ಗೋಶಾಲಾ
ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ
ಮಹಾನಂದಿ ಗೋಲೋಕದಲ್ಲಿ ವಿರಾಜಮಾನಸ್ಥನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಪ್ರತೀ ಹುಣ್ಣಿಮೆಯಂದು ಸಂಪನ್ನಗೊಳ್ಳುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ನಡೆದಿರುತ್ತದೆ. ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಸತೀಶ್ ಭಟ್ ನೇತೃತ್ವದಲ್ಲಿ ಶ್ರೀಯುತ ಮಂಜುನಾಥ ಭಟ್ ದಂಪತಿಗಳು ಮಳಲಿ ಇವರ ಯಾಜಮಾನತ್ವದಲ್ಲಿ ಈ ಕಾರ್ಯಕ್ರಮ ಸಾಂಗವಾಗಿ ನೆರವೇರಿದೆ. ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭವಾಗಿ ೫ ಹುಣ್ಣಿಮೆ ಕಳೆಯಿತು. ಈ ಬಾರಿ ನೂರಹದಿನೈದು ಪೂಜೆಗಳು ನೆರವೇರಿವೆ. ಈ ಸಂದರ್ಭದಲ್ಲಿ ಅಧ್ಯಕ್ಷರು ಡಾ.ಸೀತಾರಾಮ್ ಪ್ರಸಾದ್, ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ದಿವಾಕರ್ ಭಟ್, ಶಿವರಾಮ್ ಭಟ್
Read Moreಹೊಸಾಡುವಿನಲ್ಲಿ ಗೋ ಸಂಧ್ಯಾ
ಹೊಸಾಡು ಅಮೃತಧಾರಾ ಗೋಬ್ಯಾಂಕ್ ಆರವರಣದಲ್ಲಿ ಫೆ.೮ರಂದು ಸಂಜೆ ೫ಗಂಟೆಗೆ ಗೋಪ್ರೇಮಿಗಳ ವಾರ್ಷಿಕ ಗೋ ಸ್ನೇಹಕೂಟ ಹಾಗೂ ಬೆಳದಿಂಗಳೂಟ ಕಾರ್ಯಕ್ರಮ ಗೋಸಂಧ್ಯಾ ಗೋವಿನತ್ತ ನಮ್ಮ ಚಿತ್ತ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಶಾಲೆ ಗೌರವಾಧ್ಯಕ್ಷೆ ಭಾರತಿ ಪಾಟೀಲ ವಹಿಸಲಿದ್ದು, ಕುಮಟಾ – ಹೊನ್ನಾವರ ಶಾಸಕ ದಿನಕರ ಕೆ. ಶೆಟ್ಟಿ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಭಟ್ಕಳ – ಹಿನ್ನಾವರ ಶಾಸಕ ಸುನೀಲ ನಾಯ್ಕ, ಯಲ್ಲಾಪುರ ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಭಾಗವಹಿಸಲಿದ್ದಾರೆ. ಲಾಸಾ ಸೂಪರ್ ಜೆನಿರಿಕ್ಸ್ ನಿರ್ದೇಶಕ ಎಸ್. ಜಿ.
Read Moreಗೋಸ್ವರ್ಗಕ್ಕೆ ಬೇಟಿ
ಗೋಸ್ವರ್ಗ: ಮುಖ್ಯಮಂತ್ರಿ ಯಡಿಯೂರಪ್ಪನವರ ತಾಂತ್ರಿಕ ಸಲಹೆಗಾರರಾದ ನಾಗರಾಜಯ್ಯ ಮತ್ತು ಎಸ್ ರಮೇಶ್ ಅವರು ಗೋಸ್ವರ್ಗಕ್ಕೆಬೇಟಿ ನೀಡಿ ಗೋವುಗಳ ಜತೆಗೆ ಕಾಲ ಕಳೆದರು. ಗೋವುಗಳ ಮಾಹಿತಿ ಪಡೆದುಕೊಂಡು ಸಂತಸ ಪಟ್ಟರು. ಗುರುಮೂರ್ತಿ ಶಿಕಾರಿಪುರ ಅವರು ಜೋತೆಗಿದ್ದರು.
