|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸಮಾಜಕ್ಕಾಗಿ ಮಾಡುವ ಸಮರ್ಪಣೆ ಔದಾರ್ಯವಲ್ಲ; ಅದು ಕರ್ತವ್ಯ – ರಾಘವೇಶ್ವರ ಶ್ರೀ

  ಸಮಾಜಕ್ಕಾಗಿ ಮಾಡುವ ಸಮರ್ಪಣೆ ಅಥವಾ ಕೆಲಸವು ಔದಾರ್ಯವಲ್ಲ. ಅದು ಕರ್ತವ್ಯವೇ ಆಗಿದೆ. ಮನುಷ್ಯ ಸಂಘಜೀವಿಯಾಗಿದ್ದು, ಸಮಾಜದಲ್ಲಿ ಪರಸ್ಪರ ಸಹಕಾರವಿಲ್ಲದೇ ಜೀವನನಡೆಸಲು ಸಾಧ್ಯವಿಲ್ಲ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.   ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ “ವಿಶ್ವವಿದ್ಯಾ~ ಚಾತುರ್ಮಾಸ್ಯ” ದ ಸಂದರ್ಭದಲ್ಲಿ *ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾ ಸೇವೆ* ಸ್ವೀಕರಿಸಿ ಮಾತನಾಡಿದ ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಸಂಘಟನೆಗೆ ಹಾಗೂ ಸಮಾಜಕ್ಕೆ ಇರುವೆಯು ಪರಮಾದರ್ಶವಾಗಿದೆ. ಇರುವೆಯ ಶಿಸ್ತು, ವಿಘ್ನಗಳಿಗೆ ಜಗ್ಗದಿರುವುದು, ಅಂತಃಕಲಹ ಇಲ್ಲದಿರುವುದು,

Read More

ರಾಮಾಶ್ರಮದಲ್ಲಿ ವೈಭವದ ಶ್ರೀರಾಮ ಪಟ್ಟಾಭಿಷೇಕ ರಾಮನ ಆದರ್ಶ ಪಾಲನೆಗೆ ರಾಘವೇಶ್ವರ ಶ್ರೀ ಸಲಹೆ

ಬೆಂಗಳೂರು: ರಾಮಾಯಣ ಪಾರಾಯಣದಿಂದ ಧಾರ್ಮಿಕ ವಾತಾವರಣ ನಿರ್ಮಾಣ ಸಾಧ್ಯ. ರಾಮಾಯಣದ ಸತ್ವ- ಶಕ್ತಿ ಅಂಥದ್ದು. ಇಂಥ ಅನೇಕ ಸನ್ನಿವೇಶಗಳು ಸ್ವತಃ ಅನುಭವಕ್ಕೆ ಬಂದಿವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಶ್ರೀರಾಮಶ್ರಮದಲ್ಲಿ ‘ಶ್ರೀರಾಮಸಾಮ್ರಾಜ್ಯ ಪಟ್ಟಾಭಿμÉೀಕ’ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಆಡಳಿತ ಎಂದರೆ ರಾಮರಾಜ್ಯದ ನೆನಪಾಗುತ್ತದೆ. ರಾಮನ ನಂತರ ಕೋಟ್ಯಂತರ ರಾಜರು ಆಳಿದ್ದಾರಾದರೂ, ಇಂದಿಗೂ ರಾಮರಾಜ್ಯಕ್ಕೆ ಸಾಟಿಯಿಲ್ಲ. ಹಾಗೆಯೇ ರಾಮಾಯಣ ಆದಿಕಾವ್ಯವಾಗಿದ್ದು, ಅದರ ನಂತರ ಕೋಟ್ಯಂತರ ಕಾವ್ಯ ರಚನೆಯಾಗಿದ್ದರೂ, ರಾಮಾಯಣಕ್ಕೆ ಸಾಟಿಯಿಲ್ಲ. ರಾಮಾಯಣದ ಒಂದೊಂದು

