ಗೋಶಾಲಾ
ಗೋಸ್ವರ್ಗಕ್ಕೆ ಶುಭ ಹಾರೈಸಿದ ಚಿದಂಬರಾಶ್ರಮ ಶ್ರೀಗಳು
ಗೋಸ್ವರ್ಗ: ಸವದತ್ತಿ ತಾಲೂಕಿನ ಮುರಗೋಡದ ಶ್ರೀಶಿವ ಚಿದಂಬರಾಶ್ರಮದ ಪರಮಪೂಜ್ಯ ಶ್ರೀಶ್ರೀ ದಿವಾಕರ ದೀಕ್ಷಿತ ಮಹಾರಾಜರು ಗೋಸ್ವರ್ಗಕ್ಕೆ ಚಿತ್ತೈಸಿದ್ದರು. ಸ್ವತಹ ಗೋಶಾಲೆ ಮಾಡುವ ಯೋಜನೆಯಂತೆ ಬೇರೆ ಬೇರೆ ಗೋಶಾಲೆಗಳ ಸಂದರ್ಶನ ಮಾಡುತ್ತ ಈದಿನ ಗೋಸ್ವರ್ಗಕ್ಕೆ ಆಗಮಿಸಿದ್ದರು. ಗೋಸ್ವರ್ಗ ಯೋಜನೆ ಸಂಪೂರ್ಣ ಮಾಹಿತಿ ಪಡೆದು, ವೀಕ್ಷಣೆ ಮಾಡಿ ವ್ಯವಸ್ಥೆಗಳ ಕುರಿತು ಸಂತಸ ವ್ಯಕ್ತಪಡಿಸಿದರು. ಗೋಗ್ರಾಸ, ಮತ್ಸ್ಯಗ್ರಾಸ ಸಮರ್ಪಿಸ ಪ್ರಸಾದ ಸ್ವೀಕರಿಸಿ ಶುಭ ಹಾರೈಸಿದರು. ಆಗಮಿಸಿದ ಶ್ರೀಗಳಿಗೆ ಗೋಸ್ವರ್ಗದಿಂದ ಫಲಕಾಣಿಕೆ ಸಮರ್ಪಿಸಿ ಗೌರವಿಸಲಾಯಿತು.
Read Moreಹೊಸಾಡ ಗೋಶಾಲೆಗೆ ಕೆಂಗೇರಿ ಶ್ರೀ ಬೇಟಿ
ಹೊಸಾಡ: ಬೆಳಗಾವಿ ಸೌಬತ್ತಿ ಮುರಗೋಡ ಶ್ರೀ ಕ್ಷೇತ್ರ ಕೆಂಗೇರಿ ಶ್ರೀ ಪೂಜ್ಯ ದಿವಾಕರ ದೀಕ್ಷಿತ ಗುರುಮಹಾರಾಜರು ಗುರುವಾರ ಹೊಸಾಡ ಅಮೃತಧಾರ ಗೋಶಾಲೆಗೆ ಭೇಟಿ ನೀಡಿದರು. ಸಾವಿನ ಮನೆಯ ಕದ ತಟ್ಟಿ ಬಂದ, ಅನಾಥವಾದ, ವೃದ್ಧ ಹಾಗೂ ಅಪಘಾತಕ್ಕೀಡಾದ ಗೋವುಗಳನ್ನು ಸಲಹುತ್ತಿರುವ ಹೊಸಾಡ ಗೋಶಾಲೆಯು ಗಾವೋ ವಿಶ್ವಸ್ಯ ಮಾತರಃ ಎಂಬ ವಾಕ್ಯಕ್ಕೆ ಸೂಕ್ತವಾದ ಸ್ಥಳ ಎಂದು ಹೇಳಿದಾಗ ನಿಜಕ್ಕೂ ಭಾವುಕರಾದೆವು. ಗೋಶಾಲೆಯನ್ನು ಮಾಡಲು ಬೇಕಾದ ಉಪಯುಕ್ತ ಮಾಹಿತಿಯನ್ನು ಕೇಳಿದರು. ಮೊದಲಿಗೆ ಕಾಮಧೇನುವಿಗೆ ಪೂಜೆಯನ್ನು ಅರ್ಪಿಸಿ, ಗೋವುಗಳಿಗೆ ಗೋಗ್ರಾಸವನ್ನು ನೀಡಿ
Read Moreಗೋಲೋಕಕ್ಕೆ ಪ್ರಮಾಣ ಪತ್ರ
