|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸ್ಮಾರ್ಟ್ ತರಗತಿ ಉದ್ಘಾಟನೆ

ನಂತೂರು: ಫಾಲ್ಗುನ ಕೃಷ್ಣ ನವಮಿಯಂದು (12-03-2026) ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಸ್ಮಾರ್ಟ್ ತರಗತಿ ಉದ್ಘಾಟಿಸಲಾಯಿತು. ಮಂಗಳೂರು ಆರ್.ಆರ್.ವಿ.ಎಸ್. ಮತ್ತು ಕೋ ಎಲ್.ಎಲ್.ಪಿ. ಚಾರ್ಟರ್ಡ್ ಅಕೌಂಟೆಂಟ್ಸ್ ಪಾಲುದಾರ ವಿಘ್ನೇಶ ಎಮ್. ಅವರು ಉದ್ಘಾಟಿಸಿ ‘ಇದು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಮತ್ತು ಆವಶ್ಯಕ. ಪರಿಣಾಮಕಾರಿ ಶಿಕ್ಷಣಕ್ಕೆ ಒತ್ತು ನೀಡಿದ ಆಡಳಿತ ಮಂಡಳಿ ಉತ್ತಮ ಭವಿಷ್ಯ ರೂಪಿಸುವ ಕೈಂಕರ್ಯ ಮಾಡಿದೆ’ ಎಂದು ಹೇಳಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ‌ ಕಾಶಿಮಠ ಅಧ್ಯಕ್ಷತೆ ವಹಿಸಿ ‘ಈ ತಾಂತ್ರಿಕ ವ್ಯವಸ್ಥೆಯನ್ನು ಶಿಕ್ಷಕರು ಬಳಸಿ, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲು

Read More

ರಕ್ತಬಂಧ ~ ಸೇವಾಬಂಧ

ಬೆಂಗಳೂರು: ಶಾಸನತಂತ್ರದ ಸೇವಾಖಂಡ ಹಾಗೂ ಬೆಂಗಳೂರು ದಕ್ಷಿಣ-ಉತ್ತರ ಮಂಡಲಗಳ ಸಹಯೋಗದಲ್ಲಿ, ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಕಾರದಲ್ಲಿ 22-03-2026 ರಂದು ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಸಂಪನ್ನಗೊಂಡಿತು. ದಕ್ಷಿಣ ಮಂಡಲಾಂತರ್ಗತ ವಿಜಯನಗರ ವಲಯೋತ್ಸವವೂ ನಡೆಯಿತು.   ಪರಮಪೂಜ್ಯ ಶ್ರೀಸಂಸ್ಥಾನದವರ ಸಂನ್ಯಾಸಸ್ವೀಕಾರ ದಿನವಾದ ಚೈತ್ರ ಶುಕ್ಲ ಚೌತಿಯಂದು ನಡೆದ ಈ ಸಮಾಜಮುಖಿ ಶಿಬಿರದಲ್ಲಿ ಒಟ್ಟು 62 ರಕ್ತದಾನಿಗಳು ಭಾಗವಹಿಸಿ ಪುಣ್ಯಭಾಜನರಾದರು. ಕಾರ್ಯಕ್ರಮಕ್ಕೆ ಯೋಜನಾಖಂಡದ ಶ್ರೀಸಂಯೋಜಕರಾದ ವಿದ್ವಾನ್ ಜಗದೀಶಶರ್ಮಾ ಸಂಪ, ಶಾಸನತಂತ್ರದ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಎಡಪ್ಪಾಡಿ ಅಭ್ಯಾಗತರಾಗಿದ್ದರು. ಮಹಾಮಂಡಲ ಉಪಾಧ್ಯಕ್ಷರಾದ ಜಿ. ಜಿ. ಹೆಗಡೆ

