ಗೋಶಾಲಾ
ದೋಷ ಪರಿಹಾರಕ್ಕಾಗಿ ಗೋಗ್ರಾಸ ಸಮರ್ಪಣೆ
ಗೋಸ್ವರ್ಗ: ಧಾರವಾಡದ ಗೋಪ್ರೇಮಿಗಳಾದ ಶೀಲವಂತ ಮತ್ತು ಕುಟುಂಬದವರು ದೋಷ ಪರಿಹಾರಕ್ಕಾಗಿ ಗೋಸ್ವರ್ಗದಲ್ಲಿನ ಗೋವುಗಳಿಗೆ ವಿಶೇಷ ಗೋಗ್ರಾಸವನ್ನು ಸಮರ್ಪಿಸಿದರು. ದೋಷ ಪರಿಹಾರಕ್ಕಾಗಿ ಪಂಡಿತರು ೧೦೦ಗೋವುಗಳಿಗೆ ಏಕಕಾಲದಲ್ಲಿ ಗ್ರಾಸ ಸಮರ್ಪಣೆಯ ಮಾರ್ಗವನ್ನು ಸೂಚಿಸಿದ್ದರಿಂದ ಹಲವು ಕಡೆ ವಿಚಾರಿಸಿ ಗೋಸ್ವರ್ಗದ ಮಾಹಿತಿ ಪಡೆದ ಶೀಲವಂತ ಅವರು ಕುಟುಂಬದವರೊಡನೆ ಗೋಸ್ವರ್ಗಕ್ಕೆ ಆಗಮಿಸಿದ್ದರು. ಕಡಲೆ, ಬೆಲ್ಲ, ಬಾಳೇಹಣ್ಣು, ಹಿಂಡಿ ಇವುಗಳ ವಿಶೇಷ ಗೋಗ್ರಾಸವನ್ನು ಗೋವುಗಳಿಗೆ ಸಮರ್ಪಿಸಿ, ಇಲ್ಲಿನ ವಾತಾವರಣ, ವ್ಯವಸ್ಥೆಗಳ ಕುರಿತು ಹರ್ಷ ವ್ಯಕ್ತಪಡಿಸಿದರು. ಪ್ರತಿ ವರ್ಷ ಗೋಸ್ವರ್ಗಕ್ಕೆ ತಮ್ಮ ಸೇವೆಯನ್ನು ಸಲ್ಲಿಸುವ ಅಭಿಲಾಷೆ
Read Moreಗೋಸ್ವರ್ಗದಲ್ಲಿ ಗೋದೀಪ ಕಾರ್ಯಾಗಾರ
ಗೋಸ್ವರ್ಗ: ಮಾತೃ ಹಾಗೂ ಮಾತೃತ್ವಮ್ ವಿಭಾಗ ದವರಿಂದ ಗೋಮಯದಿಂದ ಹಣತೆ ಗೋದೀಪ ತಯಾರಿಸುವ ಕಾರ್ಯಾಗಾರವನ್ನು ನ.೨೨ ಮತ್ತು ನ.೨೪ರವರೆಗೆ ಹಮ್ಮಿಕೊಳ್ಳಲಾಗಿತ್ತು. ಮಾತೆಯರಿಗೆ ವಿಕ್ರಮ ಭಟ್ ಇವರು ಗೋದೀಪ ತಯಾರಿಕೆಯ ವಿಧಾನವನ್ನು ತಿಳಿಸಿಕೊಟ್ಟರು. ನ.೨೨ ೧೦ ಮಾತೆಯರಿಂದ ೧೫ ಕೆ. ಜಿ. ಗೋಮಯದಿಂದ ೪ ತಾಸಿಗೆ ೭೩೦ ಹಣತೆಗಳನ್ನು ತಯಾರಿಸಲಾಯಿತು. ನ.೨೪ರಂದು ೧೦ ಮಾತೆಯರಿಂದ ೨೦ಕೆಜಿ ಗೋಮಯದಿಂದ, ೪ ತಾಸಿಗೆ ೧೦೬೬ ಹಣತೆಯನ್ನು ತಯಾರಿಸಲಾಯಿತು. ಸಿದ್ದಾಪುರ ಮಂಡಲ ವ್ಯಾಪ್ತಿಯ ಮಾತೆಯರು ಪಾಲ್ಗೊಂಡಿದ್ದರು.
