ಸುದ್ದಿ
‘ಮಂಡಲೋತ್ಸವ’: ಭಕ್ತಿ-ಸೇವೆ-ಸಾಧನೆಗಳ ಸಂಗಮ
ಬೆಂಗಳೂರು: ದಕ್ಷಿಣ ಬೆಂಗಳೂರು ಹವ್ಯಕ ಮಂಡಲದ ಮಂಡಲೋತ್ಸವವು ಅಧಿಕ ಜೇಷ್ಠ ಕೃಷ್ಣ ಸಪ್ತಮಿಯಂದು (07-06-2026) ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾಶೀರ್ವಾದದೊಂದಿಗೆ ಸುಗಮವಾಗಿ ನೆರವೇರಿತು. ಪೂರ್ವಾಹ್ಣದಲ್ಲಿ ಶ್ರೀರಾಮತಾರಕ ಹವನ, ಅರುಣ ಪ್ರಶ್ನೆ ಪಾರಾಯಣ ಹಾಗೂ ಸ್ವರ್ಣಪಾದುಕಾ ಪೂಜೆಗಳು ಶ್ರದ್ಧೆಯಿಂದ ಜರುಗಿದವು. ಮಾತೆಯರು ಸಾಮೂಹಿಕ ಕುಂಕುಮಾರ್ಚನೆ ಹಾಗೂ ಅರ್ಧನಾರೀಶ್ವರ ಸ್ತೋತ್ರ ಪಠನವನ್ನು ಮನೋಜ್ಞವಾಗಿ ನೆರವೇರಿಸಿದರು. ಮಧ್ಯಾಹ್ನದಲ್ಲಿ ಸಕಲ ಭಕ್ತರಿಗೆ ಪ್ರಸಾದ ಭೋಜನದ ಸುವ್ಯವಸ್ಥೆಯನ್ನು ಮಾಡಲಾಗಿತ್ತು. ಅಪರಾಹ್ಣದಲ್ಲಿ ಧ್ವಜಾರೋಹಣ, ಶಂಖನಾದ, ಗುರುವಂದನೆ ಮತ್ತು ದೀಪಜ್ವಲನಗಳೊಂದಿಗೆ
Read Moreಹಲಸಿನ ಹಬ್ಬದಿ ಹಬ್ಬಿದ ಖುಷಿ
ಮಂಗಳೂರು: ಹಲಸಿನ ಹಣ್ಣಿನ ಪಾಯಸ, ಬೆರಟಿ ಪಾಯಸ, ಹಲಸಿನ ಬೀಜ ಪಾಯಸ, ಹಲಸಿನ ಹಣ್ಣಿನ ದೋಸೆ.. ನಿಜ ಹೇಳಿ, ಇದನ್ನು ಓದಿ ನಿಮ್ಮ ಬಾಯಲ್ಲಿ ನೀರೂರುತ್ತಿದೆಯಲ್ಲವೇ?! ಇವು ಕೇವಲ ಕೆಲವು ಹೆಸರುಗಳಷ್ಟೇ. ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ನಡೆದ ಆಹಾರೋತ್ಸವದಲ್ಲಿ ಜನರು ಸವಿದ ಹಲವಾರು ಖಾದ್ಯಗಳಲ್ಲಿ ಇವು ಕೆಲವು ಅಷ್ಟೇ. ಇನ್ನೂ ಅನೇಕ ಪಾರಂಪರಿಕ ಆಹಾರಗಳನ್ನು ತಯಾರಿಸಿ ೧೫ ಸಾವಿರಕ್ಕೂ ಅಧಿಕ ಜನರಿಗೆ ಸಂತೃಪ್ತಿ ಉಂಟುಮಾಡಿದ, ಪಾರಂಪರಿಕ ಖಾದ್ಯಗಳ ಬಗ್ಗೆ ಜಾಗೃತಿ ಉಂಟುಮಾಡಿದ ‘ಹಲಸು ಮೇಳ
Read Moreಜೂನ್ – 08 – ಅಷ್ಟಮಿ – ಸೋಮವಾರ
ಶ್ರೀಸವಾರಿ ವಿವರ: ಮೊಕ್ಕಾಂ – ಸೇವಾಸೌಧ ಅಶೋಕೆ 9.00am ಶ್ರೀಪೂಜೆ 7.00pm ಶ್ರೀಪೂಜೆ