ಗೋಲೋಕ: ಕರ್ನಾಟಕ ಸರಕಾರದಿಂದ ಮಾಹಾನಂದಿ ಗೋಲೋಕಕ್ಕೆ ದೊರೆತಂತಹ ಪ್ರಮಾಣ ಪತ್ರವನ್ನು ಪಶು ಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಇವರಿಂದ ಗೋಲೋಕದ ಅಧ್ಯಕ್ಷರಾದ ಡಾಕ್ಟರ್ ಸೀತಾರಾಮ ಪ್ರಸಾದ್ ಹಾಗೂ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಎಡಪ್ಪಾಡಿ ಅವರು ಸ್ವೀಕರಿಸಿದರು.
Read Moreಹೊಸಾಡಕ್ಕೆ ಪ್ರಮಾಣ ಪತ್ರ
ಹೊಸಾಡ: ಕರ್ನಾಟಕ ಸರ್ಕಾರದಿಂದ ಹೊಸಾಡ ಅಮ್ರತಧಾರಾ ಗೋಶಾಲೆಗೆ ಪಶುಸಂಗೋಪನಾ ಸಚಿವರಾದ ಪ್ರಭು ಚಹ್ವಾಣ್ ಅವರಿಂದ ಗೋಶಾಲೆಯ ಪರವಾಗಿ ವಿನಾಯಕ ಎಸ್. ಭಟ್ ಅವರು ಪ್ರಮಾಣ ಪತ್ರ ವನ್ನು ಸ್ವೀಕರಿಸಿದರು.
Read Moreಮಾತೃತ್ವಮ್ ಒಣಹುಲ್ಲು ಸಮರ್ಪಣೆ
ಜೇಡ್ಲ: ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರಕ್ಕೆ ಮಾತೃತ್ವಮ್ ವತಿಯಿಂದ ಒಣಹುಲ್ಲು ಸಮರ್ಪಣೆ ಮಾಡಲಾಗಿದೆ. ಬೆಲ್ಲ, ಹಿಂಡಿ ನೀಡಿ ಅರಸಿನ ಕುಂಕುಮ ಹಚ್ಚಿ ಆರತಿಯೊಂದಿಗೆ ಗೋಪೂಜೆ ಮಾಡಿ ಮಾತೆಯರು ಸಂಭ್ರಮಿಸಿದರು. ಕಾಮದುಘಾ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ, ಗೋಶಾಲೆ ಶ್ರೀಸಂಯೋಜಕ ತಿರುಮಲ ಪ್ರಸನ್ನ, ಗೋಶಾಲೆ ಸಮಿತಿಯ ಅಧ್ಯಕ್ಷರಾದ ಪ್ರೊಫೆಸರ್ ಶ್ರೀಕೃಷ್ಣ ಭಟ್ ತೆಕ್ಕೆಕೆರೆ, ಮಂಗಳೂರು ಪ್ರಾಂತ ಮಾತೃತ್ವಮ್ ಅಧಕ್ಷೆ ಸುಮಾ ರಮೇಶ್, ಕಾಸರಗೋಡು ನಗರ ಮಾತೃತ್ವಮ್ ಅಧಕ್ಷೆ ಕುಸುಮಾ ಪೆರುಮುಖ,ಕಾರ್ಯದರ್ಶಿ ಗೀತಾ ಅನಘ ಮತ್ತು ಮಾಸದ ಮಾತೆಯರು ಹಾಜರಿದ್ದರು.
