ಇತರೆ
ಸಹಸ್ರ-ಸುವಾಸಿನೀ-ಪೂಜೆ
ಕುಮಟಾ: ‘ಸುವಾಸಿನೀ – ಸುವಾಸಿನ್ಯರ್ಚನಪ್ರೀತಾ’ ತಾಯಿ ಲಲಿತಾಂಬಿಕೆಯು ಸುವಾಸಿನಿಯ ರೂಪದಲ್ಲಿದ್ದು, ಸುವಾಸಿನಿಯರ ಪೂಜೆಯಿಂದ ಸಂಪ್ರೀತಳಾಗುವವಳು ಎಂದು ಲಲಿತಾ ಸಹಸ್ರನಾಮದಲ್ಲಿ ಹೇಳಲಾಗಿದೆ. ಅಂತಹ ಸಹಸ್ರಾಧಿಕ ಸುವಾಸಿನಿಯರಿಗೆ ಪೂಜೆ ಹಾಗೂ ಅನ್ನಸಂತರ್ಪಣೆ ಸಲ್ಲಿಸುವ ಪವಿತ್ರ ಕಾರ್ಯಕ್ರಮವು ಅಧಿಕಜ್ಯೇಷ್ಠ ಶುಕ್ಲ ತದಿಗೆಯಂದು (19-05-2026) ಹೊಳೆಗದ್ದೆಯ ಶ್ರೀಶಾಂತಿಕಾ ಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಸಂಪನ್ನಗೊಂಡಿತು. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಂಕಲ್ಪ ಹಾಗೂ ಮಾರ್ಗದರ್ಶನದಂತೆ, ಹವ್ಯಕ ಮಹಾಮಂಡಲದ ಸಂಯೋಜನೆಯಲ್ಲಿ ಶಾಸ್ತ್ರೋಕ್ತ ವಿಧಾನದಲ್ಲಿ ಈ ಮಹಾಪೂಜೆ-ಮಹಾಸಂತರ್ಪಣೆ ನಡೆಯಿತು. ಮಹಾಮಂಡಲದ ಮಾತೃಪ್ರಧಾನರ ಮುಖಾಂತರ ಶ್ರೀಸಂಸ್ಥಾನದವರ
Read Moreರಕ್ತಬಂಧ ~ ಸೇವಾಬಂಧ
ಬೆಂಗಳೂರು: ಶಾಸನತಂತ್ರದ ಸೇವಾಖಂಡ ಹಾಗೂ ಬೆಂಗಳೂರು ದಕ್ಷಿಣ-ಉತ್ತರ ಮಂಡಲಗಳ ಸಹಯೋಗದಲ್ಲಿ, ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಕಾರದಲ್ಲಿ 22-03-2026 ರಂದು ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಸಂಪನ್ನಗೊಂಡಿತು. ದಕ್ಷಿಣ ಮಂಡಲಾಂತರ್ಗತ ವಿಜಯನಗರ ವಲಯೋತ್ಸವವೂ ನಡೆಯಿತು. ಪರಮಪೂಜ್ಯ ಶ್ರೀಸಂಸ್ಥಾನದವರ ಸಂನ್ಯಾಸಸ್ವೀಕಾರ ದಿನವಾದ ಚೈತ್ರ ಶುಕ್ಲ ಚೌತಿಯಂದು ನಡೆದ ಈ ಸಮಾಜಮುಖಿ ಶಿಬಿರದಲ್ಲಿ ಒಟ್ಟು 62 ರಕ್ತದಾನಿಗಳು ಭಾಗವಹಿಸಿ ಪುಣ್ಯಭಾಜನರಾದರು. ಕಾರ್ಯಕ್ರಮಕ್ಕೆ ಯೋಜನಾಖಂಡದ ಶ್ರೀಸಂಯೋಜಕರಾದ ವಿದ್ವಾನ್ ಜಗದೀಶಶರ್ಮಾ ಸಂಪ, ಶಾಸನತಂತ್ರದ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಎಡಪ್ಪಾಡಿ ಅಭ್ಯಾಗತರಾಗಿದ್ದರು. ಮಹಾಮಂಡಲ ಉಪಾಧ್ಯಕ್ಷರಾದ ಜಿ. ಜಿ. ಹೆಗಡೆ
Read Moreರಕ್ತದಾನ ಶಿಬಿರ – ಪಾಲ್ಗೊಳ್ಳಲು ಕರೆ
