|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ರಾಮಚಂದ್ರಾಪುರ-ಕಾಂಚೀ ಪೀಠಾಧಿಪತಿಗಳ ಸಮಾಗಮ

ಪುತ್ತೂರು: ‘ಪರಂಪರೆ, ಸಂಸ್ಕೃತಿಯ ನಿರಂತರ ಪಾಲನೆ ಅಗತ್ಯವಾಗಿದೆ. ಕುಲಗಳು ಒಂದಾದಾಗ ಬಲ ಹೆಚ್ಚಾಗುತ್ತದೆ. ಈ ಮೂಲಕ ಸಮಾಜದ ಶಕ್ತಿ ವೃದ್ಧಿಸುತ್ತದೆ. ಸಂಸ್ಕಾರದ ಸಂರಕ್ಷಣೆಯ ಕಾರ್ಯಗಳನ್ನು ಸಮಾಜ ಮಾಡಬೇಕು. ಯೋಗ ಸಾಧನೆಯ ಕಾರ್ಯ ನಡೆಯಬೇಕಾಗಿದೆ’ ಎಂದು ಶ್ರೀ ಕಾಂಚೀ ಕಾಮಕೋಟಿ ಪೀಠ ಜಗದ್ಗುರು ಶಂಕರಾಚಾರ್ಯ ಶ್ರೀ ಶಂಕರ ವಿಜೇಯೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತಿಳಿಸಿದರು. ಅವರು ಶ್ರೀರಾಮಚಂದ್ರಾಪುರ ಮಠದ ಮಾಣಿ-ಪೆರಾಜೆ ಶಾಖೆಗೆ ಭೇಟಿ ನೀಡಿ, ಮಠದ ದೇವತಾ ಸಾನ್ನಿಧ್ಯವನ್ನು ದರ್ಶಿಸಿ ಆಶೀರ್ವಚನ ನೀಡಿದರು. ‘ಕುಲ ದೇವತಾ, ಕುಲ ಗುರುಗಳ ನೆನಪು

Read More

‘ಧನ್ಯಜನನೀ’ ವಿಶೇಷ ಪುರಸ್ಕಾರ ಪ್ರದಾನ

ಹೊಸನಗರ: ಪ್ರಧಾನ ಮಠದಲ್ಲಿ ನಡೆಯುತ್ತಿರುವ ‘ಶ್ರೀರಾಮೋತ್ಸವ’ದಲ್ಲಿ ಫಾಲ್ಗುನ ಶುಕ್ಲ ಅಷ್ಟಮಿಯಂದು (26-03-2026) ಮಾತೃಸಮಾವೇಶದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು ‘ಧನ್ಯಜನನೀ’ ಪುರಸ್ಕಾರವನ್ನು ಅನುಗ್ರಹಿಸಿದರು. ಒಟ್ಟು 87 ಮಾತೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನಾತನಧರ್ಮದ ಸಂರಕ್ಷಣೆಯ ದಿಶೆಯಲ್ಲಿ, ಸಮಾಜಕ್ಷಯವನ್ನು ತಡೆಯುವ ನಿಟ್ಟಿನಲ್ಲಿ ಶ್ರೀಸಂಸ್ಥಾನದವರು ಉದ್ಘೋಷಿಸಿದ್ದ ಈ ಪುರಸ್ಕಾರವು ಮೂರು ಅಥವಾ ಅದಕ್ಕೂ ಅಧಿಕ ಮಕ್ಕಳನ್ನು ಪಡೆದ ಮಾತೆಯರಿಗೆ ನೀಡುವ ಅನುಪಮ ಗೌರವ. ಶ್ರೀಸಂಸ್ಥಾನದವರು ಶ್ರೀಸಂದೇಶವನ್ನು ಅನುಗ್ರಹಿಸುತ್ತಾ ‘ಸಂತಾನವೇ ಸಂಪತ್ತು. ಮಕ್ಕಳು ಬೇಡ ಎಂಬ ಆಧುನಿಕ ಚಿಂತನೆ ದೇಶದ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಮಿತ

Read More

ಶ್ರೀಗುರುಕೃಪೆಯ ಬೆಳಕಲ್ಲಿ ಜಾಗೃತವಾದ ಧರ್ಮಪಥ

ಜ್ಞಾನದ ದಾರಿಗೆ ಸ್ಥಾನ, ಧರ್ಮದ ಮಾರ್ಗಕ್ಕೆ ಸೂತ್ರದ ಅಗತ್ಯವಿದೆ. ಕಷ್ಟಗಳನ್ನು ಕೇಳುವ, ಉದ್ದಾರಕ್ಕೆ ದಾರಿ ತೋರಿಸುವ ಜತೆಗೆ ಹತ್ತು ಹಲವು ಶುಭಚಿಂತನೆಗಳನ್ನು ಇಟ್ಟುಕೊಂಡು ಮಠ ನಿರ್ಮಾಣವಾಗಿದೆ. ಗುರು ಪರಂಪರೆ ಹಾಗೂ ಶಿಷ್ಯರು ಸಂಗಮಗೊಳ್ಳುವ ಮಠಕ್ಕೆ ವಿಶೇಷ ಮಹತ್ವವಿದೆ. ಮಠದ ಸತ್ವ, ಪ್ರೇರಣೆ ನಮ್ಮ ಒಳಗೆ ಬರಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಮಾಣಿ ಜನಭವನದಲ್ಲಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಸಪರಿವಾರ ಶ್ರೀರಾಮ ದೇವರ ಪ್ರತಿಷ್ಠಾ ವರ್ಧಂತಿ, ಮಂಗಳೂರು ಹೋಬಳಿಯ ವಾರ್ಷಿಕೋತ್ಸವದ

Read More
ಕುಟುಂಬವೇ ಸಂಸ್ಕೃತಿಯ ಸಂಜೀವಿನಿ

ಕಾರ್ಯಕರ್ತರಲ್ಲಿ ಭಾವ ಭಕ್ತಿ ಇದ್ದಾಗ ಸಂಖ್ಯೆ ಮುಖ್ಯವಾಗುವುದಿಲ್ಲ. ಗುರು ಹಾಗೂ ಶಿಷ್ಯ ಪರಂಪರೆ ಅವಿಚ್ಛಿನ್ನವಾಗಿ ಮುನ್ನಡೆಯಬೇಕು. ಕುಟುಂಬಗಳು ಕ್ಷೀಣಿಸುತ್ತಿದ್ದು, ಇದನ್ನು ತಪ್ಪಿಸಲು ಸಮಷ್ಠಿಯ ಭಾವ ಬರಬೇಕಾಗಿದೆ. ಆತ್ಮ ಬಲ ತುಂಬಿದ ಶಿಷ್ಯರ ತುಲಾಭಾರ ಹೆಚ್ಚು ನಡೆಯಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀಗುರುಗಳ ಸುವರ್ಣ ವರ್ಧಂತಿ ವರ್ಷಾಚರಣೆ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಕ್ಕಳ ಹೃದಯದಲ್ಲಿ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಬೇಕು.

Read More
ಕುಟುಂಬ ಮಂಗಲದ ಶ್ರೀಸಂದೇಶ – ಐಕ್ಯದಿಂದಲೇ ಶ್ರೇಯಸ್ಸು

ಧರ್ಮಯುಕ್ತವಾದ ಪೀಳಿಗೆಯನ್ನು ಬೆಳೆಸುವ ಪ್ರಯತ್ನ ಸಮಾಜದಲ್ಲಿ ನಡೆಯಬೇಕು. ಮಠ ಸಮಾಜದ ಶಕ್ತಿ ಕೇಂದ್ರವಾಗಿ ಬೆಳೆದು ಬಂದಿದೆ. ಕುಟುಂಬ ಎಂಬುದು ಸಮಷ್ಠಿಯಿಂದ ಐಕ್ಯಮತ್ಯೆಯಿಂದ ಇರಬೇಕು. ಕುಟುಂಬಕ್ಕೆ ಒಂದೇ ಮನಸ್ಸು ಇದ್ದಾಗ ಶ್ರೇಯಸ್ಸಾಗುತ್ತದೆ. ಕುಟುಂಬ ಸಾಗುವ ದಾರಿ ತಪ್ಪಾಗಿರದೆ, ಐಕ್ಯಕ್ಕಾಗಿ ಸ್ವಾರ್ಥವನ್ನು ಬಲಿಕೊಡಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನವೀಕೃತ ಶ್ರೀರಾಘವೇಶ್ವರ ಭಾರತೀ ಗುರುಕುಲ ಕಟ್ಟಡ ಲೋಕಾರ್ಪಣೆಗೊಳಿಸಿ, ಕುಟುಂಬ ಮಂಗಲ ಕಾರ್ಯಕ್ರಮದ ಸಂದರ್ಭ ಆಶೀರ್ವಚನ ನೀಡಿದರು. ಕುಟುಂಬ ತುಂಡಾಗಿ ಮನಸ್ಸು