Read More

ಪ್ರಕಲ್ಪಗಳ ಲೋಕಾರ್ಪಣೆ

  ಕಾಸರಗೋಡು: ಮುಜುಂಗಾವಿನ ಶ್ರೀಭಾರತೀ ವಿದ್ಯಾಪೀಠದಲ್ಲಿ ನೂತನ ಭೋಜನ ಶಾಲೆ ಹಾಗೂ ಸ್ಮಾರ್ಟ್ ಕ್ಲಾಸ್ ಕೊಠಡಿ, ಮತ್ತು ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಕೌಶಲಾಭಿವೃದ್ಧಿ ಪ್ರಯೋಗಾಲಯ ಹಾಗೂ ಕೌಶಲ ಪ್ರದರ್ಶನ ಪ್ರಾಂಗಣಗಳ ಲೋಕಾರ್ಪಣೆ ಫಾಲ್ಗುನ ಕೃಷ್ಣ ತದಿಗೆಯಂದು (06-03-2026) ನಡೆಯಿತು. ಹೆಚ್. ಎ. ಎಲ್. ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ವಿಭಾಗ (ಸಿ. ಎಸ್. ಆರ್.) ಪ್ರಾಯೋಜಿಸಿರುವ ಈ ಪ್ರಕಲ್ಪಗಳನ್ನು ಹೆಚ್. ಎ. ಎಲ್. ಸಂಸ್ಥೆಯ ಮಾನವ ಸಂಪನ್ಮೂಲ ನಿರ್ದೇಶಕರಾದ ಎಮ್. ಜಿ. ಬಾಲಸುಬ್ರಹ್ಮಣ್ಯ ಅವರು ಲೋಕಾರ್ಪಣೆಗೊಳಿಸಿದರು. ‘ಈ ಕಾರ್ಯಕ್ರಮದಲ್ಲಿ

Read More
ರಕ್ತದಾನ ಶಿಬಿರ – ಪಾಲ್ಗೊಳ್ಳಲು ಕರೆ

ಶ್ರೀರಾಮಚಂದ್ರಾಪುರ ಮಠವು ನಿರಂತರವಾಗಿ ಸಮಾಜದ ಒಳಿತನ್ನು ಬಯಸುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿರುವುದು ಸರ್ವವಿದಿತ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂನ್ಯಾಸ ಸ್ವೀಕಾರದ ದಿನದಂದು ಶ್ರೀಮಠದ ಶಾಸನತಂತ್ರದ ಸೇವಾಖಂಡವು ಬೆಂಗಳೂರಿನ ದಕ್ಷಿಣ ಹಾಗೂ ಉತ್ತರ ಮಂಡಲಗಳ ಸಹಕಾರದೊಂದಿಗೆ *ರಕ್ತಬಂಧ* ಎನ್ನುವ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದೆ. ದಿನಾಂಕ: ಮಾರ್ಚ್ 22, 2026 ಸಮಯ: ಬೆಳಗ್ಗೆ 9 ರಿಂದ ಅಪರಾಹ್ಣ 3 ಗಂಟೆಯವರೆಗೆ ಸ್ಥಳ: ಶ್ರೀಭಾರತೀ ವಿದ್ಯಾಲಯ, ವಿಜಯನಗರ, ಬೆಂಗಳೂರು ಆಸಕ್ತ , ಅರ್ಹ

Read More
ಹವ್ಯಗಂಧ ಸಭಾಭವನದ ಶಿಲಾನ್ಯಾಸ

  ಮಂಜೇಶ್ವರ: ಫಾಲ್ಗುನ ಶುದ್ಧ ದಶಮಿಯಂದು (26-02-2026) ಹವ್ಯಗಂಧ ಸಭಾಭವನದ ಭೂಮಿಪೂಜೆ ಹಾಗೂ ಶಿಲಾನ್ಯಾಸಗಳು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದಿಂದ ಸುಸಂಪನ್ನಗೊಂಡಿತು. ಹವ್ಯಕ ಮಹಾಮಂಡಲಾಂತರ್ಗತ ಮಂಗಳೂರು ಮಂಡಲದ ವೈದಿಕ ಪ್ರಧಾನರಾದ ವೇದಮೂರ್ತಿ ಮುಗುಳಿ ಶ್ರೀರಾಮ ಭಟ್ಟರು ವಿಧ್ಯುಕ್ತವಾಗಿ ನೆರವೇರಿಸಿದರು. ವಿಶೇಷ ಆಹ್ವಾನಿತರಾಗಿ ಡಾ. ಮಾವೆ ಶ್ರೀಧರ ಭಟ್ಟರು ಭಾಗವಹಿಸಿದರು. ಪವಿತ್ರ ಮಂಗಲದ್ರವ್ಯಗಳಿಂದ ಅರ್ಚಿಸಿ, ಶಂಕುಸ್ಥಾಪನೆಯನ್ನು ಮಾಡಲಾಯಿತು. ರವಿರಾಮ ಸಿದ್ಧಮೂಲೆಯವರು ದೈವಜ್ಞ, ಶಿಲ್ಪಿಗಳ ಸ್ಥಾನವನ್ನು ನಿರ್ವಹಿಸಿದರು. ಕಾಮಗಾರಿಯ ನಿರ್ವಹಣೆ ಮಾಡಲಿರುವ ಮೇಸ್ತ್ರಿಯವರನ್ನು ಗೌರವಿಸಲಾಯಿತು. ಅದಕ್ಕೆ ಮುನ್ನ

