|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಕಲ್ಲಡ್ಕ ಉಮಾಶಿವ ಕ್ಷೇತ್ರ : ರವಿ – ಗುರುನಮನ

ಮಂಗಳೂರು ಹೋಬಳಿಯ ಸಾವಿರಾರು ಮಂದಿ ಮಹನೀಯರು, ಮಾತೆಯರು ಜತೆ ಸೇರಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಅಖಂಡ ಆದಿತ್ಯಹೃದಯ ಪಾರಾಯಣ, ವೇದಪಾರಾಯಣ, ಗಾಯತ್ರಿ ಜಪ ಮಾಡಿ ಭಗವಂತನ ಅನುಗ್ರಹ ಮತ್ತು ಸಂಪ್ರೀತಿಗೆ ಕಾರಣರಾಗಿದ್ದಾರೆ. ಸಂಘಟನೆಯಿಂದ ವಿಭಿನ್ನ ರೀತಿಯ ಸೇವೆ ಸಂದಿದೆ. ಶ್ರೀರಾಮಚಂದ್ರಾಪುರ ಮಠದ ಎಲ್ಲ ಶಿಷ್ಯ ಭಕ್ತರು ನಿರಂತರವಾಗಿ ಇಂತಹ ಚಟುವಟಿಕೆಗಳಿಂದ ಗಮನಸೆಳೆಯುತ್ತಾರೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಶ್ಲಾಘಿಸಿದರು. ಅವರು ಕಲ್ಲಡ್ಕ ಗೇರುಕಟ್ಟೆಶ್ರೀ ಉಮಾಶಿವ ಕ್ಷೇತ್ರದಲ್ಲಿ ಹವ್ಯಕ ಮಹಾಮಂಡಲಾಂತರ್ಗತ ಮಂಗಳೂರು ಹೋಬಳಿಯ ಮಂಗಳೂರು, ಮುಳ್ಳೇರಿಯ,

Read More

‘ಗೋಮಾತೆಯ ಸೇವೆಯಲ್ಲಿ ಗುರುಕೃಪೆಯ ಧನ್ಯತೆ’ – ಪ್ರೀತಿಶ್ರೀ ಮಂಜುನಾಥ್ ಉಡುಪಿ

  ” ಶ್ರೀಮಠದ ಸೇವೆ ನಮ್ಮ ಉಸಿರಲ್ಲಿ ಬೆರೆತು ಹೋಗಿದೆ. ಶ್ರೀಮಠದ ಎಲ್ಲಾ ಸೇವೆಗಳಿಗೂ ನಾವು ಕೈಜೋಡಿಸುತ್ತೇವೆ. ಗುರುಸೇವೆ ಮತ್ತು ಗೋಸೇವೆ ನಮ್ಮ ಜೀವನದ ಒಂದು ಭಾಗವಾಗಿದೆ. ಗುರುಕೃಪೆಯೇ ನಮ್ಮ ಬದುಕಿಗೆ ಆಧಾರ. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ದೊರಕಿದ್ದು ಗುರು ಅನುಗ್ರಹದಿಂದ ” ಎಂದು ಹೃದಯ ತುಂಬಿ ನುಡಿದವರು ಹೊನ್ನಾವರ ಸಮೀಪದ ಕೊಂಡದಕುಳಿಯ ಪ್ರಸ್ತುತ ಮಂಗಳೂರು ಮಂಡಲ ಉಡುಪಿ ವಲಯ ನಿವಾಸಿಗಳಾಗಿರುವ ಮಂಜುನಾಥ ಹೆಗಡೆಯವರ ಪತ್ನಿ ಪ್ರೀತಿಶ್ರೀ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪ

Read More

ಮನೆಯನ್ನು ನವೀಕರಿಸುವ ಉದ್ದೇಶದಿಂದ ಮುಳ್ಳೇರಿಯ ಮಂಡಲದ ಗುರಿಕಾರರು ಹಾಗೂ ಪದಾಧಿಕಾರಿ ಭೇಟಿ

ಗುಂಪೆ: ಶ್ರಾವಣಕರೆ ಘಟಕದ ಪುತ್ತಿಗೆ ಕೃಷ್ಣಯ್ಯ ಹೆಬ್ಬಾರರ ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ನವೀಕರಿಸುವ ಉದ್ದೇಶದಿಂದ ಮುಳ್ಳೇರಿಯ ಮಂಡಲದ ಗುರಿಕಾರರು ಹಾಗೂ ಪದಾಧಿಕಾರಿಗಳು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಮನೆ ವೀಕ್ಷಣೆ ನಡೆಸಿ, ಮನೆಯ ಪ್ರಸ್ತುತ ಸ್ಥಿತಿ ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ್ದರು.   ಇದರ ಮುಂದುವರಿದ ಭಾಗವಾಗಿ ದಿನಾಂಕ ೦4-೦1-2026 ಭಾನುವಾರದಂದು ಬೆಳಗ್ಗೆ ಕೃಷ್ಣಯ್ಯ ಹೆಬ್ಬಾರರ ಮನೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಗುಂಪೆ ವಲಯದ ಅಧ್ಯಕ್ಷರಾದ ಕುಮಾರ ಸುಬ್ರಮಣ್ಯ

Read More
ಗೋಮಾತೆಯ ರಕ್ಷಣೆಯ ಸಂಕಲ್ಪದೊಂದಿಗೆ ಅಮೃತಧಾರೆ ಗೋಶಾಲೆಯಲ್ಲಿ ಗೋ ಸೇವಾ ಮಾಸಾಚರಣೆ

ಪುಣ್ಯಕೋಟಿ ನಗರ: ದೇಶೀ ಹಸುಗಳ ಸಂವರ್ಧನೆ, ಸಂರಕ್ಷಣೆ ಧ್ಯೇಯವಾಗಿರಿಸಿಕೊಂಡು ಗೋಶಾಲೆಗಳ ಮೇಲೆ ಕಿಡಿಗೇಡಿಗಳ ಆಕ್ರಮಣ ಹೆಚ್ಚುತ್ತಿದ್ದ ಸಂದರ್ಭದಲ್ಲಿ, ಗೋ ರಕ್ಷಣೆಯ ದೀಕ್ಷಾಕಂಕಣ ತೊಟ್ಟು ಅಹರ್ನಿಶಿ ಸತ್ಯಾಗ್ರಹ ನಡೆಸಿ ಮಾಡಿದ ಚಳುವಳಿಯ ಸ್ಪೂರ್ತಿಯ ಹಿನ್ನೆಲೆಯಲ್ಲಿ ಗೋವಿನ ರಕ್ಷಣೆಯ ಸಂಕಲ್ಪದೊಂದಿಗೆ ಗೋವಿನೊಂದಿಗಿರುವ ನಿಕಟ ಸಂಬಂಧವನ್ನು ಸಾರ್ವತ್ರಿಕಗೊಳಿಸಲು ಹಮ್ಮಿಕೊಳ್ಳಲಾಗಿರುವ ಗೋ ಸೇವಾ ಮಾಸಾಚರಣೆಯು ದಕ್ಷಿಣ ಕನ್ನಡ ಜಿಲ್ಲೆಯ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ 14-01-2026 ಬುಧವಾರ ಸಂಜೆ 5.00 ಗಂಟೆಗೆ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಫೆ.

Read More
ಭದ್ರಯ್ಯನಹಳ್ಳಿಯಲ್ಲಿ ಶ್ರೀ ಮಠದ ಗೋದಾನ ಯಜ್ಞ ಯೋಜನೆ

  ಹನೂರು: ಕೌಡಳ್ಳಿ ಸಮೀಪದ ಭದ್ರಯ್ಯನಹಳ್ಳಿಯಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ “ದೇಶೀ ಆಕಳುಗಳ ಸಂರಕ್ಷಣೆಯ ಮಹಾಸಂಕಲ್ಪದ” ಅಂಗವಾಗಿ “ಶ್ರೀ ಮಠದ ಗೋದಾನ ಯಜ್ಞ”ದ ಯೋಜನೆಯ ಎರಡನೇ ಹಂತದ ಕಾರ್ಯಕ್ರಮ ನಡೆಯಿತು. ಶ್ರೀ ಗುರುಗಳು ಈ ಹಿಂದೆ ತೀರ್ವ ಬರಗಾಲದಲ್ಲಿ ಈ ಭಾಗದ ಗೋರಕ್ಷಣೆಗೆ ಬೃಹತ್ ಆದ ಮೇವು ವಿತರಣೆ ಮತ್ತು ಅಭಯಾಶ್ರಯ ಯೋಜನೆಗಳ ಮೂಲಕ  ನವಚೇತನ ತುಂಬಿದ್ದರು. ಅದರೊಂದಿಗೆ ಈಗ ಇಲ್ಲಿಯ ಗೋಪಾಲಕರ ಆರ್ಥಿಕ ಅಭಿವೃದ್ಧಿಗಾಗಿ ಶ್ರೀ ಮಠದ ಅಂಗಸಂಸ್ಥೆ ಗೋಫಲ

