ಮಾತು~ಮುತ್ತು : ಎಷ್ಟಿರಬೇಕು ಐಶ್ವರ್ಯ? – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ
ಒಂದು ಊರಿನಲ್ಲಿ ಧನದತ್ತ ಮತ್ತು ದೇವದತ್ತ ಎಂಬ ಈರ್ವರು ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಧನದತ್ತ ಹೆಸರಿಗೆ ತಕ್ಕಂತೆ ಅಪಾರ ಐಶ್ವರ್ಯ ಉಳ್ಳವನಾಗಿದ್ದ. ಆದರೆ ದೇವದತ್ತನಿಗೆ ದೈನಂದಿನ ಜೀವನಕ್ಕೆ ಸಾಕಾಗುವಷ್ಟು ಧನ ಮಾತ್ರ ಇತ್ತು. ಧನದತ್ತನಿಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಕಾರಣ ಹೆದರಿಕೆ. ಯಾವುದೇ ಸಮಯದಲ್ಲಿ ಕಳ್ಳರು ಬರಬಹುದು; ತನ್ನ ಐಶ್ವರ್ಯವನ್ನು ದೋಚಿಕೊಂಡು ಹೋಗಬಹುದು ಎಂದು ಸದಾ ಚಿಂತಿತನಾಗಿ ರಾತ್ರಿ ಪದೇ ಪದೇ ಎದ್ದು, ಬಾಗಿಲು ಹಾಕಿದ್ದೇನೆಯೇ? ಚಿಲಕ ಹಾಕಿದ್ದೇನೆಯೇ? ಎಂದು ಆಗ ಆಗ ಪರೀಕ್ಷಿಸುತ್ತಿದ್ದ.
Read Moreಉತ್ಥಾನ ದ್ವಾದಶಿಯಂದು ಶ್ರೀಕರಾರ್ಚಿತ ಶ್ರೀರಾಮನಿಗೆ ೧೨೨ ಕೆಜಿ ಗೋಧಿ ಪಾಯಸ ನೈವೇದ್ಯ
ಬೆಂಗಳೂರು: ಉತ್ಥಾನದ್ವಾದಶಿಯ ಪುಣ್ಯಕಾಲದಂದು ಶ್ರೀಸಂಸ್ಥಾನದವರ ಸಂಕಲ್ಪದಂತೆ ಸಪರಿವಾರ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಅಖಂಡ (ಖಂಡವಿಲ್ಲದ ಇಡಿಯ ಗೋಧಿ) ಗೋಧಿ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸಲಾಯಿತು. ಮುಂಜಾನೆ ಶ್ರೀಸಂಸ್ಥಾನದವರು ರಾಮದೇವರ ಪೂಜೆ ಗೈಯ್ಯುವ ವೇಳೆಗೆ ಘಮಘಮಿಸುವ ತುಂಡಿಲ್ಲದ ಗೋಧಿಯ ಪಾಯಸವನ್ನು ಸಿದ್ಧಪಡಿಸಲಾಗಿತ್ತು. ಒಟ್ಟು 8 ದ್ರೋಣದ ಪ್ರಮಾಣದಲ್ಲಿ ಅಂದ್ರೆ ಒಂದು ದ್ರೋಣಕ್ಕೆ 16 ಸೇರಿನ ಪ್ರಮಾಣದಲ್ಲಿ ಒಟ್ಟು 122.850 ಕೆಜಿ ಇಡಿ ಗೋಧಿಯ ಪಾಯಸ ಶ್ರೀರಾಮನಿಗೆ ಸಮರ್ಪಿತಗೊಂಡಿತು. ಶ್ರೀಸಂಸ್ಥಾನದ ಕರದಿಂದ ಅರ್ಚಿತಗೊಳ್ಳುವ ಶ್ರೀರಾಮನಿಗೆ ಪಾಯಸ ಸಮಪರ್ಣೆಗೊಂಡ ಬಳಿಕ ಪ್ರಸಾದವಾಗಿ ಈ
Read Moreಮಂಗಳೂರು ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ : ಮಾತಾಪಿತೃ ಪೂಜೆಯೊಂದಿಗೆ ಆಚರಣೆ
ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯಂದು ಮಾತಾಪಿತೃ ಪೂಜೆ ನಡೆಸುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು. ಶಾಲೆಯ ಶಂಕರಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾತಾಪಿತೃ ಪೂಜೆ ಕಾರ್ಯಕ್ರಮದಲ್ಲಿ 10ನೆಯ ತರಗತಿಯ ಮಕ್ಕಳು ತಮ್ಮ ತಂದೆ-ತಾಯಿಗಳ ಪಾದಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಶ್ರೀ ಕೇಶವ ಭಟ್ ದಿವಾಣ ಮಾತನಾಡಿ, ತಂದೆ-ತಾಯಿ ನಮ್ಮ ಕಣ್ಣಿಗೆ ಕಾಣುವ ದೇವರು. ಅವರ ಆಶೀರ್ವಾದ ಇದ್ದಾಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ ಎಂದರು. ಹೆತ್ತವರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವ
Read Moreಮಾತು~ಮುತ್ತು : ಮರಕಡಿಯುವವನ ಕಥೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ
ಒಂದು ಊರಿನಲ್ಲಿ ಒಬ್ಬ ಮರ ಕಡಿಯುವವನಿದ್ದ. ಒಮ್ಮೆ ಅವನು ಒಬ್ಬ ಮರದ ವ್ಯಾಪಾರಿಯ ಹತ್ತಿರ ಕೆಲಸಕ್ಕೆ ಸೇರುತ್ತಾನೆ. ಬಲಿಷ್ಠನಾದ ಅವನು ಅತ್ಯಂತ ಉತ್ಸಾಹದಿಂದ ಮರ ಕಡಿಯಲು ಪ್ರಾರಂಭಿಸುತ್ತಾನೆ. ಮೊದಲನೆಯ ದಿನ ೧೮ ಮರಗಳನ್ನು ಕಡಿಯುತ್ತಾನೆ. ಎರಡನೆಯ ದಿನ ಇನ್ನೂ ಹೆಚ್ಚು ಪ್ರಯತ್ನ ಮಾಡಿದರೂ ಕೇವಲ ೧೫ ಮರಗಳನ್ನು ಮಾತ್ರ ಕಡಿಯಲು ಸಾಧ್ಯವಾಗುತ್ತದೆ. ಮೂರನೆಯ ದಿನ ೧೨, ನಾಲ್ಕನೇ ದಿನ ೧೦. ಹೀಗೆ ದಿನದಿಂದ ದಿನಕ್ಕೆ ಪ್ರಯತ್ನ ಹೆಚ್ಚಾಗುತ್ತದೆ. ಫಲ ಕಡಿಮೆಯಾಗುತ್ತಾ ಹೋಗುತ್ತದೆ. ‘ಇದೇಕೆ ಹೀಗಾಗುತ್ತಿದೆ?’ ಎಂದು ತಿಳಿಯದ
Read More‘ಅಶು’ವೆಂಬ ಹಸುವಿಗೊಂದು ಪತ್ರ – ಶ್ರೀಮತಿ ಶುಭಶ್ರೀ ಭಟ್ಟ, ಗುಡಬಳ್ಳಿ ಕುಮಟಾ
‘ಅಶೂ!! ಹೇಗಿದ್ದಿಯಾ ಮರಿ? ಕಾಮಧೇನುವಿನ ಸ್ವರ್ಗದಲ್ಲಿ ಎಲ್ಲರೂ ಚೆನ್ನಾಗಿ ನೋಡ್ಕೊತಾ ಇದಾರಲ್ವಾ?