ಸುದ್ದಿ
ಮುಂಬೈನಲ್ಲಿ ರಕ್ತದಾನ ಶಿಬಿರ: ಶ್ರೀಮಠದ ಶಿಷ್ಯ ವರ್ಗ ಹಾಗೂ ಪೇಜಾವರ ಮಠದ ಸಹಯೋಗದಲ್ಲಿ ಆಯೋಜನೆ
ಮುಂಬೈ: ಶ್ರೀರಾಮಚಂದ್ರಾಪುರ ಮಠದ ಮುಂಬೈ ಹಾಗೂ ಡೊಂಬಿವಿಲಿ ವಲಯದ ಶಿಷ್ಯರು ಪೇಜಾವರ ಮಠದ ಸಹಯೋಗದಲ್ಲಿ, ಶ್ರೀಸಂಸ್ಥಾನದ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಮುಂಬೈನ ಪ್ರಭಾತ ಕಾಲೋನಿಯಲ್ಲಿರುವ ಮಾಧ್ವಭವನದಲ್ಲಿ ಇದೇ ನವೆಂಬರ್ 25 ರಂದು ರಕ್ತದಾನ ಶಿಬಿರ ಅಯೋಜಿಸಿದ್ದಾರೆ. ಆ ದಿನ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ರಕ್ತದಾನ ಶಿಬಿರ ನಡೆಯಲಿದ್ದು, ಆರೋಗ್ಯವಂತ ಜನರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಅವಶ್ಯಕತೆ ಇರುವ ರೋಗಿಗಳಿಗೆ ನೆರವಾಗುವಂತೆ ಕೋರಲಾಗಿದೆ. ರಕ್ತದಾನಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ರಕ್ತದಾನ
Read Moreಶ್ರೀಭಾರತೀವಿದ್ಯಾಲಯಕ್ಕೆ ಪುಸ್ತಕ ಕೊಡುಗೆ: ಸಾವಿರಾರು ರೂಪಾಯಿ ಮೌಲ್ಯದ ಪುಸ್ತಕ ಕೊಡುಗೆ ನೀಡಿದ ಶ್ರೀಮತಿ ಡಾ.ಶಾರದಾ ಜಯಗೋವಿಂದ
ಬೆಂಗಳೂರು: ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ಗೋಸ್ವರ್ಗ ಚಾತುರ್ಮಾಸ್ಯ ಪ್ರಶಸ್ತಿ ಪುರಸ್ಕೃತರೂ, ಶಿಕ್ಷಣ ತಜ್ಞರೂ ಆದ ಶ್ರೀಮತಿ ಡಾ. ಶಾರದಾ ಜಯಗೋವಿಂದ ಇಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ 163 ಪುಸ್ತಕವನ್ನು ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಉತ್ತಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಶ್ರೀಮತಿ ಡಾ. ಶಾರದಾ ಜಯಗೋವಿಂದ್ ಅವರು ವಿದ್ಯಾರ್ಥಿಗಳಿಗೆ ಈ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವಂತೆ ಕರೆ
Read Moreವಿಶಿಷ್ಟವಾಗಿ ಮಕ್ಕಳ ದಿನಾಚರಣೆ ಆಚರಿಸಿದ ಶ್ರೀಭಾರತೀವಿದ್ಯಾಪೀಠ: ಸಂಭ್ರಮಿಸಿದ ವಿದ್ಯಾರ್ಥಿಗಳು
ಮುಜುಂಗಾವು: ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಶ್ರೀಭಾರತೀ ವಿದ್ಯಾಪೀಠ ಮುಜುಂಗಾವಿನಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು. ಮಕ್ಕಳ ದಿನಾಚರಣೆಯಂದು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ pic and act ಮತ್ತು pic and speech ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಚೀಟಿ ಆಯ್ದುಕೊಂಡು ತಮಗೆ ಬಂದ ವಿಷಯದ ಕುರಿತು ಅಭಿನಯ ಹಾಗೂ ಭಾಷಣ ಪ್ರಸ್ತುತಪಡಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಶ್ರೀ ಶ್ಯಾಂಭಟ್ ದರ್ಬೆಮಾರ್ಗ ಮಾತನಾಡಿ, ಮಕ್ಕಳ ದಿನಾಚರಣೆಯ ಮಹತ್ತ್ವ ಹಾಗೂ ಮಕ್ಕಳ
