|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ವಿದ್ಯಾರ್ಥಿಗಳಿಗೆ ಕಾರ್ಯಾಗಾರ : ಪರೀಕ್ಷೆ ಎದುರಿಸುವ ವಿಧಾನ – ಮುಂದಿನ ಅವಕಾಶಗಳ ಬಗ್ಗೆ ಮಾಹಿತಿ

ನಲ್ಯಪದವು: ಪಠ್ಯವನ್ನು ಮನನ ಮಾಡಿಕೊಳ್ಳುವ ಹಾಗೂ ಪರೀಕ್ಷೆಯನ್ನು ಎದುರಿಸುವ ವಿಧಾನಗಳು, ಹತ್ತನೆಯ ತರಗತಿಯ ಅನಂತರ ಎದುರಿಸುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ಸಂಸ್ಥೆಯ ಶಿಕ್ಷಣ ಸಂಯೋಜಕರಾದ ಪ್ರೊ. ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.   ಶ್ರೀಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾದಿಂದ ನಲ್ಯಪದವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಯಾವುದೇ ರೀತಿಯಲ್ಲೂ ಭಯಪಡದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ ಕುಮಾರಿ, ಕಂಪ್ಯೂಟರ್

Read More

ಶ್ರೀ ಜಗದಾತ್ಮಾನಂದಜೀ : ಕಥೆ ಹೇಳಿ ಮಕ್ಕಳ ಬದುಕು ರೂಪಿಸಿದ ಸಂತ

ಶ್ರೀ ಗುರುಭ್ಯೋನ್ನಮ: ಇತ್ತೀಚೆಗೆ ಶ್ರೀ ರಾಮಕೃಷ್ಣಾಶ್ರಮದ  ಹಿರಿಯ ಸಂನ್ಯಾಸಿಗಳಾಗಿದ್ದ ಶ್ರೀ ಜಗದಾತ್ಮಾನಂದಜೀಯವರು ತೊಂಬತ್ತನೇ ವಯಸ್ಸಿನಲ್ಲಿ ಪರಮಗುರು ಶ್ರೀರಾಮಕೃಷ್ಣರ ಚರಣಕಮಲವನ್ನು ಸೇರಿದರು. ಎಂಬತ್ತರ ದಶಕದಲ್ಲಿ ಇವರು ಬರೆದ ‘ಬದುಕಲು ಕಲಿಯಿರಿ’ ಎಂಬ ಸೃಜನಶೀಲ ಸಾಹಿತ್ಯ ಕನ್ನಡನಾಡಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಆಧುನಿಕ ವಿಜ್ಞಾನದ ಹಿನ್ನೆಲೆಯೊಂದಿಗೆ ಆಧ್ಯಾತ್ಮಕ ನೆಲೆಗಟ್ಟಿನಲ್ಲಿ ಬದುಕನ್ನು ಸಕಾರಾತ್ಮಕವಾಗಿ ಎದುರಿಸುವ ಬಗೆಯನ್ನು ಪ್ರಾಯೋಗಿಕ ಉದಾಹರಣೆಗಳೊಂದಿಗೆ ತಿಳಿಸಿದ ಅತ್ಯಂತ ಅಪರೂಪದ ಪುಸ್ತಕ ಅದಾಗಿತ್ತು. ವಿಶೇಷವಾಗಿ ಯುವಜನತೆಗೆ ಅದು ಪ್ರೇರಣಾಗ್ರಂಥವಾಗಿದೆ.   ಸ್ವಾಮಿ ಜಗದಾತ್ಮಾನಂದರು ಅದನ್ನು ರಚಿಸಿದ್ದು 1977-80ರಲ್ಲಿ ಮೈಸೂರಿನ

