ಸುದ್ದಿ
ಗೋಗ್ರಾಸ ಸಮರ್ಪಣೆ
ಪಳ್ಳತಡ್ಕ ವಲಯದ ಗುರಿಕಾರ ಶ್ರೀಕೃಷ್ಣ ಭಟ್ ಮುಣ್ಚಿಕಾನ ಮತ್ತು ಮನೆಯವರು ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಬಂದು ೧೦೮ ಗೋಗ್ರಾಸ ಸಮರ್ಪಣೆ ನಡೆಸಿ, ದೇಣಿಗೆಯನ್ನು ನೀಡಿದರು.
Read Moreಸಾಗರ ಮಂಡಲ ಸಮನ್ವಯ ಸಭಾ ಸರಣಿಯ ಮೂರನೇ ಸಭೆ
ಶ್ರೀರಾಮಚಂದ್ರಾಪುರಮಠದ ಹವ್ಯಕ ಮಹಾಮಂಡಲ ಹಾಗೂ ಮಂಡಲ, ವಲಯಗಳ ಸಮನ್ವಯ ಸಭಾ ಸರಣಿಯ ಮೂರನೇ ಸಭೆ ಇಂದು ಸಾಗರ ಮಂಡಲದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಗುರುವಂದನೆಯ ನಂತರ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್ ಅವರ ಸಭಾಪೂಜೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಮಹಾಮಂಡಲ ಅಧ್ಯಕ್ಷ ಆರ್ ಎಸ್ ಹೆಗಡೆ ಹರಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕನಸಿನ ಕೂಸಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಂಡಲ ಪದಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ವರಿಷ್ಠಾಚಾರ್ಯ ವಿದ್ವಾನ್
Read Moreಸಿದ್ಧಾಪುರ ಮಂಡಲದ ಸಮನ್ವಯ ಸಭಾ ಸರಣಿಯ ಎರಡನೇ ಸಭೆ
ಶ್ರೀರಾಮಚಂದ್ರಾಪುರಮಠದ ಹವ್ಯಕ ಮಹಾಮಂಡಲ ಹಾಗೂ ಮಂಡಲ, ವಲಯಗಳ ಸಮನ್ವಯ ಸಭಾ ಸರಣಿಯ ಎರಡನೇ ಸಭೆ ಇಂದು ಸಿದ್ಧಾಪುರ ಮಂಡಲದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಗುರುವಂದನೆಯ ನಂತರ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್ ಸಭಾಪೂಜೆ ನಡೆಸಿದರು. ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕನಸಿನ ಕೂಸಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಂಡಲ ಪದಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಗೋಕರ್ಣ ಇವರು ಪಾರಂಪರಿಕ ಶಿಕ್ಷಣದ ಮಹತ್ವ ಹಾಗೂ ವಿಶ್ವವಿದ್ಯಾಪೀಠದಲ್ಲಿ ಆರಂಭಗೊಳ್ಳಲಿರುವ
Read Moreಅಶೋಕಾವನದಲ್ಲಿ ಮಹಾಮಂಡಲ ಸಮನ್ವಯ ಸಭಾ ಸರಣಿಯ ಮೊದಲ ಸಭೆ
ಶ್ರೀರಾಮಚಂದ್ರಾಪುರಮಠದ ಹವ್ಯಕ ಮಹಾಮಂಡಲ ಹಾಗೂ ಮಂಡಲ, ವಲಯಗಳ ಸಮನ್ವಯ ಸಭಾ ಸರಣಿಯ ಮೊದಲ ಸಭೆ ರಾಮಚಂದ್ರಾಪುರ ಮಂಡಲದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕನಸಿನ ಕೂಸಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಗೋಕರ್ಣ ಇವರು ಪಾರಂಪರಿಕ ಶಿಕ್ಷಣದ ಮಹತ್ವ ಹಾಗೂ ವಿಶ್ವವಿದ್ಯಾಪೀಠದಲ್ಲಿ ಆರಂಭಗೊಳ್ಳಲಿರುವ ಪಾರಂಪರಿಕ ಶಿಕ್ಷಣದ ಬಗ್ಗೆ ಮಾತನಾಡಿದರು. ವಿಶ್ವವಿದ್ಯಾಪೀಠದ ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ವಿಶ್ವವಿದ್ಯಾಪೀಠದಲ್ಲಿರುವ ವಿವಿಧ ವ್ಯವಸ್ಥೆಗಳನ್ನು ಪರಿಚಯಿಸಿದರು.
