|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸಂತೋಷವಾಗಿ ಸಾತ್ತ್ವಿಕವಾಗಿ ಸಕಾರಾತ್ಮಕವಾಗಿ ಅಮೃತಮಹೋತ್ಸವದಲ್ಲಿ ಭಾಗವಹಿಸೋಣ – ಶ್ರೀಸಂಸ್ಥಾನ

ಬೆಂಗಳೂರು : ಸಮಾಜಪುರುಷ ಮೈಕೊಡವಿ ಮೇಲೇಳುವ ಕಾಲ ಈ ಹವ್ಯಕ ವಿಶ್ವಸಮ್ಮೇಳನ. ಹನೂಮಂತನ ಹನೂಮತ್ತ್ವವೂ ಪ್ರಕಟವಾಗಿದ್ದು ಒಮ್ಮೆ ಮಾತ್ರ ಅದು ಸಾಗರೋಲ್ಲಂಘನದ ಸಮಯ. ಹಾಗೆಯೇ ಹವ್ಯಕ ಸಮಾಜವು ತನ್ನ ಮಹತ್ತನನ್ನು ಪ್ರಕಟಿಸುವ ಕಾಲ ಸನ್ನಿಹಿತವಾಗಿದೆ. ಅದು ಮೂರುದಿನಗಳ ಮಹೋನ್ನತ ಹಬ್ಬ. ಆ ಐತಿಹಾಸಿಕ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯೂ ಭಾಗಿಯೂ ಆಗಬೇಕು. ಮಹಾನಗರದ ಮೂಲೆಮೂಲೆಯಿಂದ ಗುರಿಕ್ಕಾರರು ಬಂದು ಸೇರಿದ್ದೀರಿ. ನಿವೆಲ್ಲರೂ ತಮ್ಮ ವ್ಯಾಪ್ತಿಯ ಮನೆಗಳಿಗೆ ನಿಮಂತ್ರಣವನ್ನು ನೀಡಿ ಎಲ್ಲ ಆಪ್ತರಿಗೂ ಪ್ರೀತಿಯ ಆಮಂತ್ರಣವನ್ನು ಕೊಡಿ. ಎಂದು ಶ್ರೀಪೀಠದ ನೇರಪ್ರತಿನಿಧಿಗಳಾದ

Read More

ವಿಶ್ವ ಹವ್ಯಕ ಸಮ್ಮೇಳನದ ಪ್ರಚಾರಾರ್ಥವಾಗಿ “ಜಾಗೃತಿ ನಡಿಗೆ”

ಡಿಸೆಂಬರ್ 28,29,30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳ ಪ್ರಚಾರಾರ್ಥವಾಗಿ ಮಲ್ಲೇಶ್ವರಂನಲ್ಲಿ ಜಾಗೃತಿ ನಡಿಗೆ (ವಾಕಾಥಾನ್) ನಡೆಯಿತು. ಖ್ಯಾತ ನಾಯಕನಟ ಅಜೇಯ್ ರಾವ್  ಜಾಗೃತಿಯನ್ನು ನಡಿಗೆಗೆ ಚಾಲನೆ ನೀಡಿ ಮಾತನಾಡಿ ; ಹವ್ಯಕ ಸಂಸ್ಕೃತಿ ವಿಶೇಷವಾಗಿದ್ದು, ಆ ಸಂಸ್ಕೃತಿಯ ಆಚಾರ ವಿಚಾರಗಳನ್ನು ಹಾಗೂ ವೈಶಿಷ್ಟ್ಯಗಳನ್ನು ಜಗತ್ತಿಗೆ ಪರಿಚಯಿಸಲು 28 ರಿಂದ 30 ವರೆಗೆ ವಿಶ್ವ ಹವ್ಯಕ ಸಮ್ಮೇಳನ ಆಯೋಜಿಸಿದ್ದಾರೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು

Read More

ವಿವಾಹದಲ್ಲಿ ಮಂಗಲ ವಿದ್ಯಾನಿಧಿ ಸಮರ್ಪಣೆ : ಅನುಕರಣಾರ್ಹ ಹೆಜ್ಜೆ ಇಟ್ಟ ಕುಕ್ಕಿಲ ದಂಪತಿ

  ಮಾಣಿ: ಬಾಲ್ಯ ಶಂಕರ ಭಟ್ ಮತ್ತು ಪರಮೇಶ್ವರಿ ದಂಪತಿಯ ಪುತ್ರಿ ಅರ್ಚನಾಳೊಂದಿಗೆ ತಮ್ಮ ಪುತ್ರ ಶ್ರೀನಿಧಿಯ ವಿವಾಹ ಮಹೋತ್ಸವವು ನಡೆದ ಸಂದರ್ಭದಲ್ಲಿ, ಭಾರತೀಯ ಸೈನ್ಯದ ನಿವೃತ್ತ ಸೈನಿಕರಾದ ಶ್ರೀ ಶ್ರೀಪ್ರಕಾಶ ಕುಕ್ಕಿಲ ಮತ್ತು ಶ್ರೀಮತಿ ಜಯಲಕ್ಷ್ಮಿ ಕುಕ್ಕಿಲ ದಂಪತಿಯು ಮಂಗಲ ವಿದ್ಯಾನಿಧಿಯನ್ನು ಶ್ರೀಭಾರತೀ ಗುರುಕುಲಂ ಹೊಸನಗರ, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ, ವಿಠಲ ವಿದ್ಯಾಸಂಘ ವಿಟ್ಲ, ಶ್ರೀ ಭಾರತೀ ಸಮೂಹ ಸಂಸ್ಥೆ ನಂತೂರು, ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿ ಮತ್ತು ಮಿತ್ತೂರು ಪುರೋಹಿತ ತಿಮ್ಮಯ್ಯ ಪ್ರತಿಷ್ಠಾನ ಈ ಆರು

Read More
ಶ್ರೀಸಂಸ್ಥಾನದವರಿಗೆ ‘ಸಮರಸ’ ಟ್ರಸ್ಟಿನ ಯೋಜನೆಯ ರೇಖಾಪ್ರತಿ ಸಮರ್ಪಣೆ

  ಬೆಂಗಳೂರು: ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕಮಂಡಲದ ಕೇಂದ್ರಬಿಂದುವಾಗಿ ಮುಳ್ಳೇರಿಯ – ಬದಿಯಡ್ಕ ರಾಜಮಾರ್ಗದ ಬದಿಯಲ್ಲಿ ದೇಲಂಪಾಡಿ ಸಮೀಪ ಶ್ರೀಮಠದ ಅಂಗಸಂಸ್ಥೆಯಾಗಿ ಸಮರಸ ನಿರ್ಮಾಣವಾಗಲಿದೆ.   ಶ್ರೀಮಠದ ಅಂಗಸಂಸ್ಥೆಯಾದ ‘ಸಮರಸ’ ಯೋಜನೆಯ ಭೂಮಿಯ ರೇಖಾಪ್ರತಿಯನ್ನು ಈ‌ ಭಾನುವಾರ, 16.12.2018ರಂದು ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರಿಗೆ ಸಮರ್ಪಿಸಲಾಯಿತು.   ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಶ್ರೀ ಹರಿಪ್ರಸಾದ್ ಪೆರಿಯಾಪ್ಪು, ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದು ಶ್ರೀಸಂಸ್ಥಾನದವರ ಆಶೀರ್ವಾದ ಪಡೆದುಕೊಂಡರು.   ಶ್ರೀಸಂಸ್ಥಾನದವರು ಯೋಜನೆಯ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ಕಾರ್ಯಸಿದ್ಧಿಯಾಗಲೆಂದು ಅನುಗ್ರಹಿಸಿ ಮಂತ್ರಾಕ್ಷತೆಯನ್ನಿತ್ತು

