಗಾವಳಿ ನದಿಯನ್ನು ದಾಟಿ ಅಶೋಕೆಗೆ ಮರಳಿ ಧರ್ಮಸಭೆ ನಡೆಸುವರು. ಕೆ.ಎಸ್.ಗುರುಮೂರ್ತಿ ಶಿಕಾರಿಪುರ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಅನುಗ್ರಹಿಸಲಿದ್ದಾರೆ ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಮೂಲತಃ ಶಿರವಂತೆ ಸೀಮೆ ಹೊಸಳ್ಳಿ ಗ್ರಾಮದ ಕಲ್ಸೇಮನೆ ವಾಸಿ ಸಿಬ್ಬಯ್ಯನವರ ಪುತ್ರರಾದ ಗುರುಮೂರ್ತಿಯವರು

Read More
ಗೋನಿರ್ಭರತೆಯಿಂದ ಆತ್ಮನಿರಭರತೆ ಸಾಧ್ಯ – ಶ್ರೀಸಂಸ್ಥಾನ

ರಾಸಾಯನಿಕ ಕೃಷಿ ಒಂದಲ್ಲಒಂದು ದಿನ ರೈತನಕುತ್ತಿಗೆಗೆ ಉರುಳಾಗುತ್ತದೆ. ದೇಶೀ ಗೋವನ್ನು ಸಾಕಿಕೊಂಡುಇದ್ದವರುಯಾರೂಆತ್ಮಹತ್ಯೆ ಮಾಡಿಕೊಂಡಿಲ್ಲ. ಸ್ವಾವಲಂಬಿ ಎಂಬುದಕ್ಕೆ ಗೋವು ಬಲುದೊಡ್ಡ ನಿದರ್ಶನ. ಗೋನಿರ್ಭರತೆಯಿಂದಆತ್ಮನಿರಭರತೆ ಸಾಧ್ಯವಾಗುತ್ತದೆ.ದೇಶದ ಗಮನ ಗೋವಿನ ಕಡೆಗೆ ಹರಿಯುವಂತೆ ಮಾಡಬೇಕು.ಗೋವು ದೇಶಕ್ಕೆ ಬೆಳಕಿನ ಕಿರಣವಾಗಿದ್ದು, ತಂತ್ರಜ್ಞಾನಗಳು ಗೋಜ್ಞಾನದಕಡೆಗೆಕೊಂಡೊಯ್ಯುವಂತಾಗಲಿ ಎಂದು ಶ್ರೀರಾಮಚಂದ್ರಾಪುರ ಮಠದಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು. ಶ್ರೀರಾಮಾಂದ್ರಾಪುರ ಮಠದ ವತಿಯಿಂದ ಎ೧ ಲಾಜಿಕ್ಸ್ ಮಂಗಳೂರು ಸಹಕಾರದಲ್ಲಿ ದೇಸೀ ಗೋವು ಆಧಾರಿತಕೃಷಿಯಕುರಿತು ದೇಸೀ ಗೋವು – ಸ್ವಾವಲಂಬಿ ಸಾವಯವ ಕೃಷಿ ವೆಬಿನಾರ್ ಸರಣಿಕಾರ್ಯಕ್ರಮದಲ್ಲಿ ಪರಮಪೂಜ್ಯರು ವಿಶೇಷ ಆಶೀರ್ವಚನ ನೀಡಿದರು.

Read More