ಲೇಖನ
ಶ್ರೀಶಂಕರರ ಪರ್ವಕ್ಕೆ ಶುಭಾಕ್ಷತೆಯ ಆರಂಭ
ಸಿದ್ದಾಪುರ: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ಧರೆಗವತರಿಸಿದ ಪುಣ್ಯದಿನ ವೈಶಾಖ ಶುಕ್ಲ ಪಂಚಮೀ. ತದಂಗವಾಗಿ ‘ಶಂಕರಪಂಚಮೀ’ ಕಾರ್ಯಕ್ರಮವು 20-04-2026 ರಿಂದ 22-04-2026ರ ವರೆಗೆ ಶ್ರೀರಾಮದೇವ ಭಾನ್ಕುಳಿಮ~ಗೋಸ್ವರ್ಗದಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿ-ಮಾರ್ಗದರ್ಶನಗಳೊಂದಿಗೆ ಪರಮಗುರುಗಳನ್ನು-ಜಗದ್ಗುರುಗಳನ್ನು ಆರಾಧಿಸುವ ಪುಣ್ಯಕಾರ್ಯಗಳು ನಡೆಯಲಿವೆ. ಅಕ್ಕಿಕಾಳು ಅರಸಿನ – ಕುಂಕುಮಗಳೊಂದಿಗೆ ಚೆನ್ನಾಗಿ ಬೆರೆತರೆ ಮಾತ್ರ ಅಕ್ಷತೆಯಾಗಬಲ್ಲುದು. ಆ ಹದ ನೋಡಿ ಅದನ್ನು ಕಲಸಿ ಅಕ್ಕಿ ಕಾಳನ್ನು ಅಕ್ಷತೆಯಾಗಿಸುವುದೇ ಒಂದು ಮಂಗಲಕಾರ್ಯ. ಶುಭಕಾರ್ಯಕ್ಕೆ ಬಳಸುವ ಅಕ್ಷತೆಯನ್ನು ಮಾಡಲು ಶುದ್ಧಾಂತರಂಗ ಬೇಕು.
Read Moreಹವಿ ಸವಿ ತೋರಣ – ೨೨ ಸಂಸ್ಕಾರದ ಪ್ರತಿಬಿಂಬ ನಮ್ಮ ವಸ್ತ್ರಸಂಹಿತೆ
ನಮ್ಮ ಸಮಾಜಲ್ಲಿ ಹೆಮ್ಮಕ್ಕೊಗೆ ಯೇವಗಲೂ ವಿಶೇಷ ಗೌರವ ಇದ್ದು ಹೇಳಿ ನಮಗೆ ಗೊಂತಿದ್ದು. ನಮ್ಮ ಹಿರಿಯರು ಹೇಳುವ ಹಾಂಗೆ ‘ ಎಲ್ಲಿ ಹೆಮ್ಮಕ್ಕೋಗೆ ಗೌರವ ಸಿಕ್ಕುತ್ತೋ ಅಲ್ಲಿ ದೇವತೆಗೋ ನೆಲೆಸಿರ್ತ್ತವಡ’. ಹಾಂಗಾಗಿಯೇ ಹೆಮ್ಮಕ್ಕಳ ಗೃಹಲಕ್ಷ್ಮಿ ಹೇಳಿ ಲಕ್ಷ್ಮೀದೇವಿಗೆ ಹೋಲಿಸುದು. ಕೂಸುಗಳ ಅಂತೂ ಭಾಗ್ಯಲಕ್ಷ್ಮಿ ಹೇಳಿಯೇ ಹೇಳುದು. ಈ ಸರ್ತಿ ಲಕ್ಷ್ಮೀ ದೇವಿಯರ ಹಾಂಗೆ ಇಪ್ಪ ಹೆಮ್ಮಕ್ಕಳ ವಸ್ತ್ರ ವಿನ್ಯಾಸದ ವಿಶಯವ ಆಲೋಚನೆ ಮಾಡುವ° ಹೆಮ್ಮಕ್ಕಳ ದೇಹ ಹೇಳಿದರೆ ದೇವಸ್ಥಾನದಷ್ಟೇ ಪವಿತ್ರ ಹೇಳಿ ನಮ್ಮ ಹಿರಿಯರು ಹೇಳಿದ್ದವು.