Read Moreಗೋಸಂಕ್ರಾಂತಿ ಆಚರಣೆ
ಮಾಲೂರು: ಬೆಂಗಳೂರು ಗಾಯಿತ್ರಿ ಪರಿವಾರದ ಸುಮಾರು ೧೫೦ ಸದಸ್ಯರನ್ನೊಳಗೊಂಡು ತಂಡ ಮಾಲೂರು ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ವಿಜೃಂಭಣೆಯಿಂದ ಗೋಸಂಕ್ರಾಂತಿ ಆಚರಿಸಿದರು. ಅನಿಲ್, ಪಟೇಲ್, ಪ್ರಫುಲ್, ಗೋಶಾಲೆ ಪರವಾಗಿ ಮಹಾಬೀರ್ ಸೋನಿಕ, ಕೃಷ್ಣ ಭಟ್, ಮುರಳೀಕೃಷ್ಣ, ಮಂಜುನಾಥ್ ಭಟ್, ಅನಂತ, ಲಕ್ಷ್ಮೀಶ ಮತ್ತಿತರರು ಹಾಜರಿದ್ದರು.
Read Moreಗೋವುಗಳಿಗೆ ಮೇವು
ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವುಗಳ ಮೇವಿಗಾಗಿ ಉಮೇಶ ಸಾಲೆ ಅವರು ತಮ್ಮ ಹಾಳೆ ತಟ್ಟೆ ತಯಾರಿಕಾ ಘಟಕದಿಂದ ಒಂದು ಫಿಕ್‌ಅಪ್ ಹಾಳೆಯ ಮೇವನ್ನು ಗೋವುಗಳಿಗಾಗಿ ಸಮರ್ಪಿಸಿದರು. ಅಜಿತ್ ಕುಂಚಿನಡ್ಕ, ಗಣರಾಜ ಕಡಪ್ಪು, ರಾಮ ಮೂಲ್ಯ ಈ ಕಾರ್ಯಕ್ಕೆ ಸಹಾಯವಿತ್ತರು.
Read Moreಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ
ಗೋಲೋಕ: ಹೊಸನಗರ ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಾನದಲ್ಲಿ ಪ್ರತೀ ಹುಣ್ಣಿಮೆಯಂದು ನಡೆಯುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ಸಂಪನ್ನಗೊಂಡಿದೆ. ಪ್ರಧಾನ ಅರ್ಚಕರಾದ ವೇದ ಮೂರ್ತಿ ಸತೀಶ್ ಭಟ್ ನೇತೃತ್ವದಲ್ಲಿ ಪ್ರಕಾಶ್ ಭಟ್ ದಂಪತಿಗಳು ಶಿವಮೊಗ್ಗ ಇವರ ಯಾಜಮಾನತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದೆ. ಸುಮಾರು ನೂರನಲವತ್ತೈದು ಪೂಜೆ ನೆರವೇರುವುದರೊಂದಿಗೆ ನೂರಾರು ಗೋಭಕ್ತರು ಭಾಗವಹಿಸಿದ್ದರು. ಕೃಷ್ಣಪ್ರಸಾದ ಎಡಪ್ಪಾಡಿ, ಜಿ.ಟಿ.ದಿವಾಕರ್, ಶಿವರಾಮ್ ಭಟ್, ಕೃಷ್ಣರಾಜ್ ಅರಸ್, ಇವರುಗಳೊಂದಿಗೆ ಗೋಲೋಕ ಸಮಿತಿಯ ಸದಸ್ಯರುಗಳು ಕೂಡ ಭಾಗವಹಿಸಿದ್ದರು. ಸಂಜೆ ೬ ಗಂಟೆಗೆ
Read Moreಗೋವುಗಳ ದತ್ತು ಸ್ವೀಕಾರ
ಹೊಸಾಡ: ಅಮೃತಧಾರಾ ಗೋಬ್ಯಾಂಕ್‌ಗೆ ಲಾಸಾ ಸೂಪರ್ ಜೆನಿರಿಕ್ ನಿರ್ದೇಶಕ ಶಿವಾನಂದ ಜಿ. ಹೆಗಡೆ ಮತ್ತು ಸಹೋದ್ಯೋಗಿಗಳು ಆಗಮಿಸಿ ಅಭಯ ಗೋ ದತ್ತು ಯೋಜನೆಯಡಿಯಲ್ಲಿ ೫೦ ಗೋವುಗಳನ್ನು ದತ್ತು ಸ್ವೀಕರಿಸಿ ಹೊಸ ಚರಿತ್ರೆಯನ್ನು ಸೃಷ್ಟಿಸಿದರು.
