ಸುದ್ದಿ
ಪ್ರತಿಜ್ಞೆಯನ್ನು ಪೂರೈಸಿದಾಗ ಎಲ್ಲರಿಗಿಂತ ಮಿಗಿಲಾಗಬಹುದು – ಶ್ರೀಸಂಸ್ಥಾನ
ಗಿರಿನಗರ: ಪ್ರತಿಜ್ಞೆಯನ್ನು ಪೂರೈಸಿದಾಗ ಎಲ್ಲರಿಗಿಂತ ಮಿಗಿಲಾಗಬಹುದು. ಪ್ರತಿಯೊಂದು ದೇವರಿಗೆ ತಿಳಿಯುತ್ತದೆ ಎಂಬುದು ದೃಢವಾದಾಗ ಒಳ್ಳೆಯವರಾಗುತ್ತೇವೆ. ಮಕ್ಕಳು ಗ್ರಹಿಕೆ ಉಳ್ಳವರಾಗಿದ್ದಾಗ ಮಾತ್ರ ಸೂಕ್ಷ್ಮಗಳು ತಿಳಿಯಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನಾರನೇ ದಿನ ಆಶೀರ್ವಚನ ನೀಡಿದರು. ನಮ್ಮ ಸಂಪಾದನೆಯಲ್ಲಿ ಪ್ರಕೃತಿ ಸೇರಿ ಪ್ರತಿಯೊಬ್ಬರಿಗೂ ಪಾಲಿದೆ ಎಂಬುದನ್ನು ಅರಿತುಕೊಳ್ಳಬೇಕು. ಗೌರವ ಯಾರಿಗೆ ಎಷ್ಟು ಸಲ್ಲಿಸಬೇಕೋ, ಅಷ್ಟು ಗೌರವ ಕೊಡಬೇಕು.
Read Moreತ್ಯಾಗವಿಲ್ಲದೆ ನಾಯಕತ್ವ ಇರಲು ಸಾಧ್ಯವಿಲ್ಲ – ಶ್ರೀಸಂಸ್ಥಾನ
ಗಿರಿನಗರ: ಸಮುದಾಯಕ್ಕೆ ಮುಂದಾಳುತ್ವವಿದ್ದಾಗ ವ್ಯವಸ್ಥೆ ಉತ್ತಮವಾಗಿ ಮುನ್ನಡೆಯುತ್ತದೆ. ದೈವ ನಿರ್ಣಯದ ಮುಂದೆ ಬೇರಾವುದೂ ಇಲ್ಲ. ಮಾಡುವ ಕಾರ್ಯದಲ್ಲಿ ವಿವೇಚನೆ ಅಗತ್ಯವಿದೆ. ತ್ಯಾಗವಿಲ್ಲದೆ ನಾಯಕತ್ವ ಇರಲು ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನೈದನೇ ದಿನ ಆಶೀರ್ವಚನ ನೀಡಿದರು. ದೇಸೀ ತುಪ್ಪದ ಪ್ರಭಾವವನ್ನು ಪುರಾಣ ಕಾಲದಲ್ಲಿ ಕಾಣಬಹುದಾಗಿದೆ. ಮಂತ್ರಿಗಳು ಸಮಾಜದ ಶ್ರೇಯಸ್ಸನ್ನು ಬಯಸುವವರಾಗಿರಬೇಕು. ಬೂದಿಗೂ ಚಿಗುರಿಗೂ ಬಹಳಷ್ಟು ಸಂಬಂಧವಿದೆ.