Read Moreಗುರುಭಕ್ತಿ ಮತ್ತು ಗೋಸೇವೆಯ ಸಮನ್ವಯ – ವಿಜಯಲಕ್ಷ್ಮಿ ಸೊಂದಿ
ಶ್ರೀರಾಮಚಂದ್ರಾಪುರ ಮಠದ ಸಕ್ರಿಯ ಕಾರ್ಯಕರ್ತೆಯಾಗಿ, ಗೋಮಾತೆಯ ಸೇವೆ ಮಾಡುತ್ತಾ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿರುವವರು ಮಂಗಳೂರು ಮಂಡಲ, ಬಾಯಾರು ವಲಯದ ಶಿವ ಶರ್ಮ ಸೊಂದಿ ಇವರ ಪತ್ನಿ ವಿಜಯಲಕ್ಷ್ಮಿ ಸೊಂದಿ. ಹಿಳ್ಳೆಮನೆ ಎಚ್.ಎಸ್. ಮಹಾಲಿಂಗ ಭಟ್ ಮತ್ತು ಗಂಗಮ್ಮ ದಂಪತಿಗಳ ಪುತ್ರಿಯಾಗಿ ಸಂಸ್ಕಾರಯುತ ವಾತಾವರಣದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡವರು. ವಿಜಯಲಕ್ಷ್ಮಿ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿ. ಅವು ದೈವಸ್ವರೂಪಿಗಳು ಎಂದು ಅವರ ನಂಬಿಕೆ. ಚಿಕ್ಕಂದಿನಿಂದಲೇ ಹಸುಗಳೊಂದಿಗೆ ಬೆಳೆದ ಇವರು, ತಮ್ಮ ಬಾಲ್ಯದ ದಿನಗಳಲ್ಲಿ
Read Moreಯುವ ಜನತೆ ಕೃಷಿಯ ಕೊಶಿಯ ತಿಳಿಯೆಕು
ಕೃಷಿ ತೋ ನಾಸ್ತಿ ದುರ್ಭಿಕ್ಷಂ ಜಪತೋ ನಾಸ್ತಿ ಪಾತಕಂ ‘ ಹೇಳಿ ನಮ್ಮ ಹೆರಿಯವು ಹೇಳಿದ್ದು ಕೃಷಿಯ ಮಹತ್ವದ ಬಗ್ಗೆ. ಕೃಷಿ ಇಪ್ಪವ° ಎಂದೂ ಬಡವ° ಅಲ್ಲ. ‘ ಬೇಸಾಯಗಾರ° ಬೇಗ ಸಾಯ° ‘ ಹೇಳುವ ಗಾದೆಮಾತು ಬಪ್ಪಲೆ ಕಾರಣವೂ ಕೃಷಿಕರ ಮೇಗೆ ಇಪ್ಪ ಗೌರವಂದಲೇ. ಮೊದ್ಲಾಣ ಕಾಲಲ್ಲಿ ಜನರ ಶ್ರೀಮಂತಿಕೆಯ ಅಳಕೊಂಡಿದ್ದದೇ ತೋಟ,ಗದ್ದೆ,ಹಟ್ಟಿಲಿಪ್ಪ ದನಗಳ ಸಂಖ್ಯೆಯ ಲೆಕ್ಕ ಹಾಕಿಕ್ಕಿ. ಆದರೆ ಇಂದು ಆ ಸ್ಥಿತಿ ಬದಲಾಯಿದು. ನಮ್ಮ ದೇಶದ ಬೆನ್ನೆಲುಬಾಗಿದ್ದ ಕೃಷಿಯ ಬೆಳೆಗೊಕ್ಕೆ ಇಂದು ಸರಿಯಾದ
Read Moreನಮ್ಮ ಮನೆ ಹವ್ಯಕಭವನ
(ಶ್ರೀಸಂಸ್ಥಾನದವರ ಅನುಗ್ರಹದಿಂದ ಕಾರ್ಯನಿರ್ವಹಿಸುತ್ತಿರುವ ಗುರುವಾಯನಕೆರೆಯ ‘ನಮ್ಮ ಮನೆ’ ಅಂಗಸಂಸ್ಥೆಯಲ್ಲಿ ಬರುವ ಮಾರ್ಚ್ ೪ ರಂದು ಶ್ರೀಮಠದ ೩೪ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ ನಡೆಯಲಿದೆ. ತನ್ನಿಮಿತ್ತ ‘ನಮ್ಮ ಮನೆ’ಯ ಪರಿಚಯ.) ಮಂಗಳೂರು ಹೋಬಳಿಯು (ಪ್ರಾಂತ್ಯ) ಗೋಕರ್ಣ ಮಹಾಮಂಡಲದ ಮೂರು ಹೋಬಳಿಗಳಲ್ಲಿ ಒಂದು. ಈಗಿನ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈ ಹೋಬಳಿಯು ಹಬ್ಬಿದೆ. ಇದರಲ್ಲಿ ಉಪ್ಪಿನಂಗಡಿ, ಮಂಗಳೂರು ಮತ್ತು ಮುಳ್ಳೇರಿಯ ಮಂಡಲಗಳು ಇವೆ.
