ಇತರೆ
ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡರೆ ಆಪತ್ತು ಖಚಿತ : ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ಗೆಲುವು ಬಂದಾಗ ಎಲ್ಲವೂ ನಾನು, ನನ್ನಿಂದ ಎನ್ನುವ ಮನುಷ್ಯ ಸೋತಾಗ ಹಣೆ ಬರಹ, ವಿಧಿ ಲಿಖಿತ ಎಂಬ ಶಬ್ದ ಬಳಸುತ್ತಾನೆ ಆದರೆ ನಿಜವಾಗಿಯೂ ಗೆಲುವು ಮತ್ತು ಸೋಲು ಎಲ್ಲವೂ ಭಗವಂತನ ಇಚ್ಚೆ. ಗೆದ್ದಾಗಲೂ ಅವನನ್ನೇ ಸ್ಮರಿಸಬೇಕು ಇನ್ನು ಸೋತಾಗ ಹೇಗೂ ಭಗವಂತನ ನೆನಪು ಮಾಡಲೇ ಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರದ ಶ್ರೀ ರಾಘವೇಶ್ವರ ಸಭಾ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ 9
Read Moreದುರಹಂಕಾರ ವಿಚಿತ್ರ ರೋಗ ಅದು ವ್ಯಕ್ತಿಯ ಪತನಕ್ಕೆ ಕಾರಣ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ದುರಹಂಕಾರ ಎನ್ನುವುದು ಮನುಷ್ಯ ದೇಹದೊಳಗೆ ತಿಳಿಯದೆ ಬಂದಿರ ಬಹುದಾದ ಖಾಯಿಲೆ ಇದ್ದ ರೀತಿ, ಗೊತ್ತಿರುವ ಖಾಯಿಲೆಗೆ ಚಿಕಿತ್ಸೆ ಕೊಡಿಸಬಹುದು ನಮ್ಮ ದೇಹದೊಳಗೆ ಗೊತ್ತಿಲ್ಲದಿರುವ ಖಾಯಿಲೆ ಇದ್ದರೆ ಅದಕ್ಕೆ ಚಿಕಿತ್ಸೆ ಸಾಧ್ಯವಿಲ್ಲ ಈ ದುರಹಂಕಾರವೂ ಅದೇ ರೀತಿ ಇದಕ್ಕೆ ಚಿಕಿತ್ಸೆ ಇಲ್ಲ ಅದು ಅವನ ಪತನದಲ್ಲಿ ಪರಿವಸನವಾಗಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ ೮ ನೇ
Read Moreಕರುಣೆ – ಆಯುಧಾ ಎರಡೂ ದೇವಿಯಲ್ಲಿದೆ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ದೇವಿಯಲ್ಲಿ ಸಹಜಾನಂದದ ಪ್ರತೀಕವಾದ ಕರುಣೆಯ ಮಂದಹಾಸವೂ ಇದೆ. ವಿವಿಧ ರೀತಿಯ ಆಯುಧಗಳನ್ನು ದೇವಿ ಧರಿಸಿದ್ದಾಳೆ. ನಾವು ಭಂಡಾಸುರರಾದರೆ ದೇವಿ ಆಯುಧ ಪ್ರಯೋಗ ಮಾಡುತ್ತಾಳೆ. ನಾವು ಪುಣ್ಯದ ದಾರಿಯಲ್ಲಿ ಸಾಗಿದರೆ ದೇವಿಯ ಕರುಣೆಗೆ ಪಾತ್ರರಾಗುತ್ತೇವೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರದ ಶ್ರೀ ರಾಘವೇಶ್ವರ ಭವನದಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ದ ಏಳನೇ ದಿನ ಲಲಿತೋಪಾಖ್ಯಾನ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು. ನಮ್ಮ ನಡೆ ನುಡಿಗಳು ನಾವು ದೇವಿಯ ಕರುಣಾಪೂರಿತ