Read More
ಪ್ರಧಾನಮಠ ಪುನರ್ನಿರ್ಮಾಣ ಸಂಭ್ರಮದ ನಡುವೆ ನೆನಪಿನ ಅವಿಸ್ಮರಣೀಯ ಕ್ಷಣಗಳು

  ಅದು 1999ರ ಸಮಯ. ಅಪ್ಪನ ಜೊತೆ ರಾಮೋತ್ಸವಕ್ಕೆಂದು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಬಂದಿದ್ದ ನನಗೆ ವಿಸ್ಮಯವಾಗಿತ್ತು. ಅಂದು ಜಾತ್ರೆಯೇ ಎಂಬಂತೆ ನೆರೆದಿತ್ತು ಜನ ಸಾಗರ. ಮಠದ ತುಂಬೆಲ್ಲ ಶೃಂಗಾರ, ಮಂತ್ರಗಳ ಸುಸ್ವರ, ತೇರಿನ ಸಡಗರ, ಸುತ್ತಲೂ ಹಚ್ಚ ಹಸಿರಿನ ಚಿತ್ತಾರ, ಅಪರೂಪದ ದಂತ ಸಿಂಹಾಸನ. ಓ, ಸ್ವರ್ಗವೇ ಧರೆಗಿಳಿದಂತಿತ್ತು.   ಚಿಕ್ಕವಳಾಗಿದ್ದ ನನಗೆ ಇದನ್ನೆಲ್ಲಾ ನೋಡುವುದೇ ಒಂದು ವಿಸ್ಮಯ. ಜಗತ್ತಿನ ಏಕೈಕ ಅವಿಚ್ಛಿನ್ನ ಪರಂಪರೆ, ಅಗಸ್ತ್ಯ ಮುನಿಗಳು ಪೂಜಿಸುತ್ತಿದ್ದ ರಾಮಾದಿ ವಿಗ್ರಹಗಳು, ಚಂದ್ರಮೌಳೀಶ್ವರ ಲಿಂಗ, ರಾಜರಾಜೇಶ್ವರಿ,

Read More
ಆಲೆಮನೆಯ ಆನಂದದ ಅಲೆ

  ಕುಮಟ: ಹೊಸಾಡದ ಭಾರತೀಯ ಗೋ ಬ್ಯಾಂಕ್ ಗೋಶಾಲೆಯಲ್ಲಿ ಕಾಮಧೇನುವಿನ ಸನ್ನಿಧಿಯಲ್ಲಿ ಕಾಮಧೇನು ಹವನ ಮುಂತಾದ ಕಾರ್ಯಕ್ರಮಗಳೊಂದಿಗೆ ಆಲೆಮನೆ ಹಬ್ಬ ನಾಲ್ಕು ದಿವಸಗಳ ಕಾಲ ನಡೆಯಿತು. ಈ ಕಾರ್ಯಕ್ರಮವು 19-02-2026 ರಂದು ಆರಂಭವಾಯಿತು. ಇದರ ಅಂಗವಾಗಿ ಉಪಾಸನಾ ಕಾರ್ಯಕ್ರಮಗಳು ಆರಂಭವಾದುವು. ಅನೇಕರು ಕಾಮಧೇನುವಿನ ಸನ್ನಿಧಿಯಲ್ಲಿ ವಿವಿಧ ಪೂಜೆಗಳನ್ನು ಸಲ್ಲಿಸಿದರು. ಪ್ರಥಮ ದಿನದಂದು ವಿಶೇಷವಾಗಿ ವೈದಿಕ ಸಮಾವೇಶ ಕಾರ್ಯಕ್ರಮವು ಜರುಗಿತು. ವೈದಿಕರಿಂದ ದೀಪ ಬೆಳಗುವುದರೊಂದಿಗೆ ಆಲೆಮನೆ ಹಬ್ಬದ ಮೊದಲ ದಿನದ ಸಭಾ ಕಾರ್ಯಕ್ರಮ ಶುಭಾರಂಭಗೊಂಡಿತು. ಸಭಾ ಕಾರ್ಯಕ್ರಮದ ಅನಂತರ