Read Moreದೇಸಿಗೋವುಗಳ ಮಾಹಿತಿ ಪಡೆದ ಚಿಣ್ಣರು
ಗೋಸ್ವರ್ಗ: ಹೊನ್ನಾವರ ತಾಲ್ಲೂಕಿನ ಕವಲಕ್ಕಿಯ ಶ್ರೀಭಾರತೀ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿ ಗೋವುಗಳ ಮಾಹಿತಿ ಪಡೆದುಕೊಂಡರು. ಸುಮಾರು ೬೦ವಿದ್ಯಾರ್ಥಿಗಳು ಹಾಗೂ ೬ಜನ ಅಧ್ಯಾಪಕರ ತಂಡ ಗೋವುಗಳೊಡನೆ, ಕರುಗಳೊಡನೆ ಒಡನಾಡಿ ಸಂಭ್ರಮಿಸಿದ್ದಲ್ಲದೇ ಗವ್ಯೊತ್ಪನ್ನಗಳ ಕುರಿತು, ದೇಸೀ ಗೋವುಗಳ ವಿಶಿಷ್ಟತೆಯ ಕುರಿತು ಮಾಹಿತಿ ಪಡೆದರು. ಶ್ರೀಮಠದ ಪ್ರಸಾದ ಭೋಜನದ ಸವಿಯನ್ನು ಸವಿದು ಮಠದಂಗಳದಿ ನಲಿದಾಡಿದರು.
Read Moreಗೋಆಶ್ರಮದಲ್ಲಿ ಗೋದಾನ ಸೇವೆ
ಮಾಲೂರು: ಚಿಕಾಗೋ ವಾಸಿ ಶ್ರೀಕಿರಣ್ ಕೆನ್ಮೆಡಿ ಇವರು ಇಂದು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಆಗಮಿಸಿ ಗೋದಾನ ಸೇವೆ ಮಾಡಿದರು. ಒಂದು ಓಂಗೋಲ್ ತಳಿಯ ಗೋವನ್ನು ಖರೀದಿಸಿ, ಒಂದು ವರ್ಷ ನಿರ್ವಹಣೆಯ ಖರ್ಚನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಗೋಪೂಜೆಯನ್ನು ನಡೆಸಲಾಯಿತು.
Read Moreಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯಕ್ಕೆ ಚಿತ್ತೈಸಿದ ಯತಿಗಳು
ಗೋಸ್ವರ್ಗ: ಶ್ರೀಸಂಸ್ಥಾನ ಗೌಡಪಾದಾಚಾರ್ಯ ಶ್ರೀಕೈವಲ್ಯ ಮಠಾಧೀಶ ಶ್ರೀ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಗಳು ಗೋಸ್ವರ್ಗಕ್ಕೆ ಚಿತ್ತೈಸಿದ್ದರು. ಶ್ರೀಗಳು ಗೋಮಾತೆಗೆ ಗ್ರಾಸ ಸಮರ್ಪಿಸಿ, ಗೋಸ್ವರ್ಗದ ಸಂಪೂರ್ಣ ಮಾಹಿತಿ ಪಡೆದು ಕಾರ್ಯವೈಖರಿಯ ಕುರಿತು ಶುಭ ಹಾರೈಸಿದರು.ಯತಿಗಳೊಂದಿಗೆ ಸಿದ್ಧಾಪುರದ ಜಿ.ಎಸ್.ಬಿ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆಗಮಿಸಿದ ಯತಿಗಳನ್ನು ಗೋಸ್ವರ್ಗದ ವತಿಯಿಂದ ಪೂರ್ಣಕುಂಭದೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಶ್ರೀರಾಮದೇವ ಸನ್ನಿಧಿಯಲ್ಲಿ ಮಂಗಳಾರತಿ ನೆರವೇರಿಸಿ, ಫಲ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಸಮಾಜಬಾಂಧವರ ಆಶಯದಂತೆ ದೇಶೀಗೋವಿನ ಪರಿಶುದ್ಧ ತಾಜಾ ಹಾಲನ್ನು ಸಮರ್ಪಿಸಲಾಯಿತು. ಈಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ಅಧ್ಯಕ್ಷರಾದ