Read Moreಗೋವು ಹಾಲಿಗೇ ಮೀಸಲಾಗಬಾರದು – ಸೂಲಿಬೆಲೆ
ಮಾಲೂರು: ಗೋವು ಹಾಲಿಗೇ ಮೀಸಲು ಆಗದೆ, ಕೃಷಿ ಚಟುವಟಿಕೆಗೆ ಅಗತ್ಯ ಎಂಬುದನ್ನು ಅರಿಯುವ ಕಾರ್ಯವಾಗಬೇಕು. ಕೃಷಿ ಭೂಮಿಗೆ ದೇಸೀ ಗೋವಿನ ಸಗಣಿ ಬೇಕಾದಷ್ಟು ಮಟ್ಟಿಗೆ ಸಿಗುತ್ತಿಲ್ಲವೆಂಬ ಪರಿಸ್ಥಿತಿ ಈಗ ಇದೆ. ಯುವ ಶಕ್ತಿಯನ್ನು ಬಳಸಿಕೊಂಡು ಯುವ ಫಾರ್ಮ್ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಗೋಶಾಲೆ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ಪಡೆಯಲು ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದಿಂದ ನಡೆಸಲ್ಪಡುತ್ತಿರುವ ಮಾಲೂರು ಶ್ರೀರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ
Read Moreಶರಾವತಿ ತಿರುವು ಅವೈಜ್ಞಾನಿಕ ; ಶ್ರೀಸಂಸ್ಥಾನ
ಬೆಂಗಳೂರು : ಜೂ. 25 ಶರಾವತಿ ನೀರನ್ನು ಬೆಂಗಳೂರಿಗೆ ತರುವ ಪ್ರಸ್ತಾವಿತ ಯೋಜನೆ ಅವೈಜ್ಞಾನಿಕ ಹಾಗೂ ಅತಾರ್ಕಿಕ. ವಿಶ್ವದಲ್ಲೇ ಅತಿವಿರಳ ಜೀವವೈವಿಧ್ಯ ತಾಣ ಎನಿಸಿದ ಪಶ್ಚಿಮಘಟ್ಟ ಪರಿಸರಕ್ಕೆ ಈ ಯೋಜನೆ ಮಾರಕ. ಕಾರ್ಯಸಾಧುವಲ್ಲದ ಈ ಪ್ರಸ್ತಾವಿತ ಯೋಜನೆಯನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದ ಪರಮಪೂಜ್ಯರು ಆಗ್ರಹಿಸಿದ್ದಾರೆ. ಇಂಥ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಯ ಬದಲಾಗಿ ಮಳೆ ನೀರು ಕೊಯ್ಲಿನಂಥ ಪರ್ಯಾಯ ವಿಧಾನದ ಮೂಲಕ ರಾಜಧಾನಿಯ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ. ಅಭಿವೃದ್ಧಿಗೆ ನಮ್ಮ
Read More24.06.2019
ವಿಕಾರಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ/ ಕೃಷ್ಣಪಕ್ಷ/ಸಪ್ತಮಿ ತಿಥಿ/ ಸೋಮವಾರ/ಪೂರ್ವಾಭಾದ್ರಾ ನಕ್ಷತ್ರ / ದಿನಾಂಕ 24.06.2019 °~•~°~•~°~•~°~•~°~•~° ಮೇಷ ಕೃಷಿಕರಿಗೆ ಉತ್ತಮ ಬೆಳೆ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ದೊರೆಯಲಿದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆದರೆ ಮಾತ್ರ ಅಭಿವೃದ್ಧಿ ದೊರೆಯಲಿದೆ. ಪರಿಹಾರ : ದೇವಿಯ ಆರಾಧನೆಯಿಂದ ಶುಭ. ಜಪಿಸಲು : ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಽಸ್ತು ತೇ || °~•~°~•~°~•~°~•~°~•~°
Read Moreಧಾರಾ~ರಾಮಾಯಣ ಪ್ರವಚನ ಮಾಲಿಕೆ: ನೇರಪ್ರಸಾರ
