ಸುದ್ದಿ
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಿಂದ ಹಾಲಕ್ಕಿ, ಮುಕ್ರಿ ಸಮಾಜಕ್ಕೆ ಎರಡು ವಿಶೇಷ ಗುರುಕುಲ
ಗೋಕರ್ಣ: ಧರ್ಮಜಾಗೃತಿ ಹಾಗೂ ಭಾರತೀಯ ಸಂಸ್ಕøತಿಯ ಪುನರುತ್ಥಾನದ ಉದ್ದೇಶದಿಂದ ಶ್ರೀರಾಮಚಂದ್ರಾಪುರ ಮಠ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಈ ವರ್ಷ ಹಾಲಕ್ಕಿ ಗುರುಕುಲ ಮತ್ತು ಚಂದ್ರಗುಪ್ತ ಗುರುಕುಲ ಎರಡು ವಿಶಿಷ್ಟ ಗುರುಕುಲಗಳನ್ನು ಸಮಾಜಕ್ಕೆ ಸಮರ್ಪಿಸುತ್ತಿದೆ. ವಿವಿವಿ ಈಗಾಗಲೇ ಆರಂಭಿಸಿರುವ ಗುರುಕುಲಗಳಿಗೆ ಸಮಾಜದಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿದ್ದು, ಬೆಳೆಯುವ ಕುಡಿಗಳ ಉತ್ಸಾಹದಿಂದ ಸ್ಫೂರ್ತಿ ಪಡೆದು ಹಾಲಕ್ಕಿ ಸಂಸ್ಕøತಿಯ ಸಂರಕ್ಷಣೆ ಮತ್ತು ಸಂವರ್ಧನೆ ಉದ್ದೇಶದಿಂದ ಹಾಲಕ್ಕಿ ಗುರುಕುಲ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಮುಕ್ರಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದ
Read Moreಬಲಿಪಾಡ್ಯಮಿ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ
ಅಮೃತಧಾರಾ ಗೋಶಾಲೆ ಹೊಸಾಡು ಕುಮಟಾದಲ್ಲಿ ಬಲಿಪಾಡ್ಯಮಿ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಗೋಬಂಧುಗಳು ಕುಟುಂಬ ಸಮೇತಗೋ ಶಾಲೆಗೆ ಆಗಮಿಸಿ ಗೋವುಗಳಿಗೆ ಗೋಗ್ರಾಸ ನೀಡಿ ಧನ್ಯರಾದರು. ಜೊತೆಗೆ ಗೋಪೂಜೆ ಕಾಮಧೇನು ಪೂಜೆಯನ್ನು ನೆರವೇರಿಸಲಾಯಿತು. ಲಾಸಾ ಫೌಂಡೇಶನ್ ಮುಂಬಯಿ ನಿರ್ದೇಶಕರಾದ ಶಿವಾನಂದ ಹೆಗಡೆಯವರು ಕುಟುಂಬ ಸಮೇತ ಉಪಸ್ಥಿತರಿದ್ದು ಗೋ ಕುಟುಂಬದೊಡನೆ ಒಡನಾಡಿದರು. ಕಾಮಧೇನು ಪೂಜೆಯಲ್ಲಿ ಭಾಗವಹಿಸಿ ಪುಣ್ಯ ಭಾಜನರಾದರು. ಗೋಶಾಲೆಯ ಸ್ವಚ್ಛತೆ, ಆಹಾರ ಪೂರೈಕೆ. ವಿತರಿಸುವ ವಿಧಾನ ಇತ್ಯಾದಿಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಲಾಸ ಫೌಂಡೇಶನ್ ಮುಂಬೈ
Read Moreಗೋಗ್ರಾಸ ಸೇವೆ
ಮಾಣಿ ಮಠದ ಗೋಶಾಲೆಗೆ ದರ್ಬೆವಲಯ ಮುಕ್ರಂಪಾಡಿಯ ಮಧುರಕಾನ ಗಣಪತಿ ಭಟ್ಟರಿಂದ ೧,೬೦೦ ಸೂಡಿ ಬೈಹುಲ್ಲು ಕೊಡುಗೆಯಾಗಿ ನೀಡುವ ಮೂಲಕ ದೀಪಾವಳಿ ಗೋಪೂಜೆ ಯನ್ನು ಗೋಗ್ರಾಸದ ಸೇವೆಯೊಂದಿಗೆ ಅನ್ವರ್ಥವಾಗಿ ಆಚರಿಸಿದರು.