Read More
ಭದ್ರಯ್ಯನಹಳ್ಳಿಯಲ್ಲಿ ಶ್ರೀ ಮಠದ ಗೋದಾನ ಯಜ್ಞ ಯೋಜನೆ

  ಹನೂರು: ಕೌಡಳ್ಳಿ ಸಮೀಪದ ಭದ್ರಯ್ಯನಹಳ್ಳಿಯಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ “ದೇಶೀ ಆಕಳುಗಳ ಸಂರಕ್ಷಣೆಯ ಮಹಾಸಂಕಲ್ಪದ” ಅಂಗವಾಗಿ “ಶ್ರೀ ಮಠದ ಗೋದಾನ ಯಜ್ಞ”ದ ಯೋಜನೆಯ ಎರಡನೇ ಹಂತದ ಕಾರ್ಯಕ್ರಮ ನಡೆಯಿತು. ಶ್ರೀ ಗುರುಗಳು ಈ ಹಿಂದೆ ತೀರ್ವ ಬರಗಾಲದಲ್ಲಿ ಈ ಭಾಗದ ಗೋರಕ್ಷಣೆಗೆ ಬೃಹತ್ ಆದ ಮೇವು ವಿತರಣೆ ಮತ್ತು ಅಭಯಾಶ್ರಯ ಯೋಜನೆಗಳ ಮೂಲಕ  ನವಚೇತನ ತುಂಬಿದ್ದರು. ಅದರೊಂದಿಗೆ ಈಗ ಇಲ್ಲಿಯ ಗೋಪಾಲಕರ ಆರ್ಥಿಕ ಅಭಿವೃದ್ಧಿಗಾಗಿ ಶ್ರೀ ಮಠದ ಅಂಗಸಂಸ್ಥೆ ಗೋಫಲ

Read More
ಪ್ರಪಂಚದಲ್ಲಿ ಗುರುವಿಗೆ ಪರ್ಯಾಯವಿಲ್ಲ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು 

ಬೆಂಗಳೂರು: ಪ್ರಪಂಚದಲ್ಲಿ ಗುರುವಿಗೆ ಪರ್ಯಾಯವಿಲ್ಲ. ಗುರುವಿಗೆ ಇನ್ನೊಂದು ಗುರು ಪರ್ಯಾಯವಾಗಲು ಸಾಧ್ಯವಿಲ್ಲ. ಹಾಗೆಯೇ ಜೀವನದಲ್ಲಿ ಇಬ್ಬರು ಗುರುವನ್ನು ಆಶ್ರಯಿಸಿದಾಗ ಶಿಷ್ಯನ ಅವನತಿ ಆಗುತ್ತದೆ ಎಂದು ಸನಾತನ ಪರಂಪರೆ ಹೇಳುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಬೆಂಗಳೂರಿನ ಗಿರಿನಗರದಲ್ಲಿರುವ ಶಾಖಾ ಮಠದಲ್ಲಿ ಬ್ರಹೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಗವಂತನಿಗೆ ಗುರು ಪರ್ಯಾಯ. ಆದರೆ ಭಗವಂತ ಗುರುವಿಗೆ ಪರ್ಯಾಯವಲ್ಲ. ಜೀವನದ

Read More
ಕೊಲ್ಲೂರಿನಲ್ಲಿ ಧಾರ್ಮಿಕ ಪೂಜಾ ಪದ್ಧತಿಯನ್ನು ಸ್ಥಾಪಿಸಿದವರು ರಾಮಚಂದ್ರಾಪುರ ಮಠದ 33ನೇ ಜಗದ್ಗುರುಗಳು : ರಾಮಚಂದ್ರಾಪುರ ಶ್ರೀ

  ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಲ್ಲಿ ಧಾರ್ಮಿಕ ಪೂಜಾಪದ್ಧತಿಯನ್ನು ಸ್ಥಾಪಿಸಿದವರು ಶ್ರೀ ರಾಮಚಂದ್ರಾಪುರ ಮಠದ 33ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಎಂದು ಶ್ರೀರಾಮಚಂದ್ರಾಪುರ ಮಠದ 36ನೇ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಬೆಂಗಳೂರಿನ ಗಿರಿನಗರದ ಶಾಖಾ ಮಠದಲ್ಲಿ ನಡೆದ 33ನೇ ಪೀಠಾಧಿಪತಿಗಳ ಸಂಸ್ಮರಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, 33 ನೇ ರಾಘವೇಶ್ವರರು ಅಧ್ಯಯನ – ತಪಸ್ಸು ಹಾಗೂ ಗ್ರಂಥ ರಚನೆಗಳಿಗೆ ಪ್ರಸಿದ್ಧರಾಗಿದ್ದು, ಅಂದು ರಾಮಚಂದ್ರಾಪುರ ಮಠದ ಕೀರ್ತಿಯನ್ನು ಹೆಚ್ಚಿಸಿದ