Read Moreವೇಟ್ ಲಿಫ್ಟರ್ ಕೊಡುಗೆ
ಹೊಸಾಡಿನ ಅಮೃತಧಾರಾ ಗೋಶಾಲೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವೆಟರ್ನರಿ ಆಸ್ಪತ್ರೆಯಿಂದ ಅನಾರೋಗ್ಯ ದನಗಳನ್ನು ಮೇಲೆತ್ತಲು ಮತ್ತು ಸ್ಥಳ ಬದಲಾವಣೆ ಮಾಡಲು ವೇಟ್ ಲಿಫ್ಟರ್ ನ್ನು ನೀಡಲಾಯಿತು.
Read Moreಗುತ್ತಿಗಾರು ವಲಯದಲ್ಲಿ ಪ್ರತಿಭಾ ಪುರಸ್ಕಾರ
ಗುತ್ತಿಗಾರು ವಲಯದ ಮಾಸಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು. ವಲಯ ಅಧ್ಯಕ್ಷರಾದ ಪನ್ನೆ ದೇವಕಿ .ಜಿ.ಭಟ್ ಸಭಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಶಾಸ್ತ್ರಿ ಅವರನ್ನು ಅಭಿನಂದಿಸಲಾಯಿತು. ಪ್ರೊಫೆಸರ್ ಶ್ರೀಕೃಷ್ಣ ಭಟ್ ಅಭಿನಂದನಾ ಭಾಷಣಗೈದರು. ೧೫ ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮಹಾಮಂಡಲ ದಿಂದ ಕೊಡ ಮಾಡಿದ ಪ್ರಶಸ್ತಿ ಪತ್ರ, ಸ್ಮರಣಿಕೆ,ಹಾಗೂ ಶಾಲು ನೀಡಿ ಗೌರವಿಸಲಾಯಿತು. ಪನ್ನೆ ಗೋಪಾಲಕೃಷ್ಣ ಭಟ್ ಅವರು ವಿವಿವಿಗೆ ರೂ ೬೨,೫೦೦ ದೇಣಿಗೆ ನೀಡಿದರು. ವಲಯದ ಉಪಾಧ್ಯಕ್ಷರಾದ ಸೂರ್ಯ ನಾರಾಯಣ ಪುಚ್ಚೆಪ್ಪಾಡಿ
Read Moreಕನ್ಯಾನ ವಲಯದಲ್ಲಿ ಪ್ರತಿಭಾ ಪುರಸ್ಕಾರ
ಮಂಗಳೂರು ಮಂಡಲದ ಕನ್ಯಾನ ವಲಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ.೨೭ರಂದು ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ಜರಗಿತು. ಹತ್ತನೇ ತರಗತಿಯಲ್ಲಿ ಶೇ. ೯೦ ಕ್ಕಿಂತ ಹೆಚ್ಚಿನ ಅಂಕಗಳಿಸಿದ ಅಕ್ಷಿತಾ.ಸಿ.ಎಚ್., ಅಮೃತ ವರ್ಷಿಣಿ ಎಂ., ಅನನ್ಯ ಲಕ್ಷ್ಮಿ. ಬಿ., ಕುಮಾರರಾದ ಸ್ವಸ್ತಿಕ ಕೃಷ್ಣ. ಪಿ. , ರಾಮಕೃಷ್ಣ. ಪಿ.