Read More

ಡಿಸೆಂಬರ್ 15ರಂದು ರಾಮಾಶ್ರಮದಲ್ಲಿ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನೆ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ 35ನೆಯ ಯತಿವರ್ಯರಾದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಮಾರ್ಗಶೀರ್ಷ ಶುದ್ಧ ಅಷ್ಟಮೀ ಡಿಸೆಂಬರ್ 15ರಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಸಂಪನ್ನಗೊಳ್ಳಲಿದೆ. ಆರಾಧನಾ ಮಹೋತ್ಸವ ಬಳಿಕ ಧರ್ಮಸಭೆ, ನಡೆಯಲಿದ್ದು, ಪಾಂಡಿತ್ಯಪುರಸ್ಕಾರ, ಪ್ರವಚನ, ಮಂತ್ರಾಕ್ಷತೆ ವಿತರಣೆಗಳು ನಡೆಯಲಿವೆ. ಶಿಷ್ಯಭಕ್ತರು ಭಾಗವಹಿಸಿ ಕೃಪೆಗೆ ಪಾತ್ರರಾಗಬೇಕೆಂದು ಉತ್ಸವ ಕಾರ್ಯದರ್ಶಿಗಳಾದ ಶ್ರೀ ಶಾಂತಾರಾಮ ಹಿರೇಮನೆ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More
ಬೆಳ್ಳೆಚ್ಚಾಲಿನಲ್ಲಿ ಪ್ರದೋಷಕಾಲದ ರುದ್ರಾರಾಧನೆ

ಶ್ರೀಸಂಸ್ಥಾನದವರ ನಿರ್ದೇಶನದಂತೆ ಲೋಕಕಲ್ಯಾಣಾರ್ಥವಾಗಿ ಪ್ರದೋಷಕಾಲದ ರುದ್ರಾರಾಧನೆಯು ಮುಳ್ಳೇರಿಯಾ ಮಂಡಲಾಂತರ್ಗತ ಚಂದ್ರಗಿರಿ ವಲಯದ ಬೆಳ್ಳೆಚ್ಚಾಲು ಘಟಕದ ಕುಜತ್ತೋಡಿ ಶ್ರೀ ರಾಜಗೋಪಾಲ ಶರ್ಮಾ ಅವರ ಮನೆಯಲ್ಲಿ ನವೆಂಬರ್ 20ರಂದು ನೆರವೇರಿತು.   ಈ ಕಾರ್ಯಕ್ರಮದಲ್ಲಿ 24 ಮಂದಿ ರುದ್ರಪಾಠಕರು ಭಾಗವಹಿಸಿದರು ಹಾಗೂ 17 ಮಂದಿ ಭಜನ ರಾಮಾಯಣ ಪಾರಾಯಣ ನಡೆಸಿದರು.

Read More
ಗೋವಿಗಾಗಿ ಮೇವು : ಗುಂಪೆ ವಲಯದವರ ಶ್ರಮದಾನ

ಪೆರ್ಲ: ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನ ನವೆಂಬರ್ 17ರಂದು ಜರಗಿತು.   ಗುಂಪೆ ವಲಯದ ಪುತ್ತಿಗೆ ಸುಬ್ರಾಯ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿದ್ದ ಹಸಿಹುಲ್ಲನ್ನು ಕತ್ತರಿಸಿ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಕಳುಹಿಸಿಕೊಡಲಾಯಿತು.   ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿಯ ಪ್ರಧಾನ ಶ್ರೀ ಕೇಶವ ಪ್ರಸಾದ ಎಡಕ್ಕಾನ, ಗುಂಪೆ ವಲಯದ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪ, ನೀರ್ಚಾಲು ವಲಯದ ಶಿಷ್ಯಮಾಧ್ಯಮ ವಿಭಾಗದ ಶ್ರೀ

