|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಮೇ – 31 – ಪೌರ್ಣಿಮೆ – ಭಾನುವಾರ

ಶ್ರೀಸವಾರಿ ವಿವರ ಮೊಕ್ಕಾಂ – ಸೇವಾಸೌಧ ಅಶೋಕೆ 9.30am ಶ್ರೀಪೂಜೆ 6.58pm ಶ್ರೀಪೂಜೆ

Read More

ವಿದ್ಯಾರಂಭ – ಶುಭಾರಂಭ

ಮಂಗಳೂರು: ‘ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯುಕ್ತ ಶಿಕ್ಷಣ ನೀಡಿದಾಗ ಪರಿಪೂರ್ಣವಾಗುತ್ತದೆ. ಮಕ್ಕಳಿಗೆ ಶಿಸ್ತು, ಉತ್ತಮ ನಡವಳಿಕೆ, ಜೀವನ ಮೌಲ್ಯ- ಇವುಗಳ ಪಾಠ ಸಿಗಬೇಕು’ ಎಂದು ಮೂಡಬಿದರೆಯ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು. ಅವರು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಪಿ.ಯು.ಸಿ ವಿಭಾಗದ ‘ಎ ವೈಬ್ರೆಂಟ್ ಬಿಗಿನಿಂಗ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುಣೆಯ ‘ರಾಮ ಕೃಷಿ ರಸಾಯನ ಸಂಸ್ಥೆ’ಯ ಲೆಕ್ಕ ಮತ್ತು ಆರ್ಥಿಕ ಮುಖ್ಯಸ್ಥ ಅರವಿಂದ ರೈ ಅರ್ಪಿಣಿಗುತ್ತು ಅವರು ಮಾತನಾಡಿ

Read More

‘ಆಹಾ’ರೋತ್ಸವಕ್ಕೆ ಬನ್ನಿ

ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ಜೂ.6 ಮತ್ತು 7 ರಂದು ಹಲಸುಮೇಳ- ಆಹಾರೋತ್ಸವ ಆಯೋಜಿಸಲಾಗಿದೆ. ಆಹಾರೋತ್ಸವದಲ್ಲಿ ಹಲಸಿನ ವಿವಿಧ ಖಾದ್ಯಗಳನ್ನು ಆಸ್ವಾದಿಸಬಹುದು. ಹಲಸಷ್ಟೇ ಅಲ್ಲದೆ, ಮಾವಿನ ಹಣ್ಣಿನ ಪ್ರಿಯರಿಗಾಗಿ ಮಲ್ಲಿಕಾ – ಅಲ್ಫೋನ್ಸ್ – ದಶ್ಹೇರಿ ಸೇರಿದಂತೆ ವಿವಿಧ ತಳಿಯ ಉತ್ಕೃಷ್ಟ ಗುಣಮಟ್ಟದ ಮಾವಿನಹಣ್ಣುಗಳು ಲಭ್ಯವಿರಲಿವೆ. ಇವುಗಳ‌ ಜೊತೆಗೆ, ಗ್ರಾಹಕರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಮಲೆನಾಡಿನ ತಾಜಾ ತರಕಾರಿಗಳ ವಿಶೇಷ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಿಸಿಬಿಸಿ – ಬಗೆಬಗೆ ಆಹಾರ ಪ್ರಿಯರಿಗಾಗಿ ಮೇಳದ ಆವರಣದಲ್ಲೇ