ವಿ., ಶ್ರೀಶ ಶಂಕರ ಶರ್ಮ, ದ್ವಿತೀಯ ಪಿಯುಸಿಯಲ್ಲಿ ಶೇ. ೯೦ ಕ್ಕಿಂತ ಅಧಿಕ ಅಂಕ ಪಡೆದ ಶ್ರೀಶಕೃಷ್ಣ ಒಡಿಯೂರು, ವೈಷ್ಣವಿ ಪದ್ಯಾಣ, ವರಲಕ್ಷ್ಮಿ ಪಂಜಜೆ ಪ್ರತಿಭಾ ಪುರಸ್ಕಾರ ಗಳಿಸಿದರು. ಮಂಗಳೂರು
Read Moreಮಂಡಲ ವೈದಿಕ ಸಂಗಮ ಕಾರ್ಯಕ್ರಮ
ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ರಾಮಚಂದ್ರಾಪುರ ಮಂಡಲ ವೈದಿಕ ವಿಭಾಗವತಿಯಿಂದ ಮಂಡಲ ವೈದಿಕ ಸಂಗಮ ಕಾರ್ಯಕ್ರಮ ಅ.೧ರಂದು ನಡೆಯಿತು. ಧರ್ಮಕರ್ಮ ಖಂಡದ ರಾಮಕೃಷ್ಣ ಭಟ್ಟ ಕೂಟೇಲು, ಹವ್ಯಕ ಮಹಾಮಂಡಳ ಅಧ್ಯಕ್ಷ ಆರ್ ಎಸ್ ಹೆಗಡೆ ಹರಗಿ, ರಾಮಚಂದ್ರಾಪುರ ಮಂಡಲ ಅಧ್ಯಕ್ಷ ಸತ್ಯನಾರಾಯಣ ಭಾಗಿ, ಪ್ರಧಾನಮಠದ ನಿರ್ವಹಣಾ ಸಮಿತಿಯ ಅಧ್ಯಕ್ಷ ಗಣಪತಿ ಭಟ್ಟ ಜಟ್ಟಿಮನೆ, ಮಹಾಮಂಡಳ ಸೇವಾಪ್ರಧಾನರು ಮತ್ತು ರಾಮಚಂದ್ರಾಪುರ ಮಂಡಲ ಉಸ್ತುವಾರಿ ಎಂ ಜಿ ರಾಮಚಂದ್ರ, ರಾಮಚಂದ್ರಾಪುರ ಮಂಡಲ ಪ್ರಧಾನ ಗುರಿಕ್ಕಾರ ಕೌಲಕೈ ಕುಮಾರ, ರಾಮಚಂದ್ರಾಪುರ ಮಂಡಳ ವೈದಿಕ
Read Moreಕರಿಮಣಿ ಮಾಲೆ ಪುಸ್ತಕ ಬಿಡುಗಡೆ
ಅಶೋಕೆ ವಿದ್ಯಾನಂದ ಭವನದಲ್ಲಿ ಶುಕ್ರವಾರ ನಡೆದ ಪ್ಲವ ಸಂವತ್ಸರ ಪಂಚಾಂಗ ಲೋಕಾರ್ಪಣೆ ಕಾರ್ಯಕ್ರಮದ ಸಂದರ್ಭದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಕರಿಮಣಿ ಮಾಲೆ ಹವ್ಯಕ ಕಥಾಸಂಕಲನ ಬಿಡುಗಡೆ ಮಾಡಿದರು. ಶ್ರೀಮುಖದ ಲೇಖಕಿ ಪ್ರಸನ್ನ ವಿ ಚೆಕ್ಕೆಮನೆಯವರು ಬರೆದ ಪುಸ್ತಕ ಇದಾಗಿದೆ.
Read More” ರಾಮಾಯಣ ಸಿದ್ಧ ” ಬಿ ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣೆ.