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಹಾಸಂಕಲ್ಪದಲ್ಲಿ ಶ್ರೀಸಂಸ್ಥಾನದವರು ಧಾರಾ~ರಾಮಾಯಣ ಪ್ರವಚನಮಾಲಿಕೆಯನ್ನು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಪ್ರಾರಂಭಿಸುತ್ತಿರುವುದು ನಮಗೆಲ್ಲರಿಗೂ ತಿಳಿದೆದೆಯಷ್ಟೇ. ದೂರದೂರಿನವರಿಗೆ, ಬಂದು ಭಾಗವಹಿಸಲು ಸಾಧ್ಯವಿಲ್ಲದವರಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರದ ಜತೆಗೆ ಇದೊಂದು ಹೊಸ ಪ್ರಯತ್ನ. ಇಂದಿನ ಪ್ರಥಮ ಪ್ರವಚನವನ್ನು 3D view ನಲ್ಲಿ ಅಂತಹವರು ಇದ್ದಲ್ಲಿಂದಲೇ ಕಂಡು ಧನ್ಯರಾಗಬಹುದು! ಈ application ಅನ್ನು download ಮಾಡಿಕೊಳ್ಳಿ, ಇಲ್ಲಿ ಇಂದು ಸಂಜೆ 6.45 ರಿಂದ ಪ್ರವಚನದ ನೇರಪ್ರಸಾರವನ್ನು 3D view ನಲ್ಲಿ ಮಾಡಲಾಗುತ್ತದೆ: https://play.google.com/store/apps/details?id=com.kalpnik.vrdevotee
Read Moreನಿರಂತರ ಗೋಸೇವೆಯಿಂದ ಬ್ರಹ್ಮಜ್ಞಾನಿಯಾಗಲು ಸಾಧ್ಯವಿದೆ : ಶ್ರೀಸಂಸ್ಥಾನ
ತಳಗೇರಿ: ದೇವರ ಸೊತ್ತನ್ನು ನುಂಗುವುದರಿಂದ ಪಾಪವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಬದುಕಿನಲ್ಲಿ ನಮ್ಮ ಪೂರ್ವ ಕರ್ಮಕ್ಕನುಗುಣವಾಗಿ ಎಲ್ಲವೂ ಬರುತ್ತದೆ. ಗುರುಪರಂಪರೆ ಕೃಪೆ ಮಾಡಿ ದೇವರ ಇಚ್ಛೆ ಇದ್ದಾಗ ಮಾತ್ರ ಸಾತ್ವಿಕ ಅಪೇಕ್ಷೆಗಳು ಈಡೇರುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಹೇಳಿದರು. ತಳಗೇರಿ ವಿಜಯಕುಮಾರ್ ನಿವಾಸದಲ್ಲಿ ಭಿಕ್ಷಾ ಸೇವಾ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಒಳ್ಳೆಯ ದಾರಿಯಲ್ಲಿ ಇದ್ದಾಗ ಹಲವು ಶುಭಗಳು ಸೇರಿ ಬರುತ್ತವೆ. ಧರ್ಮ ಯಾವತ್ತಿದ್ದರೂ ದೊಡ್ಡದು, ದ್ರವ್ಯವಲ್ಲ. ಸೇವೆ ತ್ಯಾಗದ ಮೂಲಕ ಧರ್ಮ ಪ್ರಾಪ್ತಿಯಾಗುತ್ತದೆ. ಗೋವನ್ನು
Read Moreರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ಬೆಂಗಳೂರಿನಲ್ಲಿ
ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ 26ನೇ ಚಾತುರ್ಮಾಸ್ಯ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದ ಆವರಣದಲ್ಲಿ ನಡೆಯಲಿದೆ. ಜುಲೈ 16ರಂದು ಆರಂಭವಾಗುವ ಚಾತುರ್ಮಾಸ್ಯ ಸೆಪ್ಟೆಂಬರ್ 14ರಂದು ಸಂಪನ್ನವಾಗಲಿದ್ದು, ಈ ಬಾರಿಯ ಚಾತುರ್ಮಾಸ್ಯಕ್ಕೆ ರಾಮಾಯಣ ಚಾತುರ್ಮಾಸ್ಯ ಎಂದು ಹೆಸರಿಸಲಾಗಿದೆ. ಸೆಪ್ಟೆಂಬರ್ 14ರಂದು ಶನಿವಾರ ಸೀಮೋಲ್ಲಂಘನ ನಡೆಯಲಿದೆ. ಶ್ರೀಗಳು ಸನ್ಯಾಸ ಸ್ವೀಕರಿಸಿ 25 ವರ್ಷಗಳನ್ನು ಪೂರೈಸಿದ್ದು, ಈ ಬಾರಿ 26ನೇ ವರ್ಷದ ಚಾತುರ್ಮಾಸ್ಯವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲು ಶ್ರೀಮಠದ ಶಿಷ್ಯರು ಹಾಗೂ ಭಕ್ತರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ.