Read More
ಶ್ರೀ ರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆ

ಉತ್ತರಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತರಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಕಾರವಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಡಿ.30 ರಂದು ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆಯಿತು. ಶ್ರೀ ರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ, ಸಾರ್ವಭೌಮ ಗುರುಕುಲಮ್ ಅಶೋಕೆ ಗೋಕರ್ಣದಿಂದ ಪ್ರತಿಭಾನ್ವಿತ ಮಕ್ಕಳು ಭಾಗವಹಿಸಿದ್ದು ಇಂಗ್ಲೀಷ್ ಭಾಷಣದಲ್ಲಿ ಸನತ್ ಕುಮಾರ್. ಸಿ .ಆರ್ ಪ್ರಥಮ ಸ್ಥಾನ, ಕನ್ನಡ ಭಾಷಣದಲ್ಲಿ ಪೃಥ್ವಿನಾರಾಯಣ ಪ್ರಥಮ ಸ್ಥಾನ, ಸಂಸ್ಕೃತ ಭಾಷಣದಲ್ಲಿ ಧನ್ಯಾ

Read More
ಗ್ರಾಮರಾಜ್ಯ ಟ್ರಸ್ಟ್ ಗೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಭೇಟಿ

ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆ ಗ್ರಾಮರಾಜ್ಯ ಟ್ರಸ್ಟ್ ಇದರ ಹೊಸಕೆರೆಯಲ್ಲಿಯಲ್ಲಿರುವ ಪ್ರಧಾನ ಕಛೇರಿಗೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಚಿತ್ತೈಸಿದರು. ಗ್ರಾಮರಾಜ್ಯ ಸಂಸ್ಥೆಯ ವ್ಯವಸ್ಥೆಯನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂಕಲ್ಪ , ಗ್ರಾಮಗಳ ಅಭ್ಯುದಯ , ರೈತರಿಗೆ ಅನುಕೂಲವಾಗುವ ತನ್ಮೂಲಕ ನಗರದ ಜನರಿಗೆ ಉತ್ತಮ ವಸ್ತುಗಳ ಪೂರೈಕೆ ಮಾಡುವ ಈ ಸಂಸ್ಥೆಗೆ ಶ್ರೇಯಸ್ಸು ಸಿಗಲಿ ಎಂದು ಆಶೀರ್ವದಿಸಿದರು. ಸಂಸ್ಥೆಯ ಶ್ರೀ ಸಂಯೋಜಕ

Read More
ರುದ್ರ ಹೋಮ ಹಾಗೂ ಲಲಿತಾ ಸಹಸ್ರನಾಮ ಸ್ತೋತ್ರ ಪಾರಾಯಣ

ಮುಡಿಪು: ಮೂಲಾಪುರ ಪರಮೇಶ್ವರ ದೇವಸ್ಥಾನದಲ್ಲಿ ರುದ್ರ ಹೋಮ ಹಾಗೂ ಲಲಿತಾ ಸಹಸ್ರನಾಮ ಸ್ತೋತ್ರ ಪಾರಾಯಣ ಯಶಸ್ವಿಯಾಗಿ ಸಂಪನ್ನಗೊಂಡಿತು. ಐವತ್ತೊಂದು ಜನರಿಂದ ರುದ್ರ ಪಠಣ ಹಾಗೂ 29 ಜನ ಮಾತೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ ನೆರವೇರಿತು. ಮಂಗಳೂರು ಮಂಡಲದ ಹವ್ಯಕ ವಲಯ ಮುಡಿಪು ವತಿಯಿಂದ ಮಂಗಳೂರು ಹೋಬಳಿಯ ವೈದಿಕರಿಂದ, ಗುರುಬಂಧುಗಳಿಂದ, ಮಾತೆಯರು ಭಾಗವಹಿಸಿದರು.