Read Moreಪಶು ಆಹಾರ ಸಮರ್ಪಣೆ
ಬಜಗೋಡ್ಲು: ಇಡಿಯಡ್ಕದ ಶಂಕರನಾರಾಯಣ ಭಟ್ ಮತ್ತು ಶಕುಂತಲಾ ಬಜಗೋಡ್ಲುಗೋಶಾಲೆಗೆ ಆಗಮಿಸಿ, ಒಂದು ಚೀಲ ಬೂಸಾ ಸಮರ್ಪಿಸಿದರಲ್ಲದೆ ತಾವೇ ಕೈಯಾರೆ ಗೋವುಗಳಿಗೆ ನೀಡುವ ಕೆಲಸವನ್ನೂ ಮಾಡಿದರು.
Read Moreಗೋವುಗಳ ಮೇವುಗಾಗಿ ಮುಳಿಹುಲ್ಲು ಸಂಗ್ರಹ
ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವುಗಳ ಮೇವುಗಾಗಿ ಮುಳಿಹುಲ್ಲು ಸಂಗ್ರಹಿಸುವ ಶ್ರಮದಾನವು ಜ.೧೨ ದಂದು ಪೆರ್ಲ ಪರಿಸರದಲ್ಲಿ ಜರಗಿತು. ಶ್ರಮದಾನದಲ್ಲಿ ಅಕ್ಷಯ ಯುವಕ ಮಂಡಲ ಬಿರ್ಮುಲೆಯ ಮಾಧವ, ಪ್ರಕಾಶ್ ಕಾಮತ್, ರವಿ, ರಮೇಶ, ಸದಾಶಿವ, ವಿನೋದ, ಗಂಗಾಧರ, ರೋಹಿತ್ ಕುಲಾಲ್, ರಮೇಶ ನಾಯಕ್, ಹಾಗು ಹುಲ್ಲು ಕತ್ತರಿಸುವ ಯಂತ್ರದಲ್ಲಿ ಉತ್ತರ ಪ್ರದೇಶದ ಗೌತಮ್, ಬಿಮಲ್,ಶೇರ್ ಸಿಂಗ್ ಹಾಗು ಅನಿಲ್ ಮತ್ತು ಹುಲ್ಲು ಸಾಗಾಟದಲ್ಲಿ ಶಿವಪ್ರಸಾದ್ ಟ್ರನ್ಸಪೋರ್ಟನ ರಾಮಣ್ಣ ಸಹಕರಿಸಿದರು. ಶ್ರಮದಾನದಲ್ಲಿ ಮುಳ್ಳೇರಿಯಾ ಮಹಾಮಂಡಲದ ಅಧ್ಯಕ್ಷರು, ಎಣ್ಮಕಜೆ ಹವ್ಯಕ ವಲಯದ
Read Moreಗೋವಿನ ಜತೆಗೆ ಚಿಗುರು ತಂಡ
ಮಾಲೂರು: ಶ್ರೀರಾಘವೇಂದ್ರ ಗೋ ಆಶ್ರಮದಲ್ಲಿ “ಚಿಗುರು” ಗ್ರೂಪ್ ನ ೨೦ ಸದಸ್ಯರು ಗೋ ವೀಕ್ ಎಂಡ್ ಆಚರಿಸಿದರು. ಜ.೧೧ ಸಂಜೆಯಿಂದ ಜ. ೧೨ ಸಂಜೆಯವರೆಗೆ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ವಿಹರಿಸಿ, ವಿವಿಧ ಆಟೋಟ, ಚಟುವಟಿಕೆ ನಡೆಸಿ ಗೋ ಶಾಲೆಗೂ ಕಾಣಿಕೆ ಸಮರ್ಪಿಸಿದರು.