Read More
ಶಕಟಪುರದಲ್ಲಿ ಶ್ರೀಪೂರ್ಣಾಭಿಷೇಕ

ಶಕಟಪುರ: ಫಾಲ್ಗುನ ಶುಕ್ಲ ಪಂಚಮಿಯಂದು (22-02-2026) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀಕ್ಷೇತ್ರ ಶಕಟಪುರದ ಶ್ರೀವಿದ್ಯಾಪೀಠದ ಪರಮಪೂಜ್ಯ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರ ಶ್ರೀವಿದ್ಯಾಮಹಾಸನಾರೋಹಣದ ಶ್ರೀಪೂರ್ಣಾಭಿಷೇಕವನ್ನು ನೆರವೇರಿಸಿದರು. ಅನಂತರ ಧರ್ಮಸಭೆಯಲ್ಲಿ ಆಶೀರ್ವಚನವನ್ನು ಅನುಗ್ರಹಿಸಿದರು. ‘ಇದು ಜಗತ್ತಿನ ಎಲ್ಲ ಆಸ್ತಿಕರು ಹೆಮ್ಮೆ ಪಡಬೇಕಾದ ಕಾರ್ಯಕ್ರಮ. ಎಲ್ಲ ಸಂತರೂ ಸಮಾಧಾನ ಪಡುವ ಕಾರ್ಯಕ್ರಮ’ ಎಂದು ವೈಭವೋಪೇತವಾಗಿ ನಡೆದ ಶ್ರೀಪೂರ್ಣಾಭಿಷೇಕದ ಬಗ್ಗೆ ನುಡಿದರು. ‘ಇಲ್ಲಿನ ಸಿಂಹಾಸನ ಬಹಳ ದೊಡ್ಡದು. ಏಕೆಂದರೆ ಈ ಪರಂಪರೆಯೂ ಬಹಳ ದೊಡ್ಡದು. ಬದರಿಯಿಂದ ಇಲ್ಲಿಗೆ

Read More
ಅಂಗಸಂಸ್ಥೆಗಳಲ್ಲಿ ಶಿವಾರಾಧನೆ

ವಿಶ್ವಾವಸು ಸಂವತ್ಸರದ ಮಾಘ ಕೃಷ್ಣ ಚತುರ್ದಶಿಯಂದು (15-02-2026) ಶಿವರಾತ್ರಿ ಹಬ್ಬ ಜಗದಗಲ ವಿವಿಧ ರೀತಿಯಲ್ಲಿ ಆಚರಿಸಲ್ಪಟ್ಟಿದೆ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅನುಗ್ರಹ ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀರಾಮಚಂದ್ರಾಪುರ ಮಠದ ವಿವಿಧ ಅಂಗಸಂಸ್ಥೆಗಳಲ್ಲಿಯೂ ಸಡಗರದಿಂದ ಶಿವರಾತ್ರಿ ಮಹಾರಾಧನೆ ನಡೆಸಲಾಯಿತು. ಮಹಾಶಿವರಾತ್ರಿಯ ದಿನದಂದು ಅಶೋಕೆಯ ಶ್ರೀಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಮೃತ್ಯುಂಜಯ ಶಾಂತಿ-ರುದ್ರಹವನಗಳಲ್ಲದೇ, ವಿಶೇಷವಾಗಿ ರಾತ್ರಿ ನಾಲ್ಕು ಯಾಮಗಳಲ್ಲಿ ರುದ್ರಪಠನ ನಡೆಯಿತು. ಸಂಗೀತ, ಯಕ್ಷಗಾನ, ಭರತನಾಟ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮರ್ಪಿತಗೊಂಡವು. ಪರಮಪೂಜ್ಯ ಶ್ರೀಸಂಸ್ಥಾನದವರು ಶ್ರೀಗಣಪತಿ ಮತ್ತು ಶ್ರೀಮಲ್ಲಿಕಾರ್ಜುನ ಸಾನ್ನಿಧ್ಯಗಳ