Read Moreಮಾಧ್ಯಮಗಳನ್ನು ಧಮನಿಸುತ್ತಿರುವುದು ಖಂಡನೀಯ
ನಾಡಿನ ಹಿರಿಯ ಪತ್ರಕರ್ತರು ಹಾಗೂ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರ ಮೇಲೆ ಪತ್ರಿಕಾ ವರದಿಯೊಂದರ ಕಾರಣಕ್ಕಾಗಿ ದೂರು ದಾಖಲಿಸಿರುವುದು ಖಂಡನೀಯವಾಗಿದ್ದು, ಪತ್ರಿಕಾರಂಗದ ಮೇಲಿನ ಈ ದಮನಕಾರಿ ನೀತಿಯನ್ನು ಶ್ರೀ ಅಖಿಲ ಹವ್ಯಕ ಮಹಾಸಭೆ ಖಂಡಿಸುತ್ತದೆ. ಉಪಲಬ್ಧವಾದ ಮಾಹಿತಿಯನ್ನಾಧರಿಸಿ ವರದಿಗಳನ್ನು ಪ್ರಕಟಿಸುವುದು ಮಾಧ್ಯಮಗಳಲ್ಲಿ ಸರ್ವೇಸಾಮಾನ್ಯ. ಸುದ್ದಿ ಮೂಲವನ್ನಾಧರಿಸಿದ ಪತ್ರಿಕಾ ವರದಿ ಪ್ರಕಟಿಸಿದ ಮಾತ್ರಕ್ಕೆ ವಿವಿಧ ಸೆಕ್ಷನ್’ಗಳಡಿಯಲ್ಲಿ ದೂರು ದಾಖಲಿಸಿ ; ಪತ್ರಿಕೆಯನ್ನು ಯಾ ಪತ್ರಕರ್ತರನ್ನು ಪ್ರತಿಬಂಧಿಸಲು ಉದ್ಯುಕ್ತವಾಗಿರುವುದು ಆಡಳಿತ ಪಕ್ಷಕ್ಕೆ ಶೋಭೆತರುವಂತದ್ದಲ್ಲ.
Read Moreನಾದಬ್ರಹ್ಮ ದಿವಂಗತ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ
ಸಭೆ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯಲ್ಲಿ ನಡೆಯಿತು. ಯಕ್ಷಗಾನಕ್ಷೇತ್ರದ ಭಾಗವತಿಕೆಯಲ್ಲಿ ಮಹೋನ್ನತ ಸಾಧನೆಗೈದ ನೆಬ್ಬೂರು ಭಾಗವತರು ಹವ್ಯಕ ಸಮಾಜದ ಹೆಮ್ಮೆಯಾಗಿದ್ದು, ಪುಷ್ಪಾಂಜಲಿ, ಕಾವ್ಯಾಂಜಲಿ, ಭಾವಾಂಜಲಿ ಹಾಗೂ ನಾಟ್ಯಾಂಜಲಿ ಎಂಬ ವಿವಿಧ ಪ್ರಾಕಾರಗಳ ಮೂಲಕ ನೆಬ್ಬೂರರನ್ನು ಸ್ಮರಿಸಿ ಅವರಿಗೆ ಅರ್ಥಪೂರ್ಣವಾದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಎಂ ಎ ಹೆಗಡೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಅಧ್ಯಕ್ಷತೆವಹಿಸಿದ್ದರು. ಯಕ್ಷಗಾನ ಚಿಂತಕ ಹುಕ್ಲಮಕ್ಕಿ ಶ್ರೀಪಾದ
Read Moreಹಲಸು ಮೇಳ ಸಿದ್ಧತಾ ಚಿಂತನೆ ಸಂಪನ್ನ