ಶ್ರೀರಾಮಚಂದ್ರಾಪುರ ಮಠವು ನಿರಂತರವಾಗಿ ಸಮಾಜದ ಒಳಿತನ್ನು ಬಯಸುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿರುವುದು ಸರ್ವವಿದಿತ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂನ್ಯಾಸ ಸ್ವೀಕಾರದ ದಿನದಂದು ಶ್ರೀಮಠದ ಶಾಸನತಂತ್ರದ ಸೇವಾಖಂಡವು ಬೆಂಗಳೂರಿನ ದಕ್ಷಿಣ ಹಾಗೂ ಉತ್ತರ ಮಂಡಲಗಳ ಸಹಕಾರದೊಂದಿಗೆ *ರಕ್ತಬಂಧ* ಎನ್ನುವ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದೆ. ದಿನಾಂಕ: ಮಾರ್ಚ್ 22, 2026 ಸಮಯ: ಬೆಳಗ್ಗೆ 9 ರಿಂದ ಅಪರಾಹ್ಣ 3 ಗಂಟೆಯವರೆಗೆ ಸ್ಥಳ: ಶ್ರೀಭಾರತೀ ವಿದ್ಯಾಲಯ, ವಿಜಯನಗರ, ಬೆಂಗಳೂರು ಆಸಕ್ತ , ಅರ್ಹ
Read Moreಹವ್ಯಗಂಧ ಸಭಾಭವನದ ಶಿಲಾನ್ಯಾಸ
ಮಂಜೇಶ್ವರ: ಫಾಲ್ಗುನ ಶುದ್ಧ ದಶಮಿಯಂದು (26-02-2026) ಹವ್ಯಗಂಧ ಸಭಾಭವನದ ಭೂಮಿಪೂಜೆ ಹಾಗೂ ಶಿಲಾನ್ಯಾಸಗಳು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದಿಂದ ಸುಸಂಪನ್ನಗೊಂಡಿತು. ಹವ್ಯಕ ಮಹಾಮಂಡಲಾಂತರ್ಗತ ಮಂಗಳೂರು ಮಂಡಲದ ವೈದಿಕ ಪ್ರಧಾನರಾದ ವೇದಮೂರ್ತಿ ಮುಗುಳಿ ಶ್ರೀರಾಮ ಭಟ್ಟರು ವಿಧ್ಯುಕ್ತವಾಗಿ ನೆರವೇರಿಸಿದರು. ವಿಶೇಷ ಆಹ್ವಾನಿತರಾಗಿ ಡಾ. ಮಾವೆ ಶ್ರೀಧರ ಭಟ್ಟರು ಭಾಗವಹಿಸಿದರು. ಪವಿತ್ರ ಮಂಗಲದ್ರವ್ಯಗಳಿಂದ ಅರ್ಚಿಸಿ, ಶಂಕುಸ್ಥಾಪನೆಯನ್ನು ಮಾಡಲಾಯಿತು. ರವಿರಾಮ ಸಿದ್ಧಮೂಲೆಯವರು ದೈವಜ್ಞ, ಶಿಲ್ಪಿಗಳ ಸ್ಥಾನವನ್ನು ನಿರ್ವಹಿಸಿದರು. ಕಾಮಗಾರಿಯ ನಿರ್ವಹಣೆ ಮಾಡಲಿರುವ ಮೇಸ್ತ್ರಿಯವರನ್ನು ಗೌರವಿಸಲಾಯಿತು. ಅದಕ್ಕೆ ಮುನ್ನ
Read Moreವೀಣಾ-ಮೃದಂಗ ವೈಭವ
ಕೈರಂಗಳ: ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಮಕರ ಸಂಕ್ರಾಂತಿಯಂದು (ಜನವರಿ 14) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆರಂಭವಾದ ‘ಗೋಸೇವಾ ಮಾಸಾಚರಣೆ’ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಗೋಸೇವೆ ಹಾಗೂ ಭಜನೆ ಸೇವೆ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಅಂಗವಾಗಿ ಮಾಘ ಕೃಷ್ಣ ಸಪ್ತಮಿಯಂದು (ಫೆಬ್ರವರಿ 8) ‘ವೀಣಾ-ಮೃದಂಗ ವೈಭವ’ ಕಾರ್ಯಕ್ರಮ ಜರುಗಿತು. ‘ಸಂಗೀತ ಕಲಾ ದಂಪತಿ’ ಎಂದೇ ವಿಖ್ಯಾತರಾದ ವಿದುಷಿ ವೈ. ಜಿ. ಶ್ರೀಲತಾ ನಿಕ್ಷಿತ್ ಮತ್ತು ವಿದ್ವಾನ್ ಪುತ್ತೂರು ನಿಕ್ಷಿತ್ ಇವರು ಈ ಕಾರ್ಯಕ್ರಮವನ್ನು