Read Moreಗುರುಪಥದ ಮೌನಾನುರಾಗಿ: ಭಾಗ್ಯ ಅಶೋಕ್ ಗಡಿಕಟ್ಟೆ
ಗುರುಭಕ್ತಿಗೆ ಶರಣಾದ ಬದುಕು ಮೌನವಾಗಿದ್ದರೂ ಅರ್ಥಪೂರ್ಣವಾಗುತ್ತದೆ ಎಂಬುದಕ್ಕೆ ರಾಮಚಂದ್ರಾಪುರ ಮಂಡಲದ ಪುರಪ್ಪೆಮನೆ ವಲಯದ ಹೆಗ್ಗೋಡು ಸಮೀಪದ ಗಡಿಕಟ್ಟೆಯ ಅಶೋಕ ಅವರ ಧರ್ಮಪತ್ನಿ ಭಾಗ್ಯ ಅಶೋಕ್ ಅವರ ಜೀವನವೇ ಮಾದರಿ. ಮಣಗೋಡು ಮಹಾಬಲೇಶ್ವರ–ಪಾರ್ವತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಭಾಗ್ಯ ಅವರು, ಚಿಕ್ಕಂದಿನಿಂದಲೇ ಆಧ್ಯಾತ್ಮಿಕ ಸಂಸ್ಕಾರಗಳಲ್ಲಿ ಬೆಳೆದವರು. ತಾಯಿಯ ತವರು ಮನೆಯಿಂದಲೇ ಅವರಿಗೆ ಶ್ರೀಮಠದ ಬಗ್ಗೆ, ಶ್ರೀಗುರುಗಳ ಬಗ್ಗೆ ಅರಿವು ಮೂಡಿತು. ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಿತು. ಮದುವೆಗೆ ಮುನ್ನವೇ ಅವರ ತವರುಮನೆಗೆ
Read Moreಗ್ರಸ್ತೋದಿತ-ಚಂದ್ರಗ್ರಹಣ
ಆಕಾಶದಲ್ಲಿ ಗ್ರಹಗಳ ಪರಸ್ಪರ ಯೋಗ ಸಂಯೋಗಗಳಿಂದ ಉಂಟಾಗುವ ಒಂದು ಕೌತುಕ ಘಟನೆ ಗ್ರಹಣ. ಬುವಿಯಿಂದ ನೋಡುಗನಿಗೆ ಒಂದು ಆಕಾಶಕಾಯವು ಇನ್ನೊಂದು ಆಕಾಶಕಾಯವನ್ನು ಆಚ್ಛಾದಿಸಿದಂತೆ (ಮುಚ್ಚಿದಂತೆ) ಕಂಡುಬಂದರೆ ಅದನ್ನು ಗ್ರಹಣ ಎನ್ನುವರು. ಎಲ್ಲಾ ಗ್ರಹಗಳಿಗೂ ಗ್ರಹಣ ಉಂಟಾಗುತ್ತದೆಯಾದರೂ ಸೂರ್ಯ-ಚಂದ್ರರ ಗ್ರಹಣವನ್ನೇ ಗ್ರಹಣಶಬ್ದದಿಂದ ತಿಳಿಯುತ್ತೇವೆ. ಗ್ರಹಣದಲ್ಲಿ ಖಗ್ರಾಸಗ್ರಹಣ, ಖಂಡಗ್ರಾಸಗ್ರಹಣ, ವಲಯಗ್ರಹಣ ಎಂದು ಪ್ರಧಾನ ಭೇದಗಳಿವೆ. ಹಾಗೆಯೇ ಅವುಗಳಲ್ಲಿ ಗ್ರಸ್ತೋದಯಗ್ರಹಣ, ಗ್ರಸ್ತಾಸ್ತಗ್ರಹಣಗಳೂ ಸಂಭವಿಸುತ್ತವೆ. ಪ್ರಸ್ತುತ ಗ್ರಸ್ತೋದಯಚಂದ್ರಗ್ರಹಣಕ್ಕೆ ನಾವು ಸಾಕ್ಷಿಯಾಗುವವರಿದ್ದೇವೆ. ಗ್ರಸ್ತೋದಯ ಚಂದ್ರಗ್ರಹಣ: ವಿಶ್ವಾವಸು ಸಂವತ್ಸರದ ಫಾಲ್ಗುನ ಪೂರ್ಣಿಮಾ ಮಂಗಳವಾರ (ಮಾರ್ಚ್ 3)
Read Moreಪ್ರಧಾನಮಠ ಪುನರ್ನಿರ್ಮಾಣ ಸಂಭ್ರಮದ ನಡುವೆ ನೆನಪಿನ ಅವಿಸ್ಮರಣೀಯ ಕ್ಷಣಗಳು