Read More

*ಶ್ರೀ ಗುರು ಪೀಠದ ಮೇಲಿನ‌ ಅಚಲ ನಂಬಿಕೆಯು ಭವ್ಯ ಬದುಕಿನ ಸೋಪಾನ* ” : ಅಮ್ಮಂಕಲ್ಲು ರಾಮ ಭಟ್

  ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಸಭೆಯು ದಿನಾಂಕ ೩೦ – ೦೭ – ೨೦೨೧ ,ಶುಕ್ರವಾರ ಎಡಕ್ಕಾನ ಘಟಕದ ಅಧ್ಯಕ್ಷರಾದ ಸುಬ್ಬಾ ಭಟ್ಟರ ‘ ಸುಖನಿಧಿ ‘ ನಿವಾಸದಲ್ಲಿ ಜರಗಿತು. ಧ್ವಜಾರೋಹಣ , ಶಂಖನಾದ, ಗುರುವಂದನೆಗಳೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಮಾತನಾಡಿ ಪ್ರಸ್ತುತ ಬೆಂಗಳೂರಿನ

Read More
ಧನ-ಜನಕ್ಕಿಂತ ಜ್ಞಾನಶಕ್ತಿ ಶ್ರೇಷ್ಠ: ರಾಘವೇಶ್ವರ ಶ್ರೀ

ಬೆಂಗಳೂರು: ಜನ ಅಥವಾ ಧನ ಶಕ್ತಿಯಿಂದ ದೇಶ ಬದಲಿಸಲಾಗದು; ಸೈನ್ಯ, ಕೋಶ ಅಥವಾ ಜನಸ್ತೋಮ ಇಲ್ಲದೇ ಶಂಕರಾಚಾರ್ಯರು ತಮ್ಮ ಜ್ಞಾನಪ್ರಭೆಯಿಂದ ಅಖಂಡ ಭಾರತದ ಪುನರುತ್ಥಾನ ಮಾಡಿದಂತೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠಪ್ರಾಚೀನ ಜ್ಞಾನಪರಂಪರೆಯ ತಳಹದಿಯಲ್ಲಿ ದೇಶದ ಪುನರ್ ನಿರ್ಮಾಣಕ್ಕೆ ಹೊರಟಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ 28ನೇ ಚಾತುರ್ಮಾಸ್ಯ ವ್ರತಾರಂಭದಲ್ಲಿ ಧರ್ಮಸಂದೇಶ ನೀಡಿದ ಅವರು, “ಇಡೀ ವಿಶ್ವಕ್ಕೆ ಕೋವಿಡ್-19 ಎಂಬ ಗಾಡಾಂಧಕಾರ ಕವಿದ ಸಂಕಷ್ಟದ ಸನ್ನಿವೇಶದಲ್ಲಿ ಈ ಅದ್ಭುತ ಸಂಸ್ಥೆ ಅನಾವರಣಗೊಳ್ಳುತ್ತಿದೆ. ಇದು ದೈವಪ್ರೇರಣೆ.

Read More
ಯೋಗ ಜೀವ-ದೇವ ಬೆಸೆಯುವ ಬಂಧ: ರಾಘವೇಶ್ವರ ಶ್ರೀ

ಕಾರವಾರ/ ಗೋಕರ್ಣ: ಯುಕ್ತ ಆಹಾರ, ವಿಹಾರ, ಚಟುವಟಿಕೆ ಮೂಲಕ ನಿದ್ದೆ, ಸ್ವಪ್ನ, ಜಾಗೃತಸ್ಥಿತಿ ಮತ್ತು ಸಮಾದಿ ಸ್ಥಿತಿಯನ್ನು ಆನಂದಿಸುವುದೇ ನಿಜವಾದ ಯೋಗ. ಯೋಗ ಜೀವಾತ್ಮ ಮತ್ತು ಪರಮಾತ್ಮನನ್ನು ಬೆಸೆಯುವ ಪವಿತ್ರ ಬಂಧ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವಭಾರತೀಮಹಾಸ್ವಾಮೀಜಿ ನುಡಿದರು. ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸೋಮವಾರ ಹಮ್ಮಿಕೊಂಡಿದ್ದ “ಯೋಗಾಂತರಂಗ” ಅಂತರ್ಜಾಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಆಹಾರ, ವಿಹಾರ, ಕ್ರಿಯೆ ಯುಕ್ತವಾಗಿದ್ದಾಗ ಜಾಗೃತಿ, ನಿದ್ದೆ, ಸ್ವಪ್ನಸ್ಥಿತಿಯ ಆನಂದ ಸವಿಯುವ