Read More
ವಿಷ ಮುಕ್ತ ಅಡುಗೆ ಮನೆ ~ ಮುಕ್ತ ಮಾತು

ಶ್ರೀ ರಾಮಚಂದ್ರಾಪುರ ಮಠದ ಅಂಗಸಂಸ್ಥೆ ಗ್ರಾಮರಾಜ್ಯ ಟ್ರಸ್ಟ್ ಇದಕ್ಕೆ ಸಮಾಜದ ಸ್ವಾಸ್ಥ್ಯ ಸಂಕಲ್ಪದ 15 ಸಾರ್ಥಕ ವರ್ಷಗಳ ಸಂಭ್ರಮ. ಈ ಹಿನ್ನಲೆಯಲ್ಲಿ ಸಮಾಜದ ಜತೆಗೆ ಬೆರೆಯುವ , ಸಮಾಜಕ್ಕೆ ಸ್ವಾಸ್ಥ್ಯ ಅರಿವು ಮೂಡಿಸುವ ಕಾರ್ಯಕ್ರಮವೇ ” ವಿಷ ಮುಕ್ತ ಅಡುಗೆ ಮನೆ ~ ಮುಕ್ತ ಮಾತು ” . ಸಮಾಜದ ಗಣ್ಯರು , ವಿಷಯ ತಜ್ಞರ ಸಂಧಿಸುವ ಅಪೂರ್ವ ಕಾರ್ಯಕ್ರಮ ಸರಣಿಗೆ ಇತ್ತೀಚೆಗೆ ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕಿ ಶೋಭಾ ಮಳವಳ್ಳಿ ಅವರು ಆಗಮಿಸಿದ್ದರು.

Read More
ಅಂಬಾಗಿರಿಯ ಶ್ರೀರಾಮಕೃಷ್ಣ ಕಾಳಿಕಾ ಭವಾನಿ ದೇವಿಯ ಪ್ರತಿಷ್ಠಾಪನಾ 35 ನೇ ವಾರ್ಷಿಕೋತ್ಸವ

ಅಂಬಾಗಿರಿ: ಶ್ರೀರಾಮಕೃಷ್ಣ ಕಾಳಿಕಾ ಭವಾನಿ ದೇವಿಯ ಪ್ರತಿಷ್ಠಾಪನಾ 35 ನೇ ವಾರ್ಷಿಕೋತ್ಸವ 2-11-2025, 3/12/2025 ರಂದು ಹಲವಾರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. 2-11-2025ರಂದು ಮಂಗಳವಾರ ಬೆಳಿಗ್ಗೆ 11:00 ಘಂಟೆಗೆ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಶ್ರೀ ಗುರುಪಾದುಕಾ ಸ್ತೋತ್ರ ಪಠಣ  ಅಲ್ಲದೇ ಧ್ವಜಾರೋಹಣ ನಡೆಯಿತು. ಸಾಯಂಕಾಲ ಕರ್ಮಾಂಗ ಪ್ರಾರಂಭ, ಕಲಶ ಸ್ಥಾಪನೆ, ಬಲಿ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. 3/12/2025  ಬುಧವಾರ  ಬೆಳಿಗ್ಗೆ  8ಘಂಟೆಯಿಂದ   ಶತಚಂಡಿ ಹವನದ  ನಿಮಿತ್ತ 