ಅದು 1999ರ ಸಮಯ. ಅಪ್ಪನ ಜೊತೆ ರಾಮೋತ್ಸವಕ್ಕೆಂದು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಬಂದಿದ್ದ ನನಗೆ ವಿಸ್ಮಯವಾಗಿತ್ತು. ಅಂದು ಜಾತ್ರೆಯೇ ಎಂಬಂತೆ ನೆರೆದಿತ್ತು ಜನ ಸಾಗರ. ಮಠದ ತುಂಬೆಲ್ಲ ಶೃಂಗಾರ, ಮಂತ್ರಗಳ ಸುಸ್ವರ, ತೇರಿನ ಸಡಗರ, ಸುತ್ತಲೂ ಹಚ್ಚ ಹಸಿರಿನ ಚಿತ್ತಾರ, ಅಪರೂಪದ ದಂತ ಸಿಂಹಾಸನ. ಓ, ಸ್ವರ್ಗವೇ ಧರೆಗಿಳಿದಂತಿತ್ತು. ಚಿಕ್ಕವಳಾಗಿದ್ದ ನನಗೆ ಇದನ್ನೆಲ್ಲಾ ನೋಡುವುದೇ ಒಂದು ವಿಸ್ಮಯ. ಜಗತ್ತಿನ ಏಕೈಕ ಅವಿಚ್ಛಿನ್ನ ಪರಂಪರೆ, ಅಗಸ್ತ್ಯ ಮುನಿಗಳು ಪೂಜಿಸುತ್ತಿದ್ದ ರಾಮಾದಿ ವಿಗ್ರಹಗಳು, ಚಂದ್ರಮೌಳೀಶ್ವರ ಲಿಂಗ, ರಾಜರಾಜೇಶ್ವರಿ,
Read Moreಹವಿ ಸವಿ ತೋರಣ – ೨೧ ಸೊಪ್ಪು, ನಾರು – ಬೇರು ಇದುವೇ ಅಜ್ಜಿಮದ್ದು
ಹವ್ಯಕ ಸಂಸ್ಕೃತಿಲಿ ಅಜ್ಜಿಮದ್ದು ಹೇಳುದು ಮನೆಲಿ ನಿತ್ಯಕ್ಕೆ ಉಪಯೋಗಿಸುವ ಆಹಾರವಸ್ತುಗಳನ್ನೇ. ಅದು ಒಂದು ವೈದ್ಯಕೀಯ ಪದ್ದತಿ ಅಲ್ಲದ್ರೂ ಅದರಿಂದ ನಮ್ಮ ಆರೋಗ್ಯ ಮಾಂತ್ರ ಚೆಂದಕೆ ಒಳಿತ್ತು ಹೇಳುವ ಧೈರ್ಯ. ಹೆಚ್ಚಾಗಿ ಹೀಂಗಿದ್ದ ಮನೆಮದ್ದುಗಳ ತಯಾರು ಮಾಡುದು ಹೆಮ್ಮಕ್ಕೊ ಆದ ಕಾರಣ ಅದಕ್ಕೆ ಅಜ್ಜಿಮದ್ದು ಹೇಳಿ ಹೆಸರು ಬಂದದಾದಿಕ್ಕು. ನಮ್ಮ ಮನೆಗಳ ಅಟ್ಟುಂಬೊಳ ಹೇಳಿರೆ ಅದೊಂದು ಸಣ್ಣ ವೈದ್ಯಶಾಲೆಯ ಹಾಂಗೇ. ಬೆಶಿಲಿಂಗೆ ಹಾಕಿ ಲಾಯ್ಕಕೆ ಒಣಗಿಸಿ, ಗಾಳಿ ತಾಗದ್ದಾಂಗೆ ಜೆಂಗಲ್ಲಿ ಮಡುಗಿದ ಶುಂಠಿ, ದಾಳಿಂಬೆ ಓಡು,
Read Moreನಿಷ್ಠೆಯ ಸೇವೆಗೆ ಒಲಿದ ಗುರುಕಾರುಣ್ಯ – ಭಾಗ್ಯಲಕ್ಷ್ಮಿ ವಿ. ಭಟ್, ಬೆಳ್ಳಾರೆ
‘ ಶ್ರದ್ಧೆ ಮತ್ತು ಭಕ್ತಿಯಿಂದ ಗೋಸೇವೆ, ಗುರುಸೇವೆ ಮಾಡಿದರೆ ಗುರುಕೃಪೆ ತಾನಾಗಿ ಒಲಿದು ಬರುತ್ತದೆ ‘ ಎನ್ನುತ್ತಾ ಶ್ರೀಮಠದ ಸೇವೆ ಹಾಗೂ ಗೋಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಉಪ್ಪಿನಂಗಡಿ ಮಂಡಲ ಬೆಳ್ಳಾರೆ ವಲಯದ ಭಾಗ್ಯಲಕ್ಷ್ಮಿ ವಿ. ಭಟ್ ಅವರ ಗುರುಸೇವೆ ಎಲ್ಲರಿಗೂ ಸ್ಫೂರ್ತಿಯ ಸೆಲೆ. ಮೂಲತಃ ಉಳುವಾನದ ವಿಟ್ಲ ನಿವಾಸಿಗಳಾದ ಈಶ್ವರ ಭಟ್ ಮತ್ತು ಹೈಮಾವತಿ ದಂಪತಿಗಳ ಪುತ್ರಿಯಾದ ಇವರಿಗೆ ಬಾಲ್ಯದಿಂದಲೇ ಮನೆಯಲ್ಲಿನ ಧಾರ್ಮಿಕ ವಾತಾವರಣ, ಹಿರಿಯರ ಮಾರ್ಗದರ್ಶನ ಸಂಸ್ಕಾರದ ಮೂಲ ಮಂತ್ರವನ್ನು ಕಲಿಸಿತು. ಮುಂದೆ ಮೂಲತಃ