Read More
ಗೋದೀಪ ~ ದೀಪಾವಳಿ ಗೋಪೂಜೆ – ಶ್ರೀರಾಮಚಂದ್ರಾಪುರ ಮಠ , ಗಿರಿನಗರ

  ಹಳ್ಳಿಗಳು ಹಾಗೂ ಹಳ್ಳಿಗರು ಬೆಂಗಳೂರನ್ನು ಸೇರುತ್ತಾ ಸಾಗಿದಂತೆ ಬೆಂಗಳೂರು ದೊಡ್ಡದಾಗುತ್ತಾ ಹೋಗಿದೆ. ನಾವು ಹಳ್ಳಿಗಳನ್ನು ಮಾತ್ರ ಬಿಟ್ಟುಬಂದಿಲ್ಲ, ಈ ಮಾಯಾ ನಗರಿಗೆ ಬರುವಾಗ ನಮ್ಮ ಸಂಸ್ಕೃತಿಯನ್ನೂ ಬಿಟ್ಟು ಬಂದಿರುವುದು ದುರಂತ. ಇಂದು ಹಳ್ಳಿಗಳಲ್ಲಿಯೂ ಕೂಡ ನಗರದ ಸಂಸ್ಕೃತಿ ಬೆಳೆಯುತ್ತಿರುವುದು ಆತಂಕಕಾರಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಬೆಂಗಳೂರಿನ ಗಿರಿನಗದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖೆಯಲ್ಲಿ ನಡೆದ ‘ಗೋದೀಪ – ದೀಪಾವಳಿ ಗೋಪೂಜೆ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಗೋಸಂದೇಶ ನೀಡಿದ ಶ್ರೀಗಳು, ಭಗವಾನ್ ಶ್ರೀಕೃಷ್ಣನು ಗೋಪೂಜೆಯ ಪ್ರವರ್ತಕನಾಗಿದ್ದು,

Read More
ಗುರಿಕ್ಕಾರರ ಗುರುಮಾರ್ಗ – ಒಂದು ಸಂವಾದ ಕಾರ್ಯಾಗಾರ

ಸಮಾಜದಲ್ಲಿ ಗುರಿಕ್ಕಾರರ ಮಹತ್ವ, ಗುರಿಕ್ಕಾರರು ಎದುರಿಸುತ್ತಿರುವ ಸಮಸ್ಯೆಗಳು, ವೈದಿಕರು – ಗುರಿಕ್ಕಾರರು – ಶಿಷ್ಯರೊಂದಿಗಿನ ಸಮನ್ವಯತೆ, ಸಂಘಟನೆಯ ಪದಾಧಿಕಾರಿಗಳು – ಗುರಿಕ್ಕಾರ ನಡುವಿನ ಸಮನ್ವಯತೆ ಈ ವಿಷಯಗಳನ್ನು ಆಧರಿಸಿ ಮಂಡಲದ ಎಲ್ಲಾ ವಲಯಗಳ ಎಲ್ಲಾ ಗುರಿಕ್ಕಾರರು ಮತ್ತು ಪದಾಧಿಕಾರಿಗಳು ಭಾಗವಹಿಸಿ ಚರ್ಚಿಸಿ ಒಂದು ಸಂವಾದ ರೂಪದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವೇ  ಈ ಕಾರ್ಯಾಗಾರದ  ಧ್ಯೇಯೋದ್ದೇಶವಾಗಿತ್ತು.   2022ರಲ್ಲಿ ನಡೆಸಿದ ಗುರಿಕ್ಕಾರರ ಸಮಾವೇಶ ನಿರೀಕ್ಷಿತ ಯಶಸ್ಸು ಕಾಣದಿದ್ದುದರಿಂದ  ಈ ಬಾರಿ ಮಂಡಲದ ನಾಲ್ಕು ಕಡೆ 3/4 ವಲಯಗಳನ್ನು ಸೇರಿಸಿ