Read Moreಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಪರಿಸರದಲ್ಲಿ ದೀಪಾವಳಿಯ ಆನಂದಮಯ ಆಚರಣೆ
ಶ್ರೀರಾಮಚಂದ್ರಾಪುರ ಮಠದಿಂದ ಪ್ರತಿಷ್ಠಾಪಿಸಲ್ಪಡುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ – ರಾಜರಾಜೇಶ್ವರಿ ಗುರುಕುಲದ ಆವರಣದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗುರುಕುಲಗಳ ಆರ್ಯೆಯರಾದ ಕು|| ಪವಿತ್ರಾ ಭಟ್, ಶ್ರೀಮತಿ ಜ್ಯೋತಿ ಕುಮಾರಿ, ಆರ್ಯರಾದ ಶ್ರೀ ಸದಾನಂದ ಹೆಬ್ಬಾರ್, ಶ್ರೀ ಅಕ್ಷಯ್ ಹಾಗೂ ವಿದ್ಯಾರ್ಥಿನಿ ಕು. ವಸಂತಾ ಇವರೆಲ್ಲರೂ ಜತೆಗೂಡಿ ಹಿಂದೂ ಧರ್ಮದ ಪ್ರತೀಕವಾದ ಸ್ವಸ್ತಿಕ್ ಆಕೃತಿಯಲ್ಲಿ ಹಣತೆಗಳನ್ನು ಇರಿಸಿ ದೀಪ ಬೆಳಗಿದರು. ಈ ಮೂಲಕ ಸ್ವಸ್ತಿಕಾಕೃತಿಯಲ್ಲಿ ಬೆಳಗು
Read More೨೫ ವರ್ಷದ ಗೋವಿನ ಜತೆ ಮಹಾ ದಾನಿ
ಜೇಡ್ಲ ಗೋಶಾಲೆಯ ಜಾಗ ಹಾಗೂ ಐವತ್ತು ಮಲೆನಾಡು ಗಿಡ್ಡ ಗೋವುಗಳನ್ನು ಶ್ರೀಮಠಕ್ಕೆ ದಾನ ಮಾಡಿದ ಎನ್ ವೆಂಕಟರಾಮಯ್ಯ ಅವರು ೨೫ ವರ್ಷದ ಪಾರ್ವತಿ ಎನ್ನುವ ಗೋವಿಗೆ ಬೆಲ್ಲ ತಿನ್ನಿಸಿ ಸಂಭ್ರಮಿಸಿದರು.
Read Moreಸೇವಾ ಅರ್ಘ್ಯದೊಂದಿಗೆ ಹುಟ್ಟು ಹಬ್ಬದ ಆಚರಣೆ
ಪೆರಡಾಲ ವಲಯ ಮೀಸೆ ಬಯಲು ಘಟಕದ ಮಿಂಚಿನಡ್ಕ ರವೀಂದ್ರನಾಥ ಹಾಗೂ ವಿದ್ಯಾ ದಂಪತಿಯರು ಮಗ ಅನಘ ಶರ್ಮಾನ ಹುಟ್ಟು ಹಬ್ಬವನ್ನು ಗೋವಿಗಾಗಿ ಮೇವು-ಮೇವಿಗಾಗಿ ನಾವು ಸೇವಾ ಅರ್ಘ್ಯದ ನೇತೃತ್ವ ವಹಿಸುವುದರ ಮೂಲಕ ಆಚರಿಸಿದರು. ಹುಟ್ಟುಹಬ್ಬದಂದು ಸಾಮಾನ್ಯವಾಗಿ ಮಕ್ಕಳು ಹೊಸ ಉಡುಗೆ ತೊಟ್ಟು ಸಂಭ್ರಮಿದರೆ ಈ ಹುಡುಗನ ವೇಷವೇ ಬೇರೆ. ಹುಲ್ಲು ಕತ್ತರಿಸುವ ಯಂತ್ರವನ್ನು ಹೆಗಲಿಗೇರಿಸಿ ಸ್ವಯಂ ತಯಾರಿಸಿದ ರಕ್ಷಣಾ ಪೋಷಾಕು!!! ಅನಘ ಶರ್ಮಾನ ಉತ್ಸಾಹವನ್ನು ಬಂದು ಗೋಕಿಂಕರರೆಲ್ಲರೂ ಕೊಂಡಾಡಿದರು. ನವೆಂಬರ್ 12 ಹಾಗೂ 13ರಂದು ನಡೆದ