Read Moreನವರಾತ್ರಿ ಎಂದರೆ ಮನರಂಜನೆಯಲ್ಲ. ಅದು ದೇವಿಯ ಆರಾಧನೆ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ನವರಾತ್ರಿ ಎಂದರೆ ಅದು ಮನರಂಜನೆಗಾಗಿ ಇರುವ ಪರ್ವವಲ್ಲ ಬದಲಾಗಿ ದೇವಿಯ ಆರಾಧನೆ ಕಾಲ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರದ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ ಆರನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಆಶೀರ್ವಚನ ನೀಡಿದರು. ಲೋಕ ಕಲ್ಯಾಣ ಕಾರ್ಯದಲ್ಲಿ ತಾಯಿ ಮಗ್ನವಾಗಿರುವಾಗ ಆಕೆಯ ಪರಿವಾರ ಆಕೆಗೆ ಯಾವ ರೀತಿಯ ಸಹಕಾರ ನೀಡಿದರು ಮತ್ತು ಆ ಎಲ್ಲ ದೇವಿಯರು ಯಾರು ಎನ್ನುವ ಹೆಸರನ್ನು ತಿಳಿದರೆ,
Read Moreನಾವು ನಮ್ಮ ವಶದಲ್ಲಿದ್ದರೆ ಮಾತ್ರ ಸಾಧನೆ ಸಾಧ್ಯ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ನಾವು ನಮ್ಮ ವಶದಲ್ಲಿರಬೇಕು. ಹಾಗಿದ್ದರೆ ಮಾತ್ರ ನೆಮ್ಮದಿ. ಮನಸ್ಸು, ದೇಹ ನಮ್ಮ ವಶದಲ್ಲಿಲ್ಲ ಎಂದಾದರೆ ಯಾವ ಸಾಧನೆಯನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರದ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ‘ನವರಾತ್ರ ನಮಸ್ಯಾ’ದ ಐದನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು. ಇಂದು ಊರು, ರಾಜ್ಯ ಜಗತ್ತು ತನ್ನ ವಶವಾಗಬೇಕು ಎನ್ನುವ ಮನಸ್ಸು ಹೊಂದಿರುವ ಮನುಷ್ಯ ತನ್ನನ್ನು ತಾನು ವಶವಿಟ್ಟುಕೊಳ್ಳಲಾಗದಿರುವ ಪರಿಸ್ಥಿತಿಯಲ್ಲಿದ್ದಾನೆ. ಕ್ಷಣಕ್ಕೂ
Read Moreಜಗತ್ತಿನಲ್ಲಿ ಸಹನೆಗಿಂತ ದೊಡ್ಡ ಅಸ್ತ್ರ ಇಲ್ಲ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ಜಗತ್ತಿನಲ್ಲಿ ಸಹನೆಗಿಂತ ಮತ್ತೊಂದು ದೊಡ್ಡ ಅಸ್ತ್ರ ಇಲ್ಲವೇ ಇಲ್ಲ. ಕಷ್ಟ ಎದುರಿಸುವ ಆತ್ಮಸ್ಥೈರ್ಯ ಸದಾ ಬೆಳೆಸಿಕೊಳ್ಳಬೇಕು, ದೇವತೆಗಳಿಗೂ ಕಷ್ಟ ಬಂದಾಗ ಅದನ್ನು ಸಹನೆಯಿಂದ ಕೇಳಿ, ಸ್ಥೈರ್ಯ ನೀಡಿದ ದೇವಿ ಸಹನೆಗೊಂದು ಆದರ್ಶ ಎಂದು ಜಗತ್ತಿನಲ್ಲಿ ಸಹನೆಗಿಂತ ದೊಡ್ಡ ಅಸ್ತ್ರ ಇಲ್ಲ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರದ ಅಗ್ರಹಾರದ ರಾಘವೇಶ್ವರ ಭವನದಲ್ಲಿ ನಡೆಯುತ್ತಿರುವ ನವರಾತ್ರ ನಮಸ್ಯಾ 4 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ದೇವಿಯ ಸಹನೆಯನ್ನು ಬಣ್ಣಿಸುವಾಗ