Read More
ಗೋದೀಪ – ದೀಪಾವಳೀ ವಿಶೇಷ ಗೋಪೂಜೆ –  ಗೋಸಂರಕ್ಷಣೆ – ಲೋಕಕಲ್ಯಾಣಕಾಗಿ ವಿಶ್ವಜನನಿಯ ವಿಶಿಷ್ಟ ಪೂಜೆ –  ಶ್ರೀಗಳಿಂದ ಗೋ ಸಂದೇಶ – ಗಣ್ಯ ~ ಮಾನ್ಯರಿಂದ ವಿಶೇಷ ಗೋಪೂಜೆ – ಗೋ ಗಾನಾಮೃತ – ಗೋಸೂಕ್ತ ಪಾರಾಯಣ – ಗೋಸೂಕ್ತ ಹವನ

    ಗೋಸಂರಕ್ಷಣೆ ಹಾಗೂ ಲೋಕಕಲ್ಯಾಣದ ಮಹಾಸಂಕಲ್ಪದೊಂದಿಗೆ ದೀಪಾವಳಿಯ ಪುಣ್ಯಪರ್ವದಲ್ಲಿ ವಿಶ್ವಜನನಿಯ ವಿಶಿಷ್ಟ ಪೂಜಾ ಕಾರ್ಯಕ್ರಮ ‘ಗೋದೀಪ – ದೀಪಾವಳೀ ವಿಶೇಷ ಗೋಪೂಜೆ’ಯು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಾದ ಶ್ರೀರಾಮಾಶ್ರಮದಲ್ಲಿ ದಿನಾಂಕ 22.10.2025 ಬುಧವಾರ ಸಂಜೆ 5 ಗಂಟೆಯಿಂದ ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ದೀಪಾವಳಿ ಗೋಪೂಜೆಯ ಗೋಸಂದೇಶವನ್ನು ಶ್ರೀಗಳು ಅನುಗ್ರಹಿಸಲಿದ್ದಾರೆ. ಆಹ್ವಾನಿತ ಗಣ್ಯ-ಮಾನ್ಯ ದಂಪತಿಗಳಿಂದ ಏಕಕಾಲಕ್ಕೆ ವಿಶೇಷರೀತಿಯಲ್ಲಿ ಸಾಲಂಕೃತ ಗೋವುಗಳಿಗೆ ಪೂಜೆ ನಡೆಯಲಿದ್ದು,

Read More
ಶ್ರೀಸಂಸ್ಥಾನದವರ ಈ ಬಾರಿಯ ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿನ ವಸತಿಯ ಸಂದರ್ಭದಲ್ಲಿ ಶ್ರೀಪೂಜೆಯ ಸಮಯ

ಶುಭೋದಯ ಬೆಂಗಳೂರು! ಬೆಂಗಳೂರಿಗರೇ, ಬೆಳಗ್ಗೆ-ಬೆಳಗ್ಗೆಯೇ ವಾಹನ ಶಬ್ದ ಕೇಳಿ ಕೇಳಿ ಸಾಕಾಗಿದೆಯೇ? ಕಛೇರಿಯ ಒತ್ತಡಗಳಿಂದ ಮನಸ್ಸು ಬೇಸತ್ತು ಹೋಗಿದೆಯೇ? ನೆಮ್ಮದಿ, ಸಮಾಧಾನ ಬೇಕು ಅನ್ನಿಸುತ್ತಿದೆಯೇ? ನಿಮಗೊಂದು ಶುಭ ಸುದ್ದಿ. ಪರಮಪೂಜ್ಯ ಶ್ರೀಸಂಸ್ಥಾನದವರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ವಸತಿಯ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ೬ ಗಂಟೆಗೆ ಶ್ರೀಪೂಜೆಯನ್ನು ಕೈಗೊಳಲಿದ್ದಾರೆ. ನೀವು, ರಾಮದೇವಸ್ಥಾನದ ಆವರಣದಲ್ಲಿ, ಗೋವುಗಳ ‘ಅಂಬಾ’ ಆಲಾಪದ ಮಧ್ಯೆ‌ ಕೂತಿದ್ದೀರಿ, ಕಣ್ಣಲ್ಲಿ ಗುರುಗಳನ್ನು ಹಾಗೂ ರಾಮದೇವರನ್ನು ತುಂಬಿಕೊಂಡಿದ್ದೀರಿ, ಕಿವಿಗಳಿಂದ ವೇದಮಂತ್ರ, ಘಂಟೆ, ಶಂಖ, ನಗಾರಿ ಶುಭವಾದ್ಯಗಳ ಘೋಷ ಕೇಳುತ್ತಿದ್ದೀರಿ, ಮನಸ್ಸಿನಲ್ಲಿ