Read Moreಶರನ್ನವರಾತ್ರಿ ಕಾರ್ಯಕ್ರಮದಲ್ಲಿ ಪ್ರತಿಭಾಪುರಸ್ಕಾರ
ಅಂಬಾಗಿರಿಯ ಶ್ರೀ ರಾಮಕೃಷ್ಣ ಕಾಳಿಕಾ ಭವಾನಿ ಮಠದಲ್ಲಿ ಪ್ರತಿವರ್ಷ ಶರನ್ನವರಾತ್ರಿ ಪ್ರಯುಕ್ತ ನಡೆಸುವ ನವ ಚಂಡಿಕಾ ಹವನ ವೇದಮೂರ್ತಿ ಕಟ್ಟೆ ಶಂಕರಭಟ್ಟರ ಆಚಾರತ್ವ ದಲ್ಲಿ ಧರ್ಮಕರ್ಮ ವಿಭಾಗದ ಪ್ರಧಾನರಾದ ವೇ. ಮೂ. ಜನಾರ್ಧನ ಭಟ್ಟರ ನೇತೃತ್ವ ಹಾಗೂ ವಲಯದ ಅಧ್ಯಕ್ಷರಾದ ವಿ. ಎಂ. ಹೆಗಡೆ ದಂಪತಿಗಳ ಯಜಮಾನತ್ವದಲ್ಲಿ ಸಂಪನ್ನಗೊಂಡಿತು. ಮಾತೆಯರಿಂದ ಕುಂಕುಮಾರ್ಚನೆ ಹಾಗೂ ಕನಕಧಾರಾ ಸ್ತೋತ್ರ ಪಠಣ ನಡೆಯಿತು. ವಲಯದ ವಿದ್ಯಾ ವಿಭಾಗದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ಸಂಸ್ಥಾನದವರ ಆಶೀರ್ವಾದ ಪೂರ್ವಕ ಪ್ರಶಂಸನಾ ಪತ್ರ ವಿತರಣಾ ಕಾರ್ಯಕ್ರಮವು
Read Moreಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಪುರಸ್ಕಾರ
ಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಮಾಡಿದ ಮಂಗಳೂರು ಮಧ್ಯ ವಲಯದ ವಿದ್ಯಾರ್ಥಿಗಳನ್ನು ಗುರುತಿಸಿ, ಅ.25ರಂದು ನಂತೂರಿನ ಶ್ರೀ ಭಾರತೀ ಕಾಲೇಜಿನ ಸಭಾಂಗಣ ಶಂಕರಶ್ರೀಯಲ್ಲಿ ಪುರಸ್ಕರಿಸಲಾಯಿತು. ಶಮಂತ ಕೃಷ್ಣ, ಸಿಂಧೂರ ಬಿ ಭಟ್, ಶ್ರೀದೀಪ್, ಸೀತಾ ಖಂಡಿಗೆ, ನಚಿಕೇತ ಶರ್ಮ ಇವರಿಗೆ ಮಹಾಮಂಡಲದಿಂದ ಕೊಡಮಾಡಿದ ಅಭಿನಂದನಾ ಪತ್ರ ಪ್ರದಾನ ಮಾಡಲಾಯಿತು. ಮಂಗಳೂರು ಮಂಡಲದ ಅದ್ಯಕ್ಷ ಗಣೇಶ್ ಮೋಹನ್ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಹಳೆಮನೆ, ಮಂಗಳೂರು ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಭಾಸ್ಕರ ಹೊಸಮನೆ, ವಲಯ ಅಧ್ಯಕ್ಷ ಬಾಲ ಸುಬ್ರಹ್ಮಣ್ಯ ಭಟ್
Read Moreಅಮೃತಧಾರಾ ಗೋಶಾಲೆ ಬಜಕೂಡ್ಲಿನಲ್ಲಿ ಹುಟ್ಟು ಹಬ್ಬ