Read Moreವಿಶಿಷ್ಟ ಕಾರ್ಯಕ್ರಮವಿದು ಕಾಂಚನೋತ್ಸವ…
ಪುತ್ತೂರು: ಪುತ್ತೂರು ತಾಲೂಕಿನ ಕಾಂಚನ ಬಜತ್ತೂರು ಎಂಬಲ್ಲಿ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ ಎಂಬಲ್ಲಿ ಎಷ್ಟೋ ವತ್ಸರಗಳಿಂದ ಸಂಗೀತ ಸೇವೆಯು ನಡೆಯುತ್ತಾ ಬಂದಿದೆ. ಸಂಗೀತದ ಅಧ್ಯಯನ-ಅಧ್ಯಾಪನಗಳು ನಡೆಯುತ್ತಾ ಬಂದಿವೆ. ಸ್ವಸ್ತಿ ಶ್ರೀ ವಿಶ್ವಾಸು ನಾಮ ಸಂವತ್ಸರದ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು, ಮಕರ ಮಾಸ ೨೨ ಸಲ್ಲುವ ಅಂದರೆ 5-2-2026 ರಿಂದ 7-2-2026 ರಿ ವರೆಗೆ ಈ ಸಂಸ್ಥೆಯ ಸ್ಥಾಪಕಗುರುವಾದ ಸಂಗೀತರತ್ನ, ಋಷಿಗಂಧರ್ವ ವಿ. ಕಾಂಚನ ವೆಂಕಟಸುಬ್ಬರತ್ನಂ ಅವರ 105 ನೇ ಜನ್ಮವಾರ್ಷಿಕದ ಅಂಗವಾಗಿ
Read Moreಹಟ್ಟಿಯಂಗಡಿಯಲ್ಲಿ ಫೆ.05 ರಂದು ಶ್ರೀಸಂಸ್ಥಾನದವರ ದಿವ್ಯ ಸಾನಿಧ್ಯ
ಶ್ರೀ ಸಿದ್ದಿ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿಯಲ್ಲಿ ದಿನಾಂಕ 05-02-26 ರಂದು ಶ್ರೀಸಂಸ್ಥಾನದವರ ದಿವ್ಯ ಸಾನಿಧ್ಯದಲ್ಲಿ ನೂತನ ನವಗ್ರಹ ದೇವಸ್ಥಾನ ಲೋಕಾರ್ಪಣೆ, ನವಗ್ರಹ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವವು ನಡೆಯಲಿದೆ. ದಿನಾಂಕ 04-02-26ರ ಸಂಜೆ ಶ್ರೀಸಂಸ್ಥಾನದವರು ಹಟ್ಟಿಯಂಗಡಿಗೆ ಚಿತ್ತೈಸಲಿದ್ದು, ಕ್ಷೇತ್ರದ ವತಿಯಿಂದ ಪೂರ್ಣ ಕುಂಭ ಸ್ವಾಗತ ಹಾಗೂ ಧೂಳಿ ಪಾದಪೂಜೆ ಜರುಗಲಿದೆ. 02-02-26 ಇಂದ 05-02-26 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ವಾರ್ಷಿಕೋತ್ಸವ ಹಾಗೂ 1008 ತೆಂಗಿನಕಾಯಿ ಮಹಾಗಣಪತಿ ಹವನ , ಸಂಕಷ್ಟಹರ ಚತುರ್ಥಿ ಮಹಾಪೂಜೆ, ಹಾಗೂ ಬ್ರಹ್ಮಕಲಶೋತ್ಸವವು
Read More‘ಗೋಮಾತೆಯ ಸೇವೆಯಲ್ಲಿ ಗುರುಕೃಪೆಯ ಧನ್ಯತೆ’ – ಪ್ರೀತಿಶ್ರೀ ಮಂಜುನಾಥ್ ಉಡುಪಿ