Read Moreಮೂರೂರು ಪ್ರಗತಿ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ: ಮಾನವೀಯ ಮೌಲ್ಯ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕಿವಿಮಾತು
ಮೂರೂರು: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವೈವಿಧ್ಯಮಯ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಮ್.ಜಿ. ಭಟ್ ಮಾತನಾಡಿ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬೆಳೆಸಿಕೊಳ್ಳಿ. ಮಾನವೀಯ ಮೌಲ್ಯಗಳೊಂದಿಗೆ ಸರ್ವತೋಮುಖವಾಗಿ ಅಧ್ಯಯನದಲ್ಲಿ ಪ್ರಗತಿ ಹೊಂದಿ ಸಾಧಕರಾಗಿ ಎಂದು ಕರೆ ನೀಡಿದರು. ಅಲ್ಲದೇ ಎಸ್. ಎಸ್. ಎಲ್. ಸಿ. ಮಕ್ಕಳಿಗೆ ಶಾಲೆಯ
Read Moreಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಗೆ ಛದ್ಮವೇಷದ ಮೆರುಗು
ಬೆಂಗಳೂರು: ನವೆಂಬರ್ 14ರ ಮಕ್ಕಳ ದಿನಾಚರಣೆಯನ್ನು ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಛದ್ಮವೇಷ ಸ್ಪರ್ಧೆಯೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು. ಮಕ್ಕಳು ಭೂಮಿ, ನೀರು, ಪರಿಸರ, ಭೀಮ, ಶ್ರೀಕೃಷ್ಣ, ರಾಧೆ, ದಾಸರು, ವಾಟ್ಸಪ್ ಹೀಗೆ ವಿವಿಧ ವೇಷ ಧರಿಸಿ ಬಂದು ರಂಜಿಸಿದರು. ವಿದ್ಯಾರ್ಥಿಗಳಿಗಾಗಿ ಆಟೋಟಗಳು, ಸಂಗೀತ, ಹಿತನುಡಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕೂಡ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞೆ ಶ್ರೀಮತಿ ಡಾ.ಶಾರದಾ ಜಯಗೋವಿಂದ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
Read Moreಸಂಸ್ಕೃತ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀಭಾರತೀ ವಿದ್ಯಾಲಯದಲ್ಲಿ ಸಂಸ್ಕೃತೋತ್ಸವ
ಬೆಂಗಳೂರು: ಸಂಸ್ಕೃತ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ವಿದ್ಯಾರ್ಥಿಗಳಿಗೆ ಸಂಸ್ಕೃ ತದ ಮಹತ್ತವ ತಿಳಿಸುವ ಉದ್ದೇಶದಿಂದ ಶ್ರೀಭಾರತೀ ವಿದ್ಯಾಲಯವು ಸಂಸ್ಕೃತೋತ್ಸವವನ್ನು ಆಯೋಜಿಸಿದೆ. ಸಂಸ್ಕೃತ ಅಧ್ಯಯನದ ಮೂಲಕ ಭಾರತೀಯ ಪರಂಪರೆಯನ್ನು ಜನಮಾನಸದಲ್ಲಿ ಉಳಿಸುವುದು ಹಾಗೂ ಬೆಳೆಸುವುದು, ನವೆಂಬರ್ 13ರಂದು ಆರಂಭವಾಗಿರುವ 17ರ ವರೆಗೆ ನಡೆಯಲಿರುವ, ಈ ಸಂಸ್ಕೃತೋತ್ಸವದ ಉದ್ದೇಶವಾಗಿದೆ. ಸಂಸ್ಕೃತೋತ್ಸವದ ಅಂಗವಾಗಿ ಶ್ರೀಭಾರತೀ ವಿದ್ಯಾಲಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.