Read More
ಸತ್ಕಾರ್ಯಗಳೇ ಸುಖನಿದ್ದೆಯ ಗುಟ್ಟು: ರಾಘವೇಶ್ವರ ಸ್ವಾಮೀಜಿ

ಕಾರವಾರ/ ಗೋಕರ್ಣ: ಭಾರತೀಯ ಪರಂಪರೆಯಲ್ಲಿ ನಿದ್ರೆಯೂ ದೈವಸ್ವರೂಪ. ಸತ್ಯ ಮತ್ತು ಧರ್ಮ ಮಾರ್ಗದಲ್ಲಿ ನಡೆದು ಆತ್ಮಸಾಕ್ಷಿ ಒಪ್ಪುವಂಥ ಸತ್ಕಾರ್ಯಗಳನ್ನು ಮಾಡುವ ಮೂಲಕ ನಿದ್ರಾದೇವಿಯಿಂದ ಸುಖನಿದ್ದೆಯೆಂಬ ವರ ಪಡೆಯೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಸ್ವಾಮೀಜಿ ಸಲಹೆ ಮಾಡಿದರು. ರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಜ್ಞಾನ ವಿಜ್ಞಾನ ಚಿಂತನ ಸತ್ರ ಮಾಲಿಕೆಯಡಿ ‘ಸ್ವಸ್ಥ ಮನಸ್ಸಿಗಾಗಿ ಸುಖನಿದ್ದೆ’ ಎಂಬ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಪ್ತಶತಿಯ “ಯಾದೇವಿ ಸರ್ವಭೂತೇಶು ನಿದ್ರಾರೂಪೇಣ ಸಂಸ್ಥಿತಾ..” ಎಂಬ ಸ್ತೋತ್ರ ನಮ್ಮ

Read More
ಮಕ್ಕಳ ಕಲಿಕೆಗೆ ಉತ್ತಮ ಪರಿಸರ, ಸಂಸರ್ಗ ಅಗತ್ಯ; ರಾಘವೇಶ್ವರ ಶ್ರೀ

ಕಾರವಾರ: ಗುಣ- ದೋಷಗಳೆರಡಕ್ಕೂ ಸಹವಾಸವೇ ಕಾರಣ. ಆದ್ದರಿಂದ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ಪರಿಸರ ಮತ್ತು ಉತ್ತಮ ಸಂಸರ್ಗ ಕಲ್ಪಿಸುವ ಮೂಲಕ ಅವರನ್ನು ಭವಿಷ್ಯದ ಪ್ರಜೆಗಳಾಗಿ ರೂಪುಗೊಳಿಸುವ ಅಗತ್ಯವಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರು ಅಭಿಪ್ರಾಯಪಟ್ಟರು. ಶ್ರೀಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಗುರುಕುಲಗಳ ವಿದ್ಯಾರಂಭ ಸಮಾರಂಭದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ರಾಮಾಯಣದ ರಾಮ ಅಭಯ ಸ್ತೋತ್ರವನ್ನು ಆನ್‍ಲೈನ್ ಮೂಲಕ ಗುರುಕುಲದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಮೂಲಕ ವಿದ್ಯಾರಂಭಕ್ಕೆ ಶ್ರೀಗಳು ಚಾಲನೆ ನೀಡಿದರು. ಕಾದ ಕಬ್ಬಿಣದ ಮೇಲೆ