Read Moreಗೋವಿಗಾಗಿ ಮೇವು ಮೇವಿಗಾಗಿ ನಾವು
ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಆಹಾರದ ಪೂರೈಕೆಗಾಗಿ ಗೋವಿಗಾಗಿ ಮೇವು – ಸೇವಾ ಅರ್ಘ್ಯ – ಶ್ರಮಾದಾನ ಕಾರ್ಯವು ಮುಳ್ಳೇರಿಯಾ ಹವ್ಯಕ ಮಂಡಲದ ಕುಂಬ್ಳೆ ವಲಯದ ಕಳತ್ತೂರು ಕಾರಿಂಜ ಹಳೆಮನೆ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಗುರುವಂದನೆ, ಗೋವಂದನೆಯೊಂದಿಗೆ ನ.೧೭ ನಡೆಯಿತು. ಮುಳ್ಳೆರಿಯ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಗುರುಮೂರ್ತಿ ಮೇಣ ಇವರು ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಮಾತೃತ್ವಂ ವಿಭಾಗದ ಕಂಬಾರು ಘಟಕದ ಸಂಚಾಲಕಿ ಸುಲೋಚನಾ ಬೆಜಪ್ಪೆಯ ನೇತೃತ್ವದಲ್ಲಿ ಹುಲ್ಲಿನ ಕಟಾವು ಮಾಡುವ ಕೆಲಸ ಪ್ರಾರಂಭ ಮಾಡಲಾಯಿತು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ
Read Moreಗೋಆಶ್ರಮದ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೋಪ್ರೇಮಿಗಳು
ಮಾಲೂರು: ಬೆಂಗಳೂರು ನಗರದ ಎಚ್. ಬಿ. ಆರ್. ಬಡಾವಣೆಯ ಸುತ್ತಮುತ್ತಲಿನ ಗೋ ಪ್ರೇಮಿಗಳು ಗೋಆಶ್ಧಾರಮಕ್ಕೆ ಬೇಟಿ ನೀಡಿ ಗೋದಾನ, ಗೋಪೂಜೆ ಮಾಡಿ ಗೋಗ್ರಾಸ ನೀಡಿದರು. ಗೋಪೂಜೆಯ ನೇತೃತ್ವವ್ವನ್ನು ವಹಿಸಿದ ವೇ. ಮೂ. ಗೋಪಾಲಕೃಷ್ಣ ಕಾಕತ್ಕರ್ ಅವರು ಗೋಪೂಜೆಯ ಮಹತ್ವದವನ್ನು ವಿವರಿಸಿದರು. ಗೋಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ್ ಗೋಶಾಲೆಯ ಹಾಗೂ ಭಾರತೀಯ ಗೋತಳಿಗಳ ಮಾಹಿತಿಯನ್ನು ನೀಡಿದರು. ಗೌವ್ಯ ಉತ್ಪನ್ನಗಳ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಗೋಪ್ರೇಮಿಗಳು ಮರೆಯಾಗುವ ದೇಸೀ ಆಟಗಳ ಪರಿಚಯ ಮಾಡುವ ಜತೆಗೆ
