|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಯೋಗಪಟ್ಟಾಭಿಷೇಕ ಮಹೋತ್ಸವ ಮತ್ತು ಮಹಾಪಾದುಕಾಪೂಜೆ ; ಮುಳ್ಳೇರಿಯಾ ಮಂಡಲ ಚಿಂತನಸಭೆ

ಪರಮಪೂಜ್ಯ ಶ್ರೀಸಂಸ್ಥಾನದವರ ಸಂನ್ಯಾಸದೀಕ್ಷೆಯ 26ನೆಯ ವರ್ಷದ ಆಚರಣೆಯ ಅಂಗವಾಗಿ ಯೋಗಪಟ್ಟಾಭಿಷೇಕ ಮಹೋತ್ಸವ ಮತ್ತು ಮಹಾಪಾದುಕಾಪೂಜೆ‌ಗಳು ಉಪ್ಪಿನಂಗಡಿ ಮಂಡಲದ ಮಾಣಿಯ ರಾಮಚಂದ್ರಾಪುರಮಠ ಪೆರಾಜೆಯಲ್ಲಿ 9 ಏಪ್ರಿಲ್ 2019 ಮತ್ತು 11 ಏಪ್ರಿಲ್ 2019 ಎರಡು ದಿನಗಳಲ್ಲಿ ಸಂಪನ್ನಗೊಳ್ಳಲಿವೆ. ಈ ಬಗ್ಗೆ ಮುಳ್ಳೇರಿಯಾ ಹವ್ಯಕ ಮಂಡಲದ ನೇತೃತ್ವದಲ್ಲಿ ಸಮಾಲೋಚನಾ ಸಭೆಯು ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕದಲ್ಲಿ 10.03.2019 ರಂದು ಜರಗಿತು. ಧ್ವಜಾರೋಹಣ ಶಂಖನಾದ ಗುರುವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾ ಮಂಡಲ

Read More

ಸಂಭ್ರಮದ ಕಾನುಗೋಡು ವಲಯೋತ್ಸವ

ಕಾನುಗೋಡು : ಶ್ರೀರಾಮಚಂದ್ರಾಪುರ ಮಂಡಲ ವ್ಯಾಪ್ತಿಯಲ್ಲಿ ವೈಭವದಿಂದ ಕಾನುಗೋಡು ವಲಯೋತ್ಸವ ಜರುಗಿತು. ವಲಯೋತ್ಸವದ ಬೆಳಗಿನ ಅವಧಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾಮಂಡಲದ ರುಕ್ಮಾವತಿ ಅವರು ನೆರವೇರಿಸಿದರು. ಎಲ್ಲಾ ವಿಭಾಗದಿಂದ ೧೧೦ ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಂಪ್ರದಾಯದ ಹಾಡು, ಕನ್ಯಾವರ್ತನೆ ಕಾಯಿ ಅಲಂಕಾರ, ಹೂವಿನ ಮಾಲೆ ಸ್ಪರ್ಧೆಗಳು ನಡೆದವು. ಎಲ್ಲ ವಿಭಾಗದಿಂದ ಸ್ಪರ್ಧೆಯಲ್ಲಿ ಜನರಿಂದ ಉತ್ತಮ ಪ್ರತಿಸ್ಪಂದನೆ ಕಂಡು ಬಂತು.   ಸಂಜೆಯ ಕಾರ್ಯಕ್ರಮದಲ್ಲಿ ಮಹಾಮಂಡಲ ಮಾತೃಪ್ರಧಾನೆ ಕಲ್ಪನಾ ತಲವಾಟ ಅವರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮದ

Read More

ಲಕ್ಷಭಾಗಿನಿಯರಿಗೆ ಬಾಗಿನ : ಧನ್ಯರಾದ ಸುರಭಿಸೇವಿಕೆಯರು

  ಬೆಂಗಳೂರು: 22.02.2019ರಂದು ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಮಾತೆಯರ ಸಂಭ್ರಮ. ಶ್ರೀಮಠದ ಸಮವಸ್ತ್ರ ಧರಿಸಿದ 150ಕ್ಕೂ ಹೆಚ್ಚು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಅನಂತರ ಶ್ರೀಮಠದ ಒಳಿತಿಗಾಗಿ 4 ವರ್ಷಗಳಿಂದ ಚಾಚೂ ತಪ್ಪದೆ ಪ್ರತಿದಿನವೂ ನಡೆದ ಬನಶಂಕರಿ ದೀಪದ ಸೇವೆ ಮತ್ತು ಶ್ರೀಕರಾರ್ಚಿತ ರಾಮನ ಮುಂದೆ ಪ್ರತಿ ದಿನ ಸಂಜೆ ಪೂಜೆಯ ಸಮಯದಲ್ಲಿ ಬೆಳಗುವ ರಾಮತಾರಕದ ಅಕ್ಷರರೂಪದ ದೀಪದ ಸೇವೆ, ಇವೆರಡರಲ್ಲೂ ಭಾಗಿಗಳಾದ ಮಾತೆಯರನ್ನು ‘ದೀಪ ದೇವಿಯರು’ ಎಂದು ಹೆಸರಿಸಿ ಶ್ರೀಸಂಸ್ಥಾನದವರು ಹಾರೈಸಿದ ಕ್ಷಣ, ಎಲ್ಲ ಮಾತೆಯರಲ್ಲೂ ಧನ್ಯತೆಯ

Read More
ಗ್ರಾಮರಾಜ್ಯ – ಆರೋಗ್ಯಪೂರ್ಣ ಜೀವನಕ್ಕಾಗಿ ಪರಿಶುದ್ಧ ಆಹಾರ : ಈಗ ಮುಳ್ಳೇರಿಯಾದಲ್ಲಿ

  ಮುಳ್ಳೇರಿಯ: ಶ್ರೀಸಂಸ್ಥಾನದವರ ದಿವ್ಯ ಸಂಕಲ್ಪ ‘ವಿಷಮುಕ್ತ ಅಡುಗೆ ಮನೆ – ಅಮೃತ ಸತ್ತ್ವ ಆಹಾರ ‘. ಇದಕ್ಕೆಂದೇ ರೂಪಿಸಿದ ಶ್ರೀಮಠದ ಅಧೀನ ಸಂಸ್ಥೆ ಯೋಜನೆ ‘ಗ್ರಾಮರಾಜ್ಯ’ ಈಗಾಗಲೇ ಬೆಂಗಳೂರು ಮತ್ತು ಕರ್ನಾಟಕದ ಹಲವೆಡೆ ಮನೆಮಾತಾಗಿ ಹೆಸರು ಮಾಡಿದೆ. ಇದರ ಮೂಲಕ ಪರಿಶುದ್ದ, ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳು, ಮನೆಬಳಕೆ ವಸ್ತುಗಳು ಮತ್ತು ಗವ್ಯೋತ್ಪನ್ನಗಳು ಇದೀಗ ದಕ್ಷಿಣ ಕನ್ನಡದಲ್ಲಿಯೂ ಲಭ್ಯ. ಮುಳ್ಳೇರಿಯಾ ಪೇಟೆಯ ಹೃದಯ ಭಾಗದಲ್ಲಿ ಜಿ. ಕೆ. ಎಂಟರ್ಪ್ರೈಸಸ್ ಎಂಬ ಹೆಸರಿನಲ್ಲಿ ಈ

Read More
ಅಡಿಕೆ ವರ್ತಕ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀ ಆರ್. ಎಸ್. ಹೆಗಡೆ ಹರಗಿ ಆಯ್ಕೆ

  ಸಾಗರ: ದಿನಾಂಕ 23.02.2019ರಂದು ಸಾಗರದ ಬಾಪಟ್ ಸಭಾಂಗಣದಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಉತ್ತರಕನ್ನಡ ಜಿಲ್ಲೆಗಳ ಅಡಿಕೆ ವರ್ತಕ ಸಂಘಗಳ ಒಕ್ಕೂಟ ‘ಕರ್ನಾಟಕ ಅರೇಕಾ ಛೇಂಬರ್ ಆಪ್ ಕಾಮರ್ಸ್(ರಿ)’ನ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀ ಆರ್.ಎಸ್. ಹೆಗಡೆ ಹರಗಿಯವರು ಸರ್ವಾನುಮತದಿಂದ ನಿಯೋಜಿತರಾದರು. ವೇದಿಕೆಯಲ್ಲಿ ಅಧ್ಯಕ್ಷರಾದ ಶ್ರೀ ಎಂ.ಎನ್. ಹೆಗಡೆ ಸಾಗರ, ನಿಕಟಪೂರ್ವ ಅಧ್ಯಕ್ಷ ಶ್ರೀ ಹೆಚ್. ಓಂಕಾರಪ್ಪ ಶಿವಮೊಗ್ಗ, ಉಪಾಧ್ಯಕ್ಷ ಶ್ರೀ ಜಿ.ಎಂ. ಪ್ರಸನ್ನಕುಮಾರ್ ಭೀಮಸಮುದ್ರ,