ಶ್ರೀ ಮದ್ವಾಲ್ಮೀಕಿ ರಾಮಾಯಣದ ೧೦೮ ಪಾರಾಯಣ ಮಾಡಿ ವಿಶೇಷವಾಗಿ ಸಾಧನೆ ಮಾಡಿದ ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯದ ಕಾಟುಕುಕ್ಕೆ ಘಟಕದ ಗುರಿಕ್ಕಾರರಾಗಿರುವ ಬಿ ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣಾ ಕಾರ್ಯಕ್ರಮವು ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಂತೆ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಸೆ.೨೬ರಂದು ಸಂಪನ್ನವಾಯಿತು. ಧ್ವಜಾರೋಹಣ ಶಂಖನಾದವಾಗಿ ಗುರುವಂದನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಮಹಾ ಮಂಡಲ ಮುಷ್ಠಿ ಭಿಕ್ಷಾ ಪ್ರಧಾನರಾದ ಶ್ರೀಕೃಷ್ಣ ಭಟ್ಟ ಮೀನಗದ್ದೆ ಅವರು ಗೋಪೂಜೆ ನೆರವೇರಿಸಿದರು. ಬಳಿಕ
Read Moreಶಿವಪದ ವೇದಿಕೆಯಿಂದ ಎಸ್. ಪಿ. ಬಿ. ನಿಧನಕ್ಕೆ ಸಂತಾಪ
ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಶಿವಪದ ವೇದಿಕೆಯ ಪರವಾಗಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಸಂಸ್ಥಾನ ಮಹಾಬಲೇಶ್ವರ ದೇವಾಲಯದಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಡುತ್ತಿರುವ “ಶಿವಪದ” ವೇದಿಕೆಯಲ್ಲಿ ಬಂದು ಹಾಡಲು ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು. ಗಾನಲೋಕದ ಮಹಾಮೇರುವಾಗಿದ್ದ ಗಾನಗಂಧರ್ವ ಎಸ್. ಪಿ. ಬಾಲಸುಬ್ರಹ್ಮಣ್ಯಂ” ಅವರ ನಿಧನ ಸಂಗೀತ
Read Moreಕುಮಟಾ ಮಂಡಲದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಶ್ರೀಸಂಸ್ಥಾನದವರ ಅನುಗ್ರಹದಿಂದ ಕುಮಟಾ ಮಂಡಲದ ಎಸೆಸೆಲ್ಸಿಯಲ್ಲಿ ೯೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಾಲಗಳ್ಳಿ ವಲಯದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರಾದ ಜಿ. ಎಸ್. ಹೆಗಡೆಯವರು ವಹಿಸಿ ಮಾತನಾಡಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿ ವಾಹಿನಿಯ ಮಂಡಲ ಪ್ರಧಾನರಾದ ಎಂ.ಜಿ. ಭಟ್ ಇವರು ಮಾತನಾಡಿ ಮುಂದೆ ಗುರಿ ಹಿಂದೆ ಗುರು ಇದ್ದರೆ ಯಾವುದೇ ಮನುಷ್ಯ ಯಶಸ್ಸು ಗಳಿಸಲು ಸಾಧ್ಯ. ಆದರೆ ನಮ್ಮ ಗುರುಗಳು ಮಠದ ಪ್ರತಿ ಶಿಷ್ಯನ
Read Moreಗೋವಧೆ ನಿಷೇಧ, ತಳಿ ಸಂವರ್ಧನೆಗೆ ಕಾಯ್ದೆ: ರಾಘವೇಶ್ವರ ಶ್ರೀ ಒತ್ತಾಯ
