|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಉಪ್ಪಿನಪಟ್ಟಣ-ಸಾಗರಗಳಲ್ಲಿ ಅಮೃತಪಥ

ಶ್ರೀಸಂಸ್ಥಾನದವರು ನಿರ್ದೇಶಿಸಿದಂತೆ ಗೋವುಗಳ ಪಥವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಅಮೃತಪಥ ಕಾರ್ಯಕ್ರಮ ಸಾಗರ ಮತ್ತು ಕುಮಟ ಮಂಡಲಗಳಲ್ಲಿ ನಡೆಯಿತು.   ಸಾಗರ ನಗರದ ಪೂರ್ವ ಮತ್ತು ಪಶ್ಚಿಮ ವಲಯಗಳ ನೇತೃತ್ವದಲ್ಲಿ ಶನಿವಾರ ನಗರದ ಅಗ್ರಹಾರದಲ್ಲಿ ಹಾಗೂ ಕುಮಟ ಮಂಡಲದ ಉಪ್ಪಿನಪಟ್ಟಣ ವಲಯದಲ್ಲಿ ಅಮೃತಪಥ ಕಾರ್ಯಕ್ರಮ ನಡೆಯಿತು. ಹಲವು ಮಂದಿ ಶಿಷ್ಯಭಕ್ತರು ಭಾಗವಹಿಸಿದ್ದರು.

Read More

ಮೂರೂರು ಶಾಲೆ ವಿದ್ಯಾರ್ಥಿಯ ಸಾಧನೆ : ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಜ್ಯಕ್ಕೆ‌ ಪ್ರಥಮ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಕುಮಟಾ : ಮೂರೂರಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಕುಮಾರ ಅಭಿ ಆರ್. ಅಡಿಗುಂಡಿ ರಾಜ್ಯಮಟ್ಟದ ಚಕ್ರ ಎಸೆತ (ಡಿಸ್ಕಸ್ ಥ್ರೋ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.   ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನ.21, 22ರಂದು ನಡೆದ ರಾಜ್ಯಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕು. ಅಭಿ 39.75 ಮೀಟರ್ ದೂರ ಚಕ್ರ ಎಸೆಯುವುದರೊಂದಿಗೆ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾನೆ.

Read More

ಈ ಸಲದ ಧರ್ಮಭಾರತಿಯಲ್ಲಿ…

ಅಯ್ಯಪ್ಪ, ಅಯ್ಯನಾರ್, ಅಯ್ಯನ್, ಬೇಟೆ ಅಯ್ಯಪ್ಪ ಎಂದೆಲ್ಲ ಗುರುತಿಸಿಕೊಳ್ಳುವ; ವೈದಿಕಕ್ಕೂ ಜನಪದಕ್ಕೂ ಸಲ್ಲುವ ದೈವ ಶಾಸ್ತಾರನ ಕುರಿತು ಡಾ. ಮನೋರಮಾ ಬಿ. ಎನ್. ಅವರ ಮಾಹಿತಿಪೂರ್ಣ ಬರಹ.   ಆಧುನಿಕ ಕಾಲದಲ್ಲಿ, ಮಹಿಳೆಯರ ಆರೋಗ್ಯ ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿರುವ PCOS ಬಗ್ಗೆ ಡಾ.ಸುವರ್ಣಿನೀ ಕೊಣಲೆಯವರ ಲೇಖನ.   ಪ್ರಜೆ ಹೊರಟ. ಮಾರಾಪು ಕಟ್ಟಿಕೊಂಡು. ರಾಜನನ್ನು ಕಾಣಲು. ಗೊತ್ತಿಲ್ಲದ ದಾರಿಯಲ್ಲಿ ಹದಿಮೂರು ದಿನದ ಪಯಣ. ನಡೆದೇ ನಡೆದನವ‌. ಮುಂದೇನಾಯಿತು? ಶ್ರೀಗೋಪಾಲಕೃಷ್ಣ ಕುಂಟಿನಿಯವರ ಕಥೆಯಲ್ಲಿ. ದಿವ್ಯಸನ್ನಿಧಿಯಲ್ಲಿ ಶ್ರೀಸಂಸ್ಥಾನದವರ ಪ್ರವಚನಾಮೃತ – ನಲಿವಿನ