Read Moreಗೋಸ್ವರ್ಗದಲಿ ಸ್ವರಸಂಗಮ
ಗೋಸ್ವರ್ಗ: ಇಮ್ಯಾಜಿನೇಷನ್ ಸ್ಟುಡಿಯೋ ಪ್ರಸ್ತುತಪಡಿಸುತ್ತಿರುವ ಸ್ವರಸಂಗಮ ಮಾಸ್ಟರ್ ಸಿಂಗರ್’ನ ಮೂರನೇ ಸುತ್ತಿನ ಕಾರ್ಯಗಾರವು ಸಿದ್ದಾಪುರದ ಗೋಸ್ವರ್ಗದಲ್ಲಿ ನಡೆಯಿತು. ಮೂರು ದಿನಗಳ ಕಾಲ ಸ್ಪರ್ಧಾಳುಗಳು ಮುಂದಿನ ಹಂತದ ಸ್ಪರ್ಧೆಯ ವಿವಿಧ ರೀತಿಯ ವಿಷಯಗಳ ಬಗ್ಗೆ ಶ್ರೀಕಾಂತ ಕಾಳಮಂಜಿ, ಜಯರಾಮ ಭಟ್ ಹೆಗ್ಗಾರಳ್ಳಿ, ದೀಪಕ್ ಸಿದ್ದಾಪುರ, ಪ್ರತೀಕ್ ಟಿ ಎಂ ಸಾಗರ, ಹಾಗೂ ವಿಶೇಷ ಅತಿಥಿಯಾಗಿ ಆಗಮಿಸಿದಂತಹ ವಿದುಷಿ ಗಾಯತ್ರಿ ರವೀಂದ್ರ ಇವರುಗಳಿಂದ ಅನೇಕ ವಿಷಯಗಳ ಬಗ್ಗೆ ಹಾಗು ಸಂಗೀತದ ಚಾಕಚಕ್ಯತೆಗಳ ಬಗ್ಗೆ ತರಬೇತಿಯನ್ನಪಡೆದರು. ಪೂಜಾ ಭುವನಿ, ಆದಿಶೇಷ ಪಡುವಗೋಡು,
Read Moreಗೋಸ್ವರ್ಗದಲ್ಲಿ ಮಾತೃವಿಭಾಗದಿಂದ ಗೋಪೂಜೆ
ಗೋಸ್ವರ್ಗ: ಸಿದ್ದಾಪುರ ಮಂಡಲದ ಮಾತೃವಿಭಾಗದಿಂದ ಗೋ ಪೂಜೆ ಹಾಗೂ ಕಾರ್ತೀಕ ದೀಪೋತ್ಸವ ಗಜಾನನ ಶಾಸ್ತ್ರೀಗಳವರ ನೇತೃತ್ವದಲ್ಲಿ ನಡೆಯಿತು. ಮಂಡಲದ ಮಾತೃಪ್ರಧಾನೆ ರಾಧಿಕಾ ಮತ್ತು ಗಜಾನನ ಭಟ್ಟ ದಂಪತಿಗಳು ಯಜಮಾನರಾಗಿ ಸಂಕಲ್ಪದಲ್ಲಿ ಪಾಲ್ಗೊಂಡರು. ಮಾತೃವಿಭಾಗದಿಂದ ಗೋವಿಗೆ ಹಿಂಡಿ ಚೀಲವೊಂದನ್ನು ಸಮರ್ಪಿಸಿಲಾಯಿತು. ಮಂಡಲದ ಅಧ್ಯಕ್ಷರಾದ ಸುಬ್ರಾಯ ಹೆಗಡೆ, ಕಾರ್ಯದರ್ಶಿ ಹರ್ಷಾ ಭಟ್ಟ. ಸಂಘಟನಾ ಕಾರ್ಯದರ್ಶಿ ಎಮ್ ಎಮ್ ಹೆಗಡೆ ಮಗೇಗಾರ, ಹಿರಿಯ ಮಾತೆ ಚಂದ್ರಮತಿ ಆರ್ ಹರ್ಗಿ, ಹಾಗೂ ವಲಯದ ಮಾತೃಪ್ರಧಾನರು ಹಾಗೂ ಮಾತೃತ್ವಮ್ ಸಾಗರ ಪ್ರಾಂತ್ಯ ಅಧ್ಯಕ್ಷೆ ವೀಣಾ
Read Moreಗೋವಿಗಾಗಿ ಮೇವು ಮೇವಿಗಾಗಿ ನಾವು
ಬಜಕೂಡ್ಲು: ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ಸದಾಶಯದಂತೆ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವಿಗಾಗಿ ಶ್ರೀಯುತ ಪಡಿಯಡ್ಪು ಮಹೇಶ ಭಟ್ ರ ಹಿತ್ತಲಿನ ಹಸಿ ಹುಲ್ಲನ್ನು ಕಟಾವು ಮಾಡಲಾಯಿತು. ಪೆರಡಾಲವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ನೇತೃತ್ವದಲ್ಲಿ ಮುಳ್ಳೇರಿಯ ಮಂಡಲದ ಗೋ ಸೇವಕರ ಸೇವಾ ಅರ್ಘ್ಯ ನಡೆಯಿತು. ಮಹೇಶ ಭಟ್ ದಂಪತಿಗಳು ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಿದರು. ಶ್ರೀರಾಮಚಂದ್ರಾಪುರ ಮಠದ ಕಾಮದುಘ ಕಾರ್ಯದರ್ಶಿ ಡಾ. ವೈ. ವಿ. ಕೃಷ್ಣ ಮೂರ್ತಿ, ಗೋ ವಿಜ್ಞಾನ ತಂಡದ ಸಂಯೋಜಕ ಡಾ. ಜಯಪ್ರಕಾಶ ಲಾಡ, ಬಜಕೂಡ್ಲು ಗೋಶಾಲೆ
Read Moreಗೋವಿಗಾಗಿ ಮೇವು ಮೇವಿಗಾಗಿ ನಾವು
ಜೇಡ್ಲ: ಸುಳ್ಯ ವಲಯ ಅಧ್ಯಕ್ಷ ಈಶ್ವರಕುಮಾರ ಭಟ್ಟ ಇವರ ನೇತ್ರತ್ವದಲ್ಲಿ ಗೋಶಾಲೆಯಲ್ಲಿರುವ ಗೋವಿಗಾಗಿ ಹಸಿಹುಲ್ಲನ್ನು ಕತ್ತರಿಸಿ ಕೊಡುವ ಕಾರ್ಯಕ್ರಮ ನ.೬ರಂದು ನಡೆಯಿತು. ಸುಳ್ಯ ಹವ್ಯಕ ವಲಯ ಸೇವಾ ವಿಭಾಗದ ವತಿಯಿಂದ ಡಾ.ರಾಜಾರಾಮರವರ ಆಶ್ರಯ ಕಂಪೌಂಡ್ ವಠಾರದ (ಸರಕಾರಿ ಆಸ್ಪತ್ರೆ ಹಿಂಭಾಗ)ಲ್ಲಿ ಹಸಿಹುಲ್ಲನ್ನು ಕತ್ತರಿಸಿ ಜೇಡ್ಲ ಗೋಶಾಲೆಗೆ ಕಳುಹಿಸಿ ಕೊಡಲಾಯಿತು. ಮೂಲಮಠದ ವಿವಿಪೀಠದ ನಿರ್ದೇಶಕರಾದ ಪ್ರೊ ಶ್ರೀಕೃಷ್ಣ ಭಟ್, ಮಾತೃವಿಭಾಗದ ರಾಜರಾಜೇಶ್ವರಿ, ವಲಯ ಕಾರ್ಯದರ್ಶಿ ವಿಜಯಕೃಷ್ಣ, ಈಶ್ವರ ಭಟ್ ಸೂರ್ತಿಲ, ಸೇವಾ ವಿಭಾಗದ ನಿರ್ದೇಶಕರಾದ ಎಂ.ಪ್ರಶಾಂತ್ ಭಟ್, ವೇಣುಗೋಪಾಲ
Read Moreಗೋಪಾಷ್ಟಮೀ ಮಹೋತ್ಸವ
ಬಜಕೂಡ್ಲು: ಭಗವಾನ್ ಗೋಪಾಲಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಗೋಕುಲವನ್ನು ಸಂರಕ್ಷಿಸಿದ ಪರ್ವಕಾಲದಲ್ಲಿ ಗೋಪಾಷ್ಟಮೀ ಮಹೋತ್ಸವ ನ.೪ರಂದು ವೈಭವದಿಂದ ಆಚರಿಸಲಾಯಿತು. ಬೆಳಗ್ಗೆ ೭ ರಿಂದ ಗುರುವಂದನೆ, ಕಾರ್ತಿಕ ಸೋಮವಾರದ ಪ್ರಯುಕ್ತ ಶತರುದ್ರಾಭಿಷೇಕ ಶಿವಪೂಜೆ, ಗೋಪೂಜೆ, ಸ್ತೋತ್ರಪಾರಾಯಣಗಳು, ಗಣಪತಿಹವನ, ನವಗ್ರಹಶಾಂತಿ, ಗೋವರ್ಧನಹವನ, ಕಾಮಧೇನುಹವನ, ಗೋಪಾಲಕೃಷ್ಣಹವನಗಳು ನಡೆದವು. ಮಾತೆಯರು ಕುಂಕುಮಾರ್ಚನೆ, ಭಜನೆ ನಡೆಸಿದರು. ಸಾಯಂಕಾಲ ೪ ರಿಂದ ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ,ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ, ಭಜನೆ ಹಾಗೂ ದೀಪೋತ್ಸವ ನಡೆಯಿತು.
