ಅಭಿರಾಮ ಹೆಗಡೆ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ
ಮಾನಹಾನಿಕರ ಹೇಳಿಕೆ ನೀಡದಂತೆ ಪ್ರತಿಬಂಧಕಾಜ್ಞೆ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ – ಶ್ರೀಸಂಸ್ಥಾನ ಗೋಕರ್ಣ – ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಘನತೆಗೆ ಧಕ್ಕೆ ಉಂಟುಮಾಡುವ ಹಾಗೂ ಮಾನಹಾನಿಕರವಾದ ಯಾವುದೇ ರೀತಿಯ ಹೇಳಿಕೆಯನ್ನು ಮಾಧ್ಯಮ – ಸಮಾಜಮಾಧ್ಯಮ ಹಾಗೂ ಇನ್ನಿತರ ಯಾವುದೇ ರೀತಿಯಲ್ಲಿ ನೀಡದಂತೆ ಅಭಿರಾಮ್ ಹೆಗಡೆ ವಿರುದ್ಧ ಪ್ರತಿಬಂಧಕಾಜ್ಞೆಯನ್ನು ನ್ಯಾಯಾಲಯ ನೀಡಿದೆ. ಸದರಿ ವ್ಯಕ್ತಿಯು ಮಾಧ್ಯಮ – ಸಮಾಜಮಾಧ್ಯಮ ಮುಂತಾದವುಗಳನ್ನು ಬಳಸಿಕೊಂಡು ಶ್ರೀಮಠ ಹಾಗೂ ಶ್ರೀಗಳ ಗೌರವಕ್ಕೆ ಚ್ಯುತಿತರುವ ಸತ್ಯಕ್ಕೆ ದೂರವಾದ
Read Moreಗೋಸ್ವರ್ಗ
ನೋಡ ಬನ್ನಿರಿ ಭಾನ್ಕುಳಿಯ ಗೋಸ್ವರ್ಗದಿವ್ಯಾವರಣವ ನಡುವಿರುವ ಪುಷ್ಕರಿಣಿ ತೊಟ್ಟಿಹ ಶುದ್ಧನೀರಾಭರಣವ ನವುರುಕೆತ್ತನೆಯಿಹ ಶಿಲಾಮಂಡಪ ಸರೋವರಮಧ್ಯದಿ ಸಪ್ತಸನ್ನಿಧಿಯಲ್ಲಿ ನೆಲೆಸಿದೆ ದೇವತಾಸಾಕ್ಷಾನ್ನಿಧಿ ಪಾವಟಿಗೆ ಪಟ್ಟಿಕೆಯು ಸುತ್ತಲು ಮುಡಿಪು ಜನರಿಗೆ ತಪಿಸಲು ತೀರ್ಥಪಥ ನಾಲ್ಕಿಹುದು ಗೋತೀರ್ಥವನು ಸುಲಭದಿ ತಲುಪಲು ಬಳಿಕಿರುವ ಪರಿವೃತ್ತ ಮೀಸಲು ಗೋವಿರಾಮದ ಬಳಕೆಗೇ ನೆರಳ ಬಯಸುವ ಗೋವುಗಳು ವಿಶ್ರಾಂತಿ ಪಡೆಯುವುದಿಲ್ಲಿಯೇ ಮತ್ತೆ ಮುಂದಿನ ಪರಿಧಿಯಲ್ಲಿದೆ ಗೋವಿಹಾರದ ವಿಸ್ತರ ತೆರೆದ ಬಯಲಲಿ ಸಂಚರಿಸೆ ಗೋವುಗಳಿಗಿದುವೆ ಮಹತ್ತರ ಕೊನೆಯಲಿರುವ ಪರಿಕ್ರಮವೆ ಗೋಭಕ್ತಜನಪ್ರೇಕ್ಷಾಪಥ ಸಾವಿರದ ಗೋವುಗಳ ಒನ್ನೋಟದಲಿ ತೋರಿಪ ಸತ್ಪಥ ಇಲ್ಲಿ ಗೋವೇ
Read Moreಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ : ಶ್ರೀಸಂಸ್ಥಾನದಿಂದ ಅನುಗ್ರಹ ಪಡೆದ ವೈದಿಕರು
ಬೆಂಗಳೂರು: ಬ್ರಹ್ಮರ್ಷಿ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನವು ಇದೇ ಬರುವ 12-11-2018, ಸೋಮವಾರದಿಂದ 20-11-2018, ಮಂಗಳವಾರದವರೆಗೆ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ ಹಮ್ಮಿಕೊಂಡಿದೆ. ರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿ ಮಾಡಿದ ಸಂಪ್ರತಿಷ್ಠಾನದ ಸದಸ್ಯರು, ಹಮ್ಮಿಕೊಂಡಿರುವ ಪಾರಾಯಣದ ವಿಚಾರ ಅರುಹಿ ಮಂತ್ರಾಕ್ಷತೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ ಹಾಗೂ ಮಿತ್ತೂರು ಪುರೋಹಿತ ಶ್ರೀ ತಿರುಮಲೇಶ್ವರ್ ಭಟ್ ಸಂಪಾದಿಸಿದ ‘ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ ಹಾಗೂ ಮೈಕೆ ಶಂಕರನಾರಾಯಣ ಭಟ್ಟ ಜನ್ಮಶತಮಾನ ಸ್ಮರಣಸಂಪುಟ’ ಗ್ರಂಥವನ್ನು ಶ್ರೀಸಂಸ್ಥಾನದವರಿಗೆ ಅರ್ಪಿಸಿ ಆಶೀರ್ವಾದ
Read Moreಶ್ರೀಮಠದ ಶಿಷ್ಯ, ಹಿನ್ನೆಲೆ ಧ್ವನಿ ಕಲಾವಿದ, ನಿರೂಪಕ ಶ್ರೀ ಪ್ರದೀಪ ಬಡೆಕ್ಕಿಲ ಅವರಿಗೆ ‘ಸೃಷ್ಟಿ ಕಲೋಪಾಸಕ ಪ್ರಶಸ್ತಿ’
ಬೆಂಗಳೂರು: ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಶನಿವಾರ ನಡೆದ ಸೃಷ್ಟಿ ಕಲಾವಿದ್ಯಾಲಯದ ಸಂಗೀತ-ನೃತ್ಯೋತ್ಸವ ಸಮಾರಂಭದಲ್ಲಿ ಚಲನಚಿತ್ರ-ಕಿರುತೆರೆ ನಟ, ಟಿವಿ ನಿರೂಪಕ, ಲೇಖಕ, ಶ್ರೀರಾಮಚಂದ್ರಾಪುರಮಠದ ಹಲವು ಪ್ರಸ್ತುತಿಗಳ ಧ್ವನಿ ಕಲಾವಿದರಾಗಿರುವ, ಶ್ರೀಮಠದ ಶಿಷ್ಯರೂ ಆಗಿರುವ ಶ್ರೀ ಪ್ರದೀಪ ಬಡೆಕ್ಕಿಲ ಅವರಿಗೆ ಸೃಷ್ಟಿ ಕಲೋಪಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿರುತೆರೆಯ ಹಲವು ಜನಪ್ರಿಯ ಕಾರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿ ನೀಡಿರುವ ಇವರು ಮೆಟ್ರೋ ರೈಲಿನ ಉದ್ಘೋಷಗಳಿಗೂ ಧ್ವನಿಯಾಗಿದ್ದಾರೆ. ಶ್ರೀಯುತರಿಗೆ ಸಂದ ಗೌರವಕ್ಕೆ ಶ್ರೀಸಂಸ್ಥಾನ ಹಾಗೂ ಶಿಷ್ಯವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ
Read Moreಮಾತು~ಮುತ್ತು : ಯಾರ ನೆನೆಯಲಿ ಕೊನೆಗೆ?
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ಯಾರ ನೆನೆಯಲಿ ಕೊನೆಗೆ? ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಒಬ್ಬ ವರ್ತಕನಿದ್ದ. ಅವನಿಗೆ ಸದಾ ವ್ಯಾಪಾರದ್ದೇ ಚಿಂತೆ. ಎಷ್ಟು ಲಾಭ ಬಂದರೂ ಸಮಾಧಾನವಿಲ್ಲ. ಒಮ್ಮೆ ಅವನನ್ನು ಅವನ ಸ್ನೇಹಿತರೊಬ್ಬರು ಒಬ್ಬ ದಾಸರು ನಡೆಸುತ್ತಿದ್ದ ಹರಿಕಥೆಗೆ ಅವನನ್ನು ಕರೆದುಕೊಂಡು ಹೋಗುತ್ತಾರೆ. ಹರಿಕಥೆದಾಸರು ಮಹಾಹರಿಭಕ್ತನಾದ ಅಜಮಿಳನ ಕಥೆಯನ್ನು ಹೇಳುತ್ತಿರುತ್ತಾರೆ. ಕೊನೆಯಲ್ಲಿ ಅವರು “ಯಾರು ಅಂತ್ಯಕಾಲದಲ್ಲಿ ಶ್ರೀಹರಿಯನ್ನು ನೆನೆಯುತ್ತಾರೆಯೋ ಅವರು ಹರಿಪಾದವನ್ನೇ ಸೇರುತ್ತಾರೆ” ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ವರ್ತಕನಿಗೆ ತುಂಬ