Read Moreಜ್ಞಾನಸಂವತ್ಸರ: ಪ್ರಕಾಶನದಿಂದ ಪುಸ್ತಕಪ್ರದಾನ
ಬೆಂಗಳೂರು: ಪರಾಭವ ಸಂವತ್ಸರದ ಯುಗಾದಿಯಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಈ ಸಂವತ್ಸರವನ್ನು ‘ಜ್ಞಾನಸಂವತ್ಸರ’ವನ್ನಾಗಿ ಆಚರಿಸುವಂತೆ, ಜ್ಞಾನಪ್ರಸರಣ ನಡೆಸುವಂತೆ ನಿರ್ದೇಶಿಸಿದ್ದರು. ಪರಮಪೂಜ್ಯರೇ ಜ್ಞಾನಪ್ರಸರಣಕ್ಕಾಗಿ ಸಂಸ್ಥಾಪಿಸಿದ ಶ್ರೀಭಾರತೀ ಪ್ರಕಾಶನವು ಈ ಕಾರ್ಯಕ್ಕೆ ತನ್ನ ಸೇವೆಯನ್ನು ಸಲ್ಲಿಸಲು ತೊಡಗಿದೆ. ತತ್ಪ್ರಯುಕ್ತವಾಗಿ ಶ್ರೀಮಠದ ಬೆಂಗಳೂರು ಶಾಖೆಯ ಪುನರ್ವಸು ಭವನದಲ್ಲಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಶುಭಾರಂಭಗೊಂಡಿತು. ಶಾಸನತಂತ್ರದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ ಅವರು ಮೊದಲ ಪುಸ್ತಕವನ್ನು ಜಿ. ಎಮ್. ಹೆಗಡೆ ಚಾಮರಾಜನಗರ ಇವರಿಗೆ ನೀಡಿದರು. ಶಾಸನತಂತ್ರದ
Read Moreಹಿರಿಯರ ಗೋಸೇವೆ ಸರ್ವರಿಗೂ ಮಾದರಿ
ಕೋಲಾರ: ಅಧಿಕ ಜ್ಯೇಷ್ಠ ಶುಕ್ಲ ದ್ವಾದಶಿಯಂದು (28-05-2026) ಮಾಲೂರಿನ ಶ್ರೀರಾಘವೇಂದ್ರ ಗೋ ಆಶ್ರಮಕ್ಕೆ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಗೋಶಾಲೆಯಲ್ಲಿ ನೆಲೆಸಿರುವ ಶ್ರೀ ಸಿದ್ಧಾಂಜನೇಯಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡು, ₹85,000 ಮೌಲ್ಯದ (65 ಚೀಲ) ಹಿಂಡಿ ದಾನ ನೀಡಿದರು. ಗೋವುಗಳಿಗೆ ಸ್ವತಃ ಗ್ರಾಸ ನೀಡಿ ಗೋಶಾಲೆ ಪರಿಸರದಲ್ಲಿದ್ದು ಸಂತೋಷ ಪಟ್ಟರು. ದೇಶದ ಅಪೂರ್ವ ಗೋಸಂಪತ್ತನ್ನು ಉಳಿಸುವ ಮಹಾಕಾರ್ಯದಲ್ಲಿ ಹಿರಿಯರ ಈ ಗೋಸೇವೆ ಎಲ್ಲರಿಗೂ ಮಾದರಿಯಾಗಿದೆ.