” ಶ್ರೀಮಠದ ಸೇವೆ ನಮ್ಮ ಉಸಿರಲ್ಲಿ ಬೆರೆತು ಹೋಗಿದೆ. ಶ್ರೀಮಠದ ಎಲ್ಲಾ ಸೇವೆಗಳಿಗೂ ನಾವು ಕೈಜೋಡಿಸುತ್ತೇವೆ. ಗುರುಸೇವೆ ಮತ್ತು ಗೋಸೇವೆ ನಮ್ಮ ಜೀವನದ ಒಂದು ಭಾಗವಾಗಿದೆ. ಗುರುಕೃಪೆಯೇ ನಮ್ಮ ಬದುಕಿಗೆ ಆಧಾರ. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ದೊರಕಿದ್ದು ಗುರು ಅನುಗ್ರಹದಿಂದ ” ಎಂದು ಹೃದಯ ತುಂಬಿ ನುಡಿದವರು ಹೊನ್ನಾವರ ಸಮೀಪದ ಕೊಂಡದಕುಳಿಯ ಪ್ರಸ್ತುತ ಮಂಗಳೂರು ಮಂಡಲ ಉಡುಪಿ ವಲಯ ನಿವಾಸಿಗಳಾಗಿರುವ ಮಂಜುನಾಥ ಹೆಗಡೆಯವರ ಪತ್ನಿ ಪ್ರೀತಿಶ್ರೀ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪ
Read Moreಮನೆಯನ್ನು ನವೀಕರಿಸುವ ಉದ್ದೇಶದಿಂದ ಮುಳ್ಳೇರಿಯ ಮಂಡಲದ ಗುರಿಕಾರರು ಹಾಗೂ ಪದಾಧಿಕಾರಿ ಭೇಟಿ
ಗುಂಪೆ: ಶ್ರಾವಣಕರೆ ಘಟಕದ ಪುತ್ತಿಗೆ ಕೃಷ್ಣಯ್ಯ ಹೆಬ್ಬಾರರ ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ನವೀಕರಿಸುವ ಉದ್ದೇಶದಿಂದ ಮುಳ್ಳೇರಿಯ ಮಂಡಲದ ಗುರಿಕಾರರು ಹಾಗೂ ಪದಾಧಿಕಾರಿಗಳು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಮನೆ ವೀಕ್ಷಣೆ ನಡೆಸಿ, ಮನೆಯ ಪ್ರಸ್ತುತ ಸ್ಥಿತಿ ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ದಿನಾಂಕ ೦4-೦1-2026 ಭಾನುವಾರದಂದು ಬೆಳಗ್ಗೆ ಕೃಷ್ಣಯ್ಯ ಹೆಬ್ಬಾರರ ಮನೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಗುಂಪೆ ವಲಯದ ಅಧ್ಯಕ್ಷರಾದ ಕುಮಾರ ಸುಬ್ರಮಣ್ಯ
Read Moreಗ್ರಾಮರಾಜ್ಯ ಟ್ರಸ್ಟ್ ಗೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಭೇಟಿ
ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆ ಗ್ರಾಮರಾಜ್ಯ ಟ್ರಸ್ಟ್ ಇದರ ಹೊಸಕೆರೆಯಲ್ಲಿಯಲ್ಲಿರುವ ಪ್ರಧಾನ ಕಛೇರಿಗೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಚಿತ್ತೈಸಿದರು. ಗ್ರಾಮರಾಜ್ಯ ಸಂಸ್ಥೆಯ ವ್ಯವಸ್ಥೆಯನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂಕಲ್ಪ , ಗ್ರಾಮಗಳ ಅಭ್ಯುದಯ , ರೈತರಿಗೆ ಅನುಕೂಲವಾಗುವ ತನ್ಮೂಲಕ ನಗರದ ಜನರಿಗೆ ಉತ್ತಮ ವಸ್ತುಗಳ ಪೂರೈಕೆ ಮಾಡುವ ಈ ಸಂಸ್ಥೆಗೆ ಶ್ರೇಯಸ್ಸು ಸಿಗಲಿ ಎಂದು ಆಶೀರ್ವದಿಸಿದರು. ಸಂಸ್ಥೆಯ ಶ್ರೀ ಸಂಯೋಜಕ