ಹಿಂಡಿ, ಗಂಜಿ, ಅಕ್ಕಚ್ಚು, ನೀರು, ಹಣ್ಣೆಲ್ಲಾ ಚೆಂದ ಇರ್ತದಾ? ಬೇಕಾದಷ್ಟು, ಹೊಟ್ಟೆ ತುಂಬುವಷ್ಟು, ತಿಂದು ತೇಗುವಷ್ಟು ತಿನ್ನಲಿಕ್ಕೆ ಕೊಡ್ತಾರಾ ಅಶೂ? ನನ್ನ ಮೇಲಿನ್ನೂ ಸಿಟ್ಟುಂಟಾ? ನಾನೇನ್ ಮಾಡ್ಲಿ ಹೇಳು ನಾನಾಗ ತುಂಬಾ ಚಿಕ್ಕೋಳು. ಕುಂದಾಪುರದ ಅತ್ತೆ ಮನೆಯಿಂದ ನಿನ್ನಮ್ಮ ಸರಸ್ವತಿಯ ಜೊತೆ ಪುಟು-ಪುಟುವೆಂದು ತಪ್ಪು ಹೆಜ್ಜೆ ಇಡುತ್ತಾ ಬಂದವಳು ನೀನು. ವಾರವೂ ತುಂಬಿರದ ನೀನು ನಮ್ಮೆಲ್ಲರಿಗೂ ಬಲು ಅಚ್ಚುಮೆಚ್ಚಾಗಿದ್ದೆ. ಕಪ್ಪುರೋಮದ ಮೈಯಿ, ಬಿಳಿ ಹಂಡಾಪಟ್ಟೆ
Read Moreಮಕ್ಕಳ ಬದುಕಲ್ಲಿ ದೀಪಾವಳಿಯ ಬೆಳಕು ಮೂಡಿಸಿದ ಶ್ರೀರಾಮಚಂದ್ರಾಪುರಮಠ
ಬೆಂಗಳೂರು: ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕವೇ ಜನಸಾಮಾನ್ಯರ ಹಿತಕ್ಕಾಗಿ ದುಡಿಯುತ್ತಿರುವ ಶ್ರೀರಾಮಚಂದ್ರಾಪುರಮಠವು ಪುಟ್ಟ ಪುಟ್ಟ ಮಕ್ಕಳ ಮುಖದಲ್ಲೂ ನಗುವರಳಿಸಿದೆ. “Fly Higher India” ಸಂಸ್ಥೆಯ ಮೂಲಕ ಇಂತಹದೊಂದು ಅನುಕರಣೀಯ ಕಾರ್ಯವನ್ನು ಶ್ರೀಮಠ ಮಾಡಿದೆ. Fly Higher India, ಇದೊಂದು ಸರ್ಕಾರೇತರ ಸಂಸ್ಥೆಯಾಗಿದ್ದು ದೇಶಾದ್ಯಂತ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇದರಡಿಯಲ್ಲಿ ಅದೆಷ್ಟೋ ಕಾರ್ಯಕರ್ತರು ನಿರಂತರ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯು ತಿಂಗಳಲ್ಲಿ ಒಂದು ಭಾನುವಾರ ಯಾವುದಾದರೂ ಬಡ ಮಕ್ಕಳ ಶಾಲೆ, ಅನಾಥಾಶ್ರಮ ಅಥವಾ
Read Moreಸಾಗರ ವಲಯೋತ್ಸವದ ಅಂಗವಾಗಿ ಶ್ರೀದೇವೀ ಪಾರಾಯಣ
ಸಾಗರ: ಸಾಗರ ನಗರದ ಪೂರ್ವ ಮತ್ತು ಪಶ್ಚಿಮ ವಲಯಗಳ ವಲಯೋತ್ಸವ ನವೆಂಬರ 17, ಶನಿವಾರದಂದು ನಡೆಯಿತು. ಬೆಳಗ್ಗೆ 8.30ಕ್ಕೆ ವಲಯೋತ್ಸವನ್ನು ಗುರುವಂದನೆ ಹಾಗೂ ದೀಪಪ್ರಜ್ವಲನಗಳ ಮೂಲಕ ಉದ್ಘಾಟಿಸಲಾಯಿತು. ಬಳಿಕ ಶ್ರೀದೇವೀ ಪಾರಾಯಣ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಂಕಲ್ಪ, ಮಹಿಳೆಯರಿಂದ ಕುಂಕುಮಾರ್ಚನೆ, ಭಜನರಾಮಾಯಣ ಪಠಣ, ರುದ್ರ ಪಠಣ ನಡೆಯಿತು. ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಸಾಗರ ಮಂಡಲದಿಂದ ವಿದ್ಯಾ ಸಹಾಯನಿಧಿಯನ್ನು ಮಕ್ಕಳಿಗೆ ವಿತರಿಸಲಾಯಿತು. ಸಂಜೆ ಗೋಪೂಜೆ, ಕಾರ್ತೀಕ ದೀಪೋತ್ಸವ ನಡೆಸಲಾಯಿತು.