Read More
ಗವ್ಯೋತ್ವನ್ನ ಮಾರಾಟ ಮಳಿಗೆಯ ಶುಭಾರಂಭ

ಮಾಣಿ: ಪೆರಾಜೆಯ ಮಾಣಿಯಲ್ಲಿರುವ ಶ್ರೀರಾಮಚಂದ್ರಾಪುರಮಠದಲ್ಲಿ ಗವ್ಯೋತ್ವನ್ನ ಮಾರಾಟ ಮಳಿಗೆಯು ಶುಭಾರಂಭಗೊಂಡಿದೆ. ದಿನಾಂಕ 04-11-2018ರ ಮಂಗಳವಾರದಂದು ಆರಂಭವಾದ ಗವ್ಯೋತ್ವನ್ನ ಮಾರಾಟ ಮಳಿಗೆಯನ್ನು ಸೇವಾ ಸಮಿತಿಯ ಸದಸ್ಯರಾದ ಶ್ರೀ ಗೋವಿಂದ ಭಟ್ ಮುದ್ರಜೆಯವರು ಉದ್ಘಾಟಿಸಿದರು. ಸೇವಾ ಸಮಿತಿಯ ಕೋಶಾಧಿಕಾರಿ ಮೈಕ್ಕೆ ಶ್ರೀ ಗಣೇಶ್ ಭಟ್ ರವರು ಗವ್ಯೋತ್ಪನ್ನಗಳನ್ನು ಖರೀದಿಸುವ ಮೂಲಕ ಮೊದಲ ಗ್ರಾಹಕರಾದರು.   ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಹಾರಕರೆ ಶ್ರೀ ನಾರಾಯಣ ಭಟ್, ಕಾರ್ಯದರ್ಶಿಗಳಾದ ಬಂಗಾರಡ್ಕ ಶ್ರೀ ಜನಾರ್ದನ ಭಟ್, ಸದಸ್ಯರಾದ ಶ್ರೀ ಗಿರಿಶಂಕರ ಕೈಲಾರು,

Read More
ಶ್ರೀಮಠದ ನೂತನ ಕ್ಯಾಲೆಂಡರ್ ಲೋಕಾರ್ಪಣೆ

ಬೆಂಗಳೂರು: ಶ್ರೀಭಾರತೀ ಪ್ರಕಾಶನ ಸಿದ್ಧಪಡಿಸಿದ 2019ನೆಯ ವರ್ಷದ ಕ್ಯಾಲೆಂಡರ್ ಶ್ರೀಸಂಸ್ಥಾನದವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡಿತು.   ಈ ಸಂದರ್ಭದಲ್ಲಿ ಶ್ರೀಮಠದ ಸಮ್ಮುಖಸರ್ವಾಧಿಕಾರಿ ಶ್ರೀ ಟಿ. ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ. ಜಿ. ಭಟ್, ವಿದ್ವಾನ್ ಜಗದೀಶಶರ್ಮಾ, ಶ್ರೀ ಜಯಗೋವಿಂದ್ ಹಾಗೂ ಶ್ರೀಮತಿಅನುರಾಧಾ ಪಾರ್ವತಿ ಉಪಸ್ಥಿತರಿದ್ದರು.

Read More
ವಿಶ್ವ ಹವ್ಯಕ ಸಮ್ಮೇಳನ – ಅಮೃತಮಹೋತ್ಸವ ಕಾರ್ಯಕ್ರಮ – ಮಹಾಸಮಿತಿ ರಚನೆ

ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಅನಾವರಣಗೊಳಿಸುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಹವ್ಯಕ ಮಹಾಸಭೆಯಿಂದ ಆಯೋಜಿಸಲಾಗಿದ್ದು, ಡಿಸೆಂಬರ್ 28, 29 ಮತ್ತು 30 ರಂದು ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರಾಂಡ್ ಕ್ಯಾಸೆಲ್ ಸಭಾಂಗಣದಲ್ಲಿ ಸಂಪನ್ನವಾಗಲಿದೆ.   ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ ನಾಡಿಗೆ ವೈಶಿಷ್ಟ್ಯಪೂರ್ಣ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು

Read More
ಕಾಸರಗೋಡು ವಲಯದಲ್ಲಿ ಅಮೃತಪಥ-ಅರ್ಘ್ಯ ಕಾರ್ಯಕ್ರಮ

ಮುಳ್ಳೇರಿಯಾ: ಕಾಸರಗೋಡು ವಲಯದಲ್ಲಿ ಅಮೃತಪಥ, ಅರ್ಘ್ಯ ಕಾರ್ಯಕ್ರಮಗಳು ಗುಡ್ಡೆ ಮಹಾಲಿಂಗೇಶ್ವರ ದೇಗುಲದ ಪರಿಸರದಲ್ಲಿ ದಿನಾಂಕ 02.12.2018ರಂದು ನಡೆದವು. ದೇವಾಲಯದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಪರಿಕ್ರಮಪಥವನ್ನು ಶುಚಿಗೊಳಿಸಲಾಯಿತು. ವಲಯದ 15 ಮಂದಿ ಗುರುಭಕ್ತರು ಈ ಶ್ರಮದಾನದಲ್ಲಿ ಪಾಲ್ಗೊಂಡರು.  

Read More
ಕೊಡಗು ಅತಿವೃಷ್ಟಿ ಸಂತ್ರಸ್ತರಿಗೆ ಸಹಾಯಧನ ವಿತರಣೆ

ಮುಳ್ಳೇರಿಯ: ಗುತ್ತಿಗಾರು ವಲಯದಿಂದ ಕೊಡಗು ಅತಿವೃಷ್ಟಿ ಸಂತ್ರಸ್ತರಿಗಾಗಿ ಧನಸಂಗ್ರಹ ಮಾಡಲಾಗಿತ್ತು. ಹೀಗೆ ಸಂಗ್ರಹವಾದ ₹ 10,250/-ನ್ನು ಕೊಡಗು ಹವ್ಯಕ ವಲಯದ ಮಾಸಿಕ ಸಭೆಯಲ್ಲಿ, ಶ್ರೀಗುರುಗಳ ಆಶೀರ್ವಾದ ರೂಪದಲ್ಲಿ, ದಿ.ಗಣಪತಿ ಭಟ್ಟರ ಮಗ ಶ್ರೀ ಶಶಾಂಕ ಮತ್ತು ಶ್ರೀ ಕೊಲ್ಚರು ವೆಂಕಟ್ರಮಣ ಭಟ್ ಅವರಿಗೆ ಹಸ್ತಾಂತರಿಸಲಾಯಿತು.

Read More
ಅಮೃತಪಥಕ್ಕೆ ಚಾಲನೆ : ಸರ್ವಧಾರಿ-ಸೋಮೇಶ್ವರ-ವಿದ್ಯಾರಣ್ಯ ವಲಯಗಳಲ್ಲಿ ಪ್ಲಾಸ್ಟಿಕ್ ಮುಕ್ತ ಪಥ

ಬೆಂಗಳೂರು: ಗೋವುಗಳು ಸಂಚರಿಸುವ ಮಾರ್ಗ ಪ್ಲಾಸ್ಟಿಕ್ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದ ಶ್ರೀಸಂಸ್ಥಾನದವರು ಸಂಕಲ್ಪಿಸಿದ ‘ಅಮೃತಪಥ ‘ ಕಾರ್ಯಕ್ರಮಕ್ಕೆ ಸರ್ವಧಾರಿ, ಸೋಮೇಶ್ವರ, ವಿದ್ಯಾರಣ್ಯ ವಲಯಗಳಲ್ಲಿ ಚಾಲನೆ ನೀಡಲಾಯಿತು.   ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿ ಭಾನುವಾರ ಬೆಳಗ್ಗೆ 7ರಿಂದ 9ಗಂಟೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಕಸ ಎಸೆಯದಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಬಿಬಿಎಂಪಿ ಸದಸ್ಯ ಶ್ರೀ ಸೋಮಶೇಖರ್ ಕಾರ್ಯಕರ್ತರ ತಂಡದೊಂದಿಗೆ ಸಂವಾದ ನಡೆಸಿದರು.