Read Moreಪೂಜೆಯ ವೇಳೆ ಒಳ ಮನಸ್ಸು ಒಳಿತನ್ನೇ ಯೋಚಿಸಬೇಕು ಕೆಡುಕಲ್ಲ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ : ದೇವಿಯ ನಾಮ ಕಿವಿಯ ಮೇಲೆ ಬೀಳುವುದಕ್ಕೂ ಪುಣ್ಯಯೋಗ ಬೇಕು ಅದೃಷ್ಟವೂ ಇರಬೇಕು ಅನುಷ್ಠಾನದ ಭಾವವಿರಬೇಕು ಅಂತವರ ಬದುಕಿನಲ್ಲಿ ಆಕೆಯ ಕರುಣೆಯ ಕಿರಣ ಬೀಳಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದಲ್ಲಿ ಏರ್ಪಡಿಸಿರುವ ನವರಾತ್ರ ಸಮಸ್ಯಾದ ಮೂರನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು. ದೇವರ ಪೂಜೆ ಮಾಡುವುದು ಎಷ್ಟು ಮುಖ್ಯವೋ ಅದರಲ್ಲಿ ಏಕಾಗ್ರತೆಯೂ ಅಷ್ಟೇ ಮುಖ್ಯ ಮತ್ತು ಪ್ರಾರ್ಥನೆಯೂ ಒಳ್ಳೆಯದೇ ಇರಬೇಕು,
Read Moreತ್ಯಾಗದಿಂದ ಮಾತ್ರವೇ ಶ್ರೇಷ್ಟತೆ ಪಡೆಯುವುದಕ್ಕೆ ಸಾಧ್ಯ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಸಾಗರ: ಕರ್ಮದಿಂದ ಅಲ್ಲ ತ್ಯಾಗದಿಂದ ಮಾತ್ರ ಶ್ರೇಷ್ಟತೆ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ನಮ್ಮಲ್ಲಿ ಸ್ವಾರ್ಥ ಇಲ್ಲದೆ, ನಮ್ಮಲ್ಲಿರುವ ಸಮಸ್ತವನ್ನು ಸಮರ್ಪಿಸುವ ಮನೋಭಾವ ಇದ್ದಾಗ ದೇವರ ಒಲುಮೆ ಸಾಧ್ಯ. ಅಂತಹ ಒಲುಮೆ ಪಡೆಯಬೇಕಾದರೆ ನಮ್ಮಲ್ಲಿರುವ ನಾನು ನನ್ನದು ಎನ್ನುವ ಮೋಹ ತ್ಯಜಿಸಬೇಕು. ಅದೇ ತ್ಯಾಗ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸಾಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದಲ್ಲಿ ಏರ್ಪಡಿಸಿರುವ ನವರಾತ್ರ ಸಮಸ್ಯಾದ ಎರಡನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಆಶೀರ್ವಚನ ನೀಡಿದರು. ನಿತ್ಯ ಬೇರೆಬೇರೆ
Read Moreಗ್ರಾಮರಾಜ್ಯದ ಮುಖ್ಯಸ್ಥಾನಕ್ಕೆ ಭೇಟಿ
ಬೆಂಗಳೂರು: ಗ್ರಾಮರಾಜ್ಯದ ಮುಖ್ಯಸ್ಥಾನಕ್ಕೆ ಯೋಜನಾ ಖಂಡದ ಶ್ರೀಸಂಯೋಜಕರಾದ ವಿದ್ವಾನ್ ಜಗದೀಶ ಶರ್ಮಾ ಸಂಪ ಭೇಟಿ ನೀಡಿದರು. ‘ಗ್ರಾಮರಾಜ್ಯ’ ನಮ್ಮ ದಿನಸಿ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ರೈತರು ಮತ್ತು ಉತ್ಪಾದಕರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಒಂದು ಸಮಾಜೋಪಯೋಗಿ ಸಂಸ್ಥೆ. ವಾಣಿಜ್ಯದ ಆಸಕ್ತಿ ಇರದ ಸೇವಾಸಂಸ್ಥೆ. ಈ ಮೂಲಕ ಗ್ರಾಮಗಳನ್ನು ಸದೃಢಗೊಳಿಸುವ ಮಹತ್ತ್ವಾಕಾಂಕ್ಷೆಯ ಅಭಿಯಾನ. ಜೊತೆಗೆ ಗ್ರಾಹಕರ ದೈನಂದಿನವನ್ನೂ ಸ್ವಸ್ಥಗೊಳಿಸುವ ಸದುದ್ದೇಶವೂ ಇದರದ್ದು. ಬೆಂಗಳೂರಿನಲ್ಲಿ ಕೇಂದ್ರಸ್ಥಾನವಲ್ಲದೆ, ಅಸಂಖ್ಯ ಶಾಖೆಗಳನ್ನೂ ಹೊಂದಿ, ರಾಜ್ಯದ ಆಯ್ದ ಪ್ರದೇಶಗಳಲ್ಲೂ ಇದು ಕಾರ್ಯ
Read Moreಮೂಲ ಮರೆತವರು ಅಸ್ತಿತ್ವ ಕಳೆದುಕೊಳ್ಳುತ್ತಾರೆ : ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ
ಸಾಗರ: ಇಂದು ಮನುಷ್ಯನ ಮನಸ್ಥಿತಿ ಹೇಗಿದೆಯೆಂದರೆ ಪುಣ್ಯದ ಫಲ ಬೇಕು, ಆದರೆ ಪುಣ್ಯದ ಕಾರ್ಯ ಮಾಡುವುದಕ್ಕೆ ಮನಸ್ಸಿಲ್ಲ. ದುಃಖ ಬೇಡ, ಆದರೆ ದುಃಖದ ಮೂಲವಾದ ಪಾಪ ಮಾಡುವುದನ್ನು ನಿಲ್ಲಿಸುವುದಿಲ್ಲ. ಇದು ಬದಲಾಗಿ ಪುಣ್ಯದ ಕಾರ್ಯದಲ್ಲಿ ಮನಸ್ಸು, ದುಃಖದಿಂದ ದೂರವಿರುವ ಕಾರ್ಯ ಮಾಡುವಂತಾಗಲು ಇರುವ ದಾರಿ ಒಂದೇ. ಅದು ಜಗನ್ಮಾತೆಯಾದ ರಾಜರಾಜೇಶ್ವರಿಯ ಧ್ಯಾನ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಸೋಮವಾರ ಸಾಗರದ ರಾಘವೇಶ್ವರ ಸಭಾಭವನದಲ್ಲಿ ಆರಂಭಗೊಂಡ ’ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಶ್ರೀ
Read Moreವೈಭವದೊಂದಿಗೆ ಸಂಪನ್ನವಾದ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪುರಪುವೇಶ ಮೆರವಣಿಗೆ
ಸಾಗರ: ರಾಘವೇಶ್ವರ ಸಭಾ ಭವನದಲ್ಲಿ ಸೆ.೨೨ರಿಂದ ಆರಂಭಗೊಳ್ಳುವ ನವರಾತ್ರ ನಮಸ್ಯಾ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಲು ಶನಿವಾರ ಸಾಗರಕ್ಕೆ ಆಗಮಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪುರ ಪ್ರವೇಶ ಸಾಗರೋಪಾದಿಯಲ್ಲಿ ಸೇರಿದ ಜನಸಮೂಹದ ಮಧ್ಯದಲ್ಲಿ ವೈಭವದಿಂದ ನಡೆಯಿತು. ನಗರದ ಶಾರದಾಂಬಾ ವೃತ್ತದಿಂದ ಆರಂಭವಾದ ಮೆರವಣಿಗೆಯು ಗಣಪತಿ ದೇವಾಲಯದವರೆಗೆ ನಡೆಯಿತು. ಸುಮಾರು ೧೦ ಸಾವಿರಕ್ಕೂ ಹೆಚ್ಚು ಶಿಷ್ಯ ಭಕ್ತರು ಸುಮಾರು ೧.೫ ಕಿಮೀ ಉದ್ದದ ಮೆರವಣಿಗೆಯಲ್ಲಿ ಭವ್ಯವಾಗಿ ನಡೆಯಿತು. ೨ ಸಾವಿರ ಮಾತೆಯರು ಪೂರ್ಣಕುಂಭದೊಂದಿಗೆ ಶ್ರೀಗಳವರ
Read Moreಸೆ.22ರಿಂದ ಸಾಗರದಲ್ಲಿ ಸಂಭ್ರಮದ ’ನವರಾತ್ರ ನಮಸ್ಯಾ’ – ನಾಳೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅದ್ದೂರಿ ಪುರಪ್ರವೇಶ
ಸಾಗರ: ಸಾಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಸಭಾ ಭವನದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಸೆ.22 ರಿಂದ ನಡೆಯಲಿರುವ “ನವರಾತ್ರ ನಮಸ್ಯಾ” ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಗೋಕರ್ಣದಿಂದ ಶ್ರೀಗಳು ಸಾಗರಕ್ಕೆ ಪುರಪ್ರವೇಶ ಮಾಡಲಿದ್ದು, ಸಾಗರ ನಗರದಲ್ಲಿ ಸಮಷ್ಟಿ ಸಮಾಜದಿಂದ ಅದ್ದೂರಿ ಸ್ವಾಗತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಪುರಪ್ರವೇಶ ಕಾರ್ಯಕ್ರಮ ಶನಿವಾರ ಸಂಜೆ 5.30 ಗಂಟೆಗೆ ಇಲ್ಲಿನ ಶಾರದಾಂಬ ವೃತ್ತದಿಂದ ಆಯೋಜಿಸಲಾಗಿದೆ. ಚಾಮರಾಜಪೇಟೆ ಮಾರ್ಗವಾಗಿ ಗಣಪತಿ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ
Read Moreನವರಾತ್ರ ನಮಸ್ಯಾ ಕಾರ್ಯಕ್ರಮದ ಸಿದ್ಧತೆಗಳ ಪರಿಶೀಲನೆ
ಸಾಗರ: ನವರಾತ್ರ ನಮಸ್ಯಾ ಕಾರ್ಯಕ್ರಮದ ಪ್ರಯುಕ್ತ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪುರ ಪ್ರವೇಶದ ಅಲಂಕಾರವನ್ನು ಗಣ್ಯರು ವೀಕ್ಷಿಸಿದರು. ಸಾಗರದಲ್ಲಿ ಭರ್ಜರಿಯಾಗಿ ನಡೆಯುತ್ತಿರುವ ಶ್ರೀ ಗುರುಗಳ ಪುರ ಪ್ರವೇಶದ ಸುಂದರ ಅಲಂಕಾರವನ್ನು ನೋಡಲು ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್, ಮಾಜಿ ಸಚಿವ ಹರತಾಳು ಹಾಲಪ್ಪ, ನಗರಸಭಾ ಸದಸ್ಯ ಟಿ ಡಿ ಮೇಘರಾಜ್, ಪುರ ಪ್ರವೇಶ ಮತ್ತು ನಗರ ಅಲಂಕಾರ ಸಮಿತಿಯ ಸಂಚಾಲಕ ಗಣೇಶ್ ಪ್ರಸಾದ್ ಕೆ. ಆರ್., ಸಾಗರ ಪುರ ಪ್ರವೇಶ ಗೀತೆಯ ಸಂಗೀತ
Read Moreಸೆ. 20 ರಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಾಗರ ಪುರ ಪ್ರವೇಶ- ಪೂರ್ಣಕುಂಭ ಸ್ವಾಗತ
ಸಾಗರ: ಶ್ರೀ ರಾಮಚಂದ್ರಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಾಗರ ಪುರ ಪ್ರವೇಶ ಸೆ.20 ರಂದು ಸಂಜೆ 5 ಗಂಟೆಗೆ ಅತ್ಯಂತ ಅದ್ಧೂರಿ ಯಾಗಿ ನಡೆಯಲಿದೆ. ಸಾಗರ ಪೇಟೆ ಪೊಲೀಸ್ ಠಾಣೆ ಎದುರು ಪೂರ್ಣಕುಂಭ ಸ್ವಾಗತ ಹಾಗೂ ಬೃಹತ್ ಮೆರವಣಿಗೆಯಲ್ಲಿ ಶ್ರೀಗಳನ್ನು ಬರಮಾಡಿ ಕೊಳ್ಳಲಾಗುತ್ತಿದೆ ಎಂದು ಕೆ.ಎಸ್.ಗುರುಮೂರ್ತಿ ಹೇಳಿದರು. ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಸೆ. 22ರಿಂದ ಅ. 4 ರವರೆಗೆ ಸಾಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಸಭಾ ಭವನದಲ್ಲಿ ಹೊಸನಗರ ರಾಮಚಂದ್ರಪುರ ಮಠದ
Read Moreಕೌದಳ್ಳಿಯಲ್ಲಿರುವ ಗೋಫಲ ಘಟಕಕ್ಕೆ ಕನ್ನೇರಿ ಮಠದ ಪೀಠಾಧಿಪತಿಗಳ ಭೇಟಿ
ಹನೂರು: ಕೌದಳ್ಳಿಯಲ್ಲಿ ಗೋಫಲ ಟ್ರಸ್ಟ್‌ನ ಘಟಕಕ್ಕೆ ಶ್ರೀಕ್ಷೇತ್ರ ಸಿದ್ಧಗಿರಿ ಮಹಾಸಂಸ್ಥಾನ, ಕನ್ನೇರಿ ಮಠದ ಪೀಠಾಧಿಪತಿಗಳಾದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು ಭೇಟಿ ನೀಡಿದರು. 2017 ರಲ್ಲಿ ಹನೂರು ತಾಲೂಕಿನಲ್ಲಿ ಬರಗಾಲ ಸಂದರ್ಭದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ರಾಮಚಂದ್ರಪುರ ಮಠವು ಗೋವುಗಳಿಗೆ ಮೇವು ಕೊಟ್ಟಿರುವುದನ್ನು ಗಮನಕ್ಕೆ ತರಲಾಯಿತು. ಶ್ರೀ ರಾಮಚಂದ್ರಾಪುರ ಮಠವು ಈಗ ಗೋಫಲ ಟ್ರಸ್ಟಿನ ಮೂಲಕ ಸಾವಯವ ಗೊಬ್ಬರ ಘಟಕ ಮಾಡಿ ಗೋಪಾಲಕರಿಂದ ಉತ್ತಮ ಮೌಲ್ಯದೊಂದಿಗೆ ಸೆಗಣಿ ಖರೀದಿ ಮಾಡುವುದರ ಮೂಲಕ ಗೋಪಾಲಕರಿಗೆ