Read Moreಶ್ರೀಕ್ಷೇತ್ರ ಗೋಕರ್ಣದಲ್ಲಿ ತ್ರಿಪುರಾಖ್ಯ ದೀಪೋತ್ಸವ ನಿಮಿತ್ತ ಲಕ್ಷಬಿಲ್ವಾರ್ಚನೆ – ತೆಪ್ಪೋತ್ಸವ
ಗೋಕರ್ಣ: ಶ್ರೀಸಂಸ್ಥಾನದವರ ದಿವ್ಯಾಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ವಿಲಂಬ ಸಂವತ್ಸರದ ತ್ರಿಪುರಾಖ್ಯ ದೀಪೋತ್ಸವ ನಿಮಿತ್ತ ನವೆಂಬರ್ 22ರಂದು ಗುರುವಾರ ಮಧ್ಯಾಹ್ನ ಲಕ್ಷ ಬಿಲ್ವಾರ್ಚನೆ ಸಹಿತ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮುಂಜಾನೆ ಲಕ್ಷಬಿಲ್ವಾರ್ಚನೆ, ವಿಶೇಷ ಮಹಾಪೂಜೆ, ಬಿಲ್ವಾರ್ಚನಾ ಹವನ , ನೈಮಿತ್ತಿಕ ಬಲಿ, ಅನಂತರ ಭೀಮಕೊಂಡಕ್ಕೆ ಉತ್ಸವ ಹೋಗಿ ಅಲ್ಲಿ ಧಾತ್ರಿ ಹವನ, ವನಭೋಜನ ಜರುಗಲಿವೆ. ರಾತ್ರಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ, ಕೋಟಿತೀರ್ಥದಲ್ಲಿ ಜಲಾಯನ ದೀಪೋತ್ಸವ , ತೆಪ್ಪೋತ್ಸವ ಹಾಗೂ
Read Moreಮಠದ ಮೇಲಿನ ದುರಾಕ್ರಮಣಗಳ ಕುರಿತು ಶ್ರೀಸಂಸ್ಥಾನದವರ ಸ್ಪಷ್ಟೋಕ್ತಿ: ಪ್ರಜಾ ಟಿವಿ ಸಂದರ್ಶನದಲ್ಲಿ
* ಗೋಕರ್ಣ ಮಹಾಬಲೇಶ್ವರ ದೇವಾಲಯದ ಹಸ್ತಾಂತರ ವಿವಾದಗಳಿಗೆ ಕಾರಣವೇನು? * ರಾಮಚಂದ್ರಾಪುರಮಠವನ್ನು ಟಾರ್ಗೆಟ್ ಮಾಡಲು ಕಾರಣವೇನು? * ಮಠದ ಮೇಲಾಗುತ್ತಿರುವ ಆಕ್ರಮಣಗಳ ಹಿಂದಿರುವ ಶಕ್ತಿಗಳು ಯಾವವು?? * ಸಾಲು ಸಾಲು ಆರೋಪಗಳನ್ನು ಮಾಡಿ, ನಿಮ್ಮ ಇಮೇಜನ್ನು ಡ್ಯಾಮೇಜ್ ಮಾಡಲಾಯಿತೇ? * ಕೊಡಚಾದ್ರಿ ಸಂರಕ್ಷಣೆಗೆ ಹೊರಟಾಗ, ನಿಮಗೆ ಜೀವಬೆದರಿಕೆ ಹಾಕಲಾಯಿತು ; ಆಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು? * ನಿರಂತರ ಅಪಪ್ರಚಾರದಿಂದಾಗಿ ಮಠದ ಭಕ್ತರ ಮೇಲೆ ಆದ ಪರಿಣಾಮವೇನು?…… ಮುಂತಾದ ಖಡಕ್
Read Moreಕಲ್ಲಡ್ಕದ ಶ್ರೀಉಮಾಶಿವ ಕ್ಷೇತ್ರದಲ್ಲಿ ಶ್ರೀಶನೈಶ್ಚರ ಕಲ್ಪೋಕ್ತ ಪೂಜೆ ಸಂಪನ್ನ
ಕಲ್ಲಡ್ಕ: ಕಲ್ಲಡ್ಕದ ಕಲ್ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀಸಂಸ್ಥಾನದವರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಶನಿವಾರ ಸಂಜೆ ಸಾಮೂಹಿಕ ಶ್ರೀಶನೈಶ್ಚರ ಕಲ್ಪೋಕ್ತ ಪೂಜೆ ನೆರವೇರಿತು. ಸೇವಾಸಮಿತಿಯ ಅಧ್ಯಕ್ಷರಾದ ರಾಕೋಡಿ ಶ್ರೀ ಈಶ್ವರ ಭಟ್ ಮತ್ತು ಪದಾಧಿಕಾರಿಗಳು, ಮಂಗಳೂರು ಮಂಡಲ ಗುರಿಕಾರರಾದ ಶ್ರೀ ಉದಯ ಕುಮಾರ್ ಖಂಡಿಗ, ಮೂಲಮಠ ಪ್ರತಿನಿಧಿ ಮುಳ್ಳುಂಜ ಶ್ರೀ ವೆಂಕಟೇಶ್ವರ ಭಟ್, ಕಲ್ಲಡ್ಕ ಹವ್ಯಕ ವಲಯಾಧ್ಯಕ್ಷ ಶ್ರೀ ಯು.ಎಸ್. ಚಂದ್ರಶೇಖರ ಭಟ್ ನೆಕ್ಕಿದರವು, ವಿಟ್ಲ ವಲಯ ದಿಗ್ದರ್ಶಕ ಶ್ರೀ ಸತೀಶ ಪಂಜಿಗದ್ದೆ, ಕೇಪು ವಲಯ