ಬದಿಯಡ್ಕ, 15.05.2019 : ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ನಡೆದಯುತ್ತಿರುವ ಅನನ್ಯ ವಿಶಿಷ್ಟ ಯೋಜನೆಯಾದ ಕಾಮದುಘಾದ ಅಡಿಯಲ್ಲಿ ಮುನ್ನಡೆಯುತ್ತಿರುವ ಬಜಕೂಡ್ಲುವಿನ ಅಮೃತಧಾರಾ ಗೋಶಾಲೆಗೆ ನಿರಂತರ ಆಹಾರ ವ್ಯವಸ್ಥೆಯನ್ನು ಪೂರೈಸುವ ಯೋಜನೆಗೆ ಪೂರಕವಾಗಿ ಹಲಸುಮೇಳವನ್ನು ಆಯೋಜಿಸಲಾಗುತ್ತಿದೆ. ಜೂನ್ 8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ, ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು ಪೆರ್ಲ, ಮತ್ತು ಮಹಿಳೋದಯ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ “ಹಲಸು ಬೆಳೆಸಿ ಗೋವು ಉಳಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಜರಗಲಿರುವ ಈ ಹಲಸು ಮೇಳದ ಯಶಸ್ಸಿಗಾಗಿ
Read Moreಆಲಕ್ಕೋಡ್ನಲ್ಲಿ ಶ್ರೀಮದ್ಭಾಗವತ ಸಪ್ತಾಹಯಜ್ಞ
ಆಲಕ್ಕೋಡ್ ಗೋಕುಲದ ವಿಷ್ಣುಪ್ರಸಾದ್ ಹೆಬ್ಬಾರ್ ಇವರ ‘ ಪರಂಪರಾ ‘ ಎಂಬ ಹೊಸ ಮನೆಯಲ್ಲಿ 17.05. 2019 ಸಾಯಂ 6 ಗಂಟೆಗೆ : ಶೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಗೆ ಪೂರ್ಣಕುಂಭ ಸ್ವಾಗತ 18.05.2019 ಮಧ್ಯಾಹ್ನ 12 ಗಂಟೆ ಆಶೀರ್ವಚನ : ಶೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು , ಶ್ರೀ ರಾಮಚಂದ್ರಾಪುರ ಮಠ ಹೊಸನಗ. ಗೋಕುಲಂ, ಆಲಕ್ಕೋಡ್, P.O. ಪಾಕ್ಕಂ. ಬೇಕಲ ಕೋಟೆ, ಕಾಸರಗೋಡು 9446423641 9447413641 9495703296
Read Moreಮಂಡಲಸಭೆಯಲ್ಲಿ ಶ್ರೀಮಾತಾಪ್ರಶಸ್ತಿಭೂಷಿತೆಗೆ ಮತ್ತು ಪೀಯೂಸೀ ವಾಣಿಜ್ಯ ಪ್ರತಿಭೆಗೆ ಸಮ್ಮಾನದ ಗೌರವ
ಈ ತಿಂಗಳ ಮುಳ್ಳೇರಿಯಾ ಹವ್ಯಕ ಮಂಡಲದ ಮಾಸಿಕ ಸಭೆಯು ಮಡಿಕೇರಿಯಲ್ಲಿ ನೆರವೇರಿತು. ಕೊಡಗು ಹವ್ಯಕ ವಲಯಾಧ್ಯಕ್ಷ ಡಾ. ರಾಜಾರಾಮ ಭಟ್ಟ ಅವರ ನಿವಾಸದಲ್ಲಿ ಜರುಗಿದ ಮಾಸಿಕ ಸಭೆಯು ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗತಸಭೆಯ ವರದಿ ನೀಡಿದರು. ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಶ್ರೀಮಠದ ಮಾರ್ಗದರ್ಶನದಲ್ಲಿ ಜರಗಿದ ವಿವಿಧ ಸಮಾರಂಭಗಳ ಕುರಿತು ಅವಲೋಕನೆ