Read Moreನಾಳೆ ರಾಮಾಶ್ರಮದಲ್ಲಿ ಸೋಮಪ್ರದೋಷ ಹಾಗೂ ಮಾಸ ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ ಹಾಗೂ ರುದ್ರಹವನ
ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಶಾಖಾಮಠವಾದ ಗಿರಿನಗರದ ರಾಮಾಶ್ರಮದಲ್ಲಿ ಸೋಮವಾರ ದಿನಾಂಕ 05-11-2018 ರಂದು ಸೋಮಪ್ರದೋಷ ಹಾಗೂ ಮಾಸಶಿವರಾತ್ರಿ ಅಂಗವಾಗಿ ಬ್ರಹ್ಮೀಭೂತ ಶ್ರೀಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರ ಸಮಾಧಿಸಾನ್ನಿಧ್ಯದಲ್ಲಿ ಶ್ರೀಸಂಸ್ಥಾನದವರ ದಿವ್ಯಕರಗಳಿಂದ ವಿಶೇಷರುದ್ರಾಭಿಷೇಕ ನಡೆಯಲಿದೆ. ಮುಂಜಾನೆ 10 ಗಂಟೆಗೆ ಶ್ರೀಕರಾರ್ಚಿತದೇವತಾ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, 11 ಗಂಟೆಗೆ ಶ್ರೀಸಂಸ್ಥಾನದವರು ಗುರುಮಂದಿರದಲ್ಲಿ ರುದ್ರಾಭಿಷೇಕ ನೆರವೇರಿಸಲಿದ್ದಾರೆ. 12 ಗಂಟೆಗೆ ಗುರು ವಂದನೆ, 12.30 ಕ್ಕೆ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ರುದ್ರಹವನದ ಪೂರ್ಣಾಹುತಿ, 1 ಗಂಟೆಗೆ ಶ್ರೀಸಂಸ್ಥಾನದವರ ಸಾನ್ನಿಧ್ಯದಲ್ಲಿ ಗುರುಮಂದಿರದಲ್ಲಿ ಮಹಾಮಂಗಳಾರತಿ ನಡೆಯಲಿದೆ.
Read Moreರೈತರೇ, ನಿಮ್ಮ ಕೃಷಿಭೂಮಿ ಸಾರ ಹೆಚ್ಚಿಸಲು ಬಂದಿದೆ ಸ್ವರ್ಗಸಾರ : ಇದು ರೈತರಿಗಾಗಿ ಗೋಫಲ ಟ್ರಸ್ಟ್ ಸಿದ್ಧಪಡಿಸಿರುವ ಸಂಪೂರ್ಣ ಜೈವಿಕ ಗೊಬ್ಬರ
ನಮ್ಮೆಲ್ಲ ಸನಾತನ ಉಲ್ಲೇಖಗಳು ಗೋಮಯೇ ವಸತೇ ಲಕ್ಷ್ಮೀ ಎಂದೇ ಹೇಳುತ್ತವೆ. ಅಂದ್ರೆ ಬದುಕಿನುದ್ದಕ್ಕೂ ಮಾನವನಿಗೆ ನೆರಳಾಗುವ ಗೋಮಾತೆಯು ನಮಗೆ ನೀಡುವ ಕೊಡುಗೆಗಳಲ್ಲಿ ಗೋಮಯ ಹಾಗೂ ಗೋಮೂತ್ರ ಪ್ರಧಾನವಾದದ್ದು. ಗೋಮಯ ಹಾಗೂ ಗೋಮೂತ್ರವನ್ನು ನಮ್ಮ ಹಿರಿಯರು ಲಕ್ಷ್ಮೀ ಹಾಗೂ ಗಂಗೆಯ ರೂಪದಲ್ಲಿ ನೋಡುತ್ತಿದ್ದರು. ಇಂಥ ಆರೋಗ್ಯ ಹಾಗೂ ಪೂಜನೀಯ ಗೋವಸ್ತುಗಳು ನಮ್ಮ ಭೂಮಿ ಸೇರಿದರೆ ಮಾತ್ರ ನಾವು ಸೇವಿಸುವ ಆಹಾರ ಆರೋಗ್ಯಪೂರ್ಣವಾಗಲು ಸಾಧ್ಯ. ಹೀಗಾಗಿ ನಾವು ಸೇವಿಸುವ ಆಹಾರವನ್ನು ಆರೋಗ್ಯಪೂರ್ಣವಾಗಿಸುವ ನಿಟ್ಟಿನಲ್ಲಿ, ಆಹಾರವನ್ನು ಉತ್ಪಾದಿಸಿ ಕೊಡುವ ಭೂಮಿಗೂ