Read More
ಮುಳ್ಳೇರಿಯ ಮಂಡಲದಲ್ಲಿ ಗುರಿಕ್ಕಾರರ ಗುರುಮಾರ್ಗ ಕಾರ್ಯಾಗಾರ

ಮುಳ್ಳೇರಿಯಾ: ಮುಳ್ಳೇರಿಯಾ ಮಂಡಲದ ನಾಲ್ಕು ಕೆಂದ್ರಗಳಲ್ಲಿ ದಿನಾಂಕ 30/11/2025 ಹಾಗೂ 01/12/2025 ರಂದು ಗುರಿಕ್ಕಾರರ ಗುರುಮಾರ್ಗ ಕಾರ್ಯಾಗಾರ ನಡೆಯಿತು. 30 ನೇ ತಾರೀಕಿನಂದು ಬೆಳಗ್ಗೆ ಪೆರಡಾಲ, ಪಳ್ಳತ್ತಡ್ಕ, ಎಣ್ಮಕಜೆ, ಚಂದ್ರಗಿರಿ ವಲಯಗಳಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ, ಮಧ್ಯಾಹ್ನ ನಂತರ ಕುಂಬಳೆ, ನೀರ್ಚಾಲು, ಕಾಸರಗೋಡು, ಗುಂಪೆ ವಲಯಗಳಿಗೆ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ, 1 ನೇ ತಾರೀಕಿನಂದು ಬೆಳಗ್ಗೆ ಸುಳ್ಯ, ಗುತ್ತಿಗಾರು, ಈಶ್ವರ ಮಂಗಲ ವಲಯಗಳಿಗೆ ಸರಳಿಕುಂಜದ ಧರ್ಮಾರಣ್ಯದಲ್ಲಿ ಮಧ್ಯಾಹ್ನ ನಂತರ ಕೊಡಗು ವಲಯದ ಕುಮಾರ ಕೃಪಾದಲ್ಲಿ

Read More
ಪ್ರಪಂಚದಲ್ಲಿ ಗುರುವಿಗೆ ಪರ್ಯಾಯವಿಲ್ಲ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು 

ಬೆಂಗಳೂರು: ಪ್ರಪಂಚದಲ್ಲಿ ಗುರುವಿಗೆ ಪರ್ಯಾಯವಿಲ್ಲ. ಗುರುವಿಗೆ ಇನ್ನೊಂದು ಗುರು ಪರ್ಯಾಯವಾಗಲು ಸಾಧ್ಯವಿಲ್ಲ. ಹಾಗೆಯೇ ಜೀವನದಲ್ಲಿ ಇಬ್ಬರು ಗುರುವನ್ನು ಆಶ್ರಯಿಸಿದಾಗ ಶಿಷ್ಯನ ಅವನತಿ ಆಗುತ್ತದೆ ಎಂದು ಸನಾತನ ಪರಂಪರೆ ಹೇಳುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಬೆಂಗಳೂರಿನ ಗಿರಿನಗರದಲ್ಲಿರುವ ಶಾಖಾ ಮಠದಲ್ಲಿ ಬ್ರಹೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಗವಂತನಿಗೆ ಗುರು ಪರ್ಯಾಯ. ಆದರೆ ಭಗವಂತ ಗುರುವಿಗೆ ಪರ್ಯಾಯವಲ್ಲ. ಜೀವನದ

Read More
ಡಾ. ಹರೀಶ ಹೆಗಡೆ ಅವರಿಗೆ 2025ರ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಯುವ ಪುರಸ್ಕಾರ

  ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಅಶೋಕೆಯ ಸ್ವರಾತ್ಮ ಗುರುಕುಲದ ಪ್ರಧಾನ ಪ್ರಾಚಾರ್ಯರಾದ ಡಾ. ಹರೀಶ ಹೆಗಡೆ ಅವರು 2025ರ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಯಲ್ಲಾಪುರದ ವಜ್ರಳ್ಳಿಯಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ ಮಾಡುವಾಗಲೇ ದತ್ತಾತ್ರೇಯ ಗಾಂವಕರರ ಬಳಿ ಸಂಗೀತದ ಓಂಕಾರ ಪ್ರಾರಂಭಿಸಿದರು. ಮುಂದೆ ಉಡುಪಿಯಲ್ಲಿ ಸಂಸ್ಕೃತ ವಿದ್ವತ್ ಜೊತೆಗೆ ಪಂ. ಮಹಾಬಲೇಶ್ವರ ಭಾಗವತರಲ್ಲಿ ಸಂಗೀತ ಅಧ್ಯಯನ ನಡೆಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಮ್ಯೂಸಿಕ್ ಮತ್ತು ಎಂ.ಮ್ಯೂಸಿಕ್ ಪದವಿಗಳನ್ನು ಅಭ್ಯಸಿಸುವಾಗ, ಪಂ. ಶ್ರೀಪಾದ ಹೆಗಡೆ