Read More
ಮಾತು~ಮುತ್ತು : ದೂರದ ಬೆಟ್ಟ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅದೊಂದು ಪುಟ್ಟ ಬೆಟ್ಟ. ಬೆಟ್ಟದ ಮೇಲೊಂದು ಪುಟ್ಟ ಮನೆ. ಅದರಲ್ಲಿ ಪುಟ್ಟ ಪುಟ್ಟ ಕಿಟಕಿ ಬಾಗಿಲುಗಳು. ಆ ಮನೆಯಲ್ಲಿ ಒಬ್ಬ ಪುಟ್ಟ ಹುಡುಗಿ. ಅವಳು ಪ್ರತಿದಿನ ಕಿಟಕಿಯ ಹತ್ತಿರನಿಂತು ಹೊರಗಿನ ಪ್ರಪಂಚವನ್ನು ನೋಡುತ್ತಿರುತ್ತಾಳೆ. ಅವಳು ನೋಡುತ್ತಿರುವಾಗ ಎದುರು ಬೆಟ್ಟದಲ್ಲೂ ಒಂದು ಪುಟ್ಟ ಮನೆ ಗೋಚರಿಸುತ್ತದೆ. ಅದು ಚಿನ್ನದಂತೆ ಹೊಳೆಯುತ್ತಿರುವಂತೆ ಭಾಸವಾಗುತ್ತದೆ. ಈ ಹುಡುಗಿಗೆ ಅಲ್ಲಿಗೆ ಹೋಗಬೇಕೆಂದು ತುಂಬ ಆಸೆ ಆಗುತ್ತದೆ. ಅಲ್ಲದೆ ಅಲ್ಲಿಯೇ ವಾಸಿಸಬೇಕೆಂಬ ತುಡಿತ ಉಂಟಾಗುತ್ತದೆ.   ಕೆಲವು ವರ್ಷಗಳ ಅನಂತರ ಅವಳಿಗೆ ತಂದೆ ಒಂದು

Read More
ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ತ್ರಿಪುರಾಖ್ಯ ದೀಪೋತ್ಸವ : ಭಕ್ತರ ಸಂಭ್ರಮ

ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ವಿಲಂಬ ಸಂವತ್ಸರದ ತ್ರಿಪುರಾಖ್ಯ ದೀಪೋತ್ಸವವು ದಿನಾಂಕ 22.11.2018ರ ಗುರುವಾರ ವಿಜೃಂಭಣೆಯಿಂದ ಜರುಗಿತು.   ಲಕ್ಷಬಿಲ್ವಾರ್ಚನೆ , ಭೂತಬಲಿ, ವನಭೋಜನ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.   ದೇವಾಲಯದಲ್ಲಿ ಲಕ್ಷದೀಪೋತ್ಸವ, ಕೋಟಿತೀರ್ಥದಲ್ಲಿ ತೆಪ್ಪೋತ್ಸವ, ಕೊನೆಯಲ್ಲಿ ರಾತ್ರಿ ರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ವೇದಮೂರ್ತಿ ಶ್ರೀ ಕೃಷ್ಣ ಭಟ್ ಷಡಕ್ಷರಿಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ದೇವಾಲಯದ ಹೊರ ಆವಾರ, ನಂದಿಮಂಟಪ , ಗರ್ಭಗುಡಿಯಲ್ಲಿ ವಿಶೇಷ

Read More
ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಾರ್ತಿಕ ಪೌರ್ಣಿಮೆ ಸಂಭ್ರಮ : ಕಣ್ಮನಸೆಳೆದ ಹೂವಿನ ಅಲಂಕಾರ

ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಾರ್ತಿಕ ಪೌರ್ಣಿಮೆ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಪೂಜೆ, ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ನೆರವೇರಿತು. ದೇವಾಲಯದ ಒಳ-ಹೊರ ಪ್ರಾಕಾರದ ಸುತ್ತ ದೀಪಗಳಿಂದ ಪ್ರಜ್ವಲಿಸಿ, ಶ್ರೀಮಹಾಬಲೇಶ್ವರ ದೇವರ ಉತ್ಸವವು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ನಡೆಸಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಸಲಾಯಿತು.   ಮಧ್ಯಾಹ್ನದಿಂದಲೇ ದೇವಾಲಯದಲ್ಲಿ ಮಹಾಪೂಜೆ, ಬಲಿ ನಡೆಸಿ, ದೇವರ ಉತ್ಸವವು ವನ ಭೋಜನಕ್ಕಾಗಿ ಸಮೀಪದ ಭೀಮಕುಂಡ ಎಂಬ ಸುಂದರ ಗುಡ್ಡ ಪ್ರದೇಶಕ್ಕೆ ತೆರಳಲಾಯಿತು. ಅಲ್ಲಿ

Read More
ವರ್ಕಾಡಿಯ ಶ್ರೀನಾರಾಯಣಗುರು ಮಂದಿರದಲ್ಲಿ ಯಶಸ್ವಿಯಾದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ

ವರ್ಕಾಡಿ: ‘ಪರಮಪೂಜ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿರುವ ಮುಜುಂಗಾವು ಶ್ರೀಭಾರತೀ ನೇತ್ರ ಚಿಕಿತ್ಸಾಲಯವು ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ನೇತ್ರಚಿಕಿತ್ಸಾ ಶಿಬಿರಗಳನ್ನು ನಡೆಸುವ ಮೂಲಕ ಅನೇಕ ಜನರ ದೃಷ್ಟಿದೋಷ ನಿವಾರಣೆಗೆ ಸಹಕಾರಿಯಾಗಿದೆ. ನಾವೂ ಕೂಡ ಶ್ರೀಭಾರತೀ ನೇತ್ರ ಚಿಕಿತ್ಸಾಲಯದ ಜೊತೆ ಸೇರಿ ಈಗಾಗಲೇ ಎರಡು ಶಿಬಿರಗಳನ್ನು ನಡೆಸಿದ್ದೇವೆ. ಇನ್ನು ಮುಂದೆಯೂ ಇಂತಹ ನೂರಾರು ಶಿಬಿರಗಳನ್ನು ನಡೆಸುವ ಮೂಲಕ ಜನರಿಗೆ ಇನ್ನಷ್ಟು ಸೇವೆ ಮಾಡುವ ಉದ್ದೇಶವನ್ನು ಹೊಂದಿಕೊಂಡಿದ್ದೇವೆ’ ಎಂದು ವರ್ಕಾಡಿ ಶ್ರೀನಾರಾಯಣಗುರು ಮಂದಿರದ ಅಧ್ಯಕ್ಷರೂ, ಯಕ್ಷಗಾನ ಕಲಾವಿದರೂ ಆಗಿರುವ ಶ್ರೀ ನಾರಾಯಣ

Read More
ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಮಾತಾಪಿತೃ ಪೂಜೆ : ಹೆತ್ತವರ ಸೇವೆಗೆ ಪ್ರತಿಜ್ಞಾಬದ್ಧರಾದ ಮಕ್ಕಳು – ಭಾವುಕರಾದ ಹೆತ್ತವರು

ಬದಿಯಡ್ಕ: ನವೆಂಬರ್ 23ರಂದು ಇಲ್ಲಿನ ಶ್ರೀಭಾರತೀ ವಿದ್ಯಾಪೀಠ ಶಾಲೆಯಲ್ಲಿ ಮಾತಾಪಿತೃ ಪೂಜೆಯು ಭಕ್ತಿ-ಶ್ರದ್ಧೆಗಳಿಂದ ನೆರವೇರಿತು.   ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪೂಜಾ ವಿಧಾನಗಳ ಬಗ್ಗೆ ತಿಳಿಸಿ ಮಕ್ಕಳಿಂದ ಪಾಲಕರ ಪಾದ ಪೂಜೆ ನೆರವೇರಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಪ್ರತಿಜ್ಞಾವಿಧಿಯಲ್ಲಿ ಮಕ್ಕಳು ‘ತಂದೆ-ತಾಯಿ ನಮ್ಮ‌ ಕಣ್ಣಿಗೆ ಕಾಣುವ ದೇವರು. ಅವರ ಆಶೀರ್ವಾದದಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಲು ಸಾಧ್ಯ. ನಾವು ಹೆತ್ತವರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೇವೆ.’ ಎಂದು ಹೆತ್ತವರ ಪಾದಸ್ಪರ್ಶಿಸಿ ಪ್ರತಿಜ್ಞೆಗೈದರು. ಈ ಸಂದರ್ಭದಲ್ಲಿ ಹೆತ್ತವರು