Read Moreಶ್ರೀಮಠದ ಶಿಷ್ಯೆ ಸಂಗೀತ ವಿದುಷಿ ಶ್ರೀಮತಿ ವಸುಧಾಶರ್ಮಾಗೆ ಪ್ರಶಸ್ತಿ : ರಾಷ್ಟ್ರೀಯ ಯುವ ಸಂಗೀತೋತ್ಸವದಲ್ಲಿ ಸನ್ಮಾನ
ಮೈಸೂರು: ಮೈಸೂರಿನಲ್ಲಿ ನವೆಂಬರ್ 1ರಿಂದ 4ರ ವರೆಗೆ ನಾಲ್ಕು ದಿನಗಳ ಕಾಲ ನಡೆದ ‘ರಾಷ್ಟ್ರೀಯ ಯುವ ಸಂಗೀತೋತ್ಸವ – 2018’ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರಮಠದ ಶಿಷ್ಯೆ ಸಂಗೀತ ವಿದುಷಿ ಶ್ರೀಮತಿ ವಸುಧಾಶರ್ಮಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮೈಸೂರಿನ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮ ಹಾಗೂ ಸಂಸ್ಕಾರ ಭಾರತಿಯ ಸಹಯೋಗದೊಂದಿಗೆ ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಗಿದ್ದು ಇದರಲ್ಲಿ ಶ್ರೀಮತಿ ವಸುಧಾಶರ್ಮಾವರಿಗೂ ಸನ್ಮಾನ ಹಾಗೂ ಪ್ರಶಸ್ತಿ ಸಂದಿರುವುದು
Read Moreಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿಯಿಂದ ಮನವಿ
ಸಮೂಹ ಪ್ರಾರ್ಥನೆ ಶ್ರೀಮಠದ ಸಂರಕ್ಷಣೆಗೆ ಕಟಿಬದ್ಧರಾದ ಗುರುಬಂಧುಗಳೇ, ಶ್ರೀಮಠದ ಸಂರಕ್ಷಣೆಗಾಗಿ ಸಮಾಜ ‘ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿ’ ಯ ರೂಪದಲ್ಲಿ ಒಂದಾಗಿರುವುದು ವೇದ್ಯವಷ್ಟೇ. ಸಮಿತಿಯ ಮುಂದಿನ ಸಂರಕ್ಷಣಾ ಸತ್ಕಾರ್ಯಗಳಿಗೆ ಅನುಕೂಲವಾಗಲು ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಬೇಕಿದೆ. ಇದಕ್ಕಾಗಿ ದಿನಾಂಕ: 10.11.2018ನೇ ಶನಿವಾರ ಶ್ರೀಮಠದ ಶಿಷ್ಯವ್ಯಾಪ್ತಿಯ ಎಲ್ಲ ಘಟಕಗಳಲ್ಲೂ ಶ್ರಿರಾಮಚಂದ್ರಾಪುರಮಠ ಸಂರಕ್ಷಣಾ ಪ್ರಾರ್ಥನೆ ಸಲ್ಲಿಸಲು ಯೋಜಿಸಿದೆ. ಘಟಕದ ಎಲ್ಲ ಶಿಷ್ಯರು ಮತ್ತು ಬೇರೆ ಸಮಾಜದ ಶ್ರೀಮಠದ ಅಭಿಮಾನಿಗಳು ಸೇರಿ ಈ ಕಾರ್ಯವನ್ನು ನಿರ್ವಹಿಸಬೇಕೆಂದು ವಿನಂತಿಸುತ್ತಿದ್ದೇವೆ. ನಮ್ಮ ಮುಂದಿನ ಹೋರಾಟಗಳಿಗೆ
Read Moreಸುಳ್ಯ ವಲಯದಲ್ಲಿ ವೇದವಾಹಿನಿ ಕಾರ್ಯಕ್ರಮ : ಸಂಪನ್ನಗೊಂಡ ಪಾರಾಯಣ – ವೇದಶ್ರವಣ