Read More
ಮೇ – 29 – ತ್ರಯೋದಶಿ – ಶುಕ್ರವಾರ 

ಶ್ರೀಸವಾರಿ ವಿವರ   ಮೊಕ್ಕಾಂ – ಸೇವಾಸೌಧ ಆಶೋಕೆ   9.00am ಶ್ರೀಪೂಜೆ   6.57pm ಶ್ರೀಪೂಜೆ

Read More
ಸಹಸ್ರ-ಸುವಾಸಿನೀ-ಪೂಜೆ

  ಕುಮಟಾ: ‘ಸುವಾಸಿನೀ – ಸುವಾಸಿನ್ಯರ್ಚನಪ್ರೀತಾ’ ತಾಯಿ ಲಲಿತಾಂಬಿಕೆಯು ಸುವಾಸಿನಿಯ ರೂಪದಲ್ಲಿದ್ದು, ಸುವಾಸಿನಿಯರ ಪೂಜೆಯಿಂದ ಸಂಪ್ರೀತಳಾಗುವವಳು ಎಂದು ಲಲಿತಾ ಸಹಸ್ರನಾಮದಲ್ಲಿ ಹೇಳಲಾಗಿದೆ. ಅಂತಹ ಸಹಸ್ರಾಧಿಕ ಸುವಾಸಿನಿಯರಿಗೆ ಪೂಜೆ ಹಾಗೂ ಅನ್ನಸಂತರ್ಪಣೆ ಸಲ್ಲಿಸುವ ಪವಿತ್ರ ಕಾರ್ಯಕ್ರಮವು ಅಧಿಕಜ್ಯೇಷ್ಠ ಶುಕ್ಲ ತದಿಗೆಯಂದು (19-05-2026) ಹೊಳೆಗದ್ದೆಯ ಶ್ರೀಶಾಂತಿಕಾ ಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಸಂಪನ್ನಗೊಂಡಿತು. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಂಕಲ್ಪ ಹಾಗೂ ಮಾರ್ಗದರ್ಶನದಂತೆ, ಹವ್ಯಕ ಮಹಾಮಂಡಲದ ಸಂಯೋಜನೆಯಲ್ಲಿ ಶಾಸ್ತ್ರೋಕ್ತ ವಿಧಾನದಲ್ಲಿ ಈ ಮಹಾಪೂಜೆ-ಮಹಾಸಂತರ್ಪಣೆ ನಡೆಯಿತು. ಮಹಾಮಂಡಲದ ಮಾತೃಪ್ರಧಾನರ ಮುಖಾಂತರ ಶ್ರೀಸಂಸ್ಥಾನದವರ

Read More
ವಿದ್ಯಾದಾನ, ಗೋಸೇವೆಗಳಲ್ಲಿ ಧನ್ಯತೆ ಪಡೆದ ಮಾಸದಮಾತೆ – ಭಾಗ್ಯಶ್ರೀ ಪುತ್ತೂರು

  ​ಬದುಕಿನಲ್ಲಿ ವಿದ್ಯೆ ಮತ್ತು ಸಂಸ್ಕಾರ ಒಂದಾದಾಗ ಅಲ್ಲಿ ಸೇವಾ ಮನೋಭಾವ ಜಾಗೃತವಾಗುತ್ತದೆ. ಶ್ರೀಗುರುಗಳ ಮಹತ್ವಾಕಾಂಕ್ಷೆಯ ಯೋಜನೆಯಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ (ವಿವಿವಿ) ಪರಂಪರಾ ಗುರುಕುಲದಲ್ಲಿ ಸಂಸ್ಕೃತ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸುವ ಜೊತೆಗೆ ಮಾಸದಮಾತೆಯಾಗಿ ಗೋಮಾತೆಯ ಸೇವೆಯನ್ನು ಮಾಡುತ್ತಿರುವ ಭಾಗ್ಯಶ್ರೀ ಪುತ್ತೂರು ಇವರು ಇದಕ್ಕೆ ಮಾದರಿಯಾಗಿದ್ದಾರೆ.   ಉಪ್ಪಿನಂಗಡಿ ಮಂಡಲ ಪುತ್ತೂರು ವಲಯದ ಕೆದಿಲ ವಳಂಕುಮೇರಿ ಮೂಲದವರಾದ ಪ್ರಸ್ತುತ ಪುತ್ತೂರು ತೆಂಕಿಲ ನಿವಾಸಿಗಳಾಗಿರುವ ಲಲಿತಾ ಪರಮೇಶ್ವರ ಭಟ್ ದಂಪತಿಗಳ ಪುತ್ರಿ ಭಾಗ್ಯಶ್ರೀ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಮತ್ತು ಗೋವುಗಳ ಒಡನಾಟದಲ್ಲಿ