Read Moreಅನಂತಕುಮಾರ್ ಕುಟುಂಬಕ್ಕೆ ಶ್ರೀರಾಮಚಂದ್ರಾಪುರಮಠದಿಂದ ಸಾಂತ್ವನ ಪತ್ರ
ಕೇಂದ್ರ ಸಚಿವ ಅನಂತಕುಮಾರ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ, ಶ್ರೀರಾಮಚಂದ್ರಾಪುರಮಠದಿಂದ ತೇಜಸ್ವಿನಿ ಅವರಿಗೆ ಪತ್ರವನ್ನು ಬರೆಯಲಾಗಿದ್ದು, ಶ್ರೀಕರಾರ್ಚಿತ ಶ್ರೀರಾಮಾದಿ ದೇವತಾನುಗ್ರಹದಿಂದ ಅಗಲಿಕೆಯ ನೋವನ್ನು ಮರೆಯುವ ಶಕ್ತಿಯು ಅವರ ಕುಟುಂಬಕ್ಕೆ ಸಿಗಲಿ ಎಂದು ಹಾರೈಸಲಾಗಿದೆ. ಅನಂತಕುಮಾರ್ ಉತ್ತಮ ರಾಜಕಾರಣಿಗಳಲ್ಲೊಬ್ಬರು, ಬಾಲ್ಯದಲ್ಲಿಯೇ ರಾಷ್ಟ್ರಭಕ್ತಿಗೆ ಸಮರ್ಪಿಸಿಕೊಂಡವರು, ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದವರು. ಅವರು ಇನ್ನಷ್ಟು ಕಾಲ ಬದುಕಿ ಸತ್ಕಾರ್ಯಗಳನ್ನು ಮಾಡಬೇಕಿತ್ತು, ಆದರೆ ಅಕಾಲಿಕವಾಗಿ ನಿಧನರಾಗಿರುವುದು ಕುಟುಂಬಕ್ಕೆ ನೋವಿನ ಸಂಗತಿ. ಹುಟ್ಟು ಸಾವುಗಳು ವಿಧಿಯ ಅಧೀನವಾದ್ದರಿಂದ ಅಗಲಿಕೆಯ ನೋವಿನಿಂದ ಕುಟುಂಬವು ಹೊರಬರಬೇಕಿದೆ.
Read Moreಧಾರ್ಮಿಕ ಕಾರ್ಯಕಮಗಳೊಂದಿಗೆ ನೀರ್ಚಾಲು ವಲಯೋತ್ಸವ ಸಂಪನ್ನ – ಶ್ರೀಮಠದ ರಕ್ಷಣೆಯ ಪ್ರತಿಜ್ಞೆಗೈಯ್ದ ಭಕ್ತರು
ಮುಳ್ಳೇರಿಯಾ ಮಂಡಲದ ನೀರ್ಚಾಲು ವಲಯದ ವಲಯೋತ್ಸವ ಕಾರ್ಯಕ್ರಮವು ೧೧/೧೧/೨೦೧೮ ರಂದು ಅಗ್ರಸಾಲೆ ಶ್ರೀ ಶಾಸ್ತಾರ ಮಂದಿರದಲ್ಲಿ ನಡೆಯಿತು. ವಲಯೋತ್ಸವದ ಪ್ರಯುಕ್ತ ಬೆಳಗ್ಗೆ ಕುಂಕುಮಾರ್ಚನೆ, ಭಜನ ರಾಮಾಯಣ ಪಾರಾಯಣಗಳು ನಡೆದವು. ಕಾರ್ಯಕ್ರಮಕ್ಕೆ ವಲಯದ ನಿವೃತ್ತ ಹಿರಿಯ ಗುರಿಕ್ಕಾರರಾದ ಶ್ರೀ ವಾಶೆ ಸುಬ್ರಹ್ಮಣ್ಯ ಭಟ್ ಧ್ವಜಾರೋಹಣಗೈಯುವ ಮೂಲಕ ಹಾಗೂ ಶ್ರೀಮತಿ ಸರಸ್ವತಿ ಕಡಗಂಜಿ ದೀಪ ಪ್ರಜ್ವಲನೆಗೈಯುವ ಮೂಲಕ ಚಾಲನೆ ನೀಡಿದರು. ೧೧.೦೦ ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಸಭೆಯಲ್ಲಿ ಮಾತನಾಡಿದ ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಶ್ರೀಬಾಲಸುಬ್ರಹ್ಮಣ್ಯ ಭಟ್ ಹಲವು
Read Moreಶ್ರೀಭಾರತೀ ವಿದ್ಯಾಲಯದಲ್ಲಿ ಮೂರು ದಿನಗಳ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಶಿಬಿರ ಯಶಸ್ವಿಯಾಗಿ ಸಂಪನ್ನ
ಬದಿಯಡ್ಕ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಮೂರು ದಿನಗಳ ಕಾಲ ಕಾಸರಗೋಡು ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ ನಡೆಯಿತು. ಶಿಬಿರದ ಮೂರನೇ ದಿನವಾದ ಭಾನುವಾರ ರಾಷ್ಟ್ರದ ಇತಿಹಾಸ, ಪರಂಪರೆಗಳ ಪ್ರದರ್ಶನಗಳು ನಡೆದವು. ಮಂಜೇಶ್ವರ ಉಪಜಿಲ್ಲಾವಿದ್ಯಾಧಿಕಾರಿ ಶ್ರೀ ದಿನೇಶ್ ವಿ. ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸದಸ್ಯ ಶ್ರೀ ಹರೀಶ್ ಗಟ್ಟಿ ಪ್ರದರ್ಶನ ಉದ್ಘಾಟಿಸಿದರು. ಶಿಕ್ಷಣ ತಜ್ಞ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಶ್ರೀ ವಿ.ಬಿ. ಕುಳಮರ್ವ ಉಪಸ್ಥಿತರಿದ್ದರು. ಆ ಬಳಿಕ ಶಿಬಿರದ ಜರುಗಿದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಮಂಜೇಶ್ವರ
Read Moreಹವ್ಯಕ ಮಹಾಮಂಡಲದ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ: ವಿವಿಧ ಮಂಡಲಗಳಲ್ಲಿ ಚೆಕ್ ವಿತರಣೆ
ವಿದ್ಯಾಭ್ಯಾಸ ನಡೆಸಲು ಆರ್ಥಿಕ ತೊಂದರೆ ಎದುರಿಸುತ್ತಿರುವ ಶ್ರೀಮಠದ ಶಿಷ್ಯರ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರೀ ರಾಮಚಂದ್ರಾಪುರ ಮಠ ಪ್ರತಿ ವರ್ಷದಂತೆ ಈ ವರ್ಷವೂ, 2018-19 ನೇ ಸಾಲಿನ ಅರ್ಹ 221 ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ₹9,36,000ಗಳನ್ನು ಮಂಜೂರುಗೊಳಿಸಿದೆ. ದಿನಾಂಕ 11.11.2018ನೆಯ ಭಾನುವಾರದಂದು ಮಹಾಮಂಡಲದ ಏಳು ಮಂಡಲಗಳಲ್ಲಿ ಆರ್ಥಿಕ ಸಹಾಯಧನವನ್ನು ಚೆಕ್ ಮೂಲಕ ವಿತರಣೆ ಮಾಡಲಾಯಿತು. ಕುಮಟಾ, ಹೊನ್ನಾವರ, ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯ, ಉತ್ತರ ಬೆಂಗಳೂರು, ದಕ್ಷಿಣ ಬೆಂಗಳೂರು ಮಂಡಲಗಳ ಒಟ್ಟು 173 ವಿದ್ಯಾರ್ಥಿಗಳಿಗೆ ₹6,70,000ಗಳ ಸಹಾಯಧನ
Read Moreಶ್ರೀಕ್ಷೇತ್ರ ಗೋಕರ್ಣದಲ್ಲಿ ಶಿವಗಂಗಾ ಮಹೋತ್ಸವ ಸಂಪನ್ನ – ಮಹಾಬಲೇಶ್ವರನ ದರ್ಶನ ಪಡೆದ ಸಚಿವ ಎಸ್. ಆರ್. ಶ್ರೀನಿವಾಸ್
ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ವಿಲಂಬ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವವು, ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಆಶ್ವೀಜ ಬಹುಳ ಚತುರ್ದಶಿಯ ದಿನ ವೈಭವದಿಂದ ಜರುಗಿತು. ಶ್ರೀಕ್ಷೇತ್ರ ಗೋಕರ್ಣದ ವಿಶಾಲವಾದ ಕಡಲ ತೀರದಲ್ಲಿ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತ ಜನರ ಸಮ್ಮುಖದಲ್ಲಿ ನಿಶ್ಚಯಿತ ವಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವರಿಸಿದಳು. ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಗುಮಟೆಪಾಂಗ ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು. ಭಕ್ತರು ಆರತಿ ನೀಡಿ ದೇವದಂಪತಿಗಳನ್ನು ಬರಮಾಡಿಕೊಂಡರು.