Read More
ರಾಮಚಂದ್ರಾಪುರ-ಶಕಟಪುರ ಶಂಕರಪೀಠಗಳ ಸಮಾಗಮ 

ಶ್ರೀರಾಮಚಂದ್ರಾಪುರ ಮಠ‌ ಹಾಗೂ ಶಕಟಪುರ ಮಠಗಳ ನಡುವೆ ಅದ್ವೈತದ ಬಾಂಧವ್ಯವಿದೆ. ಇದು ರಾಜರಾಜೇಶ್ವರೀ ಅನುಗ್ರಹಿಸಿರುವ ಬಾಂಧವ್ಯ. ಈ ಬಾಂಧವ್ಯಕ್ಕೆ ಅವಳೇ ಸೇತುವೆ. ಎರಡೆಂದು ಕಂಡರೂ ಈ ಪೀಠಗಳು ಒಂದೇ ಎನ್ನುವ ಭಾವವೇರ್ಪಟ್ಟಿದೆ ಎಂದು ಶ್ರೀಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು. ಶಕಟಪುರದ ಶ್ರೀವಿದ್ಯಾಪೀಠದ ಪರಮಪೂಜ್ಯ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀತೋಟಕಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು. ಶಕಟಪುರದ

Read More
ಶಿಷ್ಯ ಹಿತಮ್ – ಸುವರ್ಣ ಪಾದುಕೆಯ ಸ್ವರ್ಣಿಮಯಾತ್ರೆ

  ಶ್ರೀರಾಮಚಂದ್ರಾಪುರ ಮಠದ ಶಿಷ್ಯತ್ವವನ್ನು ಅಂಗೀಕರಿಸಿದ ಪ್ರತಿಯೊಬ್ಬ ಭಕ್ತನ ಹಿತವನ್ನು ಬಯಸಿ ಅವರ ಹೆಸರು, ನಕ್ಷತ್ರ,.ರಾಶಿಯನ್ನು ಹೇಳಿ, ಸಂಕಲ್ಪ ಮಾಡಿ ಭಗವಂತನಲ್ಲಿ ಸಂಪ್ರಾರ್ಥನೆ ಮಾಡಿ ವಿಹಿತವಾದ ಒಂದು ಉತ್ತಮ ಕರ್ಮವನ್ನು ಮಾಡುವುದು’ ಶಿಷ್ಯ ಹಿತಮ್’ ನ ಉದ್ದೇಶ. ಇದರ ಅಂಗವಾಗಿ ಶ್ರೀಗುರುಪೀಠದ ಆಶೀರ್ವಾದವನ್ನು ಪಡೆದುಕೊಂಡು ಸುವರ್ಣ ಪಾದುಕೆಯು ಶಿಷ್ಯರ ಮನೆ ಮನೆಗಳಿಗೆ ಆಗಮಿಸಲಿದೆ. ‘ ಶ್ರೀಗುರುಗಳು ಶಿಷ್ಯರಿಗೆ ತಾವಾಗಿಯೇ ತಿಳಿದು ಕೊಟ್ಟ ಅನುಗ್ರಹಕ್ಕೆ ತುಂಬಾ ಫಲವಿದೆಯಂತೆ. ಅದೇ ರೀತಿಯಲ್ಲಿ ನಾವು ಕರೆಯದೆ ಗುರುಗಳು ತಾವಾಗಿಯೇ ನಮ್ಮ ಮನೆಗಳಿಗೆ

Read More
ಶ್ರೀಮಠದ ಅಂಗ ಸಂಸ್ಥೆಗಳಲ್ಲಿ ನವರಾತ್ರಿ ಉತ್ಸವ

ಸಾಗರದ ಅಗ್ರಹಾರದಲ್ಲಿ ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಸೆ.22ರಿಂದ ಅ.2ರವರೆಗೆ ನವರಾತ್ರ ನಮಸ್ಯಾ ಕಾರ್ಯಕ್ರಮ ನಡೆಯಿತು. ಪ್ರತಿದಿನ ಮಧ್ಯಾಹ್ನ 3.30 ರಿಂದ 5 ಗಂಟೆಯವರೆಗೆ ಲಲಿತೋಪಾಖ್ಯಾನ ಪ್ರವಚನ, ದೀಪಾಲಂಕಾರ, ದುರ್ಗಾದೀಪ ಪೂಜೆ, ಕುಂಕುಮಾರ್ಚನೆ, ಏಕಾದಶಿ ದಿನ ವಿಶೇಷ ಶ್ರೀಚಕ್ರ ಆರಾಧನೆ ಸಂಪನ್ನಗೊಂಡಿತು. ——— ನವರಾತ್ರಿ ಮಹೋತ್ಸವದ ಅಂಗವಾಗಿ ಬೆಂಗಳೂರು ಶ್ರೀ ಭಾರತೀ ವಿದ್ಯಾಲಯದಲ್ಲಿ 26 ಸೆಪ್ಟೆಂಬರ್ 2025ರಂದು ಭಕ್ತಿಯಿಂದ ಹಾಗೂ ಸಂಭ್ರಮದಿಂದ ಸರಸ್ವತಿ ಪೂಜೆ ಆಚರಿಸಲಾಯಿತು. ವಿದ್ಯೆ ಮತ್ತು ಜ್ಞಾನದ