Read More‘ಗುರುಕೃಪೆ ಜೀವನಪಥದ ಅಮೃತವರ್ಷ ‘ – ಕುಸುಮಾ ಪೆರ್ಮುಖ
” ಗುರುಕೃಪೆಯೊಂದಿದ್ದರೆ ಜೀವನದಲ್ಲಿ ಎಲ್ಲವೂ ಸಾಧ್ಯ. ನೋವು, ಸಂಕಷ್ಟ ಎಲ್ಲವೂ ಗುರುಚರಣ ಸ್ಮರಣೆಯ ಮುಂದೆ ಮಂಜಿನಂತೆ ಕರಗಿ ಹೋಗುತ್ತವೆ. ಬದುಕಿನ ಪ್ರತಿಯೊಂದು ಹಂತದಲ್ಲೂ ಗುರುಗಳ ಅನುಗ್ರಹ ನಮ್ಮ ಮೇಲೆ ಇದೆ ಎಂಬ ಭರವಸೆಯೇ ನಮ್ಮ ಜೀವನದ ಬಹುದೊಡ್ಡ ಭಾಗ್ಯ ” ಎಂದು ಭಾವಪೂರ್ಣವಾಗಿ ನುಡಿಯುವವರು ಮುಳ್ಳೇರಿಯ ಮಂಡಲ ಪಳ್ಳತ್ತಡ್ಕ ವಲಯದ ಪೆರ್ಮುಖ ಈಶ್ವರ ಭಟ್ ಅವರ ಪತ್ನಿ ಕುಸುಮಾ ಪೆರ್ಮುಖ. ಬಾಯಾರು ಕೆರೆಮೂಲೆ ತಿರುಮಲೇಶ್ವರ ಭಟ್, ವಿಜಯಲಕ್ಷ್ಮಿ ದಂಪತಿಗಳ ಪುತ್ರಿಯಾದ ಕುಸುಮಾ ಅವರು ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ,
Read Moreಹವಿ ಸವಿ – ತೋರಣ ೨೦ ಕೆಡ್ವಸ – ತುಳುನಾಡಿನ ಒಂದು ವಿಶೇಷ ಆಚರಣೆ
ಮಕರ ಸಂಕ್ರಮಣ ಕಳುದು ಕುಂಭ ತಿಂಗಳು ನಮ್ಮ ಕಾಲಬುಡಕ್ಕೆ ಬಂದು ನಿಂದಿದು. ಅದರ್ಲಿ ಎಂತ ವಿಶೇಶ ಹೇಳಿ ಕೇಳ್ತೀರಾ ? ಈ ಸಮಯಲ್ಲೇ ಕೆಡ್ವಸ ಆಚರಣೆ. ಮಕರ ತಿಂಗಳು ೨೭ರಿಂದ ಮತ್ತೆ ಕುಂಭ ಸ೦ಕ್ರಮಣದವರೆಗೆ ನಮ್ಮ ಊರಿಲ್ಲಿ ಕೆಡ್ವಸ ಹೇಳುವ ಒಂದು ವಿಶೇಷ ಆಚರಣೆ ಇದ್ದು. ಕೆಡ್ವಸ ಹೇಳಿದರೆ ನಮ್ಮ ಮಂಗಳೂರು ಹೋಬಳಿಯವಕ್ಕೆ ಗೊಂತಿಕ್ಕು. ಬೇರೆ ಹೊಡೆಲಿ ಈ ಆಚರಣೆ ಇದ್ದಾಳಿ ಗೊಂತಿಲ್ಲೆ. ಹಾಂಗಾಗಿ ಇಂದು ಕೆಡ್ವಸ ಆಚರಣೆಯ ಕ್ರಮಂಗೊ ಹೇಂಗೇಳಿ ನೋಡುವೊ° ನಮ್ಮ ಪ್ರತಿಯೊಂದು
Read Moreಅಪೂರ್ವ ಸೇವಾವಸರವಿದು ಪ್ರಧಾನಮಠಕೆ…
ಹೊಸನಗರ: ಸಹಸ್ರಮಾನದ ಇತಿಹಾಸ ನಿರ್ಮಾಣದ ಯೋಗ ಒದಗಿ ಬಂದಿದೆ. ಶ್ರೀಸಂಸ್ಥಾನದವರ ದಿವ್ಯಸಂಕಲ್ಪದ ಸುವರ್ಣಯೋಗವೇ ಪ್ರಧಾನಮಠದ ಪುನರ್ನಿರ್ಮಾಣ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ವಿಶ್ವಾವಸು ಫಾಲ್ಗುನ ಶುದ್ಧ ದಶಮಿಯಂದು, (26-02-2026) ವೃಷಭ ಲಗ್ನದ ಶುಭಮುಹೂರ್ತದಲ್ಲಿ ಪ್ರಧಾನಮಠದಲ್ಲಿ ಶ್ರೀರಾಮ ಸಾನ್ನಿಧ್ಯದ ಶಿಲಾನ್ಯಾಸವು ನಡೆಯಲಿದೆ. ತನ್ಮೂಲಕ ಈ ಪುಣ್ಯ ಕಾರ್ಯಕ್ಕೆ ಶುಭಾರಂಭವು ಸಿಗಲಿದೆ. “ರಾಮ ಪರಿವಾರದ ನೆಲೆಯಾಗಲಿದೆ ಶಿಲೆ; ಕಲೆತು ಬೆರೆಯಲಿದೆ ನಾನಾ ಸೇವೆ; ಅಳಿಲಾಗೋಣ ದಿವ್ಯಸೇವೆಯಲ್ಲಿ ಅಮರವಾಗಲಿ ಸದ್ಭಾವವಿಲ್ಲಿ” ಎಂಬ ಭಾವದಲ್ಲಿ ಶಿಷ್ಯ-ಭಕ್ತರೆಲ್ಲರೂ ಅಜರಾಮರ
Read More” ಶ್ರೀಗುರುಕೃಪೆಯ ಸ್ಪರ್ಶದಿಂದ ಬದುಕಿಗೆ ಹೊಸ ಬೆಳಕು ” – ಚಿತ್ರಾ ಭಟ್ ಬೆಕ್ಕುತ್ತೆ
” ಶ್ರೀಮಠದ ಸಂಪರ್ಕಕ್ಕೆ ಬಂದ ಬಳಿಕ ನನ್ನ ಬದುಕಿನ ಪಥವೇ ಬದಲಾಗಿದೆ. ಕಷ್ಟದ ಸಮಯದಲ್ಲಿ ಶ್ರೀಗುರು ಚರಣಗಳಿಗೆ ಶರಣಾದರೆ ಬೆಳಕಿನ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬುದನ್ನು ನಾನು ನನ್ನ ಜೀವನದಲ್ಲೇ ಅನುಭವಿಸಿದ್ದೇನೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಹೊನ್ನಾವರ ಮಂಡಲ ಮುಗ್ವಾ ವಲಯದ ಬೆಕ್ಕುತ್ತೆ ರಾಯಭಟ್ರ ಮನೆಯ ಗಣಪತಿ ಭಟ್ ಅವರ ಪತ್ನಿ ಚಿತ್ರಾ ಭಟ್. ಹೊನ್ನಾವರದ ನಾರಾಯಣ ಭಟ್ – ಮಾದೇವಿ ಭಟ್ ದಂಪತಿಗಳ ಪುತ್ರಿಯಾದ ಚಿತ್ರಾ ಭಟ್ ಅವರು ಕಳೆದ ೧೫ ವರ್ಷಗಳಿಂದ
Read Moreಶಿಲಾನ್ಯಾಸ – ಅದಕ್ಕೇನು ಇಷ್ಟು ಮಹತ್ತ್ವ?
ನ್ಯಾಸವೆಂಬುದರ ಸಾಮಾನ್ಯ ಅಭಿಪ್ರಾಯ ಇಡುವುದು. ಶಿಲಾನ್ಯಾಸವೆಂದರೆ ಶಿಲೆಯನ್ನಿಡುವುದು ಎಂದರ್ಥ. ಅದಕ್ಕೇನು ಇಷ್ಟು ಮಹತ್ವ? ದೇವಾಲಯ ನಿರ್ಮಾಣದಲ್ಲಿ ಶಿಲಾನ್ಯಾಸ, ನಿಧಿಕಲಶ ಸ್ಥಾಪನೆ,ಷಡಾಧಾರ,ಗರ್ಭನ್ಯಾಸ ಇವುಗಳು ಒಂದೊಂದು ಹಂತದ ಪ್ರಾರಂಭದ ಕಾರ್ಯಕ್ರಮಗಳೆಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ಆಯಾ ಪ್ರಾರಂಭದ ಕಾರ್ಯಗಳಿಗೆ ಒಂದು ಪ್ರಾಮುಖ್ಯ ವೂ ಶಾಸ್ತ್ರಗಳಲ್ಲಿ ಹೇಳಿದ್ದಿದೆ. ಪ್ರಸ್ತುತ ಪ್ರಧಾನ ಮಠ ಶ್ರೀರಾಮಚಂದ್ರಾಪುರ, ಹೊಸನಗರ ಇದರ ಪುನರ್ನಿರ್ಮಾಣ ಕಾರ್ಯದಲ್ಲಿ ಶಿಲಾನ್ಯಾಸವನ್ನು ಮಾಡಲಾಗುತ್ತಿದೆ. ಹೇಗೆ ಸಣ್ಣ ಬೀಜದಲ್ಲಿ ಇಡೀ ವೃಕ್ಷವು ಅಡಕವಾಗಿರುತ್ತದೆಯೋ,ಆ ಸಣ್ಣ ವೃಕ್ಷವು ಮುಂದೆ ಹೆಮ್ಮರವಾಗಿ ಬೆಳೆಯುತ್ತದೆಯೋ ಹಾಗೆಯೇ ಇಲ್ಲಿ ನ್ಯಾಸ