Read More
ನಿರಂತರ ಜ್ಞಾನ ದೀಪೋತ್ಸವದಿಂದ ದೇಶ ಪ್ರಜ್ವಲ: ರಾಘವೇಶ್ವರ ಶ್ರೀ

ಕಾರವಾರ/ ಗೋಕರ್ಣ: ಒಂದು ದೀಪದಿಂದ ಸಾವಿರ ದೀಪಗಳು ಹೊತ್ತಿಕೊಳ್ಳುವಂತೆ ಒಬ್ಬ ಸಾಧಕ ಅಸಂಖ್ಯಾತ ಯುವ ಮನಸ್ಸುಗಳಿಗೆ ಪ್ರೇರಣೆಯಾಗಬಲ್ಲರು. ಇಂಥ ಜ್ಞಾನ ದೀಪೋತ್ಸವ ನಿರಂತರವಾದಾಗ ಇಡೀ ದೇಶ ಪ್ರಜ್ವಲಿಸಬಲ್ಲದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಸಾಧನೆಯ ಮಾರ್ಗ’ ಎಂಬ ಅಂತರ್ಜಾಲ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಮಹತ್ಸಾಧನೆ ಮಾಡಿ ದೇಶ ಹಾಗೂ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ.ಕಾರ್ತಿಕ್ ಹೆಗಡೆಕಟ್ಟಿ

Read More
ಪ್ರಧಾನಿ ಕಚೇರಿಯ ಉಪ ಕಾರ್ಯದರ್ಶಿ ಡಾ.ಕಾರ್ತಿಕ ಹೆಗಡೆಕಟ್ಟೆ ಜತೆ ಸಂವಾದ ನಾಳೆ

ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಈ ತಿಂಗಳ 30ರಂದು ಭಾನುವಾರ ಬೆಳಿಗ್ಗೆ 11.45ರಿಂದ “ಸಾಧನೆಯ ಮಾರ್ಗ” ಎಂಬ ಅಂತರ್ಜಾಲ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಧಾನಿ ಕಾರ್ಯಾಲಯದ ಉಪ ಕಾರ್ಯದರ್ಶಿ, ಉತ್ತರ ಕನ್ನಡ ಮೂಲದ ಪ್ರತಿಭಾವಂತ ಯುವ ಐಎಎಸ್ ಅಧಿಕಾರಿ ಡಾ.ಕಾರ್ತಿಕ ಹೆಗಡೆಕಟ್ಟೆ ಅವರು ‘ಸಾಧನೆಯ ಮಾರ್ಗ’ ವಿಷಯದ ಬಗ್ಗೆ ವಿಚಾರ ಮಂಡಿಸುವರು. ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ಮತ್ತಿತರರು ಭಾಗವಹಿಸುವರು.

Read More
ಕಲಿಕೆ ಜ್ಞಾನಮಯ, ಆನಂದಮಯವಾದರೆ ವಿದ್ಯೆ ಸಾರ್ಥಕ: ರಾಘವೇಶ್ವರ ಶ್ರೀ

ಗೋಕರ್ಣ: ಕಲಿಕೆ ಜ್ಞಾನಮಯ ಮತ್ತು ಆನಂದಮಯವಾಗಿದ್ದಾಗ ಮಾತ್ರ ವಿದ್ಯೆ ಸಾರ್ಥಕವಾಗುತ್ತದೆ ಎಂದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಆಯೋಜಿಸಿದ್ದ ‘ಆತಂಕದ ಪರಿಸ್ಥಿತಿಯಲ್ಲಿ ಧನಾತ್ಮಕವಾಗಿ ಯೋಚಿಸಲು ಸರಳ ಸೂತ್ರಗಳು’ ಎಂಬ ಅಂತರ್ಜಾಲ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಇಂದಿನ ಶಿಕ್ಷೆ ಜ್ಞಾನ ಮತ್ತು ಭೀತಿಯಿಂದ ಕೂಡಿದೆ. ಈ ಪರಿಸ್ಥಿತಿ ಬದಲಾಗಬೇಕು. ವಿದ್ಯಾರ್ಥಿಗಳು ಇಷ್ಟಪಟ್ಟು ಪರೀಕ್ಷೆಯನ್ನು ಸ್ವೀಕಾರ ಮಾಡುವಂತಿರಬೇಕು; ಮಗು ಖುಷಿ ಖುಷಿಯಾಗಿದ್ದಷ್ಟೂ