ಸುಳ್ಯ: ಸುಳ್ಯ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗದಿಂದ 112 ಮತ್ತು 113ನೆಯ ವೇದವಾಹಿನಿ ಕಾರ್ಯಕ್ರಮಗಳು ನವೆಂಬರ್ 2ರಂದು ನಡೆದವು. 112ನೆಯ ವೇದವಾಹಿನಿ ಕಾರ್ಯಕ್ರಮವನ್ನು ಪಾರೆ ಶ್ರೀ ಕೇಶವಯ್ಯ ಭಟ್ ಅವರ ಮನೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮನೆಯ ಯಜಮಾನರು ಕುಟುಂಬ ಸಮೇತರಾಗಿ ವೇದಶ್ರವಣ ಮಾಡಿದರು. ಘಟಕ ಗುರಿಕಾರರಾದ ಶ್ರೀ ವಿಷ್ಣುಕಿರಣ ಭಟ್ ಅವರು ಉಪಸ್ಥಿತರಿದ್ದರು. ಇದೇ ದಿನ ನೀರಬಿದರೆ ಶ್ರೀ ವೆಂಕಟರಮಣ ಭಟ್ ಅವರ ಮನೆಯಲ್ಲಿ ನಡೆದ 113ನೆಯ ವೇದವಾಹಿನಿ ಕಾರ್ಯಕ್ರಮದಲ್ಲಿ ಮನೆ ಯಜಮಾನರು ಕುಟುಂಬ
Read Moreಮಾತು~ಮುತ್ತು : ‘ನಾನು’ ಹೋಗಬೇಕು
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ‘ನಾನು’ ಹೋಗಬೇಕು ಶ್ರದ್ಧಾವಂತ ಭಕ್ತನೊಬ್ಬ ಒಮ್ಮೆ ದೇವರ ಮನೆಯ ಬಾಗಿಲನ್ನು ತಟ್ಟುತ್ತಾನೆ. ಒಳಗಿನಿಂದ “ಯಾರು?” ಎಂಬ ಧ್ವನಿ ಬರುತ್ತದೆ. ಭಕ್ತ “ನಾನು” ಎನ್ನುತ್ತಾನೆ. ಬಾಗಿಲು ತೆರೆಯುವುದಿಲ್ಲ. ಭಕ್ತ ಹಿಂತಿರುಗಿ ಬಂದು ಘೋರವಾದ ತಪಸ್ಸು ಮಾಡುತ್ತಾನೆ. ತಪಸ್ಸಿನಿಂದ ಅವನಿಗೆ ಜ್ಞಾನೋದಯವಾಗುತ್ತದೆ. ಅನಂತರ ಅವನು ದೇವರ ಮನೆಗೆ ಹೋಗಿ ಬಾಗಿಲು ತಟ್ಟುತ್ತಾನೆ. ಒಳಗಿನಿಂದ ಅದೇ ಧ್ವನಿ “ಯಾರು?” ಎಂದು ಬರುತ್ತದೆ. ಜ್ಞಾನಿಯಾದ ಭಕ್ತ ಹೇಳುತ್ತಾನೆ “ನೀನೇ!” ಆಗ ದೇವರು ಬಾಗಿಲು ತೆಗೆದು ದರ್ಶನ
Read Moreಮತ್ತೆ ಮಠಕ್ಕೆ ಮಹಾಬಲ : ಕ್ಷೇತ್ರದ ಪುನರುತ್ಥಾನಕ್ಕೆ ಸರ್ವರಿಗೆ ಶ್ರೀಸಂಸ್ಥಾನದ ಕರೆ
ಮಹಾಬಲೇಶ್ವರ-ಮಹಾಸಮರದಲ್ಲಿ ಇತ್ತ ನಿಂತವರೇ, ಅತ್ತ ನಿಂತವರೇ, ಸುತ್ತ ನಿಂತವರೇ, ಎಲ್ಲರೂ ಬನ್ನಿ! ನಾವೆಲ್ಲ ಜೊತೆಗೂಡಿ ಪ್ರಪಂಚಕ್ಕೇ ಮಾದರಿಯಾಗುವ ಪರಿಯಲ್ಲಿ ಕ್ಷೇತ್ರವನ್ನು ಕಟ್ಟೋಣ. ಮಹಾಬಲನ ಮಹಾಪ್ರಸಾದವನ್ನು ಸರ್ವಜೀವಗಳಿಗೂ ತಲುಪಿಸೋಣ. – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಶ್ರೀಸಂಸ್ಥಾನಗೋಕರ್ಣ-ಶ್ರೀರಾಮಚಂದ್ರಾಪುರಮಠ
Read Moreಮತ್ತೆ ಮಠಕ್ಕೆ ಮಹಾಬಲ. ಸುಪ್ರೀಂ ಆದೇಶವನ್ನು ಪಾಲಿಸಿದಕರ್ನಾಟಕ ಸರ್ಕಾರ. ಶ್ರೀ ಹಾಲಪ್ಪನವರಿಂದ ಹಸ್ತಾಂತರ ಪ್ರಕ್ರಿಯ
ಭಾರತದ ಸರ್ವೋಚ್ಚ ನ್ಯಾಯಲಯದ ಆದೇಶದಂತೆ ಕರ್ನಾಟಕ ಸರ್ಕಾರ ಇಂದು ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಮತ್ತೆ ಮಠಕ್ಕೆ ಹಸ್ತಾಂತರಿಸತೊಡಗಿದೆ. ಶ್ರೀಮಹಾಬಲೇಶ್ವರನ ಸನ್ನಿಧಿಯಲ್ಲಿ ಶ್ರೀಮಠದ ಪ್ರತಿನಿಧಿಯಾಗಿ ಶ್ರೀ ಜಿ.ಕೆ. ಹೆಗಡೆ, ಶ್ರೀಹಾಲಪ್ಪನವರಿಂದ ಆಡಳಿತ ಸ್ವೀಕರಿಸುತ್ತಿದ್ದಾರೆ.