Read Moreಗುಂಪೆ ವಲಯದ ಸಪ್ಟಂಬರ್ ತಿಂಗಳ ಸಭೆ
ಧರ್ಮತ್ತಡ್ಕ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಸಪ್ಟಂಬರ್ ತಿಂಗಳ ಸಭೆಯು ಸೆ.3ರಂದು ವಲಯ ಕಛೇರಿಯಲ್ಲಿ ನಡೆಯಿತು. ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅಧ್ಯಕ್ಷತೆಯಲ್ಲಿ ವಹಿಸಿದ್ದರು. ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕಾನ ಗತಸಭೆಯ ವರದಿಯನ್ನು ನೀಡಿದರು. ಮುಳ್ಳೇರಿಯ ಮಂಡಲದ ಶಿಷ್ಯ ಮಾಧ್ಯಮ ಪ್ರಧಾನ ಮಹೇಶ್ ಕೃಷ್ಣ ತೇಜಸ್ವಿ ಮಾಹಿತಿಗಳನ್ನು ನೀಡಿದರು. ಸಪ್ಟಂಬರ್ 22 ರಿಂದ ಅಕ್ಟೋಬರ್ 4 ರವರೆಗೆ ಸಾಗರದ ರಾಘವೇಶ್ವರ ಭವನದಲ್ಲಿ ಜರಗುವ ನವರಾತ್ರ ನಮಸ್ಯ ಕಾರ್ಯಕ್ರಮದ ವಿವರವನ್ನು ಸಭೆಯಲ್ಲಿ ನೀಡಲಾಯಿತು ಮತ್ತು ಆಮಂತ್ರಣ
Read Moreಸೆಪ್ಟೆಂಬರ್ – ೦೭- ಹುಣ್ಣಿಮೆ – ಭಾನುವಾರ
ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಮಂಜುನಾಥ ಸುವರ್ಣಗದ್ದೆ ಮೊಕ್ಕಾಂ – ಸೇವಾಸೌಧ, ಅಶೋಕೆ ೮.೧೫ ಶ್ರೀಪೂಜೆ ೧೨.೧೦ ಪೀಠಕ್ಕೆ, ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ಸವಾರಿಯ ವಾಹನ ಚಾಲಕರಿಗೆ ಆಶೀರ್ವಾದ ೧೨.೩೦ ಸೀಮೋಲ್ಲಂಘನ ೧.೪೫ ಮಲ್ಲಿಕಾರ್ಜುನ ದೇವರದರ್ಶನ ೨.೦೦ ಸ್ವಾಗತ ಸಭೆ ಶತಕಂಠ ಗಾಯನ. ಸಂಗೀತ ಕಾರ್ಯಕ್ರಮ ದೇಣಿಗೆ ಸಮರ್ಪಣೆ ಸಾಮೂಹಿಕ ಫಲಸಮರ್ಪಣೆ ಸ್ವಾಗತ ಪ್ರಸ್ತಾವನೆ ವರದಿ ವಾಚನ ಆಶೀರ್ವನ ಮಂತ್ರಾಕ್ಷತೆ ೬.೪೦ ಶ್ರೀಪೂಜೆ
Read Moreಮಹಿಳೋದಯಕ್ಕೆ ಶ್ರೀರಾಮಚಂದ್ರಾಪುರ ಮಠದ ತಂಡ ಭೇಟಿ
ಬದಿಯಡ್ಕ: ಮುಳ್ಳೇರಿಯಾ ಮಂಡಲದ ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಮಹಿಳೋದಯ ಸಂಸ್ಥೆಗೆ ಶ್ರೀ ಮಠದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು. ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಭೇಟಿ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಉಪಾಧ್ಯಕ್ಷೆ ಕನಕವಲ್ಲಿ ಬಡಗಮೂಲೆ, ಕಾರ್ಯದರ್ಶಿ ಕಿರಣಾ ಮೂರ್ತಿ ಏತಡ್ಕ, ಜತೆ ಕಾರ್ಯದರ್ಶಿ ಕುಸುಮಾ ಪೆರ್ಮುಖ, ಲೆಕ್ಕ ಪರಿಶೋಧಕಿ ಗಾಯತ್ರಿ, ಸ್ಮಿತಾ ಸರಳಿ, ಸಿಬ್ಬಂದಿ ಶಾಂತಿ, ಜಯಪ್ರಕಾಶ ಪಜಿಲ ಜೊತೆಗಿದ್ದರು.