Read Moreಮಗನ ಜನ್ಮದಿನ ವಿಶಿಷ್ಟವಾಗಿ ಆಚರಣೆ : ಗೋವಿಗಾಗಿ ಮೇವು ಸಮರ್ಪಿಸಿದ ಹೆತ್ತವರು
ಬಜಕೂಡ್ಲು: ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಪಾಶ್ಚಾತ್ಯ ಸಂಪ್ರದಾಯದಲ್ಲಿ ಆಚರಿಸುವ ಹೆತ್ತವರ ನಡುವೆ ಶ್ರೀಮಠದ ಭಕ್ತರಾದ ಮುಳ್ಳೇರಿಯ ಮಂಡಲ ವಿದ್ಯಾರ್ಥಿವಾಹಿನಿ ವಿಭಾಗದ ಪ್ರಧಾನರಾದ ಶ್ರೀ ಕೇಶವಪ್ರಸಾದ ಎಡಕ್ಕಾನ ಅವರು ತಮ್ಮ ಸುಪುತ್ರನ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿ ಇತರರಿಗೂ ಮಾದರಿಯಾಗಿದ್ದಾರೆ. ನವೆಂಬರ್ ೧೫ರಂದು ಶ್ರೀ ಕೇಶವಪ್ರಸಾದ ಎಡಕ್ಕಾನ ಅವರ ಪುತ್ರ ಕು. ರಾಮಶರ್ಮನ ಹುಟ್ಟುಹಬ್ಬವಿತ್ತು. ಅಂದು ಮಗನ ಹೆಸರಿನಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಗೋಪೂಜಾ ಸೇವೆ ಹಾಗೂ ಗೋವಿಗಾಗಿ ಮೇವು ಯೋಜನೆಯಲ್ಲಿ ಒಂದು ದಿನದ ಮೇವು ಸಮರ್ಪಿಸಿ
Read Moreಸ್ವಾನುಭವ – ಶ್ರೀಮತಿ ಅನ್ನಪೂರ್ಣಾ ಕುಳಮರ್ವ
ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ಚ ಸಖಾ ತ್ವಮೇವ| ತ್ವಮೇವ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವಂ ಮಮ ದೇವದೇವ|| ಮೊಟ್ಟಮೊದಲು ಗುರುವೂ ರಾಮನೂ ಅದ್ವೈತವಾದ ಶ್ರೀಪೀಠಕ್ಕೆ ಕೋಟಿ ಕೋಟಿ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಗುರುಕರುಣಾವರಣದೊಳಿರುವ ಅನ್ನಪೂರ್ಣಾ ಆದ ನಾನು ಮತ್ತೊಮ್ಮೆ ಗುರುಪದಕ್ಕೆ ಬರೆಯುತ್ತಿದ್ದೇನೆ. ಈ ಬರಹದಿಂದ ಗುರುಪೀಠಕ್ಕೆ ಸಂತೋಷ ಆಗಬಹುದೆಂಬ ವಿಶ್ವಾಸ ನನ್ನದು. ಇಲ್ಲಿಯವರೆಗೂ ನನ್ನ ಜೀವನದಲ್ಲಿ ಏನೇನೆಲ್ಲ ಘಟಿಸಿವೆಯೋ ಅವೆಲ್ಲವನ್ನೂ ಶ್ರೀಪೀಠದಲ್ಲಿ ಕಾಲಕಾಲಕ್ಕೆ ಭಿನ್ನವಿಸಿಕೊಂಡಿದ್ದೇನೆ. ಶ್ರೀರಾಮನನ್ನು, ಶ್ರೀಶಂಕರರನ್ನು ನಾವು ಕಂಡಿಲ್ಲ, ಆದರೆ ಶಂಕರರ
Read Moreಮಾತು~ಮುತ್ತು : ಲಾಕ್ ತೆಗೆಯಬೇಕು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ
ಒಂದು ದಿನ ತಿಮ್ಮ ಕಾರಿನಲ್ಲಿ ಪ್ರಯಾಣ ಹೊರಡುತ್ತಾನೆ. ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ತನ್ನ ಕೆಲಸಕ್ಕಾಗಿ ಹೋಗುತ್ತಾನೆ. ಕೆಲಸ ಮುಗಿಸಿ ಹಿಂತಿರುಗಿ ಬರುವಾಗ ಜೋರಾಗಿ ಮಳೆ ಬರುತ್ತದೆ. ನಿಲ್ಲಲು ಜಾಗವಿಲ್ಲದ ತಿಮ್ಮ ಮಳೆಯಲ್ಲಿಯೇ ಒಂದು ಮರದ ಬುಡದಲ್ಲಿ ನಿಲ್ಲುತ್ತಾನೆ. ತಿಮ್ಮನ ಹತ್ತಿರ ಕೊಡೆ, ರೈನ್‌ಕೋಟ್ ಎರಡೂ ಇರುತ್ತದೆ. ಅವು ಕಾರಿನಲ್ಲಿದ್ದು ಕಾರು ಲಾಕ್ ಆಗಿರುತ್ತದೆ. ಕಾರಿನ ಲಾಕ್ ತೆಗೆಯದೇ ಅವನ್ನು ತೆಗೆಯಲು ಸಾಧ್ಯವಿಲ್ಲ. ಆದರೆ ಜೋರಾಗಿ ಮಳೆ ಬರುತ್ತಿದ್ದರಿಂದ ಕಾರಿನ ಹತ್ತಿರ ಹೋಗುವುದಕ್ಕೂ ತಿಮ್ಮನಿಗೆ ಸಾಧ್ಯವಾಗುವುದಿಲ್ಲ.
Read Moreಶ್ರೀ ಭಾರತೀ ವಿದ್ಯಾಲಯದಲ್ಲಿ ಸಂಸ್ಕೃತೋತ್ಸವ ಸಮಾರೋಪ ಸಮಾರಂಭ
ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಸಂಸ್ಕೃತದ ಕುರಿತು ಒಲವು ಮೂಡಿಸುವ ಹಾಗೂ ಭಾಷೆಯ ವ್ಯಾಪಕ ಬಳಕೆಗೆ ಪೂರಕ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಶ್ರೀ ಭಾರತೀ ವಿದ್ಯಾಲಯದಲ್ಲಿ ಒಂದು ವಾರಗಳ ಕಾಲ ನಡೆದ ಸಂಸ್ಕೃತೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು. ಸಮಾರೋಪ ಸಮಾರಂಭಕ್ಕೆ ಗುರುವಂದನೆ ಹಾಗೂ ದೀಪೋಜ್ವಲನದ ಮೂಲಕ ಚಾಲನೆ ನೀಡಲಾಯಿತು. ಅಲ್ಲದೇ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀಮತಿ ಡಾ. ಶಾರದಾ ಜಯಗೋವಿಂದ್ ಇವರು ಉಪಸ್ಥಿತರಿದ್ದರು.
Read Moreಅಮೃತಧಾರಾ ಗೋಶಾಲೆಯಲ್ಲಿ ಸಂಪನ್ನಗೊಂಡಿತು ಗೋಮಾತಾಸಪರ್ಯಾ~ಗೋಪಾಷ್ಟಮೀ
ಪೆರ್ಲ: ಗೋಪಾಷ್ಟಮಿಯ ಶುಭ ಸಂದರ್ಭದಲ್ಲಿ ಶುದ್ಧ ದೇಶೀಯ ತಳಿಯ ಗೋಮಯದಿಂದ ತಯಾರಿಸಿದ ಗೋವರ್ಧನಗಿರಿಯಲ್ಲಿ ಗುರುವಾರ ರಾತ್ರಿ ಭಗವಾನ್ ಶ್ರೀಕೃಷ್ಣನಿಗೆ ನಡೆದ ರಂಗಪೂಜೆಯನ್ನು ದೀಪದ ಬೆಳಕಿನಲ್ಲಿ ಭಕ್ತಿಭಾವದೊಂದಿಗೆ ಆಚರಿಸಿ ಅನೇಕ ಭಕ್ತಾದಿಗಳು ಕಣ್ತುಂಬಿಕೊಂಡರು. ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿ ನಡೆಯುತ್ತಿರುವ ಕಾಸರಗೋಡು -ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಕಳೆದ ಒಂದುವಾರದಿಂದ ನಡೆದು ಬರುತ್ತಿದ್ದ ಗೋಮಾತಾ ಸಪರ್ಯಾ ಹಾಗೂ ೮ನೇ ವರ್ಷದ ಗೋಪಾಷ್ಟಮೀ ಮಹೋತ್ಸವವು ಗುರುವಾರ ರಾತ್ರಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು. ಬೆಳಗ್ಗೆ ಗಣಪತಿ ಹವನ, ಕಾಮಧೇನು ಹವನ,