Read More
ಮುಳ್ಳೆರಿಯಾ ಹವ್ಯಕ ಮಂಡಲ ಸಭೆ : ಗೋವಿಗಾಗಿ ಮೇವು ಯೋಜನೆಯ ಕುರಿತು ಮಾಹಿತಿ

ಗುತ್ತಿಗಾರು : ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಗುತ್ತಿಗಾರು ವಲಯದ ಅಧ್ಯಕ್ಷ ಅಡಿಕೆಹಿತ್ಲು ಶ್ರೀ ಸೀತಾರಾಮ ಭಟ್ ಅವರ ಮನೆಯಲ್ಲಿ 25.11.2018ರಂದು ಜರಗಿತು.   ಮಂಡಲಾಧ್ಯಕ್ಷ ಪ್ರೊ. ಟಿ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತಾವನೆಗೈದು, ಗತಸಭೆಯ ವರದಿಯನ್ನು ಮಂಡಿಸಿದರು. ಕೋಶಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್ ಗಬ್ಲಲಡ್ಕ ಇವರು ಲಕ್ಷ್ಮೀಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು. ವಲಯ ಪದಾಧಿಕಾರಿಗಳು ಮತ್ತು ವಿಭಾಗ ಪ್ರಧಾನರು ವರದಿ ನೀಡಿ

Read More
ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿ ಪ್ರಗತಿ ವಿದ್ಯಾಲಯದ ಪ್ರತಿಭೆಗಳ ಸಾಧನೆ

ಮೂರೂರು: ಅಂಕೋಲಾದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿ ಮೂರೂರು ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ‌ ಸಾಧನೆ ತೋರಿದ್ದಾರೆ.   ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ವಿಭಾಗದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುಮಾರ ಸೃಜನ್ ನಾಯ್ಕ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ.   ಪ್ರೌಢಶಾಲಾ ವಿಭಾಗದಲ್ಲಿ ಕುಮಾರಿ ಅಶ್ವಿನಿ ಭೈರವ್ ಹೆಗಡೆ ನೀಲ್ಕೋಡ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.   ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ಅಧ್ಯಾಪಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿ,ಸಿಬ್ಬಂದಿ ಶುಭಕೋರಿ

Read More
ಪಂಚಗವ್ಯ ಪ್ರಶಿಕ್ಷಣ-ಬಜಕೊಡ್ಲು

ಭಾರತೀಯ ಗೋಪರಿವಾರ-ಕರ್ನಾಟಕ ವತಿಯಿಂದ ಈ ಬಾರಿಯ ಪಂಚಗವ್ಯ ಪ್ರಶಿಕ್ಷಣವನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೇರ್ಲ ಸಮೀಪದ ಬಜಕೊಡ್ಲುವಿನಲ್ಲಿರುವ ಅಮೃತಧಾರ ಗೋಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜನವರಿ 18ರಿಂದ 20ರವರೆಗೆ ಮೂರುದಿನಗಳ ಕಾಲ ಪಂಚಗವ್ಯ ಪ್ರಶಿಕ್ಷಣ ನಡೆಯಲಿದೆ. ಜನವರಿ 16ರ ಬೆಳಗ್ಗೆ 9ಗಂಟೆಗೆ ಪ್ರಾರಂಭವಾಗಿ ಜನವರಿ 18ರ ಸಂಜೆ 5 ಘಂಟೆಗೆ ಮುಕ್ತಾಯಗೊಳ್ಳುತ್ತದೆ. ★ಪಂಚಗವ್ಯ ಪ್ರಶಿಕ್ಷಣ-ಬಜಕೊಡ್ಲು ಶಿಬಿರದಲ್ಲಿ… ◆ಗೋವುಗಳ ಪರಿಚಯ ◆ಗವ್ಯ ಉತ್ಪನ್ನಗಳ ಪರಿಚಯ ◆ಗವ್ಯ ಉತ್ಪನ್ನಗಳ ತಯಾರಿಕೆ (ಮಾಹಿತಿ ಮತ್ತು ಪ್ರಾಯೋಗಿಕ ತರಬೇತಿ) ◆ಗೋ ಆಧಾರಿತ ಕೃಷಿ ◆ಗೋ