Read Moreಸಮರಸಭೂಮಿಗೆ ಶ್ರೀಮಠದ ಪದಾಧಿಕಾರಿಗಳು ಭೇಟಿ
ಮುಳ್ಳೇರಿಯಾ: ಚಂದ್ರಗಿರಿ ವಲಯದ ಸಮರಸಭೂಮಿಗೆ ಶ್ರೀಮಠದ ಪದಾಧಿಕಾರಿಗಳು ಭೇಟಿ ನೀಡಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ತಂಡ ಭೇಟಿಯಿತ್ತು ಸಮರಸ ಕಟ್ಟಡ ನಿರ್ಮಾಣ ಹಂತವನ್ನು – ವ್ಯವಸ್ಥೆಯನ್ನು ಕೂಲಂಕುಶವಾಗಿ ತಿಳಿದುಕೊಂಡರು. ವಾಸ್ತುತಜ್ಞ ಬೆಳ್ಳಿಗೆ ನಾರಾಯಣ ಭಟ್ಟರು ನಕ್ಷೆಯಲ್ಲಿನ ವ್ಯವಸ್ಥೆ, ಗುರುನಿವಾಸದ ವ್ಯವಸ್ಥೆ ಬಗ್ಗೆಯೂ ಸಮಗ್ರ ಮಾಹಿತಿ ನೀಡಿದರು. ಟ್ರಸ್ಟ್ ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ
Read Moreನೂತನ ಸಭಾಭವನ ‘ಹವ್ಯಗಂಧ’ದ ನಿರ್ಮಾಣ ಸ್ಥಳಕ್ಕೆ ಧರ್ಮಚಕ್ರ ಟ್ರಸ್ಟ್ ನ ಕೇಂದ್ರ ಪದಾಧಿಕಾರಿಗಳ ಭೇಟಿ
ಕಾಯರಕಟ್ಟೆ: ಬಾಯಾರು ವಲಯದ ಕಾಯರಕಟ್ಟೆಯಲ್ಲಿ ನೂತನ ಸಭಾಭವನ ಹವ್ಯಗಂಧ ನಿರ್ಮಾಣಕ್ಕೆ ಮುಂದಾಗಿರುವ ಸ್ಥಳದ ನೆಲವನ್ನು ಸಮತಟ್ಟುಮಾಡಲು ಭೂಖನನ ಕಾರ್ಯ ಪ್ರಾರಂಭಿಸಲಾಗಿದೆ. ಧರ್ಮಚಕ್ರ ಟ್ರಸ್ಟ್ ನ ಕೇಂದ್ರ ಪದಾಧಿಕಾರಿಗಳಾದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಹವ್ಯಗಂಧ ನಿವೇಶನಕ್ಕೆ ಭೇಟಿ ಕೊಟ್ಟು ಕೆಲಸದ ಮಾಹಿತಿಗಳನ್ನು ಸಂಗ್ರಹಿಸಿ, ಸಲಹೆ ಸೂಚನೆಗಳನ್ನಿತ್ತರು. ಸ್ಥಾನೀಯ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿದರು.
Read More