Read More
ನವೆಂಬರ್ – 29 – ನವಮಿ – ಶನಿವಾರ

  ಕಾರ್ಯಕ್ರಮದ ವಿವರ ಮೊಕ್ಕಾಂ – ಶ್ರೀರಾಮಾಶ್ರಮ ಗಿರಿನಗರ 7.20am ಶ್ರೀಪೂಜೆ 10.00am ರಿಪಬ್ಲಿಕ್ ಕನ್ನಡ ವಾಹಿನಿಯ *ಆರೋಗ್ಯ ಸಂವಾದ* ಕಾರ್ಯಕ್ರಮದಲ್ಲಿ ಸಾನ್ನಿಧ್ಯ, ಆಶೀರ್ವಚನ 5.51pm ಶ್ರೀಪೂಜೆ

Read More
ಪೃಥ್ವಿ ಹೆಗಡೆ ಏಕ ಪಾತ್ರ ಅಭಿನಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ

  ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 2025ನ.24ರಂದು ದಾಂಡೇಲಿಯಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ ಏಕ ಪಾತ್ರ ಅಭಿನಯದಲ್ಲಿ ಮುರೂರು ಪ್ರಗತಿ ಪಿ ಯು ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪೃಥ್ವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸರ್ವೇಶ್ವರ ಭಾಗ್ವತ್ ಮತ್ತು ವೀಣಾ ದಂಪತಿಗಳ ಪುತ್ರಿ.

Read More
ಕೊಲ್ಲೂರಿನಲ್ಲಿ ಧಾರ್ಮಿಕ ಪೂಜಾ ಪದ್ಧತಿಯನ್ನು ಸ್ಥಾಪಿಸಿದವರು ರಾಮಚಂದ್ರಾಪುರ ಮಠದ 33ನೇ ಜಗದ್ಗುರುಗಳು : ರಾಮಚಂದ್ರಾಪುರ ಶ್ರೀ

  ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಲ್ಲಿ ಧಾರ್ಮಿಕ ಪೂಜಾಪದ್ಧತಿಯನ್ನು ಸ್ಥಾಪಿಸಿದವರು ಶ್ರೀ ರಾಮಚಂದ್ರಾಪುರ ಮಠದ 33ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಎಂದು ಶ್ರೀರಾಮಚಂದ್ರಾಪುರ ಮಠದ 36ನೇ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು. ಬೆಂಗಳೂರಿನ ಗಿರಿನಗರದ ಶಾಖಾ ಮಠದಲ್ಲಿ ನಡೆದ 33ನೇ ಪೀಠಾಧಿಪತಿಗಳ ಸಂಸ್ಮರಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, 33 ನೇ ರಾಘವೇಶ್ವರರು ಅಧ್ಯಯನ – ತಪಸ್ಸು ಹಾಗೂ ಗ್ರಂಥ ರಚನೆಗಳಿಗೆ ಪ್ರಸಿದ್ಧರಾಗಿದ್ದು, ಅಂದು ರಾಮಚಂದ್ರಾಪುರ ಮಠದ ಕೀರ್ತಿಯನ್ನು ಹೆಚ್ಚಿಸಿದ

Read More
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕ್ರೀಡಾಕೂಟ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪರಿಪೂರ್ಣ ತರಬೇತಿ ಲಭ್ಯ : ಪ್ರದೀಪ್ ಕುಮಾರ್ ಆಚಾರ್ಯ ಶ್ಲಾಘನೆ

  ನಂತೂರು, ನ.26 : ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕು. ಮಧ್ಯಮ ವರ್ಗದ ಕುಟುಂಬದಲ್ಲಿ ಬಂದ ಮಕ್ಕಳಿಗೆ ಎಲ್ಲಾ ಸೌಲಭ್ಯ ಒದಗಿಸಲು ಕಷ್ಟವಾಗುತ್ತದೆ. ಆದರೆ ಉತ್ತಮ ಆಹಾರ ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಆ ಮೂಲಕ ಕ್ರೀಡಾರಂಗವನ್ನು ಆಯ್ಕೆ ಮಾಡಿ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಅತೀ ಅವಶ್ಯ. ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಎಲ್ಲಾ ರೀತಿಯಲ್ಲಿ ಪರಿಪೂರ್ಣ ತರಬೇತಿ ಸಿಗುತ್ತಿರುವುದು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕಾರಣವಾಗಿದೆ ಎಂದು ಕಾಮನ್ ವೆಲ್ತ್ ಗೇಮ್ಸ್