Read More
 ಶಾಸನತಂತ್ರ ~ ಸೇವಾಖಂಡ ಕಾರ್ಯಗಾರ 3

ಸಾಗರ: ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರ ~ ಸೇವಾಖಂಡ ಕಾರ್ಯಗಾರ 3 ಸಾಗರ ಬಾಪಟ್ ಸಭಾಭವನದಲ್ಲಿ ಭಾನುವಾರ ನಡೆಯಿತು. ಬೆಳಗ್ಗೆ ಶ್ರೀರಾಮ ದೇವರ ಸನ್ನಿಧಿಯಲ್ಲಿ ಫಲ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಲಾಯಿತು. ಸಾಗರ ರಾಘವೇಶ್ವರ ಭವನ ಸಮಿತಿ ಅಧ್ಯಕ್ಷ ಹರನಾಥ ರಾವ್ ಮತ್ತಿಕೊಪ್ಪ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಶ್ರೀಮಠ ಅಂದಿನಿಂದ ಇಂದಿನವರೆಗೆ ವಿಷಯದ ಕುರಿತು ವಿದ್ವಾನ್ ಗಜಾನನ ರೇವಣಕಟ್ಟ ಮಾತಾಡಿದರು. ಶಾಸನತಂತ್ರ ಅಧ್ಯಕ್ಷ ಮೋಹನ ಹೆಗಡೆ ಅರ್ಹತೆಯ ಅಷ್ಟ ಸೂತ್ರಗಳ ಬಗ್ಗೆ ಸೇವಾ ಬಿಂದುಗಳಿಗೆ ತಿಳಿಸಿಕೊಟ್ಟರು. ಶ್ರೀಮಠದ ಆಡಳಿತ ವ್ಯವಸ್ಥೆಯಾದ

Read More
ಶಾಸನತಂತ್ರ ~ ಸೇವಾಖಂಡ ಕಾರ್ಯಗಾರ -೨

  ಮಾಣಿ: ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶಾಸನತಂತ್ರ ಸೇವಾಖಂಡ ಕಾರ್ಯಗಾರ – ೨ ೨೧/೦೯/೨೦೨೫ರಂದು ನಡೆಯಿತು. ಬೆಳಗ್ಗೆ ಶ್ರೀರಾಮ ದೇವರ ಸನ್ನಿಧಿ ಮುಂಭಾಗದಲ್ಲಿ ಫಲ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಲಾಯಿತು. ಸಂಪನ್ಮೂಲ ಖಂಡದ ಶ್ರೀಸಂಯೋಜಕ ಹಾರಕರೆ ನಾರಾಯಣ ಭಟ್ ಹಾಗೂ ಮುಳ್ಳೇರಿಯ ಮಂಡಲ ಅಧ್ಯಕ್ಷ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ದೀಪಪ್ರಜ್ವಲಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಶಾಸನ ತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಅರ್ಹತೆಯ ಅಷ್ಟ ಸೂತ್ರಗಳ ಬಗ್ಗೆ ಸೇವಾ ಬಿಂದುಗಳಿಗೆ ತಿಳಿಸಿಕೊಟ್ಟರು. ಶಾಸನ ತಂತ್ರದ ಕಾರ್ಯದರ್ಶಿ