Read More
ಗೋವೆಂಬ ದೀಪಕ್ಕಿದೋ ದೀಪೋತ್ಸವ ಸೇವೆ

ಕೈರಂಗಳ: ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಡೆದ ಗೋಸೇವಾ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಮಾಘ ಕೃಷ್ಣ ದಶಮಿಯಂದು (ಫೆಬ್ರವರಿ 12) ನಡೆಯಿತು. ಆ ದಿನ ರಾತ್ರಿ 8:00 ಘಂಟೆಯಿಂದ ಗೋಮಾಸಾಚರಣೆಯ ಮಂಗಲ ಮಹೋತ್ಸವರೂಪವಾದಂತಹ ‘ದೀಪೋತ್ಸವ’ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಮಕರ ಸಂಕ್ರಾಂತಿಯಂದು ಆರಂಭಗೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ಕಾರ್ಯಕ್ರಮವು ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ವಿಶೇಷವಾಗಿ ಗೋ ಸೇವೆಯು ವೈಭವೋಪೇತವಾಗಿ, ಭಕ್ತಿ-ಶ್ರದ್ಧಾಪುರಃಸರವಾಗಿ ನಡೆಯಿತು. ಇಂತು ಗೋ ಸೇವಾ ಮಾಸಾಚರಣೆಯು ಯಶಸ್ವಿಗೊಂಡಿತು.

Read More
ಶಂಕರಶ್ರೀ ವಸಂತ ವೇದಪಾಠಶಾಲೆ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹಗಳೊಂದಿಗೆ ಮೂರನೇ ವರ್ಷದ ಶಂಕರಶ್ರೀ ವಸಂತ ವೇದ ಪಾಠಶಾಲೆ ಭಾರತೀ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿರುವ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಹಯೋಗದೊಂದಿಗೆ 2026ನೇ ಎಪ್ರಿಲ್ 15 ಬುಧವಾರದಿಂದ ಮೇ 17 ಆದಿತ್ಯವಾರದವರೆಗೆ ಮಂಗಳೂರಿನ ನಂತೂರು ಶ್ರೀಭಾರತೀ ಕಾಲೇಜು ಆವರಣದಲ್ಲಿರುವ ಶಂಕರಶ್ರೀ ಸಭಾಭವನದಲ್ಲಿ ವೇದ ಪಾಠ ಶಿಬಿರವು ನಡೆಯಲಿರುವುದು. ಈ ಶಿಬಿರದಲ್ಲಿ ಸಂಧ್ಯಾವಂದನೆ, ಸೂಕ್ತ, ಸಂಸ್ಕೃತ ಶ್ಲೋಕಗಳ ಕಲಿಕೆಯ ಜೊತೆಗೆ ಯೋಗ, ವ್ಯಕ್ತಿತ್ತ್ವ ವಿಕಸನದ

Read More
ವೀಣಾ-ಮೃದಂಗ ವೈಭವ

  ಕೈರಂಗಳ: ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಮಕರ ಸಂಕ್ರಾಂತಿಯಂದು (ಜನವರಿ 14) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆರಂಭವಾದ ‘ಗೋಸೇವಾ ಮಾಸಾಚರಣೆ’ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಗೋಸೇವೆ ಹಾಗೂ ಭಜನೆ ಸೇವೆ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಅಂಗವಾಗಿ ಮಾಘ ಕೃಷ್ಣ ಸಪ್ತಮಿಯಂದು (ಫೆಬ್ರವರಿ 8) ‘ವೀಣಾ-ಮೃದಂಗ ವೈಭವ’ ಕಾರ್ಯಕ್ರಮ ಜರುಗಿತು. ‘ಸಂಗೀತ ಕಲಾ ದಂಪತಿ’ ಎಂದೇ ವಿಖ್ಯಾತರಾದ ವಿದುಷಿ ವೈ. ಜಿ. ಶ್ರೀಲತಾ ನಿಕ್ಷಿತ್ ಮತ್ತು ವಿದ್ವಾನ್‌ ಪುತ್ತೂರು ನಿಕ್ಷಿತ್ ಇವರು ಈ ಕಾರ್ಯಕ್ರಮವನ್ನು