Read More
ದೇಶ ಕಂಡ ಪ್ರತಿಭಾನ್ವಿತ ಹಿರಿಯ ಸಂಸ್ಕೃತ ವಿದ್ವಾಂಸ ಡಾ|| ಕೆ.ಎಸ್. ಕಣ್ಣನ್ ರವರಿಗೆ ಡಿ. ಲಿಟ್ (‘ವಾಚಸ್ಪತಿ’) ಪದವಿ ಪ್ರದಾನ

ದೇಶ ಕಂಡ ಪ್ರತಿಭಾನ್ವಿತ ಹಿರಿಯ ಸಂಸ್ಕೃತ ವಿದ್ವಾಂಸ ಡಾ|| ಕೆ.ಎಸ್ ಕಣ್ಣನ್ ರವರಿಗೆ ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠವು 9.2.2019 ರಂದು ನಡೆದ ತನ್ನ 22ನೇ ದೀಕ್ಷಾಂತ (convocation) ಸಮಾರಂಭದಲ್ಲಿ ಅವರ ಒಟ್ಟಿನ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ( Honoris causa ) ಡಿ. ಲಿಟ್ (‘ ವಾಚಸ್ಪತಿ ‘) ಪದವಿಯನ್ನು ಪ್ರದಾನ ಮಾಡಿದೆ. ಶ್ರೀಮಠದಿಂದ ‘ಶ್ರೀರಾಘವೇಂದ್ರಭಾರತೀ ಪಾಂಡಿತ್ಯ ಪುರಸ್ಕಾರ’ಕ್ಕೆ ಪಾತ್ರರಾದ ಡಾ ಕಣ್ಣನ್ ಅವರು ಧರ್ಮಭಾರತಿಯ ಲೇಖಕ ಬಳಗಕ್ಕೆ ಸೇರಿದವರು. ಅವರ ಹಲವು ಲೇಖನಗಳು ಧರ್ಮಭಾರತಿಯಲ್ಲಿ

Read More
ಹೊನ್ನಾವರ ಮಂಡಲ ಸಭೆಯಲ್ಲಿ ಹಲವು ವಿಚಾರಗಳ ಚರ್ಚೆ

ಹೊನ್ನಾವರ: ವಲಯದ ಜಿ ಜಿ ಭಟ್ ಚೌಕಿ ಅವರ ಮನೆಯಲ್ಲಿ ಭಾನುವಾರ ನಡೆದ ಹೊನ್ನಾವರ ಮಂಡಲ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಚರ್ಚಿಸಲ್ಪಟ್ಟ ಪ್ರಮುಖ ವಿಷಯಗಳು: 1. ಅಪ್ಸರ ಕೊಂಡ ಶಾಖಾಮಠದ ಕಾರ್ಯಕ್ರಮ ನಿಮಿತ್ತ ಕುಂಕುಮಾರ್ಚನೆ ಕಾಣಿಕೆ ಉಪಾಸನಾ ಖಾತೆಗೆ ಜಮಾ ಮಾಡುವುದು. 2. ಲಕ್ಷ್ಮೀಲಕ್ಷಣ ತಂತ್ರಾಂಶದ ವಿಚಾರ. 3. ಶಿವರಾತ್ರಿ ಮಹೋತ್ಸವ. 4.ವಾಲ್ಮೀಕೀ ರಾಮಾಯಣ. 5. ಜೀವನದಾನ. 6. ಹೈಗುಂದದಲ್ಲಿ ವರ್ಷಾವಧಿ ತಾಂತ್ರಿಕೋತ್ಸವ. 7. ಕಿತ್ರೆಯಲ್ಲಿ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವಗಳ ಸಭೆ ಹಾಗೂ