Read More
ಮಾತು~ಮುತ್ತು : ಜಗತ್ತಿನ ಅದ್ಭುತಗಳು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅದೊಂದು ಭೂಗೋಳಶಾಸ್ತ್ರದ ತರಗತಿ. ಒಂದು ದಿನ ಅಧ್ಯಾಪಕರು ವಿದ್ಯಾರ್ಥಿಗಳ ಹತ್ತಿರ “ಪ್ರಪಂಚದ ಏಳು ಅದ್ಭುತಗಳನ್ನು ಪಟ್ಟಿ ಮಾಡಿ” ಎನ್ನುತ್ತಾರೆ.  ಆಗ ವಿದ್ಯಾರ್ಥಿಗಳು ಸರಸರನೆ ಪಿರಮಿಡ್, ಚೀನಾದ ಮಹಾಗೋಡೆ, ತಾಜ್ ಮಹಲ್, ಪೀಸಾ ವಾಲುಗೋಪುರ ಇತ್ಯಾದಿ ಬರೆದು ಅಧ್ಯಾಪಕರಿಗೆ ತಂದು ತೋರಿಸುತ್ತಾರೆ.   ಆದರೆ ಒಂದು ಪುಟ್ಟ ಹುಡುಗಿ ಮಾತ್ರ ಖಾಲಿ ಹಾಳೆಯನ್ನು ತಂದು ಕೊಡುತ್ತಾಳೆ. ಆಶ್ಚರ್ಯಗೊಂಡು ಅಧ್ಯಾಪಕರು- “ಇದೇಕೆ?” ಎಂದು ಕೇಳುತ್ತಾರೆ. ಆಗ ಆ ಹುಡುಗಿ- “ಪ್ರಪಂಚದಲ್ಲಿ ಸಾಕಷ್ಟು ಅದ್ಭುತಗಳಿವೆ; ಯಾವುದನ್ನು ಬರೆಯುವುದು? ಎಂದೇ ನನಗೆ ಗೊತ್ತಾಗುತ್ತಿಲ್ಲ”

Read More
ಪ್ರಾಯ-ಅಭಿಪ್ರಾಯಗಳಲ್ಲಿ ಆದರ್ಶಪ್ರಾಯರಾದ ಪಕ್ವಜೀವಿಗಳಿಗೆ ಪರಿಪಕ್ವವಾದ ಕಾರ್ಯ ‘ಸಂಧ್ಯಾಮಂಗಲ’ : ಶ್ರೀಸಂಸ್ಥಾನದವರಿಂದ ವಿಶೇಷ ಆಶೀರ್ವಾದ