Read Moreಮಹಾನಂದಿ ಗೋಲೋಕದಲ್ಲಿ ಗೋಪಾಷ್ಟಮೀ ಕಾರ್ಯಕ್ರಮ
ಗೋಲೋಕ: ಗೋವರ್ಧನಗಿರಿ ಎತ್ತಿ ಗೋಪಾಲಕರನ್ನು ಗೋಕುಲವನ್ನು ರಕ್ಷಣೆ ಮಾಡಿದ ಶ್ರೀಕೃಷ್ಣ, ಗೋವರ್ಧನಗಿರಿಧಾರಿ ಎಂಬ ಹೆಸರನ್ನು ಪಡೆದದ್ದು ಕಾರ್ತಿಕ ಶುದ್ದ ಅಷ್ಟಮೀ ದಿನದಂದು. ಗೋಪಾಷ್ಟಮೀ ಎಂದು ಕರೆಯಲ್ಪಡುವ ಆ ದಿನದ ಆಚರಣೆಯು ನ.೪ನೇ ಸೋಮವಾರ ನೆರೆವೇರಿತು. ಗೋಮಯದಿಂದ ನಿರ್ಮಿಸಿದ ಗೋವರ್ಧನಗಿರಿಯನ್ನು ಅಲಂಕರಿಸಿ ಪೂಜಿಸುವುದರೊಂದಿಗೆ ದೀಪಗಳನ್ನು ಬೆಳಗಿಸಿ ದೀಪೋತ್ಸವವನ್ನೂ ಕೂಡ ಆಚರಿಸಲಾಯಿತು. ನಿರ್ವಾಹಕರಾದ ರಾಮಚಂದ್ರ ಭಟ್, ಸುಬ್ರಹ್ಮಣ್ಯ ಭಟ್ ಹೆದ್ಲಿ, ಅಶೋಕ ಹೆಗಡೆ, ರತ್ನಾಕರ್ ಭಟ್ ಮಳಲಿ, ಸದಾಶಿವ ಆಚಾರ್ ಹಾಗೂ ಗೋಪಾಲಕರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದರು. ವೇದಮೂರ್ತಿ ವಿದ್ವಾನ್
Read Moreಇಸ್ಕಾನಿನ ಶ್ರೀ ಕಮಲಲೋಚನಜೀ ಬೇಟಿ
ಗೋಸ್ವರ್ಗ: ಮುಂಬಯಿ ಜುಹೂನಲ್ಲಿರುವ ಇಸ್ಕಾನಿನ ಶ್ರೀ ಕಮಲಲೋಚನಜೀ ಅವರು ಗೋಸ್ವರ್ಗಕ್ಕೆ ಭೇಟಿ ನೀಡಿದ್ದರು. ಕೇರಳದಿಂದ ಮುಂಬಯಿಗೆ ಹೊರಟಿದ್ದವರು ಗೋಸ್ವರ್ಗದ ಬಗ್ಗೆ ಮಾಹಿತಿ ಸಿಕ್ಕು ಶಿರಸಿಯಿಂದ ಬಂದು ಗೋಸ್ವರ್ಗವನ್ನು ವೀಕ್ಷಿಸಿ ಸಂಪೂರ್ಣ ಮಾಹಿತಿಗಳನ್ನು ಪಡೆದರು. ಶ್ರೀಸಂಸ್ಥಾನದವರ ಗೋರಕ್ಷಣಾ ಕಾರ್ಯದ ಕುರಿತು, ಗೋಸ್ವರ್ಗದ ಕಲ್ಪನೆಯ ಕುರಿತು ಹರ್ಷ ವ್ಯಕ್ತಪಡಿಸಿದರು. ಗೋವು ಉಳಿದರೆ ಮಾತ್ರ ಧರ್ಮದ ಉಳಿವು ಹಾಗಾಗಿ ಗೋಸಂರಕ್ಷಣಾ ಕಾರ್ಯ ಇನ್ನೂ ಚನ್ನಾಗಿ ನಡೆಯಲಿ ಎಂದು ತಿಳಿಸಿದರು.