Read More
ಮಾತು~ಮುತ್ತು : ಗುರುವಿನ ಮಹತ್ತ್ವ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನಲ್ಲಿ ಒಬ್ಬ ಯುವಕನಿಗೆ ಜುಡೋ ಕಲಿಯಬೇಕೆಂಬ ಇಚ್ಛೆಯಾಗುತ್ತದೆ. ಅವನು ಗುರುವನ್ನು ಅರಸುತ್ತಾ ಹೋಗುತ್ತಾನೆ. ಹೀಗಿರುವಾಗ ಜುಡೋ ಕಲಿಸುವ ಒಬ್ಬ ಗುರು ಅವನಿಗೆ ಸಿಗುತ್ತಾನೆ.   ಆದರೆ ಯುವಕನಿಗೆ ಒಂದು ಕೈ ಇಲ್ಲದಿರುವುದನ್ನು ಗಮನಿಸಿದ ಗುರು ಒಂದು ಕೈಯಿಂದ ಆಟವಾಡುವ ಒಂದು ಪಾಠವನ್ನು ಮಾತ್ರ ಅವನಿಗೆ ಕಲಿಸಿಕೊಟ್ಟು ಪ್ರತಿದಿನ ಅಭ್ಯಾಸ ಮಾಡುವಂತೆ ಹೇಳುತ್ತಾನೆ. ಯುವಕ ಅತ್ಯಂತ ಶ್ರದ್ಧೆಯಿಂದ ಆ ಪಾಠವನ್ನು ಕರಗತ ಮಾಡಿಕೊಳ್ಳುತ್ತಾನೆ.   ಕೆಲವು ಸಮಯದ ಅನಂತರ ಅವನು ಒಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಒಂದು, ಎರಡು,

Read More
ಪಳ್ಳತ್ತಡ್ಕ ವಲಯದಲ್ಲಿ ವಾರ್ಷಿಕೋತ್ಸವದ ಸಂಭ್ರಮ : ಶಿಷ್ಯವೃಂದದಿಂದ ಅಮೃತಪಥ, ವೈದಿಕ ಕಾರ್ಯಕ್ರಮ

ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ವಲಯದ ವಾರ್ಷಿಕೋತ್ಸವವು ನವೆಂಬರ್ 18ರ ಭಾನುವಾರ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಬೆಳಗ್ಗೆ ಗೋಪೂಜೆ, ಗಣಪತಿ ಹವನ, ಮಾತೆಯರಿಂದ ಕುಂಕುಮಾರ್ಚನೆ, ಭಜನೆ, ಭಜನ ರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ವೇದಮೂರ್ತಿ ಪಳ್ಳತ್ತಡ್ಕ ಶ್ರೀ ಪರಮೇಶ್ವರ ಭಟ್ಟರ ಪೌರೋಹಿತ್ಯದಲ್ಲಿ ಶ್ರೀಸತ್ಯನಾರಾಯಣ ಪೂಜೆ ಸೇರಿದಂತೆ ಅನೇಕ ವೈದಿಕ ಕಾರ್ಯಕ್ರಮಗಳು ನೆರವೇರಿದವು. ವಲಯ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್ ಏತಡ್ಕ ದಂಪತಿ ಶ್ರೀಸತ್ಯನಾರಾಯಣ ಪೂಜೆಯಲ್ಲಿ ಕರ್ತೃಗಳಾಗಿ ಪಾಲ್ಗೊಂಡಿದ್ದರು.   ಅನಂತರ ನಡೆದ ಸಭಾ

Read More
ಅಕ್ಷಯದ ಅನುಗ್ರಹ – ಮುಷ್ಟಿಭಿಕ್ಷೆ : ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ ಧರ್ಮತ್ತಡ್ಕ

ಆದಿಶಂಕರರಿಂದ ಸ್ಥಾಪಿಸಲ್ಪಟ್ಟು ಅವಿಚ್ಛಿನ್ನವಾಗಿ ಮುಂದುವರಿದಿರುವ ಶ್ರೀರಾಮಚಂದ್ರಾಪುರಮಠದ ಮೂವತ್ತಾರನೆಯ ಯತಿವರರಾದ ಶ್ರೀರಾಘವೇಶ್ವರಭಾರತೀ ಶ್ರೀಗಳ ಶಿಷ್ಯರು ನಾವು ಎಂಬುದೇ ಮನಸ್ಸಿಗೆ ಪರಮಾಪ್ತವಾದ ವಿಚಾರ.   ಸಮಾಜದ ಅಭಿವೃದ್ಧಿಯನ್ನೇ ಪರಮಗುರಿಯನ್ನಾಗಿಸಿಕೊಂಡ ಶ್ರೀಗಳು ಕೈಗೊಂಡಿರುವ ಯೋಜನೆಗಳು ಹಲವಾರು. ಆ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಮಾರ್ಗ ನಿಜಕ್ಕೂ ವಿಶಿಷ್ಟ ಹಾಗೂ ಅದ್ಭುತ.   ಸವೆದು ಹೋಗುತ್ತಿದ್ದ ಪ್ರೀತಿ, ವಿಶ್ವಾಸ, ಮಾನವೀಯತೆಯ ಸರಪಣಿಗೆ ಹೊಸ ರೂಪುರೇಷೆ ಕೊಟ್ಟು, ಸಮಾಜದ ಎಲ್ಲರನ್ನೂ ಒಂದೇ ರೀತಿಯ ಮಮತೆಯ ಕೊಂಡಿಯಿಂದ ಬೆಸೆದು, ಶಿಷ್ಯಭಕ್ತರಿಗೆ ಸೂಕ್ತ ಮಾರ್ಗದರ್ಶನವಿತ್ತು, ಸಹಜೀವನದ ಮಹತ್ತ್ವವನ್ನು ಮನಗಾಣಿಸಿ ಧರ್ಮಸ್ಥಾಪನೆಗಾಗಿ