Read Moreಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಆಯೋಜಿಸಿದ್ದ ವಿಷು-ವಿಶೇಷ ಸ್ಪರ್ಧೆ -೨೦೧೯ರ ಫಲಿತಾಂಶ
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಆಯೋಜಿಸಿದ್ದ ವಿಷು-ವಿಶೇಷ ಸ್ಪರ್ಧೆ -೨೦೧೯ರ ಫಲಿತಾಂಶವು ಪ್ರಕಟಗೊಂಡಿದ್ದು, ಮೇ-೫ರಂದು ಕಾವು ಜನಮಂಗಲ ಸಭಾಭವನದಲ್ಲಿ ಜರುಗುವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು. ಫಲಿತಾಂಶದ ವಿವರವನ್ನು ಮಾಧ್ಯಮ ಪ್ರಕಟಣೆಗಾಗಿ ಲಗತ್ತಿಸಿದೆ.
Read Moreಈಶಾವಾಸ್ಯಂ ನಿವಾಸದಲ್ಲಿ ಪ್ರತಿರುದ್ರ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆ ಸಂಪನ್ನ
ನೀರ್ಚಾಲು: ಶ್ರೀಸಂಸ್ಥಾನದವರ ಅನುಗ್ರಹ ಆಶೀರ್ವಾದಗಳೊಂದಿಗೆ ಮಂಗಳೂರು ಹೋಬಳಿಯ ಮುಳ್ಳೇರಿಯಾ ಮಂಡಲಾಂತರ್ಗತ ಪೆರಡಾಲ ವಲಯದ ನೀರ್ಚಾಲು ಸಮೀಪದ ಏಣಿಯರ್ಪಿನಲ್ಲಿರುವ ಕಿಳಿಂಗಾರು ವೇ.ಮೂ. ಬಾಲಕೃಷ್ಣ ಪ್ರಸಾದರ ನಿವಾಸ ಈಶಾವಾಸ್ಯಂ ನಲ್ಲಿ 02.04.2019ರಂದು ಶ್ರೀಮಠ ರಕ್ಷಾತ್ಮಕವಾದ ಧಾರ್ಮಿಕ ಕಾರ್ಯಕ್ರಮವು ಸಂಪನ್ನವಾಯಿತು. ಮಹಾಮಂಡಲಾಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು ಧ್ವಜಾರೋಹಣ ಮಾಡಿ, ಶಂಖನಾದ ಗುರುವಂದನೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು. ಮಂಗಳೂರು ಉಪ್ಪಿನಂಗಡಿ ಮುಳ್ಳೇರಿಯಾ ಹವ್ಯಕ ಮಂಡಲಗಳಿಂದ ಬಂದು ಸೇರಿದ ರುದ್ರಾಧ್ಯಾಯಿಗಳಿಂದ ಪ್ರದೋಷ ಪ್ರತಿರುದ್ರ ಪಠಣವು ಜರಗಿತು. ಮಾತೃ ವಿಭಾಗದವರಿಂದ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆಯು ಜರಗಿತು.