Read Moreಮಾತೃತ್ತಮ್ ನಿಂದ ಮೇವು ವಿತರಣೆ
ಹೊಸಾಡ: ಶ್ರೀರಾಮಚಂದ್ರಾಪುರ ಮಠದ ಮಾತೃತ್ತಮ್ ಮಹಿಳಾ ಸಂಘಟನೆಯಿಂದ ಬುಧವಾರ ಹೊಸಾಡಿನ ಅಮೃತಧಾರ ಗೋಶಾಲೆ ಗೋವುಗಳಿಗೆ ೫ ಲೋಡ್ ಮೇವನ್ನು ವಿತರಿಸಲಾಯಿತು. ಸಂಜೆ ಕಾಮಧೇನುವಿಗೆ ಪೂಜೆಯನ್ನು ಅರ್ಪಸಿದ ಮಾತೆಯರು ನಂತರ ಗೋಮಾತೆಗೆ ಮೇವನ್ನು ನೀಡಿದರು. ಗೋಮಾತೆಯೊಂದಿಗೆ ನಾವೀದ್ದೇವೆ ಎನ್ನುವ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ನೀಡಿದರು. ಈಸಂದರ್ಭದಲ್ಲಿ ಗೋಶಾಲೆಯ ಆಡಳಿತ ಮಂಡಳಿಯವರು ಮತ್ತು ಹೋನ್ನವರ ಕುಮಟಾದ ಮಂಡಲದ ಮಾತೃತ್ತಮ್ ವಿಭಾಗ ಪದಾಧಿಕಾರಿಗಳು ಉಪಸ್ಥಿತರಿದ್ದರು.
Read Moreಗೋಸ್ವರ್ಗಕ್ಕೆ ಭೇಟಿ
ಗೋಸ್ವರ್ಗ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಕೆ.ಎನ್ ವೆಂಕಟನಾರಾಯಣ ಮತ್ತು ಪದಾಧಿಕಾರಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿದ್ದರು. ಗೋವುಗಳ ವೀಕ್ಷಣೆ ಮಾಡಿ ಸಂಪೂರ್ಣ ಮಾಹಿತಿ ಪಡೆದರು. ಗೋಸ್ವರ್ಗದ ಪರಿಕಲ್ಪನೆ ಹಾಗೂ ಇಲ್ಲಿನ ವ್ಯವಸ್ಥೆಗಳ ಕುರಿತು ಹರ್ಷ ವ್ಯಕ್ತಪಡಿಸಿದರು. ಗೋಸ್ವಾದು ಮಳಿಗೆಯಲ್ಲಿ ಹಾಲಿನ ಉತ್ಪನ್ನಗಳನ್ನು ಸವಿದು ಸಂತಸಗೊಂಡರು. ಗೋಸ್ವರ್ಗಕ್ಕೆ ಮಹಾಸಭಾದಿಂದ ಹೆಚ್ಚಿನ ಸಹಕಾರ, ದಾನಿಗಳಿಂದ ಸಹಾಯ ಕೊಡಿಸುವ ಮೂಲಕ ಗೋರಕ್ಷಣಾಕಾರ್ಯದಲ್ಲಿ ಕೈಜೋಡಿಸುವ ಭರವಸೆ ನೀಡಿದರು.