Read Moreಮುಳ್ಳೇರಿಯ ಮಂಡಲದಲ್ಲಿ ಗುರಿಕ್ಕಾರರ ಗುರುಮಾರ್ಗ ಕಾರ್ಯಾಗಾರ
ಮುಳ್ಳೇರಿಯಾ: ಮುಳ್ಳೇರಿಯಾ ಮಂಡಲದ ನಾಲ್ಕು ಕೆಂದ್ರಗಳಲ್ಲಿ ದಿನಾಂಕ 30/11/2025 ಹಾಗೂ 01/12/2025 ರಂದು ಗುರಿಕ್ಕಾರರ ಗುರುಮಾರ್ಗ ಕಾರ್ಯಾಗಾರ ನಡೆಯಿತು. 30 ನೇ ತಾರೀಕಿನಂದು ಬೆಳಗ್ಗೆ ಪೆರಡಾಲ, ಪಳ್ಳತ್ತಡ್ಕ, ಎಣ್ಮಕಜೆ, ಚಂದ್ರಗಿರಿ ವಲಯಗಳಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ, ಮಧ್ಯಾಹ್ನ ನಂತರ ಕುಂಬಳೆ, ನೀರ್ಚಾಲು, ಕಾಸರಗೋಡು, ಗುಂಪೆ ವಲಯಗಳಿಗೆ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ, 1 ನೇ ತಾರೀಕಿನಂದು ಬೆಳಗ್ಗೆ ಸುಳ್ಯ, ಗುತ್ತಿಗಾರು, ಈಶ್ವರ ಮಂಗಲ ವಲಯಗಳಿಗೆ ಸರಳಿಕುಂಜದ ಧರ್ಮಾರಣ್ಯದಲ್ಲಿ ಮಧ್ಯಾಹ್ನ ನಂತರ ಕೊಡಗು ವಲಯದ ಕುಮಾರ ಕೃಪಾದಲ್ಲಿ
Read Moreಡಾ. ಹರೀಶ ಹೆಗಡೆ ಅವರಿಗೆ 2025ರ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಯುವ ಪುರಸ್ಕಾರ
ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಅಶೋಕೆಯ ಸ್ವರಾತ್ಮ ಗುರುಕುಲದ ಪ್ರಧಾನ ಪ್ರಾಚಾರ್ಯರಾದ ಡಾ. ಹರೀಶ ಹೆಗಡೆ ಅವರು 2025ರ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಯಲ್ಲಾಪುರದ ವಜ್ರಳ್ಳಿಯಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ ಮಾಡುವಾಗಲೇ ದತ್ತಾತ್ರೇಯ ಗಾಂವಕರರ ಬಳಿ ಸಂಗೀತದ ಓಂಕಾರ ಪ್ರಾರಂಭಿಸಿದರು. ಮುಂದೆ ಉಡುಪಿಯಲ್ಲಿ ಸಂಸ್ಕೃತ ವಿದ್ವತ್ ಜೊತೆಗೆ ಪಂ. ಮಹಾಬಲೇಶ್ವರ ಭಾಗವತರಲ್ಲಿ ಸಂಗೀತ ಅಧ್ಯಯನ ನಡೆಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಮ್ಯೂಸಿಕ್ ಮತ್ತು ಎಂ.ಮ್ಯೂಸಿಕ್ ಪದವಿಗಳನ್ನು ಅಭ್ಯಸಿಸುವಾಗ, ಪಂ. ಶ್ರೀಪಾದ ಹೆಗಡೆ