Read Moreಮಾತು~ಮುತ್ತು : ಪ್ರತಿದಿನ ಬೇಕೇ ಪ್ರಾರ್ಥನೆ?
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ಪ್ರತಿದಿನ ಬೇಕೇ ಪ್ರಾರ್ಥನೆ? ಒಮ್ಮೆ ಒಬ್ಬ ಶಿಷ್ಯ ಗುರುವನ್ನು “ಪ್ರತಿದಿನ ಏಕೆ ದೇವರ ಪ್ರಾರ್ಥನೆ ಮಾಡಬೇಕು?” ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಗುರುಗಳು ಒಂದು ಕೊಳಕಾದ ಬಟ್ಟೆಯನ್ನು ಕೊಟ್ಟು, “ಇದರಲ್ಲಿ, ಅಗೋ ಅಲ್ಲಿ ಕಾಣುತ್ತಿದೆಯಲ್ಲಾ, ಆ ಕೆರೆಯಿಂದ ನೀರು ತೆಗೆದುಕೊಂಡು ಬಾ” ಎಂದು ಹೇಳುತ್ತಾರೆ. ಬಟ್ಟೆ ತೂತುಗಳನ್ನು ಹೊಂದಿದ್ದರಿಂದ ಎಷ್ಟು ಬಾರಿ ಪ್ರಯತ್ನಿಸಿದರೂ ನೀರನ್ನು ತರುವಾಗ ಅದು ದಾರಿಯಲ್ಲೇ ಸೋರಿ ಹೋಗುತ್ತಿತ್ತು. ಅವನು ಗುರುವಿನ ಹತ್ತಿರ ಬಂದು, “ಆ
Read Moreಗೋವಿಗೆ ಮೇವು- ಶ್ರಮದಾನದ ಮೂಲಕ ವಿಭಿನ್ನ ಕಾರ್ಯ – ಅಮೃತಧಾರಾ ಗೋಶಾಲೆಗೆ ಗೋಪ್ರೇಮಿಗಳ ನೆರವು.
ಕಾಸರಗೋಡು: ಕಾಸರಗೋಡಿನ ಪೆರ್ಲದ ಬಜಕೂಡ್ಲುವಿನಲ್ಲಿರುವ ಅಮೃತಧಾರಾ ಗೋಶಾಲೆಗೆ ಸ್ವಯಂಪ್ರೇರಿತ ಶ್ರಮದಾನದ ಮೂಲಕ ಮೇವಿನ ಹುಲ್ಲನ್ನು ಒದಗಿಸುವ ವಿಭಿನ್ನ ಪ್ರಯತ್ನ ನಡೆಯಿತು. ಕುಂಬಳೆ ವಲಯದ ಸೀತಾಂಗೋಳಿಯ ಹಮೀದ್ ನೆಲ್ಲಿಕುನ್ನು ಅವರಿಗೆ ಸೇರಿದ ಸ್ಥಳದಲ್ಲಿ ಹಸಿಹುಲ್ಲು ಬೆಳೆದಿತ್ತು. ಈ ಹುಲ್ಲನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಚಂದ್ರಗಿರಿ ಹವ್ಯಕ ವಲಯದ ನೇತೃತ್ವದಲ್ಲಿ ಗೋಪ್ರೇಮಿಗಳು ಈ ಹುಲ್ಲನ್ನು ಕತ್ತರಿಸಿ ವಾಹನದಲ್ಲಿ ತುಂಬಿ ಬಜಕೂಡ್ಲು ಅಮೃತಧಾರ ಗೋಶಾಲೆಗೆ ಕಳುಹಿಸಿಕೊಟ್ಟರು. ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ
Read Moreಉರುವಾಲಿನಲ್ಲಿ ಅರ್ಥಪೂರ್ಣ ರಾಜ್ಯೋತ್ಸವ ಆಚರಣೆ – ಆಂಗ್ಲಮಾಧ್ಯಮ ಮಕ್ಕಳಿಗೂ ಕನ್ನಡ ಪಾಠ – ಭಾಷೆ ಉಳಿಸಿ ನಾಡು ಬೆಳೆಸಿ ಎಂದ ಗಣ್ಯರು.