Read Moreನಕಲಿ ಅಶ್ಲೀಲ ಸಿಡಿ ಕೇಸ್ – ಚಾರ್ಜ್’ಶೀಟ್ ರದ್ಧತಿಗೆ ನಕಾರ ; ತನಿಖೆ ಮುಂದುವರಿಸಲು ಆದೇಶ
ನಕಲಿ ಅಶ್ಲೀಲ ಸಿಡಿ ತಯಾರಿಸಿ; ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ತೇಜೋವಧೆಯ ಹುನ್ನಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕುಮಟಾದ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್’ಶೀಟ್ ರದ್ಧತಿಗೆ ಆರೋಪಿಗಳು ಮಾಡಿದ್ದ ಮೇಲ್ಮನವಿಯನ್ನು ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ಮುಂದುವರಿಸುವಂತೆ ಆದೇಶ ಹೊರಡಿಸಿದೆ. 2010 ರಲ್ಲಿ ಪೂಜ್ಯ ಶ್ರೀಗಳನ್ನು ಹೋಲುವ ವ್ಯಕ್ತಿಗೆ ಶ್ರೀಗಳಂತೆ ಉಡುಗೆತೊಡುಗೆಯನ್ನು ತೊಡೆಸಿ, ಶ್ರೀಗಳಂತೆ ಹಾವ-ಭಾವಗಳ ಅಭ್ಯಾಸ ಮಾಡಿಸಿ; ಚಿತ್ರೀಕರಣ ಮಾಡಲಾಗಿತ್ತು. ವೈದಿಕ ವೃತ್ತಿಯಲ್ಲಿರುವ ಆರೋಪಿಗಳು, ತಮ್ಮ ಮಧ್ಯೆ ನಡೆಸಿದ ಸಂಭಾಷಣೆಗಳು,
Read Moreಸಾರ್ಥಕವಾಯುತು ಶ್ರೀ ಅಖಿಲಹವ್ಯಕ ಮಹಾಸಭೆಯ ಸಂಸ್ಥಾಪನೋತ್ಸವ
ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ, ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭವು ಸಂಭ್ರಮದಿಂದ ಜರುಗಿತು. ಸಮಾರಂಭದ ಅಭ್ಯಾಗತರಲ್ಲಿ ಒಬ್ಬರಾದ ಸಾಹಿತಿ ಶ್ರೀಮತಿ ಎ.ಪಿ.ಮಾಲತಿ, ಇಂದಿನ ಮೊಬೈಲ್ ಕಾಲದಲ್ಲೂ ನಮ್ಮ ಸಮಾಜದಲ್ಲಿನ ಪ್ರತಿಭೆಗಳು ಹೊರ ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು. ಹವ್ಯಕ ಮಹಾಸಭೆಯು ಎಲೆಮರೆಕಾಯಿಯಂತಿದ್ದ ಪ್ರತಿಭೆಗಳನ್ನು ಗುರುತಿಸಿ ಇಂದು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪುರಸ್ಕರಿಸಲಾಗುತ್ತಿದೆ. ಇದು ಅವರ ಸಾಧನೆಯ ಶಿಖರಕ್ಕೆ ಮತ್ತಷ್ಟು ಸ್ಫೂರ್ತಿಯಾಗಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.
Read Moreಕಾಂಚೀ – ರಾಮಚಂದ್ರಾಪುರಮಠ ; ಶಂಕರಪೀಠಗಳ ಸಮಾಗಮ