Read Moreಚಾತುರ್ಮಾಸ್ಯ ಪ್ರಶಸ್ತಿಯ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀಧರಣ್ಣ ಶ್ರೀರಾಮ ಸಾಯುಜ್ಯಕ್ಕೆ
ಪಿಡಿಎಸ್ ಎಂದೇ ಖ್ಯಾತರಾದ ಸಾಗರ ಸಮೀಪದ ಭೀಮನಕೋಣೆಯ ನಮ್ಮ ಶ್ರೀಧರಣ್ಣ ಕೆಲಕಾಲದ ಅಸೌಖ್ಯದಿಂದ ಇಂದು ಬೆಳಗಿನ ಜಾವ ಕಾಲವಶರಾದರು ಎಂಬ ಸುದ್ದಿ ತೀವ್ರ ನೋವಿನದ್ದು. ನಮ್ಮ ಮಠದ ಕಾರ್ಯ ಎಂದರೆ ತನ್ನ ಸ್ವಂತ ಕಾರ್ಯಕ್ಕಿಂತ ಹೆಚ್ಚಿನದು ಎಂದು ದೃಢವಾಗಿ ನಂಬಿ ಕಾರ್ಯ ಮಾಡಿದವರು ಅವರು. ಶ್ರೀ ಮಠದ ವ್ಯವಸ್ಥೆಯಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿ, ಗುರುಗಳ ಪ್ರೀತಿಗೆ ಪಾತ್ರರಾದವರು. ದೊಡ್ಡ ದೊಡ್ಡ ಮಹತ್ವದ ಕಾರ್ಯಗಳ ಸಂಪೂರ್ಣ ನೇತೃತ್ವ ಇದ್ದಾಗಲೂ, ಹಣಕಾಸಿನ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ತೋರಿದವರು.
Read Moreಗ್ರಾಮರಾಜ್ಯ ಟ್ರಸ್ಟ್ ವಿಷ ಮುಕ್ತ ಅಡುಗೆ ಮನೆ – ಮುಕ್ತ ಮಾತು
ಶ್ರೀರಾಮಚಂದ್ರಾಪುರ ಮಠದ ಅಂಗ ಸಂಸ್ಥೆ ಗ್ರಾಮರಾಜ್ಯ ಟ್ರಸ್ಟ್ ಇದರ ಸಮಾಜ ಕ್ಷೇಮದ ಚಿಂತನೆಯ ೧೫ ಸಾರ್ಥಕ ವರ್ಷಗಳ ಸೇವೆಯ ಸಲುವಾಗಿ ಸಮಾಜದ ಜೊತೆಗೆ ಬೆರೆಯುವ , ಸಮಾಜದೊಂದಿಗೆ ಜೋಡಿಸಿಕೊಳ್ಳುವ ಅಭಿಯಾನವೇ ” ವಿಷ ಮುಕ್ತ ಅಡುಗೆ ಮನೆ – ಮುಕ್ತ ಮಾತು ” ಕಾರ್ಯಕ್ರಮ. ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ನಿವೃತ್ತ ಕೆಪಿಟಿಸಿಎಲ್ ಹಿರಿಯ ಅಧಿಕಾರಿಗಳು , ಸಾಹಿತಿಗಳು , ಕಾದಂಬರಿಕಾರರು , ಮೇಲಾಗಿ ಶ್ರೀ ಸಂಸ್ಥಾನದವರು ನಡೆಸಿಕೊಡುವ ರಾಮಕಥೆಯ ಕವಿ , ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
Read Moreಗ್ರಾಮರಾಜ್ಯ ಟ್ರಸ್ಟ್ ಗೆ ಗಣ್ಯ ಮಾನ್ಯರ ಭೇಟಿ
ಶ್ರೀ ರಾಮಚಂದ್ರಾಪುರ ಮಠದ ಅಂಗ ಸಂಸ್ಥೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಂಕಲ್ಪದ ಯೋಜನೆ ಗ್ರಾಮರಾಜ್ಯ ಟ್ರಸ್ಟ್ (ರಿ). ಈ ಸಂಸ್ಥೆಗೆ ಸಾರ್ಥಕ ೧೫ ಸಂವತ್ಸರಗಳು ತುಂಬಿರುವ ಶುಭ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯ ಮತ್ತು ತನ್ಮೂಲಕ ನೆಮ್ಮದಿ ಎನ್ನುವ ಕಲ್ಪನೆಯ ಅಡಿಯಲ್ಲಿ ವಿಷ ಮುಕ್ತ ಅಡುಗೆ ಮನೆಯ ಕಲ್ಪನೆ ಸಮಾಜಕ್ಕೆ ಸಾಧ್ಯವಾದಷ್ಟು ತಲುಪಿಸುವ ಯೋಚನೆ ನಮ್ಮದು. ಈ ನಿಟ್ಟಿನಲ್ಲಿ ಸಮಾಜದ ಕೆಲವು ಗಣ್ಯ ಮಾನ್ಯರನ್ನು ಆಹ್ವಾನಿಸಿ ಶ್ರೀಸಂಸ್ಥಾನದವರ ಪರಿಕಲ್ಪನೆ ಮತ್ತು ಸಮಾಜಕ್ಕೆ ಗಣ್ಯರ ಮೂಲಕ