Read More
ನೂತನ ಕೋರ್ಸ್ ಆರಂಭ : ಕಲೆ – ಸಮರಕಲೆಗಳ ಕಲಿಕೆಗೆ ಅವಕಾಶ

ನಂತೂರು: ಮಂಗಳೂರಿನ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಠಾರದಲ್ಲಿ ಸಂಗೀತ, ಭರತನಾಟ್ಯ, ಕರಾಟೆ, ಯೋಗ ತರಗತಿಗಳು ಮತ್ತು ಪೈಥಾನ್ ಕಂಪ್ಯೂಟರ್ ಕೋರ್ಸ್‌ಗಳು ಆರಂಭವಾಗಲಿದೆ. ಫೆಬ್ರವರಿ 3ರಂದು ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಯೋಗಗುರು ಶ್ರೀ ಗೋಪಾಲಕೃಷ್ಣ ಭಟ್ ದೇಲಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ರವಿ ಅಲೆವೂರಾಯ ವರ್ಕಾಡಿ, ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ, ಶ್ರೀ ಸಂತೋಷ್ ಪಣಪಿಲ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.  

Read More
ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಆವರಣದಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐನ ಕಾರ್ಯಕ್ರಮ

ಬೆಂಗಳೂರು: ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ನವರ ವಲಯ 24ರ ಘಟಕ “ಜೆಐಸಿ ಹೊಸನಗರ ಡೈಮಂಡ್”.   ಜೆಸಿಐ ಪ್ರತಿವರ್ಷ ಲಾಟ್ಸ್ ಎನ್ನುವ ಹೆಸರಿನಲ್ಲಿ ವಿಭಿನ್ನವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಈ ಕಾರ್ಯಕ್ರಮದ ಮೂಲಕ ಎರಡು ದಿನಗಳ ಕಾಲ, ಆ ವರ್ಷದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ತರಬೇತಿ ಕೊಡಿಸುವ ಉದ್ದೇಶನವನ್ನು ಸಂಸ್ಥೆ ಹೊಂದಿದೆ.   ಈವರೆಗೆ ಈ ಕಾರ್ಯಕ್ರಮವನ್ನು ಸ್ಟಾರ್ ಹೋಟೆಲ್ ಗಳ ಹವಾನಿಯಂತ್ರಿತ ಹಾಲ್ಗಳಲ್ಲಿ ನಡೆಸಲಾಗುತ್ತಿತ್ತು. ಈ ಬಾರಿ ನಮ್ಮ ಘಟಕ ಈ ಕಾರ್ಯಕ್ರಮವನ್ನು ಹೊಸನಗರದ ಶ್ರೀರಾಮಚಂದ್ರಾಪುರ

Read More
ಶ್ರೀಕರಾರ್ಚಿತ ದೇವರಿಗೆ 81 ಕೆ.ಜಿ ಸಾವಯವ ಅಕ್ಕಿ ಸಮರ್ಪಣೆ

ಬೆಂಗಳೂರು: ಶ್ರೀಕರಾರ್ಚಿತ ದೇವರಿಗೆ ಭಕ್ತವೃಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಇಲ್ಲವೇ ನಂಬಿಕೊಂಡಂತೆ ಅನೇಕ ಸೇವೆಗಳನ್ನು ಮಾಡುತ್ತಾರೆ. ಅದೇ ರೀತಿ 81 ಕೆ.ಜಿ.ಯಷ್ಟು ಸಾವಯವ ಅಕ್ಕಿ, ಸೇವೆಯ ರೂಪದಲ್ಲಿ ಸಮರ್ಪಣೆಯಾಗಿದೆ. ಹೊಲ್ಲನಗದ್ದೆ ಶ್ರೀ ಸುದರ್ಶನ ರಾಮ ಹೆಗಡೆಯವರು ಶ್ರೀರಾಮ ದೇವರಿಗೆ ಸೇವೆಯ ರೂಪದಲ್ಲಿ 81 ಕೆ.ಜಿ.ಯಷ್ಟು ಸಾವಯವ ಅಕ್ಕಿ ನೀಡಿ ಶ್ರೀರಾಮ ದೇವರ ಪ್ರೀತಿಗೆ ಪಾತ್ರರಾಗಿದ್ದಾರೆ.