ಬೆಂಗಳೂರು: ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳ ಶೇಷಾಯುಷ್ಯವು ಮಂಗಲಕರವಾಗಿರಲಿ ಎಂಬ ಸದುದ್ದೇಶದೊಂದಿಗೆ ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿ 21.11.2018ರ ಬುಧವಾರದಂದು ಸಂಧ್ಯಾಮಂಗಲ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಹವ್ಯಕ ಮಹಾಮಂಡಲದ ನೇತೃತ್ವದಲ್ಲಿ ನಡೆದ ಸಂಧ್ಯಾಮಂಗಲದಲ್ಲಿ 60 ವರ್ಷ, 70 ವರ್ಷ, 80 ವರ್ಷಗಳನ್ನು ಪೂರೈಸಿದ ಒಟ್ಟು 70 ಹಿರಿಯ ದಂಪತಿಗಳು ಪಾಲ್ಗೊಂಡು, ಶ್ರೀಸಂಸ್ಥಾನದವರ ಅಮೃತಹಸ್ತಗಳಿಂದ ವಿಶೇಷ ದಿವ್ಯಾಶೀರ್ವಾದಗಳನ್ನು ಪಡೆದರು.   ಸಂಧ್ಯಾಮಂಗಲ ಕಾರ್ಯಕ್ರಮದ ಧರ್ಮಸಭೆಯ ದಿವ್ಯಸಾನ್ನಿಧ್ಯವನ್ನು ವಹಿಸಿದ್ದ ಶ್ರೀಸಂಸ್ಥಾನದವರು, ಬಹುಕಾಲ ಬದುಕಿ ಬಾಳಿ ಸಮಾಜವನ್ನು ಬೆಳಗಿದ, ಪ್ರಾಯ-ಅಭಿಪ್ರಾಯಗಳೆರಡರಲ್ಲಿಯೂ ಪಕ್ವರಾಗಿ ಸಮಾಜಕ್ಕೆ

Read More
ಶ್ರೀರಾಮಾಶ್ರಮದಲ್ಲಿ ಸಹಸ್ರ ದೀಪೋತ್ಸವ

ಸಪರಿವಾರ ಶ್ರೀರಾಮದೇವರ, ಶ್ರೀಗುರುದೇವರ ಹಾಗೂ ಕಾಮಧೇನುವಿನ ದಿವ್ಯಸನ್ನಿದಿಯಲ್ಲಿ, ಚಂಪಾಷಷ್ಠಿಯ ಪರ್ವದಿನದಲ್ಲಿ, ಸಹಸ್ರದೀಪೋತ್ಸವ ಸೇವೆ ನಡೆಯಲಿದೆ. ಕಾಲ: 13.12.2018, ಗುರುವಾರ ಸಂಜೆ 7 ರಿಂದ ಸರ್ವರಿಗೂ ಆದರದ ಸ್ವಾಗತ.

Read More
ಶ್ರೀಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ತುಳಸಿ ವಿವಾಹ ಸಂಪನ್ನ.

ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ನ.20ರಂದು, ಮಂಗಳವಾರ ತುಳಸಿ ವಿವಾಹ ಸಂಪನ್ನಗೊಂಡಿತು. ವೇದಮೂರ್ತಿ ಶ್ರೀ ಶಿತಿಕಂಠ ಹಿರೇಭಟ್ ಪೂಜೆ ನೆರವೇರಿಸಿದರು. ಆಡಳಿತಾಧಿಕಾರಿ ಶ್ರೀ ಜಿ.ಕೆ. ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Read More
ಶ್ರೀರಾಜರಾಜೇಶ್ವರಿ ನಗರದಲ್ಲಿ ಅಮೃತಪಥ : ಎಲ್ಲರೂ ಭಾಗವಹಿಸಿ – ಗೋಕೃಪೆಗೆ ಪಾತ್ರರಾಗಿ

ಬೆಂಗಳೂರು: ಶ್ರೀರಾಜರಾಜೇಶ್ವರೀ ನಗರದ ಬಾಲಕೃಷ್ಣ ರಂಗಮಂದಿರದಲ್ಲಿ ರವಿವಾರ, ನ.25ರಂದು ಬೆಳಿಗ್ಗೆ 8.30 ರಿಂದ 11ಗಂಟೆಯ ವರೆಗೆ ‘ಅಮೃತ ಪಥ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಗೋಮಾತೆಯು ಓಡಾಡುವ ಸ್ಥಳವನ್ನು  ಕಸ ಮತ್ತು  ಪ್ಲಾಸ್ಟಿಕ್ ಮುಕ್ತ ಪಥವನ್ನಾಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಮಠದ ಎಲ್ಲಾ ಗೋ ಭಕ್ತರೂ ಭಾಗವಹಿಸಲು ವಿನಂತಿಸಲಾಗಿದೆ.