Read Moreಮಾತೃತ್ವಮ್ ವತಿಯಿಂದ ಗೋಆಶ್ರಮಕ್ಕೆ ಒಣಮೇವು ಸಮರ್ಪಣೆ
ಮಾಲೂರು: ಶ್ರೀ ರಾಘವೇಂದ್ರ ಗೋ ಆಶ್ರಮಕ್ಕೆ ಶ್ರೀಮಠದ ಮಾತೃತ್ವಮ್ ವತಿಯಿಂದ ಎರಡು(ಐದು ಲೋಡ್ ನಲ್ಲಿ) ಲೋಡ್ ಒಣಹುಲ್ಲನ್ನು ಸಮರ್ಪಣೆ ಮಾಡಿದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಾಸದ ಮಾತೆಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಗೋ ಆಶ್ರಮದ ವಿಶೇಷ ಕರ್ತವ್ಯಾಧಿಕಾರಿ ರಾಮಚಂದ್ರ ಅಜ್ಜಕಾನ ಅವರಿಗೆ ಸಾಂಕೇತಿಕವಾಗಿ ಮೇವು ಹಸ್ತಾಂತರಿಸಲಾಯಿತು. ಇದಕ್ಕೂ ಮೊದಲು ಮಾತೆಯರು ಶ್ರೀ ಸಿದ್ಧಾಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದರು. ನಂತರ ಗೋಪೂಜೆಯನ್ನು ನೆರವೇರಿಸಿದರು. ಗೋಆಶ್ರಮದ ವತಿಯಿಂದ ಅಮೃತಾನ್ನ ಪ್ರಸಾದ ನೀಡಲಾಯಿತು. ಮಾತೃತ್ವಮ್ ಅಧ್ಯಕ್ಷೆ ಈಶ್ವರೀ ಬೇರ್ಕಡವು,
Read Moreಮಣ್ಣಿನ ಸವಕಳಿ ತಪ್ಪಿಸುವ ಕಾರ್ಯವಾಗಬೇಕು – ಉಪಕುಲಪತಿ ಡಾ. ಇಂದ್ರೇಶ್
ಗೋಸ್ವರ್ಗ: ಮಣ್ಣಿನ ಸಂರಕ್ಷಣೆಯ ಬಗ್ಗೆ ರೈತರು ಹೆಚ್ಚಿನ ಮಹತ್ವ ನೀಡಿದಾಗ ಕೃಷಿಯಲ್ಲಿ ಯಶಸ್ಸು ಪಡೆಯಬಹುದು. ಅನಾವೃಷ್ಠಿ ಅತೀವೃಷ್ಠಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಮಣ್ಣಿನ ಸವಕಳಿ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯಬೇಕಾಗಿದೆ. ಹಿಂದೆ ಪ್ರತಿ ಗ್ರಾಮಗಳಲ್ಲಿ ಗೋಮಾಳಗಳಿತ್ತು. ಬೆಳೆಯುತ್ತಿರುವ ಪಟ್ಟಣ – ಕಾರ್ಖಾನೆಗಳಿಂದ ವಾತಾವರಣ ಹಾಳಾಗುತ್ತಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಅನಿವಾರ್ಯತೆ ಇದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಇಂದ್ರೇಶ್ ಹೇಳಿದರು. ಗೋಸ್ವರ್ಗದಲ್ಲಿ ಶ್ರೀರಾಮಚಂದ್ರಾಪುರಮಠ, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ
Read Moreಹಣವಂತರು ರೈತರನ್ನು ದತ್ತು ತೆಗೆದುಕೊಳ್ಳುವ ಕಾರ್ಯ ಮಾಡಲಿ – ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್
ಗೋಸ್ವರ್ಗ: ಪ್ರಕೃತಿಯನ್ನು ಅರ್ಥಮಾಡಿಕೊಂಡು ಕೃಷಿ ಮಾಡುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳಿಗೆ ದೇಸಿ ಮಣ್ಣಿನ ಸೊಗಡನ್ನು ಅರಿತುಕೊಳ್ಳಬೇಕು. ಪ್ರಶ್ನೆಯ ಜತೆಗೆ ಕ್ರಿಯೆ ಇದ್ದಾಗ ಕೃಷಿಯಲ್ಲಿ ಯಶಸ್ಸು ಕಾಣಬಹುದು. ಜ್ಞಾನಿಗಳು ಕೃಷಿ ಕ್ಷೇತ್ರದ ಕಡೆಗೆ ಒಲವು ತೋರಿಸಬೇಕು. ವಾರಾಂತ್ಯದ ಕಾರ್ಯಕ್ರಮಗಳನ್ನು ರೆಸಾರ್ಟ್ ನಲ್ಲಿ ಕಳೆಯುವ ಬದಲು ರೈತರ ಮನೆಗಳಲ್ಲಿ ಆಚರಣೆ ಮಾಡುವಂತಾಗಲಿ. ಹಣವಂತರು ರೈತರನ್ನು ದತ್ತು ತೆಗೆದುಕೊಳ್ಳುವ ಕಾರ್ಯವಾದಾಗ ಕೃಷಿ ಮುಂದೆ ಬರಲು ಸಾಧ್ಯ ಎಂದು ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್ ಹೇಳಿದರು. ಗೋಸ್ವರ್ಗದಲ್ಲಿ ಶ್ರೀರಾಮಚಂದ್ರಾಪುರಮಠ, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ,
Read Moreರಾಸಾಯನಿಕಗಳಿಂದ ಮಣ್ಣಿನ ಅಗತ್ಯ ಗುಣಗಳು ನಾಶ – ಡಾ. ಎ. ಬಿ. ಪಾಟೀಲ್
ಗೋಸ್ವರ್ಗ: ರೈತರು ಸ್ಪರ್ಶದ ಮೂಲಕವೇ ಫಲವತ್ತೆಯನ್ನು ಅಳೆಯುತ್ತಿದ್ದರು. ರಾಸಾಯನಿಕಗಳಿಂದ ಮಣ್ಣಿನ ಅಗತ್ಯ ಗುಣಗಳು ನಾಶವಾಗುತ್ತಿದೆ. ಸಾವಯವ ಕೃಷಿಯನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಗೋಆಧಾರಿತ ಕೃಷಿ ಸಹಕಾರಿ ಯಾಗಿದೆ. ಕೈಗಾರಿಕೀಕರಣಗಳಿಂದ ಕೃಷಿ ಕಾರ್ಯಗಳು ಕಡಿಮೆಯಾಗುತ್ತಿದೆ. ಪಕೃತಿ ವಿಕೋಪಗಳನ್ನು ತಡೆಯುವ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕಾಗಿದೆ. ಆಧ್ಯಾತ್ಮಿಕ ಕೃಷಿಯ ಜತೆಗೆ ಎಲ್ಲಾ ವಿಜ್ಞಾನಿಗಳು ಕೈಜೋಡಿಸಬೇಕು ಎಂದು ಡಾ. ಎ. ಬಿ. ಪಾಟೀಲ್ ಹೇಳಿದರು. ವಿಶ್ವಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ, ಬಾಗಲಕೋಟೆ ತೋಟಗಾರಿಕೆ ವಿವಿ ಮತ್ತು ಶಿರಸಿ ಕೃಷಿ