Read More
ಭಟ್ಕಳ ಹವ್ಯಕ ವಲಯದ ೪ ನೇ ಕಾರ್ಯಕ್ರಮ

ಭಟ್ಕಳ : ಗುರು ವಂದನೆಯೊಂದಿಗೆ ಭಟ್ಕಳ ಹವ್ಯಕ ವಲಯದ ೪ ನೇ ಕಾಯ೯ಕ್ರಮ ದಿನಾಂಕ ೨೭/೦೧/೨೦೧೯ ರಂದು ಶ್ರೀ ಮಹಾಬಲೇಶ್ವರ ವೆಂಕಣ್ಣ ಹೆಗಡೆಯವರ ಮನೆಯಲ್ಲಿ ನಡೆಯಿತು. ಬೆಳಿಗ್ಗೆ ೧೦ ಗಂಟೆಗೆ ಮಹಿಳೆಯರ ಸಾಮೂಹಿಕ ಕುಂಕುಮಾರ್ಚನೆಯೊಂದಿಗೆ ಪ್ರಾರಂಭವಾದ ಕಾಯ೯ಕ್ರಮದಲ್ಲಿ ಶ್ರೀಮತಿ ಗೀತಾ ಹೆಗಡೆಯವರು ” ಹವ್ಯಕ ಸಂಪ್ರದಾಯ ಉಳಿಸುವಿಕೆಯಲ್ಲಿ ಮಹಿಳೆಯರ ಪಾತ್ರ” ಈ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಮಕ್ಕಳಿಗೆ ಬಾಲ್ಯದಲ್ಲೇ ಉಡುಗೆ ತೊಡುಗೆ ಬಗ್ಗೆ, ಆಚರಣೆ ಅನುಕರಣೆ ಕುರಿತು ಅರಿವು ಮೂಡಿಸಬೇಕು ಅದರಿಂದ ನಮ್ಮ ಹವ್ಯಕ

Read More
ಈಶ್ವರಮಂಗಲದಲ್ಲಿ ಜನಮಂಗಲ ಸಭಾಭವನ : ಹವ್ಯಕ ಬ್ರಾಹ್ಮಣ ಮಹಾಸಭಾದ ಸಭಾಭವನ ಉದ್ಘಾಟನೆ

ಈಶ್ವರಮಂಗಲ: ಈಶ್ವರಮಂಗಲ ಪ್ರಾಂತ್ಯ ಹವ್ಯಕ ಬ್ರಾಹ್ಮಣ ಮಹಾಸಭಾ ನಿರ್ಮಿಸಿರುವ ‘ಜನಮಂಗಲ ಸಭಾಭವನ’ದ ಉದ್ಘಾಟನೆಯು ಶುಕ್ರವಾರ ನಡೆಯಿತು‌.   ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರೀ ಬೇರ್ಕಡವು ಸಭಾಭವನವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಕಾರ್ಯ ಸಮರ್ಪಕವಾಗಿ, ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕಾದರೆ ಇಚ್ಛಾಶಕ್ತಿ, ಪ್ರೇರಣಾಶಕ್ತಿ ಹಾಗೂ ಸಂಘಟನಾಶಕ್ತಿ ಅಗತ್ಯ. ಇಲ್ಲಿ ಆ ಶಕ್ತಿಗಳಿಂದ ಇಂತಹದೊಂದು ವ್ಯವಸ್ಥಿತವಾದ ಸಭಾಭವನ ಲೋಕಾರ್ಪಣೆಗೊಂಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ   ಈಶ್ವರಮಂಗಲ ಪ್ರಾಂತ್ಯದ ಹವ್ಯಕ ಮಹಾಸಭಾ ಅಧ್ಯಕ್ಷ ಶ್ರೀ ಶಿವಪ್ರಸಾದ್ ಪಟ್ಟೆ ಮಾತನಾಡಿ,