Read Moreಗೋಪಾಲ್ಸ್ ಟೀಮ್ ಸಂಕ್ರಮಣ ಆಚರಣೆ
ಮಾಲೂರು: ಗೋಪಾಲ್ಸ್ ಟೀಮ್ನ್ ಸುಮಾರು ೫೦೦ ಜನ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಸಂಕ್ರಮಣ ಆಚರಣೆ ಮಾಡಿ ಸಂತೋಷ ಪಟ್ಟರು. ಗೋ ಶಾಲೆ ವತಿಯಿಂದ ಎತ್ತಿನಬಂಡಿ ಸವಾರಿ, ಎಲ್ಲರಿಗೂ ಊಟೋ ಪಚಾರ ಮಾಡಲಾಯಿತು. ಕಾರ್ಯಕ್ರಮಕ್ಕೆ ಗೋಶಾಲೆಯ ಎಲ್ಲರೂ ಗೋಪಾಲ್ಸ್ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿದರು.
Read Moreಶ್ರೀನಿಕೇತನ ಚಿಣ್ಣರು ಗೋಸ್ವರ್ಗದಲ್ಲಿ
ಗೋಸ್ವರ್ಗ: ಸೋಂದಾ ಸ್ವರ್ಣವಲ್ಲೀ ಮಠದ ಆಡಳಿತದಲ್ಲಿರುವ ಶಿರಸಿ ಇಸಳೂರು ಶ್ರೀನಿಕೇತನ ಶಿಕ್ಷಣ ಸಂಸ್ಥೆಯ ೩೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಆಗಮಿಸಿದ್ದರು. ಶಾಲಾ ಪ್ರವಾಸಕ್ಕಾಗಿ ಬಂದ ವಿದ್ಯಾರ್ಥಿಗಳು ಗೋವುಗಳ ಸಮೂಹ, ಗೋತೀರ್ಥದ ವರ್ಣಮಯ ಮತ್ಸ್ಯಗಳನ್ನು ನೋಡಿ ಹರ್ಷಗೊಂಡರು. ಹಲವು ಸ್ಥಳಗಳ ಸಂದರ್ಶನದಿಂದ ದಣಿವಾಗಿ ಬಂದ ಚಿಣ್ಣರಿಗೆ ಗೋಸ್ವರ್ಗದ ಗೋಸ್ವಾದು ತಂಪನ್ನೆರೆಯಿತು. ಗೋಸ್ವರ್ಗ, ಶ್ರೀರಾಮ ಸನ್ನಿಧಿಯ ದರ್ಶನ ಪೂರೈಸಿ ಗೋಸ್ವರ್ಗದ ಪ್ರಸಾದ ಭೋಜನ ಸ್ವೀಕರಿಸಿದ ವಿದ್ಯಾರ್ಥಿಗಳು ಭಾನ್ಕುಳಿ ಮಠದ ವಿಶಾಲ ಅಂಗಳದಲ್ಲಿ ನಲಿದಾಡಿದರು. ವಿದ್ಯಾರ್ಥಿಗಳ ಜೊತೆ ಪಾಲಕರು, ಶಿಕ್ಷಕ ವೃಂದದವರು
Read Moreಆರ್ಟ್ ಒಫ್ ಲಿವಿಂಗ್ ಸಂಸ್ಥೆಯ ಕುಮಟಾ ವಿಭಾಗದಿಂದ ಒಂದು ದಿನದ ಶಿಬಿರ