Read Moreಗೋ ಆಧರಿತ ಪದ್ಧತಿಯಿಂದಷ್ಟೇ ಕೃಷಿ ಪುನರುತ್ಥಾನ – ಕೃಷಿತಜ್ಞ ಎಸ್.ಎ.ಪಾಟೀಲ
ಗೋಸ್ವರ್ಗ (ಸಿದ್ದಾಪುರ): ದೇಶದಲ್ಲಿ ಕೃಷಿಯ ಪುನರುತ್ಥಾನಕ್ಕೆ ಗೋ ಆಧರಿತ ಕೃಷಿ ಅಗತ್ಯ. ಇದಕ್ಕೆ ಮಾನಸಿಕವಾಗಿ ವಿಜ್ಞಾನಿಗಳಲ್ಲೇ ಪರಿವರ್ತನೆ ಬರಬೇಕು ಎಂದು ನವದೆಹಲಿಯ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ.ಎಸ್.ಎ.ಪಾಟೀಲ್ ಅಭಿಪ್ರಾಯಪಟ್ಟರು. ವಿಶ್ವಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ, ಬಾಗಲಕೋಟೆ ತೋಟಗಾರಿಕೆ ವಿವಿ ಮತ್ತು ಶಿರಸಿ ಕೃಷಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಮಣ್ಣಿನಲ್ಲೂ ವೈವಿಧ್ಯವಿದೆ. ಸೂಕ್ಷ್ಮಾಣು ಜೀವಿ, ಸಸ್ಯಸಂಕುಲ, ಗೋವು ಹಾಗೂ ಮನುಷ್ಯನಿಗೆ
Read Moreಗೋ-ಮಯ ಪರಿಸರದ ಸವಿಯನುಂಡ ಸಂತರು
ಗೋಸ್ವರ್ಗ: ಬೆಂಗಳೂರು ಕೆ.ಆರ್ ಪುರದ ರಾಮಕೃಷ್ಣಾಶ್ರಮದ ಮುಖ್ಯಸ್ಥರಾದ ಸ್ವಾಮಿ ಚಂದ್ರೇಶಾನಂದಜೀ ರವರು ಗೋಸ್ವರ್ಗಕ್ಕೆ ಚಿತ್ತೈಸಿದ್ದರು. ಗೋಸ್ವರ್ಗವನ್ನು ವೀಕ್ಷಿಸಿ, ಮಾಹಿತಿ ಪಡೆದರು. ಗವ್ಯೋತ್ಪನ್ನಗಳ ಬಗೆಗೆ ವಿವರ ಪಡೆದರು. ಶ್ರೀಸಂಸ್ಥಾನದವರ ದೂರದರ್ಶಿತ್ವ, ಸಂಕಲ್ಪ ಸಿದ್ಧಿ, ಗೋಸಂರಕ್ಷಣಾ ಕಾರ್ಯ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕಲ್ಪನೆಗಳ ಕುರಿತು ಅತೀವ ಹರ್ಷ ವ್ಯಕ್ತಪಡಿಸಿದರು. ಬೆಂಗಳೂರಿನ ಇನ್ನೂ ಹಲವು ಭಕ್ತರೊಡಗೂಡಿ ಮತ್ತೊಮ್ಮೆ ಬಂದು ಗೋಸ್ವರ್ಗದಲ್ಲಿಯೇ ದಿನಪೂರ್ತಿ ಕಳೆವುದಾಗಿ ತಿಳಿಸಿದ್ದಾರೆ. ನಾಲ್ಕೈದು ಜನ ಭಕ್ತರೊಡನೆ ಆಗಮಿಸಿದ್ದ ಶ್ರೀಗಳು ರಾಮಸನ್ನಿಧಿ, ಸಪ್ತಸನ್ನಿಧಿ, ಗೋಸನ್ನಿಧಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.
Read Moreಮಾತೃತ್ವಂ ವತಿಯಿಂದ ಮೇವು
ಕೈರಂಗಳ: ಮಂಗಳೂರು ಮಂಡಲ ಮುಡಿಪು ವಲಯ ವ್ಯಾಪ್ತಿಯಲ್ಲಿರುವ ಕೈರಂಗಳದ ಅಮೃತಧಾರಾ ಗೋಶಾಲೆಗೆ ಮಾತೃತ್ವಂ ವತಿಯಿಂದ ಮೇವು ಪೂರೈಸಲಾಯಿತು.