Read More
ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರ : ಪ್ರಯೋಜನ ಪಡೆದ ನೂರಾರು ಸಾರ್ವಜನಿಕರು

ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯ, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಎ. ಬಿ. ಶೆಟ್ಟಿ ದಂತ ವಿದ್ಯಾಲಯ, ಮುಜುಂಗಾವು ಶ್ರೀಭಾರತೀ ನೇತ್ರ ಚಿಕಿತ್ಸಾಲಯಗಳ ಸಹಯೋಗದಲ್ಲಿ ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ, ಜನವರಿ 20ರಂದು ವೈದ್ಯಕೀಯ, ದಂತ, ನೇತ್ರ ತಪಾಸಣೆ ಶಿಬಿರ ನಡೆಸಲಾಯಿತು. ಅದರೊಂದಿಗೆ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ವಿಭಾಗಗಳ ವತಿಯಿಂದ ರಕ್ತದಾನ ಶಿಬಿರವನ್ನೂ‌ ಆಯೋಜಿಸಲಾಗಿತ್ತು.   ಸುವರ್ಣ ಮಹೋತ್ಸವ ಆಚರಿಸುತ್ತಿರುವ ವಿಟ್ಲ ಬೆನಕ ಕ್ಲಿನಿಕ್‌ನ ಡಾ.

Read More
ನಡೆದಾಡುವ ದೇವರೆಂದೇ ನಾಡಿನಾದ್ಯಂತ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ ಸಂತ ಸಿದ್ದಗಂಗಾಮಠದ ಡಾ. ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಗಳು ಇಂದು ಲಿಂಗೈಕ್ಯರಾಗಿರುವುದು ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಲಿಂಗೈಕ್ಯರಾದ ಪರಮಪೂಜ್ಯರ ಆತ್ಮಕ್ಕೆ ಪರಮಶಾಂತಿ ಲಭಿಸಲಿ ಎಂದು ಶ್ರೀರಾಮಚಂದ್ರಾಪುರಮಠ ಹಾರೈಸುತ್ತದೆ.

ಸಿದ್ದಗಂಗಾ ಮಠದ ಪೂಜ್ಯ ಶ್ರೀಗಳು ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಜೊತೆಗೆ ಆತ್ಮೀಯವಾದ ಒಡನಾಟ ಹೊಂದಿದ್ದರು. ಶ್ರೀಮಠದ ಗೋಸಂರಕ್ಷಣೆಯ ಕಾರ್ಯಗಳಿಗೆ ಸದಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದ ಸಿದ್ದಗಂಗಾ ಶ್ರೀಗಳು, ರಾಮಚಂದ್ರಾಪುರಮಠದ ಗೋಸಂರಕ್ಷಣಾ ಕಾರ್ಯಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು.   · ಸಿದ್ದಗಂಗಾ ಶ್ರೀಗಳಿಗೆ ಗೋಕರ್ಣದ “ಸಾರ್ವಭೌಮ” ಪ್ರಶಸ್ತಿ:   ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಪ್ರತಿವರ್ಷ ಕೊಡಮಾಡುವ “ಸಾರ್ವಭೌಮ” ಪ್ರಶಸ್ತಿಯನ್ನು ಕಳೆದ ವರ್ಷ ಪೂಜ್ಯ ಶ್ರೀಶ್ರೀ ಶಿವಕುಮಾರ ಸ್ವಾಮಿಗಳಿಗೆ

Read More
ಸಮಾಜಕ್ಕೆ ಬೆಳಕಿತ್ತ ಜ್ಯೋತಿ ಮತ್ತೆ ಬೆಳಕಿನತ್ತ : ಶ್ರೀಶಿವಕುಮಾರ ಸ್ವಾಮೀಜಿ ಶಿವೈಕ್ಯ