ಹೊಸಾಡ: ಅಮೃತಧಾರ ಗೋಶಾಲೆಯಲ್ಲಿ ಶ್ರೀ ರವಿಶಂಕರ ಗುರೂಜಿಗಳ ಶಿಷ್ಯವೃಂದದ ಆರ್ಟ್ ಒಫ್ ಲಿವಿಂಗ್ ಸಂಸ್ಥೆಯ ಕುಮಟಾ ವಿಭಾಗದಿಂದ ಒಂದು ದಿನದ ಶಿಬಿರ ವನ್ನು ಏರ್ಪಡಿಸಿಲಾಗಿತ್ತು. ಕಾಮಧೇನು ಪೂಜೆ, ಭಾರತೀಯ ಗೋ ತಳಿ ಗೋವುಗಳ ದರ್ಶನ, ಧ್ಯಾನ, ಗುರು ಪೂಜೆ, ಭಜನೆ, ಶಾಹಿನಾಯಿ ವಾದನ, ಗವ್ಯೋತ್ಪನ್ನದ ಪ್ರಾಮುಖ್ಯತೆ ಹೀಗೆ ಹಲವು ಸಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ೫೦ ಕಾರ್ಯಕರ್ತರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ದತ್ತಾತ್ರೇಯ ಭಟ್ಟ ಹುಬ್ಬಳ್ಳಿ ಯವರು ಆಗಮಿಸಿ ಗವ್ಯೋತ್ಪನ್ನದ ಪ್ರಾಮುಖ್ಯತೆಯನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ
Read Moreಶಿರಸಿಯ ಮಾರ್ವಾಡಿ ವಿಷ್ಣು ಸಮಾಜ ಬಾಂಧವರಿಂದ ಗೋಗ್ರಾಸ ಸಮರ್ಪಣೆ
ಗೋಸ್ವರ್ಗ: ಗೋವುಗಳಿಗೆ ಅಮವಾಸ್ಯೆ ಹಾಗೂ ಗ್ರಹಣದ ದಿನದಂದು ಶಿರಸಿಯ ಮಾರ್ವಾಡಿ ವಿಷ್ಣು ಸಮಾಜ ಬಾಂಧವರು ಗೋಗ್ರಾಸ ಸಮರ್ಪಿಸಿದರು. ಗೋಪ್ರೀಮಿಗಳಾದ ಶಿರಸಿಯಲ್ಲಿ ನೆಲೆಸಿರುವ ರಾಜಸ್ಥಾನದ ಮಾರ್ವಾಡಿ ಸಮಾಜದವರು 50ಕೆ.ಜಿ ಹಿಂಡಿ ಹಾಗೂ 50ಕೆ.ಜಿ ಬೆಲ್ಲವನ್ನು ತಂದು ಗೋಸ್ವರ್ಗದ ಗೋವುಗಳಿಗೆ ನೀಡಿದರು.
Read Moreಮಾತೃತ್ವಮ್ ನಿಂದ ಮೇವು ಸ್ವಾಗತ
ಗೋಸ್ವರ್ಗ: ಮಾತೃತ್ವಮ್ ಸಂಘಟನೆಯಿಂದ ಗೋಸ್ವರ್ಗ ೨ ಲಾರಿ ಮೇವನ್ನು ಬರಮಾಡಿಕೊಳ್ಳಲಾಯಿತು. ಸಿದ್ದಾಪುರ ನಗರದ ಮಾತೃತ್ವಮ್ ಅಧ್ಯಕ್ಷೆ ರಾಧಿಕಾ ಭಟ್ಟ, ಕಾರ್ಯದರ್ಶಿ ಚಂದ್ರಮತಿ ಆರ್ ಹೆಗಡೆ ಹರ್ಗಿ, ಕೋಶಾಧ್ಯಕ್ಷೆ ಮೇಧಾ ಭಟ್ಟ, ಭವತಾರಿಣಿ ಸಮತಿಯ ಅಧ್ಯಕ್ಷೆ ಸಾವಿತ್ರಿ ಹೆಗಡೆ, ಹಾಗೂ ಮಾಸದ ಮಾತೆಯರಾದ ಇಂದಿರಾ ಶಾನಭಾಗ, ಸರಸ್ವತಿ ಹೆಗಡೆ, ಅನಿತಾ ಭಟ್ಟ, ಪೂಜಾಭುವನಿ, ಸುಜಯಾ ಹೆಗಡೆ, ಹೇಮಾ ಅಡಿಗಳ್, ಹಾಗೂ ಗೀತಾ ಹೆಗಡೆ,ಪಧ್ಮಾ ಹೆಗಡೆ, ಸಂದರ್ಭದಲ್ಲಿಪಾಲ್ಗೊಂಡರು.