Read Moreಹವ್ಯಕ ಮಂಡಲ ಕುಮಟ ವತಿಯಿಂದ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ
ಕುಮಟಾ: ಕುಮಟಾ ಹವ್ಯಕ ಮಂಡಲದ ವತಿಯಿಂದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯ ಯೋಜನೆಯ ಚೆಕ್ ವಿತರಣೆ ಕಾರ್ಯಕ್ರಮವು ನಡೆಯಿತು. ಕೆಕ್ಕಾರಿನ ಶ್ರೀ ರಘೋತ್ತಮ ಮಠದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಗಣೇಶ ಹೆಗಡೆ ಪ್ರಾಸ್ತಾವಿಕವಾಗಿ ಶ್ರೀಪೀಠದ ಶಿಷ್ಯಕಳಕಳಿ, ಭಕ್ತವಾತ್ಸಲ್ಯ, ಸಮಾಜ ಮುಖಿ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಬಳಿಕ ಮಂಡಲದ ಅಧ್ಯಕ್ಷರಾದ ಶ್ರೀ ಮಂಜುನಾಥ ಸುವರ್ಣಗದ್ದೆ ಇವರು ಮಾತನಾಡಿ, ವಿದ್ಯಾ ಸಹಾಯವು ಸಮಾಜ ನಿಮ್ಮೊಂದಿಗಿದೆ ಎಂಬುದರ ಸಂಕೇತವಾಗಿದೆ ಎಂದರು. ಇದರೊಂದಿಗೆ ವಿದ್ಯಾರ್ಥಿಗಳ ಭ್ರಮಾಲೋಕ, ಹವ್ಯಕರ ಸಂಖ್ಯೆಯ ಕಳವಳಕಾರಿ ಸ್ಥಿತಿ,
Read Moreಶ್ರೀಸಂಸ್ಥಾನದವರಿಂದ ವಿದ್ಯಾ ಸಹಾಯ ಸ್ವೀಕರಿಸಿದ ವಿದ್ಯಾರ್ಥಿಗಳು
ಬೆಂಗಳೂರು: ಬೆಂಗಳೂರು ಉತ್ತರ ಮತ್ತು ದಕ್ಷಿಣ ಮಂಡಲದ ಮೂರು ವಿದ್ಯಾರ್ಥಿಗಳು ಇಂದು ವಿದ್ಯಾ ಸಹಾಯವನ್ನು ಶ್ರೀಸಂಸ್ಥಾನದವರ ಅಮೃತ ಕರಕಮಲಗಳಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಬೆಂಗಳೂರು ಮಂಡಲದ ಅಧ್ಯಕ್ಷರಾದ ಶ್ರೀ ವೈ.ಕೆ.ಎನ್. ಶರ್ಮ, ಕಾರ್ಯದರ್ಶಿಗಳಾದ ಶ್ರೀ ಶ್ರೀಕಾಂತ ಹೆಗಡೆ ಅಂತರವಳ್ಳಿ, ವಿದ್ಯಾರ್ಥಿವಾಹಿನೀ ಪ್ರಧಾನ ಶ್ರೀಮತಿ ಅಶ್ವಿನಿ ಅರವಿಂದ, ಉತ್ತರ ಬೆಂಗಳೂರು ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಶ್ರೀಮತಿ ಸಂಧ್ಯಾ ಕಾನತ್ತೂರು ಉಪಸ್ಥಿತರಿದ್ದರು. ವಿದ್ಯಾಸಹಾಯ ವಿತರಣೆಗೂ ಮುನ್ನ, ಮಹಾಮಂಡಲದ ಸೂಚನೆಯಂತೆ ವಿದ್ಯಾರ್ಥಿಗಳಿಗೆ ಶ್ರೀಮಠದ ಪರಿಚಯ, ವಿದ್ಯಾರ್ಥಿಗಳಿಗಿರುವ ಸೇವಾವಕಾಶ, ಇರಬೇಕಾದ ಬದ್ಧತೆ,
Read Moreಅಮೃತಧಾರಾ ಗೋಶಾಲೆಯಲ್ಲಿ ಶನಿದೋಷ ನಿವಾರಣೆಗೆ ನಡೆಯಿತು ವಿಶೇಷಪೂಜೆ: ನವೆಂಬರ್ 15 ರವರೆಗೂ ನಡೆಯಲಿದೆ ಪೂಜಾ ಕಾರ್ಯ
ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಶನಿವಾರ ಶನಿದೋಷ ನಿವಾರಣೆಗಾಗಿ ಶ್ರೀ ಆಂಜನೇಯ ಕಲ್ಪೋಕ್ತ ಪೂಜೆ ಹಾಗೂ ಆಂಜನೇಯ ಹೋಮ ನಡೆಯಿತು. ನೂರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಭಕ್ತಭಾವದೊಂದಿಗೆ ಶನಿದೋಷ ನಿವಾರಣೆಗಾಗಿ ಪೂಜೆ ನಡೆಸಿದರು. ಬೆಳಗ್ಗೆ ಮಹಾಗಣಪತಿ ಹೋಮ, ಕಾಮಧೇನು ಹವನ, ಗೋಪೂಜೆಗಳು ನಡೆದವು. ಮಧ್ಯಾಹ್ನ ಪೂರ್ಣಾಹುತಿಯ ಅನಂತರ ವೈದಿಕ ಪ್ರಧಾನ ವೇದಮೂರ್ತಿ ಶ್ರೀ ಕೇಶವ ಪ್ರಸಾದ ಕೂಟೇಲು ಪ್ರಾರ್ಥನೆ ಸಲ್ಲಿಸಿದರು. ಈ ಸೇವೆಯನ್ನು ಕಾರ್ತಿಕ ಮಾಸದ ಶನಿವಾರದ ದಿನ ಶನಿದೋಷ ನಿವಾರಣೆಗಾಗಿ
Read Moreರಾಮಾಶ್ರಮದಲ್ಲಿ ಕಾರ್ತೀಕ ದೀಪೋತ್ಸವ ಆರಂಭ: ಸರ್ವರಿಗೂ ಹಾರ್ದಿಕ ಸ್ವಾಗತ
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಮುಗಿಯುತ್ತಿದ್ದಂತೆ ಕಾರ್ತೀಕ ದೀಪೋತ್ಸವದ ಸಂಭ್ರಮ ಆರಂಭವಾಗುತ್ತದೆ. ಅಂತೆಯೇ ಬೆಂಗಳೂರಿನಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖಾಮಠದಲ್ಲಿಯೂ ಕಾರ್ತೀಕ ದೀಪೋತ್ಸವ ನವೆಂಬರ್ 8ರಿಂದ ಆರಂಭವಾಗಿದೆ. ಈಗಾಗಲೇ ಪ್ರತಿದಿನ ಸಂಜೆ ಸಪರಿವಾರ ಸಹಿತ ಶ್ರೀರಾಮದೇವರ ಸನ್ನಿಧಿಯಲ್ಲಿ, ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿಯ ದೀಪೋತ್ಸವ ನಡೆಯುತ್ತಿದ್ದು ಬೆಳಗುವ ದೀಪಗಳ ನಡುವೆ ರಾಮದೇವರು ಹಾಗೂ ಶ್ರೀಸಂಸ್ಥಾನದವರನ್ನು ನೋಡುವುದೇ ಒಂದು ದಿವ್ಯ ಅನುಭವವಾಗಿದೆ. ಕಾರ್ತಿಕ ದೀಪೋತ್ಸವ ಸೇವೆಯು ಕಾರ್ತಿಕ ಶುದ್ಧ ಪಾಡ್ಯದಿಂದ ಮಾರ್ಗಶಿರ ಶುದ್ಧ ಷಷ್ಠಿಯವರೆಗೆ ಅಂದರೆ ನವೆಂಬರ್ 8
Read Moreಮುಂಬೈನಲ್ಲೂ ನಡೆಯಿತು ಸಂಭ್ರಮದ ಗೋಪೂಜೆ: ನಿಜಾರ್ಥದಲ್ಲಿ ಬೆಳಕಿನ ಹಬ್ಬ ಆಚರಿಸಿದ ಗೋಪ್ರೇಮಿಗಳು
ಮುಂಬೈ: ದೀಪಾವಳಿಗೂ ಗೋಪೂಜೆಗೂ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಕೃಷಿ ಅವಲಂಬಿತ ಎಲ್ಲ ಭಾಗಗಳಲ್ಲೂ ದೀಪಾವಳಿಯಲ್ಲಿ ಗೋಪೂಜೆ ನಡೆಸುವುದು ವಾಡಿಕೆ. ಆದರೆ ಗೋಪೂಜೆ ಕೇವಲ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ಮಹಾನಗರಗಳಲ್ಲೂ ಇದೆ. ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಂಬಯಿಯ ಕೋಲಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಯಲ್ಲಿ, ಯಾವ ಗ್ರಾಮೀಣ ಪ್ರದೇಶಕ್ಕೂ ಕಡಿಮೆ ಇಲ್ಲದಂತೆ ಗೋಪೂಜೆಯೊಂದಿಗೆ ಸಂಭ್ರಮದಿಂದ ದೀಪಾವಳಿ ಆಚರಿಸಲಾಯಿತು. ನವೆಂಬರ್ 8ರಂದು ನಡೆದ ಗೋಪೂಜೆಯಲ್ಲಿ ಮುಂಬಯಿ ವಲಯ ಅಧ್ಯಕ್ಷ ಶ್ರೀ ಕೃಷ್ಣ ಭಟ್ಟ ಗುಡ್ಡೆಬಾಳ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಈ
Read Moreದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ : ಡಿಸೆಂಬರ್ 28, 29 ಮತ್ತು 30ರಂದು ಹವ್ಯಕರ ಹಬ್ಬ
ಶ್ರೀ ಅಖಿಲ ಹವ್ಯಕ ಮಹಾಸಭೆಯು ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತವಾಗಿ, ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿದೆ. ಗುರುಪೀಠಗಳ ದಿವ್ಯ ಮಾರ್ಗದರ್ಶನದೊಂದಿಗೆ 1943ರಿಂದ ಸಮಾಜದ ಸಂಘಟನೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದಿಶೆಯಲ್ಲಿ ತೊಡಗಿಸಿಕೊಂಡಿದೆ. ಅಮೃತಮಹೋತ್ಸವ ವರ್ಷದ ಹರ್ಷದಲ್ಲಿರುವ ಹವ್ಯಕ ಮಹಾಸಭೆಯು ಡಿ. 28, 29 ಹಾಗೂ 30ರಂದು ಐತಿಹಾಸಿಕ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ
Read Moreರಾಮಮಂದಿರ ನಿರ್ಮಾಣದ ಕುರಿತು ಶ್ರೀಸಂಸ್ಥಾನದ ನಿಲುವೇನು?- ವೀಕ್ಷಿಸಿ ನಾಳೆ ರಾತ್ರಿ ದಿಗ್ವಿಜಯ ಸುದ್ದಿವಾಹಿನಿಯಲ್ಲಿ
ಬೆಂಗಳೂರು: ನಾಳೆ ಅಂದ್ರೆ ನವೆಂಬರ್ ದಿಗ್ವಿಜಯ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ವಿಶೇಷ ಧಾರ್ಮಿಕ ಸಂದರ್ಶನ ಪ್ರಸಾರವಾಗಲಿದೆ. ರಾತ್ರಿ 9.27 ಕ್ಕೆ ಸರಿಯಾಗಿ ದಿಗ್ವಿಜಯ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ಇಂಟರವ್ಯೂಪ್ರಸಾರವಾಗಲಿದ್ದು ಹಲವು ವಿಚಾರಗಳ ಕುರಿತು ಶ್ರೀಸಂಸ್ಥಾನದವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರಾಮಮಂದಿರನಿರ್ಮಾಣ, ಹಾಗೂ ದೇಗುಲಗಳ ಸರ್ಕಾರಿ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಶ್ರೀಸಂಸ್ಥಾನದವರು ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು ದಿಗ್ವಿಜಯ ವಾಹಿನಿಯಲ್ಲಿ ಸಂದರ್ಶನದ ಜೊತೆಗೆ ನಾಡಿನ ಜನಪ್ರಿಯ ದಿನಪತ್ರಿಕೆ ವಿಜಯವಾಣಿ ಯಲ್ಲಿ ಇದೇ ಸಂದರ್ಶನದ ವರದಿ