Read More
ಮಾತು~ಮುತ್ತು : ಈಸಬೇಕು; ಇದ್ದು ಜಯಿಸಬೇಕು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನ ಒಂದು ದೊಡ್ಡ ಕೆರೆಯಲ್ಲಿ ಎರಡು ಕಪ್ಪೆಗಳಿದ್ದವು. ಒಂದು ದಪ್ಪವಿದ್ದರೆ ಇನ್ನೊಂದು ತೆಳ್ಳಗಿತ್ತು. ಈ ಎರಡೂ ಕಪ್ಪೆಗಳೂ ಒಂದು ದಿನ ಹಾರುತ್ತಾ ಹಾರುತ್ತಾ ಒಂದು ಮನೆಯೊಳಗೆ ಪ್ರವೇಶಿಸಿ ಅಡುಗೆ ಮನೆಗೆ ಹೋಗಿ ಅಕಸ್ಮಾತ್ ಆಗಿ ಒಂದು ದೊಡ್ಡ ಮೊಸರಿನ ಪಾತ್ರೆಯಲ್ಲಿ ಬಿದ್ದುಬಿಡುತ್ತವೆ. ಎಷ್ಟೇ ಪ್ರಯತ್ನ ಮಾಡಿದರೂ ಅವಕ್ಕೆ ಮೇಲೆ ಬರಲು ಸಾಧ್ಯವಾಗುವುದಿಲ್ಲ.   ಆಗ ದಪ್ಪ ಕಪ್ಪೆ, ಸಣ್ಣ ಕಪ್ಪೆಯ ಬಳಿ- ‘ನನ್ನಿಂದ ಕಾಲು ಬಡಿಯಲು ಸಾಧ್ಯವಾಗುತ್ತಿಲ್ಲ. ನಾನು ಸತ್ತು ಹೋಗುತ್ತೇನೆ’ ಎಂದು ಹೇಳುತ್ತದೆ. ಅದಕ್ಕೆ

Read More
ಅಮೃತಪಥ : ಗೋವುಗಳು ಸಂಚರಿಸುವ ಹಾದಿ ಪ್ಲ್ಯಾಸ್ಟಿಕ್ ಮುಕ್ತಗೊಳಿಸುವ ವಿಶಿಷ್ಟ ಯೋಜನೆ – ವಲಯಗಳಲ್ಲಿ ಉತ್ತಮ‌ ಪ್ರತಿಕ್ರಿಯೆ