Read Moreಸ್ವಾಗತ ಭಾರತೀ
ಮುಜುಂಗಾವು: ಅಧಿಕ ಜ್ಯೇಷ್ಠ ಕೃಷ್ಣ ಪಾಡ್ಯದಂದು (01-06-2026) ಶ್ರೀಭಾರತೀ ವಿದ್ಯಾಪೀಠದಲ್ಲಿ 2026- 27ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷರಾದ ಪದ್ಮರಾಜ ಪಟ್ಟಾಜೆಯವರು ಆಗಮಿಸಿ ‘ಸಂಸ್ಕೃತಿ ಸಂಸ್ಕಾರಯುತ ಶಿಕ್ಷಣ ಇಂದಿನ ಆವಶ್ಯಕತೆಗಳಲ್ಲಿ ಒಂದು. ವಿದ್ಯಾಪೀಠ ಇಂತಹ ಶಿಕ್ಷಣ ನೀಡುವುದರಲ್ಲಿ ಮುಂದಿದೆ. ವಿದ್ಯಾರ್ಥಿಗಳು ಈ ಶಿಕ್ಷಣ ಪದ್ಧತಿಯನ್ನು ಪಡೆದು ವಿಕಸಿತ ಭಾರತದ ಕಲ್ಪನೆಯನ್ನು ಸಾಕರಗೊಳಿಸುವಂತಾಗಲಿ’ ಎಂದು ತಮ್ಮ ಮಾತಿನಿಂದ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
Read Moreಸಾರ್ಥಕ ಜೀವನಕ್ಕೆ ಸಂದ ‘ಹವ್ಯಕ ವಿಭೂಷಣ’
ಹೊನ್ನಾವರ: ಹವ್ಯಕ ವಿಭೂಷಣ ಪ್ರಶಸ್ತಿಗೆ ಭಾಜನರಾದ ಪ್ರೊ| ಎಸ್. ಶಂಭು ಭಟ್ಟ ಕಡತೋಕಾ ಇವರಿಗೆ ಕುಮಟಾ ಮಂಡಲದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅಧಿಕ ಜ್ಯೇಷ್ಠ ಹುಣ್ಣಿಮೆಯಂದು (31-05-2026) ಶ್ರೀಮಠದ ಕೆಕ್ಕಾರು ಶಾಖೆ ಶ್ರೀರಘೂತ್ತಮ ಮಠದ ‘ಜಯಗುರು’ ಮಂದಿರದದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಂಡಿತು. ಕುಮಟಾ ಮಂಡಲದ ಅಧ್ಯಕ್ಷರಾದ ಸೀತಾರಾಮ ಹೆಗಡೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಶಂಭು ಭಟ್ಟರ ವ್ಯಕ್ತಿತ್ವವನ್ನು, ಸಂಘಟನೆಯಲ್ಲಿ ಅವರ ಪಾತ್ರವನ್ನು ಕೊಂಡಾಡಿದರು. ಪ್ರಾಂತ ಉಪಾಧ್ಯಕ್ಷರಾದ ಜಿ. ಎಸ್ ಹೆಗಡೆಯವರು ಮಾತನಾಡುತ್ತಾ ಸೀಮಾ ಪರಿಷತ್ತು, ಮಂಡಲ ಹಾಗೂ
Read Moreಭುಕ್ತಿಮುಕ್ತಿಪ್ರದಾತಾ
ನಮ್ಮ ಬದುಕಿಗೆ, ಭವಿಷ್ಯಕ್ಕೆ ಮಾರ್ಗದರ್ಶಿ ಶ್ರೀಗುರು. ಈ ಲೋಕದಲ್ಲಿ ಸಾಂಸಾರಿಕವಾದ ಸುಖ ಗುರುವಿನಿಂದ. ಜೀವಿಯ ಜನನ ಮರಣಚಕ್ರಭ್ರಮಣವನ್ನು ಇಲ್ಲವಾಗಿಸುವವನೂ ಗುರುವೇ. ಜ್ಞಾನಶಕ್ತಿಸಮಾರೂಢಃ ತತ್ತ್ವಮಾಲಾವಿಭೂಷಿತಃ | ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ || ಇದು ಗುರುವಿನ ಕುರಿತಾದ ಪ್ರಾಜ್ಞರ ನುಡಿ. ನನ್ನ ಹೆತ್ತ ತಾಯಿ. ವಯಸ್ಸು 93 ವರ್ಷ. ಕಳೆದ ಐದು ವರ್ಷಗಳಿಂದ ಪರಾಧೀನಳಾಗಿ ಹಾಸಿಗೆ ಹಿಡಿದವಳು. ಅನ್ನಾಹಾರಾದಿಗಳನ್ನು ಸೇವಿಸುತ್ತ ಆರೋಗ್ಯವಾಗಿಯೇ ಇದ್ದವಳು. ಅಂತಿಮದಿನದ ಮೊದಲ ಮೂರುದಿನಗಳಲ್ಲಿ ಸ್ವಲ್ಪ ವ್ಯತ್ಯಾಸ. ಹಿಂದಿನ ದಿನವಷ್ಟೇ ಪೂಜ್ಯಶ್ರೀ ಸನ್ನಿಧಾನದವರು ಆಕೆಯ