Read More
ಅಧಿಕಮಾಸ-ಪುರುಷೋತ್ತಮ ಮಾಸ

ಪ್ರಸ್ತುತ ಜ್ಯೇಷ್ಠ ಮಾಸವು ಅಧಿಕ ಮಾಸವಾಗಿರುವುದರಿಂದ ಅದರ ಮಹತ್ತ್ವದ ಕುರಿತು ಈ ಲೇಖನ.   ಅಧಿಕಮಾಸ: ಯಸ್ಮಿನ್ ಮಾಸೇ ನ ಸಂಕ್ರಾಂತಿಃ ಸಂಕ್ರಾಂತಿದ್ವಯಮೇವ ವಾ | ಮಲಮಾಸಃ ಸ ವಿಜ್ಞೇಯೋ ಮಾಸಃ ಸ್ಯಾತ್ತು ತ್ರಯೋದಶ || ಯಾವ ಚಾಂದ್ರಮಾಸದಲ್ಲಿ ಸಂಕ್ರಾಂತಿ ಇರುವುದಿಲ್ಲವೋ ಅಥವಾ ಎರಡು ಸಂಕ್ರಾಂತಿ ಇರುತ್ತದೆಯೋ ಆ ಮಾಸವು ಮಲಮಾಸವೆನಿಸಿಕೊಳ್ಳುವುದು. ಸಂಕ್ರಾಂತಿರಹಿತ ಚಾಂದ್ರಮಾನಮಾಸಕ್ಕೆ ಅಧಿಕಮಾಸವೆಂದೂ, ಎರಡು ಸಂಕ್ರಾಂತಿ ಇರುವ ಚಾಂದ್ರಮಾನಮಾಸವು ಕ್ಷಯಮಾಸವೆಂದೂ ಕರೆಯಲ್ಪಟ್ಟಿದೆ. ಆ ಸಂವತ್ಸರದಲ್ಲಿ 13 ಮಾಸಗಳಿರುತ್ತವೆ. (ಕ್ಷಯಮಾಸ ಬಂದ ವರ್ಷ ಎರಡು ಅಧಿಕಮಾಸಗಳು

Read More
ವಸಂತ ವೇದ ಶಿಬಿರದ ಸಮಾರೋಪ

  ಮಂಗಳೂರು: ‘ಮನುಷ್ಯರಾಗಿ ಹುಟ್ಟಿದ ಮೇಲೆ ಭಗವಂತನ ಅನುಗ್ರಹ ಪಡೆಯಬೇಕು. ಆಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ. ವೇದಾಧ್ಯಯನದ ಮೂಲಕ ವಟುಗಳು ಉತ್ತಮ ಜೀವನ ನಡೆಸುವಂತಾಗಬೇಕು’ ಎಂದು ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ಕೆ. ವಿ. ಶ್ರೀಧರ ಅಡಿಗ ಹೇಳಿದರು.   ಅವರು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಅಧಿಕ ಜ್ಯೇಷ್ಠ ಬಿದಿಗೆಯಂದು (17-05-2026) ವಿಷ್ಣುಗುಪ್ತ ವಿಶ್ವವಿದ್ಯಾಪೀಠ – ಭಾರತೀ ಎಜುಕೇಷನ್ ಟ್ರಸ್ಟ್ – ಶಂಕರಶ್ರೀ ವಸಂತ ವೇದಪಾಠಶಾಲೆ ಸಮಿತಿ ಮತ್ತು ಸಂಘ ಸಂಸ್ಥೆಗಳ