ಬೆಂಗಳೂರು: ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ರೂಪ ಪಡೆದ ಅಮೃತಪಥ ಯೋಜನೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಗೋವುಗಳು ಸಂಚರಿಸುವ ಹಾದಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಅಮೃತ ಸ್ವರೂಪವಾದ ಹಾಲು, ಗೋಮೂತ್ರ, ಗೋಮಯವನ್ನು ನೀಡುವ ಪುಣ್ಯಕೋಟಿಗೆ ಅಮೃತಪಥವನ್ನು ಮಾಡಿ ಕೊಡುವ ಸದುದ್ದೇಶದ ಯೋಜನೆಗೆ ಎಲ್ಲ ಮಂಡಲ ಹಾಗೂ ವಲಯಗಳ ಕಾರ್ಯಕರ್ತರು ಸಹಯೋಗ ನೀಡಿದ್ದಾರೆ.   ಮುಳ್ಳೇರಿಯ: ನಿರ್ಚಾಲು ವಲಯದಲ್ಲಿ ದಿನಾಂಕ ನವೆಂಬರ 18ರಂದು ಬೆಳಗ್ಗೆ 8 ಗಂಟೆಯಿಂದ 9ರವರೆಗೆ ಅಮೃತಪಥ ಕಾರ್ಯಕ್ರಮ ನಡೆಯಿತು. ಕುಂಟಿಕಾನ ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ

Read More
ಭಟ್ಕಳ ಹವ್ಯಕ ವಲಯೋತ್ಸವ: ಆರೋಗ್ಯ ರಕ್ಷಣೆಯ ಕುರಿತು ಉಪನ್ಯಾಸ

ಭಟ್ಕಳ: ಇಲ್ಲಿನ ಹವ್ಯಕ ವಲಯದ ವಾರ್ಷಿಕೋತ್ಸವದ ಅಂಗವಾಗಿ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ‌. ಇದರ ಪ್ರಥಮ ಕಾರ್ಯಕ್ರಮ ಶಿರಾಲಿ ಸಾಲೆಮನೆಯ ಶ್ರೀ ಪ್ರಕಾಶ ಭಟ್ಟರ ಮನೆಯಲ್ಲಿ ಭಾನುವಾರ ನಡೆಯಿತು.   ವಲಯೋತ್ಸವ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ರಕ್ಷಣೆಯ ಕುರಿತು ಉಪನ್ಯಾಸ ನಡೆಯಿತು. ಆರೋಗ್ಯ ರಕ್ಷಣೆಗೆ ನಾವು ವಹಿಸಬೇಕಾದ ಕಾಳಜಿ ಕುರಿತು ವೈದ್ಯರಾದ ಶ್ರೀ ಡಾ. ಬಾಲಕೃಷ್ಣ ಭಟ್ಟ ಮಾಹಿತಿ ನೀಡಿದರು.   ಶ್ರೀಮಠದ ಸಂಘಟನೆಯ ಕುರಿತು ಶ್ರೀ ನೀಲಕಂಠ ಯಾಜಿ ಮಾತನಾಡಿದರು. ಶ್ರೀ ಕೃಷ್ಣಾನಂದ ಭಟ್ಟರು ಕಾರ್ಯಕ್ರಮದ ಅಧ್ಯಕ್ಷತೆ

Read More
ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನ

ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾ ನೇತೃತ್ವದಲ್ಲಿ ಉಂಡೆಮನೆ ಶಂಭು ಶರ್ಮ ಪ್ರತಿಷ್ಠಾನದ ವತಿಯಿಂದ ಪರೀಕ್ಷೆ ಎದುರಿಸುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.   ಮುಲ್ಲಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಶ್ರೀ ಯು.ಎಸ್. ವಿಶ್ವೇಶ್ವರ ಭಟ್ ತರಬೇತಿ ನೀಡಿದರು.   ಪರೀಕ್ಷೆ ಹೇಗೆ ಎದುರಿಸಬೇಕು, ಯಾವ ರೀತಿ ಸಿದ್ಧರಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು. ಕೋ ಆರ್ಡಿನೇಟರ್ ಶ್ರೀ ಅನಂತನಾರಾಯಣ ಪದಕಣ್ಣಾಯ ತರಬೇತಿಗೆ ಸಹಾಯ