Read Moreವಿದ್ಯಾರಂಭ – ಶುಭಾರಂಭ
ಮಂಗಳೂರು: ‘ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯುಕ್ತ ಶಿಕ್ಷಣ ನೀಡಿದಾಗ ಪರಿಪೂರ್ಣವಾಗುತ್ತದೆ. ಮಕ್ಕಳಿಗೆ ಶಿಸ್ತು, ಉತ್ತಮ ನಡವಳಿಕೆ, ಜೀವನ ಮೌಲ್ಯ- ಇವುಗಳ ಪಾಠ ಸಿಗಬೇಕು’ ಎಂದು ಮೂಡಬಿದರೆಯ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು. ಅವರು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಪಿ.ಯು.ಸಿ ವಿಭಾಗದ ‘ಎ ವೈಬ್ರೆಂಟ್ ಬಿಗಿನಿಂಗ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುಣೆಯ ‘ರಾಮ ಕೃಷಿ ರಸಾಯನ ಸಂಸ್ಥೆ’ಯ ಲೆಕ್ಕ ಮತ್ತು ಆರ್ಥಿಕ ಮುಖ್ಯಸ್ಥ ಅರವಿಂದ ರೈ ಅರ್ಪಿಣಿಗುತ್ತು ಅವರು ಮಾತನಾಡಿ
Read More‘ಆಹಾ’ರೋತ್ಸವಕ್ಕೆ ಬನ್ನಿ
ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ಜೂ.6 ಮತ್ತು 7 ರಂದು ಹಲಸುಮೇಳ- ಆಹಾರೋತ್ಸವ ಆಯೋಜಿಸಲಾಗಿದೆ. ಆಹಾರೋತ್ಸವದಲ್ಲಿ ಹಲಸಿನ ವಿವಿಧ ಖಾದ್ಯಗಳನ್ನು ಆಸ್ವಾದಿಸಬಹುದು. ಹಲಸಷ್ಟೇ ಅಲ್ಲದೆ, ಮಾವಿನ ಹಣ್ಣಿನ ಪ್ರಿಯರಿಗಾಗಿ ಮಲ್ಲಿಕಾ – ಅಲ್ಫೋನ್ಸ್ – ದಶ್ಹೇರಿ ಸೇರಿದಂತೆ ವಿವಿಧ ತಳಿಯ ಉತ್ಕೃಷ್ಟ ಗುಣಮಟ್ಟದ ಮಾವಿನಹಣ್ಣುಗಳು ಲಭ್ಯವಿರಲಿವೆ. ಇವುಗಳ ಜೊತೆಗೆ, ಗ್ರಾಹಕರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಮಲೆನಾಡಿನ ತಾಜಾ ತರಕಾರಿಗಳ ವಿಶೇಷ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಿಸಿಬಿಸಿ – ಬಗೆಬಗೆ ಆಹಾರ ಪ್ರಿಯರಿಗಾಗಿ ಮೇಳದ ಆವರಣದಲ್ಲೇ
Read Moreಸಹಸ್ರ-ಸುವಾಸಿನೀ-ಪೂಜೆ