ಉರುವಾಲು: ಇಲ್ಲಿನ ಶ್ರೀಭಾರತೀವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನವೆಂಬರ್ ೧ ರಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯೋತ್ಸವಕ್ಕೆ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ರಾಜ್ಯೋತ್ಸವದ ಆಚರಣೆಗೆ ಮೂಲಕಾರಣವಾದ ಕನ್ನಡ ಏಕೀಕರಣದ ಕುರಿತು, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಜಯಲಕ್ಷ್ಮೀ, ಸಹಶಿಕ್ಷಕರಾದ ಶ್ರೀಮತಿ ಕಮರುನ್ನೀಸಾ, ಶ್ರೀ ಲಕ್ಷ್ಮಣ ಗೌಡ ಅವರು ವಿವರಿಸಿದರು. ಶಾಲಾಸಂಸತ್ತಿನ ವಿರೋಧ ಪಕ್ಷದ ನಾಯಕ ಕಾರ್ತೀಕ್ ರಾಜ್ಯೋತ್ಸವದ ಮಹತ್ತ್ವ ತಿಳಿಸಿದರು.
Read Moreಶ್ರೀರಾಮಾಶ್ರಮದಲ್ಲಿ ಸಂಗೀತ ಸೇವೆ
ಬೆಂಗಳೂರು:- ದೇವರಿಗೆ ಹರಕೆ ರೂಪದಲ್ಲಿ ಹೂವು-ಹಣ್ಣು ಕಾಣಿಕೆ ಸಮರ್ಪಿಸುವಂತೆ ಸಂಗೀತ ಕಲಾವಿದರಾದ ಶ್ರೀರಘುನಂದನ ಬೇರ್ಕಡವುರವರು ಶ್ರೀಕರಾರ್ಚಿತ ದೇವರ ಸಮ್ಮುಖದಲ್ಲಿ ತಮ್ಮ ಗಾನಸುಧೆಯ ಮೂಲಕ ಹರಕೆ ಸಲ್ಲಿಸಿದರು. ಗುರುವಾರ(೧-೧೧-೨೦೧೮) ಗಿರಿನಗರದ ಶ್ರೀರಾಮಾಶ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟರು. ರಾಗ ನಾಟದಿಂದ ಆರಂಭಿಸಿ, ಬಹುದಾರಿ, ದೇವಗಾಂಧಾರಿ, ರೀತಿಗೌಳ, ದರ್ಬಾರ್, ಪಂತುವರಾಳಿ, ಕಾನಡ, ಸಿಂಧುಬೈರವಿ, ದುರ್ಗಾ, ಮಿಶ್ರ ಪಹಾಡಿ, ಮೋಹನ, ಕಲ್ಯಾಣಿ, ಸೌರಾಷ್ಟ್ರ ರಾಗದಲ್ಲಿ ಹಾಡಿ ಶ್ರೀರಾಮನಿಗೆ ಕಲಾಸೇವೆಗೈದರು. ಶ್ರೀಸಂಸ್ಥಾನದವರ ಆಶೀರ್ವಾದ ಹಾಗೂ ಸೂಚನೆಯ ಮೇರೆಗೆ
Read Moreಸ್ವಾನುಭವ – ವಿದ್ಯಾಶಂಕರಿ ಯಸ್.