Read More
ಶ್ರೀ ಸಿದ್ಧಾಂಜನೇಯ ಸ್ವಾಮಿಗೆ ಬೆಳ್ಳಿಯ ಕಲಶ ಸಮರ್ಪಣೆ

  ಮಾಲೂರು: ಮಾಲೂರು ಶ್ರೀ ಸಿದ್ಧಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಹೈದರಾಬಾದ್ ನಿವಾಸಿಯಾದ ಕಿರಣ್ ಎಂಬವರು ಸಲ್ಲಿಸಿದ ಪ್ರಾರ್ಥನೆಯು ನೆರವೇರಿದುದರಿಂದ ಮತ್ತೆ ಈ ದೇವಾಲಯಕ್ಕೆ ಭೇಟಿಯಿತ್ತರು. ಅಲ್ಲದೇ ಭಕ್ತಿಯಿಂದ ಮೂರು ಬೆಳ್ಳಿಯ ಕಲಶಗಳನ್ನು ಶ್ರೀ ಸಿದ್ಧಾಂಜನೇಯ ಸ್ವಾಮಿಗೆ ಸಮರ್ಪಿಸಿದರು.

Read More
ವಿಶಿಷ್ಟ ಕಾರ್ಯಕ್ರಮವಿದು ಕಾಂಚನೋತ್ಸವ…

ಪುತ್ತೂರು: ಪುತ್ತೂರು ತಾಲೂಕಿನ ಕಾಂಚನ ಬಜತ್ತೂರು ಎಂಬಲ್ಲಿ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ ಎಂಬಲ್ಲಿ ಎಷ್ಟೋ ವತ್ಸರಗಳಿಂದ ಸಂಗೀತ ಸೇವೆಯು ನಡೆಯುತ್ತಾ ಬಂದಿದೆ. ಸಂಗೀತದ ಅಧ್ಯಯನ-ಅಧ್ಯಾಪನಗಳು ನಡೆಯುತ್ತಾ ಬಂದಿವೆ. ಸ್ವಸ್ತಿ ಶ್ರೀ ವಿಶ್ವಾಸು ನಾಮ ಸಂವತ್ಸರದ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು, ಮಕರ ಮಾಸ ೨೨ ಸಲ್ಲುವ ಅಂದರೆ 5-2-2026 ರಿಂದ 7-2-2026 ರಿ ವರೆಗೆ ಈ ಸಂಸ್ಥೆಯ ಸ್ಥಾಪಕಗುರುವಾದ ಸಂಗೀತರತ್ನ, ಋಷಿಗಂಧರ್ವ ವಿ. ಕಾಂಚನ ವೆಂಕಟಸುಬ್ಬರತ್ನಂ ಅವರ 105 ನೇ ಜನ್ಮವಾರ್ಷಿಕದ ಅಂಗವಾಗಿ

Read More
ಗೋ-ಗೋವರ್ಧನಗಿರಿಧಾರಿಗಳಾರಾಧನೆಗಿದೋ ಸುವರ್ಣಾವಕಾಶ…

ಹೊಸನಗರ: ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕ ಎಂಬ ಗೋಶಾಲೆಯಲ್ಲಿ ಮುಂದಿನ ತಿಂಗಳು ಫೆಬ್ರವರಿ 25 ರಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ “ಕೃಷ್ಣಾರ್ಪಣಮ್ ~ ಗೋದೀಪ ಮಹೋತ್ಸವ” ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ. ತನ್ನ ಸಂಪೂರ್ಣ ಜೀವಿತಾವಧಿಯೂ ವಾತ್ಸಲ್ಯದಿಂದ ನಮ್ಮನ್ನು ಪೊರೆಯುವ ಗೋಮಾತೆಯನ್ನು ಪ್ರೀತಿಯಿಂದ ಆರಾಧಿಸುವ “ಗೋದೀಪ ಮಹೋತ್ಸವ” ಕಾರ್ಯಕ್ರಮ ನಡೆಯಲಿದೆ. ಅಂತೆಯೇ ನಂದಗೋಕುಲದಲ್ಲಿ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಲೋಸುಗ ಗೋವರ್ಧನಗಿರಿಯನ್ನೆತ್ತಿದ, ಸಮಸ್ತ ಗೋವಂಶಕ್ಕೆ ಶ್ರೀರಕ್ಷೆಯಾಗಿ ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಶ್ರೀಗೋವರ್ಧನಗಿರಿಧಾರಿ