Read More
ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ

ಉಪ್ಪಿನಂಗಡಿ: ಶ್ರೀಸಂಸ್ಥಾನದವರ ಮಹೋನ್ನತ ಸಂಕಲ್ಪ ಹಾಗೂ ಆಶಯದಂತೆ ನವಾಹ ಪದ್ಧತಿಯಂತೆ ನಡೆಯುತ್ತಿರುವ ಶ್ರೀಮದ್ವಾಲ್ಮೀಕಿ ರಾಮಾಯಣದ ಮೂರು ಪಾರಾಯಣವು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದ ಸಹಯೋಗದಲ್ಲಿ ನ. 12ರಂದು ಆರಂಭಗೊಂಡು ನ. 20ರಂದು ಸಮಾಪನಗೊಂಡಿತು.   ನ. 12ರಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ ಭಟ್ ಬೈಪದವು ಅವರ ಮನೆಯಲ್ಲಿ ಪಾರಾಯಣ ಪ್ರಾರಂಭಗೊಂಡಿತು. ನ. 13ರಂದು ವೇ.ಬ್ರ. ಬಡಜ ಶ್ರೀ ಜಯರಾಮ ಜೋಯಿಸ, 14ರಂದು ಸಂಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಎಮ್.ಎಚ್. ರಮೇಶ ಭಟ್, 15ರಂದು ಶ್ರೀ

Read More
ಮಾತು~ಮುತ್ತು : ನಮಗೆಷ್ಟು ಬೇಕು? – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನಲ್ಲಿ ಒಬ್ಬ ಲೋಭಿ ಇದ್ದ. ಅವನ ಬಳಿ ಸಾಕಷ್ಟು ಹಣ-ಆಸ್ತಿ ಇದ್ದರೂ, ‘ಇನ್ನಷ್ಟು ಬೇಕು’ ಎಂದು ಬಯಸುತ್ತಿದ್ದ.   ಒಂದು ದಿನ ಆ ಊರಿನ ರಾಜನನ್ನು ಭೇಟಿಯಾಗಿ- “ನನಗೊಂದಿಷ್ಟು ಆಸ್ತಿ ಕೊಡಿ” ಎಂದು ಬೇಡಿಕೊಳ್ಳುತ್ತಾನೆ. ರಾಜ ಅವನನ್ನೊಮ್ಮೆ ಅವಲೋಕಿಸಿ- “ನಾಳೆ ಸೂರ್ಯೋದಯಕ್ಕೆ ಇಲ್ಲಿಗೆ ಬಾ; ಇಲ್ಲಿಂದ ಎಷ್ಟು ದೂರ ಸಾಧ್ಯ ಅಷ್ಟು ದೂರ ಕ್ರಮಿಸು; ಸೂರ್ಯಾಸ್ತದ ಒಳಗೆ ನೀನು ಪ್ರಾರಂಭಿಸಿದ ಸ್ಥಳಕ್ಕೆ ಬಂದು ತಲುಪಬೇಕು. ಆಗ ನೀನು ಕ್ರಮಿಸಿದಷ್ಟು ದೂರದ ಭೂಮಿ ನಿನ್ನದಾಗುತ್ತದೆ” ಎನ್ನುತ್ತಾನೆ.  

Read More
ಮಾಲೂರು ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಉತ್ಥಾನ ದ್ವಾದಶೀ ಆಚರಣೆ : ತುಳಸೀ ಪೂಜೆ ಸಂಪನ್ನ

ಮಾಲೂರು: ಇಲ್ಲಿನ ಗಂಗಾವತಿಯ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಉತ್ಥಾನದ್ವಾದಶಿಯ ಪರ್ವ ದಿನದಂದು ತುಳಸೀ ಪೂಜೆ ಸಂಪನ್ನಗೊಂಡಿತು. ತುಳಸೀ ವಿವಾಹದ ಅಂಗವಾಗಿ ನವೆಂಬರ್ 20, ಮಂಗಳವಾರ ಶ್ರೀ ಲಕ್ಷ್ಮೀಶ ಇವರ ನೇತೃತ್ವದಲ್ಲಿ ತುಳಸೀ ಪೂಜೆಯನ್ನು ನೆರವೇರಿಸಲಾಯಿತು.   ಈ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರಮಠದ ಗೋಬಂಧು ವಿಭಾಗದ ಸಹಕಾರ್ಯದರ್ಶಿಗಳಾದ ಶ್ರೀ ಶ್ರೀಕಾಂತ್ ಹೆಗಡೆ ಸಹಿತ ಗೋಶಾಲೆಯ ಹಲವಾರು ಕಾರ್ಯಕರ್ತರು ಹಾಗೂ ಗೋ ಪ್ರೇಮಿಗಳು ಉಪಸ್ಥಿತರಿದ್ದರು.