Read Moreಜೇಡ್ಲ ಗೋಶಾಲೆಯಲ್ಲಿ ದೀಪಾವಳಿ : ಗೋಪೂಜೆ- ಕುಂಕುಮಾರ್ಚನೆ
ಸುಳ್ಯ : ಸುಳ್ಯ ಹವ್ಯಕ ವಲಯದ ವತಿಯಿಂದ ಸಂಪಾಜೆಯ ಜೇಡ್ಲದಲ್ಲಿರುವ ಶ್ರೀಮಠದ ಗೋಶಾಲೆಯಲ್ಲಿ ನವೆಂಬರ್ 09ರಂದು ಶೃದ್ಧಾಭಕ್ತಿಯಿಂದ ಗೋಪೂಜೆ ನೆರವೇರಿಸಲಾಯಿತು. ಗೋಪೂಜೆ ಸಂದರ್ಭದಲ್ಲಿಯೇ ಮಾತೆಯರು ಕುಂಕುಮಾರ್ಚನೆ ಗೈಯ್ದರು. ಅಲ್ಲದೇ ಸುಳ್ಯ ವಲಯ ವೈದಿಕ-ಸಂಸ್ಕಾರ ವಿಭಾಗದ ವತಿಯಿಂದ 114ನೇ ವೇದವಾಹಿನಿ ಪಾರಾಯಣವನ್ನೂ ಕೈಗೊಳ್ಳಲಾಯಿತು. ವೈದಿಕರಾದ ಎತ್ತುಕಲ್ಲು ಶ್ರೀ ನಾರಾಯಣ ಭಟ್, ಅರಂಬೂರು ಶ್ರೀ ಕೃಷ್ಣ ಭಟ್, ಶ್ರೀ ವಿಶ್ವಕೀರ್ತಿ ಜೋಯಿಸರು, ಶ್ರೀ ವೆಂಕಟೇಶ ಶಾಸ್ತ್ರೀ ಪಾರಾಯಣ ಹಾಗೂ ಇತರ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು. ವಲಯದ ಅಧ್ಯಕ್ಷರಾದ
Read Moreಗೋಸ್ವರ್ಗದಲ್ಲಿ ಗವ್ಯೋತ್ಪನ್ನ ತರಬೇತಿ ಶಿಬಿರ
ಸಾವಿರದ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ, ಸಪ್ತದೇವತೆಗಳ ಸನ್ನಿಧಿಯಾದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಸ್ವರ್ಗದಲ್ಲಿ ಕರ್ನಾಟಕ ರಾಜ್ಯ ಗೋಪರಿವಾರದ ಆಶ್ರಯದಲ್ಲಿ ನವೆಂಬರ್ 23,24,25 ರಂದು ಗವ್ಯೋತ್ಪನ್ನಗಳ ತಯಾರಿಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರ ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಗೋಮಯ, ಗೋಮೂತ್ರ ಸೇರಿದಂತೆ ಆರೋಗ್ಯ, ಕೃಷಿ, ಪರಿಸರದ ಸಮೃದ್ಧಿಗೆ ಸಹಕಾರವಾಗುವ ವಿವಿಧ ಗವ್ಯೋತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿಕೆಯ ಜೊತೆ ತರಬೇತಿ ನೀಡಲಾಗುವುದು. ಮೂರು ದಿನಗಳ ವಸತಿ ಸಹಿತ ಶಿಬಿರದಲ್ಲಿ ಊಟೋಪಚಾರ ಹಾಗೂ ಸಾಮೂಹಿಕ ವಸತಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಆಸಕ್ತರು ನವೆಂಬರ್ 20ನೇ
Read More