Read Moreವಿಧ್ಯಾರ್ಥಿ ವಿಕಸನ ಶಿಬಿರ ಮತ್ತು ಸಂತತಿ ಮಂಗಲ
ಗೋಸ್ವರ್ಗ: ಶ್ರೀರಾಮದೇವ ಭಾನ್ಕುಳಿಮಠದಲ್ಲಿ ಸಿದ್ದಾಪುರ ಮಂಡಲದ ಮಾತೃವಿಭಾಗ ಮತ್ತು ವಿದ್ಯಾರ್ಥಿ ವಿಭಾಗದ ಸಂಯೋಜನೆಯಲ್ಲಿ ಮಂಡಲ ಮತ್ತು ಎಲ್ಲಾ ವಲಯಗಳ ಸಹಭಾಗಿತ್ವದಲ್ಲಿ ವಿಧ್ಯಾರ್ಥಿ ವಿಕಸನ ಶಿಬಿರ ಮತ್ತು ಸಂತತಿ ಮಂಗಲ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಮಹಾಮಂಡಲದ ಅಧ್ಯಕ್ಷರಾದ ಆರ್ ಎಸ್ ಹೆಗಡೆ ಮಾತನ್ನಾಡುತ್ತ ಶ್ರೀ ರಾಮಚಂದ್ರಾಪುರ ಮಠವು ಮಹಾಮಂಡಲ ವ್ಯಾಪ್ತಿಯಲ್ಲಿ ಪ್ರತೀ ಮಂಡಲದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ, ಪ್ರತೀ ಶಿಷ್ಯರು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದು ಹವ್ಯಕ ಧರ್ಮದ ಮಹತ್ವವನ್ನು ಅರಿತು ನಡೆಯಬೇಕಾಗಿದೆಯೆಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಶಿಕ್ಷಣ
Read Moreಗೋವುಗಳ ಜತೆಗೆ ಹುಟ್ಟು ಹಬ್ಬ ಆಚರಣೆ
ಹೊಸಾಡ: ಪಾಶ್ಚಾತ್ಯ ಸಂಸ್ಕೃತಿಯಂತೆ ಜನ್ಮದಿನವನ್ನು ಆಚರಿಸುವ ಈ ದಿನದಲ್ಲಿ ಗೋವಿನ ಜೊತೆ ಆಚರಿಸಿದ ಗೋಪ್ರೇಮಿಯೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ. ಕಿಶೋರ ಶೆಟ್ಟಿ ಕುಮಟಾ ಇವರು ತಮ್ಮ ಜನ್ಮದಿನವನ್ನು ಹೊಸಾಡ ಗೋಶಾಲೆಯಲ್ಲಿರುವ ಗೋವುಗಳ ಜೊತೆಗೆ ಆಚರಿಸಿದರು. ಬದುಕಿನುದ್ದಕ್ಕೂ ಅಮೃತವನ್ನು ನೀಡುವ ಗೋವೆ ನಮ್ಮ ಮಾತೆ ಎಂಬ ಭಾವ ಅವರದಾಗಿದೆ.
Read Moreಮಾತೃತ್ವಮ್‍ನಿಂದ 10 ಲಕ್ಷ ರೂಪಾಯಿ ಮೌಲ್ಯದ ಮೇವು ವಿತರಣೆ
ವೇಣೂರು: ಸಮಾಜದ ಸಹಭಾಗಿತ್ವದಲ್ಲಿ ಭಾರತೀಯ ಗೋ ತಳಿಗಳನ್ನು ಸಂರಕ್ಷಿಸುವ ಮೌನ ಕ್ರಾಂತಿಗೆ ಮಾತೃತ್ವಮ್ ಮುನ್ನುಡಿ ಬರೆದಿದೆ ಎಂದು ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ನುಡಿದರು. ಭಾರತೀಯ ಗೋತಳಿಗಳನ್ನು ಉಳಿಸಿ ಬೆಳೆಸುವ ಗೋಶಾಲೆಗಳಿಗೆ 10 ಲಕ್ಷ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸುಮಾರು 60 ಲೋಡ್ ಒಣಹುಲ್ಲು ವಿತರಿಸುವ ಯೋಜನೆ ಅಂಗವಾಗಿ ವೇಣೂರು ಸಮೀಪದ ಗುಂಡೂರು ಅಮೃತಧಾರಾ ಗೋಶಾಲೆಗೆ ಸಾಂಕೇತಿಕವಾಗಿ ಒಂದು ಲೋಡ್ ಒಣಹುಲ್ಲು ಹಸ್ತಾಂತರಿಸಿ ಅವರು ಮಾತನಾಡಿದರು. “ಗೋವಿನ ಹೊಟ್ಟೆ ತಣಿಸುವ ಪುಣ್ಯ ಕೆಲಸದಲ್ಲಿ ಸಾವಿರಾರು ಮಂದಿ ಮಾತೆಯರು
Read Moreಬಜಕೂಡ್ಲು ಗೋಶಾಲೆಯಲ್ಲಿ ದೇಶೀ ಗೋಮಯದ ಹಣತೆ ತಯಾರಿ
ಬಜಕೂಡ್ಲು: ಕಾಮದುಘಾ ಯೋಜನೆಯಡಿ ಕಾರ್ಯಾಚರಿಸುತ್ತಿರುವ ಅಮೃತಧಾರಾ ಗೋಶಾಲೆ, ಗೋಲೋಕ ಬಜಕೂಡ್ಲು ಇಲ್ಲಿ ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ದೇಶೀ ಗೋವಿನ ಗೋಮಯದಿಂದ ಪ್ರಾಯೋಗಿಕವಾಗಿ ಹಣತೆಗಳನ್ನು ಯಶಸ್ವಿಯಾಗಿ ತಯಾರಿಸಲಾಯಿತು. ಮುಂದಿನ ಹಂತದಲ್ಲಿ ಬೃಹತ್ ಮಟ್ಟದಲ್ಲಿ ಗೋಮಯದ ಹಣತೆಗಳನ್ನು ತಯಾರಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಗೋಶಾಲೆಯ ಪದಾಧಿಕಾರಿಗಳಾಗಿರುವ ಜಗದೀಶ್ ಗೋಳಿತ್ತಡ್ಕ, ಗಣರಾಜ ಕಡಪ್ಪು ಇವರು ಯೋಜನೆಯ ರೂವಾರಿಗಳಾಗಿ ಕಾರ್ಯನಿರತರಾಗಿದ್ದಾರೆ.
Read Moreಗೋಸ್ವರ್ಗದಲ್ಲಿ ಸಂಗೀತ ಸೇವೆ
ಗೋಸ್ವರ್ಗ: ಗೋಸೌಖ್ಯ ಕೇಂದ್ರಿತವಾದ ಗೋಸ್ವರ್ಗದಲ್ಲಿ ಗೋವುಗಳ ಶ್ರವಣಾನಂದಕ್ಕಾಗಿಯೇ ನೆಡೆಯುವ ಸಂಗೀತ ಸೇವೆ ಸ್ವರ್ಗಸಂಗೀತ. ಈಬಾರಿಯ ಸೇವೆ ಪಶು ವೈದ್ಯರಾದ ಮಂಜುನಾಥ ಬಿ.ಪಿ ಇವರಿಂದ ನೆರವೇರಿತು. ವೃತ್ತಿಯಲ್ಲಿ ಪಶುವೈದ್ಯರಾಗಿ ಪ್ರವೃತ್ತಿಯಲ್ಲಿ ಸಂಗೀತದಆರಾಧಕರಾದ ಶ್ರೀಯುತರು ಪಂ.ಪರಮೇಶ್ವರ ಹೆಗಡೆಯವರ ಶಿಷ್ಯರು. ಪಶುವೈದ್ಯರಾಗಿರುವುದರಿಂದ ಗೋವುಗಳ ಕುರಿತು ಪ್ರೀತಿ, ಕಾಳಜಿ ಇರುವ ಮಂಜುನಾಥರವರು ಬೆಂಗಳೂರಿನಿಂದ ಆಗಮಿಸಿ ತಮ್ಮ ಹಿಂದೂಸ್ಥಾನಿ ಸಂಗೀತಸೇವೆಯನ್ನು ಗೋಮಾತೆಯ ಪದತಲದಲ್ಲಿ ಸಮರ್ಪಿಸಿದರು. ಹಾರ್ಮೋನಿಯಂ ರಾಜೇಂದ್ರ ಕೊಳಗಿ ಹಾಗೂ ತಬಲಾದಲ್ಲಿ ಸ್ವರ್ಗಸಂಗೀತದ ನೇತೃತ್ವ ವಹಿಸಿರುವ ಶ್ರೀ ಶ್ರೀಕಾಂತ ಕಾಳಮಂಜಿ ಸಹಕರಿಸಿದರು. ಗುರುವಂದನೆ ಮೂಲಕ ಆರಂಭವಾದ
Read More