Read More
ಬೆಂಗಳೂರು ಉತ್ತರ ಮಂಡಲದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಭಜನಾಕಾರ್ಯಕ್ರಮ

ಬೆಂಗಳೂರು: ಬೆಂಗಳೂರು ಉತ್ತರ ಮಂಡಲದ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಅವರ ಮನೆ ‘ಸಾಕ್ಷಾತ್ಕಾರ ಕಲಾನಿಕೇತನದಲ್ಲಿ’ ಕಾರ್ತಿಕ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ ನವೆಂಬರ್ 22ರಂದು ಯಶಸ್ವಿಯಾಗಿ ನಡೆಯಿತು.   ಮಂಡಲದ ಅಧ್ಯಕ್ಷರಾದ ಶ್ರೀ ಜಿ. ಜಿ. ಹೆಗಡೆಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಾರ್ತಿಕಮಾಸದ ಶುಭದಿನದಂದು ಮಕ್ಕಳೊಂದಿಗೆ ಇಂತಹ ಕಾರ್ಯಕ್ರಮದಲ್ಲಿ ಸೇರಿದ್ದೇವೆ. ಇಂತಹ ಕಾರ್ಯಕ್ರಮದಿಂದ ಮಕ್ಕಳ ಕೌಶಲ್ಯಕ್ಕೆ ಅವಕಾಶ ನೀಡಿದಂತಾಗುವುದು ಅಲ್ಲದೇ ನಮ್ಮ ಸಂಘಟನೆ ಬಲಗೊಳ್ಳುವುದು, ಎಂದ ಅವರು ಕಾರ್ಯಕ್ರಮ ಯಶಸ್ವಿಯಾಗಲೆಂದು

Read More
ಅಂಬಾಗಿರಿಯಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ನೂತನ ಯಾಗಶಾಲೆ ಉದ್ಘಾಟನೆ ಸಂಪನ್ನ

ಶಿರಸಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಶ್ವೀಜ ಶುಕ್ಲ ಪ್ರತಿಪದೆಯಿಂದ ನವಮಿಯವರೆಗೆ, ಅಕ್ಟೋಬರ್ 10 ರಿಂದ 17ರವರೆಗೆ ಶ್ರಿಸಂಸ್ಥಾನದ ಮಾರ್ಗದರ್ಶನದಂತೆ ಶಿರಸಿಯ ಅಂಬಾಗಿರಿ ಕಾಳಿಕಾಮಠದಲ್ಲಿ ಶರನ್ನವರಾತ್ರಿ ಉತ್ಸವ ಜರುಗಿತು.   ಈ ಅಂಗವಾಗಿ ಪ್ರತಿನಿತ್ಯ ಮಾತೆಯರಿಂದ ಕುಂಕುಮಾರ್ಚನೆ, ಪುರುಷರಿಂದ ಗಾಯತ್ರಿಜಪ, ದೇವೀಪಾರಾಯಣ ಮಹಾಪೂಜೆಗಳು, ದಶಮಿಯಂದು ಸಿಮೋಲ್ಲಂಘನ, ಅಷ್ಟಾವಧಾನ ಸೇವೆ ಮಹಾಮಂಗಳಾರತಿಯೊಂದಿಗೆ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.   ಅಲ್ಲದೇ ದಿನಾಂಕ 20ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಗೂ ಗೋಪ್ರವೇಶದೊಂದಿಗೆ ನೂತನ ಯಾಗಶಾಲೆ ಪ್ರಾರಂಭೋತ್ಸವ ನೆರವೇರಿತು. ಮರುದಿನ ದ್ವಾದಶಿಯಂದು

Read More