ಮಾವಿನಕಟ್ಟೆಯ ಸದಾಶಿವ ಶರ್ಮ, ಸೌಮ್ಯ ದಂಪತಿಗಳ ಮಗಳು ಸಾನ್ವಿಯ ಹುಟ್ಟಿದ ದಿನವನ್ನು ಜಕೂಡ್ಲುಗೋಶಾಲೆಯಲ್ಲಿ ಆಚರಿಸಿದರು. ಭಜನೆ, ದೇವರಿಗೆ ವಂದನೆ, ಗೋಪೂಜೆ ಹಾಗೂ ಗೋಗ್ರಾಸ ಸಮರ್ಪಣೆ ಇತ್ಯಾದಿ ಎಲ್ಲ ನಡೆದು ಪುಟ್ಟಿ ಸಾನ್ವಿಯ ಹುಟ್ಟುಹಬ್ಬ ದೊಡ್ಡ ಸಂದೇಶವನ್ನು ಕೊಟ್ಟಿದೆ. ಗೋಗ್ರಾಸಕ್ಕೆ ಎಂದು ಚೀಲ ಭರ್ತಿ ಹಿಂಡಿಯನ್ನೂ ಮನೆಯವರು ಸಮರ್ಪಿಸಿದರು.
Read Moreಪ್ರಕೃತಿಯಿಂದ ಸಂಸ್ಕೃತಿಗೆ ಏರೋಣ, ವಿಕೃತಿಗೆ ಇಳಿಯದಿರೋಣ – ಶ್ರೀಸಂಸ್ಥಾನ
ಪ್ರಕೃತಿ ಸಂಸ್ಕೃತಿ ವಿಕೃತಿ ಮೂರು ಅರ್ಥ ಮಾಡಿಕೊಂಡಾಗ ಬದುಕು ಯಶಸ್ವಿಯಾಗುತ್ತದೆ. ಪ್ರಕೃತಿಯಿಂದ ಸಂಸ್ಕೃತಿಗೆ ಏರೋಣ, ವಿಕೃತಿಗೆ ಇಳಿಯದಿರೋಣ ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಸೇವಾ ಖಂಡದ ಕಾರ್ಯವೇಕ್ಷಣೆ ಮತ್ತು ತರಬೇತಿ ಉಪಖಂಡದ ವತಿಯಿಂದ ವೆಬಿನಾರ್ ಮೂಲಕ ನಡೆಯುವ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ಪರಿಷ್ಕಾರಗಳಿಗೆ ಅಂತ್ಯ ಎಂಬುದಿಲ್ಲ. ಪ್ರತಿಯೊಬ್ಬರು ಪರಿಷ್ಕಾರಕ್ಕೆ ಒಳಗಾಗುವುದರಿಂದ ತರಬೇತಿಯ ಉದ್ದೇಶ ಪರಿಪೂರ್ಣವಾಗುತ್ತದೆ. ತರಬೇತಿಯಲ್ಲಿ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
Read Moreವಿದ್ಯಾರ್ಥಿಗಳಿಗೆ ಪುರಸ್ಕಾರ
ಮಂಗಳೂರು ಉತ್ತರ ವಲಯದಟಟi ಶೈಕ್ಷಣಿಕವಾಗಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು. ನೇತ್ರಾ ಕೆ, ಸೌರಭ ಪಿ., ದಿಶಾ ಆರ್ ಹೆಗಡೆ ಅವರನ್ನು ಪುರಸ್ಕರಿಸಲಾಯಿತು. ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿಯವ ಶ್ರೀಕೃಷ್ಣ ಶರ್ಮ ಹಳೆಮನೆ, ವಲಯದ ಅಧ್ಯಕ್ಷ ಡಾ ಶಿವಶಂಕರ ಭಟ್, ಕಾರ್ಯದರ್ಶಿ ನಂದ ಕಿಶೋರ್ ಬೀರಂತಡ್ಕ, ಕೋಶಾಧಿಕಾರಿಯವ ಮುರಳೀಧರ ಅಡ್ಕೋಳಿ ಉಪಸ್ಥಿತರಿದ್ದರು. ವಲಯದ ವಿದ್ಯಾರ್ಥಿ ಪ್ರಧಾನರಾದ ದಿವಸ್ಪತಿ ಭಟ್ಟ ಕಾರ್ಯಕ್ರಮ ನಿರೂಪಿಸಿದರು.