Read Moreಹವಿ ಸವಿ – ತೋರಣ ೧೯ ದೇವರ ಸ್ವಂತ ಊರಿಲ್ಲಿ ಒಂದು ಕುಂಭಮೇಳ
ನಮ್ಮ ಆದಿಗುರು ಶಂಕರಾಚಾರ್ಯರು ಹುಟ್ಟಿದ ಪುಣ್ಯದ ಜಾಗೆ ಕೇರಳವ ದೇವರ ಸ್ವಂತ ಊರು ಹೇಳಿಯೇ ಹೇಳ್ತವು. ಪರಶುರಾಮ ಸೃಷ್ಟಿಯ ಭೂಮಿ ಈ ಕೇರಳ. ಇಂತಹ ಪಾವನ ಊರಿಲ್ಲಿ ಒಂದು ವಿಶೇಷವಾದ ಕಾರ್ಯಕ್ರಮ ನಡೆದ್ದದು ಹೆಚ್ಚಿನವಕ್ಕೂ ಗೊಂತಾಯಿದಿಲ್ಲೆ ಕಾಣ್ತು. ಕೇರಳದ ಮಲಪುರಂ ಜಿಲ್ಲೆಯ ತಿರುನಾವಾಯ ಹೇಳುವ ಪವಿತ್ರ ಕ್ಷೇತ್ರದಲ್ಲಿ ಭಾರತಹೊಳೆಯ ಕರೇಲಿ ಜನವರಿ ೧೮ ರಿಂದ ಫೆಬ್ರವರಿ ೩ ರ ವರೆಗೆ ಈ ಮಾಘ ಮಹೋತ್ಸವ ಅಥವಾ ಕೇರಳ ಕುಂಭಮೇಳ ಗೌಜಿಲಿ ಕಳುದತ್ತು. ತುಂಬಾ ವರ್ಷ ಮೊದಲು
Read Moreಶ್ರೀಮಠದ ಸೇವೆ ಆತ್ಮ ಸಂತೋಷಕ್ಕೆ ದಾರಿ – ಮಹಾದೇವಿ ಸಿ. ಭಟ್ ಶಿರಸಿ
” ಗೋಮಾತೆ ನಮ್ಮ ಸಂಸ್ಕೃತಿಯ ಜೀವಾಳ. ಧರ್ಮ, ಸಂಸ್ಕಾರ, ಜೀವನ ಮೌಲ್ಯಗಳೆಲ್ಲವೂ ಗೋವಿನೊಂದಿಗೆ ಬೆಸೆದುಕೊಂಡಿದೆ. ಬದುಕಿನಲ್ಲಿ ಗೋಸೇವೆಗೆ ಅವಕಾಶ ದೊರೆತರೆ ಅದುವೇ ನಮ್ಮ ಜೀವನದ ಸಾರ್ಥಕತೆ ” ಎಂದು ಶ್ರದ್ಧಾಭಕ್ತಿಗಳಿಂದ ನುಡಿದವರು ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ಶಿರಸಿಯ ಚಂದ್ರಶೇಖರ ಭಟ್ ಅವರ ಪತ್ನಿ ಮಹಾದೇವಿ ಭಟ್. ಮೂಲತಃ ಕುಮಟಾ ಸಮೀಪ ದೇವನೀ ಮಠ ಬಾಡದ ಅನಂತ ಭಟ್ – ಯಮುನಾ ದಂಪತಿಗಳ ಪುತ್ರಿಯಾದ ಮಹಾದೇವಿ ಭಟ್ ಬಾಲ್ಯದಿಂದಲೇ ಧಾರ್ಮಿಕ ವಾತಾವರಣದಲ್ಲಿ ಬೆಳೆದವರು. ತಂದೆ ವೈದಿಕರಾಗಿದ್ದ
Read Moreಹವಿಸವಿ ತೋರಣ – ೧೮ ಜಡೆ ಹೆಣೆಯುವ ಬಾರೇ……
ಕೆಲವು ವರ್ಷದ ನಂತರ ಒಂದು ಹಳೇ ಹಾಡು ಕೇಳಿದೆ. ‘ ಜಡೆ ಹೆಣೆಯುವ ಬಾರೇ….. ಪಾರ್ವತಿಗೆ ಜಡೆ ಹೆಣೆಯುವ ಬಾರೇ…..’ ಎಷ್ಟು ಚೆಂದದ ಹಾಡಿದು. ಆ ಹಾಡು ಕೇಳ್ಯಪ್ಪಗ ಮನಸ್ಸು ಒಂದರಿ ಬಾಲ್ಯದ ನೆಂಪುಗಳ ಹೊಡೆಂಗೆ ಓಡಿತ್ತು. ತಲೆಯ ನಡೂಕೆ ಬೈತಲೆ ತೆಗದು ತಲೆಕಸವಿನ ಎರಡೂ ಹೊಡೆಂಗೆ ಹಾಕಿ, ಕಿಮಿಯ ಹತ್ತರೆ ಎರಡು ಜೆಡೆ ಹಾಕಿ ಅದಕ್ಕೆ ಹೂಗು ಹೂಗಿಪ್ಪ ಬಣ್ಣದ ಲಾಡಿ ಸೇರ್ಸಿ ಮಡ್ಸಿ ಕಟ್ಟಿಂಡಿದ್ದ ಚೆಂದದ ಬಾಲ್ಯ ಎನ್ನದು. ಎಲ್ಲಿಗೆ ಹೋವ್ತರೂ ಆ