ಕುಮಟಾ: ‘ಸುವಾಸಿನೀ – ಸುವಾಸಿನ್ಯರ್ಚನಪ್ರೀತಾ’ ತಾಯಿ ಲಲಿತಾಂಬಿಕೆಯು ಸುವಾಸಿನಿಯ ರೂಪದಲ್ಲಿದ್ದು, ಸುವಾಸಿನಿಯರ ಪೂಜೆಯಿಂದ ಸಂಪ್ರೀತಳಾಗುವವಳು ಎಂದು ಲಲಿತಾ ಸಹಸ್ರನಾಮದಲ್ಲಿ ಹೇಳಲಾಗಿದೆ. ಅಂತಹ ಸಹಸ್ರಾಧಿಕ ಸುವಾಸಿನಿಯರಿಗೆ ಪೂಜೆ ಹಾಗೂ ಅನ್ನಸಂತರ್ಪಣೆ ಸಲ್ಲಿಸುವ ಪವಿತ್ರ ಕಾರ್ಯಕ್ರಮವು ಅಧಿಕಜ್ಯೇಷ್ಠ ಶುಕ್ಲ ತದಿಗೆಯಂದು (19-05-2026) ಹೊಳೆಗದ್ದೆಯ ಶ್ರೀಶಾಂತಿಕಾ ಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಸಂಪನ್ನಗೊಂಡಿತು. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಂಕಲ್ಪ ಹಾಗೂ ಮಾರ್ಗದರ್ಶನದಂತೆ, ಹವ್ಯಕ ಮಹಾಮಂಡಲದ ಸಂಯೋಜನೆಯಲ್ಲಿ ಶಾಸ್ತ್ರೋಕ್ತ ವಿಧಾನದಲ್ಲಿ ಈ ಮಹಾಪೂಜೆ-ಮಹಾಸಂತರ್ಪಣೆ ನಡೆಯಿತು. ಮಹಾಮಂಡಲದ ಮಾತೃಪ್ರಧಾನರ ಮುಖಾಂತರ ಶ್ರೀಸಂಸ್ಥಾನದವರ
Read Moreವಸಂತ ವೇದ ಶಿಬಿರದ ಸಮಾರೋಪ
ಮಂಗಳೂರು: ‘ಮನುಷ್ಯರಾಗಿ ಹುಟ್ಟಿದ ಮೇಲೆ ಭಗವಂತನ ಅನುಗ್ರಹ ಪಡೆಯಬೇಕು. ಆಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ. ವೇದಾಧ್ಯಯನದ ಮೂಲಕ ವಟುಗಳು ಉತ್ತಮ ಜೀವನ ನಡೆಸುವಂತಾಗಬೇಕು’ ಎಂದು ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ಕೆ. ವಿ. ಶ್ರೀಧರ ಅಡಿಗ ಹೇಳಿದರು. ಅವರು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಅಧಿಕ ಜ್ಯೇಷ್ಠ ಬಿದಿಗೆಯಂದು (17-05-2026) ವಿಷ್ಣುಗುಪ್ತ ವಿಶ್ವವಿದ್ಯಾಪೀಠ – ಭಾರತೀ ಎಜುಕೇಷನ್ ಟ್ರಸ್ಟ್ – ಶಂಕರಶ್ರೀ ವಸಂತ ವೇದಪಾಠಶಾಲೆ ಸಮಿತಿ ಮತ್ತು ಸಂಘ ಸಂಸ್ಥೆಗಳ
Read Moreಶನಿನಮನ – ತಾಪಶಮನ: ಶನಿಜಯಂತೀ ವಿಶೇಷ ಕಾರ್ಯಕ್ರಮ
ಪೆರ್ಲ: ಬಜಕ್ಕೂಡ್ಲಿನ ಅಮೃತಧಾರಾ ಗೋಶಾಲೆಯಲ್ಲಿ ವೈಶಾಖ ಅಮಾವಾಸ್ಯೆಯಂದು (16-05-2026) ‘ಶನಿನಮನ -ತಾಪಶಮನ’ ವಿಶೇಷ ಕಾರ್ಯಕ್ರಮ ಸಂಪನ್ನಗೊಂಡಿತು. ಅಮಾವಾಸ್ಯೆ-ಶನಿವಾರಗಳ ಸಂಗಮವಾದ ಈ ಶನಿಜಯಂತಿಯ ಕಾಲ ಅಪರೂಪದಲ್ಲಿ ಅಪರೂಪ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನ-ಆಶೀರ್ವಾದಗಳೊಂದಿಗೆ ಶನೈಶ್ಚರನ ಈ ಮಹೋಪಾಸನೆ ನೆರವೇರಿತು. ಗುರುವಂದನೆಯೊಂದಿಗೆ ಆರಂಭಗೊಂಡು ಸ್ವಸ್ತಿ ಪುಣ್ಯಾಹ, ಬಾಲಗಣಪತಿ ಹವನ ನಡೆದವು. ಬೆಳಗ್ಗೆ 6:06 ಗಂಟೆಯಿಂದ ಗಣಪತಿ ಅಥರ್ವಶಿರ್ಷ ಪಾರಾಯಣ ಪ್ರಾರಂಭಗೊಂಡಿತು. 24 ಗಂಟೆಗಳ ನಿರಂತರ ಪಾರಾಯಣ ಮರುದಿನದ ಬೆಳಗ್ಗೆ ಸೂರ್ಯೋದಯಕ್ಕೆ ಸಮಾಪನಗೊಂಡಿತು. ಗಣಪತಿ ಅಥರ್ವಶೀರ್ಷ ಹವನ, ಶನಿ