Read Moreಪವಿತ್ರ ಉದ್ದೇಶಕ್ಕಾಗಿ ನಾಯಕತ್ವ ಅಪೇಕ್ಷಣೀಯ – ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ
ಕತ್ತಿಯನ್ನು ಮಸೆದಂತೆ ನೀವು ನಿಮ್ಮನ್ನು ಪರಿಷ್ಕರಿಸಿಕೊಂಡಾಗ ಸೇವೆಗೆ ಇನ್ನಷ್ಟು ಅವಕಾಶ ಸಿಗುವಂತಾಗುತ್ತದೆ. ನಾಯಕರಾಗಲು ಹಾತೊರೆಯುವುದು ಸಮಾಜದಲ್ಲಿ ಕಾಣುತ್ತಿದ್ದು, ಒಂದು ಪವಿತ್ರ ಉದ್ದೇಶಕ್ಕಾಗಿ ನಾಯಕತ್ವ ಅಪೇಕ್ಷಣೀಯ ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಸೇವಾ ಖಂಡದ ಕಾರ್ಯವೇಕ್ಷಣೆ ಮತ್ತು ತರಬೇತಿ ಉಪಖಂಡದ ವತಿಯಿಂದ ವೆಬಿನಾರ್ ಮೂಲಕ ನಡೆಯುವ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಕಾರ್ಯವೇಕ್ಷಣೆ ಉಪಖಂಡ ಶ್ರೀಸಂಯೋಜಕ ಬಾಲಸುಬ್ರಹ್ಮಣ್ಯ ಭಟ್ ಮಾತನಾಡಿ ವ್ಯಕ್ತಿ ಪಕ್ವವಾದರೆ ವ್ಯಕ್ತಿತ್ವ ಸರಿಯಾದ ದಾರಿಯಲ್ಲಿರಲು
Read Moreಗ್ರಾಮರಾಜ್ಯ ಪುತ್ತೂರಿನಲ್ಲಿ ಲೋಕಾರ್ಪಣೆ
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಮಾರ್ಗದರ್ಶನದಲ್ಲಿ ನಡೆಸಲಾಗುತ್ತಿರುವ ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ ಗ್ರಾಮರಾಜ್ಯದ ಅಧಿಕೃತ ಮಾರಾಟ ಮಳಿಗೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಲೋಕಾರ್ಪಣೆಗೊಂಡಿತು. ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಎಸ್ ಆರ್ ಸತೀಶ್ಚಂದ್ರ ಅವರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಹವ್ಯಕ ಮಂಡಲ ಅಧ್ಯಕ್ಷರಾದ ಹೇರಂಭ ಶಾಸ್ತ್ರಿ ವಹಿಸಿದ್ದರು. ಅತಿಥಿಗಳಾಗಿ ಮುಳಿಯ ಸಂಸ್ಥೆಯ ಎಂ ಡಿ ಕೃಷ್ಣ ನಾರಾಯಣ ಮುಳಿಯ, ಜೆಸಿ ಸಂಸ್ಥೆ ಪುತ್ತೂರಿನ ಅಧ್ಯಕ್ಷರಾದ ವೇಣುಗೋಪಾಲ ಎಸ್ ಜೆ, ಪುತ್ತೂರು ಹವ್ಯಕ ವಲಯ