Read More
ಶನಿನಮನ – ತಾಪಶಮನ: ಶನಿಜಯಂತೀ ವಿಶೇಷ ಕಾರ್ಯಕ್ರಮ

ಪೆರ್ಲ: ಬಜಕ್ಕೂಡ್ಲಿನ ಅಮೃತಧಾರಾ ಗೋಶಾಲೆಯಲ್ಲಿ ವೈಶಾಖ ಅಮಾವಾಸ್ಯೆಯಂದು (16-05-2026) ‘ಶನಿನಮನ -ತಾಪಶಮನ’ ವಿಶೇಷ ಕಾರ್ಯಕ್ರಮ ಸಂಪನ್ನಗೊಂಡಿತು. ಅಮಾವಾಸ್ಯೆ-ಶನಿವಾರಗಳ ಸಂಗಮವಾದ ಈ ಶನಿಜಯಂತಿಯ ಕಾಲ ಅಪರೂಪದಲ್ಲಿ ಅಪರೂಪ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನ-ಆಶೀರ್ವಾದಗಳೊಂದಿಗೆ ಶನೈಶ್ಚರನ ಈ ಮಹೋಪಾಸನೆ ನೆರವೇರಿತು. ಗುರುವಂದನೆಯೊಂದಿಗೆ ಆರಂಭಗೊಂಡು ಸ್ವಸ್ತಿ ಪುಣ್ಯಾಹ, ಬಾಲಗಣಪತಿ ಹವನ ನಡೆದವು. ಬೆಳಗ್ಗೆ 6:06 ಗಂಟೆಯಿಂದ ಗಣಪತಿ ಅಥರ್ವಶಿರ್ಷ ಪಾರಾಯಣ ಪ್ರಾರಂಭಗೊಂಡಿತು. 24 ಗಂಟೆಗಳ ನಿರಂತರ ಪಾರಾಯಣ ಮರುದಿನದ ಬೆಳಗ್ಗೆ ಸೂರ್ಯೋದಯಕ್ಕೆ ಸಮಾಪನಗೊಂಡಿತು. ಗಣಪತಿ ಅಥರ್ವಶೀರ್ಷ ಹವನ, ಶನಿ

Read More
ದೀಪಾವಳಿ ಆಚರಣೆ ಪ್ರಾತ್ಯಕ್ಷಿಕೆ

ಮಂಗಳೂರು: ಕಳೆದ ಭಾನುವಾರದಂದು (10-05-2026) ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ ದೀಪಾವಳಿ ಹಬ್ಬದ ಸಂಭ್ರಮವಾಗಿತ್ತು. ಈಗಿನ್ನೂ ವೈಶಾಖದ ಶಾಖ, ಇದೇನಪ್ಪಾ ದೀಪಾವಳಿ- ಎಂಬ ಪ್ರಶ್ನೆಯೇ? ನಮ್ಮ ಭಾರತೀಯ ಸಂಸ್ಕೃತಿ-ಸಂಸ್ಕಾರಗಳಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ಬೇರೂರಿರುವ ಶ್ರೇಷ್ಠ ಜೀವನ ಮೌಲ್ಯಗಳನ್ನು ಹಾಗೂ ನೈಜ ಆನಂದವನ್ನು ಹಬ್ಬದ ಆಚರಣೆಯ ವಿವಿಧ ಚಟುವಟಿಕೆಗಳ ಮೂಲಕ ಶ್ರೀಶಂಕರ ವೇದಪಾಠಶಾಲೆಯ ವಟುಗಳಿಗೆ ಹಾಗೂ ಶ್ರೀಶಂಕರ ಪರಂಪರಾ ಶಿಬಿರದ ಹೆಣ್ಣುಮಕ್ಕಳಿಗೆ ತೋರಿಸಿ ಕಲಿಸುವುದು ಈ ದಿನದ ಉದ್ದೇಶವಾಗಿತ್ತು. ಮುಂಚಿನ ದಿನವೇ ತಿಳಿಸಿದಂತೆ ಶಿಬಿರಾರ್ಥಿಗಳೆಲ್ಲರೂ ತಮ್ಮ

Read More
ಪೂರಕ ಕಟ್ಟಡದ ಪ್ರವೇಶೋತ್ಸವ

  ಬೆಂಗಳೂರು: ವಿಜಯನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯದ ನೂತನ ಪೂರಕ ಕಟ್ಟಡದ ಪ್ರವೇಶೋತ್ಸವವು ವೈಶಾಖ ಕೃಷ್ಣ ಪಂಚಮೀ (07-05-2026) ಹಾಗೂ ಷಷ್ಠಿಯಂದು (08-05-2026) ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳವರ ದಿವ್ಯಾಶೀರ್ವಾದಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ‌ ಮೂಲಕ ನಡೆಯಿತು. ಪಂಚಮಿಯ ಸಂಜೆ ಗುರುವಂದನೆ, ಪುಣ್ಯಾಹ ಮುಂತಾದ ವಿಧಿಗಳು ಸಂಪನ್ನಗೊಂಡವು. ಷಷ್ಠಿಯಂದು ಗಣಪತಿ ಹವನ, ನೂತನ ಕಟ್ಟಡದ ಪ್ರವೇಶ ಹಾಗೂ ಶ್ರೀಸತ್ಯನಾರಾಯಣ ಪೂಜೆಗಳು ನಡೆದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಶ್ವಸ್ತ ಮಂಡಳಿಯ ಕಾರ್ಯದರ್ಶಿಗ ಜಿ. ಎಮ್. ಹೆಗಡೆ, ಸಂಸ್ಥೆಯ ಆಡಳಿತ ಮಂಡಳಿಯ