Read More
ಆರೋಹಿ ಚತುರ್ಥ ಸಂಗೀತ ಸಮಾರೋಹ ಜ. 24, 25 ಕ್ಕೆ – ವಿ.ವಿ.ವಿ.ಯ ಸ್ಮರಾತ್ಮ ಗುರುಕುಲ ಪ್ರಾಚಾರ್ಯರಾದ ಡಾ| ಹರೀಶ ಹೆಗಡೆಯವರಿಗೆ ಆರೋಹಿ ಸಾಧಕ ಪ್ರಶಸ್ತಿ

  ನಿರಂತರ ಹಿಂದುಸ್ಥಾನಿ ಗಾಯನ ಮೂಲಕ ತರಬೇತಿಯ ತರಗತಿಗಳು, ರಾಜ್ಯ ಮಟ್ಟದ ಖ್ಯಾಲ್ ಗಾಯನ ಸ್ಪರ್ಧೆ, ಧ್ವನಿ ಸಂಸ್ಕಾರ ರಸಗ್ರಹಣ ಶಿಬಿರಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಶಿರಸಿಯನ್ನು ಕೇಂದ್ರವಾಗಿರಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಶಿರಸಿಯ ನೆಮ್ಮದಿ ಆವರಣದ ರಂಗಧಾಮದಲ್ಲಿ ಜ.24, ಶನಿವಾರ ಮಧ್ಯಾಹ್ನ 3 ರಿಂದ ರಾತ್ರಿ 9 ಹಾಗೂ ದಿನಾಂಕ ಜ.25, ಭಾನುವಾರ, ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಎರಡು ದಿನಗಳ ಕಾಲ “ಚತುರ್ಥ

Read More
ಶ್ರೀಗುರುಕೃಪೆಯ ಬೆಳಕಲ್ಲಿ ಜಾಗೃತವಾದ ಧರ್ಮಪಥ

ಜ್ಞಾನದ ದಾರಿಗೆ ಸ್ಥಾನ, ಧರ್ಮದ ಮಾರ್ಗಕ್ಕೆ ಸೂತ್ರದ ಅಗತ್ಯವಿದೆ. ಕಷ್ಟಗಳನ್ನು ಕೇಳುವ, ಉದ್ದಾರಕ್ಕೆ ದಾರಿ ತೋರಿಸುವ ಜತೆಗೆ ಹತ್ತು ಹಲವು ಶುಭಚಿಂತನೆಗಳನ್ನು ಇಟ್ಟುಕೊಂಡು ಮಠ ನಿರ್ಮಾಣವಾಗಿದೆ. ಗುರು ಪರಂಪರೆ ಹಾಗೂ ಶಿಷ್ಯರು ಸಂಗಮಗೊಳ್ಳುವ ಮಠಕ್ಕೆ ವಿಶೇಷ ಮಹತ್ವವಿದೆ. ಮಠದ ಸತ್ವ, ಪ್ರೇರಣೆ ನಮ್ಮ ಒಳಗೆ ಬರಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಮಾಣಿ ಜನಭವನದಲ್ಲಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಸಪರಿವಾರ ಶ್ರೀರಾಮ ದೇವರ ಪ್ರತಿಷ್ಠಾ ವರ್ಧಂತಿ, ಮಂಗಳೂರು ಹೋಬಳಿಯ ವಾರ್ಷಿಕೋತ್ಸವದ

Read More
ಕುಟುಂಬವೇ ಸಂಸ್ಕೃತಿಯ ಸಂಜೀವಿನಿ

ಕಾರ್ಯಕರ್ತರಲ್ಲಿ ಭಾವ ಭಕ್ತಿ ಇದ್ದಾಗ ಸಂಖ್ಯೆ ಮುಖ್ಯವಾಗುವುದಿಲ್ಲ. ಗುರು ಹಾಗೂ ಶಿಷ್ಯ ಪರಂಪರೆ ಅವಿಚ್ಛಿನ್ನವಾಗಿ ಮುನ್ನಡೆಯಬೇಕು. ಕುಟುಂಬಗಳು ಕ್ಷೀಣಿಸುತ್ತಿದ್ದು, ಇದನ್ನು ತಪ್ಪಿಸಲು ಸಮಷ್ಠಿಯ ಭಾವ ಬರಬೇಕಾಗಿದೆ. ಆತ್ಮ ಬಲ ತುಂಬಿದ ಶಿಷ್ಯರ ತುಲಾಭಾರ ಹೆಚ್ಚು ನಡೆಯಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀಗುರುಗಳ ಸುವರ್ಣ ವರ್ಧಂತಿ ವರ್ಷಾಚರಣೆ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಕ್ಕಳ ಹೃದಯದಲ್ಲಿ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಬೇಕು.