ಬೆಂಗಳೂರು: ನಡೆದಾಡುವೆ ದೇವರೆಂದೇ ಪ್ರಸಿದ್ಧರಾದ, ತ್ರಿವಿಧ ದಾಸೋಹದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಬೆಳಕಾದ, ನೂರಾಹನ್ನೊಂದು ಸುದೀರ್ಘ ವರ್ಷಗಳ‌‌ ಕಾಲ ಬಾಳಿದ ಮಹಾನ್ ಚೇತನ ಶ್ರೀಸಿದ್ಧಗಂಗಾಮಠದ   ಶ್ರೀಶಿವಕುಮಾರ ಸ್ವಾಮೀಜಿ ಇಂದು ಶಿವೈಕ್ಯರಾದದ್ದು ರಾಜ್ಯವನ್ನು ಶೋಕದಲ್ಲಿ ಮುಳುಗಿಸಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದಲ್ಲಿ, ಅವರ ಸತ್ಕಾರ್ಯ-ಆದರ್ಶಗಳನ್ನು ನೆನೆದು ರಾಮತಾರಕ, ಶಿವಪಂಚಾಕ್ಷರಿ ಜಪದೊಂದಿಗೆ, ಪುಷ್ಪಾರ್ಚನೆ ಮಾಡಿ, ಮೌನಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು. ವಿದ್ವಾನ್ ಶ್ರೀ ಜಗದೀಶಶರ್ಮಾ, ಡಾ. ಶಾರದಾ ಜಯಗೋವಿಂದ, ಡಾ. ವೈ. ವಿ. ಕೃಷ್ಣಮೂರ್ತಿ ಮಾತನಾಡಿ ಶ್ರೀಶಿವಕುಮಾರ ಸ್ವಾಮಿಗಳ ಸಮಾಜಮುಖಿ

Read More
ಅವರು ಅವರ ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ ಬಗ್ಗೆ ಮಾತು ಬೇಡ : ಹರಿಕೃಷ್ಣ ಪುನರೂರು

  ಮಂಗಳೂರು, ಜ.14: ‘ಧರ್ಮ ಹಾಗೂ ಸಮಾಜವನ್ನು ರಕ್ಷಿಸಲು ರಾಘವೇಶ್ವರ ಸ್ವಾಮೀಜಿ ಪ್ರಕರಣದಲ್ಲಿ ನ್ಯಾಯಾಲಯವು ಶೀಘ್ರ ನಿರ್ಣಯ ಪ್ರಕಟಿಸಲಿ’ ಎಂದಿರುವ ಸ್ವರ್ಣವಲ್ಲಿ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಈ ದೇಶದಲ್ಲಿ ಧರ್ಮರಕ್ಷಣೆ ಸ್ವರ್ಣವಲ್ಲಿ ಹಾಗೂ ಯಡತೊರೆ ಸ್ವಾಮಿಗಳಿಂದ ಮಾತ್ರವೇ? ಅವರು ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ ಬಗ್ಗೆ ಮಾತು ಬೇಡ. ರಾಘವೇಶ್ವರ ಸ್ವಾಮಿಗಳ ಬಗ್ಗೆ ಮಾತನಾಡಲು ಇವರು ಯಾರು? ಈ ರೀತಿ ಸಮಾಜವನ್ನು ಎತ್ತಿಕಟ್ಟಿ ಹಿಂದೂ ಸಮಾಜವನ್ನು ಒಡೆಯುವ ಕಾರ್ಯ ಮಾಡಬಾರದು

Read More
ಷಡ್ಯಂತ್ರದ ಒಕ್ಕೂಟ

ಸಾವಿರಾರು ವರ್ಷಗಳಿಂದ ದಕ್ಷಿಣದ ಸರ್ವಶ್ರೇಷ್ಠ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಶಬರಿಮಲೆಯಲ್ಲಿ ಏನಾಗುತ್ತಿದೆ? ಇದಕ್ಕೆ ಉತ್ತರ ಪ್ರಾಯಶಃ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಹಾಗೆ ನೋಡಿದರೆ..ಶಬರಿಮಲೆ ಮಾತ್ರವಲ್ಲ, ಅದು ಅಮರನಾಥ ಯಾತ್ರೆಯಿರಬಹುದು, ಕುಂಭಮೇಳವಿರಬಹುದು, ಕಾವೇರಿಯ ತೀರ್ಥೋದ್ಭವವಿರಬಹುದು, ವರುಷಕ್ಕೊಮ್ಮೆ ನಡೆವ ನಮ್ಮ ನಾಡಿನ ಹೆಮ್ಮೆಯ ದಸರಾ ಮಹೋತ್ಸವವಿರಬಹುದು..ಹೀಗೇ ಸನಾತನದ ಧರ್ಮದ ಆಸ್ಥೆ, ಶ್ರದ್ಧೆಗಳು ಎಲ್ಲೆಲ್ಲಿ ಕೇಂದ್ರೀಕೃತವಾಗುತ್ತವೆಯೋ, ಅಲ್ಲೆಲ್ಲಾ ಒಂದಲ್ಲ ಒಂದು ರೀತಿಯ ಒಡಕು, ಅಶ್ರದ್ಧೆ, ಅನುಮಾನಗಳನ್ನು ಸೃಷ್ಟಿ ಮಾಡುವ ವ್ಯವಸ್ಥಿತವಾದ ಸಂಚು ಈ ಭರತ ಭೂಮಿಯಲ್ಲಿ ಬಹಳ ಕಾಲಗಳಿಂದ ನಡೆಯುತ್ತಲೇ ಇದೆ. ಅತಿ