Read More
‘ ಬಾಳಿನ ಸಂಕಷ್ಟಕ್ಕೆ ಸಾಂತ್ವನದ ತಂಪು ಗುರು ಸೇವೆಯಿಂದ ದೊರಕಿದೆ ‘ ಪಾರ್ವತಿ ಎಸ್ ಹೆಗಡೆ ಶಿರಾಲಿ, ಹೊನ್ನಾವರ

  ​ ​ಜೀವನ ಸಾಗರದಲ್ಲಿ ಕಷ್ಟಗಳ ಅಲೆಗಳು ಅಪ್ಪಳಿಸಿದಾಗ ಮಾನವ ಅಸಹಾಯಕನಾಗುವುದು ಸಹಜ. ಆದರೆ ದಡ ಸೇರಿಸುವ ಗುರುವಿನ ಮೇಲೆ ಅಚಲವಾದ ನಂಬಿಕೆಯಿಟ್ಟವರಿಗೆ ಆ ಅಲೆಗಳೂ ಕೂಡ ಆಶೀರ್ವಾದದ ಮಂತ್ರಾಕ್ಷತೆಯಂತೆ ಕಷ್ಟದ ಪರಂಪರೆಯಿಂದ ಮುಕ್ತಿ ನೀಡುತ್ತದೆ. ಇಂತಹ ಶ್ರದ್ಧೆಯ ಬದುಕನ್ನು ನಡೆಸುತ್ತಿರುವವರು ಪಾರ್ವತಿ ಶ್ರೀಧರ ಹೆಗಡೆ ಶಿರಾಲಿ. ಮೂಲತಃ ಹೊನ್ನಾವರ ಮಂಡಲ ಭವತಾರಿಣಿ ವಲಯದ ಶಿರಾಲಿಯ ‘ಜಯ ಗುರುನಿಲಯದ’, ಪ್ರಸ್ತುತ ಬೆಂಗಳೂರಿನ ಸರ್ವಧಾರಿ ವಲಯ ನಿವಾಸಿಗಳಾಗಿರುವ ಶ್ರೀಧರ ಹೆಗಡೆಯವರ ಪತ್ನಿಯಾದ ಇವರು ಶ್ರೀಮಠದ ಅತ್ಯಂತ ನಿಷ್ಠಾವಂತ ಸೇವಕಿಯಾಗಿ

Read More
*”ಶನಿ ಕಾಡ್ತಾನೆ” ಅಂತ ಹೆದರ್ತೀರಾ?* *ಅವನು ಕಾಡಲ್ಲ… ಕಾಯ್ತಾನೆ!*

  ನೀವು ನೆಟ್ಟ ಗಿಡಕ್ಕೆ ನೀರು ಹಾಕಿ ಕಾಯುವಂತೆ, ಶನಿದೇವ ನಿಮ್ಮ ಕರ್ಮದ ಲೆಕ್ಕ ನೋಡಿ ಕಾಯ್ತಾನೆ. *ಒಳ್ಳೆಯದ್ದು ಮಾಡಿದ್ದರೆ ಒಳ್ಳೆಯದೇ ಆಗುತ್ತೆ.* *ಅವನೇ ನ್ಯಾಯದೇವತೆ. ಅವನೇ ಕರ್ಮದ ದೇವರು.* —   🗓️*16-05-2026 ಶನಿವಾರ – ಶನಿ ಜಯಂತಿ* 📍*ಅಮೃತಧಾರ ಗೋಶಾಲೆ, ಗೋಲೋಕ ಬಜಕೂಡ್ಲು* *ಇದು ಸಾಮಾನ್ಯ ದಿನ ಅಲ್ಲ. ಜ್ಯೇಷ್ಠ ಅಮಾವಾಸ್ಯೆ + ಶನಿವಾರ!* *ಶನಿದೇವ ಹುಟ್ಟಿದ ದಿನವೇ ಶನಿವಾರ ಬಂದಿರುವ ಮಹಾಯೋಗ.* *ಈ ಒಂದು ದಿನ ಅವನ ಪಾದ ಹಿಡಿದರೆ, 7½ ವರ್ಷದ