Read Moreಗೋಸೇವೆಯ ಪಥಕ್ಕೆ ಗುರುಕೃಪೆಯೇ ದೀಪ – ಶೈಲಜಾ ಸುಬ್ರಹ್ಮಣ್ಯ ದಂಬೆಮೂಲೆ
ಬದುಕು ಅರ್ಥಪೂರ್ಣವಾಗುವುದು ಗೋಸೇವೆ, ಗುರುಸೇವೆಯ ಮೂಲಕವೇ ಎನ್ನುವ ನಂಬಿಕೆಯನ್ನು ತಮ್ಮ ನಿತ್ಯದ ಜೀವನದಲ್ಲಿ ಸಾಕಾರಗೊಳಿಸುತ್ತಿರುವವರು ಮುಳ್ಳೇರಿಯ ಮಂಡಲ ಸುಳ್ಯ ವಲಯದ ಶೈಲಜಾ ಸುಬ್ರಹ್ಮಣ್ಯ ಭಟ್. ಗೋಮಾತೆಯ ಸೇವೆ ಹಾಗೂ ಶ್ರೀಮಠದ ಸೇವೆ ಇವೆರಡೂ ಇವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈಂದುಗುಳಿ ಡಾ. ಗೋಪಾಲಕೃಷ್ಣ ಭಟ್ ಹಾಗೂ ಶಶಿಕಲಾ ದಂಪತಿಗಳ ಪುತ್ರಿಯಾದ ಶೈಲಜಾ ಮೂಲತಃ ಮುಳ್ಳೇರಿಯ ಮಂಡಲದ ಉಕ್ಕಿನಡ್ಕ ಸಮೀಪದ ದಂಬೆಮೂಲೆಯವರಾದ, ಪ್ರಸ್ತುತ ಸುಳ್ಯ ವಲಯದ ಕುದುಪಾಜೆಯಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಭಟ್ಟರ ಪತ್ನಿ. ತಾಯಿಯ ತವರುಮನೆಯಲ್ಲಿ ಅಜ್ಜ
Read Moreಗುರುಕೃಪೆಯ ಅಮೃತ ಸಲಿಲದಲ್ಲಿ ಪುನೀತವಾದ ಕ್ಷಣ
ಗುರು ಕೃಪಾಸಾಗರವೇ ನಮ್ಮ ಬಳಿಗೆ ಹರಿದು ಬಂದಂತಹ ಅನುಭೂತಿ ಮೂಡಿಸಿದ ಈ ಪಾವನ ಕ್ಷಣಗಳನ್ನು ಕೇವಲ ಅಕ್ಷರಗಳಲ್ಲಿ ಹಿಡಿದಿರಿಸುವುದು ಸುಲಭ ಸಾಧ್ಯವಲ್ಲ. ಗುರುಕೃಪಾವರ್ಷದಲ್ಲಿ ಪುನೀತಗೊಂಡವರಿಗೆ ಮಾತ್ರ ಅರಿವಾಗುವ ದಿವ್ಯಾನುಭವವಿದು. ಮಾಣಿ ಮಠದ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಧರ್ಮ, ಶ್ರದ್ಧೆ, ಭಕ್ತಿ ಮತ್ತು ಕೃಪೆಯ ಅಪೂರ್ವ ಸಂಗಮದ ವಾತಾವರಣ ನೆಲೆಸಿತ್ತು. ಈ ಪವಿತ್ರ ವಾತಾವರಣದಲ್ಲಿ ಮನಸ್ಸು ಶ್ರೀಗುರುಸ್ಮರಣೆಯಲ್ಲಿ ತಲ್ಲೀನವಾಗಿತ್ತು. ಬೆಳಗ್ಗೆ ೧೧.೩೦ ರ ಸುಮಾರಿಗೆ ಪರಮಪೂಜ್ಯ ಶ್ರೀಸಂಸ್ಥಾನದವರು ಆಗಮಿಸಿದ ಕ್ಷಣವೇ ಶಿಷ್ಯರ ಹೃದಯಗಳಲ್ಲಿ ಭಕ್ತಿ, ಶ್ರದ್ಧೆಗಳ ಭಾವ ಮೂಡಿತು.
Read More