Read Moreನಂದಿನಿ ವಲಯದ ಪ್ರತಿಭಾ ಪುರಸ್ಕಾರ
ನಂದಿನಿ ವಲಯದ ಪ್ರತಿಭಾ ಪುರಸ್ಕಾರ ಸಮಾರಂಭ ವಲಯದ ಉಪಾಧ್ಯಕ್ಷರಾದ ಶ್ರೀ ಜಿ . ಎಮ್. ಭಟ್ಟರ ಮನೆಯಲ್ಲಿ ,ಅವರದೇ ಸ್ವಾಗತದೊಂದಿಗೆ ನಡೆಯಿತು. ಎಸ್.ಎಸ್ .ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ 9 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಸೇರಿದ್ದ ಸಭೆಯಲ್ಲಿ ಮಹಾಮಂಡಳದ ವಿದ್ಯಾರ್ಥಿವಾಹಿನೀ ಪ್ರಧಾನರಾದ ಸಂಧ್ಯಾ ಕಾನತ್ತೂರು, ಮಹಾಮಂಡಲದ ಕೋಶಾಧ್ಯಕ್ಷರಾದ ಜಿ.ಜಿ ಹೆಗಡೆಯವರು, ಬೆಂಗಳೂರು ಉತ್ತರ ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನರಾದ ಕೇಶವ ಮುರಳಿಯವರು ,ವಲಯದ ಅಧ್ಯಕ್ಷರಾದ ಸತೀಶ ಹೆಗಡೆಯವರು,ವಲಯ ಉಪಾಧ್ಯಕ್ಷರಾದ ಜಿ.ಎಮ್ ಭಟ್ಟರು, ವಲಯ ಕಾರ್ಯದರ್ಶಿ ಸುರೇಶ
Read Moreಪ್ರಧಾನಮಠದಲ್ಲಿ ನವರಾತ್ರಿ ಆಚರಣೆ
ನವರಾತ್ರಿಯ ಅಂಗವಾಗಿ ಹೊಸನಗರದ ಶ್ರೀರಾಮಚಂದ್ರಾಪುರಮಠದ ಪ್ರಧಾನಮಠದಲ್ಲಿ ವಿಶೇಷ ಪೂಜೆ ನಡೆಯಿತು. ಆಶ್ವೀಜ ಶುಕ್ಲ ಪ್ರತಿಪದಿಯಿಂದ ಪ್ರಾರಂಭವಾಗಿ ಬೆಳಿಗ್ಗೆ ಕಲಶ ಸ್ಥಾಪನೆ ಸಪ್ತಸಿತಿ ಪರಾಯಣ, ಸಾಯಂಕಾಲ ನವರಾತ್ರಿ ಪೂಜೆ ನೆರವೇರಿತು. ಅರ್ಚಕರಾಗಿ ಸತ್ಯನಾರಾಣ ಭಟ್ಟ, ವೈದಿಕರಾಗಿ ರಾಘವೇಂದ್ರ ಪ್ರಸಾದ ಅವರು ಪೂಜಾ ಕಾರ್ಯ ನೆರವೇರಿಸಿದರು.