Read More
ಶ್ರೀರಾಮಚಂದ್ರಾಪುರ ಮಠದ ಐತಿಹಾಸಿಕ ಮಹಾಯಜ್ಞ: ಅಡಿಕೆ ಎಲೆಚುಕ್ಕಿ ರೋಗ ನಿವಾರಣೆಗೆ “ಆವಹಂತೀ ಹವನ” ಮತ್ತು “ಬಿಂದು ಜಯ” ಲೋಕಾರ್ಪಣೆ

  ಮಲೆನಾಡಿನ ಹಸಿರು ತೋಟಗಳನ್ನು ಶೃಂಗರಿಸುವ ಪ್ರಮುಖ ವಾಣಿಜ್ಯ ಬೆಳೆ ಎಂದರೆ ಅಡಿಕೆ. ಅಡಿಕೆ ಬೆಳೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಬೆನ್ನೆಲುಬಾಗಿದೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಧಿ-ವಿಧಾನಗಳಲ್ಲಿ ಅಡಿಕೆಗೆ ಅಗ್ರಸ್ಥಾನವಿದೆ. “ಅಡಿಕೆ ಇದ್ದರೆ ಅದೃಷ್ಟ, ಇಲ್ಲದಿದ್ದರೆ ಕಷ್ಟ” ಎಂಬ ಮಾತು ಕನ್ನಡಿಗರಿಗೆ ಚಿರಪರಿಚಿತ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪುನೀತ ವೃಕ್ಷವು ಭೀಕರ ಸಂಕಷ್ಟವನ್ನು ಎದುರಿಸುತ್ತಿದೆ.     ‘ಎಲೆಚುಕ್ಕಿ ರೋಗ’

Read More
ಸೋರುವ ಮನೆಗೆ ಸುರಿದ ಶ್ರೀಗುರುಕಾರುಣ್ಯದ ಮಳೆ

​ ​ಬದುಕು ಒಮ್ಮೊಮ್ಮೆ ಅಂಧಕಾರದ ಕೂಪದಲ್ಲಿರುವಾಗ, ದೈವಿಕ ಸಂಕಲ್ಪವೊಂದು ಯಾವ ರೀತಿ ಬೆಳಕಾಗಿ ಬಂದು ಬದುಕಿನ ಕತ್ತಲನ್ನು ದೂರ ಸರಿಸಬಲ್ಲದು ಎನ್ನುವುದಕ್ಕೆ ಮುಳ್ಳೇರಿಯ ಹವ್ಯಕ ಮಂಡಲ ಗುಂಪೆ ವಲಯದ ಶ್ರಾವಣಕೆರೆ ಘಟಕದ ಪುತ್ತಿಗೆ ಕೃಷ್ಣ ಹೆಬ್ಬಾರರ ಕುಟುಂಬವೇ ನಿದರ್ಶನ. ‘ ಅಸಾಧ್ಯವನ್ನು ಸಾಧ್ಯವಾಗಿಸುವ ಗುರುಕರುಣೆಯ ಅನುಗ್ರಹ ‘ ಯಾವ ರೀತಿ ಗುರುಭಕ್ತರಿಗೆ ಒಲಿದು ಬರುತ್ತದೆ ಎನ್ನುವುದನ್ನು ನಾವು ಇಲ್ಲಿ ಕಣ್ಣಾರೆ ಕಾಣಬಹುದು. ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದೊಂದಿಗೆ, ಶಿಷ್ಯಭಕ್ತರ ಸಹಕಾರದ ಫಲವಾಗಿ ಇಂದು ಹೆಬ್ಬಾರರ ಶಿಥಿಲಗೊಂಡಿದ್ದ

Read More
ಗುರುಸೇವೆಯ ಗೃಹಲಕ್ಷ್ಮಿ – ಉಷಾ ಮೋಹನ ಭಾಸ್ಕರ ಹೆಗಡೆ ಬೆಂಗಳೂರು

  ​ಒಂದು ಕುಟುಂಬದ ಸದಸ್ಯರೆಲ್ಲರೂ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ನಿರತರಾದಾಗ ಆ ಮನೆಯಲ್ಲಿ ಒಂದು ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಸೇವಾ ಪರಂಪರೆಯ ಕೇಂದ್ರ ಬಿಂದು ಯಾವಾಗಲೂ ಮನೆಯ ಗೃಹಲಕ್ಷ್ಮಿಯೇ ಆಗಿರುತ್ತಾಳೆ. ಶ್ರೀರಾಮಚಂದ್ರಾಪುರಮಠದ ಶಾಸನತಂತ್ರದ ಅಧ್ಯಕ್ಷರಾಗಿರುವ ಮೋಹನ ಭಾಸ್ಕರ ಹೆಗಡೆ ಅವರ ಪತ್ನಿಯಾಗಿರುವ ಉಷಾ ಹೆಗಡೆಯವರು ಈ ಸಾಲಿಗೆ ಸೇರುವ ಮಾಸದ ಮಾತೆಯರಲ್ಲೊಬ್ಬರು. ಬೆಂಗಳೂರು ದಕ್ಷಿಣ ಮಂಡಲ ಗಿರಿನಗರ ವಲಯದ ಶ್ರೀನಿವಾಸನಗರದಲ್ಲಿರುವ ​ಉಷಾ ಹೆಗಡೆಯವರು ಹೊಸನಗರದ ಸಮೀಪದ ವಡ್ಡಿನಬೈಲಿನ ಗೋಪಾಲಕೃಷ್ಣ ಎಚ್. ಮತ್ತು ಕುಸುಮಾಕ್ಷಿ ದಂಪತಿಗಳ ಪುತ್ರಿ.

Read More
ನಂತೂರಿನಲ್ಲಿ ಶಂಕರಪಂಚಮೀ

  ಮಂಗಳೂರು: ‘ಶ್ರೀಶಂಕರಾಚಾರ್ಯರು ಪ್ರಪಂಚಕ್ಕೇ ಶ್ರೇಷ್ಠರು. ಅವರ ಆದರ್ಶ, ತತ್ತ್ವಗಳು ಸಾರ್ವಕಾಲಿಕ. ಜಾತಿ, ಮತ, ಬೇಧವಿಲ್ಲದೇ ಸರ್ವರನ್ನೂ ಒಂದುಗೂಡಿಸಿದ ಮಹಾತ್ಮರು. ಅವರನ್ನು ನೆನಪಿಸಿಕೊಂಡು, ಅನುಸರಿಸುವುದು ಅತ್ಯಂತ ಅವಶ್ಯ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಹವ್ಯಕ ಮಂಡಲ ಸಹಯೋಗದೊಂದಿಗೆ ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ವೈಶಾಖ ಶುಕ್ಲ ಪಂಚಮಿಯಂದು (21-04-2026) ನಡೆದ ಶ್ರೀಶಂಕರಾಚಾರ್ಯ ಜಯಂತಿ ಸಮಾರಂಭವನ್ನು

Read More
3ನೇ ವರ್ಷದ ಶಂಕರಶ್ರೀ ವೇದಪಾಠಶಾಲೆ ಆರಂಭ

  ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಶಂಕರಶ್ರೀ ವೇದಪಾಠಶಾಲೆ ಸಮಿತಿ, ಭಾರತೀ ಎಜುಕೇಶನ್ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ 3ನೇ ವರ್ಷದ ಶಂಕರಶ್ರೀ ವೇದಪಾಠಶಾಲೆ ಮತ್ತು ಪರಂಪರಾ ಶಿಬಿರವು ವೈಶಾಖ ಶುದ್ಧ ಬಿದಿಗೆಯಂದು (19-04-2026) ಆರಂಭಗೊಂಡಿತು.   ಮಕ್ಕಳ ಚಿಕಿತ್ಸೆ ತಜ್ಞರಾದ ಡಾ. ಸದಾಶಿವ ರಾವ್ ಉದ್ಘಾಟಿಸಿ ವೇದದ ಮಹತ್ತ್ವ, ಪರಂಪರೆಯ ಉಳಿಕೆ, ಕರ್ಮಪ್ರಧಾನ ಜೀವನದ ಆವಶ್ಯಕತೆ, ಫಲಾಪೇಕ್ಷೆ ಇಲ್ಲದೆ ಪರಂಪರೆಯನ್ನು ರಕ್ಷಿಸಬೇಕಾದುದರ ಕುರಿತು ಮಾತನಾಡಿದರು.   ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಮುರಲಿಮೋಹನ‌

Read More
ಹವಿ ಸವಿ ತೋರಣ – ೨೭ ಹಾಸಿಗೆ ಇಪ್ಪಷ್ಟೇ ಕಾಲು ನೀಡುವನಾ…

‘ಹಾಸಿಗೆ ಇಪ್ಪಷ್ಟೇ ಕಾಲು ನೀಡೆಕು ‘ ಹೇಳುವ ಗಾದೆ ನಮಗೆಲ್ಲ ಗೊಂತಿದ್ದು. ನಮ್ಮ ಮನೆಗಳ ಒಂದು ಶಿಸ್ತಿನ ಬದುಕಿನ ಸುರುವಾಣ ಮೆಟ್ಲು ಅದು. ಮದಲಿಂಗೆ ಮನೆಯ ಹಿರಿಯರು ಮಾತಾಡುಗ ಅದೆಷ್ಟು ಗಾದೆಗೊ, ನುಡಿಕಟ್ಟುಗಳ ಹೇಳುಗು. ಈಗ ಹಾಂಗೆ ಮಾತಾಡುವವು ಕಮ್ಮಿಯಾಗಿ ನವಗೆ ಜೀವನದ ಪಾಠಂಗಳ ಹೇಳಿ ಕೊಡುವವು ಕಮ್ಮಿ ಆಯಿದವು ನಾವೀಗ ಹಾಸಿಗೆ ಇಪ್ಪಷ್ಟೇ ಕಾಲು ನೀಡೆಕು ‘ ಹೇಳುವ ವಿಶಯಲ್ಲಿ ಮಾತಾಡುವ°. ಮದಲಿಂಗೆಲ್ಲ ನಮ್ಮ ಸಮಾಜಲ್ಲಿ ತುಂಬಾ ಸರಳವಾಗಿ ಬದ್ಕುವವೇ ಇದ್ದದು. ನವಗೆ ಎಷ್ಟು ಸಂಪಾದನೆ

Read More
ಸ್ತೋತ್ರಾನುಗ್ರಹದ ಭಕ್ತಿರಸ ವೈಭವ – ಶ್ರೀಶಂಕರಪಂಚಮೀ ಉತ್ಸವ

​ಧರ್ಮವೆಂಬ ಸೂರ್ಯನಿಗೆ ಅಧರ್ಮದ ಕಾರ್ಮೋಡಗಳು ಕವಿದು, ಮೈಮನಗಳೆಲ್ಲವೂ ಮಸುಕಾಗಿದ್ದ ಕಾಲವೊಂದಿತ್ತು. ಅದು ಕ್ರಿ.ಶ. ಎಂಟನೇ ಶತಮಾನದ ಪ್ರಥಮ ದಶಕದ ಸಮಯ. ವೇದೋಕ್ತವಾದ ಆಚರಣೆಗಳು ಕೇವಲ ಹೆಸರಿಗಷ್ಟೇ ಉಳಿದು, ಸಮಾಜವು ತನ್ನ ಮೂಲ ಸಂಸ್ಕಾರಗಳಿಂದ ವಿಮುಖವಾಗಿ ವೈದಿಕ ಮಾರ್ಗದಿಂದ ದೂರ ಸರಿಯುತ್ತಿತ್ತು. ಇಂತಹ ಕತ್ತಲೆಯ ಸಮಯದಲ್ಲಿ, ಧರ್ಮದ ಪುನರುತ್ಥಾನಕ್ಕಾಗಿ ಸಹಜವಾದ ಜೀವಂತ ಹಂಬಲವೊಂದು ಸಮಾಜದಲ್ಲಿ ಮೊಳಕೆಯೊಡೆಯಿತು. “ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಎಂಬ ಪರಮಾತ್ಮನ ಸಂಕಲ್ಪ ಮತ್ತೊಮ್ಮೆ ಕಾರ್ಯರೂಪಕ್ಕೆ ಬರಲು ವೇದಿಕೆ ಸಿದ್ಧವಾಗಿತ್ತು. ಭಾರತದ ಬಾಂದಳದಲ್ಲಿ ದಿವ್ಯ ಪ್ರಭೆಯೊಂದರ

Read More