|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಈ ಸಲದ ಧರ್ಮಭಾರತಿಯಲ್ಲಿ

ಭಾರತೀಯರ ಮನಸ್ಸು, ಸಂಪ್ರದಾಯ, ಪರಂಪರೆಗಳನ್ನು ಭಗವದ್ಭಕ್ತಿಯ ಮೂಲಕ ನೆಲೆಗೊಳಿಸಿ ಉಳಿಸಿ ಬೆಳೆಸುವಲ್ಲಿ ಶ್ರೀತ್ಯಾಗರಾಜರ ಕೊಡುಗೆ ಅಪಾರ. ಅವರು ರಚಿಸಿದ ಉತ್ಸವಸಂಪ್ರದಾಯ ಕೀರ್ತನೆಗಳ ಬಗೆಗಿನ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಸವಿವರ ಬರಹ. ‘ಈ ರಾಜ್ಯದ ಕುರಿತು ಹೇಳಜ್ಜೀ’ ಎಂದ ರಾಜ. ‘ಅದನ್ನು ನೀನು ಕೇಳಬಾರದು. ನಾನು ಹೇಳಲೂ ಬಾರದು’ ಎಂದಳು ಅಜ್ಜಿ. ಕಥೆಯೇನು ಅಡಗೂಲಜ್ಜಿಯ ರಾಜ್ಯದ್ದು? ಶ್ರೀಗೋಪಾಲಕೃಷ್ಣ ಕುಂಟಿನಿಯವರ ಕಥೆಯಲ್ಲಿ. ದಿವ್ಯಸನ್ನಿಧಿಯಲ್ಲಿ ಶ್ರೀಸಂಸ್ಥಾನದವರ ಪ್ರವಚನಾಮೃತ – ನಲಿವಿನ ನೆಲೆಗೆ ನಲವತ್ತು ಮೆಟ್ಟಿಲು. ಶ್ರೀಸಂಸ್ಥಾನದವರ ಲೇಖನಾಮೃತ – ರಾಮರಶ್ಮಿ.

Read More

ಶನಿವಾರ ರಾಮಾಶ್ರಮದಲ್ಲಿ ರಾಮಪದ ಸತ್ಸಂಗ

ಬೆಂಗಳೂರು:- ಏಕಾದಶಿಯ ಹರಿದಿನದಂದು ಶ್ರೀಸಂಸ್ಥಾನದವರು ಶಿಷ್ಯರೊಡಗೂಡಿ ರಾಮಪದಗಳನ್ನು ಹಾಡುವ ರಾಮಪದ ಸಹಜ ಸತ್ಸಂಗ ಕಾರ್ಯಕ್ರಮ ಶನಿವಾರ(೩-೧೧-೨೦೧೮) ದಂದು ಸಂಜೆ ೬ ರಿಂದ ೮ ಗಂಟೆಯವರೆಗೆ ನಡೆಯಲಿದೆ. ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿರುವ ಈ ರಾಮಪದದಲ್ಲಿ ಪ್ರತಿಬಾರಿಯಂತೆ ಶ್ರೀಸಂಸ್ಥಾನ ರಾಮಪದತಲದಲ್ಲಿ ಕುಳಿತು ಶ್ರೀರಾಮನ ಹಾಡುಗಳನ್ನು ಹಾಡುತ್ತ‌ ಶ್ರೀರಾಮನ ಗುಣವಿಶೇಷಗಳನ್ನು ಪರಿಚಯಿಸುತ್ತ ಸತ್ಸಂಗ ನಡೆಸಲಿದ್ದಾರೆ. ಈ ಬಾರಿಯ ರಾಮಪದ ಕಾರ್ಯಕ್ರಮದಲ್ಲಿ ಗಾಯಕರಾಗಿ ಹಿಂದೂಸ್ಥಾನಿ ಸಂಗೀತಕ್ಷೇತ್ರದ ಉದಯೋನ್ಮುಖ‌ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ಪಾಲ್ಗೊಳ್ಳಲಿದ್ದಾರೆ. ಕಲಾರಾಮ ಅರ್ಪಿಸುವ ಈ ಅಪರೂಪದ ರಾಮಪದ ಕಾರ್ಯಕ್ರಮದಲ್ಲಿ ನೀವೆಲ್ಲರೂ

Read More

ಮಾತಾಪಿತೃಗಳಿಗೆ ಪಾದಪೂಜೆ ನೆರವೇರಿಸಿದ ಮಕ್ಕಳು : ಸಂಸ್ಕೃತಿ ಅರಿವು ಮೂಡಿಸಲು ನಡೆಯಿತು ವಿಶಿಷ್ಟ ಕಾರ್ಯಕ್ರಮ..

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಹಾಗೂ ಹೆತ್ತವರ ಮಹತ್ತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಇಂದು ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಶ್ರೀಭಾರತೀವಿದ್ಯಾಲಯದಲ್ಲಿ ಜನ್ಮದಾತರಿಗೆ ಪೂಜೆ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ ಜರುಗಿತು. ಕನ್ನಡ ರಾಜ್ಯೋತ್ಸವದ ಈ ಶುಭದಿನದಂದು ಹೆತ್ತವರ ಪಾದ ತೊಳೆದು ಪೂಜೆ ಸಲ್ಲಿಸಿದ ಮಕ್ಕಳು, ಬದುಕಿಡಿ ತಮ್ಮನ್ನು ಸಲಹುವ ತಂದೆ-ತಾಯಿಗಳನ್ನು ಗೌರವದಿಂದ ಕೊನೆತನಕ ಸಲಹುವ ಶಪಥ ಗೈಯ್ದರು. ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಹಾಗೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ

Read More
ರಾಮಾಶ್ರಮದಲ್ಲಿ ರಾಮದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಪನ್ನ

ಬೆಂಗಳೂರು : ಶ್ರೀರಾಮಚಂದ್ರಾಪುರಮಠದ‌ ಶಾಖಾಮಠವಾದ ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ಸಪರಿವಾರ ಶ್ರೀರಾಮಚಂದ್ರದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಾಗಿ ನಡೆಯಿತು. ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವಿಲಂಬ ಸಂವತ್ಸರದ ಅಶ್ವಯುಜ ಕೃಷ್ಣ ಷಷ್ಠಿ ಹಾಗೂ ಸಪ್ತಮಿಯಂದು ಹಲವು ಧಾರ್ಮಿಕ‌ ಕಾರ್ಯಕ್ರಮಗಳು ನಡೆದವು. (ದಿನಾಂಕ 30.10.2018 ಹಾಗೂ 31.10.2018) ಮಂಗಳವಾರದಂದು ಗುರುದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಣಪತಿ ಪೂಜೆ, ದೇವನಾಂದಿ, ಪುಣ್ಯಾಹ, ಕೌತುಕ ಬಂಧನ, ಧ್ವಜಾರೋಹಣ, ಬಲಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ರಂಗಪೂಜೆ, ಪಲ್ಲಕ್ಕಿ ಉತ್ಸವ,

Read More