Read Moreದೀಪಾವಳಿ ಆಚರಣೆ ಪ್ರಾತ್ಯಕ್ಷಿಕೆ
ಮಂಗಳೂರು: ಕಳೆದ ಭಾನುವಾರದಂದು (10-05-2026) ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ ದೀಪಾವಳಿ ಹಬ್ಬದ ಸಂಭ್ರಮವಾಗಿತ್ತು. ಈಗಿನ್ನೂ ವೈಶಾಖದ ಶಾಖ, ಇದೇನಪ್ಪಾ ದೀಪಾವಳಿ- ಎಂಬ ಪ್ರಶ್ನೆಯೇ? ನಮ್ಮ ಭಾರತೀಯ ಸಂಸ್ಕೃತಿ-ಸಂಸ್ಕಾರಗಳಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ಬೇರೂರಿರುವ ಶ್ರೇಷ್ಠ ಜೀವನ ಮೌಲ್ಯಗಳನ್ನು ಹಾಗೂ ನೈಜ ಆನಂದವನ್ನು ಹಬ್ಬದ ಆಚರಣೆಯ ವಿವಿಧ ಚಟುವಟಿಕೆಗಳ ಮೂಲಕ ಶ್ರೀಶಂಕರ ವೇದಪಾಠಶಾಲೆಯ ವಟುಗಳಿಗೆ ಹಾಗೂ ಶ್ರೀಶಂಕರ ಪರಂಪರಾ ಶಿಬಿರದ ಹೆಣ್ಣುಮಕ್ಕಳಿಗೆ ತೋರಿಸಿ ಕಲಿಸುವುದು ಈ ದಿನದ ಉದ್ದೇಶವಾಗಿತ್ತು. ಮುಂಚಿನ ದಿನವೇ ತಿಳಿಸಿದಂತೆ ಶಿಬಿರಾರ್ಥಿಗಳೆಲ್ಲರೂ ತಮ್ಮ
Read Moreಪೂರಕ ಕಟ್ಟಡದ ಪ್ರವೇಶೋತ್ಸವ
ಬೆಂಗಳೂರು: ವಿಜಯನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯದ ನೂತನ ಪೂರಕ ಕಟ್ಟಡದ ಪ್ರವೇಶೋತ್ಸವವು ವೈಶಾಖ ಕೃಷ್ಣ ಪಂಚಮೀ (07-05-2026) ಹಾಗೂ ಷಷ್ಠಿಯಂದು (08-05-2026) ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳವರ ದಿವ್ಯಾಶೀರ್ವಾದಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯಿತು. ಪಂಚಮಿಯ ಸಂಜೆ ಗುರುವಂದನೆ, ಪುಣ್ಯಾಹ ಮುಂತಾದ ವಿಧಿಗಳು ಸಂಪನ್ನಗೊಂಡವು. ಷಷ್ಠಿಯಂದು ಗಣಪತಿ ಹವನ, ನೂತನ ಕಟ್ಟಡದ ಪ್ರವೇಶ ಹಾಗೂ ಶ್ರೀಸತ್ಯನಾರಾಯಣ ಪೂಜೆಗಳು ನಡೆದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಶ್ವಸ್ತ ಮಂಡಳಿಯ ಕಾರ್ಯದರ್ಶಿಗ ಜಿ. ಎಮ್. ಹೆಗಡೆ, ಸಂಸ್ಥೆಯ ಆಡಳಿತ ಮಂಡಳಿಯ
Read Moreನಂತೂರಿನಲ್ಲಿ ಶಂಕರಪಂಚಮೀ