Read Moreಸೇವೆಗೆ ಫಲ ಇದೆ ಅದು ಶಾಶ್ವತ ಧನ್ಯತೆ ನೀಡಲಿದೆ : ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ನಿಸ್ವಾರ್ಥವಾದ ಸೇವೆಗೆ ವಿಶೇಷ ಫಲವಿದೆ ಮತ್ತು ಅದು ಶಾಶ್ವತವಾದ ಧನ್ಯತೆಯನ್ನು ನೀಡಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರ ಅಗ್ರಹಾರದ ಶ್ರೀರಾಘವೇಶ್ವರ ಸಭಾ ಭವನ ಸಮಿತಿ ಏರ್ಪಡಿಸಿದ್ದ ಭವನ ನಿರ್ಮಾಣಕ್ಕೆ ಸಹಕರಿಸಿದವರಿಗೆ ಗೌರವ ಸಮರ್ಪಣೆ ಧನ್ಯಾನುಗ್ರಹ ಸಮಾರಂಭದಲ್ಲಿ ಅವರು ದಿವ್ಯಸಾನ್ನಿಧ್ಯವಹಿಸಿ ದಾನಿಗಳಿಗೆ ಆಶೀರ್ವದಿಸಿ ನಂತರ ಆಶೀರ್ವಚನ ನೀಡಿದರು. ನಮ್ಮ ದೊಡ್ಡ ಗುರುಗಳು ಆ ಕಷ್ಟ ಕಾಲದಲ್ಲಿಯೂ ಇಲ್ಲಿಯ ನೆಲ ಖರೀದಿಸಿ ಕಾಪಾಡಿಕೊಂಡು ಬಂದಿರುವುದು ಒಂದು ಸಂಗತಿಯಾದರೆ ತಾಯಿ
Read Moreಆತ್ಮ ವಿಶ್ವಾಸಕ್ಕಿಂತ ದೊಡ್ಡ ಸಂಪತ್ತು ಈ ಜಗತ್ತಿನಲ್ಲಿ ಬೇರೆ ಇಲ್ಲ: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಆತ್ಮ ವಿಶ್ವಾಸಕ್ಕಿಂತ ದೊಡ್ಡ ಸಂಪತ್ತು ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ. ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಾಧ್ಯ ಎನ್ನುವ ಆತ್ಮವಿಶ್ವಾಸ ಇದ್ದರೆ ಆ ಕೆಲಸದಲ್ಲಿ ಸಾಧನೆ ಖಚಿತ. ಆರಂಭದಲ್ಲಿಯೇ ಸಾಧ್ಯವಾ.. ಸಾಧ್ಯವಿಲ್ಲ ಎನ್ನುವ ಅನುಮಾನಗಳು ಹುಟ್ಟಿದರೆ ಒಂದು ಹೆಜ್ಜೆಯನ್ನೂ ಮುಂದಿಡುವುದಕ್ಕೆ ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರದ ಶ್ರೀರಾಘವೇಶ್ವರ ಭವನದಲ್ಲಿ ಕಳೆದ 15 ದಿನಗಳಿಂದ ನಡೆದ ‘ನವರಾತ್ರ ನಮಸ್ಯಾ’ ಸಮಾರೋಪ ಧಾರ್ಮಿಕ ಸಭೆಯಲ್ಲಿ ಶನಿವಾರ ಅವರು ಆಶೀರ್ವಚನ
