ಇತರೆ
ಸಾಧನಾ ಸಂಕಲ್ಪ ಪ್ರತಿಜ್ಞಾ ಸಮಾರಂಭ ಹಾಗೂ ಕಾಗೇರಿಯವರಿಗೆ ಸನ್ಮಾನ
ಬೆಂಗಳೂರು: ಇಂದು ಜನನಾಯಕರ ಕುರಿತಾಗಿ ಬಹಳಷ್ಟು ಮಾತನಾಡಲಾಗುತ್ತದೆ. ಆದರೆ ಜನರು ಹೇಗಿರುತ್ತಾರೋ ಅದೇ ರೀತಿಯ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷರಾದ ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಮಲ್ಲೇಶ್ವರದಲ್ಲಿರುವ ಶ್ರೀಅಖಿಲ ಹವ್ಯಕ ಮಹಾಸಭೆಯಲ್ಲಿ ನ.18ರಂದು ನಡೆದ ‘ಅಭಿನಂದನಾ ಸಮಾರಂಭ’ ಹಾಗೂ ‘ಸಾಧನಾ ಸಂಕಲ್ಪ’ ಕಾರ್ಯಕ್ರಮದಲ್ಲಿ ಹವ್ಯಕ ಮಹಾಸಭೆಯ ಗೌರವವನ್ನು ಸ್ವೀಕರಿಸಿ ಮಾತನಾಡಿದ ಕಾಗೇರಿಯವರು, ಸಮಷ್ಟಿ ಸಮಾಜದ ಎಲ್ಲಾ ವಿಭಾಗಗಳಲ್ಲಿ ಹವ್ಯಕರು ತಮ್ಮ ಪ್ರತಿಭಿಯಿಂದ ನಮ್ಮ ಸಮಾಜವನ್ನು ನಾಡು ಗುರುತಿಸುವಂತೆ ಆಗಿದೆ. ಸಮಾಜದ ಸಂಘಟನೆ
Read Moreಗುಂಪೆ ಹವ್ಯಕ ವಲಯ ಸಭೆ
ಗುಂಪೆ: ಮುಳ್ಳೇರಿಯಾ ಮಂಡಲಾಂತರ್ಗತ ಗುಂಪೆ ವಲಯದ ಸಭೆ ಹಳಕೋಡ್ಲು ಘಟಕದ ಅಧ್ಯಕ್ಷರಾದ ಗಣಪತಿ ಭಟ್ ಅವರ ನಿವಾಸದಲ್ಲಿ ನ.೩ರಂದು ಜರಗಿತು. ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಗತ ಸಭೆಯ ವರದಿ, ಮಹಾಮಂಡಲ ಸುತ್ತೋಲೆ,ಮಂಡಲ ವರದಿಗಳನ್ನು ಮಂಡಿಸಿದರು. ಪದಾಧಿಕಾರಿಗಳು ವಹಿಸಿಕೊಂಡಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ವಿಭಾಗವಾರು ಮಾಹಿತಿಗಳನ್ನು ನೀಡಿದರು. ಜನವರಿ ತಿಂಗಳಿನಲ್ಲಿ ಸಮರ್ಪಿಸುವ ದೀಪಕಾಣಿಕೆ,ಗುರುಕುಲ ಕಾಣಿಕೆ, ಹಾಗೂ ಬೆಳೆ ಸಮರ್ಪಣೆ, ಉತ್ಸವ ಕಾಣಿಕೆಯ ಬಗ್ಗೆ ಮಾಹಿತಿ ನೀಡಿ ಮಾಹಿತಿ ನೀಡಿ,
Read Moreಪ್ರತಿಭಾ ಪುರಸ್ಕಾರ – ಸನ್ಮಾನ ಕಾರ್ಯಕ್ರಮ
ವಿಟ್ಲ: ಮಂಗಳೂರು ಹವ್ಯಕ ಮಂಡಲಾಂತರ್ಗತ ವಿಟ್ಲ ಹವ್ಯಕ ವಲಯದ ೨೧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪದೋನ್ನತಿ ಹೊಂದಿದ ವಲಯ ಕೋಶಾಧಿಕಾರಿಯವರ ಸಮ್ಮಾನ ಸಮಾರಂಭ ವಿಟ್ಲ ಬೊಬ್ಬೆಕೇರಿ ಸೌಪರ್ಣಿಕಾ ಸಭಾಭವನದಲ್ಲಿ ಭಾನುವಾರ ನಡೆಯಿತು. ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಂಘಟನೆ ಬಲಿಷ್ಠವಾಗಿದೆ. ಪರಂಪರೆಯ ಮಹತ್ವವನ್ನು ಸಾರುತ್ತ, ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಾಧನೆಯನ್ನು ಸಮಾಜಕ್ಕೆ ಅರ್ಪಿಸಿದ ಅವರು ದೇಸೀ ಗೋಸಂರಕ್ಷಣೆಗೆ ಮಹತ್ವದ
Read Moreಕನ್ಯಾನದಲ್ಲಿ ರಾಮಾಯಣ ಪಾರಾಯಣ
ಕನ್ಯಾನ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪದಂತೆ ಅ.೨೧ರಂದು ಪ್ರಾರಂಭಿಸಿ ಅ.೨೯ g ವರೆಗೆ ಕನ್ಯಾನ ಹವ್ಯಕ ವಲಯದಲ್ಲಿ ರಾಮಾಯಣ ಪಾರಾಯಣ ನಡೆಯಿತು. ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಂಗಳವಾರ ಪ್ರತಿ ರುದ್ರ ಪಾರಾಯಣ ಮತ್ತು ವಿಷ್ಣು ಸಹಸ್ರನಾಮ ಪಠಣದೊಂದಿಗೆ ಸಮಾಪನಗೊಂಡಿದೆ. ರಾಮಾಯಣದ ಅರ್ಥವಿವರಣೆಯನ್ನು ವೇದಮೂರ್ತಿ ಶಂಕರ ಭಟ್ಟರು ನೆರವೇರಿಸಿದರು. ಸಮಾರೋಪ ಸಮಾರಂಭದಲ್ಲಿ ಕನ್ಯಾನ ಹವ್ಯಕ ವಲಯ ಅಧ್ಯಕ್ಷ ಈಶ್ವರಪ್ರಸಾದ್, ಕಾರ್ಯದರ್ಶಿ ರವಿಶಂಕರ ಪನೆಯಡ್ಕ ಮತ್ತು ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಸರ್ವ ಸದಸ್ಯರು
Read Moreವಾಲ್ಮೀಕಿ ರಾಮಾಯಣ ಪಾರಾಯಣ
ಸಾಗರ: ಜೀವನ ಅರ್ಥವಾಗಲು, ಸಾರ್ಥಕವಾಗಲು ರಾಮಾಯಣ ಮಹಾಕಾವ್ಯ ಮಾರ್ಗದರ್ಶಕ ಎಂದು ಮಹಾಮಂಡಲ ವೈದಿಕ ಪ್ರಧಾನ ವೇದಮೂರ್ತಿ ನೀಲಕಂಠಯಾಜಿ ಹೇಳಿದರು. ಇಲ್ಲಿನ ಬನ್ನಿಕಟ್ಟೆ ರಸ್ತೆಯ ಶ್ರೀರಾಘವೇಶ್ವರ ಸಭಾಭವನದಲ್ಲಿಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿಯವರ 1008 ವಾಲ್ಮೀಕಿ ರಾಮಾಯಣ ಪಾರಾಯಣ ಸಂಕಲ್ಪದ ಅಂಗವಾಗಿ ಹಮ್ಮಿಕೊಂಡ 21 ವೈದಿಕರಿಂದ ಪಾರಾಯಣ ಮಹಾಪರ್ವದ ಮಂಗಲೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡ ಕಾರ‍್ಯಕ್ರಮದಲ್ಲಿಅವರು ಸಮಾರೋಪ ಭಾಷಣ ಮಾಡಿದರು. ವಿದ್ವಾನ್ ಎನ್.ಎಸ್.ಗಣಪತಿಭಟ್ ಮಾತನಾಡಿದರು. ವಾಲ್ಮೀಕಿ ಮಹಾಗ್ರಂಥಕ್ಕೆ ಸಾಮೂಹಿಕ ಮಂಗಳಾರತಿ ಮಾಡಲಾಯಿತು. ಸಭಾಭವನದ ಅಧ್ಯಕ್ಷ ಹರನಾಥ್ ರಾವ್ ಮತ್ತಿಕೊಪ್ಪ ಅಧ್ಯಕ್ಷತೆ
Read More