ಮಂಗಳೂರು: ‘ಶ್ರೀಶಂಕರಾಚಾರ್ಯರು ಪ್ರಪಂಚಕ್ಕೇ ಶ್ರೇಷ್ಠರು. ಅವರ ಆದರ್ಶ, ತತ್ತ್ವಗಳು ಸಾರ್ವಕಾಲಿಕ. ಜಾತಿ, ಮತ, ಬೇಧವಿಲ್ಲದೇ ಸರ್ವರನ್ನೂ ಒಂದುಗೂಡಿಸಿದ ಮಹಾತ್ಮರು. ಅವರನ್ನು ನೆನಪಿಸಿಕೊಂಡು, ಅನುಸರಿಸುವುದು ಅತ್ಯಂತ ಅವಶ್ಯ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಹವ್ಯಕ ಮಂಡಲ ಸಹಯೋಗದೊಂದಿಗೆ ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ವೈಶಾಖ ಶುಕ್ಲ ಪಂಚಮಿಯಂದು (21-04-2026) ನಡೆದ ಶ್ರೀಶಂಕರಾಚಾರ್ಯ ಜಯಂತಿ ಸಮಾರಂಭವನ್ನು
Read More3ನೇ ವರ್ಷದ ಶಂಕರಶ್ರೀ ವೇದಪಾಠಶಾಲೆ ಆರಂಭ
ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಶಂಕರಶ್ರೀ ವೇದಪಾಠಶಾಲೆ ಸಮಿತಿ, ಭಾರತೀ ಎಜುಕೇಶನ್ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ 3ನೇ ವರ್ಷದ ಶಂಕರಶ್ರೀ ವೇದಪಾಠಶಾಲೆ ಮತ್ತು ಪರಂಪರಾ ಶಿಬಿರವು ವೈಶಾಖ ಶುದ್ಧ ಬಿದಿಗೆಯಂದು (19-04-2026) ಆರಂಭಗೊಂಡಿತು. ಮಕ್ಕಳ ಚಿಕಿತ್ಸೆ ತಜ್ಞರಾದ ಡಾ. ಸದಾಶಿವ ರಾವ್ ಉದ್ಘಾಟಿಸಿ ವೇದದ ಮಹತ್ತ್ವ, ಪರಂಪರೆಯ ಉಳಿಕೆ, ಕರ್ಮಪ್ರಧಾನ ಜೀವನದ ಆವಶ್ಯಕತೆ, ಫಲಾಪೇಕ್ಷೆ ಇಲ್ಲದೆ ಪರಂಪರೆಯನ್ನು ರಕ್ಷಿಸಬೇಕಾದುದರ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಮುರಲಿಮೋಹನ
Read Moreಉರುವಾಲು ಶಾಲೆಯಲ್ಲಿ ಶ್ರೀಸಾನ್ನಿಧ್ಯ
ಉರುವಾಲು: ಶ್ರೀಭಾರತೀ ವಿದ್ಯಾಸಂಸ್ಥೆಯಲ್ಲಿ ಗುರುವಿನಾಗಮನದ ಧನ್ಯತೆಯ ಕ್ಷಣವದು. ಚೈತ್ರ ಕೃಷ್ಣ ಷಷ್ಠಿಯಂದು (08-04-2026) ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವಿದ್ಯಾಸಂಸ್ಥೆಗೆ ಪಾದಬೆಳೆಸಿದರು. ಶ್ರೀಗುರುಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಧೂಳೀ ಪಾದುಕಾ ಪೂಜೆ ಸಮರ್ಪಿಸಲಾಯಿತು. ತದನಂತರ ಶ್ರೀಕರಾರ್ಚಿತ ಶ್ರೀಸೀತಾರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ ದೇವರ ಪೂಜೆ ನಡೆಯಿತು. ಸಪ್ತಮಿಯಂದು (09-04-2026) ಸಂಸ್ಥೆಯ ವತಿಯಿಂದ ಶ್ರೀಗುರುಭಿಕ್ಷಾ ಸೇವೆ ನೆರವೇರಿತು. ಅಂದು ಶ್ರೀಸಂಸ್ಥಾನದವರು ‘ಅನ್ನಪೂರ್ಣಾ’ ಬಿಸಿ ಊಟ ಯೋಜನೆಯ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆಯನ್ನು ನಡೆಸಿದರು. ಜೊತೆಗೆ ಸೌರ ವಿದ್ಯುತ್ ಘಟಕ