Read Moreಸಂಘ ಜೀವಿಯಾಗಿ ಬದುಕಿ, ಆಧ್ಯಾತ್ಮಿಕಕ್ಕೆ ಶರಣಾಗಿ : ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ಸಾಮಾಜಿಕವಾಗಿ ಬದುಕನ್ನು ಕಂಡುಕೊಳ್ಳುವವನಿಗೆ ಒಂಟಿತನ ಎಂದೂ ಕಾಡುವುದಿಲ್ಲ ಹಾಗಾಗಿ ಸಂಘ ಜೀವಿಯಾಗಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾ ಲಲಿತೋಪಾಖ್ಯಾನ ಪ್ರವಚನದ ಸಮಾರೋಪದಲ್ಲಿ ಅವರು ನುಡಿದರು. ಪ್ರಸ್ತುತ ದಿನಮಾನದಲ್ಲಿ ವೃದ್ದರನ್ನು ಒಂಟಿಯಾಗಿ ಬಿಟ್ಟು ಹೋಗಲಾಗುತ್ತಿದೆ ಆಗೆಲ್ಲ ಅವರನ್ನು ಒಂಟಿತನ ಕಾಡುವುದು ಸಹಜ ಆದರೆ ಸಂಘ ಜೀವಿಯಾಗುವುದು ಒಂದು ಪ್ರಯೋಜನವಾದರೆ ಮೊದಲಿಂದಲೂ ಆಧ್ಯಾತ್ಮಿಕಕ್ಕೆ ಶರಣಾಗಿ ಬದುಕಿದರೆ ಕೊನೆಯಲ್ಲಿ
Read Moreಇನ್ನೊಬ್ಬರಿಗೆ ಕಷ್ಟ ಕೊಟ್ಟು ಖುಷಿ ಪಡುವವರು ರಕ್ಕಸರು : ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ಇನ್ನೊಬ್ಬರ ಕಷ್ಟ ನೋಡಿ ಖುಷಿ ಪಡುವ ವರ್ಗ ಒಂದಾದರೆ ಇನ್ನೊಬ್ಬರಿಗೆ ತಾವೇ ಕಷ್ಟ ಕೊಟ್ಟು ಖುಷಿ ಪಡುವ ವರ್ಗ ಇನ್ನೊಂದು ಈ ಎರಡೂ ವರ್ಗದವರು ದುರ್ಜನರು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರದ ಶ್ರೀರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ವಿಜಯದಶಮಿ ವಿಶೇಷದೊಂದಿಗೆ ನವರಾತ್ರ ನಮಸ್ಯಾದ 11 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ನುಡಿದರು. ಕಷ್ಟ ನೋಡಿ ಖುಷಿ ಪಡುವ ವರ್ಗ ನರಾಧಮರಾದರೆ ಕಷ್ಟ ಕೊಟ್ಟು ಖುಷಿ
Read Moreಭಾವ ಇಲ್ಲದ ಅರ್ಚನೆಗೆ ಯಾವುದೇ ಫಲ ಇಲ್ಲ : ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ಭಾವ ಇಲ್ಲದ ಅರ್ಚನೆಗೆ ಯಾವುದೇ ಫಲ ಇಲ್ಲ. ಪೂಜೆಯಲ್ಲಿ ದೇವರಿಗೆ ಎಷ್ಟು ವಸ್ತು ಸಮರ್ಪಿಸುತ್ತಿದ್ದೇವೆ ಎನ್ನುವುದಕ್ಕಿಂತ ಭಕ್ತಿಯಲ್ಲಿ ಭಾವಿಸಿ ಪೂಜೆ ಮಾಡುತ್ತಿದ್ದೇವೆಯೇ? ಎನ್ನುವುದು ಅತೀ ಮುಖ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ 10 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ನುಡಿದರು. ಯಾರ ಕುರಿತು ಪೂಜಿಸುತ್ತೇವೋ ಆ ಕುರುಣಾಮಯಿಯ ಕುರಿತು ನಮ್ಮ ಚಿತ್ತಭಿತ್ತಿಯಲ್ಲಿ ಭಾವನೆಯೇ
Read More