Read More
ಪಂಚಗವ್ಯ ಪ್ರಶಿಕ್ಷಣ-ಗಂವ್ಹಾರ

ಭಾರತೀಯ ಗೋಪರಿವಾರ-ಕರ್ನಾಟಕ ವತಿಯಿಂದ ಈ ಬಾರಿಯ ಪಂಚಗವ್ಯ ಪ್ರಶಿಕ್ಷಣವನ್ನು ಕಲಬುರಗಿ(ಗುಲ್ಬರ್ಗ) ಜಿಲ್ಲೆಯ ಜೀವರ್ಗಿ ತಾಲೂಕಿನ ಗಂವ್ಹಾರದ ಶ್ರೀತ್ರಿವಿಕ್ರಮಾನಂದ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಜನವರಿ 4ರಿಂದ 6ರವರೆಗೆ ಮೂರುದಿನಗಳ ಕಾಲ ಪಂಚಗವ್ಯ ಪ್ರಶಿಕ್ಷಣ ನಡೆಯಲಿದೆ. ಜನವರಿ 4ರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ ಜನವರಿ 6ರ ಸಂಜೆ 5 ಘಂಟೆಗೆ ಮುಕ್ತಾಯಗೊಳ್ಳುತ್ತದೆ. ★ಪಂಚಗವ್ಯ ಪ್ರಶಿಕ್ಷಣ-ಗಂವ್ಹಾರ ಶಿಬಿರದಲ್ಲಿ… ◆ಗೋವುಗಳ ಪರಿಚಯ ◆ಗವ್ಯ ಉತ್ಪನ್ನಗಳ ಪರಿಚಯ ◆ಗವ್ಯ ಉತ್ಪನ್ನಗಳ ತಯಾರಿಕೆ (ಮಾಹಿತಿ ಮತ್ತು ಪ್ರಾಯೋಗಿಕ ತರಬೇತಿ) ◆ಗೋ ಆಧಾರಿತ ಕೃಷಿ ◆ಗೋ ಆಧಾರಿತ

Read More
ಮೂರೂರು ಪ್ರಗತಿ ವಿದ್ಯಾಲಯದಲ್ಲಿ ಕ್ರೀಡೋತ್ಸವ

ಮೂರೂರು: ಪ್ರಗತಿ ವಿದ್ಯಾಲಯದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ನವೆಂಬರ್ 27 ಮತ್ತು 28ರಂದು ಎರಡು ದಿನಗಳ ಕ್ರೀಡೋತ್ಸವ ಜರುಗಿತು.   27ರಂದು ಆಡಳಿತ ಮಂಡಳಿಯ ಸದಸ್ಯ ಶ್ರೀ ಟಿ. ಆರ್. ಜೋಷಿ ಕ್ರೀಡೋತ್ಸವವನ್ನು ಉದ್ಘಾಟಿಸಿ, ಮಾತನಾಡಿ, ಮಕ್ಕಳೆಲ್ಲರೂ ಸ್ಪರ್ಧಾತ್ಮಕ ಮನೋಭಾವ ಮತ್ತು ಸಂಭ್ರಮದಿಂದ ಭಾಗವಹಿಸಬೇಕು ಎಂದು ಹೇಳಿದರು.   ಕ್ರೀಡೋತ್ಸವದಲ್ಲಿ ಓಟ, ಚಕ್ರ ಎಸೆತ, ಗುಂಡೆಸೆತ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಕಬಡ್ಡಿಗಳನ್ನು ಆಯೋಜಿಸಲಾಗಿತ್ತು.   ಪ್ರಾಥಮಿಕ ಶಾಲೆ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ

Read More
ಪ್ರತಿಭಾ ಪುರಸ್ಕಾರ : ಜರ್ಮನಿಯಲ್ಲಿ ಪ್ರಬಂಧ ಮಂಡಿಸಿದ ಮೈತ್ರೇಯ ಹೆಗಡೆಗೆ ಶ್ರೀಸಂಸ್ಥಾನದವರಿಂದ ಆಶೀರ್ವಾದ

ಬೆಂಗಳೂರು: ಶ್ರೀಗಿರಿನಗರ ವಲಯದ ಕುಮಾರ ಮೈತ್ರೇಯ ಹೆಗಡೆ ಜರ್ಮನಿಯಲ್ಲಿ ನಡೆದ ಇಂಟರ್ ನ್ಯಾಷನಲ್ ಆಸ್ಟ್ರೋನಾಟಿಕಲ್ ಕಾಂಗ್ರೆಸ್ ನಲ್ಲಿ ಭಾಗವಹಿಸಿ ‘ಬಿಹೆವಿಯರ್ ಆಫ್ ಬ್ಯಾಕ್ಟೀರಿಯಾ ಇನ್ ಸ್ಪೇಸ್’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದಾರೆ. ಈ ಸಾಧನೆಗಾಗಿ ಶ್ರೀಸಂಸ್ಥಾನದವರರ ವಿಶೇಷ ಆಶೀರ್ವಾದಕ್ಕೆ ಕುಮಾರ ಮೈತ್ರೇಯ ಪಾತ್ರರಾದರು. ಕುಮಾರ ಮೈತ್ರೇಯ ಹೆಗಡೆ, ಹವ್ಯಕ ಮಾಸಪತ್ರಿಕೆ ಸಂಪಾದಕ ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಹಾಗೂ ಶ್ರೀಮತಿ ಕಮಲಿನಿ ಹೆಗಡೆ ಅಂತ್ರವಳ್ಳಿ ದಂಪತಿ ಪುತ್ರ.  

Read More
ಶ್ರೀರಾಮಚಂದ್ರಾಪುರಮಠದ ನೂತನ ಅಂಗಸಂಸ್ಥೆ ‘ಸಮರಸ’ದಲ್ಲಿ ಗಣಪತಿ ಹವನ ಸಂಪನ್ನ

ಮುಳ್ಳೇರಿಯಾ: ಮುಳ್ಳೇರಿಯ ಹವ್ಯಕ ಮಂಡಲ ಚಂದ್ರಗಿರಿ ವಲಯದಲ್ಲಿ ಮುಳ್ಳೇರಿಯದ ದೇಲಂಪಾಡಿ ಪರಿಸರದಲ್ಲಿ ನಿರ್ಮಾಣವಾಗಲಿರುವ ‘ಸಮರಸ’ ಭೂಮಿಯಲ್ಲಿ 24.11.2018ರಂದು ಗಣಪತಿ ಹವನ ಸಂಪನ್ನವಾಯಿತು.   ವಲಯ ವೈದಿಕ ಪ್ರಧಾನರಾದ ಶ್ರೀ ನರಸಿಂಹರಾಜ ಪಯ ಅವರು ಗಣಪತಿ ಹವನದ ನೇತೃತ್ವ ವಹಿಸಿದರು. ಸಮರಸ ಟ್ರಸ್ಟಿನ ಅಧ್ಯಕ್ಷರಾದ ಡಾ. ವಿ ವಿ. ರಮಣ ಧ್ವಜಾರೋಹಣ ನೆರವೇರಿಸಿದರು. ಆ ಬಳಿಕ ಭಜನ ರಾಮಾಯಣ ಪಠಣ ನಡೆಯಿತು.   ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮರಸ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ರಾಜಗೋಪಾಲ

Read More