Read Moreಬಜಕೂಡ್ಲು ಗೋಪಾಷ್ಟಮೀ ಮಹೋತ್ಸವ
ಬಜಕೂಡ್ಲು: ಅಮೃತಧಾರಾ ಗೋಶಾಲೆಯಲ್ಲಿ ಕಾರ್ತಿಕ ಶು.ಪಾಡ್ಯದಿಂದ ಅಷ್ಟಮೀವರೆಗೆ ನಡೆಯುವ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ ದ ಏಳನೆಯ ದಿನದ ವಿವಿಧ ಕಾರ್ಯಕ್ರಮ ನಡೆಯಿತು. ನ.೩ರ ಆದಿತ್ಯವಾರದಂದು ಸಾಯಂಕಾಲ ೪.೩೦ ರಿಂದ ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ ಹಾಗೂ ದೀಪೋತ್ಸವ ಗಳನ್ನು ನಡೆಸುವ ಮೂಲಕ ಸಂಪನ್ನಗೊಂಡಿತು. ವಿಶೇಷವಾಗಿ ಶ್ರೀ ಲಕ್ಷ್ಮೀನೃಸಿಂಹಪೂಜೆ ಯನ್ನು ನೆರವೇರಿಸಲಾಯಿತು. ಪೆರ್ಲದ ಶ್ರೀದುರ್ಗಾ ಬಂಟ ಮಹಿಳಾ ಭಜನಾ ಸಂಘದವರು
Read Moreಗೋವಿಗಾಗಿ ಮೇವು ಮೇವಿಗಾಗಿ ನಾವು
ಬಜಕೂಡ್ಲು: ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳ ಉದರಂಭರಣಕ್ಕಾಗಿ ಹಸಿಹುಲ್ಲನ್ನು ಕತ್ತರಿಸಿ ಕೊಡುವ ಕಾರ್ಯಕ್ರಮ ಕಾಸರಗೋಡು ವಲಯಾಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವದಲ್ಲಿ ನ.೩ರಂದು ಕಾಸರಗೋಡು ವಿದ್ಯಾನಗರ ಕುರುಡರಶಾಲೆಯ ಎದುರಿರುವ ಮಹಾತ್ಮಗಾಂಧಿ ಕಾಲೊನಿ ಯಲ್ಲಿ ನಡೆಯಿತು. ಕಾಸರಗೋಡು ವಲಯಾಧ್ಯಕ್ಷ ಯಸ್ ಯನ್ ಭಟ್ ಅರ್ಜುನಗುಳಿ, ವಲಯ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ, ಸಂಘಟನಾ ಕಾರ್ಯದರ್ಶಿ ಮಹೇಶ ಮನ್ನಿಪ್ಪಾಡಿ, ಶಿಷ್ಯ ಮಾಧ್ಯಮ ಪ್ರಧಾನ ಈಶ್ವರ ಭಟ್ ಕಿಳಿಂಗಾರು, ಗುಂಪೆ ವಲಯದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ವೈ.ಕೆ.ಗೋವಿಂದ ಭಟ್, ಸುಲೋಚನಾ ಕಾರಿಂಜ
Read Moreಗೋವಿಗೆ ಮೇವು ಪೂರೈಕೆ
ಜೇಡ್ಲ: ಜಮೀನಲ್ಲಿ ವ್ಯರ್ಥವಾಗಿ ಹೋಗುತ್ತಿದ್ದ ಹಸಿ ಹುಲ್ಲನ್ನು ಜೇಡ್ಲ ಗೋಶಾಲೆಗೆ ನೀಡುವ ಕಾರ್ಯ ಸುಳ್ಯದಲ್ಲಿ ಶನಿವಾರ ನಡೆಯಿತು. ಸುಳ್ಯದ ಡಾ.ರಾಜಾರಾಮ ಅವರು ಇಬ್ಬರು ಕಾರ್ಮಿಕರಿಂದ ಕಟಾಯಿಸಿ ೯ ಕಟ್ಟ ಹುಲ್ಲನ್ನು ಉಬರಡ್ಕ ಸತ್ಯಶಂಕರ ಪರ್ತಜೆ ಇವರ ಓಮ್ನಿಯಲ್ಲಿ ಜೇಡ್ಲಕ್ಕೆ ಸಾಗಾಟ ಮಾಡಲಾಯಿತು. ಭಾನುವಾರವೂ ಇನ್ನಷ್ಟು ಕಟಾಯಿಸಿದ ಹುಲ್ಲು ಸಾಗಾಟಮಾಡಲಾಗಿವುದು. ಶಂಕರಿರಾಜ್ ಸುಳ್ಯ ಕಾರ್ಮಿಕರಿಗೆ ಊಟೋಪಚಾರ ವ್ಯವಸ್ಥೆಯನ್ನು ಮಾಡಿದ್ದರು.