Read Moreರಾಮಚಂದ್ರಾಪುರ-ಕಾಂಚೀ ಪೀಠಾಧಿಪತಿಗಳ ಸಮಾಗಮ
ಪುತ್ತೂರು: ‘ಪರಂಪರೆ, ಸಂಸ್ಕೃತಿಯ ನಿರಂತರ ಪಾಲನೆ ಅಗತ್ಯವಾಗಿದೆ. ಕುಲಗಳು ಒಂದಾದಾಗ ಬಲ ಹೆಚ್ಚಾಗುತ್ತದೆ. ಈ ಮೂಲಕ ಸಮಾಜದ ಶಕ್ತಿ ವೃದ್ಧಿಸುತ್ತದೆ. ಸಂಸ್ಕಾರದ ಸಂರಕ್ಷಣೆಯ ಕಾರ್ಯಗಳನ್ನು ಸಮಾಜ ಮಾಡಬೇಕು. ಯೋಗ ಸಾಧನೆಯ ಕಾರ್ಯ ನಡೆಯಬೇಕಾಗಿದೆ’ ಎಂದು ಶ್ರೀ ಕಾಂಚೀ ಕಾಮಕೋಟಿ ಪೀಠ ಜಗದ್ಗುರು ಶಂಕರಾಚಾರ್ಯ ಶ್ರೀ ಶಂಕರ ವಿಜೇಯೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತಿಳಿಸಿದರು. ಅವರು ಶ್ರೀರಾಮಚಂದ್ರಾಪುರ ಮಠದ ಮಾಣಿ-ಪೆರಾಜೆ ಶಾಖೆಗೆ ಭೇಟಿ ನೀಡಿ, ಮಠದ ದೇವತಾ ಸಾನ್ನಿಧ್ಯವನ್ನು ದರ್ಶಿಸಿ ಆಶೀರ್ವಚನ ನೀಡಿದರು. ‘ಕುಲ ದೇವತಾ, ಕುಲ ಗುರುಗಳ ನೆನಪು
Read More‘ಧನ್ಯಜನನೀ’ ವಿಶೇಷ ಪುರಸ್ಕಾರ ಪ್ರದಾನ
ಹೊಸನಗರ: ಪ್ರಧಾನ ಮಠದಲ್ಲಿ ನಡೆಯುತ್ತಿರುವ ‘ಶ್ರೀರಾಮೋತ್ಸವ’ದಲ್ಲಿ ಫಾಲ್ಗುನ ಶುಕ್ಲ ಅಷ್ಟಮಿಯಂದು (26-03-2026) ಮಾತೃಸಮಾವೇಶದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು ‘ಧನ್ಯಜನನೀ’ ಪುರಸ್ಕಾರವನ್ನು ಅನುಗ್ರಹಿಸಿದರು. ಒಟ್ಟು 87 ಮಾತೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನಾತನಧರ್ಮದ ಸಂರಕ್ಷಣೆಯ ದಿಶೆಯಲ್ಲಿ, ಸಮಾಜಕ್ಷಯವನ್ನು ತಡೆಯುವ ನಿಟ್ಟಿನಲ್ಲಿ ಶ್ರೀಸಂಸ್ಥಾನದವರು ಉದ್ಘೋಷಿಸಿದ್ದ ಈ ಪುರಸ್ಕಾರವು ಮೂರು ಅಥವಾ ಅದಕ್ಕೂ ಅಧಿಕ ಮಕ್ಕಳನ್ನು ಪಡೆದ ಮಾತೆಯರಿಗೆ ನೀಡುವ ಅನುಪಮ ಗೌರವ. ಶ್ರೀಸಂಸ್ಥಾನದವರು ಶ್ರೀಸಂದೇಶವನ್ನು ಅನುಗ್ರಹಿಸುತ್ತಾ ‘ಸಂತಾನವೇ ಸಂಪತ್ತು. ಮಕ್ಕಳು ಬೇಡ ಎಂಬ ಆಧುನಿಕ ಚಿಂತನೆ ದೇಶದ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಮಿತ
Read More