Read Moreಯುವ ಸಮೂಹಕೆ ಗೋದರ್ಶನ
ಗೋಸ್ವರ್ಗ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಸಣೂರಿನ ಪ್ರಕೃತಿ ಕಾಲೇಜಿನ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿದ್ದರು. ರಾತ್ರಿ ಆಗಿದ್ದರೂ ಕೂಡ ಉತ್ಸುಕತೆಯಿಂದ ಗೋಸ್ವರ್ಗವನ್ನು ವೀಕ್ಷಿಸಿ ಸಂಪೂರ್ಣ ಮಾಹಿತಿ ಪಡೆದರು. ಗೋಸ್ವರ್ಗದ ಪ್ರಶಾಂತ ಪರಿಸರದಲ್ಲಿ ರಾತ್ರಿ ವಿಶ್ರಾಂತಿ ಮಾಡಿ ಬೆಳಿಗ್ಗೆ ಪುನಹ ಗೋಸ್ವರ್ಗಕ್ಕೆ ತೆರಳಿ ಇನ್ನಷ್ಟು ಮಾಹಿತಿಗಳನ್ನು ಪಡೆದರು. ಯುವ ಸಮೂಹದ ಈ ಉತ್ಸುಕತೆ, ದೇಸೀ ಗೋವುಗಳ ಕುರಿತು ಇರುವ ಕಾಳಜಿ ನಿಜಕ್ಕೂ ಶ್ಲಾಘನೀಯ. ಯುವ ಸಮುದಾಯಕ್ಕೆ ದೇಸೀ ಗೋವುಗಳ ಬಗೆಗೆ ಮಾಹಿತಿ ನೀಡುವ ಸದುದ್ದೇಶದಿಂದ ಗೋಸ್ವರ್ಗಕ್ಕೆ ಕರೆತಂದ
Read Moreಗೋಆಶ್ರಮದಲ್ಲಿ ಗೋಪೂಜೆ
ಮಾಲೂರು: ಹೊಸಕೋಟೆ ತಾಲೂಕು ಈ ಮುತ್ಸಂದ್ರ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿಯವರು ತಮ್ಮ ಜನ್ಮದಿನಾಚರಣೆಯನ್ನು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಪೂಜೆಯೊಂದಿಗೆ ವಿಶೇಷವಾಗಿ ಆಚರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಕೃತಿ ಕಲಾ ಸಂಘ ಹೊಸಕೋಟೆ ಇವರ ವತಿಯಿಂದ ಕನ್ನಡ ರಾಜ್ಯೋತ್ಸವವನ್ನೂ ಆಚರಿಸಲಾಯಿತು. ಗೋಆಶ್ರಮದ ಕೃಷ್ಣ ಭಟ್ ಇವರು ರಾಜ್ಯೋತ್ಸವದ ಬಗ್ಗೆ ಮಾತಾನಾಡುವ ಜೊತೆಗೆ, ಗೋಆಶ್ರಮದ ಬಗ್ಗೆ ಹಾಗೂ ಭಾರತೀಯ ಗೋವಂಶದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ರಾಜಮ್ಮ, ಕರುಣಾ, ರವಿಪ್ರಕಾಶ್, ಗೋಆಶ್ರಮದ
Read Moreಗೋಸ್ವರ್ಗದಲ್ಲಿ ಡಿ. ೫ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಬೆಂಗಳೂರು: ಮಣ್ಣಿನ ಸಂರಕ್ಷಣೆಯೇ ಮನುಕುಲದ ಸಂರಕ್ಷಣೆ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಡಿಸೆಂಬರ್ ೫ರಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಗೋಸ್ವರ್ಗದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ. ಕಾಮದುಘಾ ಟ್ರಸ್ಟ್, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಮತ್ತು ಶಿರಸಿ ತೋಟಗಾರಿಕಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುವ ಒಂದು ದಿನದ ವಿಚಾರ ಸಂಕಿರಣದಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವರು. ಅಂತರರಾಷ್ಟ್ರೀಯ
Read Moreಗೋಆಶ್ರಮಕ್ಕೆ ಹುಲ್ಲು ವಿತರಣೆ
ಮಾಲೂರು: ಗಂಗಾಪುರ ಶ್ರೀರಾಘವೇಂದ್ರ ಗೋಆಶ್ರಮಕ್ಕೆ ಕೊಲಾರದ ಕನ್ನಯಲಾಲ್ ನರಸಾಪುರ ಅವರು ಎರಡು ಟ್ರಾಕ್ಟರ್ ರಾಗಿ ಹುಲ್ಲನ್ನು ಕಳುಹಿಸಿರುತ್ತಾರೆ. ಅವರು ಸ್ವತಹ ಆರು ಟ್ರಾಕ್ಟರ್ ಹುಲ್ಲನ್ನು ಕಳೆದ ವರ್ಷ ನೀಡಿರುತ್ತಾರೆ ಹಾಗೂ ತಮ್ಮ ಸಮಾಜದ ಸಂಘಟನೆ ಹಾಗೂ ಮಿತ್ರರ ಮೂಲಕ ಸುಮಾರು ಎಂಟು ಟ್ರಾಕ್ಟರ್ ಹುಲ್ಲನ್ನು ಕೊಟ್ಟಿರುತ್ತಾರೆ.