Read More
ಚಾತುರ್ಮಾಸ್ಯ ಪ್ರಶಸ್ತಿಯ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀಧರಣ್ಣ ಶ್ರೀರಾಮ ಸಾಯುಜ್ಯಕ್ಕೆ

ಪಿಡಿಎಸ್ ಎಂದೇ ಖ್ಯಾತರಾದ ಸಾಗರ ಸಮೀಪದ ಭೀಮನಕೋಣೆಯ ನಮ್ಮ ಶ್ರೀಧರಣ್ಣ ಕೆಲಕಾಲದ ಅಸೌಖ್ಯದಿಂದ ಇಂದು ಬೆಳಗಿನ ಜಾವ ಕಾಲವಶರಾದರು ಎಂಬ ಸುದ್ದಿ ತೀವ್ರ ನೋವಿನದ್ದು. ನಮ್ಮ ಮಠದ ಕಾರ್ಯ ಎಂದರೆ ತನ್ನ ಸ್ವಂತ ಕಾರ್ಯಕ್ಕಿಂತ ಹೆಚ್ಚಿನದು ಎಂದು ದೃಢವಾಗಿ ನಂಬಿ ಕಾರ್ಯ ಮಾಡಿದವರು ಅವರು. ಶ್ರೀ ಮಠದ ವ್ಯವಸ್ಥೆಯಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿ, ಗುರುಗಳ ಪ್ರೀತಿಗೆ ಪಾತ್ರರಾದವರು. ದೊಡ್ಡ ದೊಡ್ಡ ಮಹತ್ವದ ಕಾರ್ಯಗಳ ಸಂಪೂರ್ಣ ನೇತೃತ್ವ ಇದ್ದಾಗಲೂ, ಹಣಕಾಸಿನ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ತೋರಿದವರು.

Read More
ಗ್ರಾಮರಾಜ್ಯ ಟ್ರಸ್ಟ್ ವಿಷ ಮುಕ್ತ ಅಡುಗೆ ಮನೆ – ಮುಕ್ತ ಮಾತು

ಶ್ರೀರಾಮಚಂದ್ರಾಪುರ ಮಠದ ಅಂಗ ಸಂಸ್ಥೆ ಗ್ರಾಮರಾಜ್ಯ ಟ್ರಸ್ಟ್ ಇದರ ಸಮಾಜ ಕ್ಷೇಮದ ಚಿಂತನೆಯ ೧೫ ಸಾರ್ಥಕ ವರ್ಷಗಳ ಸೇವೆಯ ಸಲುವಾಗಿ ಸಮಾಜದ ಜೊತೆಗೆ ಬೆರೆಯುವ , ಸಮಾಜದೊಂದಿಗೆ ಜೋಡಿಸಿಕೊಳ್ಳುವ ಅಭಿಯಾನವೇ ” ವಿಷ ಮುಕ್ತ ಅಡುಗೆ ಮನೆ – ಮುಕ್ತ ಮಾತು ” ಕಾರ್ಯಕ್ರಮ. ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ನಿವೃತ್ತ ಕೆಪಿಟಿಸಿಎಲ್ ಹಿರಿಯ ಅಧಿಕಾರಿಗಳು , ಸಾಹಿತಿಗಳು , ಕಾದಂಬರಿಕಾರರು , ಮೇಲಾಗಿ ಶ್ರೀ ಸಂಸ್ಥಾನದವರು ನಡೆಸಿಕೊಡುವ ರಾಮಕಥೆಯ ಕವಿ , ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

Read More
ನವೆಂಬರ್ – 05 – ಪೂರ್ಣಿಮೆ – ಬುಧವಾರ

  ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಕೆ.ಎನ್ ಶಂಕರ ಹಾಲ್ತೋಟ ಮೊಕ್ಕಾಂ – ಶ್ರೀರಾಮಾಶ್ರಮ ಗಿರಿನಗರ 6.00am ಶ್ರೀಪೂಜೆ 5.52pm ಶ್ರೀಪೂಜೆ

Read More