Read More
ಸಿದ್ಧಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಿಧಿಕುಂಭ

ಗಂಗಾಪುರ ಗ್ರಾಮದ ಶ್ರೀ ರಾಘವೇಂದ್ರ ಗೋಆಶ್ರಮದ ಆವರಣದಲ್ಲಿರುವ ಶ್ರೀ ಸಿದ್ಧಾಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಬುಧವಾರ ನಿಧಿಕುಂಭ ಕಾರ್ಯಕ್ರಮ ನಡೆಯಿತು. ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ದಿವ್ಯ ಅನುಗ್ರಹದಲ್ಲಿ ಸೌರ ಯುಗಾದಿಯ ಪರ್ವ ಕಾಲದಲ್ಲಿ ವೇ. ಮೂ. ಸುಕುಮಾರ್ ಜೋಯಿಸ ಕರುವಜೆ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಶ್ರೀ ಸಿದ್ಧಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ರುದ್ರ ಪಠನ ಮಾಡಲಾಯಿತು. ಸಮಿತಿ ಹಾಗೂ ಭಕ್ತರಿಂದ ನಿಧಿ ಸಮರ್ಪಣೆ ನಡೆಯಿತು.

Read More
ಮಾತೃತ್ವಮ್ ಸಂಘಟನೆಯಿಂದ ಮೇವು ಸಮರ್ಪಣೆ

    ಮಾಲೂರು: ಮುಂದಿನ ಪೀಳಿಗೆಗಾಗಿ ಗೋವಿಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಾತೆಯರೆಲ್ಲರೂ ಗೋಸೇವೆಗೆ ಮುಂದಾದಾಗ ಎಲ್ಲಾ ಗೋಶಾಲೆಗಳು ಸಮೃದ್ಧತೆಯಿಂದ ಕೂಡಿರುತ್ತದೆ ಎಂದು ಮಾತೃತ್ವಮ್ ನ ಕೇಂದ್ರ ಕಾರ್ಯದರ್ಶಿ ನಾಗರತ್ನ ಜಿ. ಶರ್ಮ ಹೇಳಿದರು.   ಅವರು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಗೋವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಾತೃತ್ವಮ್ ಸಂಘಟನೆಯ ಮಾಸದ ಮಾತೆಯರು ಆಗಮಿಸಿ ಮೇವು ಸಮರ್ಪಣೆ ಮಾಡಿದ ಬಳಿಕ ಮಾತನಾಡಿದರು.   ಗೋಆಶ್ರಮ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ ಮಾತನಾಡಿ ಬದುಕಿನಲ್ಲಿ

Read More
ಅರ್ಥಶಾಸ್ತ್ರ ಭವಿಷ್ಯಕ್ಕೆ ಅರ್ಥ ನೀಡುವಂಥದ್ದು: ರಾಘವೇಶ್ವರ ಶ್ರೀ

ಗೋಕರ್ಣ: ಅರ್ಥಶಾಸ್ತ್ರದ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅರ್ಥ ನೀಡುವಂತಿರಬೇಕು; ಜತೆಗೆ ದೇಶಕ್ಕೆ ಅರ್ಥ ಕೊಡುವ, ದೇಶದ ಸಂಪತ್ತಾಗಿ ರೂಪುಗೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವತಿಯಿಂದ ಸಿಎ, ಸಿಎಸ್ ಫೌಂಡೇಷನ್‍ಗಾಗಿ ವಿದ್ಯಾರ್ಥಿಗಳಿಗೆ ಆರಂಭಿಸಿರುವ ಉಚಿತ ಆನ್‍ಲೈನ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಸಿಎ, ಸಿಎಸ್ ತರಬೇತಿ ಬೇಕು ಎಂಬ ಬೇಡಿಕೆ ಬಂದದ್ದು ವಿವಿವಿ ಗುರುಕುಲದ ವಿದ್ಯಾರ್ಥಿಗಳಿಂದ. ಮಕ್ಕಳು ಹಾಗೂ ಗೋವುಗಳು ದೇವರಿಗೆ ಸಮಾನ. ವಿದ್ಯಾರ್ಥಿಗಳ ಒತ್ತಾಸೆಯನ್ನು ಈಡೇರಿಸುವುದು ಕರ್ತವ್ಯ