Read More
ಸರಘ್ ಸಾಫ್ಟ್‌ ಟೆಕ್ನಾಲಜೀಸ್ ಗೆ ನ್ಯಾಷನಲ್ ಎಂಟರ್ಪ್ರೆನರ್ಶಿಪ್ ಅವಾರ್ಡ್

ದೆಹಲಿ: ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ಸಚಿವಾಲಯವು (Ministry of Skill Development and Entrepreneurship – MSDE) ವಿವಿಧ ವಿಭಾಗದ ಉದ್ಯಮಗಳಿಗೆ ಸಂಬಂಧಿಸಿ ನೀಡುವ ಪ್ರತಿಷ್ಠಿತ ‘ನ್ಯಾಷನಲ್ ಎಂಟರ್ಪ್ರೆನರ್ಶಿಪ್ ಅವಾರ್ಡ್’ನ ಈ 2018ರ ಸಾಲಿನ ವಿಜೇತರನ್ನು ಘೋಷಿಸಿದೆ. ಶ್ರೀಮಠದ ಶಿಷ್ಯರ ಸಂಸ್ಥೆಯಾದ Saragh Soft Technologies Pvt. Ltd ಈ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪ್ರಮೋದ್ ಕುಮಾರ್ ಎಂ. ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರದೀಪ್ ಶಂಕರ್

Read More
ಶ್ರೀಉದನೇಶ್ವರನಿಗೆ ರಜತ ಛತ್ರ

ಪೆರಡಾಲ: ಪೆರಡಾಲ ವಲಯದ ಈಳಂತೋಡಿ ಘಟಕದ ಪಂಜಿತಡ್ಕ ಶ್ರೀ. ಟಿ.ಕೆ. ನಾರಾಯಣ ಭಟ್ ಮತ್ತು ಮನೆಯವರು ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ದಿನಾಂಕ 16.12.2018, ಬುಧವಾರದಂದು ಧನು ಸಂಕ್ರಮಣ ಜಾತ್ರಾ ಸಂದರ್ಭದಲ್ಲಿ ಬೆಳ್ಳಿಯ ಸತ್ತಿಗೆ ತುದಿಯಲ್ಲಿ ಅಲಂಕರಿಸಲಿರುವ ರಜತ ಛತ್ರವನ್ನು ಸಮರ್ಪಿಸಿದ್ದಾರೆ.   ಶ್ರೀಗುರುಪೀಠಕ್ಕೆ ಬಂದ ಗೊಂದಲ ನಿವಾರಣೆ, ಮಠ ಸಂರಕ್ಷಣೆಗಾಗಿ ಮತ್ತು ಗುರುಪೀಠವು ಪ್ರಕಾಶಮಾನವಾಗಿ ಬೆಳಗಲು, ಸರ್ವರಿಗೂ ಒಳಿತನ್ನು ಅಪೇಕ್ಷಿಸಿ ವಿಶೇಷ ಸಂಕಲ್ಪ ಕೈಗೊಂಡು ಈ ಸೇವೆಯನ್ನು ಅವರು ಸಮರ್ಪಿಸಿದ್ದಾರೆ.   ಮೂಲಕ ಗುರುಸೇವೆಗೈದಿದ್ದಾರೆ.

Read More