Read Moreಗುರಿಕ್ಕಾರ ಸಮಾವೇಶ
ರಾಮಚಂದ್ರಾಪುರ ಮಂಡಲ ವ್ಯಾಪ್ತಿಯ ಗುರಿಕ್ಕಾರ ಸಮಾವೇಶ ಹೊಸನಗರ ಪ್ರಧಾನಮಠದಲ್ಲಿ ನಡೆಯಿತು. ಧರ್ಮ ಕರ್ಮ ಖಂಡದ ರಾಮಕೃಷ್ಣ ಭಟ್ಟ ಕೂಟೇಲು, ಮುಳ್ಳೇರಿಯಾ ಮಂಡಲ ಗುರಿಕ್ಕಾರ ರಾದ ಸತ್ಯನಾರಾಯಣ ಮೋಗ್ರ, ಹವ್ಯಕ ಮಹಾಮಂಡಳದ ಸೇವಾ ಪ್ರಧಾನರಾದ ಎಂ. ಜಿ. ರಾಮಚಂದ್ರ ಹಾಗೂ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Read Moreಪ್ರಶಂಸಾಪತ್ರ ವಿತರಣೆ
ಮಂಗಳೂರು ದಕ್ಷಿಣ ವಲಯದ ತಿಂಗಳ ವಲಯ ಸಭೆ ಸೆ.೨೦ರಂದು ನಂತೂರಿನ ಶಂಕರಶ್ರೀ ಸಭಾಭವನದಲ್ಲಿ ನಡೆಯಿತು. ಹತ್ತನೇ ತರಗತಿ ಹಾಗು ಪದವಿ ಪೂರ್ವ ಶಿಕ್ಷಣದಲ್ಲಿ ಶೇ ೯೦ ಕ್ಕಿಂತ ಹೆಚ್ಚು ಅಂಕಗಳಿಸಿದ ಪ್ರತಿಭಾಂತ ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಆಶೀರ್ವಾದ ಪೂರ್ವಕವಾಗಿ ಕಳುಹಿಸಿದ ಪ್ರಶಂಸಾಪತ್ರವನ್ನು ನೀಡಲಾಯಿತು. ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷರಾದ ಸುಬ್ರಮಣ್ಯ ಶಾಸ್ತ್ರೀ, ಉಪಾಧ್ಯಕ್ಷರಾದ ಕಾಶಿಮಠ ಸುಬ್ರಮಣ್ಯ ಭಟ್, ಕಾರ್ಯದರ್ಶಿ ನೆ. ಕೃ. ಸುಬ್ರಮಣ್ಯ ಭಟ್ ಹಾಗೂ ಮಾತೃಪ್ರಧಾನರಾದ ಪಾರ್ವತಿ ಭಟ್ ಮೊಂತಿಮಾರು ಇವರುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀಮಠದ
Read Moreಸ್ಮರಣಾರ್ಥ ಹೋಸಾಡ ಗೋಶಾಲೆಗೆ ದೇಣಿಗೆ
ಪರಮಯ್ಯ ಗಣೇಶ ಹೆಗಡೆ (ಮಾಬ್ಲ ಹೆಗಡೆ ಮನೆ ಕರ್ಕಿ) ಇವರು ತಮ್ಮ ತಂದೆ ದಿವಂಗತ ಗಣೇಶ ಹೆಗಡೆ ಮತ್ತು ತಾಯಿ ದಿವಂಗತ ಗಣಪಿ ಹೆಗಡೆ ಇವರ ಸ್ಮರಣಾರ್ಥ ಹೋಸಾಡ ಗೋಶಾಲೆಯ ಗೋವಿನ ಮೇವಿಗೆ ಒಂದು ಲಕ್ಷ ರೂಪಾಯಿಗಳನ್ನು ಸಮರ್ಪಿಸಿದರು.
Read More“ಸೇವಾ ಅರ್ಘ್ಯ” ಕಾರ್ಯಕ್ರಮ
ಬಜಕೂಡ್ಲು ಅಮೃತಧಾರಾ ಗೋಶಾಲೆ ಗೋವುಗಳ ಮೇವಿಗಾಗಿ ಹಸಿ ಹುಲ್ಲು ಸಂಗ್ರಹಿಸುವ “ಸೇವಾ ಅರ್ಘ್ಯ” ಕಾರ್ಯಕ್ರಮ ಅ.೧೧ ಮುಳ್ಳೇರಿಯಾ ಮಂಡಲ ಕುಂಬ್ಳೆ ವಲಯದ ನಾಣಿಹಿತ್ತಲು ಕೇಶವ ಪ್ರಸಾದ ಮನೆಯಲ್ಲಿ ಜರಗಿತು. ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ವಿದ್ಯಾರ್ಥಿವಾಹಿನೀ ಪ್ರಧಾನ ಗುರುಮೂರ್ತಿ ಮೇಣ, ಮುಷ್ಟಿ ಭಿಕ್ಷೆ ವಿಭಾಗ ಪ್ರಧಾನ ಡಾ ಡಿ ಪಿ ಭಟ್, ಕುಂಬ್ಳೆ ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮ, ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ಟ, ನಾರಾಯಣ ಜಿ ಹೆಗಡೆ, ಮಹಾಬಲ ಶರ್ಮ, ವೆಂಕಟಕೃಷ್ಣ ಸಿ
Read More