ಗೋಕರ್ಣ: ರಾಜ್ಯದಲ್ಲಿ ಸಂಪೂರ್ಣ ಗೋವಧೆ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ & ಸಂವರ್ಧನೆಗೆ ಅನುವು ಮಾಡಿಕೊಡುವ ಮಸೂದೆಯನ್ನು ನಾಳೆ (ಸೆ. 21)ಯಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಆಂಗೀಕರಿಸಬೇಕು ಎಂದು ರಾಮಚಂದ್ರಾಪುರಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶ್ರೀರಾಮಚಂದ್ರಾಪುರ ಮಠದಿಂದ ಚಾಲಿತವಾದ ಭಾರತೀಯ ಗೋಪರಿವಾರ ವತಿಯಿಂದ ಈಗಾಗಲೇ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಮಂದಿಯ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ದೇಶದ ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗಿದೆ. ಬಹುಜನರ ಅಭಿಪ್ರಾಯಕ್ಕೆ
Read Moreಪ್ರಸಕ್ತ ಅಧಿವೇಶನದಲ್ಲೇ ಸಂಪೂರ್ಣ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಹಕ್ಕೊತ್ತಾಯ
ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಿಸಬೇಕು ಮತ್ತು ಭಾರತೀಯ ಗೋ ತಳಿಗಳ ಸಂವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯದ ಒಂದು ಕೋಟಿಗೂ ಅಧಿಕ ಕನ್ನಡಿಗರು ಸಹಿ ಮಾಡಿದ ಹಕ್ಕೊತ್ತಾಯ ಪತ್ರಗಳನ್ನು ಶ್ರೀರಾಮಚಂದ್ರಾಪುರ ಮಠ ಸಂಚಾಲಿತ ಭಾರತೀಯ ಗೋ ಪರಿವಾರ ವತಿಯಿಂದ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಿಗೆ ಮಂಗಳವಾರ ಸಲ್ಲಿಸಲಾಯಿತು. ಈ ತಿಂಗಳ 21ರಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಮಸೂದೆ ಆಂಗೀಕರಿಸಬೇಕು ಎಂದು ಒತ್ತಾಯಿಸಲಾಯಿತು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ
Read Moreವಿಷ್ಣುಗುಪ್ತ ವಿಶ್ವವಿದ್ಯಾಪೀಠ ಭವ್ಯ ಭವಿಷ್ಯದ ಸೂಚಕ: ರಾಘವೇಶ್ವರ ಶ್ರೀ
ಗೋಕರ್ಣ: ಭವ್ಯ ಭವಿಷ್ಯದ ಸೂಚಕ, ದೇಶದ ದಿಶೆಯನ್ನೇ ಬದಲಾಯಿಸಬಲ್ಲ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯ ಸಂಕಲ್ಪ ವಿದ್ಯಾ ಚಾತುರ್ಮಾಸ್ಯ ಸಂದರ್ಭದಲ್ಲಿ ಸಾಕಾರಗೊಂಡಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕವನದ ಆವರಣದಲ್ಲಿ ನಡೆದ 27ನೇ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ತಕ್ಷಶಿಲೆಯ ಪುನಃಸೃಷ್ಟಿ ಇದಾಗಲಿದೆ. ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲ ವ್ಯಕ್ತಿತ್ವಗಳು ಇಲ್ಲಿ ನಿರ್ಮಾಣವಾಗಲಿವೆ ಎಂದರು. ಶಿವನ ಆತ್ಮಲಿಂಗ ಕ್ಷೇತ್ರ, ಆಂಜನೇಯನ ಜನ್ಮಭೂಮಿ, ಶ್ರೀಶಂಕರರು ಮೂರು ಬಾರಿ ಪಾದಸ್ಪರ್ಶ ಮಾಡಿದ ಪುಣ್ಯಭೂಮಿ, ದೈವರಾತರ ಕರ್ಮಭೂಮಿಯಾದ ಗೋಕರ್ಣದ
Read Moreರಾಘವೇಶ್ವರ ಶ್ರೀ ಸೀಮೋಲ್ಲಂಘನೆ, ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ
ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ 26ನೇ ಚಾತುರ್ಮಾಸ್ಯ ಸೀಮೋಲ್ಲಂಘನ ಹಾಗೂ ಶ್ರೀಮಠದ ವತಿಯಿಂದ ನೀಡಲಾಗುವ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ (ಸೆ. 2) ಗೋಕರ್ಣ ಬಳಿಯ ಅಶೋಕವನದಲ್ಲಿ ನಡೆಯಲಿದೆ. ಸೀಮೋಲ್ಲಂಘನೆ ಅಂಗವಾಗಿ ಗಂಗಾವಳಿ ನದಿಯನ್ನು ದಾಟಿ ಅಶೋಕೆಗೆ ಮರಳಿ ಧರ್ಮಸಭೆ ನಡೆಸುವರು. ಕೆ.ಎಸ್.ಗುರುಮೂರ್ತಿ ಶಿಕಾರಿಪುರ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಅನುಗ್ರಹಿಸಲಿದ್ದಾರೆ ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಮೂಲತಃ ಶಿರವಂತೆ ಸೀಮೆ ಹೊಸಳ್ಳಿ ಗ್ರಾಮದ ಕಲ್ಸೇಮನೆ ವಾಸಿ ಸಿಬ್ಬಯ್ಯನವರ ಪುತ್ರರಾದ ಗುರುಮೂರ್ತಿಯವರು
Read Moreಹವ್ಯಕ ಮಹಾಸಭೆಯಿಂದ ಗುರುಭಿಕ್ಷಾ ಸೇವೆ
ಮಠ ಸನಾತನ ಸಂಸ್ಥೆಯಾದರೆ, ಹವ್ಯಕ ಮಹಾಸಭೆಯು ಪುರಾತನ ಸಂಸ್ಥೆಯಾಗಿದೆ. ಸಮಾಜದ ಹಿತ ಸಾಧನೆಯಲ್ಲಿ ನಿರತವಾಗಿರುವ ಮಹಾಸಭೆಯು ಇತ್ತೀಚಿನ ದಿನಗಳಲ್ಲಿ ಅನೇಕಾನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಶ್ರೀರಾಮಚಂದ್ರಾಪುರಮಠದ ಮೂಲಮಠವಾದ; ಗೋಕರ್ಣದ ಅಶೋಕೆಯ ಪರಿಸರದಲ್ಲಿ ಚಾತುರ್ಮಾಸ್ಯ ವ್ರತವನ್ನು ನಡೆಸುತ್ತಿರುವ ಪೂಜ್ಯ ಶ್ರೀಗಳು, ಹವ್ಯಕ ಮಹಾಸಭೆಯಿಂದ ಸಮರ್ಪಿಸಲಾದ ಗುರುಭಿಕ್ಷಾ ಸೇವೆ, ಗುರುಪಾದುಕಾ ಪೂಜೆ, ಗೋಸೇವೆಗಳನ್ನು ಸ್ವೀಕರಿಸಿ ಮಾತನಾಡಿ; ಭಾರತೀಯ ವಿದ್ಯೆಗೆ ಒತ್ತು ಕೊಡಲಾಗಿಯೇ, ಈ ವರ್ಷದ ಚಾತುರ್ಮಾಸ್ಯವನ್ನು “ವಿದ್ಯಾ ಚಾತುರ್ಮಾಸ್ಯ”
Read Moreಗೋನಿರ್ಭರತೆಯಿಂದ ಆತ್ಮನಿರಭರತೆ ಸಾಧ್ಯ – ಶ್ರೀಸಂಸ್ಥಾನ
ರಾಸಾಯನಿಕ ಕೃಷಿ ಒಂದಲ್ಲಒಂದು ದಿನ ರೈತನಕುತ್ತಿಗೆಗೆ ಉರುಳಾಗುತ್ತದೆ. ದೇಶೀ ಗೋವನ್ನು ಸಾಕಿಕೊಂಡುಇದ್ದವರುಯಾರೂಆತ್ಮಹತ್ಯೆ ಮಾಡಿಕೊಂಡಿಲ್ಲ. ಸ್ವಾವಲಂಬಿ ಎಂಬುದಕ್ಕೆ ಗೋವು ಬಲುದೊಡ್ಡ ನಿದರ್ಶನ. ಗೋನಿರ್ಭರತೆಯಿಂದಆತ್ಮನಿರಭರತೆ ಸಾಧ್ಯವಾಗುತ್ತದೆ.ದೇಶದ ಗಮನ ಗೋವಿನ ಕಡೆಗೆ ಹರಿಯುವಂತೆ ಮಾಡಬೇಕು.ಗೋವು ದೇಶಕ್ಕೆ ಬೆಳಕಿನ ಕಿರಣವಾಗಿದ್ದು, ತಂತ್ರಜ್ಞಾನಗಳು ಗೋಜ್ಞಾನದಕಡೆಗೆಕೊಂಡೊಯ್ಯುವಂತಾಗಲಿ ಎಂದು ಶ್ರೀರಾಮಚಂದ್ರಾಪುರ ಮಠದಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು. ಶ್ರೀರಾಮಾಂದ್ರಾಪುರ ಮಠದ ವತಿಯಿಂದ ಎ೧ ಲಾಜಿಕ್ಸ್ ಮಂಗಳೂರು ಸಹಕಾರದಲ್ಲಿ ದೇಸೀ ಗೋವು ಆಧಾರಿತಕೃಷಿಯಕುರಿತು ದೇಸೀ ಗೋವು – ಸ್ವಾವಲಂಬಿ ಸಾವಯವ ಕೃಷಿ ವೆಬಿನಾರ್ ಸರಣಿಕಾರ್ಯಕ್ರಮದಲ್ಲಿ ಪರಮಪೂಜ್ಯರು ವಿಶೇಷ ಆಶೀರ್ವಚನ ನೀಡಿದರು.
Read More