ಇದು ಆರೆಂಟು ತಿಂಗಳ ಹಿಂದಿನ ಘಟನೆ. ಬೆಳಿಗ್ಗೆ ಏಳುವಾಗ ಸರಿಯಾಗಿಯೆ ಇದ್ದ ಕಣ್ಣುಗಳು, ಸ್ವಲ್ಪ ಹೊತ್ತಿಗೆ ಉರಿಯಲಾರಂಭಿಸಿತು. ಅದೇನೋ ಕಣ್ಣೊಳಗೆ ಹೊಕ್ಕಿರಬಹುದು ಎಂದು ಉಜ್ಜಿದೆ, ನೀರು ಹಾಕಿ ತೊಳೆದೆ, ಇನ್ನೂ ಏನೇನೋ ಮಾಡಿದೆ, ಉರಿ ಕಡಿಮೆಯಾಗುವ ಬದಲು ಜಾಸ್ತಿ ಆಗ್ತಾ ಹೋಯಿತು, ಕಣ್ಣು ಕೆಂಪಾಯಿತು ಅಷ್ಟೇ ಅಲ್ಲ ಕಣ್ಣಿನ ಸುತ್ತಲೂ ಬಾವು ಕೂಡ ಬಂದಿತ್ತು, ನೋವು ಮತ್ತು ಉರಿ ತಡೆಯಲಾರದಾಯಿತು. ಗೋಮೂತ್ರ ಸರ್ವರೋಗಕ್ಕೂ ಮದ್ದು ಎಂದು ಶ್ರೀಗುರುಗಳು ಹೇಳಿದ್ದನ್ನು ಕೇಳಿದ್ದ ನಾನು, ನಮ್ಮ ಮನೆಯಲ್ಲಿದ್ದ ಮಾ ಗೋ
Read Moreಮಾತು~ಮುತ್ತು : ಸತ್ಸಂಗವೇಕೆ?
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ಸತ್ಸಂಗವೇಕೆ? ತ್ರಿಲೋಕಸಂಚಾರಿಯಾದ ನಾರದರು ಒಮ್ಮೆ ನಾರಾಯಣನನ್ನು ಕೇಳುತ್ತಾರೆ, “ಸತ್ಸಂಗದಿಂದ ದೊರೆಯುವ ಪ್ರಯೋಜನವೇನು?” ಎಂದು. ಆಗ, ಶ್ರೀಹರಿ “ಭೂಲೋಕಕ್ಕೆ ಹೋಗಿ ಈಗ ತಾನೇ ಹುಟ್ಟಿದ ಒಂದು ಹುಳುವನ್ನು ಕೇಳು” ಎನ್ನುತ್ತಾನೆ. ನಾರದರು ಹಾಗೇ ಮಾಡಲು, ಆ ಹುಳು ತಕ್ಷಣ ಮರಣ ಹೊಂದುತ್ತದೆ. ಹಿಂತಿರುಗಿ ಬಂದ ನಾರದರು “ಹೀಗೇಕೆ?” ಎಂದು ಶ್ರೀಹರಿಯನ್ನು ಕೇಳುತ್ತಾರೆ. ಆಗ ಶ್ರೀಹರಿ “ಈಗ ತಾನೇ ಹುಟ್ಟಿದ ಒಂದು ಪುಟ್ಟ ಹಕ್ಕಿಯನ್ನು ನೋಡು” ಎನ್ನುತ್ತಾನೆ. ನಾರದರು ಹಾಗೇ ಮಾಡಲು, ಆ
Read Moreಗೋಕರ್ಣದೇವಾಲಯ ಹಸ್ತಾಂತರ ವಿಚಾರ- ಸರ್ಕಾರಕ್ಕೆ ೩ ನೇ ಬಾರಿ ಮುಖಭಂಗ- ಸೋಮವಾರದೊಳಗೆ ದೇವಾಲಯವನ್ನು ಮಠದ ಸುಪರ್ದಿಗೆ ನೀಡಲು ಸುಪ್ರೀಂಕೋರ್ಟ್ ಆದೇಶ.
ಬೆಂಗಳೂರು:- ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ತಕ್ಷಣ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವಂತೆ ಘನ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ಆದೇಶಿಸಿದೆ. ಶ್ರೀಮಠ ಸಲ್ಲಿಸಿದ್ದ ನ್ಯಾಯಾಂಗನಿಂದನೆ ಅರ್ಜಿಯನ್ನು ಇಂದು ಮಾನ್ಯ ಮಾಡಿದ ಘನ ಸರ್ವೋಚ್ಚ ನ್ಯಾಯಾಲಯ ; ಸರ್ಕಾರದ ಕ್ರಮದ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೇವಾಲಯವನ್ನು ಶ್ರೀಮಠಕ್ಕೆ ತಕ್ಷಣ ಹಸ್ತಾಂತರಿಸುವಂತೆ ಆದೇಶ ನೀಡಿದೆ. ಸೆಪ್ಟೆಂಬರ್ ೧೯ ರ ವರೆಗೂ ದೇವಾಲಯ ಶ್ರೀಮಠದ ಆಡಳಿತದಲ್ಲೇ ಇತ್ತು, ಅಲ್ಲಿಯವರೆಗೂ ಯಾವುದೇ ಆಡಳಿತಾಧಿಕಾರಿಯ ಪ್ರಭಾರ ಇರಲಿಲ್ಲ. ಸೆ. ೭ ರ ಯಥಾಸ್ಥಿತಿಯನ್ನು ಮುಂದುವರಿಸುವಂತೆ
Read More