Read More
ಕುಟುಂಬ ಮಂಗಲದ ಶ್ರೀಸಂದೇಶ – ಐಕ್ಯದಿಂದಲೇ ಶ್ರೇಯಸ್ಸು

ಧರ್ಮಯುಕ್ತವಾದ ಪೀಳಿಗೆಯನ್ನು ಬೆಳೆಸುವ ಪ್ರಯತ್ನ ಸಮಾಜದಲ್ಲಿ ನಡೆಯಬೇಕು. ಮಠ ಸಮಾಜದ ಶಕ್ತಿ ಕೇಂದ್ರವಾಗಿ ಬೆಳೆದು ಬಂದಿದೆ. ಕುಟುಂಬ ಎಂಬುದು ಸಮಷ್ಠಿಯಿಂದ ಐಕ್ಯಮತ್ಯೆಯಿಂದ ಇರಬೇಕು. ಕುಟುಂಬಕ್ಕೆ ಒಂದೇ ಮನಸ್ಸು ಇದ್ದಾಗ ಶ್ರೇಯಸ್ಸಾಗುತ್ತದೆ. ಕುಟುಂಬ ಸಾಗುವ ದಾರಿ ತಪ್ಪಾಗಿರದೆ, ಐಕ್ಯಕ್ಕಾಗಿ ಸ್ವಾರ್ಥವನ್ನು ಬಲಿಕೊಡಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನವೀಕೃತ ಶ್ರೀರಾಘವೇಶ್ವರ ಭಾರತೀ ಗುರುಕುಲ ಕಟ್ಟಡ ಲೋಕಾರ್ಪಣೆಗೊಳಿಸಿ, ಕುಟುಂಬ ಮಂಗಲ ಕಾರ್ಯಕ್ರಮದ ಸಂದರ್ಭ ಆಶೀರ್ವಚನ ನೀಡಿದರು. ಕುಟುಂಬ ತುಂಡಾಗಿ ಮನಸ್ಸು

Read More
ಹಟ್ಟಿಯಂಗಡಿಯಲ್ಲಿ ಫೆ.05 ರಂದು ಶ್ರೀಸಂಸ್ಥಾನದವರ ದಿವ್ಯ ಸಾನಿಧ್ಯ

ಶ್ರೀ ಸಿದ್ದಿ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿಯಲ್ಲಿ ದಿನಾಂಕ 05-02-26 ರಂದು ಶ್ರೀಸಂಸ್ಥಾನದವರ ದಿವ್ಯ ಸಾನಿಧ್ಯದಲ್ಲಿ ನೂತನ ನವಗ್ರಹ ದೇವಸ್ಥಾನ ಲೋಕಾರ್ಪಣೆ, ನವಗ್ರಹ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವವು ನಡೆಯಲಿದೆ.‌ ದಿನಾಂಕ 04-02-26ರ ಸಂಜೆ ಶ್ರೀಸಂಸ್ಥಾನದವರು ಹಟ್ಟಿಯಂಗಡಿಗೆ‌ ಚಿತ್ತೈಸಲಿದ್ದು, ಕ್ಷೇತ್ರದ ವತಿಯಿಂದ ಪೂರ್ಣ ಕುಂಭ ಸ್ವಾಗತ ಹಾಗೂ ಧೂಳಿ ಪಾದಪೂಜೆ ಜರುಗಲಿದೆ. 02-02-26 ಇಂದ 05-02-26 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ವಾರ್ಷಿಕೋತ್ಸವ ಹಾಗೂ 1008 ತೆಂಗಿನಕಾಯಿ ಮಹಾಗಣಪತಿ ಹವನ , ಸಂಕಷ್ಟಹರ ಚತುರ್ಥಿ ಮಹಾಪೂಜೆ, ಹಾಗೂ ಬ್ರಹ್ಮಕಲಶೋತ್ಸವವು

Read More