Read More
ಮಾಹಿತಿ – ಸ್ಫೂರ್ತಿ : ಎರಡನ್ನೂ ನೀಡಿದ ಯೋಜನಾ ಖಂಡದ ಕಾರ್ಯಾಗಾರ

ಬೆಂಗಳೂರು: ಯೋಜನಾ ಖಂಡದ ಉದ್ದೇಶ, ರೂಪುರೇಷೆಗಳನ್ನು ಸದಸ್ಯರಿಗೆ ತಿಳಿಸುವ ಮತ್ತು ಸದಸ್ಯರ ಜವಾಬ್ದಾರಿಯ ಕಾರ್ಯದೀಕ್ಷೆಯನ್ನು ವಿಧಿಸುವ ಕಾರ್ಯಾಗಾರ ಬೆಂಗಳೂರಿನ ರಾಮಚಂದ್ರಾಪುರಮಠದ ಶಾಖೆ ರಾಮಾಶ್ರಮದಲ್ಲಿ ೧೪ ಸೆಪ್ಟೆಂಬರ್ ೨೦೨೫ ರಂದು ನಡೆಯಿತು. ಸಭಾ ಪೂಜೆಯನ್ನು ಯೋಜನಾಖಂಡದ ಸಂಯೋಜಕ ಕೆ ಎನ್ ಭಟ್ ನಡೆಸಿದರು. ಯೋಜನಾಖಂಡದ ಶ್ರೀ ಸಂಯೋಜಕ ವಿದ್ವಾನ್ ಜಗದೀಶ ಶರ್ಮ ಸಂಪ ಸಮಗ್ರವಾಗಿ ಶಾಸನ ತಂತ್ರ, ಅದರ ಕಾರ್ಯವಿಧಾನ, ಯೋಜನಾ ಖಂಡ, ಅದರಲ್ಲಿನ ಉಪಖಂಡ, ಅವುಗಳ ಕಾರ್ಯ ವ್ಯಾಪ್ತಿ ಇದೆಲ್ಲದರ ಕುರಿತು ವಿವರವಾಗಿ ಬಿಡಿಸಿ ತಿಳಿಸಿಕೊಟ್ಟರು. ಶಾಸನತಂತ್ರದ

Read More
ಸ್ವಭಾಷಾ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ರಾಘವೇಶ್ವರ ಶ್ರೀ ಘೋಷಣೆ – ಶಿಷ್ಯಹಿತಂ ಮಹಾಸಂಕಲ್ಪ: ಪ್ರತಿ ಶಿಷ್ಯರ ಮನೆಗೆ ಸ್ವರ್ಣಯಾತ್ರೆ

ಗೋಕರ್ಣ: ಸಮಸ್ತ ಗುರು ಪರಂಪರೆಯ ಆಶೀರ್ವಾದವನ್ನು ಹೊತ್ತು ಸಮಾಜದ ಪ್ರತಿ ಶಿಷ್ಯರ ಮನೆಗೆ ಸ್ವರ್ಣಪಾದುಕೆ ಚಿತ್ತೈಸುವ ಸ್ವರ್ಣಯಾತ್ರೆ ಈ ವರ್ಷದ ವಿಜಯದಶಮಿಯಿಂದ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡ ಶ್ರೀಗಳು ಸೀಮೋಲ್ಲಂಘನ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡುವ ವೇಳೆ ಈ ಉದ್ಘೋಷ ಮಾಡಿದರು. ಶ್ರೀಮಠದ ಶಿಷ್ಯತ್ವ ಹೊಂದಿರುವ ಎಲ್ಲರ ಹೆಸರಲ್ಲಿ ಸಂಕಲ್ಪ ಮಾಡಿ ಶಿಷ್ಯಹಿತಂ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸ್ವರ್ಣಪಾದುಕೆಗಳು ಮನೆ ಮನೆಗೆ

Read More
ಆಂಗ್ಲರ ದಾಸ್ಯದಿಂದ ಹೊರಬನ್ನಿ: ರಾಘವೇಶ್ವರ ಶ್ರೀ

ಗೋಕರ್ಣ: ಬ್ರಿಟಿಷರ ಆಳ್ವಿಕೆ ಮುಗಿದು ಮೂರು ತಲೆಮಾರು ಕಳೆದರೂ, ನಾವು ಅವರ ದಾಸ್ಯದಿಂದ ಹೊರಬಂದಿಲ್ಲ. ಇಂಗ್ಲಿಷ್ ಮರೆಯುವ ಬದಲು ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಿಷಾದಿಸಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 59ನೇ ದಿನವಾದ ಶನಿವಾರ ಮುಂಬೈ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಬರಬರುತ್ತಾ ಇಂಗ್ಲಿಷ್ ಭಾಷೆ ಸಂಸ್ಕೃತಿ ಮರೆಯಾಗಬೇಕಿತ್ತು. ಆದರೆ ಹೆಚ್ಚುತ್ತಿರುವುದು ಆತಂಕಕಾರಿ

Read More