Read Moreಬಜಕೂಡ್ಲುವಿನಲ್ಲಿ ಗೋಪಾಷ್ಟಮೀ ಮಹೋತ್ಸವ
ಬಜಕೂಡ್ಲು: ಅಮೃತಧಾರಾ ಗೋಶಾಲೆಯಲ್ಲಿ ಅ.೨೮ರಿಂದ ನ.೪ರವರೆಗೆ ನಡೆಯುವ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮೀ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ ಹಾಗೂ ದೀಪೋತ್ಸವ ಮಹಾಮಂಡಲ ಧರ್ಮಕರ್ಮ ಖಂಡದ ಸಂಯೋಜಕರಾದ ವೇ. ಮೂ. ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ವಲಯ, ಮಂಡಲ ಮತ್ತು ಗೋಶಾಲಾ ಪದಾಧಿಕಾರಿಗಳು ಹಾಗೂ ಗೋಭಕ್ತರ ಸಹಭಾಗಿತ್ವದಲ್ಲಿ ಸಂಪನ್ನಗೊಂಡಿತು. ಕಾರ್ಯಕ್ರಮಗಳು ನ.೩ರವರೆಗೆ ಪ್ರತಿದಿನ ಸಾಯಂಕಾಲ
Read Moreಬಜಕೂಡ್ಲು ಅಮೃತಧಾರಾ ಗೋಶಾಲೆ ಗೋವಿಗೆ ಮೇವು
ಬಜಕೂಡ್ಲು: ಗೋವಿನ ಮೇವಿಗಾಗಿ ಕಾರ್ಯಕ್ರಮದಡಿಯಲ್ಲಿ ಪಡಿಯಡ್ಪು ಮಹೇಶ ಭಟ್ ರ ಹಿತ್ತಲಿನ ಹಸಿ ಹುಲ್ಲನ್ನು ಕಟಾವು ಮಾಡಿ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ನೀಡಲಾಯಿತು. ಪೆರಡಾಲ ವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ನೇತೃತ್ವದಲ್ಲಿ ಗುರುವಂದನೆ, ಗೋವಂದನೆ ಯೊಂದಿಗೆ ಸೇವಾ ಅರ್ಘ್ಯ ನಡೆಯಿತು. ಮಹೇಶ ಭಟ್ ದಂಪತಿಗಳು ಕಾರ್ಯಕರ್ತರಿಗೆ ಉಪಾಹಾರದವ್ಯವಸ್ಥೆ ಮಾಡಿದರು. ಅಜಿತ್ ಅವರ ವಾಹನದಲ್ಲಿ ಬಜಕೂಡ್ಲು ಗೋಶಾಲೆಗೆ ಮೇವನ್ನು ಸಾಗಿಸಲಾಯಿತು. ಗೋವಿನ ಮೇವಿನ ರೂವಾರಿ ರಾಮಚಂದ್ರಾಪುರ ಮಠದ ಕಾಮದುಘ ಕಾರ್ಯದರ್ಶಿ ವೈ ವಿ ಕೃಷ್ಣ ಮೂರ್ತಿ,
Read Moreಗೋಸ್ವರ್ಗ ದೀಪಾವಳಿ ವಿಶೇಷ ಗೋಪೂಜಾ ಕಾರ್ಯಕ್ರಮ
ಗೋಸ್ವರ್ಗ: ಶ್ರೀರಾಮದೇವ ಭಾನ್ಕುಳಿ ಮಠದ ಸಹಸ್ರ ಗೋವುಗಳ ಆಶ್ರಯ ತಾಣದಲ್ಲಿ ದೀಪಾವಳಿಯ ಅಂಗವಾಗಿ ವಿವಿಧ ಕಾರ್ಯಕ್ರಗಳು ನಡೆಯಿತು. ಗೋಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಮೂಹಿಕ ಗೋಪೂಜೆ ಮೂಲಕ ನೂರಾರು ಭಕ್ತರು ಗೋಸೇವೆಗೈದರು. ತೀರ್ಥರಾಜ ಮಹಾಸ್ನಾನ ನೆರವೇರಿತು. ಗೋತುಲಾಭಾರ ಸೇವೆಯಲ್ಲಿ ಗೋವುಗಳ ಆಹಾರವಾದ ಹಿಂಡಿಯಿಂದ ತುಲಾಭಾರ ನಡೆಯಿತು. ಗೋಸ್ವರ್ಗಕ್ಕೆ ಆಗಮಿಸುವ ಪ್ರವಾಸಿಗರಿಗೆ ದೇಸೀ ಗೋವಿನ ಉತ್ಪನ್ನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸ್ವರ್ಗಸುಧಾ ತಾಜಾ ಆಹಾರ ಮಳಿಗೆ ಚಾಲನೆ ನೀಡಲಾಯಿತು. ಸಿದ್ಧಾಪುರದ ತಹಸೀಲ್ದಾರರಾದ ಮಂಜುಳಾ ಭಜಂತ್ರಿ ಅವರು ಗೋಸ್ವರ್ಗಕ್ಕೆ
Read More