Read More
ಪೇಜಾವರ ಶ್ರೀ ಗೋಆಶ್ರಮಕ್ಕೆ ಭೇಟಿ

ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಟೀಮ್ ಗೋಪಾಲ್ಸ್ ನವರು ಸಂಘಟಿಸಿದ ಗೋ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ‌ ನೀಡಿದ ಶ್ರೀಗಳವರು ‘ಜೀವನ ಪೂರ್ತಿ ಹಾಲು ನೀಡಿ ನಮ್ಮನ್ನು ಸಲಹುವ ಗೋಮಾತೆಯನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಪ್ರತಿದಿನ‌ ನಾವು ಊಟ ಮಾಡುವ ಮೊದಲು ಗೋಗ್ರಾಸ ನೀಡಬೇಕು. ಇಂದಿನ‌ ಜೀವನ ಶೈಲಿಯಲ್ಲಿ ಇದು ಸಮಸ್ಯೆಯಾದರೆ ಮನೆಯಲ್ಲಿ ಹುಂಡಿ ಇಟ್ಟು ಊಟದ ಮೊದಲು

Read More
ಮಾಲೂರು ಆಂಜನೇಯನ ವಿಗ್ರಹ ಬಾಲಾಲಯ

ಗಂಗಾಪುರ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿರುವ ಶ್ರೀ ಸಿದ್ಧಾಂಜನೇಯ ಸ್ವಾಮಿ ನೂತನ ಮಂದಿರ ನಿರ್ಮಾಣದ ಅಂಗವಾಗಿ ಗೋಕರ್ಣ ಪರಮೇಶ್ವರ ಭಟ್ಟ ಮಾರ್ಕಾಂಡೆ ಅವರ ನೇತೃತ್ವದಲ್ಲಿ ಕಲಾ ಸಂಕೋಚ ಹವನ, ಕಲಶಾಭಿಷೇಕ ನಡೆಸಿ, ಆಂಜನೇಯನ ವಿಗ್ರಹವನ್ನು ಬಾಲಾಲಯದಲ್ಲಿ ಸ್ಥಾಪಿಸಲಾಯಿತು. ಶ್ರೀಸಂಸ್ಥಾನ ಗೋಕರ್ಣ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ದಿವ್ಯಅನುಗ್ರಹ ಮಾರ್ಗದರ್ಶನದಲ್ಲಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. ಗೋವಿಂದ ಭಟ್ ವಳಕ್ಕುಂಜ ದಂಪತಿಗಳು ವಿಧಿವಿಧಾನಗಳನ್ನು ನಡೆಸಿದರು. ಶೀಘ್ರವಾಗಿ ಮಂದಿರ ನಿರ್ಮಾಣ ಹಾಗೂ ಗೋವುಗಳ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಗೋಪ್ರೇಮಿಗಳಾದ

Read More
ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ವಿವಿವಿ ಆನ್‍ಲೈನ್ ತರಬೇತಿ

ಗೋಕರ್ಣ: ಸಿಇಟಿ, ನೀಟ್, ಕೆವಿಪಿವೈ, ಎನ್‍ಇಎಸ್‍ಟಿ, ಜೆಇಇ ಮತ್ತಿತರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಆನ್‍ಲೈನ್ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಸಮಾಜದ ಕಟ್ಟಕಡೆಯವರಿಗೆ ಕೂಡಾ ಗುಣಮಟ್ಟದ ತರಬೇತಿ ದೊರಕಬೇಕು ಎಂಬ ಉದ್ದೇಶದಿಂದ ಆರಂಭಿಸಲಾದ ತರಬೇತಿ ಈ ತಿಂಗಳ 18ರಂದು ಉದ್ಘಾಟನೆಗೊಳ್ಳಲಿದೆ. ಪ್ರಥಮ ಪಿಯುಸಿ ವಿಜ್ಞಾನ ವಿಷಯದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ಮುಕ್ತವಾಗಿರುತ್ತದೆ. ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳು ಎಂಬಿಬಿಎಸ್, ಐಐಟಿ, ಎನ್‍ಐಟಿ, ಐಐಎಸ್‍ಇಎಆರ್, ಎನ್‍ಐಎಸ್‍ಇಎಆರ್, ಎನ್‍ಎಟಿಎ, ಎಂಜಿನಿಯರಿಂಗ್ ಕೋರ್ಸ್‍ಗಳಿಗೆ ಸೇರಲು