Read Moreಕಸಾಯಿಖಾನೆಗೆ ಸಾಗಿಸುತ್ತಿದ್ದ ಎತ್ತುಗಳ ರಕ್ಷಣೆ: ರಕ್ಷಿಸಿದ ಎತ್ತುಗಳಿಗೆ ಅಗತ್ಯ ಮೇವು ನೀಡಲು ದಾನಿಗಳಿಗೆ ಕೋರಿಕೆ
ಬೆಂಗಳೂರು: ನಗರದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಗಿರಿ ಸರ್ಕಲ್ ಬಳಿ ಎರಡು ಟ್ರಕ್ ಗಳಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಎತ್ತುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಎತ್ತುಗಳನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬೆಂಗಳೂರು ನಗರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ರಾತ್ರಿ ವೇಳೆಯಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರು ಈ ಎತ್ತುಗಳನ್ನು ಹಿಡಿದಿರುತ್ತಾರೆ. ಈ ದೇಶೀ ತಳಿಯ ಎತ್ತುಗಳನ್ನು ಬಾಗೆಪಲ್ಲಿಯ ಸಂತೆಯಲ್ಲಿ ಮಾರಾಟ ಮಾಡಲೆಂದು ಸಾಗಿಸುತ್ತಿದ್ದುದಾಗಿ ಸಾಗಾಟಗಾರರು ಹೇಳಿದರೂ ಇದನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಠಾಣಾಧಿಕಾರಿಗಳು ಚಿಕ್ಕಜಾಲ ಠಾಣೆಯಲ್ಲಿ ಕೇಸು
Read Moreಮಾತು~ಮುತ್ತು : ದೃಷ್ಟಿಯ ಹಿಂದಿನ ಕಥೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ
ಒಮ್ಮೆ ಒಬ್ಬ ತಂದೆ ತನ್ನ 25 ವರ್ಷದ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಅವರ ಎದುರಿನಲ್ಲಿ ಆಗ ತಾನೇ ಮದುವೆಯಾದ ನವದಂಪತಿಗಳು ಕುಳಿತ್ತಿದ್ದರು. ರೈಲು ಸಾಗುತ್ತಿತ್ತು. ಸ್ವಲ್ಪ ಸಮಯದ ಅನಂತರ ಯುವಕ ಹೊರಗಡೆ ನೋಡುತ್ತಾ, ತಂದೆಯ ಹತ್ತಿರ- “ಮರಗಳೆಲ್ಲ ಓಡುತ್ತಿವೆ; ನೋಡು” ಎನ್ನುತ್ತಾನೆ. ಆಗ ತಂದೆ- “ಹೌದು ಹೌದು” ಎನ್ನುತ್ತಾನೆ. ಇನ್ನು ಸ್ವಲ್ಪ ದೂರ ಸಾಗಿದ ಅನಂತರ ಅಲ್ಲಿ ಕಾಣುವ ಒಂದೊಂದೇ ವಸ್ತುಗಳನ್ನು ನೋಡುತ್ತಾ ಆ ಯುವಕ ಅವೇ ಮಾತುಗಳನ್ನು ಹೇಳುತ್ತಾ ಹೋಗುತ್ತಾನೆ. ತಂದೆ ಹೌದು
Read Moreಮಾತು~ಮುತ್ತು : ಸ್ವಪ್ರಯತ್ನ ಮತ್ತು ದೈವಕೃಪೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ
ಒಮ್ಮೆ ಅಕ್ಬರ್ ಮತ್ತು ಬೀರಬಲ್ ಕಾಡಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಎಷ್ಟು ದೂರ ಸಾಗಿದರೂ ಯಾವುದೇ ಊರು, ಮನೆ ಸಿಗುವುದಿಲ್ಲ. ಇವರಿಗೆ ತುಂಬಾ ಬಾಯಾರಿಕೆ ಹಾಗೂ ಹಸಿವೆಯಾಗುತ್ತದೆ. ಆಗ ಬೀರಬಲ್ ಒಂದು ಮರದ ಕೆಳಗೆ ಕುಳಿತು- “ರಾಮ! ರಾಮ!” ಎಂದು ರಾಮನ ಜಪ ಮಾಡಲು ಆರಂಭಿಸುತ್ತಾನೆ. ಆಗ ಅಕ್ಬರ್- “ಜಪ ಮಾಡುವುದರಿಂದ ಊಟ ಸಿಗುವುದಿಲ್ಲ” ಎಂದು ಹೇಳಿ ಮುಂದೆ ಸಾಗುತ್ತಾನೆ. ಹೀಗೆ ಸ್ವಲ್ಪ ದೂರ ಸಾಗುವಾಗ ಒಂದು ಊರು ಸಿಗುತ್ತದೆ. ಆ ಊರಿನ ಒಂದು ಮನೆಯ ಬಾಗಿಲಿಗೆ ಹೋಗಿ-
Read Moreಮಾನವೀಯತೆಯ ಸಾಕಾರ ಮಹದೀಶ್ವರ
ಕೇರಳದ ತುತ್ತತುದಿ ಮತ್ತು ಕರ್ನಾಟಕದ ಪಾದಮೂಲದಲ್ಲಿರುವ ಗಡಿನಾಡು ಕಾಸರಗೋಡು. ೧೯೫೬ರಲ್ಲಿ ಕೇರಳದ ತೆಕ್ಕೆಗೆ ಸೇರಿದ ಈ ಊರು ೧೯೮೪ರಲ್ಲಿ ಜಿಲ್ಲಾಕೇಂದ್ರವಾಯ್ತು. ಹೆಚ್ಚುಕಡಿಮೆ ಹದಿಮೂರು ಲಕ್ಷ ಜನಸಂಖ್ಯೆ. ಸಂಖ್ಯಾ ಬಾಹುಳ್ಯದಲ್ಲಿ ಹಿಂದೂಗಳ ಅನಂತರದ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ೩.೪೮ ಕೋಟಿ ಕೇರಳದ ಜನಸಂಖ್ಯೆ. `ಟೈಮ್ಸ್ ಆಫ್ ಇಂಡಿಯಾ’ ಮತ್ತು `ದಿ ಹಿಂದು’ ವರದಿ (೨೦೧೫-೨೦೧೬)ಗಳ ಪ್ರಕಾರ ಭಾರತ ದೇಶದಲ್ಲೇ ಅತ್ಯಧಿಕ ಬೀಫ್ (ಹಸು ಮತ್ತು ಕೋಣಗಳ ಮಾಂಸ) ಬಳಕೆಯಾಗುತ್ತಿರುವ ರಾಜ್ಯ ಕೇರಳ. ಸಂಖ್ಯಾ ಸಮೀಕ್ಷೆ: ೩೫,೩೨೪ ಸಾವಿರ ಮೆಟ್ರಿಕ್ ಟನ್
Read Moreಮುಂಬೈನಲ್ಲಿ ರಕ್ತದಾನ ಶಿಬಿರ: ಶ್ರೀಮಠದ ಶಿಷ್ಯ ವರ್ಗ ಹಾಗೂ ಪೇಜಾವರ ಮಠದ ಸಹಯೋಗದಲ್ಲಿ ಆಯೋಜನೆ
ಮುಂಬೈ: ಶ್ರೀರಾಮಚಂದ್ರಾಪುರ ಮಠದ ಮುಂಬೈ ಹಾಗೂ ಡೊಂಬಿವಿಲಿ ವಲಯದ ಶಿಷ್ಯರು ಪೇಜಾವರ ಮಠದ ಸಹಯೋಗದಲ್ಲಿ, ಶ್ರೀಸಂಸ್ಥಾನದ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಮುಂಬೈನ ಪ್ರಭಾತ ಕಾಲೋನಿಯಲ್ಲಿರುವ ಮಾಧ್ವಭವನದಲ್ಲಿ ಇದೇ ನವೆಂಬರ್ 25 ರಂದು ರಕ್ತದಾನ ಶಿಬಿರ ಅಯೋಜಿಸಿದ್ದಾರೆ. ಆ ದಿನ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ರಕ್ತದಾನ ಶಿಬಿರ ನಡೆಯಲಿದ್ದು, ಆರೋಗ್ಯವಂತ ಜನರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಅವಶ್ಯಕತೆ ಇರುವ ರೋಗಿಗಳಿಗೆ ನೆರವಾಗುವಂತೆ ಕೋರಲಾಗಿದೆ. ರಕ್ತದಾನಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ರಕ್ತದಾನ
Read More