Read Moreಗೋಸ್ವರ್ಗದಿ ಚಿಣ್ಣರ ಕಲರವ
ಗೋಸ್ವರ್ಗ: ಸಿದ್ಧಾಪುರ ತಾಲೂಕಿನ ರಮಾನಂದ ಶಿಕ್ಷಣ ಸಂಸ್ಥೆ, ವಿದ್ಯಾಗಿರಿ, ಕತ್ರಗಾಲ ಇಲ್ಲಿನ ಪುಟಾಣಿ ಮಕ್ಕಳು ಗೋಸ್ವರ್ಗಕ್ಕೆ ಭೇಟಿನೀಡಿದ್ದರು. ಬೆಳಿಗ್ಗೆ 11ಗಂಟೆಗೆ ಆಗಮಿಸಿದ 120ಮಕ್ಕಳಿಗೆ ಶುದ್ಧದೇಸೀ ಹಾಲನ್ನು ವಿತರಿಸಲಾಯಿತು. ಶ್ರೀರಾಮ ಸನ್ನಿಧಿಯಲ್ಲಿ ಭಜನೆ, ಮಂಗಳಾರತಿ ಸೇವೆಗಳನ್ನು ಪೂರೈಸಿ ಗೋ ದರ್ಶನಕ್ಕೆ ತೆರಳಿದರು. ಗೋಸ್ವರ್ಗದ ಗೋವುಗಳು, ಕರುಗಳೊಡನೆ ಒಡನಾಡಿದರು. ಗೋವೃಂದದ ನಡುವೆ ಭಜನೆ, ಶ್ಲೋಕ ಪಠಣ ಮಾಡಿ ತೀರ್ಥರಾಜ ಮಹಾಸ್ನಾನದಲ್ಲಿ ಪಾಲ್ಗೊಂಡರು. ಮಧ್ಯಾಹ್ನದ ಪ್ರಸಾದ ಭೋಜನ ಸವಿದ ಚಿಣ್ಣರು ಮಠದಂಗಳದಿ ನಲಿದಾಡಿದರು.ಮಕ್ಕಳಿಗೆ ದೇಸೀ ಗೋವುಗಳ ಮಾಹಿತಿ ನೀಡುವ ಉದ್ದೇಶದಿಂದ ಕರೆತಂದ
Read Moreಗೋಆಶ್ರಮದಲ್ಲಿ ಗೋಪೂಜೆ
ಮಾಲೂರು: ಕೊಲ್ಕತ್ತಾ ಇಮಾಮಿ ಸಮೂಹ ಶ್ರೀ ರಾಧೇಶ್ಯಾಮ್ ಗೊಯೆಂಕಾ ಅವರು ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಬೇಟಿ ನೀಡಿ, ಶ್ರೀ ಸಿದ್ಧಾಂಜನೇಯ ಸ್ವಾಮಿಯ ಪೂಜೆ ಹಾಗೂ ಗೋಪೂಜೆಯಲ್ಲಿ ಭಾಗವಹಿಸಿದರು. ಜೊತೆಯಲ್ಲಿ ಮಹಾಬೀರ್ ಸೋನಿಕಾ ಇದ್ದರು.
Read More