Read More
ಆಚಾರ್ಯಭವನ ಮತ್ತು ಪುಣ್ಯಕೋಟಿ ಗೋಸ್ವರ್ಗ ಲೋಕಾರ್ಪಣೆ

ಮುರ್ಡೇಶ್ವರದಲ್ಲಿ ನೂತನವಾಗಿ ನಿರ್ಮಿಸಿರುವ ಆಚಾರ್ಯಭವನ ಮತ್ತು ಪುಣ್ಯಕೋಟಿ ಗೋಸ್ವರ್ಗವನ್ನು ಶ್ರೀಗಳವರು ಲೋಕಾರ್ಪಣ ಗೊಳಿಸಿದರು. ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ್, ಮಾಜಿ ಶಾಸಕ ಮಂಕಾಳು ವೈದ್ಯ ಮತ್ತು ಕಟ್ಟಡದ ನಿರ್ಮಾತೃ ಬಲಸೆ ಕೃಷ್ಣಾನಂದಭಟ್ ಉಪಸ್ಥಿತರಿದ್ದರು.

Read More
ಒಳ್ಳೆಯ ಸಮಾಜ ಸೇವಕನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ – ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ

ದೇವರ ಮೇಲೆ ನಂಬಿಕೆ, ಗುರು ಭಕ್ತಿ, ಸಂಘಟನೆ ಮೇಲೆ ನಿಷ್ಠೆಯಿದ್ದಾಗ ಯಶಸ್ಸು ಜೊತೆಗಿರುತ್ತದೆ. ಒಳ್ಳೆಯ ಸಮಾಜ ಸೇವಕನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಅವರು ಭಾನುವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ ಮಂಗಳೂರು ಮಂಡಲ ಮಾರ್ಗದರ್ಶನ ಸಭೆಯಲ್ಲಿ ಆಶೀರ್ವಚನ ನೀಡಿದರು. ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಮಾತನಾಡಿ ಮನುಷ್ಯನ ಭಾವನೆಗಳಷ್ಟು ದೊಡ್ಡ ವಿಷಯ ಬೇರೊಂದು ಇಲ್ಲ. ಸಂಘಟನೆ

Read More
ರಜತ ಮಂಟಪ ಸಮರ್ಪಣೆ

ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀಕರಾರ್ಚಿತ ದೇವರಿಗೆ ರಜತ ಮಂಟಪ ಸಮರ್ಪಣೆ ನಡೆದು ಗೋಧೂಳಿ ಮುಹೂರ್ತದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯರಿಂದ ನೂತನ ರಜತ ಮಂಟಪದಲ್ಲಿ ಪೂಜೆ ನಡೆಯಿತು.

Read More
ಮಾಣಿಮಠದಲ್ಲಿ ವಿಷ್ಣುಗುಪ್ತ ವಿವಿ ಶಾಖೆ: ರಾಘವೇಶ್ವರಶ್ರೀ

ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶಾಖೆಯಾಗಿ ಮಾಣಿಮಠದ ಶ್ರೀರಾಮ ವೇದಪಾಠಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಘೋಷಿಸಿದರು. ಮಾಣಿ ಮಠ ಸ್ಥಾಪನೆಯ ಮಂಡಲೋತ್ಸವ ಹಾಗೂ 48ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಕೃಷ್ಣ ಯಜುರ್ವೇದದ ಪರಿಪೂರ್ಣ ಬೋಧನೆಯ ಜತೆಗೆ ಆಧುನಿಕ ಶಿಕ್ಷಣ, ಭಾರತೀಯ ವಿದ್ಯೆ, ಕಲೆಗಳು ಮತ್ತು ವೇದಾಭ್ಯಾಸವನ್ನು ಇಲ್ಲಿ ಕಲಿಸಿ ಸಮಗ್ರ ಜೀವನ ಶಿಕ್ಷಣ ನೀಡುವ ಕೇಂದ್ರವಾಗಿ ಬೆಳೆಸಲಾಗುವುದು. ಮಠದ ಈ ಪ್ರಯತ್ನಕ್ಕೆ ಸಮಾಜದ ಸ್ಪಂದನೆ ವಿಶೇಷವಾಗಿ ಅಗತ್ಯ ಎಂದು ಹೇಳಿದರು. ಹವ್ಯಕ, ಹಾಲಕ್ಕಿ, ಮುಕ್ರಿ

Read More