ಕಾಂಚೀ ಕಾಮಕೋಟಿ ಮಠದ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀಗೋಕರ್ಣ ಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಕಾಂಚೀಮಠದಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು. ಕಾಂಚೀ ಶಂಕರಾಚಾರ್ಯರ ವಿಶೇಷ ನಿಮಂತ್ರಣದ ಮೇರೆಗೆ ಕಾಂಚೀಪುರಂನಲ್ಲಿರುವ ಮಠಕ್ಕೆ ಭೇಟಿನೀಡಿದ ಶ್ರೀರಾಮಚಂದ್ರಾಪುರಮಠದ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು ಕಾಂಚೀ ಮಠದಿಂದ ವಿಶೇಷವಾಗಿ ಗೌರವಿಸಿ ಸ್ವಾಗತಿಸಿದರು. ಆನಂತರ ಪೂಜ್ಯ ಶ್ರೀಗಳು ಕಾಂಚೀ ಮೀನಾಕ್ಷಿ ದೇವಿಗೆ ವಿಶೇಷ ಫಲಪಂಚಾಂಮೃತಾಭಿಷೇಕವನ್ನು ನೆರವೇರಿಸಿ, ಕಂಚಿಯ ಬ್ರಹ್ಮೈಕ್ಯ ಪರಮಾಚಾರ್ಯರು ಹಾಗೂ ಬ್ರಹ್ಮೈಕ್ಯ ಜಯೇಂದ್ರ ಸರಸ್ವತಿಗಳ ವೃಂದಾವನವನ್ನು
Read Moreಕಾಂಚೀ – ರಾಮಚಂದ್ರಾಪುರಮಠ ; ಶಂಕರಪೀಠಗಳ ಸಮಾಗಮ
ಕಾಂಚೀ ಕಾಮಕೋಟಿ ಮಠದ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀಗೋಕರ್ಣ ಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಕಾಂಚೀಮಠದಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು. ಕಾಂಚೀ ಶಂಕರಾಚಾರ್ಯರ ವಿಶೇಷ ನಿಮಂತ್ರಣದ ಮೇರೆಗೆ ಕಾಂಚೀಪುರಂನಲ್ಲಿರುವ ಮಠಕ್ಕೆ ಭೇಟಿನೀಡಿದ ಶ್ರೀರಾಮಚಂದ್ರಾಪುರಮಠದ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು ಕಾಂಚೀ ಮಠದಿಂದ ವಿಶೇಷವಾಗಿ ಗೌರವಿಸಿ ಸ್ವಾಗತಿಸಿದರು. ಆನಂತರ ಪೂಜ್ಯ ಶ್ರೀಗಳು ಕಾಂಚೀ ಮೀನಾಕ್ಷಿ ದೇವಿಗೆ ವಿಶೇಷ ಫಲಪಂಚಾಂಮೃತಾಭಿಷೇಕವನ್ನು ನೆರವೇರಿಸಿ, ಕಂಚಿಯ ಬ್ರಹ್ಮೈಕ್ಯ ಪರಮಾಚಾರ್ಯರು ಹಾಗೂ ಬ್ರಹ್ಮೈಕ್ಯ ಜಯೇಂದ್ರ ಸರಸ್ವತಿಗಳ
Read Moreಗೋವಾದಲ್ಲಿ ಶ್ರೀಧರಪಾದುಕಾ ಪೂಜೆ
ಶ್ರೀ ಕ್ಷೇತ್ರ ವರದಹಳ್ಳಿಯ ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮಿಗಳ ದಿವ್ಯ ಪಾದುಕೆ ದಿನಾಂಕ13/03/2019ರಿಂದ17/03/2019_ರವರೆಗೆ ಗೋವಾದಲ್ಲಿ ಮೊಕ್ಕಾಂ ಮಾಡಿ ವಿವಿಧ ಭಕ್ತರ ಮನೆಗೆ ತೆರಳಿ ಪಾದಪೂಜಾ ಹಾಗೂ ಭಿಕ್ಷಾ ಸೇವೆಯನ್ನು ಸ್ವೀಕರಿಸಿ ಅನುಗ್ರಹ ಮಾಡಿತು. ಅಂತೆಯೇ ದಿನಾಂಕ 17/03/2019 ಭಾನುವಾರದ ಏಕಾದಶಿಯ ದಿನ ಪಾದಪೂಜೆ ಮಾಡುವ ಭಾಗ್ಯ ನಮ್ಮ ಗೋವಾ ಹವ್ಯಕ ವಲಯಕ್ಕೆ ಲಭಿಸಿದ್ದು ನಮ್ಮ ಪುಣ್ಯ. ಪಾದುಕಾ ಸವಾರಿಯು ಮೊಕ್ಕಾಂ ಇದ್ದ ಮಡಗಾಂವಿನ ಶ್ರೀಮತಿ ರೇಖಾ ಮತ್ತು ಶ್ರೀ ಎಂ.ಕೆ ಹೆಗಡೆಯವರ ಮನೆಯಲ್ಲಿ ಪಾದಪೂಜೆಯ
Read More