Read More
ಗೋಮಹತಿ ಕಾರ್ಯಾಗಾರ

ನೀವು ೧೮-೨೫ ವರ್ಷದೊಳಗಿನವರಾಗಿದ್ದು, ಗೋವನ್ನು ಪ್ರೀತಿಸುವವರಾಗಿದ್ದು, ಗೋವಿನ ಕುರಿತು ಜಾಗೃತಿ ಮೂಡಿಸಲು ಆಸಕ್ತರಿದ್ದೀರೇ? ಉತ್ತಮ ಭಾಷಣಕಾರರಾಗುವ ಗುರಿ ನಿಮಗಿದೆಯೇ? ಹಾಗಿದ್ದರೇ ಈ ಕಾರ್ಯಾಗಾರ ನಿಮಗಾಗಿಯೇ..   ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ಗೋಮಹತಿ‌ ವಿಭಾಗ ದಿಂದ ಇದೇ ಡಿಸೆಂಬರ್ 2, ಭಾನುವಾರದಂದು 18 ರಿಂದ 25 ವಯಸ್ಸಿನವರಿಗೆ ಕೋಲಾರ ಜಿಲ್ಲೆಯ ಮಾಲೂರಿನ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಮಹತಿ ಕಾರ್ಯಾಗಾರ ಎಂಬ ಒಂದು ದಿನದ ಉಚಿತ ಭಾಷಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಗೋವಿಚಾರ ಜಾಗೃತಿ, ಭಾಷಣ

Read More
ಅಮೃತ ಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ 28,29,30 Dec 2018 ಅರಮನೆ ಮೈದಾನ, ಬೆಂಗಳೂರು ಹವ್ಯಕ ಪ್ರಶಸ್ತಿ/ಸಮ್ಮಾನ ನಾಮನಿರ್ದೇಶನ

ಆತ್ಮೀಯರೇ, ಈ ಕೆಳಗಿನ ಲಿಂಕ್ಗಳನ್ನು (5 ಬಗೆಯ ಪ್ರಶಸ್ತಿ ತಲಾ 75 ಸಾಧಕರಿಗೆ) ಬಳಸಿ ನಿಮಗೆ ತಿಳಿದಿರುವ ಹವ್ಯಕ ಸಾಧಕರನ್ನು ಅವರ ಕ್ಷೇತ್ರದ ಅನುಸಾರ ನಾಮ ನಿರ್ದೇಶನ ಮಾಡಬೇಕಾಗಿ ವಿನಂತಿ. ಕಡೆಯ ದಿನಾಂಕ: 30-11-2018 http://havyakamahasabha.com/nomination-form ಅಮೃತಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಮಾಹಿತಿಗಾಗಿ ನಮ್ಮ ವೆಬ್ಸೈಟ್ ನೋಡಿ. http://havyakamahasabha.com

Read More
ಶ್ರೀ ರಾಮಚಂದ್ರಾಪುರ ಮಠದಲ್ಲಿ ಏಕಾದಶಿಯಂದು ಸುಗ್ರಾಸ ಸಂತರ್ಪಣೆ!

ಹೌದು.. ಈ ಸಂತರ್ಪಣೆಯು ಪ್ರತಿ ಏಕಾದಶಿಯಂದೂ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ಸಂಜೆ ಆರು ಗಂಟೆಗೆ ಸರಿಯಾಗಿ ನಡೆಯುವಂತಾದ್ದು. ಇದೇನು ಶ್ರೀಮಠದಲ್ಲಿ ಏಕಾದಶಿಯಂದು, ಅದೂ ಸಂಜೆ ದೇವರು ಬರುವ ಹೊತ್ತಿನಲ್ಲಿ ಊಟ ಮಾಡುವುದೇ…., ಎಂದು ಬೆಚ್ಚಿ ಬಿದ್ದಿರಾ!! ಬನ್ನಿ…. ನೋಡಿ… ನೀವೂ ಈ ಸಂತರ್ಪಣೆಯಲ್ಲಿ ಭಾಗವಹಿಸಿ, ಮನಃತೃಪ್ತಿಯಾಗಿ ಉಣಬನ್ನಿ. ಈ ಸಮಾರಾಧನೆ ಬಹಳ ವಿಶಿಷ್ಟವಾದದ್ದು, ಅನನ್ಯವಾದ್ದದ್ದು. ಪುರಂದರದಾಸರು ಹೇಳಲಿಲ್ಲವೇ? ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ, ವಿಠಲನಾಮ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೋ ಎಂದು! ಈ ಏಕಾದಶಿ ಉತ್ಸವದ

Read More